ಇದು, ಮಂಜುಗಡ್ಡೆಯ ಮೇಲಿನ ತುದಿ ಅಶ್ಟೇ !
ನಮ್ಮನ್ನು ಕಾಪಾಡುವುದು ದುಡ್ಡು ಅಂತ ಉತ್ತರ ಪ್ರದೇಶದವರಿಗೆ ಗೊತ್ತು.
ಹಿಂದುತ್ವ ಸಿದ್ದಾಂತ ಏನಿದ್ದರೂ ಬೆಪ್ಪುತಕ್ಕಡಿ ಕನ್ನಡಿಗರಿಗೆ.
#ಹಿಂದುತ್ವ
@NammaBNP ನಿಮ್ಮ ರಾಜ್ಯ ಬಿಟ್ಟು ಇಲ್ಲಿ ಬದುಕಲು ಬಂದಿದ್ದೀರಿ, ಮಿತಿ ಮೀರಿ ಇಲ್ಲಿ ಒಂದು ವಾತಾವರಣ ಹಾಳು ಮಾಡಿ ಬೆಂಗಳೂರು ಗಾರ್ಬೇಜ್ ಸಿಟಿ ಮಾಡಿದ್ದೀರಾ, ನಿಮ್ಮಿಂದಲೇ ಇಷ್ಟು ಟ್ರಾಫಿಕ್ ಆಗಿದ್ದು ಉಸಿರಾಟದ ತೊಂದರೆಗಳು, ನಿಮ್ಮ ಊರಿಗೆ ಹೋಗಿ ಉದ್ದಾರ ಆಗಿ...
@PLEKarnataka@DKShivakumar ಕೆಆರ್ಎಸ್ ಪಕ್ಷ, ರೈತರು, ಜನಸಾಮಾನ್ಯರು ಇಷ್ಟೆಲ್ಲಾ ಪ್ರತಿಭಟನೆ ಮಾಡಿದರು ಸಹ ಇಷ್ಟು ಮಂಡು ಬೀಳುತ್ತಾರೆ ಎಂದರೆ ಜನ ಸರಿಯಾಗಿ ಬುದ್ಧಿ ಕಲಿಸುತ್ತಾರೆ ಮುಂದೆ, ಈ ನಾಡ ವಿರೋಧಿ ರಾಷ್ಟ್ರೀಯ ಪಕ್ಷಗಳನ್ನು ತೊಲಗಿಸುವುದು ಇರುವುದು ಒಂದೇ ಮಾರ್ಗ...
The greed of @DKShivakumar will destroy Karnataka. He will end up as one of the worst Chief Ministers of Karnataka.
@DKShivakumar your honeymoon period is over. Now resign and go home.
#KarnatakaAgainstDK
ಭಾರತೀಯ ನಾವಿಕರನ್ನು ಅಮೇರಿಕಾ ಹತ್ಯೆ ಮಾಡಿದಗಲು ಈ ದೇಶದ ಪ್ರಧಾನಿ ಸ್ಥಾನದಲ್ಲಿರುವ ವ್ಯಕ್ತಿ ಅಮೇರಿಕಾ ಕೃತ್ಯವನ್ನು ಖಂಡಿಸಲು ಬಾಯಿ ತೆರೆಯುವುದಿಲ್ಲ ಎಂದರೆ ಏನರ್ಥ...?
ಮೋದಿ ಯಾಕೆ ಅಮೇರಿಕಾಕ್ಕೆ ಭಯ ಪಡುತ್ತಾರೆ..?
ಕೆಆರ್ಎಸ್ ಪಕ್ಷದ ಪದಾಧಿಕಾರಿಗಳಿಗೆ ಕೆಆರ್ಎಸ್ ಪಕ್ಷದ ಗೌರವಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಅವರ ಮಾರ್ಗದರ್ಶನದಲ್ಲಿ 2 ದಿನದ ನಾಯಕತ್ವ ಶಿಬಿರಕ್ಕೆ ಚಾಲನೆ...
13.06.2026 https://t.co/R11QIi1ya3
ಒಂದು ಲಕ್ಷ ಸಹಿಯ ಅಭಿಯಾನ...
ಇಂದು ಮಂಡ್ಯ ಜಿಲ್ಲಾ ಯುವ ಘಟಕದ ವತಿಯಿಂದ ಶ್ರೀರಂಗಪಟ್ಟಣದಲ್ಲಿ ಸಹಿ ಸಂಗ್ರಹ ಅಭಿಯಾನ.
#ಸರ್ಕಾರಿ ಉದ್ಯೋಗ ಆಕಾಂಕ್ಷಿಗಳ ಜೀವನದ ಜೊತೆ ಆಟ ಆಡುತ್ತಿರುವ ಸರ್ಕಾರಕ್ಕೆ ಕೂಡಲೇ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸುವಂತೆ ಮತ್ತು ವಾರ್ಷಿಕ ನೇಮಕಾತಿ ಕ್ಯಾಲೆಂಡರ್ ಅನ್ನು ಪ್ರಕಟಿಸುವಂತೆ ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷದಿಂದ ಮತ್ತು ಉದ್ಯೋಗ ಆಕಾಂಕ್ಷಿಗಳಿಂದ ಒಂದು ಲಕ್ಷ ಸಹಿ ಸಂಗ್ರಹ ಹೋರಾಟ.
#pramodasyuvanetha
#KRS
#KarnatakaRashtraSamithi
#ಸರ್ಕಾರಿಉದ್ಯೋಗ
#ಉದ್ಯೋಗಆಕಾಂಕ್ಷಿಗಳು
#RecruitmentNow
#OneLakhSignatures
#ಉದ್ಯೋಗಹಕ್ಕು
#ಯುವಶಕ್ತಿ
#YouthVoice
#EmploymentForYouth
#JobAspirants
#KarnatakaYouth
#AnnualRecruitmentCalendar
#ನೇಮಕಾತಿಕ್ಯಾಲೆಂಡರ್
#ಉದ್ಯೋಗಕೊಡಿ
#ಸರ್ಕಾರಎಚ್ಚೆತ್ತುಕೊಳ್ಳಿ
#ಜನಆಂದೋಲನ
#KarnatakaStudents
#StudentsVoice
#ಶ್ರೀರಂಗಪಟ್ಟಣ
ಆದೇಶ ಬೇಲೂರು KRS ಪಕ್ಷದ ಬೇಲೂರು ತಾಲೂಕು ಅಧ್ಯಕ್ಷರಿಂದ ಸಮಸ್ಯೆ ಪರಿಹರಿಸಲಾಗಿದೆ...
ಬೇಲೂರಿನ ಹೊಸನಗರದ ನಿವಾಸಿಯಾದ ಮಧು ಅವರು ತಮ್ಮ ನಿವೇಶನ ಒತ್ತುವರಿಗೆ ಒಂದು ವರ್ಷದಿಂದ ಹೋರಾಡುತ್ತಿದ್ದು ಅದನ್ನು ಬಗೆಹರಿಸಲಾಗಿದೆ ಇದರ ಬಗ್ಗೆ ಅವರೇ ಸವಿಸ್ತಾರವಾಗಿ ಹೇಳಿದ್ದಾರೆ 🙏
13.06.2026
ನೆನ್ನೆ ತಟ್ಟೆಕೆರೆ ಕಣಿವೆಯ ಕಡಿದಾದ ಇಳಿಜಾರಿನಲ್ಲಿ ನಾನು ಸೈಕಲ್ನಿಂದ ಬಿದ್ದು ಆದ ಅಪಘಾತ ಮಾರಣಾಂತಿಕವಲ್ಲ. ಆದರೆ ದೈಹಿಕವಾಗಿ, ವೈಯಕ್ತಿಕವಾಗಿ, ಆರ್ಥಿಕವಾಗಿ ದುಬಾರಿಯಾದ ಅಪಘಾತ. ಮುಂದಿನ ಎರಡು ತಿಂಗಳ ಕಾಲ ನಾನು ಪ್ರವಾಸ ಮಾಡುವ ಸ್ಥಿತಿಯಲ್ಲಿ ಇಲ್ಲದೇ ಇರುವುದರಿಂದ ಪಕ್ಷದ ಚಟುವಟಿಕೆಗಳಲ್ಲಿ ನೇರವಾಗಿ ಪಾಲ್ಗೊಳ್ಳಲೂ ಆಗುವುದಿಲ್ಲ. ಒಟ್ಟಾರೆಯಾಗಿ ದುಬಾರಿ ಅಪಘಾತ. (ಈ ಕಣಿವೆ ದಾಟಿದರೆ ನಾವು ಈ ಯಾತ್ರೆಯನ್ನು ಜಯಿಸಿದಂತೆ ಎಂದು ನನಗೆ ಮೊದಲಿನಿಂದಲೂ ಅನ್ನಿಸುತ್ತಿತ್ತು. ಆದರೆ ನನ್ನ ಆತಂಕ ಈ ರೀತಿಯಲ್ಲಿ ಕೊನೆಯಾಗುತ್ತದೆ ಎಂದು ಎಣಿಸಿರಲಿಲ್ಲ.)
ನನ್ನ ಅನುಪಸ್ಥಿತಿಯಲ್ಲಿ ನೆನ್ನೆ ರಾತ್ರಿ ಸಭೆ ಸೇರಿದ್ದ Karnataka Rashtra Samithi ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿಯು ಸುದೀರ್ಘ ಚರ್ಚೆ ಮಾಡಿ #ಚಲಿಸುಕರ್ನಾಟಕ #KRSಸೈಕಲ್ಯಾತ್ರೆ'ಯನ್ನು ಐದನೇ ದಿನದಿಂದ ತಾತ್ಕಾಲಿಕವಾಗಿ ನಿಲ್ಲಿಸುವ ಮತ್ತು ಮುಂದೂಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ನೆನ್ನೆಗೆ ಈ ಸೈಕಲ್ ಯಾತ್ರೆಯು ನಾಲ್ಕು ದಿನ ಪೂರೈಸಿ 235 ಕಿಲೋಮೀಟರ್ ದೂರ ಕ್ರಮಿಸಿ ಹಾರೋಹಳ್ಳಿ ಮುಟ್ಟಿತು. ಅಪಘಾತವಾದಾಗ ನಾನು 215 ಕಿಲೋಮೀಟರ್ ಕ್ರಮಿಸಿದ್ದೆ. ನನ್ನ ಕಾರಣಕ್ಕಾಗಿ ಯಾತ್ರೆ ನಿಲ್ಲುವ ಪರಿಸ್ಥಿತಿ ಬಂದಿದ್ದು ನನಗೆ ಅಪಾರ ನೋವು ಉಂಟು ಮಾಡಿದೆ.
ನೆನ್ನೆ ಆಸ್ಪತ್ರೆ ಸೇರಿದ ಆರಂಭದಲ್ಲಿ ಅಪಘಾತದ ತೀವ್ರತೆ ಸೇರಿದಂತೆ ಕೆಲವು ವಿಚಾರಗಳು ಗೊತ್ತಾಗಿರಲಿಲ್ಲ. ಬಲಭುಜದ ಮೂಳೆ ಮುರಿದಿರುವುದರಿಂದ ಬಲಗೈ ಬಹುತೇಕ ನಿಷ್ಕ್ರಿಯ. ಬಲಭಾಗದ ದೇಹ ಅಲ್ಲಾಡಿಸಿದರೆ ವಿಪರೀತ ನೋವು. ಮುರಿದ ಮೂಳೆ ಕಟಕ್ ಕಟಕ್ ಎನ್ನುತ್ತದೆ. ಸರ್ಜರಿ ಮಾಡುವ ತನಕ ಇದೇ ಸಮಸ್ಯೆ. ಆದರೆ ಕೋವಿಡ್-19 ಪರೀಕ್ಷೆಯ ಫಲಿತಾಂಶ ಬರುವ ತನಕ ಸರ್ಜರಿ ಎಂದು ಆಗುತ್ತದೆ ಎನ್ನುವ ಬಗ್ಗೆ ಖಚಿತತೆ ಇಲ್ಲ. ಮೊದಲ ದಿನ ಜಿಟಿಜಿಟಿ ಮಳೆಯಲ್ಲಿ ನೆಂದ ಕಾರಣ ಸ್ವಲ್ಪ ನೆಗಡಿ ಆಗಿತ್ತು. ಇಂದು ಸಂಜೆಗೆ ಫಲಿತಾಂಶ ಬರುತ್ತದೆ.
ಹಿಪ್ ಜಾಯಿಂಟ್ಗೂ ಏಟು ಬಿದ್ದಿರುವದರಿಂದ ಎದ್ದು ಕೂರುವುದು ಕಷ್ಟವಾಗಿದೆ. ನೆನ್ನೆ ಸಂಜೆ ನಡೆದು ಬಾತ್ರೂಮ್ಗೆ ಹೋಗುವ ಸ್ಥಿತಿಯೂ ಕಷ್ಟವಾಗಿತ್ತು. ನನ್ನ ದೇಹ ಈ ಮಟ್ಟದ ಏಟನ್ನು ಈ ಹಿಂದೆ ತಿಂದಿರಲಿಲ್ಲ.
ಈ ಎಲ್ಲಾ ಅನಿಶ್ಚಿತತೆ ಮತ್ತು ಸಮಸ್ಯೆಗಳ ನಡುವೆ ಪಕ್ಷದ ಚಟವಟಿಕೆಗಳು ಮುಂದುವರೆಯಬೇಕಾಗಿದೆ. ಪಕ್ಷದ ಉಪಾಧ್ಯಕ್ಷರುಗಳಾದ Lingegowda SH ಮತ್ತು Amrith Shenoy ಹಾಗೂ ಪ್ರಧಾನ ಕಾರ್ಯದರ್ಶಿ Deepak Nagaraj ರವರ ನೇತೃತ್ವದಲ್ಲಿ ರಾಜ್ಯ ಕಾರ್ಯಕಾರಿ ಸಮಿತಿಯು ಸಂದರ್ಭಾನುಸಾರ ಕೆಲವು ತೀರ್ಮಾನಗಳನ್ನು ತೆಗೆದುಕೊಂಡು ಕಾರ್ಯ ನಿಭಾಯಿಸಲಿದ್ದಾರೆ. ನಾನೂ ಸಹ ಒಂದೆರಡು ವಾರದ ನಂತರ Virtual ಸಭೆಗಳಲ್ಲಿ ಭಾಗವಹಿಸುವ ಆಶಾಭಾವನೆ ಹೊಂದಿದ್ದೇನೆ. ಹಾಗೆಯೇ ಫೇಸ್ಬುಕ್ ಮೂಲಕ ಸಂವಹನ ಮಾಡಲು ಸಾಧ್ಯವಾದಷ್ಟು ಪ್ರಯತ್ನಿಸುತ್ತೇನೆ.
ಈ ಮಧ್ಯದಲ್ಲಿ ನನಗೆ ಬರುವ ಫೋನ್ ಕರೆಗಳನ್ನು ಸ್ವೀಕರಿಸುವ ಸ್ಥಿತಿಯಲ್ಲಾಗಲಿ ಅಥವ ಸಂದೇಶಗಳಿಗೆ ಉತ್ತರಿಸುವ ಸ್ಥಿತಿಯಲ್ಲಾಗಲಿ ನಾನಿಲ್ಲ. ದಯವಿಟ್ಟು ಕ್ಷಮೆಯಿರಲಿ. 🙏🙏🙏. ಹಾಗೆಯೇ, ಕಾಳಜಿ ತೋರಿಸಿ ಪ್ರತಿಕ್ರಿಯಿಸುತ್ತಿರುವ ಎಲ್ಲರಿಗೂ ಹೃದಯಾಂತರಾಳದ ವಂದನೆಗಳು.
ಮತ್ತೆ ನಾನು ಮೊದಲಿನ ಹಾಗೆ ದೈಹಿಕ ಊನಗಳಿಲ್ಲದ ವ್ಯಕ್ತಿ ಆಗುವುದಿಲ್ಲವಾದರೂ, ಇದು ನನ್ನ ಕಾರ್ಯಗಳನ್ನು ನಿಲ್ಲಿಸುವುದಿಲ್ಲ. ಚಲಿಸುವ ಕರ್ನಾಟಕದ ಜೊತೆಜೊತೆಗೆ ಖಂಡಿತವಾಗಿ ನಾನೂ ಚಲಿಸಲಿದ್ದೇನೆ; ಆದಷ್ಟು ಶೀಘ್ರದಲ್ಲಿ. ರಾಜ್ಯದಲ್ಲಿ ಸ್ವಚ್ಛ, ಪ್ರಾಮಾಣಿಕ, ಜನಪರ ರಾಜಕಾರಣಕ್ಕಾಗಿ ಹಿಂದಿನ ದಿನಗಳಂತೆ ನಿರಂತರವಾಗಿ ತೊಡಗುತ್ತೇನೆ. ಈ ತಾತ್ಕಾಲಿಕ ಹಿನ್ನಡೆಯನ್ನು ಅತಿಕ್ರಮಿಸಿ ನಮ್ಮ Shared ಆಶಯಗಳ ಈಡೇರಿಕೆಗಾಗಿ ಸೈಕಲ್ ಯಾತ್ರೆ, ಮೋಟಾರ್ ಸೈಕಲ್ ಯಾತ್ರೆ, ಪಾದಯಾತ್ರೆ, ಜಾಗೃತಿ ಕಾರ್ಯಕ್ರಮಗಳು, ಹೋರಾಟಗಳು, ಚುನಾವಣೆಗಳು ನಡೆಯಲಿವೆ; ಸಶಕ್ತ, ಮೌಲ್ಯಾಧಾರಿತ, ನೆಮ್ಮದಿಯ ಕರ್ನಾಟಕಕ್ಕಾಗಿ ಮತ್ತು ಆ ಮೂಲಕ ಹೊಸ ತರಹದ ಪ್ರಪಂಚಕ್ಕಾಗಿ.
ಈ ಪಯಣದಲ್ಲಿ ಎಂದಿನಂತೆ ನೀವುಗಳೂ ಜೊತೆಯಾಗಿರುತ್ತೀರಿ ಎನ್ನುವ ವಿಶ್ವಾಸದೊಂದಿಗೆ...
ನಮಸ್ಕಾರ,
ರವಿ ಕೃಷ್ಣಾರೆಡ್ಡಿ
ರಾಜ್ಯಾಧ್ಯಕ್ಷ, KRS ಪಕ್ಷ.
18-09-2020.