ಪಾಪ ಇವರು ದೇಶದ್ರೋಹಿ ಅಲ್ಲವೇ...
ಇಂದು ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಹೋರಾಟ ಮಾಡಿದ ವಿಧ್ಯಾರ್ಥಿಗಳ ಮೇಲೆ ಮೋದಿ ಸರ್ಕಾರ ತೋರಿದ ಸರ್ವಾಧಿಕಾರ ನೋಡಿ ಶಿಕ್ಷಕಿಯ ಕಣ್ಣೀರು..
#ModiGovernment#neetexam
ತೇಜಸ್ವಿಯರು ಶಾಲೆಯಲ್ಲಿ ಓದುತ್ತಿದ್ದಾಗ ಮೇಷ್ಟ್ರರೊಬ್ಬರು ಕುವೆಂಪು ಅವರ ಕವನ ವಾಚಿಸುತ್ತಾ, ಕುವೆಂಪು ಅವರು ಕಾವ್ಯ ರಚನೆ ಮಾಡುವಾಗ ಮಾಂಸಹಾರವನ್ನು ಸಂಪೂರ್ಣವಾಗಿ ತ್ಯಜಿಸಿ, ಮಡಿ ಉಟ್ಟಿರುತ್ತಾರೆ.. ಎಂದು ಹೇಳಿದರಂತೆ ಅದನ್ನ ತೇಜಸ್ವಿಯವರು ಮನೆಗೆ ಬಂದು ತಂದೆಯವರಲ್ಲಿ ವಿಚಾರಿಸಿದಾಗ ಕುವೆಂಪು ಅವರ ಉತ್ತರ ಹೀಗಿತ್ತೆಂದು ಅಣ್ಣನ ನೆನಪು ಪುಸ್ತಕದಲ್ಲಿ ದಾಖಲಿಸಿದ್ದಾರೆ :
"ವೇದೋಪನಿಷತ್ತುಗಳನ್ನು ಬರೆದವರು ದನದ ಮಾಂಸ ತಿನ್ನುತ್ತಿದ್ದರೆನ್ನುವುದು, ರಾಮಾಯಣ ಬರೆದ ವಾಲ್ಮಿಕಿ ಶಿಕಾರಿ ಮಾಡುತ್ತಿದ್ದ ವ್ಯಾಧನಾಗಿದ್ದನೆನ್ನುವುದು ಆ ಮುಠ್ಠಾಳ ಮೇಷ್ಟ್ರಿಗೆ ಗೊತ್ತಿಲ್ಲ. ಈ ಮಡಿ ಹೆಂಗಸರಂತಹ ಮೇಷ್ಟ್ರುಗಳು ನಿಮಗೆ ಹೇಳಿ ಕೊಡುವುದಾದರು ಏನು? ಅವಿವೇಕಿಗಳು ಪದ್ಯ ಬರೆಯುವವರು ಪಥ್ಯದಲ್ಲಿರಬೇಕು ಎನ್ನುವ ಕಂದಾಚಾರ ನಂಬಿದ್ದಾರಲ್ಲ. ಹಿಂದೂ ಧರ್ಮಕ್ಕೆ ಇದಕ್ಕಿಂತ ದುರ್ಗತಿ ಇದೆಯೇ? ಹೋಗಲಿ ನೀನಾದರೂ ಇದೆಲ್ಲಾ ತಪ್ಪು ಎನ್ನುವುದನ್ನು ತಿಳಿದುಕೊ. ಇನ್ನೊಮ್ಮೆ ಮೇಷ್ಟ್ರು ಹಾಗೇನಾದ್ರು ಹೇಳಿದ್ರೆ? ಮೇಷ್ಟ್ರೇ ನೀವು ಹೇಳೋ ಹಾಗೇನು ಇಲ್ಲ ನಾವು ದನದ ಮಾಂಸ ಸಹ ಸಿಕ್ಕರೆ ತಿನ್ನುತ್ತೇವೆ, ನಾವು ಹಿಂದೂಗಳೇ ಅಲ್ಲ ಅಂತ ಹೇಳಿಬಿಡು ಎಂದು ನನಗೆ ಕೋಪೋದ್ರಿಕ್ತರಾಗಿ ಹೇಳಿದರು".
ತೇಜಸ್ವಿ ಅವರ ಕೃತಿ "ಅಣ್ಣನ ನೆನಪು" ಪುಸ್ತಕದಿಂದ ಪುಟ ೬೨,೬೩.
ನಂಗೇಲಿ ಎಂಬ ತಾಯಿಯ ಹೋರಾಟ ನೆನೆಯೋಣ...
ಕೇರಳದ ರಾಜರಾಗಿದ್ದ ನಂಬೂದರಿ ಬ್ರಾಹ್ಮಣರು, ಕೆಳ ವರ್ಗಗಳ ಮಹಿಳೆಯರು ತಮ್ಮ ಮೈ ಮುಚ್ಚಿಕೊಳ್ಳಲು ತೆರಿಗೆಯನ್ನು ಕಟ್ಟಬೇಕೆಂದು ಅತಿಕ್ರೂರವಾದ ಅಮಾನವೀಯ ಕಾನೂನನ್ನು 17, 18,19ನೇ ಶತಮಾನಗಳಲ್ಲಿ ಜಾರಿಗೊಳಿಸಿದ್ದರು.
ಇದು ಸ್ತನ ತೆರಿಗೆ ಎಂದು ಇತಿಹಾಸದಲ್ಲಿ ಪ್ರಸಿದ್ಧಿಯನ್ನು ಪಡೆದಿತ್ತು. ಮೈಸೂರುಹುಲಿ ಟಿಪ್ಪುಸುಲ್ತಾನ್ ನು ಕೇರಳದ ಮಲಬಾರ್ ಪ್ರಾಂತ್ಯದ ಮೇಲೆ ಅನೇಕ ಬಾರಿ ದಾಳಿ ಮಾಡಿ, ಈ ನಂಬೂದರಿಗಳನ್ನು ಬಗ್ಗುಬಡಿದು, ಈ ಅಮಾನವೀಯ ಪದ್ಧತಿಯನ್ನು ತನ್ನ ಕಾಲದಲ್ಲಿ ನಿಷೇಧಿಸಿದನು.
ಟಿಪ್ಪುಸುಲ್ತಾನನ ಮರಣದ ನಂತರ ಮತ್ತೇ ಸ್ತನತೆರಿಗೆ ಪದ್ಧತಿಯು ಜಾರಿಗೆ ಬಂದಿತು.
ಕೆಳವರ್ಗದ ಈಳವ(ಈಡಿಗ) ಜಾತಿಗೆ ಸೇರಿದ್ದ ನಂಗೇಲಿ ಎಂಬ ಮಹಿಳೆಯು ತನ್ನ ದೇಹವನ್ನು ಪೂರ್ತಿ ಮುಚ್ಚಿಕೊಂಡಿರುತ್ತಾಳೆ. ಇದಕ್ಕಾಗಿ, ನಂಬೂದರಿ ರಾಜರುಗಳು ತೆರಿಗೆಯನ್ನು ವಸೂಲಿ ಮಾಡಲು ತಮ್ಮ ಸೈನಿಕರನ್ನು ಅವಳ ಮನೆಯ ಬಳಿ ಕಳುಹಿಸಿದಾಗ; ಆ ಮಹಾತಾಯಿ ತನ್ನ ಸ್ತನವನ್ನೇ ಕುಯ್ದು ಒಂದು ಬಾಳೆ ಎಲೆಯಲ್ಲಿಟ್ಟು ತೋರಿಸುತ್ತಾಳೆ. ಆದರೆ ಆಕೆ ಮಾತ್ರ ಅತಿಯಾದ ರಕ್ತಸ್ರಾವದಿಂದ ಪ್ರಾಣವನ್ನು ಕಳೆದುಕೊಳ್ಳುತ್ತಾಳೆ. ನಂಗೇಲಿಯ ಚಿತೆಗೆ ಹಾರಿ ಆಕೆಯ ಪತಿಯೂ ಪ್ರಾಣಾರ್ಪಣೆ ಮಾಡುತ್ತಾನೆ. ನಂಗೇಲಿಯ ಊರು "ಮುಲ (ಮೊಲೆ )ಪರಂಬು": ಎಂದು ಆ ಬಳಿಕ ಕರೆಯಲ್ಪಟ್ಟಿತು.
ನಂಗೇಲಿಯ ಈಳವ ಸಮಾಜದಿಂದ ಬಂದಂತಹ ನಾರಾಯಣ ಗುರುಗಳು ಈ ಅಮಾನುಷ ಪದ್ಧತಿಯ ವಿರುದ್ಧ ಹೋರಾಡುತ್ತಾರೆ. ಇವರ ಹೋರಾಟವನ್ನು ಪರಿಗಣಿಸಿ ಅಂದಿನ ಬ್ರಿಟಿಷ್ ಸರ್ಕಾರವು ಈ ಸ್ತನತೆರಿಗೆ ಪದ್ಧತಿಯನ್ನು 19ನೇ ಶತಮಾನದ ಅಂತ್ಯದಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸುತ್ತಾರೆ.
ಆ ಮಹಾತಾಯಿ ನಂಗೇಲಿಯು ಪ್ರಾಣ ಬಿಟ್ಟ ಸ್ಥಳದಲ್ಲಿ, ಅವಳ ವಿಗ್ರಹವನ್ನು ನಿಲ್ಲಿಸಿ, ಆರಾಧಿಸುತ್ತಾರೆ.
- ಬಷೀರ್ B M
ಒಂದು ಹುಡುಗಿಯ ಅತ್ಯಾಚಾರ ನಡೆದು 13 ವರ್ಷಗಳಾದರೂ ನಿಜವಾದ ಆರೋಪಿಗಳ ಮೇಲೆ ಒಂದೇ ಒಂದು FIR ದಾಖಲಾಗಿಲ್ಲವಲ್ಲಾ!
ಹಾಗಾದ್ರೆ ಅಣ್ಣಪ್ಪನ ಸತ್ಯ ಏನಾಯ್ತು?
ಮಂಜುನಾಥನ ಧರ್ಮ ಎಲ್ಲಿಗೆ ಹೊಯ್ತು?
ತನ್ನ ದೇವಸ್ಥಾನದ ಅಡಿಸ್ಥಳವನ್ನೇ ಕಾಪಾಡಿಕೊಳ್ಳಲಾಗದ ದೇವರು ಯಾಕೆ ಬೇಕು? ದುಡ್ಡು ಮಾಡ್ಲಿಕ್ಕಾ!?
ಕೃಪೆ - @ashwaveganews
#DharmasthalaFiles
#JusticeForSowjanya
ವೇತನ ತಾರತಮ್ಯವಲ್ಲ ಮೊದಲು ಜಾತಿ ತಾರತಮ್ಯ ನಿವಾರಣೆ ಮಾಡಿ! ಇದೊಂದು ಚಳುವಳಿ ಆಗಬೇಕಾಗಿದೆ,ಮುಜರಾಯಿ ಇಲಾಖೆಗೆ ಸೇರಿದ ಎಲ್ಲಾ ದೇವಾಲಯಗಳಿಗೆ ಆಗಮ ಪರೀಕ್ಷೆಯಲ್ಲಿ ತೇರ್ಗಡೆಯಾದ ಎಲ್ಲಾ ವರ್ಗದ ಜನರಿಗೂ ಮೀಸಲಾತಿ ಆಧಾರದ ಮೇಲೆ ಅರ್ಚಕರಾಗುವ ಅವಕಾಶ ಕೊಡಬೇಕು.....ಎಷ್ಟೋ ವರ್ಷಗಳಿಂದ ತುಳಿತಕ್ಕೊಳಗಾದ ಜನತೆಗೆ ನ್ಯಾಯ ಸಿಗಬೇಕು ✊
ಕುಂಭಮೇಳದಲ್ಲಿ ಕಾಲ್ತುಳಿತವಾದಾಗ ಸರ್ಕಾರವನ್ನು ಟೀಕಿಸದೇ, ಸರ್ಕಾರವನ್ನು ಟೀಕಿಸಿದ ಪಪ್ಪು ಯಾದವರನ್ನೇ ಟೀಕಿಸಿದ್ದು ಈ ರಂಗಣ್ಣ.
ರಂಗಣ್ಣನ ಪ್ರಕಾರ ಉ.ಪ್ರ ದಲ್ಲಿ ಉಂಟಾದ ಕಾಲ್ತುಳಿತಕ್ಕೆ ಅಲ್ಲಿ ಸೇರಿದ್ದ ಜನ ಕಾರಣ ಆದರೆ ಬೆಂಗಳೂರಿನಲ್ಲಿ ಆದ ಕಾಲ್ತುಳಿತಕ್ಕೆ ಇಲ್ಲಿಯ ಸರ್ಕಾರ ಕಾರಣ.
Height of hypocrisy !!
ಕನ್ನಡದ ಅಸ್ಮಿತೆಗಾಗಿ ಶಿವಣ್ಣ ನಿಂತಿರುವ ಉದಾಹರಣೆಗಳು ನಮ್ಮ ಕಣ್ಮುಂದಿವೆ. ಸಮಸ್ಯೆಯಲ್ಲಿ ನಮ್ಮ ಪರ ನಿಲ್ಲುವವರೇ ನಿಜವಾದ ಪ್ರೇಮಿಗಳು. ಶಿವಣ್ಣ ನಮ್ಮ ಹೀರೋ, ನಮ್ಮ ಹೆಮ್ಮೆ! ❤️💛
"ಅನ್ನೋರ್ ಅಂತಾರೆ ಸಾವ್ರ ಮಾತು
ನಿಮ್ ಗತ್ತು ತಿಳ್ದೋರ್ಗಷ್ಟೆ ಗೊತ್ತು" 🎯
#Shivanna#Shivarajkumar#DrShivarajkumar#DrShivarajkumarUpdates
ಇದು ಉತ್ತರ ಪ್ರದೇಶವಲ್ಲ, ಬಿಹಾರವೂ ಅಲ್ಲ.. ಬದಲಿಗೆ ವಿಶ್ವಗುರು ನರೇಂದ್ರ ಮೋದಿಯವರ ತವರು ರಾಜ್ಯ ಗುಜರಾತ್ನಲ್ಲಿ ಖಾಸಗೀ ಕಂಪನಿಯ ಉದ್ಯೋಗಕ್ಕಾಗಿ ಒದ್ದಾಡುತ್ತಿರುವ ಯುವಜನತೆಯ ದೃಶ್ಯ.
ಕಳೆದ 45 ವರ್ಷಗಳಲ್ಲಿಯೇ ಇಂತಹ ನಿರುದ್ಯೋಗದ ಪರಿಸ್ಥಿತಿ ಇರಲಿಲ್ಲ. ಮೋದಿ ಆಳ್ವಿಕೆಯಿಂದ ಯುವಜನರು ಬೀದಿಗೆ ಬಿದ್ದರು. ಆದರೆ ಇನ್ನೂ ಬುದ್ದಿ ಕಲಿತಿಲ್ಲ
ಪ್ರಧಾನಿ ಶ್ರೀ @narendramodi ಅವರ ನೇತೃತ್ವದ ಕೇಂದ್ರ ಸರ್ಕಾರವು ಗೃಹಬಳಕೆಯ LPG ಸಿಲಿಂಡರ್ಗಳ ಬೆಲೆಯಲ್ಲಿ 200 ರೂ.ಗಳಷ್ಟು ಕಡಿತಗೊಳಿಸಲು ನಿರ್ಧರಿಸಿದೆ.
ಇದು ರಕ್ಷಾ ಬಂಧನದ ಸಂದರ್ಭದಲ್ಲಿ ದೇಶದ ಮಹಿಳೆಯರಿಗೆ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಉಡುಗೊರೆಯಾಗಿದೆ.