RCB ಗು ಮತ್ತು ಕರ್ನಾಟಕಕ್ಕೂ ಏನಾದರೂ ಸಂಬಂಧ ಇದೆಯೇ? RCB ಯು (United Spirits Limited) USL ನ ಒಡೆತನದಲ್ಲಿದೆ. ಈ ಕಂಪನಿ ವಿದೇಶಿ ಮೂಲದ್ದು. ಆಟದ ತಂಡಕ್ಕೆ ಬೆಂಗಳೂರು ಎಂಬ ಹೆಸರನ್ನು ಸೇರಿಸಿದ ಮಾತ್ರಕ್ಕೆ ಅದು ನಮ್ಮದಾಗುತ್ತಾ?
ಪುರೋಹಿತರು ಎಂದಿಗೂ ದೇವರನ್ನು ಕೇಳುವುದಿಲ್ಲ, ಅವರು ಯಾವಾಗಲೂ ಭಕ್ತರನ್ನು ಕೇಳುತ್ತಾರೆ. ಏಕೆಂದರೆ, ಕಲ್ಲಿನ ವಿಗ್ರಹವು ನನಗೆ ಏನನ್ನು ನೀಡಲು ಸಾಧ್ಯವಿಲ್ಲ ಎಂದು ಅವರಿಗೆ ತಿಳಿದಿದೆ.
✍️ ಓಶೋ
ವಿಶ್ವಸಂಸ್ಥೆಗೆ ಯಾವುದೇ ತನ್ನದೇ ಆದ ಸ್ವಂತ ಶಕ್ತಿ ಇಲ್ಲ. ರಾಷ್ಟ್ರ ರಾಷ್ಟ್ರಗಳ ನಡುವಿನ ವಿವಾದಗಳನ್ನು ಶಾಂತಿಯುತವಾಗಿ ಬಗೆಹರಿಸುವುದು ವಿಶ್ವ ಸಂಸ್ಥೆಯ ಮುಖ್ಯ ಉದ್ದೇಶ. ಆದರೆ ಈಗ ಅದು ಇದ್ದು ಇಲ್ಲದಂತಿದೆ.
ಅಮೆರಿಕದ ಅಧ್ಯಕ್ಷ (Donald J Trump) ಅವರು ನನಗೆ ನೋಬೆಲ್ ಪ್ರಶಸ್ತಿ ಬೇಕು, ನನಗೆ ನೋಬೆಲ್ ಪ್ರಶಸ್ತಿ ಬೇಕು ಎಂದು ಕನವರಿಸುತ್ತಿದ್ದರು. ಕೊನೆಗೂ ಯಾವುದೋ ರೀತಿಯಲ್ಲಿ ಅದನ್ನು ಪಡೆದುಕೊಂಡರು.
ಇವರಿಗೆ ದೊಡ್ಡಣ್ಣ ಅಂತ ಕರೀಬೇಕಾ?
ನಾವು SSLC, PUC ಪರೀಕ್ಷೆ ಯನ್ನ ಬರೆಯುವಾಗ ಸುಮಾರು 40% ರಿಂದ 45% ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿದ್ದರು. ಪ್ರಶ್ನೆ ಪತ್ರಿಕೆಯನ್ನು ಸರಳೀಕರಣ ಮಾಡುತ್ತ ಮಾಡುತ್ತಾ ಉತ್ತೀರ್ಣ ಪ್ರಮಾಣವನ್ನು ಈಗ 80% ರಿಂದ 85% ಕ್ಕೆ ತಂದು ನಿಲ್ಲಿಸಿದ್ದಾರೆ. ಶಿಕ್ಷಣದಲ್ಲಿ ಕ್ರಾಂತಿಯೆಂದರೆ ಇದೆ ಅಲ್ಲವೇ?
ಕೆಲವರು 'Always think positive' ಎಂಬ ತತ್ವದಲ್ಲಿ ಬದುಕುತಿರುತ್ತಾರೆ. ತಮ್ಮ ಮೂಗಿನ ನೇರಕ್ಕೆ ವಿಚಾರ ಮಾಡುತ್ತಿರುತ್ತಾರೆ. ಇವರು ತಮ್ಮ ಗುರಿಯನ್ನು ಮುಟ್ಟಬಹುದು, ವಿಜಯಶಾಲಿಯೂ ಆಗಬಹುದು. ಆದರೆ, ಇವರಾರೂ ಯಶಸ್ವಿಯಾಗಲಾರರು, ಸಂಪೂರ್ಣ ಲೋಕಾನುಭವವನ್ನು ಪಡೆಯಲಾರರು!