Official account I Member of Legislative Assembly- Vijayapura | Ex-Union Minister Of State for Railways & Textiles | #NoAdjustmentPolitics | [email protected]
ನಿರಂಕುಶ ಪ್ರಭೃತವಾದಿ, ಧರ್ಮಾಂಧ, ಕನ್ನಡ ದ್ರೋಹಿ ಟಿಪ್ಪು ಸುಲ್ತಾನ ಮೈಸೂರು ಸಂಸ್ಥಾನದ ಅಧಿಕೃತ ಭಾಷೆಯನ್ನು ಪರ್ಷಿಯನ್ ಆಗಿ ಮಾಡಿದ. ಕಂದಾಯ ದಾಖಲೆಗಳಲ್ಲೂ ಕನ್ನಡವನ್ನು ತೆಗೆದು ಪರ್ಷಿಯನ್ ಭಾಷೆ ಹೇರಿಕೆ ಮಾಡಿದ. ಇಂದು ಕಂದಾಯ ಇಲಾಖೆಯಲ್ಲಿ ಬಳಸುವ ತರಿ, ತತ್ತೇ, ಖುಷ್ಕಿ, ಪಂಜರು, ಬಗೆರ್ ಹುಕುಂ ಎಂಬ ಪರ್ಷಿಯನ್ ಪದಗಳನ್ನು ಹೇರಿಕೆ ಮಾಡಿದ್ದು ಟಿಪ್ಪು ಸುಲ್ತಾನನೇ.
ಟಿಪ್ಪುವಿನ ಆರಾಧಕರಾದ ಕಾಂಗ್ರೆಸ್ ಪಕ್ಷವು ಇಂದು ವಿಧಾನ ಸೌಧದಲ್ಲಿ 'ಉರ್ದು ದಿನ' ಆಚರಣೆ ಮಾಡುತ್ತಿರುವುದು ಕನ್ನಡ ಭಾಷೆಗೆ ಬಗೆದ ಅವಮಾನ.
ರಾಜ್ಯೋತ್ಸವ ಆಚರಿಸುವ ತಿಂಗಳಿನಿನಲ್ಲೇ 'ಉರ್ದು ದಿನ' ಆಚರಣೆ ಮಾಡುತ್ತಿರುವುದು ಖಂಡನೀಯ. ಕರ್ನಾಟಕ ಏಕೀಕರಣಕ್ಕೆ ದುಡಿದ ಸಹಸ್ರಾರು ಹೋರಾಟಗಾರರಿಗೆ ಬಗೆದ ಅವಮಾನ. ಕನ್ನಡಿಗರ ಸ್ವಾಭಿಮಾನವನ್ನು ಕೆಣಕುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಬಾರದು. ಕನ್ನಡ ಶಾಲೆಯನ್ನು ಉಳಿಸಲು, ಬೆಳೆಸಲು ಸರ್ಕಾರ ಕೆಲಸ ಮಾಡಬೇಕು. ಕನ್ನಡ ಸಾಹಿತ್ಯಕ್ಕ�� ಇನ್ನೂ ಹೆಚ್ಚಿನ ಪ್ರಚಾರ, ಪ್ರೋತ್ಸಾಹ ಸಿಗಬೇಕು. ಕನ್ನಡ ಭಾಷಾಭಿಮಾನ ಬೆಳಗಿಸಲು ಸರ್ಕಾರ ಕೆಲಸ ಮಾಡಬೇಕೆ ಹೊರತು ಉರ್ದು ದಿನ ಆಚರಣೆ ಮಾಡುವುದು ತರವಲ್ಲ
ಧಾರ್ಮಿಕ ಹಾಗೂ ಆಧ್ಯಾತ್ಮಿಕ ಮಹತ್ಕಾರ್ಯಗಳಿಗೆ ಹೆಸರುವಾಸಿಯಾಗಿರುವ ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಸಮೀಪವಿರುವ ಶ್ರೀ ಅಮರನಾಥೇಶ್ವರ ಮಹಾದೇವ ಮಠ (ನಾಗಸಾಧು ಆಶ್ರಮ)ಕ್ಕೆ ಇಂದು ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ, ನಾಡಿಗೆ ಒಳಿತಾಗಲೆಂದು ಪ್ರಾರ್ಥಿಸಲಾಯಿತು. ಇದೇ ವೇಳೆ ಮಠದ ಪೀಠಾಧಿಕಾರಿಗಳಾದ ಶ್ರೀ ಮಹಂತ ಸಹದೇವನಂದ ಗಿರಿ ಮಹಾರಾಜರ ದರ್ಶನಾಶೀರ್ವಾದ ಪಡೆದುಕೊಳ್ಳಲಾಯಿತು. ಮುಖಂಡರು, ಹಿತೈಷಿಗಳು, ಕಾರ್ಯಕರ್ತರು, ಅಭಿಮಾನಿಗಳು, ಶ್ರೀಮಠದವರು ಉಪಸ್ಥಿತರಿದ್ದರು.
ರಾಯಚೂರು ಜಿಲ್ಲೆಯ ಸಿರವಾರ ಗ್ರಾಮದಲ್ಲಿ ಇಂದು ವೀರ ಸಾವರ್ಕರ್ ಯುವ ಸೇನೆ ವತಿಯಿಂದ ಹಮ್ಮಿಕೊಂಡಿದ್ದ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದೆ. ಇದೇ ವೇಳೆ ಆತ್ಮೀಯವಾಗಿ ಸಮಿತಿಯವರು ಹಾಗೂ ಅಭಿಮಾನಿಗಳು ಸನ್ಮಾನಿಸಿದರು. ಸ್ವಾಮೀಜಿಗಳು, ಮುಖಂಡರು, ಹಿತೈಷಿಗಳು, ಅಭಿಮಾನಿಗಳು, ದೇಶ ಭಕ್ತರು, ಹಿಂದೂ ಕುಲಬಾಂಧವರು, ಮಹಿಳೆಯರು ಉಪಸ್ಥಿತರಿದ್ದರು.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಇಂದು ಗಜೇಂದ್ರ ಯುವಕ ಮಂಡಳದ ವತಿಯಿಂದ ಹಮ್ಮಿಕೊಂಡಿದ್ದ ಹಿಂದೂ ಮಹಾಗಣಪತಿ ಉತ್ಸವ ಕಾರ್ಯಕ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದೆ. ಇದಕ್ಕೂ ಮೊದಲಯ ಹಿಂದೂ ಕಾರ್ಯಕರ್ತರು ಹೂ ಮಳೆ ಸುರಿಸಿ ಆತ್ಮೀಯವಾಗಿ ಪಟ್ಟಣಕ್ಕೆ ಸ್ವಾಗತಿಸಿ ಸತ್ಕರಿಸಿದರು. ಇದೇ ವೇಳೆ ವೀರ ರಾಣಿ ಕಿತ್ತೂರು ಚೆನ್ನಮ್ಮನ ವೃತ್ತದಲ್ಲಿರುವ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದೆ. ಮುಖಂಡರು, ಹಿತೈಷಿಗಳು, ಅಭಿಮಾನಿಗಳು, ಕಾರ್ಯಕರ್ತರು, ದೇಶ ಭಕ್ತರು, ಹಿಂದೂ ಕುಲಬಾಂಧವರು ಉಪಸ್ಥಿತರಿದ್ದರು.
The demolition of the 160-year-old Kumara Krupa Guest House, a historical landmark, to convert the property into the Chief Minister’s official residence raises serious concerns about the Congress Government’s approach to heritage conservation and public assets.
Kumara Krupa was one of Bengaluru’s oldest surviving bungalows. Maharaja Krishnaraja Wadiyar acquired the property from the descendants of Dewan K. Sheshadri Iyer and made it a State asset. Over the years, the iconic property hosted several dignitaries, including former Chief Minister Nijalingappa, judges and other prominent personalities.
At a time when the coffers are empty, spending public money on such a project raises questions about fiscal priorities. More importantly, the demolition has resulted in the loss of an important part of Bengaluru’s historical and cultural heritage. It also overlooks the contributions of Dewan K. Sheshadri Iyer, who played a significant role in transforming Bengaluru into a modern city. The Chief Minister's attitude of 'My Way, or Highway' is highly objectionable and deserves condemnation. The Government should have held public consultations before demolition.
ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ತಾಂಬಾ ಗ್ರಾಮದಲ್ಲಿ ಭಾನುವಾರ ರಾತ್ರಿ ಶ್ರೀ ಶಿವಗಣೇಶ ಯುವಕ ಮಂಡಳ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಗಣೇಶೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದೆ. ಇದಕ್ಕೂ ಮೊದಲು ವಿಘ್ನ ನಿವಾರಕ ಶ್ರೀ ವಿಘ್ನೇಶ್ವರನಿಗೆ ಪೂಜೆ ಸಲ್ಲಿಸಿ, ನಾಡಿಗೆ ಒಳಿತಾಗಲೆಂದು ಪ್ರಾರ್ಥಿಸಲಾಯಿತು. ಸ್ವಾಮೀಜಿಗಳು, ಮುಖಂಡರು, ಅಭಿಮಾನಿಗಳು, ಕಾರ್ಯಕರ್ತರು, ದೇಶ ಭಕ್ತರು, ಹಿಂದೂ ಕುಲಬಾಂಧವರು, ಮಹಿಳೆಯರು ಸಾವಿರಾರು ಸಂಖ್ಯೆಯಲ್ಲಿ ಉಪ���್ಥಿತರಿದ್ದರು.
ಬಿಡದಿ ಅನ್ನದಾತರ ಮೇಲೆ ಬಲಪ್ರಯೋಗ ಮಾಡುತ್ತಿರುವುದು ಅಕ್ಷಮ್ಯ. ಬಿಡದಿ ರೈತರು ಸರ್ಕಾರದ ಸೌಲಭ್ಯವಾಗಲಿ, ಪರಿಹಾರವಾಗಲಿ ಕೇಳುತ್ತಿಲ್ಲ. ತಮ್ಮ ಭೂಮಿಯನ್ನು ಒತ್ತಾಯಪೂರ್ವಕವಾಗಿ ಕಸಿದು ಕೊಳ್ಳುತ್ತಿರುವುದನ್ನು ಪ್ರತಿಭಟಿಸುತ್ತಿದ್ದಾರೆ. ಅವರನ್ನು ಕೂಡಲೇ ಗೌರವಪೂರ್ವಕವಾಗಿ ಬಿಡುಗಡೆ ಗೊಳಿಸಬೇಕು ಎಂದು ಆಗ್ರಹಿಸುತ್ತೇನೆ
ಬಿಡದಿ ಭೂಮಿಯ ಮಣ್ಣಿನ ಗುಣಮಟ್ಟ, ನೀರಾವರಿ ಸೌಲಭ್ಯಗಳಿಂದ ಹಲವು ಬೆಳೆಗಳನ್ನು ಬೆಳೆಯಬಹುದಾಗಿದೆ. ಈ ಭಾಗದಿಂದ ನಿತ್ಯ ಬೆಂಗಳೂರಿಗೆ 6 ಲಕ್ಷ ಲೀಟರ್ ಹಾಲು ಸರಬರಾಜು ಆಗುತ್ತಿದೆ ಹಾಗೂ ಈ ಪ್ರದೇಶದಲ್ಲಿ 2 ಲಕ್ಷಕ್ಕೊ ಹೆಚ್ಚು ತೆಂಗಿನ ಮರಗಳಿವೆ. ರೇಷ್ಮೆ ಕೃಷಿ, ಹೈನುಗಾರಿಕೆ, ತೆಂಗು, ಮಾವು, ಅಡಿಕೆಯನ್ನು ಬೆಳೆದು ರೈತರು ಆರ್ಥಿಕವಾಗಿ ಸಮೃದ್ಧರಾಗಿದ್ದಾರೆ. ಇಲ್ಲಿರು��� ಫಲವತ್ತಾದ ಮಣ್ಣಿನಿಂದ ಬಹುವಿಧದ ಬೆಳೆಯನ್ನು [multicropping] ಇಲ್ಲಿನ ಭಾಗದ ರೈತರು ಬೆಳೆಯುತ್ತಿದ್ದಾರೆ. ಸುಮಾರು 6500 ಎಕರೆಯ ಅತ್ಯಂತ ಫಲವತ್ತಾದ, ನೀರಾವರಿ ಭೂಮಿಯನ್ನು ವಸತಿ ಉದ್ದೇಶಕ್ಕೆ ಸ್ವಾಧೀನಪಡೆಸಿಕೊಳ್ಳುತ್ತಿರುವುದು ಅವೈಜ್ಞಾನಿಕ, ಅವಾಸ್ತವಿಕ, ರೈತ ವಿರೋಧಿ ನಿರ್ಧಾರವಾಗಿದೆ ಎಂದು ಇಂದು ಸದನದಲ್ಲಿ ಸರ್ಕಾರದ ಗಮನ ಸೆಳೆಯಲಾಯಿತು
ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ರೈತರ ಹಿತಾಸಕ್ತಿಯನ್ನು ಕಾಪಾಡುವುದು ಸರ್ಕಾರದ ಆದ್ಯ ಕರ್ತವ್ಯವಾಗಬೇಕು. ಆಹಾರ ಭದ್ರತೆಗೆ, ಪರಿಸರವನ್ನು ಕಾಪಾಡುವುದಕ್ಕೆ ಕೃಷಿ ಹಾಗೂ ಅರಣ್ಯ ಪ್ರದೇಶವನ್ನು ರಕ್ಷಿಸಬೇಕು. ಕೃಷಿಗೆ ಯೋಗ್ಯವಲ್ಲದ ಭೂಮಿಗಳಲ್ಲಿ ಕೈಗಾರಿಕೆಗಳು, ವಸತಿ ಯೋಜನೆಗಳನ್ನು ರೂಪಿಸಬೇಕೇ ಹೊರತು ಸಮೃದ್ಧವಾದ ಕೃಷಿ ಭೂಮಿಯಲ್ಲಲ್ಲ.
ಪಟ್ಟಭದ್ರ ಹಿತಾಸಕ್ತಿಗಳಿಗೆ ಮಣಿದು ಕೃಷಿ ಭೂಮಿಯನ್ನು ವಸತಿ ಯೋಜನೆ, ಎಐ ಸಿಟಿಗೆ ಮೀಸಲಿಡುವುದು ಸರ್ಕಾರದ ದೂರದರ್ಶಿತ್ವದ ಕೊರತೆ ತೋರಿಸುತ್ತದೆ. ಸರ್ಕಾರವು ಬೆಂಗಳೂರನ್ನು ದಟ್ಟಣೆಯಿಂದ ಕಡಿಮೆ ಮಾಡಬೇಕಾದರೆ ಬೇರೆ ಜಿಲ್ಲೆಗಳಲ್ಲಿ ಉತ್ತಮ ಮೂಲಭೂತ ಸೌಕರ್ಯ, ಉದ್ಯೋಗ ಸೃಜನೆ, ರಸ್ತೆ ಸೌಕರ್ಯವನ್ನು ಕೊಟ್ಟು ಅಭಿವೃದ್ಧಿ ಮಾಡಲಿ, ನೂರಾರು ವರ್ಷಗಳಿಂದ ಬಂಗಾರದಂತ ��ೆಳೆ ಬೆಳೆಯುತ್ತಿ��ುವ ಬಿಡದಿಯ ಕೃಷಿ ಭೂಮಿಯನ್ನಲ್ಲ.
ಕರ್ನಾಟಕ ಲೋ(ಪ)ಕ ಸೇವಾ ಆಯೋಗದ ಹಗರಣಗಳನ್ನು ತನಿಖೆ ಮಾಡುವ SIT ತನ್ನ ತನಿಖಾ ವರದಿಯನ್ನು ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ನೀಡಬೇಕಾಗಿದೆ.
ತನಿಖೆಯಲ್ಲಿ 'ಮೂಗು ತೂರಿಸಲು' ಸರ್ಕಾರಕ್ಕೆ ಅವಕಾಶವಿರುವುದಿಲ್ಲ. ರಾಜಕೀಯ ಹಸ್ತಕ್ಷೇಪವಿಲ್ಲದೆ ತನಿಖೆ ಮಾಡಬಹುದು. ರಾಜಕೀಯ ಪ್ರಭಾವ ಬಳಸಿ ತನಿಖೆಯಿಂದ ಬಿಡುಗಡೆಗೊಳ್ಳಬಹುದು ಎಂದು ಯೋಚಿಸುತ್ತಿದ್ದ ಕೆಲ 'ಪ್ರಭಾವಿಗಳ', 'ದಲ್ಲಾಳಿಗಳ' ನಿದ್ದೆಗೆಡಿಸಿದೆ.
ಕರ್ನಾಟಕ ಉಚ್ಚ ನ್ಯಾಯಾಲಯ ನೀಡಿರುವ ಆದೇಶವನ್���ು ಮಾರ್ಪಾಡು ಮಾಡಲು ಮುಖ್ಯ ಮಂತ್ರಿಗಳು ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗುವುದಾಗಿ ಹೇಳಿದ್ದಾರೆ.
ನ್ಯಾಯಾಲಯದ ಮೇಲೆ ನಿಮಗೆ ನಂಬಿಕೆ ಇಲ್ಲವೇ ? ಅಥವಾ ತನಿಖಾಧಿಕಾರಿಗಳ ಮೇಲೆ ��ಿಶ್ವಾಸವಿಲ್ಲವೇ ? ತಮ್ಮ 'ಸಂಪನ್ಮೂಲಗಳೇ' ತನಿಖಾಧಿಕಾರಿಯಾಗಲು ಏಕೆ ಬಯಸುತ್ತೀರಿ ? ಸರ್ಕಾರ ಯಾರನ್ನು ರಕ್ಷಿಸಲು ಹೋಗುತ್ತಿದೆ ಎಂಬುದನ್ನು ಸ್ಪಷ್ಟಪಡಿಸಬೇಕು. ರಾಜಕೀಯ ಹಸ್ತಕ್ಷೇಪ ಮಾಡಲಾಗದೆ ತಮ್ಮ 'ಬಂಟರನ್ನು' ರಕ್ಷಿಸಲು ಸಾಧ್ಯವಿಲ್ಲ ಅನ್ನುವುದು ಚಿಂತೆಯೋ ಅಥವಾ SIT ಯಲ್ಲಿ ತಮ್ಮ 'ಸಂಪನ್ಮೂಲ' ಇಲ್ಲವೆಂಬುದು ಸಮಸ್ಯೆಯೋ ?
2 ದಿನಗಳ ಹಿಂದೆಯಷ್ಟೇ ಆಯೋಗವನ್ನು ಮುಚ್ಚುತ್ತೇವೆ ಎಂದು ವೀರಾವೇಶದಿಂದ ಹೇಳಿದವರು ಇಂದು ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸುತ್ತೇವೆ ಎಂದು ���ಡುಗುತ್ತಿರುವುದೇಕೆ ?
ರಾಜ್ಯದ ಜನತೆ ಅದರಲ್ಲೂ ಕಷ್ಟಪಟ್ಟು ಓದಿಕೊಂಡು ಸರ್ಕಾರಿ ಉದ್ಯೋಗಕ್ಕಾಗಿ ಹವಣಿಸುತ್ತಿರುವ ಯುವ ಸಮೂಹ ನಿಮ್ಮ ಉತ್ತರಕ್ಕೆ ಕಾಯುತ್ತಿದ್ದಾರೆ.
@AKSSAofficial I
ಕಾಂಗ್ರೆಸ್ ಸರ್ಕಾರದ 'ಧೃಡ ಸಂಕಲ್ಪ���ಿದು'
➥ಶಾಲಾ ಮಕ್ಕಳಿಗೆ ಶೂ ಇಲ್ಲ, ಬ್��ಾಗ್ ಇಲ್ಲ: GBA ಶಾಲೆಯ 23 ಸಾವಿರ ಮಕ್ಕಳು ಸೌಲಭ್ಯ ವಂಚಿತರು
➥KSRTC ಬಸ್ಸುಗಳಲ್ಲಿ ನಿರ್ವಹಣೆ ಕೊರತೆ, ಮೊಬೈಲ್ ಟಾರ್ಚ್ ಲೈಟಿನಲ್ಲಿ ಬಸ್ ಪ್ರಯಾಣ
➥ಲೋಕೋಪಯೋಗಿ ಸಹಿತ 3 ಇಲಾಖೆಗಳಲ್ಲಿ ಗುತ್ತಿಗೆದಾರರ ಬಾಕಿ ಬಿಲ್ ಮೊತ್ತ 36136 ಕೋಟಿ ರೂ
➥ವಿತ್ತೀಯ ಕೊರತೆ 3% ಆಗಿದೆ
➥Revenue Liability 22,000 ಕೋಟಿಯಾಗಿದೆ
➥ಜಿಲ್ಲಾಸ್ಪತ್ರೆಗಳ ನಿರ್ವಹಣೆ, ಸಿಬ್ಬಂದಿ ವೇತನ ಪಾವತಿ ಮಾಡುವುದಕ್ಕೂ ಹಣವಿಲ್ಲ
➥ಉದ್ಯೋಗಾವಕಾಶ ಸೃಷ್ಟಿಸುವ ಇನ್ನೋವೇಶನ್ ಟೆಕ್ನಾಲಜಿ ಪಾರ್ಕ್ ಗೆ ಅನುದಾನವಿಲ್ಲ
➥ಬೀದಿ ��ಾಯಿಗಳ ಕಡಿತದಿಂದ ದುರ್ಮಣಕ್ಕೀಡಾದವರಿಗೆ ಪರಿಹಾರ ನೀಡಲು ಹಣವಿಲ್ಲ
➥ಶಾಲಾ ಮಕ್ಕಳ ಸಮವಸ್ತ್ರಕ್ಕೆ ಹಣವಿಲ್ಲ
➥ಕನ್ನಡ ಸಂಸ್ಕೃತಿ ಇಲಾಖೆ ಸಿಬ್ಬಂದಿ ವೇತನ, ಭತ್ಯೆಗಳಿಗೆ ದುಡ್ಡಿಲ್ಲ
➥ದಲಿತ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ಲಾಪ್ಟಾಪ್, ಫೆಲೋಶಿಪ್, ಭೋಜನ ವೆಚ್ಚಕ್ಕೆ ಅನುದಾನದ ಕೊರತೆ.
➥ಹಣಕಾಸು ಪರಿಸ್ಥಿತಿ ಸರಿಯಿಲ್ಲವೆಂದು ��ಾಲಾ ಕಾಲೇಜುಗಳ ಉನ್ನತೀಕರಣ 2 ವರ್ಷ ಮುಂದಕ್ಕೆ
➥ವಸತಿ ಶಾಲೆಗಳಿಗೆ ಶೇ 10 ಪ್ರವೇಶ ಹೆಚ್ಚಳಕ್ಕೆ 11.29 ಕೋಟಿ ಅನುದಾನವಿಲ್ಲ
➥8.92 ಲಕ್ಷ ಹಾಲು ಉತ್ಪಾದಕರಿಗೆ 602.84 ಕೋಟಿ ರೂ ಬಾಕಿ ಉಳಿಸಿಕೊಂಡ ಸರ್ಕಾರ
➥ಅಲೆಮಾರಿ ಜನಾಂಗದ ಮನೆ ನಿರ್ಮಾಣಕ್ಕೆ ಹಣವಿಲ್ಲ
➥ವಿದ್ಯಾರ್ಥಿ ನಿಲಯದಲ್ಲಿ ಅಕ್ಕಿ ಇಲ್ಲ, ಸಿದ್ದಗಂಗಾ ಮಠದಿಂದ ಸಾಲ ಪಡೆದ ವಾರ್ಡನ್ ಗಳು
➥ಟ್ರಾಮಾ ಕೇರ್ ಕೇಂದ್ರಕ್ಕೆ ಶೇ 60 ರಷ್ಟು ಕಡಿತ
ಅತಿಥಿ ಶಿಕ್ಷಕರಿಗೆ ಸಕಾಲದಲ್ಲಿ ಸಂಬಳವಿಲ್ಲ
➥ದ್ವಿತೀಯ ಪಿ ಯು ಸಿ ಪರೀಕ್ಷಾ ��ಿಬ್ಬಂದಿ ಸಂಭಾವನೆ ಪಾವತಿಗೂ ಅನುದಾನ ಕೊರತೆ
➥ಕಲ್ಯಾಣ ಕರ್ನಾಟಕದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಅನುದಾನದ ಕೊರತೆ
➥ಹೊರರಾಜ್ಯದ ಗಡಿ ಕನ್ನಡಿಗರಿಗೆ ಅನುದಾನದ ಕೊರತೆಯಿಂದ ಸೌಲಭ್ಯವಿಲ್ಲ
➥ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ವಸತಿ ಶಾಲೆ, ಕಾಲೇಜುಗಳಲ್ಲಿನ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ತಟ್ಟೆ, ಲೋಟ, ದಿಂಬು , ಹಾಸಿಗೆ ಖರೀದಿ ಮಾಡೋಕೆ ಹಣವಿಲ್ಲ
➥ಹೊಸ ವಿದ್ಯಾರ್ಥಿ ನಿಲಯ ಮಂಜೂರಾತಿಗೆ ಹಣವಿಲ್���
ಕೆರೆ ನಿರ್ಮಾಣಕ್ಕೆ ಹಣವಿಲ್ಲ
➥ಗಂಗಾ ಕಲ್ಯಾಣ ಯೋಜನೆಗಳಿಗೆ ಬಿಡಿಗಾಸಿಲ್ಲ
@CMofKarnataka I #CongressFailsKarnataka I #ಮತದಾನದ_ದಿನದಂದು_ಮೈಮರೆಯದಿರಿ