"ಅಜಾದಿ ಕಾ ಅಮೃತ ಮಹೋತ್ಸವ" ಪ್ರಯುಕ್ತ ಕ್ಷಯರೋಗದ ಕುರಿತು ರಸಪ್ರಶ್ನೆ / ಪ್ರಬಂಧ ಸ್ಪರ್ಧೆ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಸದಸ್ಯರಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಅಯಾ ತಾಲ್ಲೂಕುಗಳಲ್ಲಿ ಹಮ್ಮಿಕೊಳ್ಳಲಾಯಿತು.
ಇಂದು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ "ಅಜಾ��ಿ ಕಾ ಅಮೃತ ಮಹೋತ್ಸವ" ಪ್ರಯುಕ್ತ ಕ್ಷಯರೋಗದ ಕುರಿತು ರಸಪ್ರಶ್ನೆ / ಪ್ರಬಂಧ ಸ್ಪರ್ಧೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ NTEP, ಶಾಲಾ, ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.
ಕ್ಷಯ ಮುಕ್ತ ಭಾರತ ಪ್ರತಿಯೊಬ್ಬರ ಪ್ರತಿಜ್ಞೆಯಾಗಲಿ,
√ಎರಡು ವಾರಕ್ಕಂತ ಹೆಚ್ಚು ದಿನದ ಕೆಮ್ಮು
√ ಅಲ್ಲದೆ ಸಂಜೆ ವೇಳೆ ಜ್ವರ,
√ ರಾತ್ರಿ ವೇಲಕೆ ಬೆವರುವದು.
√ ಕಫದಲ್ಲಿ ರಕ್ತ ಬೀಳುವುದು.
√ ಎದೆ ನೋವು.
√ ಹಸಿವಾಗದಿರುವುದು.
√ ತೂಕ ಇಳಿಕೆ.
ಈ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ಸರಕಾರಿ ಆಸ್ಪತ್ರೆಗೆ ಬೇಟಿ ನೀಡಿ
ಈ ದಿನ ಬಳ್ಳಾರಿ ಜಿಲ್ಲಾ ಕ್ಷಯರೋಗ ಸಮಿತಿ ಸಭೆಯು ಅಪರ ಜಿಲ್ಲಾಧಿಕಾರಿ ಮಾನ್ಯ ಪಿ.ಎಸ್. ಮಂಜುನಾಥ ಸರ್ ಇವರ ಅಧ್ಯಕ್ಷತೆಯಲ್ಲಿ, ನಡೆಯಿತು. ಈ ಸಭೆಯಲ್ಲಿ DHO ಡಾ.ಜನಾರ್ದನ್ ಸರ್, DTO ಡಾ.ಇಂದ್ರಾಣಿ ಮೇಡಂ, WHO ಪ್ರತಿನಿಧಿ ಡಾ.ಹಂಸವೇಣಿ ಮೇಡಂ ಹಾಗೂ ಎಲ್ಲಾ ಕಾರ್ಯಕ್ರಮ ಅಧಿಕಾರಿಗಳು ಸೇರಿದಂತೆ ಇನ್ನಿತರರು ಇದ್ದರು.
ದಿನಾಂಕ:08-03-21ರಂದು ಟಿ.ಬಿ. ಘಟಕಗಳಾದ ಬಳ್ಳಾರಿ & ಹೊಸಪೇಟೆಯ ನಗರ ಆರೋಗ್ಯ ಕೇಂದ್ರಗಳಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಕ್ಷಯರೋಗ ಕಾಯಿಲೆಯಿಂದ ಗುಣಮುಖ ಹೊಂದಿದ ಮಹಿಳೆರಿಗೆ ಆಟದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು ಮತ್ತು ಸ್ಪರ್ಧೆ��ಳಲ್ಲಿ ಗೆದ್ದವರಿಗೆ ಬಹುಮಾನವನ್ನು ನೀಡಿ ಸನ್ಮಾನಿಸಲಾಯಿತು.