ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿರವರ ಸರಳತೆ ಮತ್ತು ಪ್ರೇಮಭರಿತ ಬದುಕು ಸಮಸ್ತ ಕನ್ನಡಿಗರಿಗೆ ಸದಾಕಾಲ ಪ್ರೇರಣಾದಾಯಕವಾಗಿರುತ್ತದೆ. ಕ್ಲಿಷ್ಟಕರವಾದ ಗ್ರಂಥಗಳನ್ನು ಅತ್ಯಂತ ಸರಳ ಭಾಷೆಯಲ್ಲಿ ಜನಸಾಮಾನ್ಯರ ಮನೆಮನಗಳನ್ನು ತಲುಪಿಸುವಲ್ಲಿ ಶ್ರೀಗಳ ಕೊಡುಗೆ ಅತಿವಿಶಿಷ್ಟ. ಶಿವೈಕ್ಯರಾದ ಪೂಜ್ಯ ಶ್ರೀಗಳ ಆಶೀರ್ವಾದ ಭಕ್ತರಿಗೆ ನಿರಂತರವಾಗಿರುತ್ತದೆ.