ಇವತ್ತು ಹುಟ್ಟುಹಬ್ಬದ ನಿಮಿತ್ಯ ಶ್ರೀ ಭಗೀರಥ ಗುರು ಪೀಠಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಬೆಳಗಿನ ಉಪಹಾರದ ವ್ಯವಸ್ಥೆ ಮಾಡಲಾಯಿತು ಶ್ರೀ ಶ್ರೀ ಶ್ರೀ ಡಾ: ಪುರುಷೋತ್ತಾನಂದ ಪುರಿ ಮಹಾಸ್ವಾಮಿಗಳ ಆಶೀರ್ವಾದ ಪಡೆದು ಸನ್ಮಾನ ಸ್ವೀಕರಿಸಲಾಯಿತು.....🙏🏻
ಒಂದು ಯುಗದ ಧ್ವನಿ ಮೌನ ತಾಳಿತು...
ಗಾನಕೋಗಿಲೆ ಎಸ್ ಜಾನಕಿ ಅಮ್ಮನವರಿಗೆ ಅನಂತ ನಮನಗಳು.
Deeply saddened by the passing of S.Janaki Amma.
Her voice was a timeless legacy that touched millions of hearts across generations.
Rest in peace, #SJanaki Amma
#OmShanti
ಶೋಷಿತರ ವಿಮೋಚಕ,
ಹಸಿರು ಕ್ರಾಂತಿಯ ಶಿಲ್ಪಿ,
ಯಶಸ್ವಿ ರಕ್ಷಣಾ ಸಚಿವ,
ದುಡಿಯುವ ವರ್ಗದ ಹಿತರಕ್ಷಕ ಕಾರ್ಮಿಕ ಸಚಿವ ಬಾಬು ಜಗಜೀವನ ರಾಮ್ ಅವರ ಕೊಡುಗೆ ಸದಾ ಸ್ಮರಣೀಯ.
ನಮಗೆಲ್ಲರಿಗೂ ಆದರ್ಶಪ್ರಾಯರಾದ
ದೂರದೃಷ್ಟಿಯ ಮುತ್ಸದ್ದಿ ನಾಯಕನಿಗೆ ಪುಣ್ಯಸ್ಮರಣೆಯ ಗೌರವದ ಪ್ರಣಾಮಗಳು.
#BabuJagjivanRam
ಭವ್ಯ ಭಾರತದ ನಿರ್ಮಾಣಕ್ಕೆ ಪಣತೊಟ್ಟ ಅದಮ್ಯ ಚೇತನ, ಯುವಜನತೆಗೆ ಪ್ರೇರಕ ಶಕ್ತಿಯಾದ ಚೈತನ್ಯದ ಚಿಲುಮೆ, ಆಧ್ಯಾತ್ಮ ಸಂತ ಸ್ವಾಮಿ ವಿವೇಕಾನಂದರ ಪುಣ್ಯಸ್ಮರಣೆಯಂದು ಶತಕೋಟಿ ನಮನಗಳು.
#SwamiVivekananda
ಒಂದೇ ಜೀವನದಲ್ಲಿ ಹಲವು ಬದುಕುಗಳನ್ನ ನಡೆಸಿ ವಕೀಲರಾಗಿ, ಸಂಶೋಧಕರಾಗಿ, ಶಿಕ್ಷಣ ತಜ್ಞರಾಗಿ, ರಾಜಕಾರಣಿಯಾಗಿ, ಸಹಕಾರ ರಂಗದಲ್ಲೂ ತಮ್ಮ ಚಾಪೂ ಮೂಡಿಸಿದ ವಚನ ಪಿತಾಮಹ ಫ.ಗು.ಹಳಕಟ್ಟಿ ಅವರ ಜನ್ಮದಿನದಂದು ಗೌರವ ಪೂರ್ವಕ ನಮನಗಳು.
#PGHalakatti#Karnataka#Kannada#ವಚನಪಿತಾಮಹ#ಫ_ಗು_ಹಳಕಟ್ಟಿ
ಪತ್ರಿಕಾ ದಿನಾಚರಣೆ ಶುಭಾಶಯಗಳು
ಪತ್ರಿಕೋದ್ಯಮ ಪ್ರಜಾಪ್ರಭುತ್ವದ ನಾಲ್ಕನೆಯ ಸ್ತಂಭವಾಗಿದ್ದು ಜನಸಾಮಾನ್ಯರು ಮತ್ತು ಸರ್ಕಾರಗಳ ನಡುವೆ ಸಂವಹನ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ.
ಪತ್ರಿಕೋದ್ಯಮದ ಎಲ್ಲಾ ನನ್ನ ಮಾಧ್ಯಮ ಮಿತ್ರರಿಗೆ ಪತ್ರಿಕಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
#ಪತ್ರಿಕಾದಿನಾಚರಣೆ#pressday
ನಾಡಿನ ಸಮಸ್ತ ವೈದ್ಯರಿಗೂ ಭಾರತ ರತ್ನ ಡಾ. B.C.ರಾಯ್ ಅವರ ಜನ್ಮದಿನದ ನಿಮಿತ್ತ ಆಚರಿಸಲಾಗುತ್ತಿರುವ ರಾಷ್ಟ್ರೀಯ ವೈದ್ಯರ ದಿನಾಚರಣೆಯ ಶುಭಾಶಯಗಳು. ತಮ್ಮ ಜೀವದ ಹಂಗು ತೊರೆದು ನಮ್ಮೆಲ್ಲರನ್ನೂ ರಕ್ಷಿಸುತ್ತಿರುವ ವೈದ್ಯರು, ಅವರಿಗೆ ಬೆಂಬಲವಾಗಿ ನಿಂತಿರುವ ಎಲ್ಲರ ಸೇವೆಯನ್ನು ಗೌರವದಿಂದ ಸ್ಮರಿಸೋಣ.
#NationalDoctorsDay#doctorsday
ಬೆಂಗಳೂರಿನ ಮೀನುಗಾರಿಕೆ ಅಭಿವೃದ್ಧಿ ನಿಗಮದ ಕೇಂದ್ರ ಕಚೇರಿಗೆ ಸೌಜನ್ಯ ಭೇಟಿ ನೀಡಿದರು.
ಅಧ್ಯಕ್ಷರಾದ ಶ್ರೀಮತಿ ಮಾಲಾ ಬಿ. ನಾರಾಯಣ ರಾವ್ ಅವರು ಉಪ್ಪಾರ. ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನು ಆತ್ಮೀಯವಾಗಿ ಸ್ವಾಗತಿಸಿ ಸನ್ಮಾನಿಸಿದರು.
ಉಭಯ ನಿಗಮಗಳ ಅಭಿವೃದ್ಧಿ ಹಾಗೂ ಪರಸ್ಪರ ಸಹಕಾರದ ಕುರಿತು ಚರ್ಚೆ ನಡೆಯಿತು.
#bengaluru
ಟಿ. ನರಸೀಪುರ ತಾಲೂಕಿನ ಕೆಂಪಯ್ಯನಹುಂಡಿ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದ್ದ ಉಪ್ಪಾರ ಸಮಾಜದ ಒಂದೇ ಕುಟುಂಬದ ಮೂವರು ಮೃತಪಟ್ಟ ಆತ್ಮಹತ್ಯೆ ದುರಂತ ಪ್ರಕರಣದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದೆ. #mysore