ಈ ಕಾರ್ಯಕ್ರಮದಲ್ಲಿ ಶ್ರೀ ಸುನಿಲ್ ಎಸ್ ಹೊಸಮನಿ, ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು, ಶ್ರೀ ಅಕ್ರಂ ಪಾಷ, ಮಾನ್ಯ ಜಿಲ್ಲಾಧಿಕಾರಿಗಳು, ಶ್ರೀ ಸಂತೋಷ ಹಿಪ್ಪರಗಿ, ಸಹಾಯಕ ಕಾರ್ಮಿಕ ಆಯುಕ್ತರು, ಶ್ರೀಮತಿ ವರಲಕ್ಷ್ಮಿ, ಕಾರ್ಮಿಕ ಅಧಿಕಾರಿ, ಕಾರ್ಖಾನೆ & ಬಾಯ್ಲರ್ ಅಧಿಕಾರಿಗಳು,ಕಾರ್ಮಿಕ ನಿರೀಕ್ಷಕರುಗಳು & ಸಿಬ್ಬಂದಿಗಳು ಹಾಜರಿದ್ದರು.
ದಿನಾಂಕ: 05-08-2024ರಂದು ಕೋಲಾರ ಜಿಲ್ಲಾಡಳಿತ ಸಭಾಂಗಣದಲ್ಲಿ ಉದ್ಯೋಗದಾತರು, ಸಂಘಟಿತ ಮತ್ತು ಅಸಂಘಟಿತ ವಲಯದ ಕಾರ್ಮಿಕರು ಹಾಗೂ ಕಾರ್ಮಿಕ ಸಂಘಗಳ ಪದಾಧಿಕಾರಿಗಳಿಗೆ ಕಾರ್ಮಿಕ ಇಲಾಖೆ ವತಿಯಿಂದ ಅನುಷ್ಠಾನಗೊಳಿಸಿರುವ ಹೊಸ ಯೋಜನೆಗಳು ಹಾಗೂ ವಿವಿಧ ಕಾರ್ಮಿಕ ಕಾನೂನುಗಳ ಬಗ್ಗೆ ಅರಿವು ಮೂಡಿಸಲಾಯಿತು.
ನಮ್ಮ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡಿನ ಕಡಲ ತೀರವು ಪ್ರತಿಷ್ಠಿತ " ಬ್ಲೂ ಪ್ಲಾಗ್ " ಅಂತರರಾಷ್ಟ್ರೀಯ ಪರಿಸರ ಸಂರಕ್ಷಣೆ ಲೇಬಲ್ ಪ್ರಶಸ್ತಿಗೆ ಶಿಫಾರಸುಗೊಂಡಿದೆ. ವಿಶ್ವ ಅತ್ಯಂತ ಸ್ವಚ್ಛ ಕಡಲ ತೀರಗಳ ಸಾಲಿಗೆ ನಮ್ಮ ಜಿಲ್ಲೆಯ ಬೀಚ್ ಸಹ ಸೇರಿರುವುದು ನಮ್ಮೆಲ್ಲರಿಗೂ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ.
ಇಂದು ಕಾರವಾರದ ಪೋಲಿಸ್ ಪರೇಡ್ ಮೈದಾನದಲ್ಲಿ 74 ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ, ಜಿಲ್ಲೆಯ ಜನತೆಯನ್ನು ಉದ್ದೇಶಿಸಿ ಭಾಷಣ ಮಾಡಲಾಯಿತು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಜಿಲ್ಲೆಯ ಹೆಮ್ಮೆಯ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಭಾಷೆ ಕಾರಣಕ್ಕೆ @arivalayam ಸಂಸದೆ @KanimozhiDMK ಅವರನ್ನು ‘ನೀವು ಭಾರತೀಯರೇ?’ ಎಂದು ಪ್ರಶ್ನಿಸಿದ ಘಟನೆ ನಡೆದಿದೆ. ಸೋದರಿ ಕನಿಮೋಳಿಗೆ ಆದ ಅಪಮಾನದ ವಿರುದ್ಧ ನನ್ನದೂ ಧ್ವನಿ ಇದೆ. ಇದೇ ಹೊತ್ತಲ್ಲೇ, ಹಿಂದಿ ವ್ಯಾಮೋಹ, ಹಿಂದಿ ರಾಜಕಾರಣ, ಹಿಂದಿ ಶ್ರೇಷ್ಠತೆ ವ್ಯಸನ ದಕ್ಷಿಣ ಭಾರತದ ನಾಯಕರ, ಜನರ ಅವಕಾಶಗಳನ್ನು ಕಸಿದ ವಿಚಾರ ಚರ್ಚಾರ್ಹ.
1/7
ಕೋವಿಡ್ ಸಹಾಯಧನದ 5000 ರೂಪಾಯಿ ಪಡೆಯುವ ಕ್ಷೌರಿಕ/ ಅಗಸ ವೃತ್ತಿ ನಿರ್ವಹಿಸುವ ಕಾರ್ಮಿಕರಿಗೆ ಅರ್ಜಿ ಸಲ್ಲಿಸುವುದಕ್ಕೆ ಮತ್ತೊಂದು ಅವಕಾಶ ಕಲ್ಪಿಸಲಾಗಿದೆ.
ತಾಂತ್ರಿಕ ಕಾರಣದಿಂದ ರಾಜ್ಯದ ಹಲವಾರು ಕ್ಷೌರಿಕ/ಅಗಸ ವೃತ್ತಿ ನಿರ್ವಹಿಸುತ್ತಿರುವ ಕಾರ್ಮಿಕರು ಅರ್ಜಿ ಸಲ್ಲಿಸುವುದಕ್ಕೆ ಅಸಾಧ್ಯವಾದ ಕಾರಣ ಯಾರು ಸಹ ಅರ್ಜಿ ಸಲ್ಲಿಸಲಾಗದೆ
ಇಂದು ಹಾಸನದ ಜಿಲ್ಲಾಧಿಕಾರಿ ಕಛೇರಿಯಲ್ಲಿ ಕ್ವೌರಿಕರಿಗೆ ಹಾಗೂ ಅಗಸರಿಗೆ ನೀಡಲಾಗುತ್ತಿರುವ ಸಹಾಯಧನದ ಕುರಿತು ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಶಾಸಕರಾದ ಶ್ರೀ @nimmapreetham ಜಿಲ್ಲಾಧಿಕಾರಿ, ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಇಂದು ಚಿಕ್ಕಬಳ್ಳಾಪುರದ ಜಿಲ್ಲಾಧಿಕಾರಿ ಕಛೇರಿಯಲ್ಲಿ ಕ್ವೌರಿಕ ಹಾಗೂ ಅಗಸರಿಗೆ ನೀಡಲಾಗುತ್ತಿರುವ ಸಹಾಯಧನದ ಕುರಿತು ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿ, ಕಾರ್ಮಿಕ ಇಲಾಖೆಯಿಂದ ಜಿಲ್ಲೆಯ ಅರ್ಹ ಫಲಾನುಭವಿಗಳಿಗೆ ಚಕ್ ಹಾಗೂ ಬಾಂಡ್ ವಿತರಿಸಲಾಯಿತು.
ಇಂದು ಬೆಂಗಳೂರಿನ ಇಂದಿರಾ ನಗರದಲ್ಲಿರುವ ಕಾರ್ಮಿಕರ ರಾಜ್ಯದ ವಿಮಾ ಆಸ್ಪತ್ರೆಗೆ ( ESI ) ಭೇಟಿ ನೀಡಿ ಆಸ್ಪತ್ರೆಯ ಸೌಕರ್ಯಗಳ ಕುರಿತು ಪರಿಶೀಲನೆ ನಡೆಸಲಾಯಿತು.
ಆಸ್ಪತ್ರೆಯ ಅಭಿವೃದ್ಧಿಯ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿ, ಕೆಲಕಾಲ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳ ಯೋಗಕ್ಷೇಮವನ್ನು ವಿಚಾರಿಸಲಾಯಿತು.
ಕರ್ನಾಟಕ ರಾಜ್ಯ ಸರ್ಕಾರವು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಜಾರಿಗೆ ತಂದಿರುವ (ಆಶಾದೀಪ ಯೋಜನೆ) ಪ್ರಮುಖ ಉದ್ದೇಶ ಇದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಕಾರ್ಮಿಕ ಸಹಾಯ
WhatsApp no: 93333 33684
Phone: 080-29759983/8883 @Karmika_Sahaya@GuruprasadHl2@LabourDeptGOK
ಕರ್ನಾಟಕ ರಾಜ್ಯ ಸರ್ಕಾರವು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರೆಗೆ ಜಾರಿಗೆ ತಂದಿರುವ (ಆಶಾದೀಪ ಯೋಜನೆ) ಪ್ರಮುಖ ಉದ್ದೇಶ ಇದಾಗಿದೆ.
ಹೆಚ್ಚನ ಮಾಹಿತಿಗಾಗಿ ಸಂಪರ್ಕಿಸಿ:
ಕಾರ್ಮಿಕ ಸಹಾಯ
WhatsApp no: 93333 33684
Phone: 080-29759983/8883 @Karmika_Sahaya@GuruprasadHl2@LabourDeptGOK @Shobana_88
" ರೈತರ ಹಾಗೂ ಕಾರ್ಮಿಕರ ಹಿತ ಕಾಪಾಡಲು ಸರಕಾರ ಸದಾ ಸಿದ್ದ "
ಬುಧವಾರ ಮಂಡ್ಯ ಜಿಲ್ಲೆಯ ಮೈ ಶುಗರ್ ಸಕ್ಕರೆ ಕಾರ್ಖಾನೆಗೆ ಭೇಟಿ ನೀಡಿ ಕಾರ್ಖಾನೆ ಪರಿಶೀಲನೆ ನಡೆಸಿ, ಸ್ಥಳೀಯ ರೈತರೊಂದಿಗೆ ಚರ್ಚಿಸಿದ ಕುರಿತು ಚಂದನ ದೃಶ್ಯ ಮಾದ್ಯಮದಲ್ಲಿ ಬಿತ್ತರವಾದ ವರದಿ.
@BSYBJP@blsanthosh@sumalathaA@KarnatakaVarthe#MySugarFactory
Shri @Jishnu_Devvarma , Deputy Chief Minister of Tripura, has penned a letter of appreciation to our labour department and @BSYBJP led state government for taking care of all labourers from different states.
" ನಮಿಸುವ ಕೈಗಳಿಗಿಂತ, ದುಡಿಯುವ ಕೈಗಳು ಶ್ರೇಷ್ಠ "
ದೇಶದ ಅಭಿವೃದ್ಧಿಗಾಗಿ ಶ್ರಮವಹಿಸಿ ದುಡಿಯುತ್ತಿರುವ ಎಲ್ಲಾ ವರ್ಗದ ಶ್ರಮಜೀವಿಗಳಿಗೆ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಶುಭಾಶಯಗಳು.
ದೇಶದ ಅರ್ಥವ್ಯವಸ್ಥೆ ಉನ್ನತಿಯಡೆಗೆ ಕೊಂಡೊಯ್ಯುವುದಕ್ಕೆ ಹಗಲಿರುಳು ಶ್ರಮಿಸಿಸುತ್ತಿರುವ ಕಾರ್ಮಿಕರ ತ್ಯಾಗ, ಸೇವೆಯನ್ನು ಗೌರವಿಸೋಣ.
#ಶ್ರಮಮೇವಜಯತೇ
" ನಾಡಿನ ಸಮಸ್ತ ಜನತೆಗೆ ವಿಶ್ವಗುರು ಬಸವಣ್ಣನವರ ಜಯಂತಿಯ ಶುಭಾಶಯಗಳು "
12ನೆಯ ಶತಮಾನದಲ್ಲೇ ಸರ್ವೋದಯದ ಸಮಾಜದ ಕನಸು ಕಂಡು ಸಾಮಾಜಿಕ ಕ್ರಾಂತಿಯನ್ನು ಮೊಳಗಿಸಿ, ಇಡೀ ಜಗತ್ತಿಗೇ ಬೆಳಕಾದ ವಿಶ್ವ ಗುರು ಬಸವಣ್ಣನವರ ಜಯಂತಿಯ ಹಾರ್ದಿಕ ಶುಭಾಶಯಗಳು.
ಬಸವಣ್ಣನವರ ಸಮಾಜಕ್ಕೆ ನೀಡಿರುವ ವಚನಗಳ ಹಾಗೂ ತತ್ವಗಳ ಮೂಲಕವಾಗಿ ಪ್ರೇರಣೆ ಪಡೆಯೋಣ.
ಅಂಕೋಲಾ,ಕುಮಟಾ, ಹೊನ್ನಾವರ ಹಾಗೂ ಭಟ್ಕಳದಲ್ಲಿ ಕೊರೊನಾ ವೈರಸ್, ಮಂಗನಕಾಯಿಲೆ ಹಾಗೂ ಕುಡಿಯುವ ನೀರಿನ ಸಂಬಂಧಿಸಿದಂತೆ ನಡೆದ ಪ್ರಗತಿಪರಿಶೀಲನಾ ಸಭೆಯ ಕುರಿತು ಇಂದಿನ ಪತ್ರಿಕೆಗಳಲ್ಲಿ ಕಂಡಂತೆ.
⭕ ಕೃಷಿ, ಕಟ್ಟಡ ನಿರ್ಮಾಣ ಕಾಮಗಾರಿಗೆಳಿಗೆ ಅಡ್ಡಿಪಡಿಸುವಂತಿಲ್ಲ.
⭕ ಕೃಷಿ ಕಾರ್ಯ, ಮೀನುಗಾರಿಕೆ ಹಾಗೂ ಸಣ್ಣ ಉದ್ಯಮಗಳಿಗೆ ತೊಂದರೆ ನೀಡಬೇಡಿ.