ನೆನೆಗುದಿಗೆ ಬಿದ್ದ ಯೋಜನೆಗಳು, ಒಣಗಿದ ನದಿಗಳ ಕಣ್ಣೀರು.ಕಲ್ಯಾಣ ಕರ್ನಾಟಕಕ್ಕೆ ನಡೆಯುತ್ತಿರುವ ಅನ್ಯಾಯದ ವಿರುದ್ಧ,ಕಲ್ಯಾಣ ಕರ್ನಾಟಕದ ಜನರ ಕಣ್ಣೀರನ್ನು ಅಕ್ಷರವಾಗಿಸುವ ಸಣ್ಣ ಪ್ರಯತ್ನ. 🌾
ಮಾಜಿ ಪ್ರಧಾನಮಂತ್ರಿ ಶ್ರೀ ದೇವೇಗೌಡ ಅವರ ಪತ್ನಿ ಶ್ರೀಮತಿ ಚೆನ್ನಮ್ಮನವರ ನಿಧನದಿಂದ ತೀವ್ರ ದುಃಖವಾಗಿದೆ. ಅವರು ತಮ್ಮ ವಿನಯ ಮತ್ತು ಸಮಾಜ ಸೇವೆಯ ಮೇಲಿನ ಬದ್ಧತೆಗಾಗಿ ಎಲ್ಲರ ಗೌರವಕ��ಕೆ ಪಾತ್ರರಾಗಿದ್ದರು. ಈ ದುಃಖದ ಸಮಯದಲ್ಲಿ, ಶ್ರೀ ದೇವೇಗೌಡರು ಮತ್ತು ಅವರ ಇಡೀ ಕುಟುಂಬಕ್ಕೆ ನನ್ನ ಹೃದಯಪೂರ್ವಕ ಸಂತಾಪಗಳು. ಓಂ ಶಾಂತಿ.
ಶ್ರೀಮತಿ ಚೆನ್ನಮ್ಮ ಅವರ ಅಗಲಿಕೆಯ ಸುದ್ದಿ ಅತ್ಯಂತ ದುಃಖಕರ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ದೇವೇಗೌಡರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ.
#ಓಂ ಶಾಂತಿ. 🙏
ಅನ್ನ ಬೆಳೆಯುವ ಕೈಗಳು ಸಾಲದ ಸಂಕೋಲೆಯಿಂದ ಮುಕ್ತವಾಗಬೇಕು.
ರೈತರ ಕಲ್ಯಾಣವೇ ದೇಶದ ಸಮೃದ್ಧಿ. 🌾
ಈ ಹಿಂದೆ ಕುಮಾರಣ್ಣ ರೈತರ ಸಾಲ ಮನ್ನ ಮಾಡಿದ ಕುರಿತು ಶಾಸಕ @SN_Kandkur ಅವರು ನೆನಪಿಸಿಕೊಂಡರು.
ಬತ್ತಿದ ಹೊಲಗಳು ಮಾತಾಡುತ್ತಿವೆ,
ರೈತನ ಕಣ್ಣೀರು ಹರಿಯುತ್ತಿದೆ.
ವೇದಿಕೆಗಳ ಮೇಲೆ ಮಾತುಗಳ ಮಳೆ,
ಗ್ರಾಮಗಳಲ್ಲಿ ನೀರಿನ ಹನಿಯೂ ಇಲ್ಲ.
ಕಂಡು ಕಾಣದಂತಿದೆ ರಾಜ್ಯ ಸರ್ಕಾರ..!
@CMofKarnataka
ಬತ್ತಿದ ಹೊಲಗಳು ಪ್ರಶ್ನೆ ಕೇಳುತ್ತಿವೆ,
ಒಣಗಿದ ಬಾವಿಗಳು ಸಾಕ್ಷಿ ಹೇಳುತ್ತಿವೆ.
ಭರವಸೆಗಳ ಮಳೆ ಸುರಿದರೂ,
ನೀರಿನ ಹನಿ ಮಾತ್ರ ಕಾಣುತ್ತಿಲ್ಲ.
ಕಾಗದದ ಮೇಲಿನ ಯೋಜನೆ ಬೆಳೆದಿದೆ,
ಹೊಲದ ಮೇಲಿನ ಬೆಳೆ ���ಣಗಿದೆ.
ಭಾಷಣಗಳ ಹೊಳೆ ಹರಿದಿದೆ,
ಕುಡಿಯುವ ನೀರಿನ ಹೊಳೆ ಬರಿದಾಗಿದೆ.
ರೈತನ ಕಣ್ಣೀರಿನ ಬೆಲೆ ಎಷ್ಟು?
ಹ���ಿದ ಮನೆಯ ನೋವಿನ ಲೆಕ್ಕ ಎಷ್ಟು?
ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಸಮೀಕ್ಷೆ ನಡೆಸಿ, ರೈತರ ಅಹವಾಲನ್ನು ಆಲಿಸಿದ ಯುವ ಜನತಾದಳ ರಾಜ್ಯಾಧ್ಯಕ್ಷರಾದ ಶ್ರೀ @Nikhil_Kumar_k ಅವರು ಹಾಗೂ ಗುರುಮಠಕ���್ ಮತಕ್ಷೇತ್ರದ ಶಾಸಕರಾದ ಶ್ರೀ @SN_Kandkur ಅಣ್ಣವರು.
ಇದೇ ಸಂದರ್ಭದಲ್ಲಿ ಮಾಜಿ ಸಚಿವರು, ಶಾಸಕರು, ಮುಖಂಡರು, ಕಾರ್ಯಕರ್ತರು ಇದ್ದರು.
ಬಿಡದಿ ಟೌನ್ಶಿಪ್ ಹೆಸರಿನಲ್ಲಿ ಅನ್ನದಾತರ ಫಲವತ್ತಾದ ಭೂಮಿಯನ್ನು ಬಲವಂತವಾಗಿ ವಶಪಡಿಸಿಕೊಳ್ಳಲು ಹೊರಟಿರುವ @INCKarnataka ಸರ್ಕಾರದ ವಿರುದ್ಧ ರೈತರ ಆಕ್ರೋಶ ಕಟ್ಟೆಯೊಡೆದಿದೆ. ಅಭಿವೃದ್ಧಿಯ ಹೆಸರಲ್ಲಿ ಕಾರ್ಪೊರೇಟ್ ಸಂಸ್ಥೆಗಳಿಗೆ ಮಣೆ ಹಾಕಲು ಬಂದು, ಜೀವನಾಧಾರವಾಗಿರುವ ಜಮೀನನ್ನು ಕಸಿದುಕೊಳ್ಳಲು ಯತ್ನಿಸಿದ ಅಧಿಕಾರಿಗಳ ದರ್ಪಕ್ಕೆ ರೈತರು ಪೊರಕೆ ಮತ್ತು ದೊಣ್ಣೆಗಳ ಮೂಲಕ ತಕ್ಕ ಶಾಸ್ತಿ ಮಾಡಿದ್ದಾರೆ.
#CongressFailsKarnataka
ಹಳ್ಳಿಯ ಮುಖಗಳು.
ಬರೀ ಸಾಂತ್ವನದ ಮಾತು ನಮಗೆ ಬೇಡ,ರೈತನ ಕಣ್ಣೀರು ಒರೆಸಲು ತಡ ಮಾಡಬೇಡ.ಡ್ಯಾಂ ನಂಬಿ ಬದುಕಬೇಡಿ ಎಂಬ ಸಿಎಂ ಮಾತು,ಕೇಳಿ ತತ್ತರಿಸಿದೆ ರೈತನ ಒಳ ಜಗತ್ತು..!
ರೈತನ ಹೊಟ್ಟೆ ಉರಿದರೆ ಅಧಿಕಾರ ಉಳಿಯದು.
@CMofKarnataka@SN_Kandkur@JanataDal_S
ಇಂದು ಗುರಮಠಕಲ್ ಕ್ಷೇತ್ರದ ಮಾನ್ಯ ಜನಪ್ರಿಯ ಶಾಸಕರಾದ ಶ್ರೀ @SN_Kandkur ಅಣ್ಣವರು ಗೋಪಾಳಪೂರ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 2-ಕೋಣೆಗಳ ಅಡಿಗಲ್ಲು ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಅಧಿಕಾರಿಗಳು ಪಕ್ಷದ ಜಿಲ್ಲಾಧ್ಯಕ್ಷರು, ಮುಖಂಡರು ಕಾರ್ಯಕರ್ತರು ಗ್ರಾಮಸ್ಥರು ಇನ್ನಿತರರು ಉಪಸ್ಥಿತರಿದ್ದರು..
SIR ಅಧಿಕಾರಿಗಳ ತಂಡ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಶಾಸಕ @SN_Kandkur ಅವರಿಗೆ ವಿವರ ನೀಡಿದರು.
ಅರ್ಹ ನಾಗರಿಕರಿಗೆ ಸಿಗಲಿ ವೋಟಿನ ಶಕ್ತಿ, ಮತದಾರರ ಪಟ್ಟಿ ಶುದ್ಧೀಕರಣವೇ ದೇಶದ ಭಕ್ತಿ ಬಿ ಎಲ್ ಒ ಗಳು ಮನೆಗೆ ಬಂದಾಗ ದಾಖಲೆ ನೀಡಿ, ನಿಮ್ಮ ಹೆಸರಿದೆಯಾ ಎಂದು ಇಂದೇ ಪರಿಶೀಲನೆ ಮಾಡಿ ಅಧಿಕಾರಿಯ ಸಹಿ, ನಿಯಮದ ಪಾಲನೆ,