ನಮಗೆ ಕಾಡುವ ಪ್ರಶ್ನೆ 🤔
ಈ ಕಾಂಗ್ರೆಸ್ ನವರು ಹಿಂದುಗಳ
ಒಗ್ಗಟ್ಟು ಹೊಡೆದು - ಅಲ್ಪರನ್ನ ಒಂದು ಮಾಡಿ
ಸಿಗುವ ಸಂತೋಷ ಆದ್ರೂ ಏನು ಅಂತ.
ಕೇಳಿ ಪುಂಕಾನು ಪುಂಕವಾಗಿ ಹೇಳಿರೋ
ಸುಳ್ಳುಗಳನ್ನ - ಕೇವಲ ಒಂದು ಚುನಾವಣೆ
ಗೆಲ್ಲಲು ತೂ 😇
ಫಿಟ್ನೆಸ್ ಹೆಸರಲ್ಲಿ ಹಿಂದೂ ಹೆಣ್ಣು ಮಕ್ಕಳೇ ಟಾರ್ಗೆಟ್?
Hindu women allegedly targeted under the guise of fitness.
Gym trainer Ismail is accused of blackmailing women using their private videos.
Source - Gurantee News
ಸ್ವತಃ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ @PriyankKharge ಅವರ ತವರು ಕ್ಷೇತ್ರ ಚಿತ್ತಾಪುರದ ದಂಡೋತಿ ಮೊರಾರ್ಜಿ ವಸತಿ ನಿಲಯದಲ್ಲಿ ಕಳಪೆ ಆಹಾರ ಮತ್ತು ಕಲುಷಿತ ನೀರು ಸೇವಿಸಿ 50ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆ ಪಾಲಾಗಿರುವುದು ಇವರ ದುರಾಡಳಿತ ಮತ್ತು ನಿರ್ಲಕ್ಷ್ಯಕ್ಕೆ ಪ್ರತ್ಯಕ್ಷ ಸಾಕ್ಷಿ!
ತಮ್ಮದೇ ಕ್ಷೇತ್ರದ ಹಾಸ್ಟೆಲ್ನಲ್ಲಿ ಬಡ ವಿದ್ಯಾರ್ಥಿಗಳಿಗೆ ಕನಿಷ್ಠ ಶುದ್ಧ ನೀರು ಮತ್ತು ಯೋಗ್ಯವಾದ ಊಟ ಕೊಡಲು ಸಾಧ್ಯವಾಗದವರು ಇನ್ನು ಇಡೀ ಜಿಲ್ಲೆಯನ್ನು ಹೇಗೆ ಉದ್ದಾರ ಮಾಡುತ್ತಾರೆ? ನಿಮ್ಮ ಈ ಅಸಡ್ಡೆಗೆ ಮುಗ್ಧ ಮಕ್ಕಳ ಜೀವ ಬಲಿಯಾಗಬೇಕೆ?
ಬರೀ ಭಾಷಣ ಬಿಗಿಯುವುದು, ಟ್ವೀಟ್ ಮಾಡುವುದು ಬಿಟ್ಟು ಮೊದಲು ವಿದ್ಯಾರ್ಥಿಗಳ ಜೀವದ ಜೊತೆ ಚೆಲ್ಲಾಟವಾಡುವ ಭ್ರಷ್ಟ ಹಾಗೂ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ. ಅದಕ್ಕೂ ಮೊದಲು ನೀವು ಹೊಣೆ ಹೊತ್ತುಕೊಳ್ಳಿ!
#Chittapur #Kalaburagi #CongressFailsKarnataka
ಮತ್ತೊಮ್ಮೆ ಏರಿಕೆಯಾಗಲಿದೆ ಬಸ್ ಟಿಕೆಟ್ ದರ !
ಹೊಸದಾಗಿ ಕುರ್ಚಿ ಏರಿರುವ ಡಿ. ಕೆ. ಶಿವಕುಮಾರ್ ತಮ್ಮ ಪಾಲಿನ ಬೆಲೆ ಏರಿಕೆಯ ಕೋಟಾವನ್ನು ಆರಂಭಿಸಿದ್ದಾರೆ. ಈಗಾಗಲೇ ಬೆಲೆ ಏರಿಕೆಯಿಂದ ಹೈರಾಣಾಗಿರುವ ಜನಸಾಮಾನ್ಯರಿಗೆ ಮತ್ತೊಂದು ಶಾಕ್ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.
ಉಚಿತ, ಉಚಿತ ಎನ್ನುತ್ತಾ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಪುರುಷ ಪ್ರಯಾಣಿಕರ ಜೇಬಿನಿಂದ ರಾಜಾರೋಷವಾಗಿ ಪಿಕ್ ಪಾಕೆಟ್ ಮಾಡುತ್ತಿದೆ. ಎಲ್ಲಾ ಅಗತ್ಯ ಸರಕು - ಸೇವೆಗಳ ಬೆಲೆ ಏರಿಸಿ ದುಡಿಯುವ ವರ್ಗದ ಜನರ ರಕ್ತವನ್ನು ಹೀರುತ್ತಿದೆ.
#CongressLootsKarnataka
#CongressFailsKarnataka
"ಗ್ಯಾರಂಟಿ" ಹೆಸರಲ್ಲಿ ಕಾಂಗ್ರೆಸ್ ಲೂಟಿ!
'ಗೃಹಲಕ್ಷ್ಮಿ' ಯೋಜನೆ @INCKarnataka ಸರ್ಕಾರದ ಲೂಟಿ ಸ್ಕೀಮ್ ಎನ್ನುವುದು ಸಿಎಜಿ (CAG) ವರದಿ ಬೆತ್ತಲುಗೊಳಿಸಿದೆ. 19,020 ಫಲಾನುಭವಿಗಳ ದುಡ್ಡು ಒಂದೇ ಬ್ಯಾಂಕ್ ಖಾತೆಗೆ ಜಮೆಯಾಗಿರುವುದು, ಬ್ಯಾಂಕ್ ಖಾತೆಯೇ ಇಲ್ಲದ 23,262 ಮಹಿಳೆಯರ ಹೆಸರಲ್ಲೂ ಕೋಟ್ಯಂತರ ರೂ. ಹಗರಣ ನಡೆದಿರುವುದು ನಾಚಿಕೆಗೇಡು.
ತೆರಿಗೆದಾರರ 45 ಕೋಟಿಗೂ ಹೆಚ್ಚು ಹಣ ಯಾರ ಜೇಬಿಗೆ ಹೋಯ್ತು @DKShivakumar ಅವರೇ ನಿಮ್ಮ ಅಧಿಕಾರಿಗಳು ನಿದ್ದೆ ಮಾಡ್ತಿದ್ದಾರಾ ಅಥವಾ ಇದೂ ಕೂಡ 'ಸಿಸ್ಟಮ್' ದೋಷನಾ? ಗ್ಯಾರಂಟಿ ಯೋಜನೆಗಳ ಹೆಸರಲ್ಲಿ ಕಾಂಗ್ರೆಸ್ ಪಕ್ಷದ ಖಜಾನೆ ತುಂಬಿಸಿಕೊಳ್ಳುತ್ತಿರುವ ಈ ಭ್ರಷ್ಟ ಸರ್ಕಾರದ ಅಸಲಿ ಗಿಮಿಕ್ ಈಗ ಸಿಎಜಿ ವರದಿಯಿಂದ ಜಗಜ್ಜಾಹೀರಾಗಿದೆ.
#CAGReport #GruhalakshmiScam
ಭ್ರಷ್ಟ @INCKarnataka ಸರ್ಕಾರದ 'ಹಗರಣಗಳ' ಸಾಧನೆಗಳಿಗೆ ಗಿನ್ನಿಸ್ ಪ್ರಶಸ್ತಿಯೇ ಸಾಲದು !
ಬೆಂಗಳೂರಿನಲ್ಲಿ ಗಿಡ ನೆಡುವ ಹೆಸರಿನಲ್ಲಿ ನಡೆಯುತ್ತಿರುವುದು 'ಹಸಿರು ಕ್ರಾಂತಿ'ಯಲ್ಲ, ಬದಲಿಗೆ ಜನರ ತೆರಿಗೆ ಹಣದ ಲೂಟಿ.
ರಾಜಧಾನಿ ಬೆಂಗಳೂರಿನಾದ್ಯಂತ ಕನಿಷ್ಠ ಗುಂಡಿಯನ್ನೂ ತೋಡದೆ, ಕೇವಲ ಕಾಟಾಚಾರಕ್ಕೆ ಸಸಿ ನೆಟ್ಟು ಕೋಟ್ಯಂತರ ರೂಪಾಯಿ ಗುಳುಂ ಮಾಡಲಾಗಿದೆ. ಹೆಗ್ಗಣಗಳು ತಿಂದಿರುವ ಬಗ್ಗೆ ಸ್ವತಃ ಸಚಿವ ಕೃಷ್ಣ ಬೈರೇಗೌಡ ಅವರೇ ಒಪ್ಪಿಕೊಂಡಿದ್ದಾರೆ. ಆದರೆ, ತಿಂದು ತೇಗಿರುವ ಆ ಹೆಗ್ಗಣಗಳು ಯಾವುವು ?
ಬೆಂಗಳೂರಿನಲ್ಲಿ ಹಸಿರೀಕರಣದ ನೆಪದಲ್ಲಿ ನೂರಾರು ಕೋಟಿ ರೂ. ಹಣವನ್ನು ನುಂಗಿ ನೀರು ಕುಡಿದಿರುವ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು.
#CongressScam
#CongressLootsKarnataka
#TreePlantingScam #CorruptGovernment
"ನಾನು ಡಾಕ್ಟರ್ ಆಗ್ಬೇಕ್ರೀ.. ನಮಗೆ ಪರ್ಮನೆಂಟ್ ಟೀಚರ್ಸ್ ಕೊಡ್ರಿ ಸಿಎಂ ಸರ್..."
ಕಲ್ಯಾಣ ಕರ್ನಾಟಕದ ಪುಟ್ಟ ಬಾಲಕಿಯ ಈ ಮಾತುಗಳು ವಿಧಾನಸೌಧದಲ್ಲಿ ಕಣ್ಣು-ಕಿವಿ ಮುಚ್ಚಿ ಕುಳಿತಿರುವ @INCKarnataka ಸರ್ಕಾರಕ್ಕೆ ಕೇಳಿಸುತ್ತಿದೆಯೇ ?
ರಾಯಚೂರು ಜಿಲ್ಲೆಯ 318 ಸರ್ಕಾರಿ ಶಾಲೆಗಳಲ್ಲಿ ಒಬ್ಬನೇ ಒಬ್ಬ ಕಾಯಂ ಶಿಕ್ಷಕನಿಲ್ಲ ಎನ್ನುವುದು ಈ ಭ್ರಷ್ಟ ಸರ್ಕಾರದ ಆಡಳಿತ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ.
ಶೂನ್ಯ ಶಿಕ್ಷಕರು.. ಶೂನ್ಯ ಅಭಿವೃದ್ಧಿ.. ಇದುವೇ ಕಾಂಗ್ರೆಸ್ ಸರ್ಕಾರದ 'ನಂಬರ್ 1' ಆಡಳಿತ.
@DKShivakumar@CMofKarnataka
#CongressFailsKarnataka
#GovtSchool
ರಾಜ್ಯಾದ್ಯಂತ ಜೂನ್ 30 ರಿಂದ ಜುಲೈ 29 ವರೆಗೆ ಬಿಎಲ್ಒ ಅಧಿಕಾರಿಗಳು ಮತದಾರರ ಪಟ್ಟಿ ಪರಿಷ್ಕರಣೆಗಾಗಿ(SIR) ನಿಮ್ಮ ಮನೆ ಬಾಗಿಲಿಗೆ ಬರಲಿದ್ದಾರೆ.
ಪ್ರತಿಯೊಬ್ಬರು ಅಧಿಕಾರಿಗಳಿಗೆ ಸೂಕ್ತ ದಾಖಲೆಗಳನ್ನು ನೀಡಿ ಸಹಕರಿಸಿ. ಎಸ್ಐಆರ್ಗೆ ಬೆಂಬಲಿಸಿ. ನಿಮ್ಮ ಮತದಾನದ ಹಕ್ಕನ್ನು ಕಾಪಾಡಿಕೊಳ್ಳಿ !
#SIR#JDS#VoterListRevision #ElectionCommission
ಹೊಣೆಗೇಡಿ @INCKarnataka ಸರ್ಕಾರದ ಕೆಟ್ಟ ಆಡಳಿತಕ್ಕೆ ರಾಜ್ಯದ ಶೈಕ್ಷಣಿಕ ವ್ಯವಸ್ಥೆ ನಲುಗಿ ಹೋಗಿದೆ.
ಬೇರೆ ಶಾಲೆಗೆ ಸೇರಲು ವರ್ಗಾವಣೆ ಪತ್ರ (TC) ನೀಡಲು ನಿರ್ಬಂಧ ಹೇರಿರುವ ಸರ್ಕಾರದ ಕ್ರಮದಿಂದಾಗಿ, ಸಾವಿರಾರು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಅತಂತ್ರರಾಗಿ ಮನೆಯಲ್ಲಿ ಕೂರುವಂತಾಗಿದೆ. ಇದು ಮಕ್ಕಳ ಮೂಲಭೂತ ಹಕ್ಕಿನ ಉಲ್ಲಂಘನೆಯಲ್ಲವೇ ?
ರಾಜ್ಯದಲ್ಲಿ ಶಿಕ್ಷಣ ಸಚಿವರಿಲ್ಲದೇ ಶಿಕ್ಷಣ ವ್ಯವಸ್ಥೆ ಅನಾಥವಾಗಿದೆ. 'SATS' ಪೋರ್ಟಲ್ನಲ್ಲಿ ತಾಂತ್ರಿಕ ದೋಷವಿದ್ದರೂ ಕಳೆದ 3 ವಾರಗಳಿಂದ ಸರಿಪಡಿಸುವ ಯೋಗ್ಯತೆ ಈ ಸರ್ಕಾರಕ್ಕಿಲ್ಲ. ಟಿಸಿ ಇಲ್ಲದೆ ದಾಖಲಾತಿ ಆಗುತ್ತಿಲ್ಲ, ದಾಖಲಾತಿ ಇಲ್ಲದೆ ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ, ಮೊಟ್ಟೆ, ಬಾಳೆಹಣ್ಣು ನೀಡಲಾಗದೆ ಶಿಕ್ಷಕರು ಪರದಾಡುತ್ತಿದ್ದಾರೆ. ಇದೇನಾ ನಿಮ್ಮ ಅಭಿವೃದ್ಧಿ ಮಾಡೆಲ್?
ಕೇವಲ ಗ್ಯಾರಂಟಿಗಳ ಪ್ರಚಾರದಲ್ಲಿ ಮುಳುಗಿರುವ @DKShivakumar ಅವರೇ, ಬಡವರ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುವುದನ್ನು ನಿಲ್ಲಿಸಿ. ಕೂಡಲೇ ಸಮಸ್ಯೆ ಸರಿಪಡಿಸಿ, ಮಕ್ಕಳಿಗೆ ಟಿಸಿ, ಶಾಲಾ ದಾಖಲಾತಿಯ ಜೊತೆಗೆ ಪೌಷ್ಟಿಕ ಆಹಾರ ಸಿಗುವಂತೆ ಮಾಡಿ.
@CMofKarnataka
#CongressFailsKarnataka
ಮುಖ್ಯಮಂತ್ರಿಗಳೇ, ಗ್ಯಾರಂಟಿ ಪ್ರಚಾರದ ಭ್ರಮೆಯಲ್ಲಿ ಮುಳುಗಿರುವ @INCKarnataka ಸರ್ಕಾರಕ್ಕೆ ಬಡವರ, ರೈತರ ಹಾಗೂ ಕೂಲಿ ಕಾರ್ಮಿಕರ ಮಕ್ಕಳ ಶಿಕ್ಷಣದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲವೇ?
ಶಾಲೆಗಳು ಆರಂಭವಾಗಿ ಎರಡು ತಿಂಗಳು ಕಳೆದರೂ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕನಿಷ್ಠ ಒಂದು ಜೊತೆ ಶೂ, ಸಾಕ್ಸ್ ವಿತರಿಸಲು ನಿಮ್ಮ ಸರ್ಕಾರಕ್ಕೆ ಸಾಧ್ಯವಾಗಿಲ್ಲ ! ಕೇವಲ ಚಿಂತಾಮಣಿ ತಾಲ್ಲೂಕೊಂದರಲ್ಲೇ 10,660 ವಿದ್ಯಾರ್ಥಿಗಳು ಇಂದಿಗೂ ಶೂ, ಸಾಕ್ಸ್ ಇಲ್ಲದೆ ಬರಿಗಾಲಿನಲ್ಲಿ ಶಾಲೆಗೆ ಹೋಗುತ್ತಿರುವುದು ನಿಮ್ಮ ಸರ್ಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಸಾಕ್ಷಿ.
ಹಿಂದಿನಂತೆ ಶಾಲಾ ಹಂತದಲ್ಲೇ ಎಸ್ಡಿಎಂಸಿ (SDMC) ಮೂಲಕ ಶೂ, ಸಾಕ್ಸ್ ಖರೀದಿಸಿ ವಿತರಿಸುವ ಜವಾಬ್ದಾರಿ ನೀಡುವ ಬದಲು, ಈ ಬಾರಿ ಟೆಂಡರ್ ನೆಪದಲ್ಲಿ ಕೇಂದ್ರ ಕಚೇರಿ ಹಂತದಿಂದಲೇ ಖರೀದಿ ಪ್ರಕ್ರಿಯೆ ನಡೆಸಲು ಹೊರಟಿರುವುದರ ಹಿಂದಿನ ಗುಟ್ಟೇನು ? ಹಳ್ಳಿ ಮಟ್ಟದ ಶಾಲಾ ಸಮಿತಿಗಳ ಅಧಿಕಾರ ಕಿತ್ತುಕೊಂಡು, ಎಲ್ಲವನ್ನೂ ಕೇಂದ್ರೀಕರಣ ಮಾಡುತ್ತಿರುವುದು ಕಮಿಷನ್ ದಂಧೆಗಾಗಿಯೇ ?
ಬಡಮಕ್ಕಳ ಶಿಕ್ಷಣದ ವಿಚಾರದಲ್ಲಿ ಬೇಜವಾಬ್ದಾರಿ ಬಿಟ್ಟು, ಕೂಡಲೇ ರಾಜ್ಯಾದ್ಯಂತ ಶೂ ಮತ್ತು ಸಾಕ್ಸ್ ಪೂರೈಕೆಗೆ ಕ್ರಮಕೈಗೊಳ್ಳಿ,
@CMofKarnataka
#CongressFailsKarnataka
ಒಂದೆಡೆ ಗ್ಯಾರಂಟಿಗಳಿಗೆ ಹಣವಿಲ್ಲದೆ ಪರಿಷ್ಕರಣೆಯ ಬೃಹನ್ ನಾಟಕ, ಇನ್ನೊಂದೆಡೆ 178 ಕೋಟಿ RTE ಹಣ ಬಿಡುಗಡೆ ಮಾಡದೆ ಬಡಮಕ್ಕಳ ಶಿಕ್ಷಣಕ್ಕೆ ಕುತ್ತು!
ಬರೋಬ್ಬರಿ 92,000 ವಿದ್ಯಾರ್ಥಿಗಳ ಭವಿಷ್ಯ ಮತ್ತು ಖಾಸಗಿ ಶಾಲಾ ಶಿಕ್ಷಕರ ಬದುಕನ್ನು ಬೀದಿಗೆ ತಂದಿರುವ @INCKarnataka ಸರ್ಕಾರ, ರಾಜ್ಯವನ್ನು ಶೈಕ್ಷಣಿಕವಾಗಿಯೂ ಮತ್ತು ಆರ್ಥಿಕವಾಗಿಯೂ ದಿವಾಳಿ ಮಾಡಿದೆ.
@CMofKarnataka
#RTE
#CongressFailsKarnataka
ವಿಜಯನಗರ ಜಿಲ್ಲೆಯ ಕೂಡ್ಲಿಗಿ ಭಾಗದ ತಾಂಡಾಗಳಲ್ಲಿ ಉದ್ಯೋಗವಿಲ್ಲದೆ, ತುತ್ತು ಅನ್ನಕ್ಕಾಗಿ ಜನ ತಮ್ಮ ಮಕ್ಕಳನ್ನು, ವೃದ್ಧರನ್ನು ಊರಲ್ಲೇ ಬಿಟ್ಟು ಮುಂಬೈ-ಬೆಂಗಳೂರಿಗೆ ಗುಳೆ ಹೋಗುತ್ತಿದ್ದಾರೆ.
ಗ್ರಾಮ ಪಂಚಾಯತಿಗಳಲ್ಲಿ ಉದ್ಯೋಗ ಖಾತ್ರಿ ಕೆಲಸಗಳೂ ಸಿಗುತ್ತಿಲ್ಲ ಎಂದು ಜನ ಕಣ್ಣೀರಿಡುತ್ತಿರುವುದು, ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಹಳಿ ತಪ್ಪಿರುವುದಕ್ಕೆ ಸಾಕ್ಷಿ.
ಗ್ಯಾರಂಟಿಗಳ ಹೆಸರಲ್ಲಿ ಗ್ರಾಮೀಣ ಭಾಗದ ಆರ್ಥಿಕತೆ ನೆಲಕಚ್ಚಿಸಿ, ಕೇವಲ ಪ್ರಚಾರದಲ್ಲಿ ಮುಳುಗಿರುವ @INCKarnataka ಸರ್ಕಾರಕ್ಕೆ ಹಳ್ಳಿ ಜನರ ಹೊಟ್ಟೆಪಾಡು ಕಾಣಿಸುತ್ತಿಲ್ಲವೇ?
ಮುಖ್ಯಮಂತ್ರಿಗಳೇ, ಹಳ್ಳಿಗಳ ಕಡೆಗೆ ಒಮ್ಮೆ ಗಮನಹರಿಸಿ, ತಕ್ಷಣವೇ ಸಾಮೂಹಿಕ ಗುಳೆ ಹೋಗುವುದನ್ನು ತಡೆದು, ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಿ.
@CMofKarnataka
#CongressFailsKarnataka
ಮುಖ್ಯಮಂತ್ರಿಗಳು ಹೊಸದಾಗಿ ಪ್ರಜಾಸೇವೆ ಇಲಾಖೆ ಘೋಷಿಸಿದ್ದಾರೆ, ಅದನ್ನು ಅನುಷ್ಠಾನಗೊಳಿಸಿಬೇಕಾದರೆ, ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯವನ್ನು ಘೋಷಿಸಬೇಕು ಎಂದು ಗುರುಮಿಠಕಲ್ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ @SN_Kandkur ಅವರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
@CMofKarnataka