ಹುಣಸೂರು ತಾಲ್ಲೂಕಿನ ಅಂಬೇಡ್ಕರ್ ಭವನದಲ್ಲಿ ಜಿಪಂ, ಮೈಸೂರು ಮತ್ತು ITC ಸಂಸ್ಥೆಯ ಸಹಯೋಗದಲ್ಲಿ ಹುಣಸೂರು, ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಗ್ರಾಮೀಣ ಘನ ತ್ಯಾಜ್ಯ ನಿರ್ವಹಣೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ 15 ಗ್ರಾ.ಪಂ ನ ಸಂಜೀವಿನಿ ಒಕ್ಕೂಟ ಸಂಘದ ಸಿಬ್ಬಂದಿಗಳು ಮತ್ತು ಪಿಡಿಓಗಳಿಗೆ ಸ್ವಚ್ಛ ಶಕ್ತಿ ಸಮ್ಮಾನ್ ಕಾರ್ಯಕ್ರಮ ಆಯೋಜಿಸಲಾಯಿತು.
ನೀರಿನ ಸಮಸ್ಯೆ ಹಿನ್ನೆಲೆ ಮಂಗಳವಾರ ಹದಿನಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹದಿನಾರುಮೋಳೆ, ಬಿಳಿಗೆರೆ ಗ್ರಾಮ ಪಂಚಾಯತಿಯ ಕುಪ್ಪರವಳ್ಳಿ ಹಾಗೂ ಕಾಮಹಳ್ಳಿ ಗ್ರಾಮಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್ ಅವರು ಭೇಟಿ ನೀಡಿ ನೀರಿನ ಸಮಸ್ಯೆ ಪರಿಶೀಲಿಸಿದರು.
ನಂಜನಗೂಡು ತಾಲೂಕಿನ ಕಾಯಕ ಗ್ರಾಮ ಪಂಚಾಯಿತಿಯಾದ (ದತ್ತುಗ್ರಾಮ) ಹೊರಳವಾಡಿ ಹಾಗೂ ದೇವನೂರು ಗ್ರಾಮ ಪಂಚಾತಿಯಿಗೆ ಇಂದು ಮಾನ್ಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಯುಕೇಶ್ ಕುಮಾರ್ ರವರು ಭೇಟಿ ನೀಡಿ, ಅಧಿಕಾರಿಗಳು ಹಾಗೂ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿ ಸಾರ್ವಜನಿಕರ ಕುಂದು ಕೊರತೆ ಗಳನ್ನು ಪರಿಶೀಲಿಸಿದರು.
Constitution Day celebrated across Amrit Sarovars in Karnataka 🇮🇳💧
Children, youth, community members and #MGNREGA workers gathered around the #AmritSarovar to read the Preamble, take the Fundamental Duties pledge, display placards, and join discussions on water conservation.
ಪಿರಿಯಾಪಟ್ಟಣ ತಾಲೂಕು ಕಿರನಹಳ್ಳಿ ಗ್ರಾಮ ಪಂಚಾಯಿತಿ ಮತ್ತು ಮೈಕಾಪ್ಸ್ ಸಂಸ್ಥೆ ಸಹಯೋಗದಲ್ಲಿ ಕೀರನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಶೌಚಾಲಯ ದಿನಾಚರಣೆ ಆಚರಿಸಲಾಯಿತು ಶೌಚಾಲಯ ಬಳಕೆ ವೈಯಕ್ತಿಕ ಶುಚಿತ್ವ ಕುರಿತು ಕಾರ್ಯಕ್ರಮ ದಲ್ಲಿ ಭಾಗವಹಿಸಿದ ಸ್ವಸಹಾಯ ಸಂಘದ ಮಹಿಳೆಯರು ಮತ್ತು ಶಾಲಾ ಮಕ್ಕಳಿಗೆ ಉಪನ್ಯಾಸ ನೀಡಲಾಯಿತು.
ಸ್ವಚ್ಛತಾ ಹಿ ಸೇವಾ ಅಭಿಯಾನ ಅಂಗವಾಗಿ ಮೈಸೂರು ತಾಲ್ಲೂಕಿನಲ್ಲಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿ ರವರ ಅಧ್ಯಕ್ಷತೆಯಲ್ಲಿ ದಿನಾಂಕ: 23/09/2025 ರಂದು ಪೌರಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಯಿತು.
ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಹಳೇಬೀಡು ಗ್ರಾಮ ಪಂಚಾಯತಿಯಲ್ಲಿ ಸ್ವಚ್ಚತಾ ಹೀ ಸೇವಾ -2025ರ ಅಂಗವಾಗಿ ಬೂದು ನೀರು,ಕಪ್ಪು ನೀರು, ಹಸಿ ಕಸ ಮತ್ತು ಒಣಕಸ ನಿರ್ವಹಣೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಐಟಿಸಿ ಮತ್ತು ಔಟ್ ರೀಚ್ ಸಂಸ್ಥೆಯ ಸಹಯೋಗದೊಂದಿಗೆ ಹಳೇಬೀಡು ಮತ್ತು ಬೂಚಹಳ್ಳಿ ಗ್ರಾಮದಲ್ಲಿ ಬೀದಿ ನಾಟಕ ನಡೆಸಲಾಯಿತು.
ಸ್ವಚ್ಛತಾ ಹೀ ಸೇವಾ ಅಂಗವಾಗಿ ತಾಲ್ಲೂಕು ಪಂಚಾಯತ್ ಮತ್ತು ಔಟ್ ರೀಚ್ ಸಂಸ್ಥೆ ಸಹಯೋಗದಲ್ಲಿ ಕೆ ಆರ್ ನಗರ ತಾಲ್ಲೂಕು ಪಂಚಾಯತ್ ನಲ್ಲಿ ಸಾಲಿಗ್ರಾಮ ಮತ್ತು ಕೆ ಆರ್ ನಗರ ತಾಲ್ಲೂಕಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು ಮತ್ತು ಘನ ತ್ಯಾಜ್ಯ ಕಾರ್ಯಾಚರಣೆ ತೊಡಗಿರುವ ಸಿಬ್ಬಂದಿಗಳಿಗೆ ಅರೋಗ್ಯ ತಪಾಷಣೆ ಶಿಬಿರ ಆಯೋಜನೆ ಮಾಡಲಾಯಿತು
ಸ್ವಚ್ಛತೆಯೇ ಸೇವೆ-2025ರ ಪ್ರತಿಜ್ಞಾ ವಿಧಿಯಲ್ಲಿರುವ ಎಲ್ಲಾ ಅಂಶಗಳನ್ನು ಪಾಲಿಸುವ ಮೂಲಕ ನಮ್ಮ ಗ್ರಾಮ, ಜಿಲ್ಲೆ, ರಾಜ್ಯವನ್ನು ಸ್ವಚ್ಛ, ಸುಂದರವನ್ನಾಗಿಸುವತ್ತ ಮಹತ್ವದ ಹಜ್ಜೆಯಿಡೋಣ.
ನಿಮ್ಮ ಗ್ರಾಮದಲ್ಲಾಗುವ ಸ್ವಚ್ಛತಾ ಶ್ರಮದಾನದಲ್ಲಿ ಭಾಗಿಯಾಗಿ, ಸಂಪೂರ್ಣ ಸ್ವಚ್ಛತೆಗೆ ಆದ್ಯತೆ ನೀಡಿ.
#SHS2025
ಹುಣಸೂರು ತಾಲೂಕಿನ ಬಿಳಿಕೆರೆ ಗ್ರಾಮ ಪಂಚಾಯತಿಯಲ್ಲಿ ಸ್ವಚ್ಚತಾ ಹೀ ಸೇವಾ ಕಾರ್ಯಕ್ರಮ 2025 ರ ಅಂಗವಾಗಿ ಪ್ರತಿಜ್ಞಾವಿಧಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸ್ವಚ್ಛತಾ ಕಾರ್ಯಕ್ರಮವನ್ನು ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಹೊಂಗಯ್ಯ ರವರ ನೇತೃತ್ವದಲ್ಲಿ ಹಾಗೂ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಯಿತು.
ನಾಗನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಸ್ವಚ್ಚತಾ ಇ ಸೇವಾ 2025 ರ ಅಂಗವಾಗಿ ಪ್ರತಿಜ್ಞಾವಿಧಿಯನ್ನು ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಯುತ ಧರಣೇಶ್ ಸರ್ ರವರ ನೇತೃತ್ವದಲ್ಲಿ ಹಾಗೂ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಯಿತು.
ಸಾಲಿಗ್ರಾಮ ತಾಲ್ಲೂಕಿನ ಹಳಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ರವಿ.ಎ.ಎನ್ ರವರು ಸ್ವಚ್ಛತಾ ಹೀ ಸೇವಾ ಅಭಿಯಾನಕ್ಕೆ ಚಾಲನೆ ನೀಡಿದರು.
ಮಾನ್ಯ ಉಪ ಕಾರ್ಯದರ್ಶಿ(ಅಭಿವೃದ್ಧಿ ಅವರು ತಾಲ್ಲೂಕಿನ ಬೆಟ್ಟದತುಂಗ ಮತ್ತು ಅತ್ತಿಗೋಡು, ಕಿತ್ತೂರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಮ-ನರೇಗಾದಿಂದ ಅನುಷ್ಠಾನಗೊಂಡಿರುವ ಮೆಟ್ಲಿಂಗ್ ರಸ್ತೆ, ಶಾಲಾ ಕಾಂಪೌಂಡ್, ಅಡುಗೆ ಕೋಣೆ, ಸೋಪಾನಕಟ್ಟೆ, ಸ್ವ.ಭಾ.ಮಿ ಯೋಜನೆಯಡಿ ಅನುಷ್ಠಾನಗೊಂಡಿರುವ ಬೂದು ನೀರು ನಿರ್ವಹಣೆ ಕಾಮಗಾರಿಗಳ ಪರಿಶೀಲನೆ ನಡೆಸಿದರು.