ಅಕ್ಟೋಬರ್ 7 ರಂದು ನರಸಿಂಹರಾಜಪುರ ತಾಲ್ಲೂಕು ಕಚೇರಿ ಮುಂಭಾಗ ಅಹೋರಾತ್ರಿ ಧರಣಿ ಸತ್ಯಾಗ್ರಹ..!
ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ವತಿಯಿಂದ, ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ ಹೊರಡಿಸಿರುವ ಗ್ರಾಮ ಪಂಚಾಯಿತಿ ಆಸ್ತಿ ತೆರಿಗೆ ಕುರಿತ ಸುತ್ತೋಲೆ ಸಂಖ್ಯೆ 763/2026 (13/08/2026) ಅನ್ನು ವಿರೋಧಿಸಿ, ರೈತರು ಹಾಗೂ ನಾಗರಿಕರ ಬದುಕು ಮತ್ತು ಹಕ್ಕುಗಳ ರಕ್ಷಣೆಗೆ ಒತ್ತಾಯಿಸಿ ಅಕ್ಟೋಬರ್ 7ರಂದು ನರಸಿಂಹರಾಜಪುರ ತಾಲ್ಲೂಕು ಕಚೇರಿ ಮುಂಭಾಗ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲ���ಗುವುದು.
ಈ ಕುರಿತು ಇಂದು ನರಸಿಂಹರಾಜಪುರದ ಪತ್ರಿಕಾಭವನದಲ್ಲಿ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ವತಿಯಿಂದ ಪತ್ರಿಕಾಗೋಷ್ಠಿ ನಡೆಸಿ, ಧರಣಿ ಸತ್ಯಾಗ್ರಹದ ಉದ್ದೇಶಗಳು ಹಾಗೂ ಪ್ರಮುಖ ಬೇಡಿಕೆಗಳ ಕುರಿತು ಮಾಹಿತಿ ನೀಡಲಾಯಿತು.
ರೈತರು ಮತ್ತು ನಾಗರಿಕರ ಪರವಾಗಿ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿರುವ ನಮ್ಮ ರೈತ ಒಕ್ಕೂಟ, ಇದೀಗ ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ��ಲಾಖೆಯು ದಿನಾಂಕ 13-08-2026ರಂದು ಹೊರಡಿಸಿರುವ ಸುತ್ತೋಲೆಯ ಕುರಿತು ಗಂಭೀರ ಆಕ್ಷೇಪ ವ್ಯಕ್ತಪಡಿಸುತ್ತಿದೆ.
ಈ ಸುತ್ತೋಲೆಯು ಗ್ರಾಮ ಪಂಚಾಯಿತಿಗಳ ತೆರಿಗೆ ನಿರ್ಧರಣೆ ಹಾಗೂ e-Swathu 2.0 ತಂತ್ರಾಂಶದಿಂದ ಕೆಲವು ಆಸ್ತಿಗಳನ್ನು ಕೈಬಿಡುವ ಕುರಿತು ಮಾರ್ಗಸೂಚಿಗಳನ್ನು ನೀಡಿದೆ. ಈಗಾಗಲೇ ಗ್ರಾಮ ಪಂಚಾಯಿತಿಗೆ ತೆರಿಗೆ ಪಾವತಿಸುತ್ತಿರುವ ಮನೆ, ಕೊಟ್ಟಿಗೆ, ಜಮೀನು ಹಾಗೂ ಇತರ ಆಸ್ತಿಗಳ ದಾಖಲೆಗಳ ಮೇಲೆ ಇದರಿಂದ ಪರಿಣಾಮ ಬೀರುವ ಆತಂಕ ರೈತರು ಮತ್ತು ಬಡ ಕುಟುಂಬಗಳಲ್ಲಿ ಮೂಡಿದೆ.
ವರ್ಷಗಳ��ಂದ ಗ್ರಾಮ ಪಂಚಾಯಿತಿಗೆ ತೆರಿಗೆ ಪಾವತಿಸಿ, ಅದೇ ದಾಖಲೆಗಳ ಆಧಾರದ ಮೇಲೆ ನೀರು, ವಿದ್ಯುತ್ ಹಾಗೂ ಇತರ ಮೂಲಸೌಕರ್ಯಗಳನ್ನು ಪಡೆದುಕೊಂಡಿರುವ ಕುಟುಂಬಗಳ ಬಳಿ ಇರುವ ಪ್ರಮುಖ ಸ್ಥಳೀಯ ದಾಖಲೆ ದುರ್ಬಲವಾದರೆ, ಅವರ ಮುಂದಿನ ಹಕ್ಕು ಮತ್ತು ದಾಖಲೆಗಳ ಸ್ಥಿತಿ ಏನಾಗುತ್ತದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು.
ಈ ವಿಚಾರವನ್ನು ಕಾರ್ಕಳ ಶಾಸಕರಾದ ಶ್ರೀ ಸುನಿಲ್ ಕುಮಾರ್ ಅವರು ವಿಧಾನಸಭೆಯ ಕಲಾಪದಲ್ಲಿ ಪ್ರಸ್ತಾಪಿಸಿ ರಾಜ್ಯದ ಗಮನ ಸೆಳೆದಿರುವುದಕ್ಕೆ ಅವರಿಗೆ ಧನ್ಯವಾದಗಳು. ಆದರೆ ಸುತ್ತೋಲೆ ಹೊರಬಂದು ಒಂದೂವರೆ ತಿಂಗಳು ಕಳೆದರೂ ನಮ್ಮ ಕ್ಷೇತ್ರದ ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳದಿರುವುದನ್ನು ರೈತ ಒಕ್ಕೂಟ ಖಂಡಿಸುತ್ತದೆ.
ಪಂಚಾಯತ್ ರಾಜ್ ಸಚಿವರಾದ ಮಾನ್ಯ ಈಶ್ವರ ಖಂಡ್ರೆ ಅವರು ಈ ಸುತ್ತೋಲೆಯ ನೇರ ಹೊಣೆ ಹೊತ್ತು ರೈತರ ಆತಂಕಗಳಿಗೆ ಸ್ಪಷ್ಟ ಉತ್ತರ ನೀಡಬೇಕು. ಈ ಹಿಂದೆ ಕೂಡ ರೈತರ ಸಾಗುವಳಿ ಜಮೀನುಗಳ ವಿಚಾರದಲ್ಲಿ ಅರಣ್ಯ ಇಲಾಖೆಯ ಮೂಲಕ ರೈತರ ಹಕ್ಕುಗಳಿಗೆ ಧಕ್ಕೆ ತರುವ ಪ್ರಯತ್ನಗಳನ್ನು ನಾವು ನೋಡಿದ್ದೇವೆ. ರೈತರು ಮತ್ತು ಬಡ ನಾಗರಿಕರ ಹಕ್ಕುಗಳಿಗೆ ಧಕ್ಕೆ ತರುವ ಯಾವುದೇ ಕ್ರಮವನ್ನು ನಮ್ಮ ಒಕ್ಕೂಟ ವಿರೋಧಿಸುತ್ತದೆ. ಮುಖ್ಯಮಂತ್ರಿ ಅವರು ಈಶ್ವರ ಖಂಡ್ರೆ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ, ಮುಂದಿನ ದಿನಗಳಲ್ಲಿ ಯಾವುದೇ ಸಚಿವ ಸ್ಥಾನ ನೀಡಬಾರದು ಎಂದು ನಾವು ಒತ್ತಾಯಿಸುತ್ತೇವೆ.
ಇದರ ಜೊತೆಗೆ ಅರಣ್ಯ ಹಕ್ಕು ಪತ್ರದ ಅರ್ಜಿಗಳ ವಿಚಾರದಲ್ಲಿಯೂ ರೈತರಿಗೆ ಅನ್ಯಾಯವಾಗುತ್ತಿದೆ. ಹಲವು ಅರ್ಜಿಗಳು ದಾಖಲೆಗಳ ಕೊರತೆಯ ಕಾರಣಕ್ಕೆ ಎಸಿ ಕಚೇರಿಯಿಂದ ಪಂಚಾಯಿತಿಗಳಿಗೆ ವಾಪಸ್ ಬಂದಿದ್ದರೂ, ರೈತರಿಗೆ ಸಮರ್ಪಕ ಮಾಹಿತಿ ನೀಡಲಾಗುತ್ತಿಲ್ಲ. ಹೊನ್ನೆಕೊಡಿಗೆ ಮತ್ತು ಬಾಳೆ ಪಂಚಾಯಿತಿಗಳಲ್ಲಿ ರೈತರು ಪ್ರತಿಭಟನೆ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಆದ್ದರಿಂದ ಜಿಲ್ಲಾಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ, ಅರಣ್ಯ ಹಕ್ಕು ಅರ್ಜಿಗಳ ದಾಖಲೆಗಳನ್ನು ಸರಿಪಡಿಸಲು ಆರು ತಿಂಗಳ ಕಾಲಾವಕಾಶ ನೀಡಬೇಕು ಮತ್ತು ಪ್ರತಿಯೊಂದು ಪಂಚಾಯಿತಿಯಲ್ಲೂ ವಿಶೇಷ ಗ್ರಾಮಸಭೆ ನಡೆಸಿ ರೈತರಿಗೆ ಸಂಪೂರ್ಣ ಮಾಹಿತಿ ನೀಡಬೇಕು. ಫಾರಂ 50, 53, 94C, 94CC ಸೇರಿದಂತೆ ಅಗತ್ಯ ದಾಖಲೆಗಳನ್ನು ರೈತರಿಗೆ ನೀಡಬೇಕು.
ಈ ಎಲ್ಲಾ ವಿಚಾರಗಳನ್ನು ಮುಂದಿಟ್ಟುಕೊಂಡು ರೈತ ಒಕ್ಕೂಟ ಶೃಂಗೇರಿ ಕ್ಷೇತ್ರವು ಅಕ್ಟೋಬರ್ 7ರಂದು ನರಸಿಂಹರಾಜಪುರ ತಾಲ್ಲೂಕು ಕಚೇರಿ ಮುಂದೆ ಕ್ಷೇತ್ರ ಮಟ್ಟದ ಅಹೋರಾತ್ರಿ ಧರಣಿ ನಡೆಸಲು ತೀರ್ಮಾನಿಸಿದೆ.
ಈ ಹೋರಾಟಕ್ಕೆ ಎಲ್ಲಾ ರೈತಪರ ಸಂಘಟನೆಗಳು, ರಾಜಕೀಯ ಪಕ್ಷಗಳು, ನಾಗರಿಕ ಸಂಘಟನೆಗಳು, ರೈತರು ಮತ್ತು ನಾಗರಿಕರು ಪಕ್ಷಾತೀತವಾಗಿ ಬೆಂಬಲ ನೀಡಬೇಕೆಂದು ಮನವಿ ಮಾಡುತ್ತೇವೆ.
#SringeriKshetraRaitaOkkuta
ಬಾಳೆಹೊನ್ನೂರಿನಲ್ಲಿ ನಡೆದ ಕಸ್ತೂರಿರಂಗನ್ ವರದಿ ಕುರಿತು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ವತಿಯಿಂದ ಕಸ್ತೂರಿರಂಗನ್ ವರದಿಯನ್ನು ಜಾರಿಗೊಳಿಸದಂತೆ ಕೇಂದ್ರ ಸರ್ಕಾರದ ಗಮನಕ್ಕೆ ತರಬೇಕೆಂದು ಮನವಿಯನ್ನು ಸಲ್ಲಿಸಲಾಯಿತು.
ಹಾಗೆಯೇ ಶೃಂಗೇರಿ ವಿಧಾನಸಭಾ ಕ್ಷೇತ್ರಕ್ಕೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಮಂಜೂರು ಮಾಡುವಂತೆ, ಕ್ಷೇತ್ರದ ವಿದ್ಯಾರ್ಥಿಗಳಿಗೆ ಉನ್ನತ ತಾಂತ್ರಿಕ ಶಿಕ್ಷಣವನ್ನು ಸ್ಥಳೀಯವಾಗಿಯೇ ಪಡೆಯಲು ಅವಕಾಶ ಕಲ್ಪಿಸುವುದು ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿ���ಳ ಶೈಕ್ಷಣಿಕ ಪ್ರಗತಿಗೆ ಉತ್ತೇಜನ ನೀಡುವ ಉದ್ದೇಶದಿಂದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಅಗತ್ಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಯಿತು.
ಹಾಗೂ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ಹಾಗೂ ಬಾಳೆಹೊನ್ನೂರು ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿ, ಕ್ಷೇತ್ರದ ಜನರಿಗೆ ಗುಣಮಟ್ಟದ ಹಾಗೂ ಅಗತ್ಯ ವೈದ್ಯಕೀಯ ಸೇವೆಗಳು ಲಭಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಕೋರಲಾಯಿತು.
#SringeriKshetraRaitaOkkuta
ಜನಸೇವೆಗೆ ಸಮರ್ಪಿತ ಕರ್ಮಯೋಗಿ, ದೇಶದ ಶ್ರೇಷ್ಠ ಪ್ರಧಾನ ಸೇವಕ, ದೂರದೃಷ್ಟಿಯ ನಾಯಕತ್ವದೊಂದಿಗೆ ವಿಕಸಿತ ಭಾರತ ಸಂಕಲ್ಪದೆಡೆಗೆ ಅಭಿವೃದ್ಧಿಯ ರಥವನ್ನು ಮುನ್ನಡೆಸುತ್ತಿರುವ ಕಾಯಕ ತಪಸ್ವಿಯಾದ ನಮ್ಮೆಲ್ಲರ ನೆಚ್ಚಿನ ಹೆಮ್ಮೆಯ ಪ್ರಧಾನಿ ಶ್ರೀ @narendramodi ಜೀ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
#HappyBdayPMModi#NarendraModiji
ಆತ್ಮೀಯ ರೈತ ಬಾಂಧವರೇ,
ಮಲೆನಾಡಿನ ರೈತರ ಕೃಷಿ, ಜೀವನೋಪಾಯ ಹಾಗೂ ಭವಿಷ್ಯದ ಮೇಲೆ ��ರಿಣಾಮ ಬೀರುವ ಕಸ್ತೂರಿರಂಗನ್ ವರದಿ ಆಧಾರಿತ ESZ ಅಧಿಸೂಚನೆಯನ್ನು ವಿರೋಧಿಸಿ ಆಕ್ಷೇಪಣೆ ಸಲ್ಲಿಸುವುದು ಅತ್ಯಂತ ಮುಖ್ಯವಾಗಿದೆ.
ಆಕ್ಷೇಪಣೆ ಸಲ್ಲಿಸಲು ಇರುವ ಕಾಲಾವಕಾಶ ಮುಕ್ತಾಯದ ಹಂತದಲ್ಲಿದ್ದು, ಸಮಯ ಬಹಳ ಕಡಿಮೆಯಿದೆ.
ಈ ಹಿನ್ನೆಲೆಯಲ್ಲಿ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ವತಿಯಿಂದ ರೈತರು ಮೊಬೈಲ್ ಮೂಲಕವೇ ಸುಲಭವಾಗಿ ಆನ್ಲೈನ್ ಆಕ್ಷೇಪಣೆ ಸಲ್ಲಿಸಲು ವ್ಯವಸ್ಥೆ ಮಾಡಲಾಗಿದೆ.
ಮುಂದಿನ ದಿನಗಳಲ್ಲಿ ಈ ವಿಚಾರದಲ್ಲಿ ಕಾನೂನುಬದ್ಧವಾಗಿ ಹೋರಾಟ ನಡೆಸುವ ಉದ್ದೇಶವನ್ನು ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ಹೊಂದಿದ್ದು, ರೈತರು ವೈಯಕ್ತಿಕವಾಗಿ ಸಲ್ಲಿಸುವ ಆಕ್ಷೇಪಣೆಗಳು ಮುಂದಿನ ಕಾನೂನು ಹೋರಾಟದಲ್ಲಿ ಅತ್ಯಂತ ಮಹತ್ವದ ದಾಖಲೆಗಳಾಗಲಿವೆ.
ಆಕ್ಷೇಪಣೆ ಸಲ್ಲಿಸಲು ಕೆಳಗೆ ನೀಡಿರುವ ಲಿಂಕ್ ಬಳಸಿ
https://t.co/qVszWwnjgX
ಸಹಾಯಕ್ಕಾಗಿ ಕರೆ ಮಾಡಿ : 9345661210 / 9342361210 ಅಥವಾ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಕಛೇರಿಗೆ ಭೇಟಿ ನೀಡಿ.
-ವಿಶ್ವನಾಥ್ ಗದ್ದೆಮನೆ
ಅಧ್ಯಕ್ಷರು, ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ
#KasturiranganReport #ESZ #SaveMalnad #FarmersRights #SringeriKshetraRaitaOkkuta
ಧರ್ಮ ರಕ್ಷಣೆ, ಹಿಂದುತ್ವ ಹಾಗೂ ಸಂಘಟನೆಗಾಗಿ ಸದಾ ನಿಸ್ವಾರ್ಥವಾಗಿ ದುಡಿಯುತ್ತಿರುವ ಶಶಾಂಕ್ ಹೆರೂರು ಅವರನ್ನು ಇಂದು ಅವರ ನಿವಾಸದಲ್ಲಿ ಭೇಟಿ ಮಾಡಿ, ಕುಶಲೋಪರಿ ವಿಚಾರಿಸಲಾಯಿತು.
ಮಾಡದ ತಪ್ಪಿಗೆ ಕೇಸ್ ಎದುರಿಸಿ, ಕೊನೆಗೂ ಕಾನೂನು ಹೋರಾಟದಲ್ಲಿ ಜಯಗಳಿಸಿ ಜಾಮೀನು ಪಡೆದಿರುವುದು ಸಂತಸದ ವಿಚಾರ. ಈ ಸಂದರ್ಭದಲ್ಲಿ ಅವರೊಂದಿಗೆ ಮಾತನಾಡಿ, ಅವರ ಧೈರ್ಯ ಹಾಗೂ ಹೋರಾಟದ ಮನೋಭಾವಕ್ಕೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು.
ಭೇಟಿಯ ���ಂದರ್ಭದಲ್ಲಿ ಹಿಂದುತ್ವಕ್ಕಾಗಿ ಅವರೊಂದಿಗೆ ಕೆಲಸ ಮಾಡುತ್ತಿರುವ ನೂರಾರು ಕಾರ್ಯಕರ್ತರು ಅವರ ಬೆನ್ನಿಗೆ ನಿಂತಿರುವುದನ್ನು ಕಂಡು ನಿಜಕ್ಕೂ ಸಂತೋಷವಾಯಿತು. ಕಷ್ಟದ ಸಮಯದಲ್ಲೂ ತಮ್ಮ ಜೊತೆಗಾರನ ಕೈಬಿಡದೆ ಜೊತೆ ನಿಲ್ಲುವ ಈ ಒಗ್ಗಟ್ಟು ಮತ್ತು ಆತ್ಮೀಯತೆ ತುಂಬಾ ಖುಷಿ ನೀಡಿತು.
ಶಶಾಂಕ್ ಅವರು ಇನ್ನಷ್ಟು ಧೈರ್ಯದಿಂದ ಮುಂದೆ ಸಾಗಲಿ. ಧರ್ಮ ಮತ್ತು ಸಂಘಟನೆಗಾಗಿ ಅವರ ಸೇವೆ ಇನ್ನಷ್ಟು ಮುಂದುವರಿಯಲಿ ಎಂದು ಹಾರೈಸಲಾಯಿತು.
#VishwanathGaddemane
ಮಲೆನಾಡಿಗರ ಬದುಕಿಗೆ ಬೇಕಿದೆ ಭದ್ರತೆ!
ಮಲೆನಾಡು ಭಾಗದ ಜನರ ಕೃಷಿ, ಭೂಮಿ ಹಾಗೂ ಹಕ್ಕುಗಳನ್ನು ರಕ್ಷಿಸಲು ವಿಶೇಷ ಪ್ಯಾಕೇಜ್ ಘೋಷಣೆಯಾಗುವುದು ಇಂದಿನ ತುರ್ತು ಅಗತ್ಯ. ಯಾವುದೇ ಹೊಸ ನಿಯಮಗಳು ಅಥವಾ ಪರಿಸರ ಸೂಕ್ಷ್ಮ ವಲಯದ (ESZ) ಯೋಜನೆಗಳು ಮಲೆನಾಡಿನ ರೈತರು ಮತ್ತು ಜನಸಾಮಾನ್ಯರ ಬದುಕನ್ನು ಕಸಿದುಕೊಳ್ಳಬಾರದು. ನಮ್ಮ ಜನರ ಹಕ್ಕೊತ್ತಾಯಗಳನ್ನು ಸಂಸತ್ತಿನಲ್ಲಿ ಎತ್ತಿ ಹಿಡಿಯುವ ಪ್ರಾಮಾಣಿಕ ಪ್ರಯತ್ನ ನಮ್ಮದಾಗಬೇಕು.
#VishwanathGaddemane
#SringeriKshetraRaitaOkkuta
ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಮರ ಸಾರಿದೆ ಬಿಜೆಪಿ...
ಬಳ್ಳಾರಿ ಚಲೋ ಪಾದಯಾತ್ರೆಯು ಕಾಂಗ್ರೆಸ್ ಸರ್ಕಾರಕ್ಕೆ ಅಂತಿಮ ಮೊಳೆಯಾಗಲಿದೆ. ಭಾರೀ ಜನಸ್ಪಂದನೆಯೊಂದಿಗೆ ಮುನ್ನಡೆಯುತ್ತಿರುವ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿ ಜನವಿರೋಧಿ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯೋಣ.
#BallariChalo#CongressFailsKarnataka
ಶಾಸಕರ ಕಾರ್ಯವೈಖರಿಗೆ ಕ್ಷೇತ್ರದ ರಸ್ತೆಗಳೇ ಸಾಕ್ಷಿ..!
ಸರ್ಕಾರವೂ ಕಾಂಗ್ರೆಸ್ನದ್ದೇ, ಶಾಸಕರೂ ಕಾಂಗ್ರೆಸ್ನವರೇ. ಆದರೂ ಕ್ಷೇತ್ರದ ಪ್ರಮುಖ ರಸ್ತೆಗಳು ಮಾತ್ರ ಗುಂಡಿಗಳಿಂದ ಹದಗೆಟ್ಟು, ಮಳೆ ಬಂದಾಗ ಕೆಸರು ಹಾಗೂ ನೀರಿನಿಂದ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅಭಿವೃದ್ಧಿಗೆ ಬೇಕಾದ ಅಧಿಕಾರವೂ ಇದೆ, ಅವಕಾಶವೂ ಇದೆ. ಆದರೆ ಜನರ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಯಾವಾಗ? ಕ್ಷೇತ್ರದ ರಸ್ತೆಗಳ ದುಸ್ಥಿತಿಯೇ ಶಾಸಕರ ಕಾರ್ಯವೈಖರಿಗೆ ಕನ್ನಡಿ ಹಿಡಿದಂತಿದೆ.
#SringeriNeedsDevelopment
#CongressFailsKarnataka
#SringeriConstituency
#Koppa #Potholes
ಚಿಕ್ಕಮಗಳೂರಿನ ಜಿಲ್ಲಾ ಒಕ್ಕಲಿಗರ ಸಭಾಭವನದಲ್ಲಿ ಮಲೆನಾಡಿನ ಉಳಿವಿಗಾಗಿ ಪರಿಸರ ಸೂಕ್ಷ್ಮ ಪ್ರದೇಶದ 7ನೇ ಅಧಿಸೂಚನೆ ಕುರಿತು ಮಾನ್ಯ ಸಂಸದರಾದ ಶ್ರೀ @KotasBJP ಯವರ ಉಪಸ್ಥಿತಿಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಭಾಗವಹಿಸಲಾಯಿತು.
ಕಾರ್ಯಕ್ರಮದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡ ನಮ���ಮ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ��ಲ್ಲಾ ಪದಾಧಿಕಾರಿಗಳಿಗೂ ಹಾಗೂ ಸದಸ್ಯರಿಗೆ ಹೃತ್ಪೂರ್ವಕ ಧನ್ಯವಾದಗಳು.
#SringeriKshetraRaitaOkkuta
ನವ ಭಾರತ ಮತ್ತು ಅದರ ಭವಿಷ್ಯ ಸುಭದ್ರವಾಗಿದೆ ! 📚
ಶಾಲೆ ತೊರೆಯುವಿಕೆ ಕಡಿಮೆಯಾಗಿದೆ, ದೊಡ್ಡ ಕನಸುಗಳನ್ನು ಹೊತ್ತು ಮಕ್ಕಳು ಶಾಲೆಯತ್ತ ಧಾವಿಸುತ್ತಿದ್ದಾರೆ. ಇದು ನವ ಭಾರತದ ಯಶೋಗಾಥೆ 📈
ಕಳೆದ 12 ವರ್ಷಗಳಲ್ಲಿ ಶಾಲಾ ಶಿಕ್ಷಣದಿಂದ ಹೊರಗುಳಿಯುವ ಮಕ್ಕಳ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ.
ಹೆಚ್ಚು ಮಕ್ಕಳು ಶಾಲೆಗೆ ಧಾವಿಸುತ್ತಿದ್ದಾರೆ ಎಂದರೆ ದೊಡ್ಡ ದೊಡ್ಡ ಕನಸುಗಳು ಈಡೇರುವ ಹಾದಿಯಲ್ಲಿವೆ ಎಂದೇ ಅರ್ಥ. ಶ��ಕ್ಷಣವು ಹೆಚ್ಚು ಚಾಣಾಕ್ಷ ಮತ್ತು ಹೆಚ್ಚು ಆತ್ಮವಿಶ್ವಾಸ ತುಂಬಿದ ಸಶಕ್ತ ಭಾರತವನ್ನು ನಿರ್ಮಿಸುತ್ತಿದೆ. 🇮🇳
#ViksitBharat #NarendraModi #BJP4India #BJP4Karnataka
ರಾಷ್ಟ್ರೀಯ ಬಾಹ್ಯಾಕಾಶ ದಿನ - ಭಾರತದ ಚಂದ್ರಯಾನ-3 ರ ಯಶಸ್ಸನ್ನು ಸ್ಮರಿಸುವ ಸುದಿನ.
23 ಆಗಸ್ಟ್ 2023 ರಂದು ಚಂದ್ರಯಾನ-3 ರ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ 'ಶಿವ ಶಕ್ತಿ ಬಿಂದು'ವಿನಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್ ನಡೆಸಿತು. ಈ ಸಂಭ್ರಮವನ್ನು ಸದಾ ಸ್ಮರಣೀಯಗೊಳಿಸಲು ಮೋದಿ ಸರ್ಕಾರವು ಪ್ರತಿ ವರ್ಷ ಆಗಸ್ಟ್ 23 ಅನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವಾಗಿ ಆಚರಿಸುತ್ತಿದೆ.
ದೇಶದ ವಿಜ್ಞಾನಿಗಳು ಹಾಗೂ ಇಂಜಿನಿಯರ್ಗಳ ಸಾಧನೆಯನ್ನು ಗೌರವಿಸೋಣ.
#NationalSpaceDay
ಶೃಂಗೇರಿ ಕ್ಷೇತ್ರದಲ್ಲಿ ರಸ್ತೆಗಳ ದುಸ್ಥಿತಿ, ವಾಹನ ಸವಾರರ ಸಂಕಷ್ಟ, ಅಪಘಾತದ ಆತಂಕ, ಇವೆಲ್ಲವೂ ಜನರ ದಿನನಿತ್ಯದ ಸಮಸ್ಯೆಗಳಾಗಿವೆ. ಆದರೆ ಶಾಸಕರಿಗೆ ಮಾತ್ರ ಈ ಗುಂಡಿಗಳೇ ತಮ್ಮ ಅಭಿವೃದ್ಧಿಯ ಹೆಗ್ಗುರುತಾಗಿರುವಂತಿದೆ!
ಕಾಂಗ್ರೆಸ್ ಸರ್ಕಾರದಿಂದ ಜನರಿಗೆ ಬೇಕಿರುವುದು ಗುಂಡಿಗಳ ಭಾಗ್ಯವಲ್ಲ, ಗುಣಮಟ್ಟದ ರಸ್ತೆಗಳ ಭಾಗ್ಯ.
#SringeriNeedsDevelopment
#BJP4Sringeri #BJP4Karnataka
ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು🙏
ತಾಯಿ ವರಮಹಾಲಕ್ಷ್ಮಿಯ ಕೃಪೆಯಿಂದ ಎಲ್ಲರ ಮನೆ-ಮನಗಳಲ್ಲಿ ಸುಖ, ಶಾಂತಿ, ಸಮೃದ್ಧಿ ಸದಾ ನೆಲೆಸಿರಲಿ 🪷
#VishwanathGaddemane
📢 ಪ್ರಕಟಣೆ : ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ
ಮಲೆನಾಡಿನ ಉಳಿವಿಗಾಗಿ – ರೈತರ ಬದುಕಿಗಾಗಿ ಮಹತ್ವದ ಸಭೆ
ಕೇಂದ್ರ ಪರಿಸರ ಮತ್ತು ವನ್ಯಜೀವಿ ಸಚಿವಾಲಯದಿಂದ ಹೊರಡಿಸಲಾಗಿರುವ ಪರಿಸರ ಸೂಕ್ಷ್ಮ ಪ್ರದೇಶದ (ESA) 7ನೇ ಅಧಿಸೂಚನೆಯ ಸಾಧಕ–ಬಾಧಕಗಳ ಕುರಿತು ಸಮಗ್ರ ಚರ್ಚೆ ಹಾಗೂ ಮುಂದಿನ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಲು ಈ ಸಭೆಯನ್ನು ಆಯೋಜಿಸಲಾಗಿದೆ.
ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ಸೇರಿದಂತೆ ಜಿಲ್ಲೆಯ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಈ ಪ್ರಮುಖ ಸಭೆ ನಡೆಯಲಿದೆ.
ಸಭೆಯಲ್ಲಿ ಗೌರವಾನ್ವಿತ ಲೋಕಸಭಾ ಸದಸ್ಯರಾದ ಶ್ರೀ @KotasBJP ಅವರು ಉಪಸ್ಥಿತರಿರಲಿದ್ದು, ಕೇಂದ್ರ ಸರ್ಕಾರದ ಮಟ್ಟದಲ್ಲಿ ಈ ವಿಚಾರವನ್ನು ಮಂಡಿಸುವ ಹಾಗೂ ಸಂಸದರ ನೇತೃತ್ವದಲ್ಲಿ ನಿಯೋಗ ಕೊಂಡೊಯ್ಯುವ ಕುರಿತು ಚರ್ಚಿಸಲಾಗುವುದು.
📅 ದಿನಾಂಕ: 24.08.2026 (ಸೋಮವಾರ)
⏰ ಸಮಯ: ಮಧ್ಯಾಹ್ನ 2:00 ಗಂಟೆಗೆ
📍 ಸ್ಥಳ: ಜಿಲ್ಲಾ ಒಕ್ಕಲಿಗರ ಸಭಾಭವನ, ವಿಜಯಪುರ, ಚಿಕ್ಕಮಗಳೂರು
ಶೃಂಗೇರಿ ಕ್ಷೇತ್ರದ ರೈತ ಒಕ್ಕೂಟದ ಎಲ್ಲಾ ಪದಾಧಿಕಾರಿಗಳು, ಸದಸ್ಯರು, ರೈತ ಬಂಧುಗಳು ಹಾಗೂ ಎಲ್ಲಾ ಸಂಘಟನೆಗಳ ಮುಖಂಡರು ತಪ್ಪದೇ ಸಭೆಗೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.
-ವಿಶ್ವನಾಥ್ ಗದ್ದೆಮನೆ
ಅಧ್ಯಕ್ಷರು, ಶೃಂಗೇರಿ ಕ್ಷೇತ್ರ ರ���ತ ಒಕ್ಕೂಟ.
#VishwanathGaddemane
#SrigeriKshetraRaitaOkkuta
#koppa #sringeri #NRpura #chikkamangaluru
ಸಾಮಾಜಿಕ ಜಾಲತಾಣಗಳು ಮತ್ತು ಶಾರ್ಟ್ಕಟ್ಗಳ ಈ ಕಾಲದಲ್ಲಿ, "ಶಾರ್ಟ್ಕಟ್ ನಿಮ್ಮ ಜೀವವನ್ನೇ ಮೊಟಕುಗೊಳಿಸಬಹುದು" ಎಂಬುದನ್ನು ನೆನಪಿನಲ್ಲಿಡಿ.
Gen Z ಗಳಿಗೆ ಪ್ರಧಾನಿ ಶ್ರೀ @narendramodi ಜಿ ಅವರ ಕಿವಿಮಾತು.
#GenZ
ಮನೆ ಮನೆ��ಲ್ಲೂ ತ್ರಿವರ್ಣ ಧ್ವಜ, ಮನೆ ಮನದಲ್ಲೂ ತ್ರಿವರ್ಣ ಧ್ವಜ...
ಬನ್ನಿ, ಆಗಸ್ಟ್ 15 ರ ಸ್ವಾತಂತ್ರ್ಯೋತ್ಸವವನ್ನು ಅತ್ಯಂತ ವೈಭವ ಮತ್ತು ಹೆಮ್ಮೆಯಿಂದ ಆಚರಿಸೋಣ, ಸ್ವಾತಂತ್ರ್ಯ ಹೋರಾಟಗಾರರಿಗೆ ಶ್ರದ್ಧಾಂಜಲಿ ಸಲ್ಲಿಸೋಣ, ವಿಕಸಿತ ಭಾರತದ ಸಂಕಲ್ಪ ಕೈಗೊಳ್ಳೋಣ!
ದೇಶವಾಸಿಗಳನ್ನು ಉದ್ದೇಶಿಸಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ನೀಡಿರುವ ವಿಶೇಷ ಸಂದೇಶ.
#HarGharTiranga #IndependenceDay #PMModi
ನಮ್ಮ ಯುವ ಸಮುದಾಯವನ್ನು ಮಾದಕ ವ್ಯಸನದಿಂದ ರಕ್ಷಿಸಲು ಮತ್ತು ಸಮಾಜವನ್ನು ಈ ಪಿಡುಗಿನಿಂದ ಮುಕ್ತಗೊಳಿಸಲು ನರಸಿಂಹರಾಜಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಇತ್ತೀಚೆಗೆ ಕೈಗೊಂಡಿರುವ ಕ್ರಮಗಳು ಅತ್ಯಂತ ಶ್ಲಾಘನೀಯವಾಗಿವೆ. ನಿಮ್ಮ ಈ ಕರ್ತವ್ಯನಿಷ್ಠೆ ಮತ್ತು ಜನಸುರಕ್ಷತೆಯ ಸೇವೆಗೆ "ವಿಶ್ವನಾಥ್ ಗದ್ದೆಮನೆ ಚಾರಿಟೇಬಲ್ ಟ್ರಸ್ಟ್ ಪರವಾಗಿ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ"
ನಮ್ಮ ಟ್ರಸ್ಟ್ ವತಿಯಿಂದಲೂ ಸಹ ಯುವ ಪೀಳಿಗೆಯನ್ನು "ಮಾದಕ ವ್ಯಸನ ಮುಕ್ತಗೊಳಿಸಲು ನಿರಂತರವಾಗಿ ಜಾಗೃತಿ ಮತ್ತು ಮಾಹಿತಿ ಕಾರ್ಯಗಾರಗಳನ್ನು ಹಮ್ಮಿಕೊಳ್ಳುತ್ತಾ ಬರಲಾಗಿದೆ." ಇಂತಹ ಘೋರ ಘಟನೆಗಳು ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಮರುಕಳಿಸಬಾರದು ಎನ್ನುವುದು ನಮ್ಮ ಆಶಯವಾಗಿದೆ.
ಗಾಂಜಾ ಮಾರಾಟ ಮತ್ತು ಪೂರೈಕೆಯ ಹಿಂದಿರುವ ಮೂಲ ಜಾಲವನ್ನು ಸಂಪೂರ್ಣವಾಗಿ ಪತ್ತೆಹಚ್ಚಿ, ಅದನ್ನು ಬೇರುಸಹಿತ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಇನ್ನು ಮುಂದೆ ಇಂತಹದ್ದೇ ಕಠಿಣ ಕಾನೂನು ಕ್ರಮಗಳನ್ನು ಮುಂದುವರಿಸಬೇಕಾಗಿ ವಿನಂತಿಸುತ್ತೇವೆ.
ಮಾದಕ ವಸ್ತು ಮುಕ್ತ ಹಾಗೂ ಆರೋಗ್ಯವಂತ ಸಮಾಜ ನಿರ್ಮಾಣದ ನಿಮ್ಮ ಈ ಕಾರ್ಯಕ್ಕೆ ನಮ್ಮ ವಿಶ್ವ��ಾಥ್ ಗದ್ದೆಮನೆ ಚಾರಿಟೇಬಲ್ ಟ್ರಸ್ಟ್ ಸದಾ ಬೆಂಬಲವಾಗಿ ನಿಲ್ಲುತ್ತದೆ.
ನಿಮ್ಮ ಸೇವೆ ಹೀಗೆಯೇ ಮುಂದುವರಿಯಲಿ, ನಾಡಿಗೆ ಮಾದರಿಯಾಗಲಿ ಎಂದು ಹಾರೈಸುತ್ತೇವೆ.
#VishwanathGaddemaneCharitableTrust