ನನಗೆ ಇವತ್ತಿನ Gen Z ಬಗ್ಗೆ ಭರವಸೆ ಮೂಡಿಸುವುದು ಇಂತಹ ಹುಡುಗರು.
ಉತ್ತರ ಕರ್ನಾಟಕದ 26 ವರ್ಷದ ಒಬ್ಬ Gen Z ಹುಡುಗ.ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಕೃಷಿ ಮಾಡಲು ಹೊಲವಿದೆ. ಆದರೆ ಸರಿಯಾಗಿ ಮಳೆಯಾಗದ ಕಾರಣ ಕೃಷಿಯಿಂದ ಆದಾಯವಿಲ್ಲ. ಮನೆಯ ಜವಾಬ್ದಾರಿಗಳೇ ಬೆಟ್ಟದಷ್ಟು ಇರುವಾಗ, ಇಬ್ಬರು ತಂಗಿಯರ ಮದುವೆ ಮಾಡಬೇಕಾದ ಹೊಣೆಗಾರಿಕೆ ಬೇರೆ.
ಇದರ ನಡುವೆ ಕ್ಯಾನ್ಸರ್ನಿಂದ ಬಳಲುತ್ತಿರುವ ಅಪ್ಪನಿಗೆ ತಿಂಗಳಿಗೊಮ್ಮೆ ಸಾ��ಿರಾರು ರೂಪಾಯಿ ಖರ್ಚು ಮಾಡಿ ಚಿಕಿತ್ಸೆ ಕೊಡಿಸಬೇಕಾದ ಅನಿವಾರ್ಯತೆ.
ಓದಿದ್ದು ಡಿಗ್ರಿ. ಸದ್ಯ ಒಂದು ಕಂಪನಿಯಲ್ಲಿ ಸೇಲ್ಸ್ ಪರ್ಸನ್ ಆಗಿ ಕೆಲಸ ಮಾಡುತ್ತಿದ್ದಾನೆ.
ಸಂಬಳ ಎಷ್ಟು ಇರಬಹುದು? ಮನೆಯ ಖರ್ಚು, ಅಪ್ಪನ ಚಿಕಿತ್ಸೆ, ತಂಗಿಯರ ಭವಿಷ್ಯ- ಎಲ್ಲವನ್ನೂ ನಿಭಾಯಿಸಿದ ಮೇಲೆ ಅವನ ಕೈಯಲ್ಲಿ ಉಳಿಯುವ ಹಣ ಎಷ್ಟು ಇರಬಹುದು?
ಒಂದು ದಿನ ನನಗೆ ಮೆಸೇಜ್ ಮಾಡಿದ.
ಸರ್, ನನಗೆ ಟ್ರೇಡಿಂಗ್ ಕಲಿಯಬೇಕು. ನನ್ನ ಜೀವನದ ಕಷ್ಟಗಳನ್ನು ಎದುರಿಸಲು, ಮನೆಯ ಜವಾಬ್ದಾರಿಗಳನ್ನು ನಿಭಾಯಿಸಲು ಬೇಕಾದ ಹಣವನ್ನು ಸಂಪಾದಿಸುವ ಒಂದು ದಾರಿ ಸಿಗಬಹುದು ಅನ್ನಿಸುತ್ತಿದೆ. ನನ್ನ ಹತ್ತಿರ ಜಾಸ್ತಿ ಹಣವಿಲ್ಲ. ಸಮಯವೂ ಕಡಿಮೆ. ಆದರೂ ಕಷ್ಟಪಟ್ಟು ಕಲಿಯಲು ಸಿದ್ಧನಿದ್ದೇನೆ. ��ಯವಿಟ್ಟು ನನಗೆ ಸರಿಯಾದ ದಾರಿ ತೋರಿಸಿ.
ಆ ಮೆಸೇಜ್ನ ಹಿಂದೆ ಬರೀ ಹಣ ಸಂಪಾದಿಸುವ ಆಸೆ ಇರಲಿಲ್ಲ. ತನ್ನ ಕುಟುಂಬದ ಪರಿಸ್ಥಿತಿಯನ್ನು ಬದಲಿಸಬೇಕೆಂಬ ಹಠವಿತ್ತು.
ಆತ ಪದೇಪದೇ ಮೆಸೇಜ್ ಮಾಡುತ್ತಿದ್ದ. ಕಲಿಯುವ ಆಸಕ್ತಿ ತೋರಿಸುತ್ತಿದ್ದ. ನಾನು ಅವನಿಗೆ ಓದಲು ಪುಸ್ತಕಗಳನ್ನು ಕಳುಹಿಸಿದೆ.
ಅವನು ಆ ಪುಸ್ತಕಗಳನ್ನು ಓದಿದ. ಒಂದೆರಡು ದಿನ ಉತ್ಸಾಹ ತೋರಿಸಿ ಬಿಟ್ಟುಬಿಡಲಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಯಾರೋ ಹೇಳಿದ ಟಿಪ್ಸ್ಗಳನ್ನು ಕುರುಡಾಗಿ ನಂಬಿ ಹಣ ಹೂಡುವ ಬದಲು, ಮಾರುಕಟ್ಟೆಯನ್ನು ಅರ್ಥಮಾಡಿಕೊಳ್ಳಲು ಸಮಯ ಕೊಟ್ಟ.
ಕೇವಲ ಒಂದೂವರೆ ವರ್ಷದ ನಿರಂತರ ಕಲಿಕೆಯ ನಂತರ, ಇಂದು ಅವನು ತನ್ನದೇ ಆದ ತಿಳುವಳಿಕೆಯಿಂದ Intraday ಟ್ರೇಡಿಂಗ್ ಮಾಡುತ್ತಿದ್ದಾನೆ.
ಆದರೆ ಅವನಲ್ಲಿ ನನಗೆ ಇಷ್ಟವಾಗಿದ್ದು ಟ್ರೇಡಿಂಗ್ನಿಂದ ಬಂದ ಹಣವಲ್ಲ. ಕಲಿಯುವ ಬಯಕೆ,ಜವಾಬ್ದಾರಿಯ ಪ್ರಜ್ಞೆ ಮತ್ತು ತನ್ನ ಪರಿಸ್ಥಿತಿಯನ್ನು ಬದಲಿಸಿಕೊಳ್ಳಲು ತೋರಿಸಿದ ತಾಳ್ಮೆ.
ಈತ ಹೆಚ್ಚು ಕಡಿಮೆ ನನಗೆ 1000+ ಚಾರ್ಟ್ Analysis ಮಾಡಿ ಕಳುಹಿಸಿದ್ದಾನೆ.
ಇತ್ತೀಚೆಗೆ ಭಾರತದಲ್ಲಿ Gen Z ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಉದ್ಯೋಗದ ಅನಿಶ್ಚಿತತೆ, ಹೆಚ್ಚುತ್ತಿರುವ ಜೀವನ ವೆಚ್ಚ, ಸೋಶಿಯಲ್ ಮೀಡಿಯಾದ ಪ್ರಭಾವ, ವ್ಯವಸ್ಥೆಯ ವಿರುದ್ಧದ ಆಕ್ರೋಶ, ಬದಲಾವಣೆಯ ಬೇಡಿಕೆಗಳು-ಇವೆಲ್ಲವೂ ಯುವಜನರ ಬದುಕಿನ ಭಾಗವಾಗಿವೆ.
ಯುವಕರು ಪ್ರಶ್ನೆ ಮಾಡಬೇಕು. ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು. ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕು. ಅದರಲ್ಲಿ ಎರಡು ಮಾತಿಲ್ಲ.
ಆದರೆ ಅದರ ಜೊತೆಗೆ ತಮ್ಮ ಬದುಕನ್ನು ಕಟ್ಟಿಕೊಳ್ಳುವ ಕೌಶಲ್ಯವನ್���ೂ ಬೆ��ೆಸಿಕೊಳ್ಳಬೇಕು. ಜ್ಞಾನ ಸಂಪಾದಿಸಬೇಕು. ಆರ್ಥಿಕ ಶಿಸ್ತನ್ನು ಕಲಿಯಬೇಕು. ತಮಗೆ ಸಿಕ್ಕಿರುವ ಅವಕಾಶಗಳನ್ನು ಬಳಸಿಕೊಳ್ಳಬೇಕು.
ಕ್ರಾಂತಿ ಎಂದರೆ ಬೀದಿಗಿಳಿದು ಘೋಷಣೆ ಕೂಗುವುದು ಮಾತ್ರವಲ್ಲ. ತನ್ನ ಪರಿಸ್ಥಿತಿಯನ್ನು ಬದಲಿಸಿಕೊಳ್ಳಲು ಪ್ರತಿದಿನ ಶ್ರಮಿಸುವುದೂ ಒಂದು ಕ್ರಾಂತಿಯೇ.
ನಿನ್ನೆ ಮೊನ್ನೆ ಬಂದು ದೇಶವನ್ನು ಬದಲಿಸುತ್ತೇವೆ ಎಂದು ದೊಡ್ಡ ದೊಡ್ಡ ಮಾತುಗಳನ್ನಾಡುವವರು, ತಾವೇ ದೇಶದ ಉದ್ಧಾರಕರು ಎಂಬಂತೆ ವರ್ತಿಸುವವರು ಮಾತ್ರ ಸ್ಫೂರ್ತಿಯಲ್ಲ.
ಯಾವುದೇ ಪ್ರಚಾರವಿಲ್ಲದೆ, ದೊಡ್ಡ ದೊಡ್ಡ ಭಾಷಣಗಳಿಲ್ಲದೆ, ತನ್ನ ಕುಟುಂಬದ ಕಷ್ಟಗಳ ನಡುವೆಯೂ ಪ್ರತಿದಿನ ಕಲಿಯಲು ಪ್ರಯತ್ನಿಸುವ ಇಂತಹ ನೂರಾರು ಯುವಕರೂ ಮುಖ್ಯ.
ಅವರಲ್ಲಿ ಒಬ್ಬ ಈ ಹುಡುಗ.
ಇಂತಹ ಯುವಕರಿಗೆ ಸರಿಯಾದ ಮಾರ್ಗದರ್ಶನ, ಉತ್ತಮ ಶಿಕ್ಷಣ ಮತ್ತು ಅವಕಾಶಗಳು ಸಿಕ್ಕರೆ, ಅವರು ತಮ್ಮ ಕುಟುಂಬದ ಬದುಕನ್ನಷ್ಟೇ ಅಲ್ಲ, ಸಮಾಜದ ಬದುಕನ್ನೂ ಬದಲಿಸಬಲ್ಲರು.
ನನಗೆ Gen Z ಮೇಲೆ ಭರವಸೆ ಇದೆ.
ಆದರೆ ಆ ಭರವಸೆ ಕೇವಲ ಅವರ ವಯಸ್ಸಿನ ಮೇಲಲ್ಲ. ಅವರಲ್ಲಿ ಬೆಳೆಯುತ್ತಿರುವ ಕಲಿಕೆಯ ಹಸಿವು, ಜವಾಬ್ದಾರಿ ಮತ್ತು ಪರಿಶ್ರಮದ ಮೇಲಷ್ಟೇ.
ದೇಶವನ್ನು ಬದಲಿಸುವ ಮೊದಲು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಕಲಿಯುವ ಯುವಕರೇ ನಿ��ವಾದ ಸ್ಫೂರ್ತಿ.
ಇಂತಹ ಯುವಕರನ್ನು ನಾವು ಪ್ರೋತ್ಸಾಹಿಸೋಣ. ಅವರಿಗೆ ದಾರಿ ತೋರಿಸೋಣ. ಅವಕಾಶ ಸೃಷ್ಟಿಸೋಣ.
ಯಾಕೆಂದರೆ, ದೇಶದ ಭವಿಷ್ಯವನ್ನು ನಿರ್ಧರಿಸುವುದು ದೊಡ್ಡ ದೊಡ್ಡ ಘೋಷಣೆಗಳಷ್ಟೇ ಅಲ್ಲ.ಮೌನವಾಗಿ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿರುವ ಲಕ್ಷಾಂತರ ಯುವಕರ ಪರಿಶ್ರಮ ಕೂಡ.