ಒಬ್ಬ ಹಳ್ಳಿಯ ��ುಡುಗನಾಗಿ,
ಮಧ್ಯಮವರ್ಗದ ಯುವಕನಾಗಿ,
ಇವರ ಕಷ್ಟ ನಾ ಬಲ್ಲೆ,
@KEA_karnataka
ನಿಮಗೆ ಅರ್ಥವಾದೀತಾ?
ನಿಮ್ಮ ಮನಸ್ಸಿಗೆ ತಾಗೀತಾ?
ಬದಲಾವಣೆ ನಿರೀಕ್ಷಿಸಬಹುದಾ? @KEA_karnataka
H Prasanna Sir, kindly look into this.
@KEA_karnataka KEA ನಿರ್ದೇಶಕರಲ್ಲಿ ಕೇಳಿಕೊಳ್ಳುವುದೇನೆಂದರೆ ಅಕ್ಟೋಬರ್ 4ರಂದು ನಿಗದಿಯಾಗಿರುವ VAO ನನ್ನ ತವರು ಜಿಲ್ಲೆ, ಕೊಪ್ಪಳವಾಗಿರುವುದರಿಂದ ಎಕ್ಸಾಮ ಬರೆಯಲು ಗಂಗಾವತಿಯಲ್ಲಿ ಅವಕಾಶವನ್ನು ಕಲ್ಪಿಸಿದ್ದು ನಾನು ವಿಶೇಷ ಚೇತನನಾಗಿದ್ದು ಸದ್ಯ ಧಾರವಾಡದಲ್ಲಿ ಪರೀಕ್ಷಾ ತಯಾರಿಗೋಸ್ಕರ ಬಂದಿ��್ದು ನಮಗೆ ಧಾರವಾಡದಲ್ಲಿ ಅವಕಾಶ ಮಾಡಿಕೊಟ್ಟರೆ ಅನುಕೂಲವಾಗುತ್ತೆ
ಗ್ಯಾರಂಟಿ ಸಮಿತಿ = ಕಾಂಗ್ರೆಸ್ ಗಂಜಿ ಕೇಂದ್ರ!
❌ಶಿಕ್ಷಕರ ನೇಮಕಾತಿಗೆ ಕಾಸಿಲ್ಲ!
❌SC, ST, OBC ಹಾಸ್ಟೆಲ್ಗಳಲ್ಲಿ ಮಕ್ಕಳಿಗೆ ನೆಟ್ಟಗೆ ಊಟ ಕೊಡಲು ಹಣವಿಲ್ಲ!
❌ವಿವಿಗಳಲ್ಲಿ ಪ್ರಾಧ್ಯಾಪಕರು, ಕುಲಪತಿಗಳ ನೇಮಕಕ್ಕೆ ದುಡ್ಡಿಲ್ಲ!
❌ರೈತರ ಬರ ಪರಿಹಾರಕ್ಕೆ ಹಣವಿಲ್ಲ!
❌ಗೃಹಲಕ್ಷ್ಮಿ ಬಾಕಿ ಹಣ ನೀಡಲು ಕಾಸಿಲ್ಲ!
❌ರಸ್ತೆಯಲ್ಲಿ ಕೆಟ್ಟು ನಿಲ್ಲುತ್ತಿರುವ ಸರ್ಕಾರಿ ಬಸ್ಸುಗಳ ರಿಪೇರಿಗೆ ಹಣವಿಲ್ಲ!
❌NHM ನೌಕರರಿಗೆ ತಿಂಗಳುಗಳಿಂದ ಸಂಬಳ ಕೊಡಲು ದುಡ್ಡಿಲ್ಲ!
ಆದರೆ... ಕಾಂಗ್ರೆಸ್ ಕಾರ್ಯಕರ್ತರ ಜೇಬು ತುಂಬಿಸುವ 'ಗ್ಯಾರಂಟಿ ಸಮಿತಿ' ಎಂಬ ಗಂಜಿ ಕೇಂದ್ರ ತೆರೆದು ಕ��್ನಡಿಗರ ಬೆವರಿನ ತೆರಿಗೆ ಹಣ ಪೋಲು ಮಾಡಲು ಮಾತ್ರ ನೂರಾರು ಕೋಟಿ ಇದೆ, ಅಲ್ಲವೇ?
ನಾಚಿಕೆಯಾಗಬೇಕು ಸಿಎಂ @DKShivakumar ಅವರೇ ನಿಮ್ಮ ಲಜ್ಜೆಗೇಡಿ @INCKarnataka
ಸರ್ಕಾರಕ್ಕೆ.
ಜನಸಾಮಾನ್ಯರು ಬಿಡಿ, ಸ್ವತಃ ನಿಮ್ಮ ಪಕ್ಷದ ಕಾರ್ಯಕರ್ತರೇ ನಿಮ್ಮನ್ನು ಮುಖ್ಯಮಂತ್ರಿಯಾಗಿ ಒಪ್ಪಿಕೊಂಡಿಲ್ಲ. ಈಗ ಕುರ್ಚಿ ಉಳಿಸಿಕೊಳ್ಳಲು ಕನ್ನಡಿಗರ ತೆರಿಗೆ ಹಣವನ್ನು ಪೋಲು ಮಾಡುತ್ತಿದ್ದೀರಿ.
ಕನ್ನಡಿಗರ ತೆರಿಗೆ ಹಣ ನಿಮ್ಮ ಕಾಂಗ್ರೆಸ್ ಪಾರ್ಟಿ ಫಂಡ್ ಅಲ್ಲ ಸ್ವಾಮಿ. ಜನಬೆಂಬಲ ಇಲ್ಲದ ಇಂತಹ ದಗಾಕೋರ ಆಡಳ���ತ ನಡೆಸುವ ಕುರ್ಚಿ ಇದ್ದರೆಷ್ಟು, ಬಿಟ್ಟರೆಷ್ಟು ಸ್ವಾಮಿ? ತಕ್ಷಣ ರಾಜೀನಾಮೆ ಕೊಟ್ಟು ಮನೆಗೆ ನಡೀರಿ!
#CongressLootsKarnataka
#CongressFailsKarnataka
KPSC ಅಕ್ರಮವನ್ನು ಸ್ಟಿಂಗ್ ಆಪರೇಷನ್ ಮೂಲಕ ಬಯಲಿಗೆಳೆದು,
KPSC ಭ್ರಷ್ಟಾಚಾರವನ್ನು ಜಗಜ್ಜಾಹೀರು ಮಾಡಿದ
ರಣಭೇಟೆಗಾರ ವಿದ್ಯಾರ್ಥಿಗಳ ಕುಲತಿಲ��! ✊🔥
ನಮ್ಮ AKSSA ರಾಜ್ಯಾಧ್ಯಕ್ಷರಾದ
ಶ್ರೀಯುತ ಕಾಂತ್ ಕುಮಾರ್ ಸರ್ ����❤️
ವಿದ್ಯಾರ್ಥಿಗಳ ಹಕ್ಕುಗಳಿಗಾಗಿ,
ನಿರುದ್ಯೋಗಿಗಳ ನ್ಯಾಯಕ್ಕಾಗಿ,
ಅರ್ಹ ಅಭ್ಯರ್ಥಿಗಳ ಭವಿಷ್ಯಕ್ಕಾಗಿ
ನಿರಂತರವಾಗಿ ಹೋರಾಡುತ್ತಿರುವ ಹೋರಾಟದ ನಾಯಕ! 💪🔥
Hello @KEA_karnataka@CMofKarnataka@osd_cmkarnataka ಕರ್ನಾಟಕದಲ್ಲಿ ಕನ್ನಡಕ್ಕೆ ಅಗ್ರಸ್ಥಾನ ಅತ್ಯಗತ್ಯ.
ನೀವೇ ಕನ್ನಡವನ್ನು ಮತ್ತು ಕನ್ನಡದ ಆಕಾಂಕ್ಷಿಗಳನ್ನು ಕೊಲ್ಲಬೇಡಿ.
ದಯವಿಟ್ಟು ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸ���.
ಕರ್ನಾಟಕ ಸರ್ಕಾರವು ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಘೋಷಿಸಿರುವ ಸಂದರ್ಭದಲ್ಲಿ, ಸರ್ಕಾರಿ ಉದ್ಯೋಗಗಳ ನೇಮಕಾತಿ ಪರೀಕ್ಷೆಯಲ್ಲಿ ಇಂಗ್ಲಿಷ್ ಜ್ಞಾನವನ್ನು ಕಡ್ಡಾಯಗೊಳಿಸುವ ಮೂಲಕ ಇಂಗ್ಲಿಷ್ ಗೊತ್ತಿಲ್ಲದ ಕನ್ನಡಿಗರನ್ನು ಸರ್ಕಾರಿ ಉದ್ಯೋಗಗಳಿಂದ ದೂರವಿಡಲು ಮುಂದಾಗಿರುವುದು ಅತ್ಯಂತ ಖಂಡನೀಯ. ಇದರ ಹಿಂದೆ ಪರಭಾಷಾ ಐಎಎಸ್ ಲಾಬಿ ಇರುವುದು ಸ್ಪಷ್ಟ. ಸರ್ಕಾರ ಇಂಥ ��ಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಿ, ಇಲ್ಲವಾದಲ್ಲಿ ಇಂಥ ಅಧಿಕಾರಿಗಳ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಸ್ವರೂಪದ ಹೋರಾಟ ಸಂಘಟಿಸಬೇಕಾಗುತ್ತದೆ.
ಕನ್ನಡವೇ ಕರ್ನಾಟಕ ಸರ್ಕಾರದ ಆಡಳಿತ ಭಾಷೆ. ಸರ್ಕಾರದ ಕಚೇರಿಗಳಲ್ಲಿ ಆಡಳಿತ, ಕಡತ ವಿಲೇವಾರಿ, ಪತ್ರ ವ್ಯವಹಾರ ಹಾಗೂ ಸಾರ್ವಜನಿಕ ಸೇವೆಗಳು ಕನ್ನಡದಲ್ಲೇ ನಡೆಯಬೇಕೆಂಬುದು ಸರ್ಕಾರದ ನೀತಿಯಾಗಿದೆ. ಹೀಗಿರುವಾಗ ಸರ್ಕಾರಿ ಉದ್ಯೋಗಕ್ಕೆ ನೇಮಕಾತಿ ಮಾಡುವಾಗ ಇಂಗ್ಲಿಷ್ ಜ್ಞಾನವನ್ನು ಕಡ್ಡಾಯಗೊಳಿಸುವ ಅಗತ್ಯವಾದರೂ ಏನು? ಐ ಎಎಸ್ ಬಾಬುಗಳಿಗೆ ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆಯಾಗಿ ಇರುವುದು ಇಷ್ಟವಿಲ್ಲ ಎಂಬ ಕಾರಣಕ್ಕೆ ಈ ರೀತಿ ಮಾಡುತ್ತಿದ್ದಾರಲ್ಲವೇ?
ಸರ್ಕಾರಿ ಉದ್ಯೋಗಕ್ಕೆ ��ರ್ಹತೆ ಪಡೆಯಬೇಕಾದ ಕನ್ನಡಿಗನಿಗೆ ಇಂಗ್ಲಿಷ್ ಗೊತ್ತಿಲ್ಲ ಎಂಬ ಒಂದೇ ಕಾರಣಕ್ಕೆ ಅವಕಾಶ ನಿರಾಕರಿಸುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದ ಕ್ರಮ. ಇದು ಗ್ರಾಮೀಣ ಪ್ರದೇಶದ ಕನ್ನಡಿಗರು, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಯುವಜನರು ಹಾಗೂ ಇಂಗ್ಲಿಷ್ ಶಿಕ್ಷಣದ ಅವಕಾಶ ಸಿಗದ ಪ್ರತಿಭಾವಂತ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ.
ಸರ್ಕಾರದ ಆಡಳಿತ ಭಾಷೆ ಕನ್ನಡವಾಗಿರುವುದರಿಂದ ಸರ್ಕಾರಿ ಸೇವೆಗೆ ಅಗತ್ಯವಿರುವ ಭಾಷಾ ಜ್ಞಾನ ಕನ್ನಡವಾಗಿರಬೇಕು. ಯಾವುದೇ ಸಂ���ರ್ಭದಲ್ಲಿ ಆಡಳಿತಾತ್ಮಕವಾಗಿ ಇಂಗ್ಲಿಷ್ನಲ್ಲಿರುವ ಮಾಹಿತಿಯ ಅಗತ್ಯವಿದ್ದರೆ, ಸರ್ಕಾರದಲ್ಲೇ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಅನುವಾದ ಇಲಾಖೆಯ ಮೂಲಕ ಅದನ್ನು ಕನ್ನಡಕ್ಕೆ ಅನುವಾದಿಸಿಕೊಳ್ಳಲು ಅವಕಾಶವಿದೆ. ಅನುವಾದ ವ್ಯವಸ್ಥೆ ಇರುವಾಗ ಸರ್ಕಾರಿ ಉದ್ಯೋಗಕ್ಕೆ ಇಂಗ್ಲಿಷ್ ಜ್ಞಾನವನ್ನು ಕಡ್ಡಾಯಗೊಳಿಸುವುದು ಅರ್ಥಹೀನ.
ಕರ್ನಾಟಕ ಸರ್ಕಾರವು ಒಂದು ಕಡೆ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಘೋಷಿಸಿ, ಮತ್ತೊಂದು ಕಡೆ ಸರ್ಕಾರಿ ಉದ್ಯೋಗಗಳ ನೇಮಕಾತಿಯಲ್ಲಿ ಇಂಗ್ಲಿಷ್ ಅನ್ನು ಕಡ್ಡಾಯಗೊಳಿಸುವುದು ದ್ವಂದ್ವ ನೀತಿಯಾಗಿದೆ. ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಮಾಡುವ ಸರ್ಕಾರದ ಘೋಷಣೆ ಕೇವಲ ಕಡತಗಳಿಗೆ ಸೀಮಿತವಾಗದೆ, ಸರ್ಕಾರಿ ನೇಮಕಾತಿ ವ್ಯವಸ್ಥೆಯಲ್ಲಿಯೂ ಪ್ರತಿಫಲಿಸಬೇಕು.
ಕನ್ನಡಿಗರಿಗೆ ಸರ್ಕಾರಿ ಉದ್ಯೋಗದ ಬಾಗಿಲು ತೆರೆಯಬೇಕೇ ಹೊರತು, ಭಾಷೆಯ ಹೆಸರಿನಲ್ಲಿ ಮುಚ್ಚಬಾರದು. ಕನ್ನಡ ಮಾಧ್ಯಮದಲ್ಲಿ ಓದಿದ ಅಭ್ಯರ್ಥಿಯ ಪ್ರತಿಭೆ, ಸಾಮರ್ಥ್ಯ ಮತ್ತು ಅರ್ಹತೆಯನ್ನು ಕೇವಲ ಇಂಗ್ಲಿಷ್ ಜ್ಞಾನದ ಕ��ರತೆಯ ಕಾರಣಕ್ಕೆ ತಿರಸ್ಕರಿಸುವ ಯಾವುದೇ ನಿಯಮವನ್ನು ಕರ್ನಾಟಕ ರಕ್ಷಣಾ ವೇದಿಕೆ ಒಪ್ಪುವುದಿಲ್ಲ.
ಆದ್ದರಿಂದ ಮುಖ್ಯಮಂತ್ರಿ @DKShivakumar ಡಿ.ಕೆ.ಶಿವಕುಮಾರ್ ಅವರು ಈ ವಿಚಾರವನ್ನು ತಕ್ಷಣ ಗಂಭೀರವಾಗಿ ಪರಿಗಣಿಸಿ, ಸರ್ಕಾರಿ ನೇಮಕಾತಿ ಪರೀಕ್ಷೆಯ ನಿಯಮಾವಳಿಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿಸಬೇಕು. ಸರ್ಕಾರಿ ಉದ್ಯೋಗಗಳಿಗೆ ಅನಗತ್ಯವಾಗಿ ಇಂಗ್ಲಿಷ್ ಅನ್ನು ಕಡ್ಡಾಯಗೊಳಿಸುವ ಕ್ರಮವನ್ನು ಕೈಬಿಟ್ಟು, ಕನ್ನಡಕ್ಕೆ ಸೂಕ್ತ ಮತ್ತು ನ್ಯಾಯಯುತ ಸ್ಥಾನಮಾನ ಕಲ್ಪಿಸಬೇಕು.
ಯಾವುದೇ ಈ ಡೆಲ್ಲಿ ಹೈಕಮಾಂಡ್ ರಾಷ್ಟ್ರೀಯ ಪಕ್ಷಗಳು ಅಧಿಕಾರಕ್ಕೆ ಬಂದರೂ, ನಮ್ಮ ರಾಜ್ಯದಲ್ಲೇ ಭಾಷೆ ನಾಡು ನುಡಿ ನೆಲ ಜಲದ ಬಗ್ಗೆ ಕನ್ನಡಿಗರು ಜೀವನ ಪರ್ಯಂತ ಹೋರಾಟ ಮಾಡ್ತಾನೆ ಇರಬೇಕು. ಇನ್ನಾದರೂ ಕನ್ನಡಿಗರು ಎಚ್ಚೆತ್ತುಕೊಳ್ಳಿ ಕೆಆರ್ಎಸ್ ಪಕ್ಷವನ್ನು ಬೆಂಬಲಿಸಿ...
ಕನ್ನಡಿಗರಿಗೆ ಅನ್ಯಾಯ: 🔥✊
ಸ್ಪರ್ಧಾತ್ಮಕ ಪರೀಕ್ಷೆಗಳ ಕರಡು ನಿಯಮಗಳಲ್ಲಿ ಕನ್ನಡಕ್ಕೆ ಅನ್ಯಾಯ: ಪುರುಷೋತ್ತಮ ಬಿಳಿಮಲೆ
ಬೆಂಗಳೂರು, ಸೆ.1: ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ಕರಡು ನಿಯಮಗಳಲ್ಲಿ ಕನ್ನಡ ಭಾಷೆಗೆ, ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಸಲ್ಲಬೇಕಾದ ಆದ್ಯತೆಯನ್ನು ನೀಡದೆ ಅನ್ಯಾಯ ಮಾಡಲಾಗಿದೆ, ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡ��.ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.
ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಮುಖ್ಯಸ್ಥರಿಗೆ ಪತ್ರ ಬರೆದಿರುವ ಅವರು, ಕೂಡಲೇ ಈ ಕನ್ನಡ ವಿರೋಧಿ ಧೋರಣೆ ಕೈಬಿಟ್ಟು ಕರಡು ನಿಯಮಗಳ ಕನ್ನಡ ಸ್ನೇಹಿ ತಿದ್ದುಪಡಿಗೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆ.19ರಂದು ಸರ್ಕಾರಿ ಇಲಾಖೆಗಳ ಲಿಪಿಕ ವರ್ಗದ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕರಡು ನಿಯಮಗಳನ್ನು ಪ್ರಕಟಿಸಿದ್ದು, ಈ ನಿಯಮಗಳಲ್ಲಿ ಕನ್ನ�� ಮತ್ತು ಆಂಗ್ಲ ಭಾಷೆಗಳ ಪ್ರಭುತ್ವ ಪರೀಕ್ಷೆಗೆ ಸಮಾನ ಅಂಕಗಳನ್ನು ನಿಗದಿಪಡಿಸಿರುವ ಕ್ರಮವು ಗ್ರಾಮೀಣ-ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಮಾರಕವಾಗಿದೆ ಎಂದು ತಿಳಿಸಿದ್ದಾರೆ.
ಕನ್ನಡ ನಾಡಿನಲ್ಲಿ ಸರ್ಕಾರಿ ಉದ್ಯೋಗಕ್ಕೆ ಪ್ರವೇಶ ಪಡೆಯುವ ಪರೀಕ್ಷೆಗಳಲ್ಲೇ ಕನ್ನಡಕ್ಕೆ ಆಂಗ್ಲ ಭಾಷೆಯಷ್ಟೇ ಸ್ಥಾನವನ್ನು ನೀಡುವುದು ನ್ಯಾಯಸಮ್ಮತವಲ್ಲ. ಕರಡು ನಿಯಮಗಳ ಪ್ರಕಾರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ಕನ್ನಡ ಹಾಗೂ ಆಂಗ್ಲ ಭಾಷೆಗಳಲ್ಲಿ ತಲಾ 35 ಅಂಕಗಳ ಪರೀಕ್ಷೆ���ನ್ನು ಕಡ್ಡಾಯವಾಗಿ ಬರೆಯಬೇಕಾಗಿದೆ. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರಿಗೆ ಅನ್ಯಾಯವಾಗುವ ಸಾಧ್ಯತೆ ಇದೆ. ರಾಜ್ಯದ ಆಡಳಿತ ব্যবস্থೆಯಲ್ಲಿ ಕನ್ನಡಕ್ಕೆ ಪ್ರಥಮ ಪ್ರಾಶಸ್ತ್ಯ ದೊರಕಬೇಕು. ಕರಡು ನಿಯಮಗಳಲ್ಲಿ ಕನ್ನಡ ಭಾಷಾ ಪರೀಕ್ಷೆಗೆ 50 ಅಂಕಗಳು ಹಾಗೂ ಆಂಗ್ಲ ಭಾಷಾ ಪರೀಕ್ಷೆಗೆ 20 ಅಂಕಗಳನ್ನು ನಿಗದಿಪಡಿಸುವ ಮೂಲಕ ಕರಡು ನಿಯಮಗಳ ಪರಿಷ್ಕರಣೆಗೆ ಸರ್ಕಾರವು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
"ಕನ್ನಡ ನಾಡಿನ ಸರ್ಕಾರಿ ಉದ್ಯೋಗ ನೇಮಕಾತಿ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಆಂಗ್ಲ ಭಾಷೆಯಷ್ಟೇ ಅಂಕ ನೀಡುವುದು ಕನ್ನಡಕ್ಕೆ ಮಾಡುವ ಅನ್ಯಾಯವಾಗಿದೆ. ಕನ್ನಡ ಭಾಷಾ ಪರೀಕ್ಷೆಗೆ 50 ಹಾಗೂ ಆಂಗ್ಲ ಭಾಷಾ ಪರೀಕ್ಷೆಗೆ 20 ಅಂಕ ನಿಗದಿಪಡಿಸಿ ಕನ್ನಡಕ್ಕೆ ಪ್ರಾಶಸ್ತ್ಯ ನೀಡಬೇಕು."
- ಡಾ.ಪುರುಷೋತ್ತಮ ಬಿಳಿಮಲೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
@Madhu_Bangarapp D ed 2ನೇ ವರ್ಷದ ಟಿಇಟಿ ಪಾಸಾದ ವಿದ್ಯಾರ್ಥಿಗಳು ಆಗಸ್ಟ್ 20ರಂದು ಅಂತಿಮ ಪರೀಕ್ಷೆಯನ್ನು ಬರೆದಿರುತ್ತಾರೆ, ಅವರುಗಳು ಈ ಒಂದು ಅಧಿಸೂಚನೆಯಿಂದ ವಂಚಿತರಾಗುತ್ತವೆ ಎಂಬ ಭಯ ತಾವುಗಳು ಈ ಒಂದು ಡಿಎಡ್ ಅಂತಿಮ ವರ್ಷದ ವಿದ್ಯಾರ್ಥಿಗಳ ರಿಸಲ್ಟ್ ಅನ್ನು ಆದಷ್ಟು ಬೇಗನೆ ಬಿಡಿಸಬೇಕು ಅಂತ ಕೋರುತ್ತೇವೆ
@ShalaShikshana D ed ಎರಡನೇ ವರ್ಷದ ಪರೀಕ್ಷೆಯು ಆಗಸ್ಟ್ 20ರಂದು ಕೊನೆಗೊಂಡಿರುತ್ತದೆ ಆದರಿಂದ ಟಿಇಟಿ ಪಾಸಾದ ಪ್ರಶಿಕ್ಷಣಾರ್ಥಿಗಳಿಗೆ ಆದಷ್ಟು ಬೇಗನೆ ರಿಸಲ್ಟ್ ಬಿಟ್ಟು ಅವರಿಗೂ ಕೂಡ ಪಿ ಎಸ್ ಟಿ ಆರ್ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಿ ಇಲ್ಲವಾದರೆ ಈ ಒಂದು ಹುದ್ದೆಯಿಂದ ವಂಚಿತರಾಗುತ್ತವೆ
@ShalaShikshana D ed ಅಂತಿಮ ಪರೀಕ್ಷೆಯು ಆಗಸ್ಟ್ 10 ರಿಂದ 20 ರವರೆಗೆ ನಡೆಯುತ್ತಿವೆ ಇದರಲ್ಲಿ ಎಷ್ಟೋ ವಿದ್ಯಾರ್ಥಿಗಳು ಟಿಇಟಿ ಪಾಸ್ ಮಾಡಿರುತ್ತಾರೆ ಅವರಿಗೂ ಕೂಡ PSTR ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಿ
ಕಾಂಕ್ರೀಟ್ ಕಾಡು ಸಾಕು, ಹಸಿರು ಕಾಡು ಬೇಕು!
ಟೌನ್ ಶಿಪ್ ಭೂಸ್ವಾಧೀನ ವಿರೋಧಿಸಿ ಬಿಡದಿಯಲ್ಲಿ ಮರುಜೀವ ಪಡೆದ 'ಅಪ್ಪಿಕೋ ಚಳುವಳಿ 2.0' ರ ನೈಜ ದರ್ಶನವಿದು.
ಅವೈಜ್ಞಾನಿಕ ನಗರೀಕರಣ ಹಾಗೂ ಭೂಸ್ವಾಧೀನದ ಹೆಸರಿನಲ್ಲಿ ಬಿಡಿದಿಯ ಫಲವತ್ತಾದ ಕೃಷಿ ಭೂಮಿಯನ್ನು ನಾಶ ಮಾಡಲು ಹೊರಟಿರುವ @INCKarnataka ಸರ್ಕಾರದ ಸರ್ವಾಧಿಕಾರಿ ಧೋರಣೆಯ ವಿರುದ್ಧ ರೈತರು, ತಾಯಂದಿರು ಹಾಗೂ ಮಕ್ಕಳು ಸಿಡಿದು ನಿಂತಿದ್ದಾರೆ.
ಅನ್ನದಾತರ ಹೊಟ್ಟೆಮೇಲೆ ಹೊಡೆದು, ರಿಯಲ್ ಎಸ್ಟೇಟ್ ಕುಳಗಳ ಜೇಬು ತುಂಬಿಸುವ 'ರಿಯಲ್ ಎಸ್ಟೇಟ್ ಸರ್ಕಾರ' ಕಣ್ಣಿದ್ದು ಕುರುಡಾಗಿದೆ. "ಭೂಮಿ ನಮ್ಮ ತಾಯಿ", ಅದನ್ನು ಮಾರಾಟ ಮಾಡಲು ಬಿಡೆವು ಎನ್ನುವ ಮಣ್ಣಿನ ಮಕ್ಕಳ ಆಕ್ರಂದನ ಈ ರೈತ ವಿರೋಧಿ ಸರ್ಕಾರಕ��ಕೆ ಕೇಳಿಸುತ್ತಿಲ್ಲ! ನಮ್ಮ ಭೂಮಿ, ನಮ್ಮ ಹಕ್ಕು ಎಂದು ಭೂಮಿಗಾಗಿ ಹೋರಾಡುತ್ತಿರುವ ರೈತರ ನ್ಯಾಯಯುತ ಹೋರಾಟಕ್ಕೆ @JanataDal_S ಪಕ್ಷದ ಸಂಪೂರ್ಣ ಬೆಂಬಲವಿದೆ.
#SaveBidadi #Appiko2_0
#ನಮ್ಮಭೂಮಿ_ನಮ್ಮಹಕ್ಕು
#ಅಪ್ಪಿಕೋಚಳುವಳಿ #ಬಿಡದಿಬದುಕಲಿಬಿಡಿ
ಮಕ್ಕಳ ಹೊಟ್ಟೆಗೂ ಹೊ���ೆಯಾದ ಕಾಂಗ್ರೆಸ್ ಸರ್ಕಾರದ ದಿವಾಳಿ ಗ್ಯಾರಂಟಿ ರಾಜಕಾರಣ!
ಸರ್ಕಾರ ನಡೆಸಲು ಯೋಗ್ಯತೆ ಇಲ್ಲದವರು ಅಧಿಕಾರ ಹಿಡಿದರೆ ಏನಾಗುತ್ತದೆ ಎಂಬುದಕ್ಕೆ ಇಂದಿನ ಸರ್ಕಾರಿ ಶಾಲಾ ಶಿಕ್ಷಕರ ಕಣ್ಣೀರೇ ಸಾಕ್ಷಿ. ಮಕ್ಕಳಿಗೆ ಮೊಟ್ಟೆ ನೀಡುವ "ಅಕ್ಷರ ದಾಸೋಹ" ಯೋಜನೆಯನ್ನು ಈ @INCKarnataka ಸರ್ಕಾರ "ಶಿಕ್ಷಕರ ಸಾಲದ ಶೂಲ"ವನ್ನಾಗಿ ಬದಲಾಯಿಸಿದೆ!
ದೇಶದೆಲ್ಲೆಡೆ ಶಿಕ್ಷಕರನ್ನು ಕೇವಲ ಬೋಧನೆಗೆ ಸೀಮಿತಗೊಳಿಸಿದ್ದರೆ, ನಮ್ಮ ಕರ್ನಾಟಕದಲ್ಲಿ ಮಾತ್ರ ಮುಖ್ಯ ಶಿಕ್ಷಕರು ಮುಂಜಾನೆ ಎದ್ದು ಮಾರುಕಟ್ಟೆಯಲ್ಲಿ ಮೊಟ್ಟೆ ಬೆಲೆಗೆ ಚೌಕಾಸಿ ಮಾಡುವ ದೌರ್ಭಾಗ್ಯ ತಂದಿಟ್ಟಿದೆ ಈ ಸರ್ಕಾರ. ಮಾರುಕಟ್ಟೆ ದರಕ್ಕೂ ಸರ್ಕಾರ ನೀಡುವ ದರಕ್ಕೂ ಇರುವ ವ್ಯತ್ಯಾಸವನ್ನು ಸರಿದೂಗಿಸಲು ಕೇವಲ 19 ದಿನಗಳಲ್ಲಿ ಶಿಕ್ಷಕರು ತಮ್ಮ ಕೈಯಿಂದ ಬರೋಬ್ಬರಿ ₹5.20 ಕೋಟಿ ಖರ್ಚ��� ಮಾಡಿದ್ದಾರೆ.
ಕೆಲವು ಶಾಲೆಗಳ ಶಿಕ್ಷಕರು ತಿಂಗಳಿಗೆ ₹42,000 ವರೆಗೆ ಸಾಲ ಮಾಡಿ ಮಕ್ಕಳಿಗೆ ಅನ್ನ ಹಾಕಬೇಕಾದ ಪರಿಸ್ಥಿತಿ ಇದೆ ಎಂದರೆ, ಈ ರಾಜ್ಯದಲ್ಲಿ ಸರ್ಕಾರ ಎಂಬುದು ಜೀವಂತವಾಗಿದೆಯೇ? ಖಜಾನೆ ಖಾಲಿಯಾಗಿದೆ ಎಂದು ಮಕ್ಕಳ ಪೌಷ್ಟಿಕಾಂಶದ ಹೊಣೆಯನ್ನೂ ಶಿಕ್ಷಕರ ಹೆಗಲಿಗೆ ತಳ್ಳುವುದು ಯಾವ ಸೀಮೆಯ ನ್ಯಾಯ?
ಮುಖ್ಯಮಂತ್ರಿಗಳ ಗೃಹ ಕಚೇರಿ ನವೀಕರಣಕ್ಕೆ ಕೋಟಿ ಕೋಟಿ ಖರ್ಚು ಮಾಡುತ್ತಿರುವ ಸಿಎಂ @DKShivakumar ಅವರಿಗೆ ಮಕ್ಕಳು ತಿನ್ನುವ ಮೊಟ್ಟೆಗೆ ಹಣ ಬಿಡುಗಡೆ ಮಾಡಲು ಮಾತ್ರ ದುಡ್ಡಿಲ್ಲ. ಕಾಂಗ್ರೆಸ್ ಸರ್ಕಾರ ತಕ್ಷಣವೇ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಹಣ ಬಿಡುಗಡೆ ಮಾಡಿ, ಶಿಕ್ಷಕರನ್ನು ಈ ಮಾನಸಿಕ ಹಾಗೂ ಆರ್ಥಿಕ ಕಿರುಕುಳದಿಂದ ಮುಕ್ತಗೊಳಿಸಬೇಕು. ಇಲ್ಲದಿದ್ದರೆ ಇಡೀ ಶಿಕ್ಷಕ ಸಮುದಾಯದೊಂದಿಗೆ ಬೀದಿಗಿಳಿದು ಹೋರಾಟ ಮಾಡುವುದು ನಿಶ್ಚಿತ.
#CongressFailsKarnataka
ಭ್ರಷ್ಟ @INCKarnataka ದುರಾಡಳಿತದಲ್ಲಿ ಶಿಕ್ಷಣ ಇಲಾಖೆ ಅಧೋಗತಿಗೆ ತಲುಪಿದೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಿಲ್ಲ, ಮೂಲಸೌಕರ್ಯವಿಲ್ಲ ಹಾಗೂ ಬೋಧಿಸುವ ಶಿಕ್ಷಕರಿಗೆ ಸಂಬಳವಿಲ್ಲ.!
ಕಾಂಗ್ರೆಸ್ ಎಂದರೆ
ಮಕ್ಕಳ ಭವಿಷ್ಯಕ್ಕೆ ಕಲ್ಲು
#CongressFailsKarnataka
ವಸತಿ ವಿದ್ಯಾರ್ಥಿಗಳಿಗೆ ಸೌಲಭ್ಯ ಕೊಡಲು ಯೋಗ್ಯತೆ ಇಲ್ಲದ ಲೂಟಿಕೋರ @INCKarnataka ಸರ್ಕಾರ ಅಧಿಕಾರಿಗಳ ಮೂಲಕ ವಿದ್ಯಾರ್ಥಿಗಳಿಗೆ
ಬೆದರಿಕೆ ಹಾಕಿಸುತ್ತಿರುವುದು ನಾಚಿಕೆಗೇಡು.!
ಖಜಾನೆ ಖಾಲಿ ಮಾಡಿಕೊಂಡಿರುವ ಕಾಂಗ್ರೆಸ್ಗೆ ಹಾಸ್ಟೆಲ್ಗಳಿಗೆ ಕನಿಷ್ಠ ಸೌಲಭ್ಯ ನೀಡುವ ಯೋಗ್ಯತೆಯಿಲ್ಲದ ಕಾರಣ ವಿದ್ಯಾರ್ಥಿಗಳ ಗೋಳು ಹೇಳತೀರದಾಗಿದೆ.
#CongressFailsKarnataka