@kodlady ಭಾರತ ಸ್ವಾತಂತ್ರ್ಯ ಚಳುವಳಿಯನ್ನು ಕಲಿತ ಕನ್ನಡಿಗರು ಅದರ ಕಾಲು ಭಾಗದಷ್ಟೂ ಕರ್ನಾಟಕ ಏಕೀಕರಣದ ಬಗ್ಗೆ ಕಲಿಯಲಿಲ್ಲ!
ಇಂದು ಅಧಿಕಾರ ದಾಹದ ರಣಹದ್ದುಗಳು ಕನ್ನಡ ನಾಡನ್ನು ಹರಿದು ತಿನ್ನಲು ಹೊಂಚು ಹಾಕುತ್ತಿವೆ.
ಒಬ್ಬ ಪ್ರಧಾನಿ ಮುಂದೆ ೫೦ ಮುಖ್ಯ ಮಂತ್ರಿಗಳು ಕೈಕಟ್ಟಿ ತಲೆಬಗ್ಗಿ ನಿಲ್ಲುವಂಥ ಪರಿಸ್ತಿತಿ ಮುಂದೆ ಬರುತ್ತಿದೆ.
#ಎಚ್ಚರಿಕೆ_ಕನ್ನಡಿಗ
I was forced to learn Hindi mandatorily during my school days, and I do not want my son to go through the same torture. Please abolish the mandatory three-language policy. Let the option to learn any number of languages outside Kannada and English be the parents' call. Let the state not make that call.
ಹಿಂದಿ ಗ್ರೇಡ್ ಹಂತಕ್ಕೆ ಇಳಿಸಿದ್ದು
🔸 ಹಿಂದಿ ಮಾಧ್ಯಮಗಳಿಗೆ ತೊಂದ್ರೆ ಇಲ್ಲ
🔸 ಹಿಂದಿ ಭಾಷಿಕರಿಗೆ ತೊಂದ್ರೆ ಇಲ್ಲ
ತೊಂದ್ರೆ ಆಗಿದ್ದು ಯಾರಿಗೆ?
🔸ಬಿಜೆಪಿಯ "ಕೆಲ" ನಾಯಕರಿಗೆ
🔸 ಕಟ್ಟರ್ ಸಂಘಪರಿವಾರದ ಜಂತುಗಳಿಗೆ
🔸"ರಾಜ್ಯ ಸರ್ಕಾರದ ಆವಾಂತರ" ಅನ್ನೋ ಹೆಡ್ಲೈನ್ ಬಳಸಿರುವ ಕನ್ನಡ ಮಾಧ್ಯಮಗಳಿಗೆ
ಕನ್ನಡಿಗರಿಗೆ ಕನ್ನಡಿಗರೇ ಶತ್ರುಗಳು💔
Another Hindi imposition technique. Its reportedly suspected that the rule would be like 'third language to be chosen must be an Indian language'. So, Hindi will be the inescapable option. And also 'Samskruta' in some schools.
ರಾಜ್ಯಪಾಲರು ದೆಹಲಿಯ ಏಜೆಂಟ್ ಎಂಬುದರಲ್ಲಿ ಅನುಮಾನವೇ ಇಲ್ಲ.
ಆ ಹುದ್ದೆಯೇ ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾದದ್ದು. ಅದು ಸಾಮ್ರಾಜ್ಯಶಾಹಿ ಪದ್ಧತಿಯ ಪಳಿಯುಳಿಕೆ.
ರಾಜ್ಯಪಾಲ ಹುದ್ದೆ ರದ್ದಾಗಲಿ.
#GoBackGovernor#ಎಚ್ಚರ_ಕನ್ನಡಿಗ
Why do we need a Hindi fundamentalist as the Governor of Karnataka?
In Madhya Pradesh Thawar Chand Gehlot’s own state , children study only Hindi and English.
But in Karnataka, the same Thawar Chand is misusing his position to push his langauge Hindi and expects our children to learn it and pass exams.
Why should Karnataka’s children carry a burden that his own state refuses to accept?
We do not need a Governor who promotes his own language in our land.
#GoBackGovernor
ಕರ್ನಾಟಕದ ಮೊದಲ ರಾಜ್ಯಪಾಲರಾಗಿದ್ದವರು ಜಯಚಾಮರಾಜೇಂದ್ರ ಒಡೆಯರ್ ಅವರು. ಮೈಸೂರು ಸಂಸ್ಥಾನದ ಕೊನೆಯ ಮಹಾರಾಜರಾಗಿದ್ದ ಅವರು ಕನ್ನಡ ನಾಡಿನ ಸಂಸ್ಕೃತಿ, ಕಲೆ, ಸಾಹಿತ್ಯದ ದೊಡ್ಡ ಪೋಷಕರಾಗಿದ್ದವರು. ಕರ್ನಾಟಕದಲ್ಲಿ ಆಗಿಹೋದ ಟಿ.ಎನ್.ಚತುರ್ವೇದಿ, ಖುರ್ಷಿದ್ ಆಲಂ ಖಾನ್, ವಿ.ಎಸ್.ರಮಾದೇವಿ ಅವರುಗಳು ಈ ನಾಡಿನ ಅಸ್ಮಿತೆಯನ್ನು ಗೌರವಿಸಿ ಕನ್ನಡಿಗರ ಪ್ರೀತಿ ಗೆದ್ದಿದ್ದರು.
ಕನ್ನಡಿಗರ ದೌರ್ಭಾಗ್ಯವೆಂಬಂತೆ ಈ ಬೆರಳೆಣಿಕೆಯ ರಾಜ್ಯಪಾಲರನ್ನು ಹೊರತುಪಡಿಸಿದರೆ ರಾಷ್ಟ್ರೀಯ ಪಕ್ಷಗಳ ಕೈಗೊಂಬೆ ರಾಜಕಾರಣಿಗಳನ್ನು ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ರಾಜ್ಯಪಾಲರುಗಳು ಪಕ್ಷ ರಾಜಕಾರಣದಿಂದ ದೂರ ಉಳಿಯಬೇಕು ಎಂಬುದು ಸಾಂವಿಧಾನಿಕ, ನೈತಿಕ ಕರ್ತವ್ಯ. ಆದರೆ ತಾವು ಪ್ರತಿನಿಧಿಸುತ್ತಿದ್ದ ರಾಜಕೀಯ ಪಕ್ಷ, ತನ್ನನ್ನು ನೇಮಕ ಮಾಡಿದ ಸರ್ಕಾರದ ಏಜೆಂಟರಂತೆ ಇವರು ವರ್ತಿಸಿದ್ದೇ ಹೆಚ್ಚು.
ಹಿಂದೆ ರಾಜ್ಯಪಾಲರಾಗಿದ್ದ ವಜೂಬಾಯಿ ವಾಲಾ ಎಂಬುವವರು ರಾಜಭವನವನ್ನು ಗುಜರಾತ್ ಭವನವನ್ನಾಗಿ ಮಾಡಿಕೊಂಡಿದ್ದರು. ಈಗ ಮಧ್ಯಪ್ರದೇಶದವರಾದ ತಾವರ್ ಚಂದ್ ಗೆಹ್ಲೋಟ್ ತಮಗೆ ಬೇಡವಾದ ವಿಷಯಕ್ಕೆ ತಲೆಹಾಕಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ರಾಜ್ಯ ಸರ್ಕಾರ ಎಸ್ ಎಸ್ ಎಲ್ ಸಿ ಪರೀಕ್ಷೆಗಳಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್ ವ್ಯವಸ್ಥೆ ಮಾಡಿದರೆ ರಾಜ್ಯಪಾಲರಿಗೇನು ಸಮಸ್ಯೆ? ಜನರಿಂದ ಆಯ್ಕೆಯಾದ ರಾಜ್ಯ ಸರ್ಕಾರ ಕರ್ನಾಟಕದ ಶಾಲಾಮಕ್ಕಳ ಮೇಲಿನ ಹೊರೆಯನ್ನು ಕಡಿಮೆ ಮಾಡಿದರೆ ರಾಜ್ಯಪಾಲರ ಗಂಟೇನು ಹೋಗುತ್ತದೆ? ಸರ್ಕಾರ ತನ್ನ ನೀತಿಯನ್ನ��� ಪುನರ್ ಪರಿಶೀಲಿಸಲಿ ಎಂದು ಅವರು ಯಾಕೆ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಪತ್ರ ಬರೆಯುತ್ತಾರೆ? ಇದೇ ಕಾಳಜಿಯನ್ನು ಅವರು ತಮ್ಮ ತವರು ರಾಜ್ಯ ಮಧ್ಯಪ್ರದೇಶದ ಮಕ್ಕಳ ಮೇಲೆ ಏಕೆ ತೋರುವುದಿಲ್ಲ. ಅವರು ಅಲ್ಲಿಯೂ ಮಕ್ಕಳಿಗೆ ಮೂರನೇ ಭಾಷೆಯನ್ನು ಅಂಕಗಳಿಗೆ ಕಡ್ಡಾಯ ಮಾಡಬೇಕಲ್ಲವೇ? ಅಲ್ಲಿ ಕನ್ನಡವನ್ನು ಕಡ್ಡಾಯವಾಗಿ ಕಲಿಸಲಿ ನೋಡೋಣ.
ನಾವು ಹಿಂದೆ ಬ್ರಿಟಿಷ್ ಸಾಮ್ರಾಜ್ಯಶಾಹಿಯ ಅಡಿಯಾಳಾಗಿದ್ದೆವು. ಈಗ ಹಿಂದಿ ಸಾಮ್ರಾಜ್ಯಶಾಹಿಯ ಗುಲಾಮರನ್ನಾಗಿಸಲು ಯತ್ನಿಸಲ���ಗುತ್ತಿದೆ. ಈಗ ಕರ್ನಾಟಕ ಎಚ್ಚೆತ್ತುಕೊಂಡಿದೆ. ಇನ್ನು ಈ ಷಡ್ಯಂತ್ರಗಳಿಗೆ ನಾವು ಬಲಿಯಾಗುವುದಿಲ್ಲ.
ಕನ್ನಡ ವಿರೋಧಿ ಧೋರಣೆ ತಳೆದಿರುವ ತಾವರ್ ಚಂದ್ ಗೆಹ್ಲೋಟ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗಲಿ, ಅಥವಾ ಅವರನ್ನು ನೇಮಿಸಿರುವ ಕೇಂದ್ರ ಸರ್ಕಾರ ಅವರನ್ನು ಹಿಂದಕ್ಕೆ ಕರೆಯಿಸಿಕೊಳ್ಳಲಿ. ಕರ್ನಾಟಕದಲ್ಲಿ ಕನ್ನಡದ್ರೋಹಿಗಳಿಗೆ ಯಾವುದೇ ಜಾಗವಿಲ್ಲ.
- ಟಿ.ಎ.ನಾರಾಯಣಗೌಡ
#GoBackGoverner
ಸರ್ಕಾರಿ ಶಾಲೆಗಳು ರಿಯಲ್ ಎಸ್ಟೇಟ್ ದಂಧೆಯಲ್ಲ, ವಿದ್ಯಾರ್ಥಿಗಳು ಗ್ರಾಹಕರಲ್ಲ. ಹಳ್ಳಿಯ ಒಂದು ಶಾಲೆ, ಅಲ್ಲಿನ ಸಮಾಜವನ್ನು, ನಾಡಿನ ಭವಿಷ್ಯವನ್ನು ರೂಪಿಸುವ ಕೇಂದ್ರ, ಪ್ರತಿ ಹಳ್ಳಿಯಲ್ಲೂ ಒಂದು ಸರ್ಕಾರಿ ಪ್ರಾಥಮಿಕ ಶಾಲೆ ನಡೆಸಲು ಆಗದವರು, ರಾಜ್ಯವನ್ನು ಇನ್ಯಾವ ರೀತಿ ನಡೆಸುತ್ತಾರೆ? ಹಿಂದಿ ಹೈಕಮಾಂಡ್ ಪಕ್ಷಗಳಿಗೆ ಕನ್ನಡ, ಕನ್ನಡಿಗ, ಕರ್ನಾಟಕದ ಭವಿಷ್ಯದ ಚಿಂತೆ ಇಲ್ಲ. ಶಿಕ್ಷಣವನ್ನು ಖಾಸಗಿ ಕಂಪೆನಿಯ ಲಾಭ-ನಷ್ಟದ ಆಯವ್ಯಯ ಪಟ್ಟಿಯಂತೆ ನಡೆಸಲಾಗದು.
#ನಮ್ಮಹಳ್ಳಿ_ನಮ್ಮಶಾಲೆ
#ನಮ್ಮನಾಡು_ನಮ್ಮಆಳ್ವಿಕೆ
ಮುಂಬೈ, ಪುಣೆ, ಕೋಲಾಪುರ, ಹೈದ���ಾಬಾದ್ ಗೆ ಹೋಟೆಲ್, ಬೇಕರಿ, ಇನ್ನಿತರ ಉದ್ದಿಮೆ ನಡೆಸಲು, ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡಲು ಹೋಗಿ ಯಶಸ್ಸಾದ ಹೆಚ್ಚಿನ ಸಂಖ್ಯೆಯ ಕನ್ನಡಿಗರು ಹುಟ್ಟಿದ್ದು 40-70 ರ ದಶಕದಲ್ಲಿ.
ಅವರ ಶಾಲಾ ದಿನಗಳಲ್ಲಿ ಕರ್ನಾಟಕದಲ್ಲಿ ಹಿಂದಿ ಕಡ್ಡಾಯವಾಗಿರಲಿಲ್ಲ. ಕಡ್ಡಾಯವಾಗಿದ್ದು 80 ರ ಕೊನೆಗೆ.
ಹಾಗಾಗಿ ವಲಸೆ ಹೋಗಲು, ಜೀವನ ಸಾಗಿಸಲು, ಯಶಸ್ಸು ಕಾಣಲು ಶಾಲೆಯಲ್ಲೇ ಹಿಂದಿ ಕಲಿಯಬೇಕು ಎನ್ನುವ ವಾದದಲ್ಲಿ ಹುರುಳಿಲ್ಲ.
ಇನ್ನೊಂದು ಮಾತು. ತಮಿಳುನಾಡಿನ ಕಾರ್ಖಾನೆಗಳಲ್ಲಿ ಲಕ್ಷಾಂತರ ಉತ್ತರ ಭಾರತದವರು ಇದ್ದಾರೆ. ಬರೋವಾಗ ತಮಿಳು ಗೊತ್ತಿರೋದಿಲ್ಲ, ಕರೆಯುವಾಗ ಕೂಡ ಹಿಂದಿ ಗೊತ್ತಿರೋದಿಲ್ಲ!
ಬದುಕು ಅನಿವಾರ್ಯವಾದಾಗ ಎಲ್ಲವನ್ನೂ ಕಲಿಸುತ್ತದೆ.
ಒತ್ತಾಯ ಪೂರ್ವಕವಾಗಿ ಕಲಿಸುವುದು ಕುತಂತ್ರ. ಅಷ್ಟೇ.
ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಮೇಲಿನ ಪರೀಕ್ಷಾ ಒತ್ತಡವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ಇನ್ನು ಮುಂದೆ ಎಸ್ಎಸ್ಎಲ್ಸಿಯಲ್ಲಿ ತೃತೀಯ ಭಾಷೆಗೆ 'ಪಾಸ್-ಫೇಲ್' ಪದ್ಧತಿಯನ್ನು ರದ್ದುಗೊಳಿಸಿ, ಕೇವಲ 'ಗ್ರೇಡಿಂಗ್' ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ.
ಹಿಂದಿ, ಸಂಸ್ಕೃತ, ತುಳು, ಮರಾಠಿ, ಅರೇಬಿಕ್ ಸೇರಿದಂತೆ ಪಠ್ಯಕ್ರಮದಲ್ಲಿರುವ ಎಲ್ಲಾ ತೃತೀಯ ಭಾಷೆಗಳಿಗೂ ಈ ನೂತನ ನಿಯಮ ಅನ್ವಯವಾಗಲಿದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ನಮ್ಮ ಇಲಾಖೆ ಸದಾ ಬದ್ಧ.
ಗುಣಮಟ್ಟದ ಶಿಕ್ಷಣ ಮತ್ತು ಒತ್ತಡ ರಹಿತ ಪರೀಕ್ಷೆಯೇ ನಮ್ಮ ಗುರಿ.
#MadhuBangarappa #EducationMinister #SSLCExams #KarnatakaEducation #StudentFriendly #EducationReform #KarnatakaGovernment #EducationUpdate #SSLC2024 #ಮಧುಬಂಗಾರಪ್ಪ #ಕರ್ನಾಟಕಶಿಕ್ಷಣ
@karashiva2076@Kannadiga_Kunal ನಮಗೂ ಇಂಗ್ಲಿಷ್ ಕಲಿಯಲೇ ಬೇಕೆಂಬ ಮೋಹವಿಲ್ಲ. ಆದರೂ ಎಲ್ಲ ದೇಶಗಳ Passport ಗಳಲ್ಲಿ, markscard ಗಳಲ್ಲಿ, email ಐಡಿ ಗಳಲ್ಲಿ, default technical ಭಾಷೆಯಾಗಿರುವುದರಿಂದ ಕಲಿಯುತ್ತೇವೆ ಅಷ್ಟೇ.
ಹಿಂದಿ ರಾಜ್ಯಗಳಲ್ಲಿ ಯಾಕೆ ಇಂಗ್ಲಿಷ್ ಕಲಿಯುತ್ತಾರೋ ನಾವು ಅದಕ್ಕೆ ಇಂಗ್ಲಿಷ್ ಕಲಿಯುತ್ತೇವೆ.
ಕನ್ನಡ/ ಕರ್ನಾಟಕದ ಸಮಸ್ಯೆಗಳನ್ನು ಮುನ್ನೆಲೆಗೆ ತರುವುದು ಎಷ್ಟು ಮುಖ್ಯವೋ, ಅದಕ್ಕಿಂತ ಹತ್ತು ಪಟ್ಟು ಮುಖ್ಯವಾದುದು ನಮ್ಮ ಕೈಲಾದ ಮಟ್ಟಿಗೆ ಸಮಸ್ಯೆಯನ್���ು ಬಗೆಹರಿಸುವತ್ತ ಕೆಲಸ ಮಾಡುವುದು.
ಈ ಯುವಕನ ಹೆಸರು ಆದರ್ಶ್. ಊರು ಮಂಡ್ಯ. ಸಾಫ್ಟವೇರ್ ವೃತ್ತಿಯಲ್ಲಿ ಕೆಲಸ, ಕನ್ನಡ ಮತ್ತು ಕರ್ನಾಟಕದ ಕುರಿತು ಅಪಾರ ಕಾಳಜಿ, ಜೊತೆಗೆ ನಮಗಿರುವ ಸಮಸ್ಯೆಗಳ ಕುರಿತು ಕಳವಳ.
ಕೆಲಸದಿಂದ ಮಾತ್ರ ನಿಜ ಬದಲಾವಣೆ ಸಾಧ್ಯ ಎಂದು ನಂಬಿ, ನೆರೆಯ ಕನ್ನಡದ ಮಕ್ಕಳನ್ನು ಗಣಿತ, ಇಂಗ್ಲಿಷ್ ಮತ್ತು ವಿಜ್ಞಾನ ವಿಷಯದಲ್ಲಿ ಗಟ್ಟಿ ಮಾಡಬೇಕೆಂದು ಕೈಗೆತ್ತಿಗೊಂಡ ಕೆಲಸ- ಪ್ರತಿ ಶನಿವಾರ ಮಕ್ಕಳಿಗೆ ವಿಷಯಾಧಾರಿತವಾಗಿ ಮನೆ ಪಾಠ.
ಕನ್ನಡ/ ಕರ್ನಾಟಕದ ವಿಚಾರವ��ಗಿ ನಾವೆಲ್ಲರೂ ಮಾತನಾಡುತ್ತಾ ಏನಾದರೊಂದು ಬದಲಾವಣೆಯ ಕೆಲಸಕ್ಕೆ ತೊಡಗಿಕೊಳ್ಳಬೇಕೆನ್ನುವುದಕ್ಕೆ ನಿಜವಾಗಿಯೂ ಈ ಹುಡುಗ ಸ್ಫೂರ್ತಿ. @Aanaakem
https://t.co/Mmv5DR0kc8
ಕಣ್ವರ ಮಕ್ಕಳಿಗೆ ನ್ಯಾಯ ಕೊಡಿಸುವ ಚರ್ಚೆ, ಉದ್ದೇಶ ಸರಿ ಇದೆಯಾದರೂ, ಆ ಮಕ್ಕಳ ಮೂಲ ಕರ್ನಾಟಕದ್ದಾಗಿರಬೇಕು.
@siddaramaiah@INCKarnataka
ಒಂದು ವೇಳೆ ಡಾಮಿಸೈಲ್ ನಿಯಮವನ್ನು ಅಳವಡಿಸದಿದ್ದರೆ ಹೇಗೆ ಯಡಿಯೂರಪ್ಪ ಸರ್ಕಾರ ತಂದ ಭೂ ಸುಧಾರಣೆ ಕಾನೂನಿನಿಂದ ರಾಜ್ಯದ ಸಾವಿರಾರು ಹೇಕ್ಟರ್ ಜಮೀನು ಬೇರೆ ರಾಜ್ಯದವರ ಪಾಲಾಯಿತು/ ಪಾಲಾಗುತ್ತಿದೆ, ಹಾಗೆಯೇ ರಾಜ್ಯದ ಎಲ್ಲ ಸರ್ಕಾರಿ ನೌಕರ��ಗಳು ಕೂಡ ಹೊರ ರಾಜ್ಯದವರ ಪಾಲಾಗುವುದು ನಿಶ್ಚಿತ.
ಒಮ್ಮೆ ಅವರು ನುಸುಳಿದ ಮೇಲೆ ಅಲ್ಲಿನ ಎಲ್ಲ ನಿಯಂತ್ರಣ, ವ್ಯವಹಾರಗಳು ಕೂಡ ಕ್ರಮೇಣ ಅವರ ರಾಜ್ಯದವರದ್ದಾಗುತ್ತದೆ ಎನ್ನುವ ಸತ್ಯ ನಮಗೆಲ್ಲರಿಗೂ ತಿಳಿದೇ ಇದೆ.
ಮೂರು ಲಕ್ಷ ಹೊರಗುತ್ತಿಗೆ ನೌಕರರಲ್ಲಿ ಅದಾಗಲೇ ಬಹುಪಾಲು ನೌಕರರು ಬೇರೆ ರಾಜ್ಯದವರಿದ್ದಾರೆ. ಅವರಲ್ಲಿ ಕರ್ನಾಟಕ ಮೂಲದವರನ್ನು ಮಾತ್ರ ಖಾಯಂ ಮಾಡುವ ಅಥವಾ ಭದ್ರತೆ ಕೊಡುವ ಕಾನೂನು ಬರಬೇಕಿದೆ.
ಎಲ್ಲರಿಗೂ ಕೊಟ್ಟರೆ ದುರಂತ ಕಾದಿಟ್ಟ ಬುತ್ತಿ.
ಪುಲಿಕೇಶಿ ಜಯಂತಿಯ ಸಮಯದಲ್ಲಿ ಒಂದು ನೆನಪು:
2006 ರ ಸಮಯವದು. ತಮಿಳಿನ ಚಿತ್ರವೊಂದು ತೆರೆಕಾಣಲು ಸಿದ್ಧವಿತ್ತು. ಚಿತ್ರದ ಹೆಸರು ಇಂಸೈ ಅರಸನ್ 23ಆನ್ ಪುಲಿಕೇಶಿ ಅಂತ. ಹೆಸರಲ್ಲೇ ಕ್ರೌರ್ಯ ತೋರುವ ದೊರೆ ಅನ್ನುವಂತಿತ್ತು.
ಚಿತ್ರದ ಪೋಸ್ಟರ್ ನೋಡಿದರೆ ಕಾಮಿಡಿ ಚಿತ್ರದಂತಿತ್ತು ಮತ್ತು ಮುಖ್ಯ ಪಾತ್ರಧಾರಿ ವಡಿವೇಲು ಅವರಿಗೆ ಪುಲಿಕೇಶಿ ಅನ್ನುವ ಹೆಸರನ್ನಿಟ್ಟು ಹಾಸ್ಯಪಾದವಾಗಿ ತೋರಿಸಿದ್ದರು.
@ganeshchetan ನಾಯಕತ್ವದಲ್ಲಿ @ajavgal@raghabh ನಾನು ಮತ್ತೊಂದಷ್ಟು ಜನ ಕರ್ನಾಟಕ ರಕ್ಷಣಾ ವೇದಿಕೆ ಕಚೇರಿಗೆ ಹೋಗಿ ನಾರಾಯಣಗೌಡರನ್ನು ಭೇಟಿ ಮಾಡಿ ನಮ್ಮ ಧೀಮಂತ ದೊರೆಗೆ ಅವಮಾನ ಮಾಡಿರುವಂತೆ ತೋರುತ್ತಿದೆ, ಈ ಚಿತ್ರವನ್ನು ಪ್ರದರ್ಶನ ಮಾಡುವುದು ಸೂಕ್ತವಲ್ಲ ಅಂತ ಹೇಳಿದೆವು. ಚಿತ್ರದ ವಿತರಕರ ಜೊತೆ ಗೌಡರು ಮಾತನಾಡಿ ಒಂದು ���ಿಶೇಷ ಪ್ರದರ್ಶನ ಆಯೋಜಿಸಿದ್ದರು. ಕೆಲವು ಗೆಳೆಯರ ಕುಟುಂಬದವರು ತಮಿಳುನಾಡಿನಲ್ಲಿ ಬೆಳೆದವವರಿದ್ದರು, ಸಂಭಾಷಣೆ ಚೆನ್ನಾಗಿ ಅರ್ಥ ಆಗಬೇಕೆಂದು ಅವರನ್ನು ಕರೆದುಕೊಂಡು ಚಿತ್ರ ನೋಡಿದೆವು. ಒಂದಷ್ಟು ಕಡೆ ನಮ್ಮ ಹೆಮ್ಮೆಯ ಪುಲಿಕೇಶಿ ರಾಜನನ್ನು ಅವಮಾನಿಸುವಂತ ಸನ್ನಿವೇಶಗಳು ಮತ್ತು ಸಂಭಾಷಣೆ ಇತ್ತು. ಕೊನೆಗೆ ವಿತರಕರು ಈ ಚಿತ್ರ ಕನ್ನಡಿಗರ ಮನಸ್ಸಿಗೆ ನೋವುಂಟುಮಾಡುವುದರಿಂದ ಇದನ್ನು ಪ್ರದರ್ಶನ ಮಾಡುವುದಿಲ್ಲ ಅಂತ ಹೇಳಿದರು, ನಿರ್ಮಾಪಕರಿಗೂ ಈ ವಿಷಯ ತಿಳಿಸಿದರು.
ನಾನು ಆ ವರ್ಷವಷ್ಟೇ ಕನ್ನಡ ಚಳುವಳಿಗೆ ��ಾಲಿಟ್ಟಿದ್ದೆ. ಇದೊಂದು ಮರೆಯದ ಅನುಭವ.
ಕನ್ನಡ ಕನ್ನಡಿಗ ಕರ್ನಾಟಕದ ವಿಚಾರದಲ್ಲಿ ಬದ್ಧತೆ ಬದಲಾಗುವ ಪ್ರಶ್ನೆಯೇ ಇಲ್ಲ. ಅಂದು ಇಂದು ಎಂದೆಂದೂ.
ಕರ್ನಾಟಕವೂ ಸೇರಿದಂತೆ ಈವರೆಗೆ ಒಟ್ಟು ೧೨ ರಾಜ್ಯಗಳಲ್ಲಿ ಕನ್ನಡದ ಶಾಸನಗಳು ದೊರೆತಿವೆ
ಕರ್ನಾಟಕ
ತಮಿಳುನಾಡು
ಕೇರಳ
ಆಂಧ್ರ
ತೆಲಂಗಾಣ
ಮಹಾರಾಷ್ಟ್ರ
ಗೋವಾ
ಮಧ್ಯಪ್ರದೇಶ
ಉತ್ತರಪ್ರದೇಶ
ಗುಜರಾತ್
ಬಿಹಾರ
ರಾಜಸ್ಥಾನ
#ಶಾಸನ#ಕಲ್ಬರಹ
ಕನ್ನಡ ನಾಡಿನ ಗುರುತುಗಳಾದ ಹಳದಿ ಮತ���ತು ಕೆಂಪು ಬಣ್ಣದ ಕಟ್ಟಡಗಳನ್ನು ಮಾಡುವುದು ಸೂಕ್ತ ಅಲ್ಲವೇ? @siddaramaiah @DKShivakumar ಜಿಬಿಎ ನಲ್ಲಿ ಕನ್ನಡನಾಡಿನ ನದಿಗಳು , ರಾಜವಂಶಗಳ ಹೆಸರಿನ ಹೆಗ್ಗುರುತುಗಳು ರಾರಾಜಿಸುವಂತಾದರೆ ಒಳ್ಳೆಯದು.
@kodlady ಭಾರತ ಸ್ವಾತಂತ್ರ್ಯ ಚಳುವಳಿಯನ್ನು ಕಲಿತ ಕನ್ನಡಿಗರು ಅದರ ಕಾಲು ಭಾಗದಷ್ಟೂ ಕರ್ನಾಟಕ ಏಕೀಕರಣದ ಬಗ್ಗೆ ಕಲಿಯಲಿಲ್ಲ!
ಇಂದು ಅಧಿಕಾರ ದಾಹದ ರಣಹದ್ದುಗಳು ಕನ್ನಡ ನಾಡನ್ನು ಹರಿದು ತಿನ್ನಲು ಹೊಂಚು ಹಾಕುತ್ತಿವೆ.
ಒಬ್ಬ ಪ್ರಧಾನಿ ಮುಂದೆ ೫೦ ಮುಖ್ಯ ಮಂತ್ರಿಗಳು ಕೈಕಟ್ಟಿ ತಲೆಬಗ್ಗಿ ನಿಲ್ಲುವಂಥ ಪರಿಸ್ತಿತಿ ಮುಂದೆ ಬರುತ್ತಿದೆ.
#ಎಚ್ಚರಿಕೆ_ಕನ್ನಡಿಗ
@kodlady ಬಾಜೂಕಿನ ಜಿಲ್ಲೆಗಳವರೂ ಕೂಡ ಹುಬ್ಬಳ್ಳಿಗೆ ಟ್ರಾನ್ಸ್ಫರ್ ಇಷ್ಟ ಪಡಲಿಲ್ಲ. ಕೆಲವರು ಹೆಂಡ್ತಿ ಕೆಲಸ ಮಾಡೋ ��ಂಪನಿ ಬೆಂಗಳೂರು ಅಲ್ಲಿ ಇದೆ ಅಂದ್ರೆ... ಇನ್ನೂ ಕೆಲವರು ಮಕ್ಕಳ ಸ್ಕೂಲು ಗೆ ಬೆಟ್ಟು ಮಾಡಿದರು.
ಕಡೆಗೆ, ಇನ್ಫೋಸ���ಸ್, ಹುಬ್ಬಳ್ಳಿ ಇಂದ ಕೆಲಸ ಮಾಡುವವರಿಗೆ ವಿಶೇಷ ಭತ್ಯೆ ನೀಡುವ ಆಮಿಷ ತೋರಿಸಿ, ಕ್ಯಾಂಪಸ್ ತುಂಬಿಸಬೇಕಾಯಿತು.
@kodlady ಸುಮ್ಮನೆ ಎಲ್ಲರಿಗೂ ತಿಳಿಯಲಿ ಅಂತ ಒಂದು ವಿಷಯ...
ಇನ್ಫೋಸಿಸ್ ಹುಬ್ಬಳ್ಳಿಯಲ್ಲಿ ಹೊಸ ಕ್ಯಾಂಪಸ್ ಸ್ಥಾಪಿಸಿತು. ಆರಂಭವಾಗಿ ವರ್ಷ ಕಳ��ದರೂ ಕ್ಯಾಂಪಸ್ ಗೆ ನೌಕರರ ತುಂಬಲು ತ್ರಾಸವಾಯಿತು. ಹುಬ್ಬಳ್ಳಿ ನಗರದ ನಿವಾಸಿಗಳು ಒಂದಷ್ಟು ಮಂದಿ ಟ್ರಾನ್ಸ್ಫರ್ ತೆಗೆದುಕೊಂಡು ಹುಬ್ಬಳ್ಳಿ ಕ್ಯಾಂಪಸ್ ಗೆ ಬಂದರು; ಅಷ್ಟೇ. ಬಾಜೂಕಿನ ಜಿಲ್ಲೆಗಳವರೂ ಕೂಡ... ೧/n)