ಇರೋದೊಂದೇ ಜೀವ(ನ) ಮರಳಿ ಬಾರದು ಯವ್ವನ...
ಇದ್ದಷ್ಟು ದಿನ ಸಮಾಜದಲ್ಲಿನ ಶೋಷಿತರ, ನೊಂದವರ ಪರ ಧ್ವನಿ ಎತ್ತೋಣ. ✊️
ಹೋರಾಟವಿಲ್ಲದ ಜೀವನ ಸಾವಿಗೆ ಅವಮಾನ.
ಅನ್ಯಾಯದ ವಿರುದ್ಧ ಸಮರ.
💛❤️ಕನ್ನಡಿಗರು
ಕನ್ನಡಗರಿಗಾಗಿ ಕನ್ನಡ ಕುಣಿತ.. ✊💛❤️
ಈ ವರ್ಷದ ಕೋರಮಂಗಲದಲ್ಲಿ ಯುವ ಕರ್ನಾಟಕ ವೇದಿಕೆ ವತಿಯಿಂದ ನಡೆದ ಅದ್ದೂರಿ ಕನ್ನಡ ಕುಣಿತ ಕಾರ್ಯಕ್ರಮದ ಸಣ್ಣ ತುಣುಕು.. 😍
ಇಡೀ ಕೋರಮಂಗಲ ಕನ್ನಡ ಕಲರವದಿಂದ ಕೂಡಿದ್ದ ಕ್ಷಣಗಳಿಗೆ ರಾಜ್ಯದ ಮೂಲೆ ಮೂಲೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಸಾಕ್ಷಿಯಾದ ಎಲ್ಲಾ ನಲ್ಮೆಯ ಕನ್ನಡಿಗರಿಗೂ ಧನ್ಯವಾದಗಳು..
ನಮ್ಮ ಮೆಟ್ರೋ ನಮಗಲ್ವಾ..?
ಕೇವಲ ಸಿರಿವಂತರ ಪಾಲಯ್ತಾ..?
ಒಬ್ಬ ರೈತ‚ ಒಬ್ಬ ಕೂಲಿ ಕಾರ್ಮಿಕ
ಇಲ್ಲದ ನಾಳೆಯ ಊಹಿಸಬಲ್ಲಿರಾ ತಾವು..?😡
ಬೋರ್ಡ್ ಹಾಕಿಬಿಡಿ ಒಳ್ಳೆ ಬಟ್ಟೆ ಹಾಕಿಕೊಂಡು
ಬರುವವರಿಗೆ ಮಾತ್ರ ಪ್ರವೇಶ ಎಂದು.!
ಕೂಡಲೇ ಕ್ಷಮೆ ಕೇಳಲೇಬೇಕು ನೀವುಗಳು.✊
ಕನ್ನಡಿಗರ ಮೆಟ್ರೋ ನಿಮ್ಮಪ್ಪಂದ್ ಅಲ್ಲಾ.💛❤️
@OfficialBMRCL#ಮೆಟ್ರೋ
ಇವರಿಗೆ ನೈತಿಕ ಪೊಲೀಸ್ ಗಿರಿಯ
ಅಧಿಕಾರ ಕೊಟ್ಟೋರ್ಯಾರು.?
ಯಲಹಂಕದ ಖಾಸಗಿ ಅಪಾರ್ಟ್ಮೆಂಟ್ ನಲ್ಲಿ ಅಪ್ಪಣೆ ಪಡೆಯದೇ ಒಳ ನುಗ್ಗಿದ ಆರೋಪದಲ್ಲಿ ಕನ್ನಡದವನ ಮೇಲೆ ಹಲ್ಲೆ ಮಾಡಿದ್ದಾರೆ ಹಿಂದಿವಾಲಗಳು.😡
ಇದೇ ರೀತಿ ನಾವೇನಾದ್ರು ಇದೇ ಸೆಕ್ಯೂರಿಟಿಗಳ ಮೇಲೆ ಹಲ್ಲೆ ಮಾಡಿದಿದ್ರೆ ಸುಮ್ನೆ ಬಿಡ್ತಿದ್ರಾ ಸ್ವಾಮಿ?
@BlrCityPolice@CMofKarnataka
ವಿಶ್ವ ಮಾತೃಭಾಷೆ ದಿನವಂತೆ ಇಂದು..💛❤️
ಇಡೀ ಒಕ್ಕೂಟ ಭಾರತದಲ್ಲಿ ಈ ಪರಿಯ
ತಾಯ್ನುಡಿ ಮೇಲೆ ಪ್ರೀತಿ ಯಾರಿಗಾದರೂ
ಇದೇ ಅಂದ್ರೆ ಅದು ಕನ್ನಡಿಗರಿಗೆ ಮಾತ್ರ.
ಕನ್ನಡ ಎನೆ ಕುಣಿದಾಡುವುದೆನ್ನೆದೆ
ಕನ್ನಡ ಎನೆ ಕಿವಿ ನಿಮಿರುವುದು‚
ಕಾಮನ ಬಿಲ್ಲನು ಕಾಣುವ ಕವಿಯೊಳು
ತೆಕ್ಕನೆ ಮನ ಮೈ ಮರೆಯುವುದು..!
ಎಲ್ಲಾ ನಲ್ಮೆಯ ಕನ್ನಡಿಗರಿಗೂ ಸಿಹಿ ಹಾರೈಕೆಗಳು.
ಕರ್ನಾಟಕದ #KPSC ಸಮಸ್ಯೆ ಬಗೆಹರಿಸದರು ಉತ್ತರ ಪ್ರದೇಶದ ಸಮಸ್ಯೆಗೆ
ಹೋರಾಟ ಮಾಡ್ತಾರಂತೆ.
ಕರ್ನಾಟಕದ ಸಾವಿರಾರು ಯುವಕರು ಈಗಿನ ಭ್ರಷ್ಟ #KPSC ಅಧ್ಯಕ್ಷನನ್ನು ವಜಾ ಮಾಡಿ ಎಂದು ಆಗ್ರಹಿಸಿದರೆ ಅವರನ್ನು ಜೈಲಿಗೆ ಹಾಕಿದ್ರಿ.
ಸ್ವತಃ @secretarykpsc ಅವರೇ ಅಧ್ಯಕ್ಷನ ವಿರುದ್ಧ ದೂರು ಕೊಟ್ಟರೆಂದು ಅವರನ್ನೇ ಮನೆಗೆ ಕಳುಹಿಸಿದ ದುಷ್ಟರು ನೀವು.😡
ರಾಜಕಾರಣಿ:-ಬೆಂಗಳೂರಿನಲ್ಲಿ @BMTC_BENGALURU ಹೊರತುಪಡಿಸಿ ಖಾಸಗಿ ಬಸ್ ಗಳನ್ನು ಯಾಕೆ ಬಿಡಬಾರದು?
ಪ್ರಜಾಕಾರಣಿ:-ಸಂಸ್ಥೆಗಳು ಸರ್ಕಾರದ ಅಧೀನದಲ್ಲಿ ಇರುವಾಗ ಪ್ರತಿಯೊಬ್ಬ ಬಡವನೂ ಪ್ರಶ್ನೆ ಕೇಳೋ ಅಧಿಕಾರ ಹೊಂದಿರುತ್ತಾನೆ‚
ಅದೇ ಸಂಸ್ಥೆಗಳು ಶ್ರೀಮಂತನ ಖಾಸಗಿ ಸ್ವತ್ತು ಆದಾಗ ಬಡವನಿಗೆ ಪ್ರಶ್ನೆ ಕೇಳೋ
ಅರ್ಹತೆ ಇರೋದಿಲ್ಲ.
@Dhananjayaka 🔥
ಈ ಕಾರ್ಯಕ್ರಮಕ್ಕೆ ಅನುಮತಿ ಕೊಟ್ಟವರಾರು @BlrCityPolice@blrcitytraffic?
@pagraharaps ಠಾಣಾ ವ್ಯಾಪ್ತಿಯಲ್ಲಿನ ಈ ಕಾರ್ಯಕ್ರಮ ಒಂದಿಡೀ ರಸ್ತೆಯನ್ನೇ ಬಂದ್ ಮಾಡಿ ಬಿಟ್ಟಿದೆ.
ಜನ ಮುಖ್ಯ ರಸ್ತೆಗೆ ಹೋಗೋಕೆ ಇರೋ ಏಕೈಕ ರಸ್ತೆ ಇದು ಮಾತ್ರ.
ಬದಲಿ ಮಾರ್ಗದ ವ್ಯವಸ್ಥೆ ಮಾಡಿಲ್ಲ.!
ಸಾರ್ವಜನಿಕರಿಗೆ ತೊಂದರೆ ಕೊಟ್ಟು
ಕಾರ್ಯಕ್ರಮ ಮಾಡಬೇಕಾ.?
ಕೇವಲ 18 ದಿನಗಳಷ್ಟೇ ಬಾಕಿ..
ನಮ್ಮ ಯುವ ಕರ್ನಾಟಕ ವೇದಿಕೆಯ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಕನ್ನಡದ ಡಿಜೆ ಹಾಡುಗಳಿಗೆ ಹೆಜ್ಜೆ ಹಾಕಲು
ಕನ್ನಡದ ಖ್ಯಾತ ನಟರಾದ @Dhananjayaka ಅವರು ಬರಲಿದ್ದಾರೆ.
ನೀವೂ ಬರ್ತೀರಾ ಅಲ್ವಾ.. ✌🏻😍
ದಿನಾಂಕ :-24-02-2024
ಸಮಯ :- ಸಂಜೆ 05:30 ರಿಂದ
ಸ್ಥಳ :- ಕೋರಮಂಗಲ ಜ್ಯೋತಿ ನಿವಾಸ್ ಕಾಲೇಜು ಬಳಿ..
ಬಡವರ ಮೇಲೆ ಪೊಲೀಸ್ ಪೇದೆಯ ದರ್ಪ.!😡
ಇತ್ತೀಚಿಗೆ ಬೀದಿ ಬದಿ ವ್ಯಾಪಾರಿಗಳನ್ನು ತೆರವು ಮಾಡಬೇಕೆಂದು ಹೈಕೋರ್ಟ್ ಆದೇಶೀಸಿತ್ತು ನಿಜ.
ಆದರೆ ದರ್ಪ ದೌರ್ಜನ್ಯದಿಂದ ತಕ್ಕಡಿ ಹೊಡೆದು ಹಾಕಿ ತೆರವು ಮಾಡೋಕೆ ಹೇಳಿತ್ತ ಹೈಕೋರ್ಟ್.?
@blrcitytraffic@upparpetetrfps ಠಾಣೆಯ
ನಾಗರಾಜ್ ಅನ್ನೋ ಈ ಪೇದೆ
ವಜಾ ಆಗಲೇಬೇಕು..✊
@Jointcptraffic
ನಾ ಕಂಡ ಅದ್ಭುತ ವ್ಯಕ್ತಿ(ತ್ವ) 💛❤️
ಕನ್ನಡ ಕುಣಿತ ಕಾರ್ಯಕ್ರಮಕ್ಕೆ ಆಹ್ವಾನಿಸುವ ವಿಚಾರವಾಗಿ ಕನ್ನಡದ ಖ್ಯಾತ ನಟರಾದ
@SRIMURALIII ಅವರ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಆತಿಥ್ಯದ ಜೊತೆಗೆ ನಮ್ಮೆಲ್ಲರೊಂದಿಗೆ ನಡೆದುಕೊಂಡ ರೀತಿ
ಮನ ಮುಟ್ಟಿದೆ.
ಇದೇ ತಿಂಗಳ ೨೪ ರಂದು ಕೋರಮಂಗಲದಲ್ಲಿ ನಡೆಯೋ ನಮ್ಮ ಕಾರ್ಯಕ್ರಮಕ್ಕೆ ನೀವೂ ಬನ್ನಿ.
ಕನ್ನಡ ಕುಣಿತ ಭಾಗ -೦೩ 💛❤️
ಇದೇ ತಿಂಗಳ ೨೪ ರಂದು ಕೋರಮಂಗಲದ ಜ್ಯೋತಿ ನಿವಾಸ್ ಕಾಲೇಜಿನ ಬಳಿ ನಡೆಯಲಿರುವ ನಮ್ಮ #ಯುಕವೇ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಕನ್ನಡದ ಡಿಜೆ ಹಾಡುಗಳಿಗೆ ಹೆಜ್ಜೆ ಹಾಕಲು ಕನ್ನಡದ ಖ್ಯಾತ ನಟರಾದ @SRIMURALIII ಅವರು ಬರಲಿದ್ದಾರೆ.
ನೀವೂ ಬರ್ತೀರಾ ಅಲ್ವಾ..✌🏻😍
ದಿನಾಂಕ :-24-02-2024
ಸಮಯ :- ಸಂಜೆ 05:30 ರಿಂದ
ಇಂದು #ಯುಕವೇ ವತಿಯಿಂದ
ಖ್ಯಾತ ನಟರಾದ @SRIMURALIII ಅವರನ್ನು ಭೇಟಿ ಮಾಡಿ ನಮ್ಮ #ಕನ್ನಡ_ಕುಣಿತ ಭಾಗ ೦೩ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಯಿತು.
ಬಹಳ ಸಂತೋಷದಿಂದ ಬರಲು ಒಪ್ಪಿದ್ದಾರೆ..
ಪ್ರೀತಿಯ ಕನ್ನಡಿಗರೇ ಸಿದ್ದರಾಗಿ ಸದಾ ವಲಸಿಗರೇ ತುಂಬಿ ತುಳುಕೊ ಕೋರಮಂಗಲದಲ್ಲಿ ಕನ್ನಡದ ಡಿಜೆ ಹಾಡುಗಳಿಗೆ ಕುಣಿದು ಕುಪ್ಪಳಿಸೋಣ.
24.02.24
ಕೋರಮಂಗಲ
ಕನ್ನಡ ಕುಣಿತ
ಎಲ್ಲರಿಗೂ ಸ್ವಾಗತ
ಇದೊಂದು ಸುಂದರ ಕಾರ್ಯಕ್ರಮ
ಗಣ್ಯ ಅತಿಥಿಯಾಗಿ @SRIMURALIII ಅವರು ಬರಲಿದ್ದಾರೆ.
(ಫೆಬ್ರವರಿ 24 ಶನಿವಾರ ಸಂಜೆ 6ರಿಂದ)
ಕೋರಮಂಗಲ ಜ್ಯೋತಿ ನಿವಾಸ್ ಕಾಲೇಜು ಬಳಿ.ಎಲ್ಲಾ ಕನ್ನಡಿಗರು ಕನ್ನಡ ಬಾವುಟದೊಂದಿಗೆ ಬನ್ನಿ ಕುಣಿದು ಕುಪ್ಪಳಿಸಿ ಕನ್ನಡ ಹಬ್ಬ ಆಚರಿಸೋಣ.
ಕನ್ನಡ ರ್ಯಾಪ್,ಜಾನಪದ ಹಾಡುಗಳು ಇರಲಿವೆ.
ಯುಪಿ,ಬಿಹಾರ್,ಮಧ್ಯಪ್ರದೇಶ, ಝಾರ್ಖಂಡ್ ರಾಜ್ಯಗಳು 100 ರುಪಾಯಿಗೆ ಎಷ್ಟು ರೂಪಾಯಿಗಳನ್ನು ಕೇಂದ್ರದಿಂದ ಹಿಂಪಡೆಯುತ್ತವೆ ನೋಡಿ.
ನಮ್ಮ ದಕ್ಷಿಣ ರಾಜ್ಯಗಳು ಎಷ್ಟು ರೂಗಳನ್ನು ನಾವು ಕೊಡೋ 100 ರುಪಾಯಿಗೆ ಹಿಂಪಡೆಯುತ್ತೇವೆ ನೋಡಿ.
ಅದ್ರಲ್ಲೂ ಕರ್ನಾಟಕ ನೋಡಿ.
ಇದು ಯಾವ ನ್ಯಾಯ
ನಾವು ದುಡಿದು ಕಟ್ಟೋದು ಅವರು ಜಾತಿಧರ್ಮ ಅಂತ ಹೊಡೆದಾಡಿಕೊಂಡು ಇರಲಿ.
ನಮ್ಮ ತಂಡದ ಪ್ರಯತ್ನ ವ್ಯರ್ಥವಾಗಲಿಲ್ಲ.💛❤️
ಪೆಟ್ರೋಲ್ ಬಂಕ್ ಸೇರಿದಂತೆ ಗ್ಯಾಸ್ ಸಿಲಿಂಡರ್ ಗಳ ಮೇಲಿನ ಹಿಂದಿ ಹೇರಿಕೆಯನ್ನು ತೆರವು ಮಾಡುವಂತೆ ಸಂಬಂಧಪಟ್ಟ ಕೇಂದ್ರ ಕಚೇರಿಗಳಿಗೆ @rajanna_rupesh ಅವರ ನೇತೃತ್ವದಲ್ಲಿ ಮನವಿ ಜೊತೆಗೆ ಎಚ್ಚರಿಕೆ ನೀಡಿ ಬಂದಿತ್ತು ನಮ್ಮ #ಯುಕವೇ ತಂಡ.
ನಮ್ಮೆಲ್ಲರ ಕೂಗಿಗೆ ಇದೀಗ ಮೊದಲ ಹಂತದ ಜಯ ಲಭಿಸಿದೆ.✌🏻
ಬಾವುಟಗಳ ಘರ್ಷಣೆ ನಡುವೆ ಮರೆಯಾಗುತ್ತಿರೋ ಈ ಸುದ್ದಿ ಗಮನಿಸಿ.
ಇಷ್ಟ್ ದಿನ ಕೇವಲ ಅಭ್ಯರ್ಥಿಗಳು ಆಯೋಗದಲ್ಲಿ ಎಲ್ಲವೂ ಸರಿ ಇಲ್ಲವೆಂದು ಹೋರಾಡತ್ತಿದ್ದರು.
ಈಗ #KPSC ಕಾರ್ಯದರ್ಶಿಯೇ
ಆಯೋಗದ ಅಧ್ಯಕ್ಷ ಹಾಗೂ ಸದಸ್ಯರ ಅಧಿಕಾರ ದುರುಪಯೋಗ‚ದುರ್ನಡತೆ ವಿರುದ್ಧ
ವಜಾ ಮಾಡಬೇಕೆಂದು ರಾಜ್ಯಪಾಲರಿಗೆ
ಪತ್ರ ಬರೆದಿದ್ದಾರೆ.
ಇನ್ನಾದರೂ ಇವರ ಪರ ನಿಲ್ಲೋಣ.