Justice M Nagaprasanna presided in Court Hall 14 of the Karnataka High Court until 8:05PM today. The Court heard a total of 555 cases today out of which 305 cases were listed, and 250 moved matters that were heard in a span of 2.5 hours.
ಮಂಗಳೂರನ್ನು ಉಳಿಸಿ – ಪಡೀಲ್ ಬೈಪಾಸ್ ರಾಜಕೀಯ ನಿಲ್ಲಿಸಿ, ಮಂಗಳೂರಿನ ರೈಲ್ವೆ ಸಂಪರ್ಕವನ್ನು ರಕ್ಷಿಸಿ
ಮಂಗಳೂರು ತನ್ನ ರೈಲ್ವೆ ಇತಿಹಾಸದಲ್ಲೇ ಅತ್ಯಂತ ಮಹತ್ವದ ತಿರುವಿನಲ್ಲಿ ಬಂದು ನಿಂತಿದೆ. ದಶಕಗಳಿಂದಲೂ ಕೇರಳದ ತೆಕ್ಕೆಯಲ್ಲಿದ್ದ ಮಂಗಳೂರಿನ ರೈಲ್ವೆ ಜಾಲ, ಯಾವುದೇ ಅಭಿವೃದ್ಧಿ, ಕರ್ನಾಟಕ ಹಾಗೂ ದೇಶದ ವಿವಿಧ ಭಾಗಗಳಿಗೆ ರೈಲು ಸೇವೆ ಸಿಗದೆ, ಕೇವಲ ಕೇರಳದ ರೈಲುಗಳು ಮಂಗಳೂರಿನಿಂದ ಓಡುತ್ತಿರುವುದನ್ನು ನೋಡಿದ ಜನರು ಕರ್ನಾಟಕದ ರೈಲ್ವೆ ಜಾಲದೊಂದಿಗೆ ಸಮರ್ಪಕವಾಗಿ ಜೋಡಿಸಬೇಕು ಇದಕ್ಕೆ ಮಂಗಳೂರಿನ ರೈಲ್ವೆ ಜಾಲವನ್ನು ನೈರುತ್ಯ ರೈಲ್ವೆ ವಲಯದ ಜೊತೆಗೆ ವಿಲೀನಗೊಳಿಸಬೇಕು ಎಂದು ನಿರಂತರವಾಗಿ ಆಗ್ರಹಿಸುತ್ತಲೇ ಬಂದಿದ್ದರು. ಈ ಹಿನ್ನೆಲೆಯಲ್ಲಿ, ರೈಲ್ವೆ ಮಂಡಳಿಯು ಪಡೀಲಿನಿಂದ ಉಳ್ಳಾಲದವರೆಗಿನ ಮಂಗಳೂರು ರೈಲ್ವೆ ಪ್ರದೇಶವನ್ನು ದಕ್ಷಿಣ ರೈಲ್ವೆ ವಲಯದ ಪಾಲಕ್ಕಾಡ್ ವಿಭಾಗದಿಂದ ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗಕ್ಕೆ 2026ರ ಅಕ್ಟೋಬರ್ 1ರಂದು ಹಸ್ತಾಂತರಿಸಲು ತೆಗೆದುಕೊಂಡ ನಿರ್ಧಾರವು ಕರ್ನಾಟಕಕ್ಕೆ ದೊರೆತ ಮಹತ್ವದ ಬೆಳವಣಿಗೆಯಾಗಿದೆ. ಇದರೊಂದಿಗೆ ಎರಡು ವಲಯಗಳ ಇಂಟರ್ಚೇಂಜ್ ಪಾಯಿಂಟ್ ಪಡೀಲ್ನಿಂದ ಉಳ್ಳಾಲಕ್ಕೆ ಸ್ಥಳಾಂತರಗೊಳ್ಳಲಿದ್ದು, ತೋಕೂರು ಯಥಾಪ್ರಕಾರ ಕೊಂಕಣ್ ಹಾಗೂ ನೈಋತ್ಯ ರೈಲ್ವೆ ವಲಯದ ಇಂಟರ್ಚೇಂಜ್ ಆಗಿ ಮುಂದುವರಿಯಲಿದೆ. ಈ ಆಡಳಿತಾತ್ಮಕ ಬದಲಾವಣೆಯು ಮಂಗಳೂರಿಗೆ ಹೆಚ್ಚು ಸದೃಢ ಮತ್ತು ಸಂಘಟಿತ ರೈಲ್ವೆ ವ್ಯವಸ್ಥೆಯನ್ನು ರೂಪಿಸಿಕೊಡಬಲ್ಲದು; ಆದರೆ ಇದರ ನಿಜವಾದ ಪ್ರಯೋಜನ ದೊರೆಯಬೇಕೆಂದರೆ ಮಂಗಳೂರಿನ ರೈಲ್ವೆ ಸಂಪರ್ಕವು ವಿಸ್ತರಣೆಯಾಗಬೇಕೇ ವಿನಃ ಬೈಪಾಸ್ ಆಗಬಾರದು.
ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ಎರಡೂ ಮಂಗಳೂರಿನ ಪ್ರಮುಖ ರೈಲು ನಿಲ್ದಾಣಗಳಾಗಿದೆ. ಯಾವುದೇ ಕಾರಣಕ್ಕೂ ಇವೆರಡರಲ್ಲಿ ಒಂದನ್ನು ಕಡೆಗಣಿಸುವುದಾಗಲಿ ಅಥವಾ ಬಲಿಕೊಡುವುದಾಗಲಿ ಸಲ್ಲದು. ಮಂಗಳೂರು ಸೆಂಟ್ರಲ್ ನಗರದ ಪ್ರಮುಖ ರೈಲು ನಿಲ್ದಾಣವಾಗಿದ್ದು, ಕರ್ನಾಟಕ ಹಾಗೂ ಕೊಂಕಣ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಮಹತ್ವದ ಟರ್ಮಿನಲ್ ಆಗಿದೆ. ಮಂಗಳೂರು ಈಗ ನೈಋತ್ಯ ರೈಲ್ವೆಗೆ ಸೇರ್ಪಡೆಗೊಳ್ಳುತ್ತಿರುವುದರಿಂದ, ಇದು ಕರಾವಳಿ ಭಾಗದಲ್ಲಿ ಮೈಸೂರು ವಿಭಾಗದ ರೈಲುಗಳಿಗೆ ಪ್ರಮುಖ ಆರಂಭಿಕ ಹಾಗೂ ಅಂತ್ಯಗೊಳ್ಳುವ ನಿಲ್ದಾಣವಾಗುವುದರ ಜೊತೆಗೆ, ನೈಋತ್ಯ ರೈಲ್ವೆ ವಲಯಕ್ಕೆ ಅತಿ ಹೆಚ್ಚು ಆದಾಯ ತಂದುಕೊಡುವ ಪ್ರಮುಖ ನಿಲ್ದಾಣಗಳಲ್ಲಿ ಒಂದಾಗಿ ಬೆಳೆಯಬಲ್ಲದು. ಮತ್ತೊಂದೆಡೆ ಮಂಗಳೂರು ಜಂಕ್ಷನ್, ಉತ್ತರ ಮತ್ತು ದಕ್ಷಿಣ ಭಾರತದ ನಡುವೆ ಕೊಂಕಣ ಮಾರ್ಗದಲ್ಲಿ ಸಂಚರಿಸುವ ರೈಲುಗಳಿಗೆ ಪ್ರಮುಖ ಜಂಕ್ಷನ್ ಹಾಗೂ ಕಾರ್ಯಾಚರಣಾ ಕೇಂದ್ರವಾಗಿದ್ದು, ಹಾಸನ–ಬೆಂಗಳೂರು ಕಾರಿಡಾರ್ನಲ್ಲೂ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಮಂಗಳೂರಿಗೆ ಈ ಎರಡೂ ನಿಲ್ದಾಣಗಳೂ ಅತ್ಯಗತ್ಯ.
ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ಕೇವಲ ಮಂಗಳೂರು ನಗರದ ನಿವಾಸಿಗಳಿಗಷ್ಟೇ ಸೀಮಿತವಾದ ನಿಲ್ದಾಣಗಳಲ್ಲ. ಹಾಸನ, ಮೈಸೂರು, ಬೆಂಗಳೂರು ಹಾಗೂ ಕರ್ನಾಟಕದ ಇತರೆ ಭಾಗಗಳ ಪ್ರಯಾಣಿಕರು ಮಂಗಳೂರು ಮತ್ತು ಕರಾವಳಿ ಕರ್ನಾಟಕಕ್ಕೆ ಬರುವಾಗ ಇದೇ ನಿಲ್ದಾಣಗಳನ್ನು ಬಳಸುತ್ತಾರೆ. ಬೆಂಗಳೂರು–ಮಡಗಾಂವ್ ವಂದೇ ಭಾರತ್ ರೈಲನ್ನು ಕುಣಿಗಲ್–ಪಡೀಲ್ ಬೈಪಾಸ್ ಮಾರ್ಗವಾಗಿ ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ಎರಡನ್ನೂ ಬೈಪಾಸ್ ಮಾಡಿ ಓಡಿಸಲು ಪ್ರಸ್ತಾಪಿಸಿದಾಗ ಇದು ಸ್ಪಷ್ಟವಾಗಿ ಸಾಬೀತಾಗಿತ್ತು. ಈ ಪ್ರಸ್ತಾವನೆಗೆ ಕೇವಲ ಮಂಗಳೂರಿನಿಂದ ಮಾತ್ರವಲ್ಲದೆ ಹಾಸನ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಪ್ರಯಾಣಿಕರಿಂದಲೂ ತೀವ್ರ ವಿರೋಧ ವ್ಯಕ್ತವಾಯಿತು. ಈ ನಿಲ್ದಾಣಗಳು ಇಡೀ ಪ್ರಾಂತ್ಯದ ಹೆಬ್ಬಾಗಿಲುಗಳೇ ಹೊರತು ಕೇವಲ ಸ್ಥಳೀಯ ನಿಲ್ದಾಣಗಳಲ್ಲ. ಅಂತಿಮವಾಗಿ ಮಂಗಳೂರನ್ನು ಬೈಪಾಸ್ ಮಾಡುವ ಆ ಪ್ರಸ್ತಾವನೆ ಜಾರಿಯಾಗಲೇ ಇಲ್ಲ.
ಮಂಗಳೂರು ಪ್ರವೇಶಿಸುವ ರೈಲುಗಳು ಎರಡರಿಂದ ಮೂರು ಗಂಟೆಗಳ ಕಾಲ ಅನಗತ್ಯ ವಿಳಂಬವನ್ನು ಎದುರಿಸುತ್ತವೆ ಎಂಬ ವಾದವನ್ನು ಸರಿಯಾಗಿ ಪರಿಶೀಲಿಸಬೇಕಾಗಿದೆ. ವಾಸ್ತವಿಕ ರೈಲು ಸಂಚಾರದ ಅಂಕಿಅಂಶಗಳು ಇಂತಹ ಸಾರಾಸಗಟು ಆರೋಪವನ್ನು ಪುಷ್ಟೀಕರಿಸುವುದಿಲ್ಲ. ದಿನಾಂಕ 01.09.2026ರಂದು, ರೈಲು ಸಂಖ್ಯೆ 16516 ಕಾರವಾರ–ಯಶವಂತಪುರ ಎಕ್ಸ್ಪ್ರೆಸ್ ಸುರತ್ಕಲ್ನಿಂದ ಮಂಗಳೂರು ಜಂಕ್ಷನ್ ಮೂಲಕ ಬಂಟ್ವಾಳ ತಲುಪಲು ತೆಗೆದುಕೊಂಡ ಸಮಯ ಸರಿಸುಮಾರು 90 ನಿಮಿಷಗಳು ; ಅದೇ ರೀತಿ ರೈಲು ಸಂಖ್ಯೆ 16516 ಕಾರವಾರ–ಕ್ರಾ.ಸಂ.ರಾ ಬೆಂಗಳೂರು ಪಂಚಗಂಗಾ ಎಕ್ಸ್ಪ್ರೆಸ್ ಸುರತ್ಕಲ್ನಿಂದ ಬಂಟ್ವಾಳಕ್ಕೆ ಅದೇ 62 ನಿಮಿಷಗಳನ್ನು ತೆಗೆದುಕೊಂಡಿದೆ. ಈ ಸಮಯದ ಲೆಕ್ಕಾಚಾರಗಳು ಮಂಗಳೂರು ಪ್ರವೇಶಿಸಿದಾಕ್ಷಣ ರೈಲುಗಳು ಗಂಟೆಗಟ್ಟಲೆ ತಡವಾಗುತ್ತವೆ ಎಂಬ ವಾದ ಸಂಪೂರ್ಣ ಸುಳ್ಳು ಎಂಬುದನ್ನು ಸ್ಪಷ್ಟಪಡಿಸುತ್ತವೆ. ಒಂದು ವೇಳೆ ನಿರ್ದಿಷ್ಟ ರೈಲುಗಳು ತಡವಾಗುತ್ತಿದ್ದರೆ, ಅದಕ್ಕೆ ಕಾರಣವಾದ ನಿರ್ದಿಷ್ಟ ಅಡೆತಡೆಗಳನ್ನು ಪತ್ತೆಹಚ್ಚಿ ಕಾರ್ಯಾಚರಣೆಯನ್ನು ಸುಧಾರಿಸಬೇಕೇ ಹೊರತು, ಮಾರ್ಗದಿಂದ ಮಂಗಳೂರನ್ನೇ ಕೈಬಿಡುವುದಲ್ಲ.
ಅದೇ ರೀತಿ, ದಿನಾಂಕ ಸೆಪ್ಟೆಂಬರ್ 2,2026ರಂದು, ರೈಲು ಸಂಖ್ಯೆ 16585 ಸರ್.ಎಂ ವಿಶೇಶ್ವರಯ್ಯ ಟರ್ಮಿನಲ್ ಬೆಂಗಳೂರು–ಮುರುಡೇಶ್ವರ ಎಕ್ಸ್ಪ್ರೆಸ್ ಬೆಳಗ್ಗೆ ಸುಮಾರು 09:27ಕ್ಕೆ ಮಂಗಳೂರು ಜಂಕ್ಷನ್ ತಲುಪಿ, 09:48ಕ್ಕೆ ಮಂಗಳೂರು ಸೆಂಟ್ರಲ್ ಆಗಮಿಸಿ ರೈಲಿಗೆ ನೀರು ತುಂಬಿಸುವ ಪ್ರಕ್ರಿಯೆ ಮುಗಿಸಿ 10:22ಕ್ಕೆ ಸೆಂಟ್ರಲ್ನಿಂದ ನಿರ್ಗಮಿಸಿದೆ. ನಂತರ ಬೆಳಗ್ಗೆ 10:51–10:53 ಸುಮಾರಿಗೆ ಜೋಕಟ್ಟೆ ನಿಲ್ದಾಣ ತಲುಪಿದೆ . ಅಂದರೆ ಮಂಗಳೂರು ಸೆಂಟ್ರಲ್ನಿಂದ ನಿರ್ಗಮಿಸಿದ ನಂತರ ಜೋಕಟ್ಟೆ ತಲುಪಲು ತೆಗೆದುಕೊಂಡ ಸಮಯ ಕೇವಲ 29–31 ನಿಮಿಷಗಳು ಮಾತ್ರ. ಮಂಗಳೂರು ಸೆಂಟ್ರಲ್ ಆಗಮನದಿಂದ ಹಿಡಿದು ಜೋಕಟ್ಟೆ ತಲುಪುವವರೆಗಿನ ಒಟ್ಟು ಸಮಯ ಸುಮಾರು 63–65 ನಿಮಿಷಗಳಾಗಿದ್ದು, ಇದರಲ್ಲಿ ಸುಮಾರು 34 ನಿಮಿಷಗಳು ಸೆಂಟ್ರಲ್ನಲ್ಲಿ ವಾಟರಿಂಗ್ ಮತ್ತು ಇತರೆ ಕಾರ್ಯಾಚರಣೆಯ ಅಗತ್ಯಗಳಿಗಾಗಿ ವ್ಯಯವಾಗಿತ್ತು. ಈ ವಾಸ್ತವಿಕ ಅಂಶಗಳು ರೈಲುಗಳು ಮಂಗಳೂರು ಪ್ರವೇಶಿಸಿದರೆ ಎರಡರಿಂದ ಮೂರು ಗಂಟೆ ವಿಳಂಬವಾಗುತ್ತದೆ ಎಂಬ ವಾದವನ್ನು ಸಂಪೂರ್ಣವಾಗಿ ತಳ್ಳಿಹಾಕುತ್ತವೆ. ಒಂದು ವೇಳೆ ನಿರ್ದಿಷ್ಟ ರೈಲು ಹೆಚ್ಚು ತಡವಾಗುತ್ತಿದ್ದರೆ, ರೈಲು ಸಂಚರಿಸುವ ಮಾರ್ಗದಲ್ಲಿರುವ ನೈಜ ಅಡೆತಡೆಗಳನ್ನು ಪತ್ತೆಹಚ್ಚಿ ಉತ್ತಮ ಯೋಜನಾ ನಿರ್ವಹಣೆ, ಸುಧಾರಿತ ಟರ್ನ್ಅರೌಂಡ್ ವ್ಯವಸ್ಥೆ, ವಾಟರಿಂಗ್ ಸೌಲಭ್ಯ, ಸಿಗ್ನಲಿಂಗ್ ಮತ್ತು ಮೂಲಸೌಕರ್ಯಗಳ ಮೂಲಕ ಪರಿಹರಿಸಬೇಕೇ ಹೊರತು, ಮಂಗಳೂರನ್ನೇ ಬೈಪಾಸ್ ಮಾಡುವುದಲ್ಲ.
ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ಮೂಲಕ ರೈಲುಗಳು ಸಂಚರಿಸುವುದರಿಂದ ಹೆಚ್ಚಿನ ಸಮಯ ವ್ಯಯವಾಗುತ್ತದೆ ಎಂಬ ವಾದವನ್ನೇ ಒಪ್ಪಿಕೊಳ್ಳುವುದಾದರೆ, ಅದೇ ತರ್ಕವನ್ನು ಇತರ ಕಡೆಗಳಿಗೂ ಅನ್ವಯಿಸಬೇಕಲ್ಲವೇ? ಹಾಗಾದರೆ ಸಮಯ ಉಳಿತಾಯ ಮತ್ತು ಸಮಯಪಾಲನೆಯ ನೆಪವೊಡ್ಡಿ ಕೊಂಕಣ ಮಾರ್ಗದ ರೈಲುಗಳು ಕುಂದಾಪುರ, ಬೈಂದೂರು, ಉಡುಪಿ ಸೇರಿದಂತೆ ಇತರೆ ಯಾವುದೇ ನಿಲ್ದಾಣಗಳಲ್ಲೂ ನಿಲ್ಲದೆ ನಾನ್-ಸ್ಟಾಪ್ ಆಗಿ ಓಡಬೇಕೇ? ಖಂಡಿತವಾಗಿಯೂ ಇಲ್ಲ. ಆ ನಿಲ್ದಾಣಗಳಿಂದ ಪ್ರಯಾಣಿಸುವ ಪ್ರಯಾಣಿಕರಿಗೆ ರೈಲು ಸೇವೆ ಅಗತ್ಯವಿರುವುದರಿಂದಲೇ ಹಲವರು ರೈಲುಗಳಿಗೆ ನಿಲುಗಡೆಗಳನ್ನು ನೀಡಲಾಗಿದೆ. ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ನಿಲ್ದಾಣಗಳು ಅಸ್ತಿತ್ವದಲ್ಲಿರುವುದೂ ಇಲ್ಲಿಂದ ಸಂಚರಿಸುವ ಸಾವಿರಾರು ರೈಲು ಪ್ರಯಾಣಿಕರ ಅಗತ್ಯಕ್ಕಾಗಿಯೇ. ಒಂದು ಪ್ರಮುಖ ರೈಲ್ವೆ ಕೇಂದ್ರದ ಸಂಪರ್ಕ ವ್ಯವಸ್ಥೆಗಿಂತ ರೈಲಿನ ಕೆಲವೇ ನಿಮಿಷಗಳ ಕಾರ್ಯಾಚರಣಾ ಸಮಯ ಎಂದಿಗೂ ದೊಡ್ಡದಾಗಲು ಸಾಧ್ಯವಿಲ್ಲ. ಸಮಯಪಾಲನೆಯೇ ಆದ್ಯತೆಯಾಗಿದ್ದರೆ, ವಿವಿಧ ಭಾಗಗಳ ವೇಗda ಮಿತಿ ಹೆಚ್ಚಳ, ಆಧುನಿಕ ಸಿಗ್ನಲಿಂಗ್ ವ್ಯವಸ್ಥೆ, ವೈಜ್ಞಾನಿಕ ವೇಳಾಪಟ್ಟಿ, ಉತ್ತಮ ಟರ್ನ್ಅರೌಂಡ್ ವ್ಯವಸ್ಥೆ ಮತ್ತು ಹಳಿಗಳ ಮೂಲಸೌಕರ್ಯವನ್ನು ಸುಧಾರಿಸಬೇಕೇ ಹೊರತು ಮಂಗಳೂರನ್ನು ಬೈಪಾಸ್ ಮಾಡುವುದಲ್ಲ.
ಭಾರತೀಯ ರೈಲ್ವೆಯು ಈಗಾಗಲೇ ಹಲವಾರು ಪ್ರಮುಖ ರೈಲುಗಳನ್ನು ಮಾರ್ಗಮಧ್ಯೆ ರಿವರ್ಸಲ್ ಮಾಡಿ ಯಶಸ್ವಿಯಾಗಿ ಓಡಿಸುತ್ತಿದೆ. ರೈಲು ಸಂಖ್ಯೆ 22469/22470 ಹಜರತ್ ನಿಜಾಮುದ್ದೀನ್–ಖಜುರಾಹೊ ವಂದೇ ಭಾರತ್ ಲಲಿತ್ಪುರದಲ್ಲಿ, ರೈಲು ಸಂಖ್ಯೆ 20979/20980 ಉದಯಪುರ ಸಿಟಿ–ಆಗ್ರಾ ಕ್ಯಾಂಟ್ ವಂದೇ ಭಾರತ್ ಕೋಟಾದಲ್ಲಿ, ರೈಲು ಸಂಖ್ಯೆ 12441/12442 ಬಿಲಾಸ್ಪುರ–ನವದೆಹಲಿ ರಾಜಧಾನಿ ನಾಗ್ಪುರದಲ್ಲಿ, ರೈಲು ಸಂಖ್ಯೆ 20501/20502 ಅಗರ್ತಲಾ–ಆನಂದ್ ವಿಹಾರ್ ತೇಜಸ್ ರಾಜಧಾನಿ ಬದರ್ಪುರದಲ್ಲಿ, ರೈಲು ಸಂಖ್ಯೆ 12017/12018 ನವದೆಹಲಿ–ಡೆಹ್ರಾಡೂನ್ ಶತಾಬ್ದಿ ಸಹಾರನ್ಪುರದಲ್ಲಿ ಹಾಗೂ ರೈಲು ಸಂಖ್ಯೆ 12061/12062 ರಾಣಿ ಕಮಲಾಪತಿ–ಜಬಲ್ಪುರ ಜನ್ ಶತಾಬ್ದಿ ಇಟಾರ್ಸಿಯಲ್ಲಿ ರಿವರ್ಸಲ್ ಆಗುತ್ತವೆ. ಕಾರ್ಯಾಚರಣೆಯ ಇಂತಹ ಸವಾಲುಗಳನ್ನು ನಿಭಾಯಿಸಲು ರೈಲ್ವೆ ತಂತ್ರಜ್ಞಾನ ಮತ್ತು ಸುಧಾರಿತ ನಿರ್ವಹಣಾ ಪದ್ಧತಿಗಳನ್ನು ಬಳಸಲಾಗುತ್ತದೆಯೇ ಹೊರತು, ಜನೋಪಯೋಗಿ ಮಾರ್ಗಗಳನ್ನೇ ರದ್ದುಪಡಿಸುವುದಿಲ್ಲ.
ಇದಲ್ಲದೆ, ಪಡೀಲ್ ಎಂಬ ಹೆಸರಿನ ರೈಲು ನಿಲ್ದಾಣದ ಸುತ್ತಲೂ ಗಂಭೀರವಾದ ಗೊಂದಲಗಳನ್ನು ಸೃಷ್ಟಿಸಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ನೂತನ ಕಚೇರಿಯ ಸಂಕೀರ್ಣವಿರುವುದು ಪಡೀಲ್ ಪ್ರದೇಶದಲ್ಲಿ; ಮಂಗಳೂರು ಜಂಕ್ಷನ್ ನಿಲ್ದಾಣವು ನೂತನ ಡಿಸಿ ಕಚೇರಿಯ ಹಿಂಭಾಗದಲ್ಲೇ ಕೇವಲ 1.1 ಕಿ.ಮೀ ರಸ್ತೆ ದೂರದಲ್ಲಿದೆ. ಇನ್ನು ಪಡೀಲಿನಲ್ಲಿರುವ ರಾಷ್ಟ್ರೀಯ ಹೆದ್ದಾರಿ ಹಾಗೂ ಮಂಗಳೂರು ನಗರವನ್ನು ಸಂಪರ್ಕಿಸುವ ಮುಖ್ಯ ರಸ್ತೆಯ ಜಂಕ್ಷನ್ ಪಾಯಿಂಟ್ ಮಂಗಳೂರು ಜಂಕ್ಷನ್ನಿಂದ ಕೇವಲ 1.3 ಕಿ.ಮೀ ದೂರದಲ್ಲಿದೆ. ಆದರೆ, ಅಧಿಕೃತವಾಗಿ 'ಪಡೀಲ್' ಎಂದು ಕರೆಯಲ್ಪಡುವ ರೈಲ್ವೆ ನಿಲ್ದಾಣವು ಸಂಪೂರ್ಣ ಬೇರೆ ಸ್ಥಳದಲ್ಲಿದ್ದು, ಅದು ಪಡೀಲ್ ಜಂಕ್ಷನ್ ಪಾಯಿಂಟ್ನಿಂದ ಸುಮಾರು 5.5 ಕಿ.ಮೀ ಹಾಗೂ ನೂತನ ಡಿಸಿ ಕಚೇರಿಯಿಂದ ರಸ್ತೆ ಮಾರ್ಗವಾಗಿ ಸುಮಾರು 7.6 ಕಿ.ಮೀ ದೂರದಲ್ಲಿರುವ ಒಂದು ಗುಡ್ಡದ ಮೇಲಿನ ಪ್ರದೇಶದಲ್ಲಿದೆ. ಆದ್ದರಿಂದ, ಪಡೀಲ್ ಪ್ರದೇಶ, ಪಡೀಲ್ ಜಂಕ್ಷನ್ ಪಾಯಿಂಟ್ ಮತ್ತು ಪಡೀಲ್ ರೈಲ್ವೆ ನಿಲ್ದಾಣ,ಇವು ಮೂರೂ ಒಂದೇ ಅಲ್ಲ. ಪಡೀಲ್ ಹಾಗೂ ಡಿಸಿ ಕಚೇರಿ ಭಾಗಕ್ಕೆ ನಿಜವಾಗಿಯೂ ಸಂಪರ್ಕ ನೀಡುವ ಸಮೀಪದ ರೈಲ್ವೆ ನಿಲ್ದಾಣವೆಂದರೆ ಅದು ಮಂಗಳೂರು ಜಂಕ್ಷನ್.
ಬೆಂಗಳೂರಿನಿಂದ ಕುಂದಾಪುರದ ಕಡೆಗೆ ಸಂಚರಿಸುವ ಬಸ್ಸುಗಳು ಮಂಗಳೂರು ನಗರವನ್ನು ಪ್ರವೇಶಿಸಿಯೇ ಮುಂದೆ ಸಾಗುತ್ತವೆ; ನಗರ ಪ್ರವೇಶದಿಂದ ಸಮಯ ವ್ಯರ್ಥವಾಗುತ್ತದೆ ಎಂಬ ಕಾರಣಕ್ಕೆ ಬಸ್ಸುಗಳು ಮಂಗಳೂರನ್ನು ಬೈಪಾಸ್ ಮಾಡಬೇಕೆಂದು ಯಾರೂ ವಾದಿಸುವುದಿಲ್ಲ. ಪ್ರಯಾಣಿಕರ ಹಿತದೃಷ್ಟಿಯಿಂದ ಬಸ್ಸುಗಳು ಮಂಗಳೂರು ನಗರಕ್ಕೆ ಬರಬಹುದಾದರೆ, ರೈಲುಗಳು ಮಾತ್ರ ನಗರವನ್ನು ಏಕೆ ತಪ್ಪಿಸಬೇಕು? ಬಸ್ಸುಗಳು ಮಂಗಳೂರು ಪ್ರವೇಶಿಸಬಹುದಾದರೆ, ರೈಲುಗಳೂ ಪ್ರವೇಶಿಸಲೇಬೇಕು. ಇದು ಕೇವಲ ಚಾಲನಾ ಸಮಯದ ವಿಷಯವಲ್ಲ; ಸಾರ್ವಜನಿಕರ ಪ್ರಯಾಣದ ಹಕ್ಕಿನ ಪ್ರಶ್ನೆ.
ರೈಲು ಸಂಖ್ಯೆ 16585/16586 ಸರ್.ಎಂ ವಿಶೇಶ್ವರಯ್ಯ ಟರ್ಮಿನಲ್ ಬೆಂಗಳೂರು–ಮುರುಡೇಶ್ವರ ಎಕ್ಸ್ಪ್ರೆಸ್ ಮಂಗಳೂರು ಸೆಂಟ್ರಲ್ನಿಂದ ಮೂಕಾಂಬಿಕಾ ರೋಡ್–ಬೈಂದೂರು ಹಾಗೂ ಕೊಂಕಣ ಭಾಗದ ನಿಲ್ದಾಣಗಳ ಕಡೆಗೆ ಪ್ರಯಾಣಿಸುವ ಜನರಿಗೆ ಅತ್ಯಂತ ಪ್ರಮುಖ ಸಂಪರ್ಕ ಕೊಂಡಿಯಾಗಿದೆ. ಅಷ್ಟೇ ಅಲ್ಲದೆ ಸುಬ್ರಹ್ಮಣ್ಯ ಹಾಗೂ ಮಂಗಳೂರು ನಡುವೆ ಸಂಚರಿಸುವ ನಿತ್ಯ ಪ್ರಯಾಣಿಕರಿಗೂ ಉಪಕಾರಿಯಾಗಿದೆ.ಬೇರೊಂದು ಭಾಗಕ್ಕೆ ಪ್ರತ್ಯೇಕ ರೈಲು ಬೇಕಿದ್ದರೆ ಹೊಸ ರೈಲನ್ನು ಕೇಳಬೇಕೇ ಹೊರತು, ಮಂಗಳೂರನ್ನು ಸಂಪರ್ಕಿಸುವ ರೈಲನ್ನು ಕಸಿದುಕೊಳ್ಳುವುದಾಗಲಿ ಅಥವಾ ಅದರ ಮಾರ್ಗ ಬದಲಿಸುವುದಾಗಲಿ ಸರಿಯಲ್ಲ.
ಇದೇ ರೀತಿ, ರೈಲು ಸಂಖ್ಯೆ 16595/16596 ಕ್ರಾ.ಸಂ.ರಾ ಬೆಂಗಳೂರು–ಕಾರವಾರ ಪಂಚಗಂಗಾ ಎಕ್ಸ್ಪ್ರೆಸ್ ರೈಲಿನ ಮಾರ್ಗವನ್ನು ಪ್ರಯಾಣಿಕರ ದೃಷ್ಟಿಕೋನದಿಂದ ಮರುಪರಿಶೀಲಿಸಬೇಕಾಗಿದೆ. ಈ ರೈಲು ಸುಬ್ರಹ್ಮಣ್ಯ ರೋಡ್ ನಿಲ್ದಾಣದಲ್ಲಿ ರಾತ್ರಿ ವೇಳೆ ಗಂಟೆಗಟ್ಟಲೆ ನಿಲ್ಲುತ್ತಿದೆ. ಇದೇ ಸಮಯವನ್ನು ಸರಿಯಾಗಿ ಬಳಸಿ ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ಮಾರ್ಗವಾಗಿ ಓಡಿಸಿ ಹೆಚ್ಚಿನ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬಹುದೇ ಎಂಬುದನ್ನು ರೈಲ್ವೆ ಇಲಾಖೆ ಪರಿಶೀಲಿಸಬೇಕು. ಪಂಚಗಂಗಾ ಎಕ್ಸ್ಪ್ರೆಸ್ ಕರಾವಳಿ ಕರ್ನಾಟಕದ ಜೀವನಾಡಿಯಾಗಬೇಕಾದರೆ ಅದನ್ನು ಮಂಗಳೂರಿನ ಮೂಲಕ ಓಡಿಸಬೇಕೆ ವಿನಃ ಮಂಗಳೂರಿನ ಸಂಪರ್ಕವನ್ನು ಕಡಿತಗೊಳಿಸಲು ದಾಳವಾಗಿ ಬಳಸಿಕೊಳ್ಳಬಾರದು.
ಹಿಂದೆ ವಿಶೇಷ ರೈಲಾಗಿ ಓಡುತ್ತಿದ್ದ, ಪ್ರಸ್ತುತ ಖಾಯಂಗೊಂಡು ರೈಲು ಸಂಖ್ಯೆ 17377/17378 ಆಗಿ ಚಲಿಸುತ್ತಿರುವ ಮಂಗಳೂರು ಸೆಂಟ್ರಲ್–ವಿಜಯಪುರ ಎಕ್ಸ್ಪ್ರೆಸ್ ಸುತ್ತ ನಡೆದ ವಿವಾದವೂ ಇದಕ್ಕೆ ಮತ್ತೊಂದು ಸ್ಪಷ್ಟ ನಿದರ್ಶನ. ಈ ರೈಲು ವಿಶೇಷ ರೈಲಾಗಿದ್ದಾಗ, ಕರ್ನಾಟಕದ ಬಹುತೇಕ ಪ್ರದೇಶಗಳಿಗೆ ಸಂಪರ್ಕ ಒದಗಿಸುವ, ಪ್ರಯಾಣಿಕರಿಗೆ ಹೆಚ್ಚು ಉಪಕಾರಿಯಾಗಿರುವ ವಿಜಯಪುರ–ಹುಬ್ಬಳ್ಳಿ–ಅರಸೀಕೆರೆ–ಹಾಸನ–ಮಂಗಳೂರು ಮಾರ್ಗದ ಬದಲಾಗಿ, ಹುಬ್ಬಳ್ಳಿ ಜಂಕ್ಷನ್, ಲೋಂಡಾ ಜಂಕ್ಷನ್, ಮಡಗಾಂವ್ ಜಂಕ್ಷನ್ ಮತ್ತು ಪಡೀಲ್ ಬೈಪಾಸ್ ಮೂಲಕ 'ವಿಜಯಪುರ–ಸುಬ್ರಹ್ಮಣ್ಯ ರೋಡ್' ಮಾರ್ಗವಾಗಿ ತಿರುಗಿಸಿ ಖಾಯಂಗೊಳಿಸಲು ಇದೇ ಕುಂದಾಪುರ–ಗೋವಾ ಲಾಬಿ ತೀವ್ರ ಹುನ್ನಾರ ನಡೆಸಿತ್ತು. ಅಂತಹ ಬದಲಾವಣೆಯು ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ರೈಲು ನಿಲ್ದಾಣಗಳನ್ನು ಸಂಪೂರ್ಣವಾಗಿ ಬೈಪಾಸ್ ಮಾಡುವುದರ ಜೊತೆಗೆ, ಸಕಲೇಶಪುರ ಮತ್ತು ಹುಬ್ಬಳ್ಳಿ ನಡುವೆ ಇರುವ ಪ್ರದೇಶ ಹಾಗೂ ಕರಾವಳಿ ಕರ್ನಾಟಕದ ನಡುವಿನ ರೈಲು ಸಂಪರ್ಕವನ್ನೇ ಬುಡಮೇಲು ಮಾಡುತ್ತಿತ್ತು.ಈ ಪ್ರಸ್ತಾವನೆಗೆ ಮಂಗಳೂರು ಮತ್ತು ಕರ್ನಾಟಕದ ಇತರೆ ಭಾಗಗಳಿಂದ ತೀವ್ರ ವಿರೋಧ ವ್ಯಕ್ತವಾದಾಗ ಭಾರೀ ಮುಖಭಂಗ ಅನುಭವಿಸಿತು. ವಂದೇ ಭಾರತ್ ಮತ್ತು ವಿಜಯಪುರ–ಮಂಗಳೂರು ಸೆಂಟ್ರಲ್ ರೈಲುಗಳನ್ನು ಮಂಗಳೂರನ್ನು ಬೈಪಾಸ್ ಮಾಡಲು ಪ್ರಯತ್ನಿಸಿದಾಗಲೆಲ್ಲಾ ಕುಂದಾಪುರ–ಗೋವಾ ಲಾಬಿ ಈಗಾಗಲೇ ಭಾರೀ ಮುಖಭಂಗ ಅನುಭವಿಸಿದೆ.
ಈ ಪತ್ರಿಕಾ ಲೇಖನದ ಲೇಖಕರಾಗಿರುವ ರಾಜೀವ್ ಗಾಂವ್ಕರ್ ಅವರು ಈ ಮಾರ್ಗವನ್ನು ಬೆಂಬಲಿಸುತ್ತಿರುವುದರ ಹಿಂದಿನ ಉದ್ದೇಶವನ್ನು ಯೋಚಿಸಬೇಕಾಗಿದೆ. ಹಿಂದೆ ಮಂಗಳೂರಿನ ರೈಲ್ವೆ ಬಳಕೆದಾರರು ಮತ್ತು ಹೋರಾಟಗಾರರು ರೈಲು ಸಂಖ್ಯೆ 16515/16 ಯಶವಂತಪುರ–ಮಂಗಳೂರು ಸೆಂಟ್ರಲ್ ಎಕ್ಸ್ಪ್ರೆಸ್ (ಪ್ರಸ್ತುತ ಯಶವಂತಪುರ–ಕಾರವಾರ ಎಕ್ಸ್ಪ್ರೆಸ್ ಆಗಿ ಸಂಚರಿಸುತ್ತಿರುವ) ರೈಲನ್ನು ಕಾರವಾರ ತನಕ ವಿಸ್ತರಿಸುವ ಪ್ರಯತ್ನಗಳನ್ನು ಬೆಂಬಲಿಸಿದ್ದರು. ಅಷ್ಟೇ ಅಲ್ಲದೆ, ಈ ಹಿಂದೆ ಕೇವಲ ಮಂಗಳೂರು ಸೆಂಟ್ರಲ್ವರೆಗೆ ಮಾತ್ರ ಮೀಸಲಾಗಿದ್ದು, ನಂತರ ಕೇರಳ ಲಾಬಿಯ ಒತ್ತಡದಿಂದಾಗಿ ಕಣ್ಣೂರಿಗೆ ವಿಸ್ತರಿಸಲ್ಪಟ್ಟ ಕ್ರಾ.ಸಂ.ರಾ ಬೆಂಗಳೂರು–ಕಣ್ಣೂರು ಎಕ್ಸ್ಪ್ರೆಸ್ ರೈಲನ್ನು ಕಾರವಾರಕ್ಕೆ ಓಡಿಸಬೇಕೆಂದು ಕೋರಿ ಕರ್ನಾಟಕ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದು ಮಂಗಳೂರಿನ ಜನರೇ. ಅಂದು ಅದು ಕರಾವಳಿ ಕರ್ನಾಟಕದ ಸಂಪರ್ಕವನ್ನು ವಿಸ್ತರಿಸುವುದು ಮತ್ತು ಮಂಗಳೂರನ್ನು ಪ್ರಮುಖ ರೈಲ್ವೆ ಕೇಂದ್ರವನ್ನಾಗಿ ಬಲಪಡಿಸುವುದೇ ಉದ್ದೇಶ ಆಗಿತ್ತು. ಆದರೆ, ಆ ರೈಲುಗಳನ್ನು ವಿಸ್ತರಿಸುವಾದರ ಹಿಂದಿನ ಪ್ರಯತ್ನವನ್ನು ರಾಜೀವ್ ಗಾಂವ್ಕರ್ ಮರೆತು ಮಂಗಳೂರಿಗರ ಬೆನ್ನಿಗೆ ಚೂರಿ ಹಾಕಿ ಮಂಗಳೂರನ್ನು ಬೈಪಾಸ್ ಮಾಡುವ ಮಾರ್ಗವನ್ನು ಬೆಂಬಲಿಸುವುದನ್ನು ನೋಡುವಾಗ ಅವರು ಕುಂದಾಪುರ–ಗೋವಾ ಲಾಬಿಯ ಮಧ್ಯವರ್ತಿಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೇ ಎದ್ದು ಕಾಣುತ್ತಿದೆ. ಕರಾವಳಿ ಕರ್ನಾಟಕದ ರೈಲ್ವೆ ಜಾಲದಲ್ಲಿ ಮಂಗಳೂರಿನ ಪಾತ್ರವನ್ನು ಬಲಪಡಿಸಲು ಈ ಹಿಂದೆ ನಡೆದ ಪ್ರಯತ್ನಗಳೊಂದಿಗೆ ಇವರ ಇಂದಿನ ನಿಲುವನ್ನು ಹೊಂದಾಣಿಕೆ ಮಾಡಲು ಸಾಧ್ಯವೇ ಇಲ್ಲ. ಮತ್ತೊಂದು ಪ್ರದೇಶಕ್ಕೆ ರೈಲು ಅಗತ್ಯವಿದ್ದರೆ ಹೊಸ ರೈಲಿಗೆ ಬೇಡಿಕೆ ಇಡುವುದನ್ನು ಬಿಟ್ಟು ಮಂಗಳೂರಿನಲ್ಲಿ ಅಸ್ತಿತ್ವದಲ್ಲಿರುವ ಸೇವೆಯನ್ನು ಯಾವುದೇ ಕಾರಣಕ್ಕೂ ದುರ್ಬಲಗೊಳಿಸಬೇಡಿ.
ಇಲ್ಲಿ ಗಮನಿಸಬೇಕಾದ ಮತ್ತೊಂದು ಗಂಭೀರ ಅಂಶವೆಂದರೆ,ಮಂಗಳೂರನ್ನು ಬೈಪಾಸ್ ಮಾಡುವಂತೆ ಒತ್ತಾಯಿಸುವ ಮೂಲಕ ಕುಂದಾಪುರ–ಗೋವಾ ಲಾಬಿಯು, ಪರೋಕ್ಷವಾಗಿ ಕೇರಳ ಲಾಬಿಗೆ ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ರೈಲು ನಿಲ್ದಾಣಗಳಲ್ಲಿ ಮತ್ತಷ್ಟು ಕೇರಳ-ಕೇಂದ್ರಿತ ರೈಲುಗಳನ್ನು ನುಸುಳಿಸಲು ಅನುಕೂಲಕರ ವಾತಾವರಣವನ್ನು ನಿರ್ಮಿಸಿಕೊಡುತ್ತಿದೆ; ಪರಿಣಾಮವಾಗಿ ಮಂಗಳೂರಿಗೆ ಬೇಕಾದ ಅಗತ್ಯ ರೈಲು ಸೇವೆಗಳು ಸಿಗದೆ ಹೋಗಲಿದೆ. ಇದು ಕೇರಳ, ಗೋವಾ, ಕುಂದಾಪುರ, ಉಡುಪಿ ಅಥವಾ ಇನ್ಯಾವುದೇ ಭಾಗದ ಪ್ರಯಾಣಿಕರ ಮೇಲಿನ ದ್ವೇಷವಲ್ಲ. ಮಂಗಳೂರು ಪ್ರತಿಯೊಂದು ಪ್ರದೇಶದ ರೈಲ್ವೆ ಸಂಪರ್ಕವನ್ನೂ ಮುಕ್ತವಾಗಿ ಸ್ವಾಗತಿಸುತ್ತದೆ; ಆದರೆ ಮತ್ತೊಂದು ಪ್ರದೇಶದ ಬೇಡಿಕೆಯನ್ನು ಈಡೇರಿಸಲು ಮಂಗಳೂರಿನ ಸಂಪರ್ಕವನ್ನು ಯಾವುದೇ ಕಾರಣಕ್ಕೂ ಬಲಿಗೊಡಬಾರದು.
ಮಂಗಳೂರನ್ನು ನೈಋತ್ಯ ರೈಲ್ವೆ ವಲಯದ ಜೊತೆಗೆ ವಿಲೀನಗೊಳಿಸುವಾಗ ಮಂಗಳೂರು ಸೆಂಟ್ರಲ್ ಅನ್ನು ಮಂಗಳೂರು ನಗರದ ಪ್ರಮುಖ ರೈಲು ನಿಲ್ದಾಣ ಹಾಗೂ ಟರ್ಮಿನಲ್ ಆಗಿ ಮತ್ತು ಮಂಗಳೂರು ಜಂಕ್ಷನ್ ಅನ್ನು ಪ್ರಮುಖ ಜಂಕ್ಷನ್ ಹಾಗೂ ಕಾರ್ಯಾಚರಣಾ ಕೇಂದ್ರವಾಗಿ ಅಭಿವೃದ್ಧಿಪಡಿಸಬೇಕು. ಮಂಗಳೂರಿಗೆ ಹೆಚ್ಚಿನ ರೈಲುಗಳು, ಉತ್ತಮ ಮೂಲಸೌಕರ್ಯ ಮತ್ತು ವೇಗದ ಸೇವೆಗಳು ಸಿಗಬೇಕೇ ಹೊರತು, ಇರುವ ರೈಲುಗಳನ್ನು ಕಸಿದುಕೊಳ್ಳುವ ಬೈಪಾಸ್ ಪ್ರಸ್ತಾಪಗಳಲ್ಲ.
ಜೊತೆಗೆ, ಮಂಗಳೂರಿಗೆ ಕ್ರಾ.ಸಂ.ರಾ ಬೆಂಗಳೂರು ಅಥವಾ ಯಶವಂತಪುರಕ್ಕೆ ಸಂಪರ್ಕ ಕಲ್ಪಿಸುವ ಪ್ರತ್ಯೇಕ ಬೆಂಗಳೂರು–ಮಂಗಳೂರು ವಂದೇ ಭಾರತ್ ರೈಲು ಅತ್ಯಗತ್ಯವಾಗಿದೆ. ಬೆಂಗಳೂರು ಸಂಪರ್ಕಕ್ಕಾಗಿ ಮಂಗಳೂರಿನ ಜನರು ಇಟ್ಟಿರುವ ನ್ಯಾಯಯುತ ಬೇಡಿಕೆಗೆ ಪರಿಹಾರವೆಂದರೆ ಹೊಸದಾದ ಪ್ರತ್ಯೇಕ ರೈಲು ಸೇವೆಯೇ ಹೊರತು, ಮಂಗಳೂರಿನ ಪ್ರಯಾಣಿಕರನ್ನೇ ವಂಚಿಸುವ ಬೈಪಾಸ್ ಮಾರ್ಗವಲ್ಲ.
ಅಮೃತ್ ಭಾರತ್ 3.0 ರೈಲುಗಳ ನಿರ್ಮಾಣವು ರೈಲ್ವೆ ತಂತ್ರಜ್ಞಾನದ ಮೂಲಕ ಕಾರ್ಯಾಚರಣೆಯ ಅಡೆತಡೆಗಳನ್ನು ನಿವಾರಿಸಬಹುದು ಎಂಬುದನ್ನು ತೋರಿಸಿಕೊಟ್ಟಿದೆ. ಇಂಟಿಗ್ರಲ್ ಕೋಚ್ ಫ್ಯಾಕ್ಟರಿ ಚೆನ್ನೈನಿಂದ ಎಸಿ ಮತ್ತು ನಾನ್-ಎಸಿ ಬೋಗಿಗಳನ್ನೊಳಗೊಂಡ ಮೊದಲ ಅಮೃತ್ ಭಾರತ್ 3.0 ರೈಲು ಹೊರಬಂದಿದ್ದು, ರೈಲ್ವೆ ಮಂಡಳಿಯು ಅದರ ಮೊದಲ ಮಾರ್ಗವನ್ನು ಅಂತಿಮಗೊಳಿಸಬೇಕಿದೆ. ತಾಂತ್ರಿಕವಾಗಿ ಸಾಧ್ಯವಾದರೆ, ಇಂತಹ ಆಧುನಿಕ ರೈಲು ರೇಕ್ಗಳನ್ನು ರೈಲು ಸಂಖ್ಯೆ 16585/86 ಸರ್.ಎಂ ವಿಶೇಶ್ವರಯ್ಯ ಟರ್ಮಿನಲ್ ಬೆಂಗಳೂರು–ಮುರುಡೇಶ್ವರ ಎಕ್ಸ್ಪ್ರೆಸ್ನಂತಹ ರೈಲುಗಳಿಗೆ ನಿಯೋಜಿಸುವ ಮೂಲಕ ಸಾಂಪ್ರದಾಯಿಕ ಎಂಜಿನ್ ರಿವರ್ಸಲ್ನಿಂದಾಗುವ ಸಮಯದ ಮಿತಿಯನ್ನು ನಿವಾರಿಸಬಹುದು. ರೈಲ್ವೆಯ ಸಮಸ್ಯೆಗಳನ್ನು ತಂತ್ರಜ್ಞಾನದ ಮೂಲಕ ಬಗೆಹರಿಸುವುದರ ಬದಲು ಸಮಸ್ಯೆಗಳನ್ನೇ ನೆಪವಾಗಿಸಿಕೊಂಡು ಮಂಗಳೂರನ್ನು ಬೈಪಾಸ್ ಮಾಡಲು ಹೇಳುವುದು ಸರಿಯಲ್ಲ.
ಅದೇ ಸಮಯದಲ್ಲಿ, ಕರಾವಳಿ ಕರ್ನಾಟಕದಲ್ಲಿನ ರೈಲ್ವೆ ಮೂಲಸೌಕರ್ಯಗಳ ಕೊರತೆಯನ್ನು ತುರ್ತಾಗಿ ನೀಗಿಸಬೇಕಿದೆ. ರೈಲುಗಳಿಗೆ ನೀರು ತುಂಬಿಸುವ ವ್ಯವಸ್ಥೆ (ವಾಟರಿಂಗ್), ಪಿಟ್ ಲೈನ್, ಸ್ಟೇಬ್ಲಿಂಗ್ ಲೈನ್, ನಿರ್ವಹಣಾ ಸೌಲಭ್ಯಗಳು, ಮಾರ್ಗ ಸಾಮರ್ಥ್ಯ, ಸಿಗ್ನಲಿಂಗ್, ಜೋಡಿ ಮಾರ್ಗ (ಡಬ್ಲಿಂಗ್) ಹಾಗೂ ಘಾಟಿ ವಿಭಾಗದ ಸಾಮರ್ಥ್ಯ ವೃದ್ಧಿಗೆ ತಕ್ಷಣವೇ ಬಂಡವಾಳ ಹೂಡಿಕೆಯಾಗಬೇಕು. ಮೂಲಸೌಕರ್ಯಗಳ ಕೊರತೆಯಿಂದ ರೈಲುಗಳು ತಡವಾಗುತ್ತಿದ್ದರೆ ತಕ್ಷಣ ಆ ಸೌಲಭ್ಯಗಳನ್ನು ನಿರ್ಮಿಸಬೇಕು. ರೈಲ್ವೆ ಇಲಾಖೆಯು ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸದ ಕಾರಣಕ್ಕಾಗಿ ಪ್ರಯಾಣಿಕರು ಸಂಪರ್ಕ ಕಳೆದುಕೊಳ್ಳುವಂತಾಗಬಾರದು; ಪ್ರಯಾಣಿಕರ ಹಿತಕ್ಕಾಗಿ ಮೂಲಸೌಕರ್ಯಗಳು ಬೆಳೆಯಬೇಕು. ಪ್ರಸ್ತುತ ಕೊಂಕಣ್ ಮಾರ್ಗದಲ್ಲಿ ಮಂಗಳೂರು-ಮಡ್ಗಾಂವ್ ನಡುವೆ ಯಾವುದೇ ರೈಲು ನಿಲ್ದಾಣದಲ್ಲಿ ನೀರು ತುಂಬಿಸುವ ವ್ಯವಸ್ಥೆ ಇಲ್ಲ. ನೀರು ತುಂಬಿಸುವ ವ್ಯವಸ್ಥೆಯನ್ನು ಒದಗಿಸಲು ಮನವಿ ಮಾಡುವ ಬದಲು ಮಂಗಳೂರಿಗೆ ತೊಡಕಾಗುವಂಥ ಪಡೀಲ್ ಬೈಪಾಸ್ ರೈಲಿನ ಬೇಡಿಕೆ ಇಡುವುದು ಸರಿಯಲ್ಲ.
ಅಂತಿಮವಾಗಿ, ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ಗಳು ಕರಾವಳಿ ಕರ್ನಾಟಕದ ರೈಲ್ವೆ ಜಾಲದ ಎರಡು ಆಧಾರ ಸ್ತಂಭಗಳು. ಇವು ಕೇವಲ ಮಂಗಳೂರಿಗಷ್ಟೇ ಅಲ್ಲದೆ ಹಾಸನ, ಮೈಸೂರು, ಬೆಂಗಳೂರು ಸೇರಿದಂತೆ ಇಡೀ ರಾಜ್ಯದ ಪ್ರಯಾಣಿಕರಿಗೂ ಪ್ರಮುಖ ರೈಲು ನಿಲ್ದಾಣಗಳಾಗಿ ಕಾರ್ಯನಿರ್ವಹಿಸುತ್ತಿದೆ. ನೈಋತ್ಯ ರೈಲ್ವೆಯಡಿಯಲ್ಲಿ ಮಂಗಳೂರು ಸೆಂಟ್ರಲ್ ಮಂಗಳೂರಿನ ಮುಖ್ಯ ರೈಲು ನಿಲ್ದಾಣವಾಗಿ ಹಾಗೂ ಕರ್ನಾಟಕ,ಕೊಂಕಣ್ ಭಾಗದ ರೈಲುಗಳು ಟರ್ಮಿನಲ್ ಆಗಿ ಬೆಳೆಯಬೇಕು ಹಾಗೂ ಮಂಗಳೂರು ಜಂಕ್ಷನ್ ದಕ್ಷಿಣ-ಉತ್ತರ ಭಾರತದ ರೈಲುಗಳಿಗೆ ಹಾಗೂ ಕೊಂಕಣ ಹಾಗೂ ಕರಾವಳಿ–ಒಳನಾಡಿನ ರೈಲು ಸಂಪರ್ಕದ ಪ್ರಮುಖ ಜಂಕ್ಷನ್ ಆಗಿ ಮುಂದುವರಿಯಬೇಕು ಅದರ ಬದಲು ಬೈಪಾಸ್ ಮಾರ್ಗಕ್ಕೆ ಬೇಕಾಗಿ ಈ ಎರಡು ನಿಲ್ದಾಣಗಳನ್ನು ಬಲಿ ಕೊಡಬಾರದು.
ಆದ್ದರಿಂದ, ನಾವು ಮಂಗಳೂರಿನ ಭವಿಷ್ಯದ ರೈಲ್ವೆ ಅಭಿವೃದ್ಧಿಯು ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ಎರಡನ್ನೂ ರಕ್ಷಿಸಿ ಬಲಪಡಿಸಲು, ಅಸ್ತಿತ್ವದಲ್ಲಿರುವ ನೇರ ರೈಲುಗಳನ್ನು ಉಳಿಸಿಕೊಂಡು, ಹೊಸ ರೈಲುಗಳು ಮತ್ತು ಮೂಲಸೌಕರ್ಯಗಳನ್ನು ಈ ಭಾಗಕ್ಕೆ ನೀಡುವುದರ ಜೊತೆಗೆ ಯಾವುದೇ ರೈಲು ಮಂಗಳೂರನ್ನು ಬೈಪಾಸ್ ಮಾಡದಂತೆ ಕ್ರಮ ಕೈಗೊಳ್ಳುವುದರ ಜೊತೆಗೆ ಬೇರೆ ಪ್ರದೇಶಗಳಿಗೆ ಹೆಚ್ಚಿನ ಸಂಪರ್ಕ ಬೇಕಿದ್ದರೆ ಹೊಸ ರೈಲುಗಳು, ಹೆಚ್ಚುವರಿ ಸೇವೆಗಳು ಮತ್ತು ಮೂಲಸೌಕರ್ಯಗಳನ್ನು ಒದಗಿಸುವ ಬದಲು ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ರೈಲು ಸೇವೆಗಳಿಗೆ ಕತ್ತರಿ ಹಾಕಬಾರದು ಎಂದು ರೈಲ್ವೆ ಸಚಿವಾಲಯ, ನೈಋತ್ಯ ರೈಲ್ವೆ, ಮೈಸೂರು ವಿಭಾಗ, ಕೊಂಕಣ ರೈಲ್ವೆ ಮತ್ತು ಕರ್ನಾಟಕದ ಜನಪ್ರತಿನಿಧಿಗಳ ಬಳಿ ಆಗ್ರಹಿಸುತ್ತೇವೆ.
ಕೊನೆಯದಾಗಿ, ಮಂಗಳೂರಿಗೆ ಯಾವುದೋ ಸಣ್ಣ ಪ್ರಾದೇಶಿಕ ಲಾಬಿಯ ಹಿತಾಸಕ್ತಿಗೆ ತಕ್ಕಂತೆ ರೈಲ್ವೆ ಸಂಪರ್ಕವನ್ನು ನಿರ್ಧರಿಸಿಸಿಕೊಳ್ಳಬೇಕಾದ ಅನಿವಾರ್ಯತೆ ಇಲ್ಲ. ಮಂಗಳೂರು ಪ್ರದೇಶವೊಂದೇ ರೈಲ್ವೆ ಇಲಾಖೆಗೆ ವಾರ್ಷಿಕ ₹600 ಕೋಟಿಗೂ ಅಧಿಕ ಆದಾಯವನ್ನು ತಂದುಕೊಡುತ್ತಿದೆ. ಇದು ಈ ಭಾಗದ ಅಗಾಧ ಪ್ರಯಾಣಿಕ, ವಾಣಿಜ್ಯ ಮತ್ತು ಆರ್ಥಿಕ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ಭಾರತೀಯ ರೈಲ್ವೆಗೆ ಇಷ್ಟೊಂದು ಬೃಹತ್ ಆದಾಯವನ್ನು ನೀಡುವ ಈ ಪ್ರದೇಶಕ್ಕೆ ಅತ್ಯುತ್ತಮ ಸಂಪರ್ಕ, ಸುಧಾರಿತ ಸೌಲಭ್ಯಗಳು ಮತ್ತು ಹೆಚ್ಚಿನ ರೈಲ್ವೆ ಹೂಡಿಕೆಯನ್ನು ಕೇಳುವ ಸಂಪೂರ್ಣ ಹಕ್ಕು ಇಲ್ಲಿನ ಜನರಿಗಿದೆ.ಹೀಗಾಗಿ ಕುಂದಾಪುರ-ಗೋವಾ ಲಾಬಿಯ ಸಲಹೆಗಳು,ನಿರ್ಧಾರಗಳು ಮಂಗಳೂರಿಗೆ ಬೇಕಿಲ್ಲ!
ಮಂಗಳೂರಿನ ಜನರು ಯಾವುದೇ ಪ್ರದೇಶದ ಸಂಪರ್ಕವನ್ನು ವಿರೋಧಿಸುವುದಿಲ್ಲ. ಆದರೆ ಮಂಗಳೂರು ನಗರಕ್ಕೆ ದ್ರೋಹ ಮಾಡಲು ಹೊರಟರೆ ಅದನ್ನು ವಿರೋಧಿಸಲು ಕೂಡ ಇಲ್ಲಿನ ಜನರಿಗೆ ಗೊತ್ತಿದೆ. ರೈಲು ಸಂಚಾರದ ವಿಷಯದಲ್ಲಿ ಮಂಗಳೂರನ್ನು ಬೈಪಾಸ್ ಮಾಡುವುದನ್ನು ನಿಲ್ಲಿಸಿ. ಮಂಗಳೂರಿಗೆ ಸೆಗಬೇಕಾದ ರೈಲುಗಳನ್ನು ಮಂಗಳೂರು ಸೆಂಟ್ರಲ್ ಹಾಗೂ ಮಂಗಳೂರು ಜಂಕ್ಷನ್ ರೈಲು ನಿಲ್ದಾಣಗಳಿಗೆ ಓಡಿಸಬೇಕು ಹಾಗೂ ಈ ಎರಡು ನಿಲ್ದಾಣಗಳನ್ನು ಅಭಿವೃದ್ಧುಪಡಿಸಬೇಕು! ಇದೇ ಇಲ್ಲಿನ ಬೇಡಿಕೆ!
@RailMinIndia@AshwiniVaishnaw@VSOMANNA_BJP@CaptBrijesh@SWRRLY@KonkanRailway
Either @DKShivakumar thinks Mangalore is not part of State of Karnataka or he is afraid of his Mallu bosses. Either way he is at fault. His POWER is only against common people who demands basic facility like electricity.
Have written to Hon’ble Chief Minister of Karnataka Shri @DKShivakumar regarding the Railway Board’s decision to bring Mangaluru under the Mysuru Division of South Western Railway from October 1, 2026.
With the Hon’ble Chief Minister of Keralam seeking reconsideration of the notified decision, I have urged the Hon’ble CM of Karnataka to convey our State’s support for its implementation.
This is not about taking a position against a neighbouring State. It is about placing Karnataka’s considered position on the railway administration and developmental requirements of Mangaluru formally before the Union Government.
I believe the people of Karnataka can reasonably expect our State Government to stand behind this long-pending demand and support its implementation.
I urge @narendramodi@PMOIndia@AshwiniVaishnaw to look at the ground reality of Mangalore people who voted you and your party from last three decades and don't consider these parasites request. Please go ahead as already planned.
I have sent a detailed letter to the Hon'ble Prime Minister of India, Shri Narendra Modi, seeking his urgent personal intervention to freeze and reconsider the Railway Board's unilateral decision to transfer the Mangaluru area (up to Ullal) from the Palakkad Division of Southern Railway to the Mysuru Division.
This decision taken without any prior consultation with the Government of Keralam has severe long-term implications for our state's railway infrastructure, passenger amenities, and economic prospects, particularly in northern Keralam.
Mangaluru accounts for over 90% of Palakkad Division’s freight revenue.Removing major freight/marshalling hubs like Panambur drastically weakens the division financially.
Weakening Palakkad Division will inevitably hurt future resource allocation, project sanctions, capacity expansion, and new train services for the Malabar region
Palakkad Division already lost significant jurisdiction during the 2007 Salem Division creation. Stripping away Mangaluru further threatens the viability of one of the country's oldest railway divisions.
I have urged the Prime Minister to place this transfer in abeyance, direct the Ministry of Railways to consult with the Government of Keralam, and focus on strengthening the Palakkad Division with increased investment and infrastructure to meet growing regional demands.
@NarendraModi@PMOIndia@AshwiniVaishnaw@RailMinIndia@GMSRailway
@vdsatheesan I urge @narendramodi@PMOIndia@AshwiniVaishnaw to look at the ground reality of Mangalore people who voted you and your party from last three decades and don't consider these parasites request. Please go ahead as already planned.
@vdsatheesan Mr. Kerala CM, as you are worried about your state, we being the people from Mangalore region worried about our region as well. Palakkad division done no good to us. We can list out pages of disservice done by the division to our region. So don't interfere here
@ShashiTharoor Sir @AshwiniVaishnaw, mangalore has been giving @BJP4India seats from last three decades. How much seats BJP got in whole of Kerala in last three decades? Don't bend to their pressure. We the people of Mangalore and Karnataka with you and your govt. Continue with your descision
@JohnBrittas So Mr. brittass, why so far in theseany years,our interest not served? Only on seperation you understood that our area is not developed and our interests not served?
Can you imagine 1,000 crore + revenue generated from Fright charges in Mangalore and this shit divion couldn't build an over bridge/under ground tunnel near NMPT-MCF crossing.
Mangaluru’s railways are finally coming under one roof!
A long-pending demand is being fulfilled as the Mangaluru railway region, currently divided across Southern & South Western Railways, is being brought under South Western Railway’s Mysuru Division.
This gives me a great sense of contentment, especially because this is a demand we raised as a priority within days of taking oath as your MP in June 2024.
Since then, we have pursued it relentlessly - taking it up repeatedly with our Hon’ble Union Minister for Railways Shri @AshwiniVaishnaw, whose proactive engagement and responsiveness in taking forward this long-pending demand I deeply appreciate. We have also used every available parliamentary and institutional forum to highlight the concern and press for its expeditious resolution.
This is a significant step for Mangaluru - reducing jurisdictional hurdles, improving coordination, enabling faster resolution of passenger concerns and giving greater focus to railway infrastructure and connectivity across coastal Karnataka.
With the formal notification expected soon, we will be better placed to address many of our railway-related concerns and, most importantly, enable Mangaluru’s railways to move faster on the tracks of Vikas.
Grateful to our Government led by PM Shri @narendramodi, Shri Ashwini Vaishnaw and MoS Shri @VSOMANNA_BJP for making this possible.
@SWRRLY
#IndianRailways #Mangaluru #DakshinaKannada
Really shame. Politicians think only they are the real contributors to the society. These statements at the sacred place of parliament should be condemned by every citizen.
🚨 Calling the Director of IIT Madras a "Gaumutra Professor" and asking "What does he know about education?" shows either complete ignorance or deliberate malice.
Prof. V. Kamakoti Veezhinathan is not some random academic. He is:
• Director of IIT Madras (since Jan 2022)
• Alumnus of IIT Madras (MS + PhD in Computer Science & Engineering)
• Specialist in Computer Architecture, Information Security & VLSI Design
His contributions to the nation:
→ Architect of India’s first indigenously developed open-source microprocessor family — **SHAKTI** (RISC-V based). Multiple chips (RIMO, MOUSHIK, and later aerospace-grade versions) have been fabricated and successfully booted, including for ISRO applications.
→ Heads the Microprocessor Development Programme and Information Security Education & Awareness Programme (MeitY-funded).
→ Member, National Security Advisory Board.
→ Former Chairman, AI Task Force (Ministry of Commerce & Industry).
→ Serves on technology committees of RBI and NSE.
Academic & research credentials:
• 150+ international publications
• Coordinated & delivered ~50 industry/government R&D projects
• Guided numerous PhD and MS research scholars
• Awards: Padma Shri (2026), Abdul Kalam Technology Innovation National Fellowship, DRDO Academy Excellence Award, IESA Techno Visionary Award, IBM Faculty Award, VASVIK Industrial Research Award, ACCS Lifetime Achievement Award
This is the man who has spent decades building India’s capabilities in secure hardware, indigenous processors, and digital infrastructure so the country is less dependent on foreign technology.
Questioning his understanding of education while dismissing his body of work is not criticism — it is empty rhetoric of Antonio Maino's daughter.
India needs more scientists and nation-builders like Prof. Kamakoti, not personal attacks dressed up as politics.
Respect competence. Build, don’t belittle.
However,we can expect this only from these both child.
RT 🔁 Max
I pity the contractor. After paying all dues at all levels, in the leftovers he has to do his work. If % at various levels gets reduced the work quality might improve.
I really hope I don’t have to do this frequently. But, if officers and contractors do not listen and do their job, unfortunately, I will be forced. I appeal to them to do their job properly.
Today, I happened to observe an asphalt work in progress. I was doubtful of the quality. I asked the Commissioner to inspect this asphalt work. Indeed, the work was found to be substandard. Sadly, officer is suspended and contractor penalised.
ನಾನು ಆಗಾಗ್ಗೆ ಹೀಗೆ ಮಾಡಬೇಕಾಗಿಲ್ಲ ಎಂದು ನಾನು ನಿಜವಾಗಿಯೂ ಭಾವಿಸುತ್ತೇನೆ. ಆದರೆ, ಅಧಿಕಾರಿಗಳು ಮತ್ತು ಗುತ್ತಿಗೆದಾರರು ತಮ್ಮ ಕೆಲಸವನ್ನು ಸರಿಯಾಗಿ ನಿರ್ವಹಿಸದಿದ್ದಾಗ ಮಾತ್ರ ನಾನು ಇಂತಹ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅವರು ತಮ್ಮ ಕೆಲಸವನ್ನು ಸರಿಯಾಗಿ ಮಾಡುವಂತೆ ನಾನು ಮನವಿ ಮಾಡುತ್ತೇನೆ.
ಇಂದು, ನಾನು ಡಾಂಬರೀಕರಣದ ಕೆಲಸವನ್ನು ಗಮನಿಸಿದೆ. ಗುಣಮಟ್ಟದ ಬಗ್ಗೆ ನನಗೆ ಸಂದೇಹವಿತ್ತು. ಈ ಡಾಂಬರು ಕೆಲಸವನ್ನು ಪರಿಶೀಲಿಸಲು ನಾನು ಆಯುಕ್ತರನ್ನು ಕೇಳಿದೆ. ವಾಸ್ತವವಾಗಿ, ಕೆಲಸವು ಕಳಪೆ ಗುಣಮಟ್ಟದ್ದಾಗಿರುವುದು ಕಂಡುಬಂದಿದೆ. ಪರಿಣಾಮ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಮತ್ತು ಗುತ್ತಿಗೆದಾರರಿಗೆ ದಂಡ ವಿಧಿಸಲಾಗಿದೆ.
#GBA #GreaterBengaluruAuthority
#BREAKING
Tamil Nadu Minister Aadhav Arjuna says Udhayanidhi Stalin does not understand what Sanatana Dharma is
"We are not against Hindus. We are against Hindutva. We are against the caste system and the slavery of women" he said
"Hindus, Muslims, Christians, we treat everyone equally. That is the Indian Constitution"
Also says he personally is an atheist, but said his constitutional role requires him to respect all religions
I bow down to the people of TN for your verdict. Happy to see in my land, people have risen in one voice and spoken
1. No to buying of votes
2. No to dynastic Politics
& yes to a generational shift in politics.
Whoever gets it done has actually done a favour to all!
Congrats and best wishes to TVK & Thiru @TVKVijayHQ avl for a spectacular debut in TN politics. Let Almighty be with you to do what you intend to do.
And to all NDA candidates, it was a hard-fought battle on the ground. Congrats to all those who won, and for those who couldn’t register a victory this time, let’s keep fighting.
Commiserations to Thiru @mkstalin avl & Thiru @Seeman4TN avl for your loss in this election!
Finally & most importantly, I thank my dear @BJP4TamilNadu cadres and leaders for toiling hard on the ground. Better times will come soon!