ರಾಷ್ಟ್ರವನ್ನು ಕಟ್ಟುವ ಪ್ರತಿಯೊಬ್ಬ ವ್ಯಕ್ತಿಯ ಹಿಂದೆಯೂ, ಆ ವ್ಯಕ್ತಿಯನ್ನು ರೂಪಿಸಿದ ಒಬ್ಬ ಶಿಕ್ಷಕರಿರುತ್ತಾರೆ.
ಕರ್ನಾಟಕದ ಸುಮಾರು 4.5 ಲಕ್ಷ ಶಿಕ್ಷಕರೂ ಸೇರಿದಂತೆ, ಭಾರತದ ಒಂದು ಕೋಟಿಗೂ ಅಧಿಕ ಶಿಕ್ಷಕರು ಪ್ರತಿದಿನವೂ ಮಕ್ಕಳ ಮನಸ್ಸು, ವ್ಯಕ್ತಿತ್ವ ಮತ್ತು ಭವಿಷ್ಯವನ್ನು ತಿದ್ದಿ ತೀಡುತ್ತಿದ್ದಾರೆ.
ರೋಗ ಗುಣಪಡಿಸ���ವ ವೈದ್ಯರಿರಲಿ, ನಾಡು ಕಟ್ಟುವ ಎಂಜಿನಿಯರಿರಲಿ, ಅನ್ನ ನೀಡುವ ರೈತನಿರಲಿ, ಸೇವೆ ಸಲ್ಲಿಸುವ ಅಧಿಕಾರಿಯಿರಲಿ, ನಾವೀನ್ಯತೆ ತರುವ ಉದ್ಯಮಿಯಿರಲಿ ಅಥವಾ ಸಮಾಜವನ್ನು ಮುನ್ನಡೆಸುವ ನಾಯಕರೇ ಇರಲಿ, ಪ್ರತಿಯೊಬ್ಬರ ಹಿಂದೆಯೂ ಶಿಕ್ಷಕರ ಶ್ರಮವಿದೆ. ಮಕ್ಕಳ ಸಾಮರ್ಥ್ಯವನ್ನು ಮೊದಲು ಗುರುತಿಸಿ, ‘ಸಾಧಿಸುವುದು ನಿನಗೆ ಸಾಧ್ಯ’ ಎಂದು ಆತ್ಮವಿಶ್ವಾಸ ತುಂಬುವವರು ಶಿಕ್ಷಕರು.
ಈ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ, ಶಿಕ್ಷಕರ ಈ ಅಮೂಲ್ಯ ಕೊಡುಗೆಗೆ ಗೌರವ ಸಲ್ಲಿಸಲು ಕರ್ನಾಟಕ ಸರ್���ಾರವು ಒಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಇಂದಿನಿಂದ, ಕರ್ನಾಟಕದ ಶಿಕ್ಷಕರೆಲ್ಲರೂ ತಮ್ಮ ಹೆಸರಿನ ಮುಂದೆ ಹೆಮ್ಮೆಯಿಂದ “Tr.” (ಟೀಚರ್) ಎಂಬ ಗೌರವಸೂಚಕ ಪದವನ್ನು ಬಳಸಿ.
ಈ ಪದದ ಹಿಂದೆ ಶಿಕ್ಷಕರ ಜೀವನಪರ್ಯಂತದ ನಿಸ್ವಾರ್ಥ ಸೇವೆಯಿದೆ. “Tr.” ಎನ್ನುವುದು ಕೇವಲ ಒಂದು ಬಿರುದಲ್ಲ; ಪರರ ಬದುಕನ್ನು ರೂಪಿಸುವುದಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ನಿಸ್ವಾರ್ಥ ಚೇತನಗಳಿಗೆ ಇಡೀ ಸಮಾಜವು ಸಲ್ಲಿಸುತ್ತಿರುವ ಕೃತಜ್ಞತೆ.
ಯಾವ ಸಮಾಜ ಶಿಕ್ಷಕರನ್ನು ಗೌರವಿಸುತ್ತದೆಯೋ, ಆ ಸಮಾಜದ ಭವಿಷ್ಯವೂ ಅಷ್ಟೇ ಉಜ್ವಲವಾಗಿರುತ್ತದೆ.
ನಡೆವ ದಾರಿ ತೋರಿ, ನಡತೆಯನ್ನು ತಿದ್ದಿ, ಕನಸುಗಳಿಗೆ ಆಕಾಶ ತೆರೆದಿಟ್ಟು, ನಮ್ಮ ಸಾಮರ್ಥ್ಯದ ಮೇಲೆ ಮೊದಲು ವಿಶ್ವಾಸವಿಟ್ಟ ಪ್ರತಿಯೊಬ್ಬ ಶಿಕ್ಷಕರಿಗೂ ಕರ್ನಾಟಕದ ಜನತೆಯ ಪರವಾಗಿ ಕೋಟಿ ಕೋಟಿ ನಮನಗಳು.
ನಮ್ಮ ಮಕ್ಕಳನ್ನು ರೂಪಿಸಿದ್ದಕ್ಕೆ ನಿಮಗಿದೋ ಧನ್ಯವಾದಗಳು.
ಕರ್ನಾಟಕವನ್ನು ಕಟ್ಟಿದ್ದಕ್ಕೆ ನಿಮಗಿದೋ ಕೃತಜ್ಞತೆಗಳು.
ದೇಶವನ್ನು ಬೆಳೆಸಿದ್ದಕ್ಕೆ ನಿಮಗಿದೋ ಅನಂತ ಪ್ರಣಾಮಗಳು.
“Tr.” ಎಂಬುದು ನಿಮ್ಮ ನಿಸ್ವಾರ್ಥ ಸೇವೆಗೆ ಸಂದಿರುವ ಅರ್ಹ ಗೌರವ.
- ಸನ್ಮಾನ್ಯ ಮುಖ್ಯಮಂತ್ರಿ ಶ್ರೀ @DKShivakumar
ಮೈಕ್ರೋ ಫೈನಾನ್ಸ್ಗಳ ಕಿರುಕುಳಕ್ಕೆ ಕಾನೂನಾತ್ಮಕ ಕಡಿವಾಣ ಹಾಕುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಫೆಬ್ರವರಿ ತಿಂಗಳಿನಲ್ಲಿ ಹೊಸ ಕಾನೂನು ಜಾರಿಯಾದ ನಂತರದಿಂದ ಫೈನಾನ್ಸ್ ಸಿಬ್ಬಂದಿಗಳ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಗಣನೀಯ ಇಳಿಕೆಯಾಗಿದೆ, ಜೊತೆಗೆ ಆತ್ಮಹತ್ಯೆಗಳು ಕೂಡ ಕಡಿಮೆಯಾಗಿದೆ.
ಹಾವೇರಿ ಜಿಲ್ಲೆಯ ಜನರ ಋಣವನ್ನು ತೀರಿಸಲು ಪಣ!
ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಅಕ್ಕಿ ಆಲೂರಿನಲ್ಲಿ 650 ಕೋಟಿ ರೂ.ಗಳಿಗೂ ಅಧಿಕ ವೆಚ್��ದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ಕ್ಷಣಗಳು.
ನನ್ನ ರಾಜಕೀಯ ಬದುಕಿನಲ್ಲಿ ನಯಾಪೈಸೆ ಭ್ರಷ್ಟ ಹಣಕ್ಕಾಗಿ ಕೈಚಾಚಿಲ್ಲ.
ಆತ್ಮಸಾಕ್ಷಿಯಾಗಿ ನಾನು ಸರಿಯಾಗಿದ್ದೀನಿ. ಹೀಗಾಗಿ ನಾನು ಹೆದರುವ, ಜಗ್ಗುವ-ಬಗ್ಗುವ ಪ್ರಶ್ನೆಯೇ ಇಲ್ಲ.
ಹೆಚ್ಚೆಂದರೆ ರಾಜಕೀಯವಾಗಿ ಒಂದೆರಡು ತಿಂಗಳು ನನಗೆ ತೊಂದರೆ ಕೊಡಬಹುದು, ಆದರೆ ಕಾನೂನಾತ್ಮಕವಾಗಿ ಗೆದ್ದೇ ಗೆಲ್ಲುತ್ತೇನೆ.
#MUDA#KarnatakaGovt
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಹಾರ್ದಿಕ ಅಭಿನಂದನೆಗಳು. ಸಂಸತ್ತಿನಲ್ಲಿ ಕನ್ನಡಿಗರ ಪರ ಧ್ವನಿಯಾಗುತ್ತಾ ಜನಪರ ಕೆಲಸ ಮಾಡಿ ಎಂದು ಶುಭ ಹಾರೈಸುತ್ತೇನೆ.
#LokSabhaElections2024
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಿದ ಮತದಾರ ಬಂಧುಗಳಿಗೆ, ಪಕ್ಷದ ಪರವಾಗಿ ಹಗಲಿರುಳು ದುಡಿದ ನಿಷ್ಠಾವಂತ ಕಾರ್ಯಕರ್ತರಿಗೆ ಹಾಗೂ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಿದ ಪಕ್ಷದ ಎಲ್ಲಾ ಮುಖಂಡರಿಗೂ ಧನ್ಯವಾದಗಳು.
ಚುನಾವಣೆಯಲ್ಲಿ ಜಯಗಳಿಸಿರುವ ಕರ್ನಾಟಕ ಕಾಂಗ್ರೆಸ್ನ ಎಲ್ಲಾ 9 ಅಭ್ಯರ್ಥಿಗಳಿಗೆ ಹಾಗೂ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಗಳಿಗೆ ಅಭಿನಂದನೆಗಳು. ತಮ್ಮೆಲ್ಲ��� ಮೂಲಕ ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ನ್ಯಾಯದ ಪರವಾದ ಧ್ವನಿ ಸಂಸತ್ತಿನಲ್ಲಿ ಮೊಳಗಲಿದೆ ಎಂಬ ವಿಶ್ವಾಸವಿದೆ. 1/7
#LoksabhaPollResults #electionresultupdate
ಕರ್ನಾಟಕದಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾಗಿರುವ ಎಲ್ಲಾ ನೂತನ ಸಂಸದರಿಗೆ ಅಭಿನಂದನೆಗಳು. ರಾಜ್ಯದ ಮತ್ತು ದೇಶದ ಮತದಾರರಿಗೆ ಧನ್ಯವಾದಗಳು.
ರಾಜ್ಯದಲ್ಲಿ ಕಳೆದ ಬಾರಿ ಕಾಂಗ್ರೆಸ್ ಪಕ್ಷ ಒಂದು ಸ್ಥಾನ ಗೆದ್ದಿತ್ತು, ಈ ಬಾರಿ 9 ಸ್ಥಾನಗಳಲ್ಲಿ ಜಯಗಳಿಸಿದೆ ಮಾತ್ರವಲ್ಲ ಬಿಜೆಪಿಗಿಂತ ಹೆಚ್ಚಿನ ಶೇಕಡಾವಾರು ಮತ ಗಳಿಸಿದೆ.
#LoksabhaPollResults
ಬಿಜೆಪಿಯವರು ಪ್ರತಿ ಚುನಾವಣೆಯಲ್ಲಿಯೂ ನರೇಂದ್ರ ಮೋದಿಯವರ ಮುಖ ನೋಡಿ ಮತಹಾಕಿ ಎಂದು ಕೇಳುತ್ತಿದ್ದರು. ಈ ಬಾರಿ ಜನ ಮೋದಿಯವರ ಮುಖ ನೋಡಿಯೇ ಬಿಜೆಪಿಗೆ ಬಹುಮತ ಕೊಟ್ಟಿಲ್ಲ.
#LoksabhaPollResults