ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ನೂತನ ಅಧ್ಯಕ್ಷರಾಗಿ ನೇಮಕವಾದ ಶ್ರೀ @Dr_Ajay_Singh ಅವರನ್ನು ಭೇಟಿಯಾಗಿ ಸನ್ಮಾನಿಸಿ ಶುಭ ಕೋರಲಾಯಿತು.
ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಸದಸ್ಯರಾದ ಶ್ರೀ ಗುರುಶಾಂತ ಪಾಟೀಲ್, ಶ್ರೀ ಶಾಂತಪ್ಪ ಕುಡಲಗಿ, ಗ್ರಾ.ಪಂ ಅಧ್ಯಕ್ಷರಾದ ಶ್ರೀ ಕುಮಾರ ಚವ್ಹಾಣ್, ಶ್ರೀ ಮದನ್ ರಾಥೋಡ್ ಉಪಸ್ಥಿತರಿದ್ದರು.
ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಹಗಲಿರುಳು ಶ್ರಮಿಸಿದ ಕಾರ್ಯಕರ್ತರ ನಾಯಕ, ಡೈನಾಮಿಕ್ ಲೀಡರ್ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಶ್ರೀ @DKShivakumar ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಧರ್ಮ ಹಾಗೂ ಅಧರ್ಮದ ನಡುವಿನ ಯುದ್ಧದಲ್ಲಿ ಕೊನೆಗೂ ಧರ್ಮಕ್ಕೆ ಜಯ ಸಿಕ್ಕಿದೆ.
ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿ, ಪ್ರಿಯಾಂಕ್ ಖರ್ಗೆಜೀ ಅವರಿಗೆ ಅಭೂತಪೂರ್ವ ಗೆಲುವು ನೀಡಿದ ಚಿತ್ತಾಪುರ ಕ್ಷೇತ್ರದ ಸಮಸ್ತ ಜನತೆಗೆ ನನ್ನ ಹೃತ್ಪೂರ್ವಕ ���ನ್ಯವಾದಗಳು.
ಅಲ್ಲದೇ, ಕಾಂಗ್ರೆಸ್ ಪಕ್ಷವು ರಾಜ್ಯದ ಜನತೆಗೆ ಕೊಟ್ಟಿರುವ ಗ್ಯಾರಂಟಿಗಳನ್ನು ಈಡೇರಿಸಲಿದ್ದು, ಇನ್ನು ಮುಂದೆ ಕಾಂಗ್ರೆಸ್ ನೇತೃತ್ವದಲ್ಲಿ ಕರ್ನಾಟಕವು ಪ್ರಗತಿಯತ್ತ ಸಾಗಲಿದೆ.
ಸತ್ಯಮೇವ ಜಯತೆ..!!!
ಜಗತ್ತು ಕಂಡ ಮಹಾನ್ ಮಾನವತಾವಾದಿ,
ಕಲ್ಯಾಣದಲ್ಲಿ ಕ್ರಾಂತಿಯ ಬೀಜ ಬಿತ್ತಿದ ಸಮಾಜ ಸುಧಾರಕ,
ವಚನಗಳ ಮೂಲಕ ಬದುಕಿಗೆ ಹಾಗೂ ಉತ್ತಮ ಸಮಾಜ ನಿರ್ಮಾಣಕ್ಕೆ ದಾರಿ ತೋರಿದ ವಿಶ್ವಗುರು,
ಜಗಜ್ಯೋತಿ ಬಸವೇಶ್ವರರ ಜಯಂತಿಯ ಶುಭಾಶಯಗಳು.
#BasavaJayanti
Congress President Shri @kharge, KPCC President Shri @DKShivakumar and MLA & Chairperson Communications, KPCC Shri @PriyankKharge welcome former three-time MLA Shri Vishwanath Patil Hebbal & former ZP member Shri Arvind Chavan into the Congress family.
🇮🇳
Congress President Shri @kharge, KPCC President Shri @DKShivakumar and MLA & Chairperson Communications, KPCC Shri @PriyankKharge welcome former three-time MLA Shri Vishwanath Patil Hebbal & former ZP member Shri Arvind Chavan into the Congress family.
🇮🇳
ತತ್ವ-ಸಿದ್ಧಾಂತಗಳನ್ನು ಮರೆತಿರುವವರಿಗೆ ಬಿಜೆಪಿ ಇಂದು ಮ��ೆಹಾಕಲು ಮುಂದಾಗಿದೆ. ಕೇವಲ ಹಣವುಳ್ಳವರಿಗೆ, ಕ್ರಿಮಿನಲ್ ಹಿನ್ನೆಲೆ ಹೊಂದಿರುವವರಿಗೆ, ರೌಡಿ ಶೀಟರ್ಗಳಿಗೆ ಬಿಜೆಪಿ ಚುನಾವಣೆಗೆ ಅವಕಾಶ ಕಲ್ಪಿಸುತ್ತಿದೆ. ಟಿಕೆಟ್ ಪಡೆಯಬೇಕೆಂದರೆ ಇಂತಿಷ್ಟು ಕ್ರಿಮಿನಲ್ ಕೇಸ್ಗಳು ಇರಲೇಬೇಕೆಂಬ ಅಲಿಖಿತ ನಿಯಮ ಬಿಜೆಪಿಯಲ್ಲಿರುವಂತಿದೆ. ವಿದ್ಯಾವಂತ ಹಾಗೂ ಸಮುದಾಯದ ಜನಾನುರಾಗಿ ಕಾರ್ಯಕರ್ತರಿಗೆ ಬಿಜೆಪಿಯಲ್ಲಿಂದು ಅವಕಾಶವಿಲ್ಲ.
ಕಳೆದ 8 ವರ್ಷಗಳಿಂದ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ನಾನು ಹಗಲಿರುಳು ದುಡಿದಿದ್ದೇನೆ. ಚಿತ್ತಾಪುರದ ಜನತೆಯ ಕಷ್ಟ - ಸುಖದಲ್ಲಿ ಭಾಗಿಯಾಗಿದ್ದೇನೆ. ಆದರೆ, ನಮ್ಮಂತಹ ನಿಷ್ಠಾವಂತ ಕಾರ್ಯಕರ್ತರಿಗೆ ಈ ಪಕ್ಷದಲ್ಲಿ ಬೆಲೆಯೇ ಇಲ್ಲದಂತಾಗಿದೆ. ಮತ್ತು ಬಿಜೆಪಿ ಪಕ್ಷವು ಒಳಮೀಸಲಾತಿ ವಿಚಾರವಾಗಿ ಬಂಜಾರ ಸಮುದಾಯಕ್ಕೆ ಅನ್ಯಾಯವೆಸಗುತ್ತಿದೆ.
ದೇಶದ ಸಂವಿಧಾನದಲ್ಲಿ ಅವಕಾಶವಿಲ್ಲದ ಹಾಗೂ ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧವಾಗಿ ಪರಿಶಿಷ್ಟ ಜಾತಿಗಳನ್ನು 4 ಗುಂಪುಗಳನ್ನಾಗಿ ವರ್ಗೀಕರಿಸಿ ಒಳಮೀಸಲಾತಿ ಹಂಚಿಕೆ ಮಾಡಿ ರಾಜ್ಯ ಬಿಜೆಪಿ ಸರ್ಕಾರ ಬಂಜಾರ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ.
ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಒಪ್ಪುವುದಿಲ್ಲ ಎನ್ನುತ್ತಲೇ ಆ ವರದಿಯನ್ನು ಆಧರಿಸಿ ಪರಿಶಿಷ್ಟ ಜಾತಿಗಳನ್ನು ನಾಲ್ಕು ಗುಂಪುಗಳಾಗಿ ವಿಭಜಿಸಿ ಒಳ ಮೀಸಲಾತಿ ಹಂಚಿಕೆ ಮಾಡಿರುವುದು ನ್ಯಾಯ ಸಮ್ಮತವಲ್ಲ. ಒಳಮೀಸಲಾತಿಯೇ ಅಸಂವಿಧಾನಿಕವಾಗಿರುವಾಗ ಗುಂಪು 3ರ ಹೆಸರಿನಲ್ಲಿ ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯಗಳಿಗೆ ಶೇ 4.5ರಷ್ಟು ಮ��ಸಲಾತಿ ಹಂಚಿಕೆ ಮಾಡಿರುವುದು ಸಹ ಅವೈಜ್ಞಾನಿಕ. ಈ ಸಂಧರ್ಭದಲ್ಲಿ ಸಮುದಾಯದ ನಾಯಕರಾಗಿ ಗಟ್ಟಿಧ್ವನಿಯಾಗಬೇಕಿದ್ದ ಕೆಲ ನಾಯಕರ ಜಾಣಮೌನ ಸಮುದಾಯದ ಬೆನ್ನುಮುರಿಯುವುದಕ್ಕೆ ಸಮ.
ದೇಶದ ಸಂವಿಧಾನದ ಪ್ರಕಾರ, ಪರಿಶಿಷ್ಟ ಜಾತಿಗಳ ಪಟ್ಟಿಗೆ ಸೇರ್ಪಡೆ ಅಥವಾ ರದ್ದು ಮಾಡುವುದು ಕೇಂದ್ರ ಸರ್ಕಾರದ ಅಧಿಕಾರದ ವ್ಯಾಪ್ತಿಯಲ್ಲಿ ಬರುವುದರಿಂದ ರಾಜ್ಯ ಸರ್ಕಾರವು ಅನಗತ್ಯ ಹಸ್ತಕ್ಷೇಪ ಮಾಡುವಂತಿಲ್ಲ.
ಆದರೆ, ಇದರ ಬಗ್ಗೆ ಧ್ವನಿ ಎತ್ತಬೇಕಿದ್ದ ಇಲ್ಲಿನ ಸಂಸದರು, ರೌಡಿ ಶೀಟರ್ಗೆ ಟಿಕೆಟ್ ಕೊಡಿಸುವಲ್ಲೇ ಬ್ಯುಸಿಯಾಗಿದ್ದರು. ಬಂಜಾರ ಸಮುದಾಯದ ಹಿತ ಕಾಪಾಡುವ ಕೆಲಸವನ್ನು ಇಲ್ಲಿನ ಸಂಸದರಾಗಲಿ ಅಥವಾ ಬಿಜೆಪಿ ಸರ್ಕಾರವಾಗಿ ಎಂದೂ ಮಾಡಿಲ್ಲ. ಇದರ ವಿರುದ್ದ ಸಮುದಾಯದ ಹಕ್ಕಿನ ಪರ ನಾನಾಡಿರುವ ಮಾತುಗಳು ನನಗೆ ಬಿಜೆಪಿ ಟಿಕೆಟ್ ದೊರಕಿದಿರಲೂ ಕಾರಣವಾಗಿವೆ.
ಈ ಹಿನ್ನೆಲೆಯಲ್ಲಿ ಈ ಎಲ್ಲಾ ಕಾರಣಗಳಿಂದ ಬೇಸತ್ತು
- ಬಿಜೆಪಿಯ ಬಂಜಾರ ವಿರೋಧಿ ನೀತಿಯನ್ನು ಖಂಡಿಸಿ
- ನನ್ನ ಚಿತ್ತಾಪುರದ ಜನತೆಯ ಹಿತ ಕಾಪಾಡಲು
- ಪ್ರಗತಿ ಕೇಂದ್ರಿತ ರಾಜಕಾರಣದ ಸಂರಕ್ಷಣೆಗೆ
- ರೌಡಿ ರಾಜಕೀಯವನ್ನು ತಿರಸ್ಕರಿಸುತ್ತಾ,
- ಸ್ವಚ್ಛ ಹಾಗೂ ಜನಪರ ರಾಜಕೀಯ ಮೌಲ್ಯ ಕಾಪಾಡುವ ಉದ್ದೇಶದಿಂದ
ನಾನು ಇಂದು ಕಾಂಗ್ರೆಸ್ ಪಕ್ಷವನ್ನು ಸೇ���ಿದ್ದೇನೆಯೇ ಹೊರತು ಯಾವುದೇ ವೈಯಕ್ತಿಕ ಲಾಭಕ್ಕಲ್ಲ.
ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ, ಬಂಜಾರ ಸಮುದಾಯಕ್ಕೆ ನ್ಯಾಯ ಒದಗಿಸುವ ಭರವಸೆಯೂ ನನಗಿದೆ.
ನನ್ನ ಈ ನಿರ್ಧಾರವನ್ನು ಬೆಂಬಲಿಸಿದ ಪ್ರತಿಯೊಬ್ಬರಿಗೂ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅಲ್ಲದೇ, ನಾನು ನಂಬಿರುವ, ನನ್ನ ಒಡಹುಟ್ಟಿದವರಂತಿರುವ ನನ್ನ ಕಾರ್ಯಕರ್ತರೂ ಕೂಡಾ ಇಂದಲ್ಲಾ ನಾಳೆ ನನ್ನ ಈ ನಿರ್ಧಾರವನ್ನು ಮನಸ್ಪೂರ್ವಕವಾಗಿ ಸ್ವೀಕರಿಸಿ, ಚಿತ್ತಾಪುರದ ಸಮಗ್ರ ಅಭಿವೃದ್ಧಿಗಾಗಿ ನನ್���ೊಂದಿಗೆ ಜೊತೆಯಾಗಿರುತ್ತಾರೆಂಬ ಭರವಸೆ ನನಗಿದೆ.
ಹೋರಾಟ ಮುಂದುವರೆಯಲಿದೆ...!!
Game ON...!!
Karnataka | BJP Kalaburagi District Yuva Morcha General Secretary and former Zilla Panchayat member Arvind Chauhan has resigned from the Bharatiya Janata Party after he was denied a BJP ticket from Chittapur assembly constituency
ಬಿಜೆಪಿ ಪಕ್ಷವು ಲೂಟಿಕೋರರಿಗೆ, ದಂಧೆಕೋರರಿಗೆ ಟಿಕೆಟ್ ಮಾರಾಟ ಮಾಡುವ ಮೂಲಕ ತನ್ನ ತತ್ವ - ಸಿದ್ಧಾಂತವನ್ನು ಮರೆತಿದೆ. 8 ವರ್ಷಗಳಿಂದ ಚಿತ್ತಾಪುರ ಕ್ಷೇತ್ರದಲ್ಲಿ ಪಕ್ಷಕ್ಕಾಗಿ ದುಡಿದ ನನಗೂ ಹಾಗೂ ಪಕ್ಷದ ಕಾರ್ಯಕರ್ತರ ಸ್ವಾಭಿಮಾನಕ್ಕೂ ದ್ರೋಹವೆಸಗಿದೆ.
ಆದ್ದರಿಂದ ನಾನು ಬಿಜೆಪಿ ಪಕ್ಷವನ್ನು ತೊರೆಯಲು ನಿರ್ಧರಿಸಿದ್ದೇನೆ.
ನಾಳೆ ಬೆಳಗ್ಗೆ 9 ಗಂಟೆಗೆ ನನ್ನ ಹಿತೈಷಿಗಳು,ಕಾರ್ಯಕರ್ತರು ಹಾಗೂ ಅಭಿಮಾನಿಗಳ ಸಭೆಯನ್ನು ಕರೆದಿದ್ದು, ಆ ಸಭೆಯಲ್ಲಿ ಎಲ್ಲರ ಅಭಿಪ್ರಾಯ ಪಡೆದು ನಾಳೆ 10 ಗಂಟೆಗೆ ಪತ್ರಿಕಾಗೋಷ್ಠಿಯಲ್ಲಿ ನನ್ನ ಮುಂದಿನ ನಿರ್ಧಾರವನ್ನು ಘೋಷಿಸಲಿದ್ದೇನೆ.
ಪಕ್ಷದಿಂದ ನನಗೆ ಮೋಸವಾಗಿದ್ದರೂ, ನನ್ನ ನಂಬಿರುವವರನ್ನು ನಾನೆಂದಿಗೂ ಕೈ ಬಿಡುವುದಿಲ್ಲ.
ನನ್ನ ಹಿತೈಷಿಗಳು, ಒಡಹುಟ್ಟಿದವರಂತಿರುವ ನನ್ನ ಅಭಿಮಾನಿಗಳು ಹಾಗೂ ನನ್ನೆಲ್ಲಾ ಕಾರ್ಯಕರ್ತ ಬಂಧುಗಳು ಯಾವುದೇ ವದಂತಿಗಳಿಗೆ ಕಿವಿಗೊಡದೆ ನಾಳೆ ಸಂಜೆ 7 ಗಂಟೆಯವರಿಗೆ ನನಗೆ ಸಮಯ ನೀಡಬೇಕೆಂದು ಕಳಕಳಿಯ ಮನವಿ.
ನಾಳೆ ನನ್ನ ನಿರ್ಧಾರವನ್ನು ಮುಕ್ತವಾಗಿ ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇನೆ.
ಇಂದು ಪಟ್ಟಣದ ಬಜಾಜ್ ಕಾಂಪ್ಲೆಕ್ಸ್ನಲ್ಲಿ ಉದ್ಘಾಟನೆಗೊಂಡ ಭಾರತೀಯ ಜನತಾ ಪಕ್ಷ ಚಿತ್ತಾಪುರ ಮಂಡಲದ ನೂತನ ಕಾರ್ಯಾಲಯದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದೆನು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ನೀಲಕಂಠ ಪಾಟೀಲ್ ಜೀ, ಪ್ರಧಾನ ಕಾರ್ಯದರ್ಶಿಗಳಾದ ನಾಗರಾಜ ಹೂಗಾರ ಜೀ, ಕೋಟೇಶ್ವರ ರೇಷ್ಮೀ ಜೀ, ರಮೇಶ ಕ���ಳನೂರ್, ಅಂಬರೀಶ್ ಹೋಳಿಕಟ್ಟಿ, ವಿನೋದ್ ಅಣ್ವಾರ್ಕರ್ ಸೇರಿದಂತೆ ಪಕ್ಷದ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಕಲಬುರಗಿ ಜಿಲ್ಲೆಯ ಹಿರಿಯ ಬಿಜೆಪಿ ಮುಖಂಡರು, ನನ್ನ ಹಿತೈಷಿಗಳು, ಮಾರ್ಗದರ್ಶಕರು, ಪಿತೃ ಸಮಾನರಾದ ಸನ್ಮಾನ್ಯ ಶ್ರೀ ಲಿಂಗಾರೆಡ್ಡಿ ಬಾಸರೆಡ್ಡಿ ಜೀ ಗೌಡರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಲಕ್ಷಾಂತರ ಮಕ್ಕಳಿಗೆ ಅನ್ನ, ಆಶ್ರಯ, ಅಕ್ಷರ ನೀಡಿದ ತ್ರಿವಿಧ ದಾಸೋಹಿ, ನಡೆದಾಡುವ ದೇವರು, ಸಿದ್ದಗಂಗೆಯ ಕಾಯಕಯೋಗಿ, ಆಧುನಿಕ ಬಸವಣ್ಣ, ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳವರ ಜಯಂತಿಯಂದು ಅವರಿಗೆ ನನ್ನ ಪ್ರಣಾಮಗಳನ್ನು ಅರ್ಪಿಸುತ್ತೇನೆ.
ಈ ಹೊಸವರ್ಷವು ಭರವಸೆಯ ಹೊಸ ಹೊಳಪನ್ನು ಹೊತ್ತು ತರಲಿ. ಸಂತೋಷ, ಸಂತೃಪ್ತಿ, ಶಾಂತಿ ಮತ್ತು ಸಮೃದ್ಧಿಯು ನಿಮ್ಮೆಲ್ಲರ ಕುಟುಂಬದಲ್ಲಿ ನೆಲೆಗೊಳ್ಳಲು ತಾಯಿ ನಾಗಾವಿ ಯಲ್ಲಮ್ಮ ದೇ���ಿಯು ಆಶೀರ್ವದಿಸಲಿ.
ಸರ್ವರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
#HappyUgadi
#HinduNavVarsh