Today, The Bengaluru City Police Sports Meet 2024 concluded with a grand closing ceremony at Parade Ground, C.A.R. Adugodi! Hon'ble Home Minister Dr. G. Parameshwara took the salute as the Chief Guest, along with DG & IGP Dr. Alok Mohan IPS, Commissioner B. Dayananda IPS, and all police officers who actively participated in the event. The program commenced with the distribution of prizes and a March Past featuring 19 teams from various divisions of the force. The closing ceremony featured events like the 100m run and relay for both men and women, tug of war, and other activities, celebrating the strength and sportsmanship of our force!
#BCPSportsMeet2024 #WeServeWeProtect
ಇಂದು, ಬೆಂಗಳೂರು ನಗರ ಪೊಲೀಸ್ ಕ್ರೀಡಾಕೂಟ 2024 ಸಿ.ಎ.ಆರ್. ಆಡುಗೋಡಿಯ ಪರೇಡ್ ಮೈದಾನದಲ್ಲಿ ಭವ್ಯ ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯಗೊಂಡಿತು! ಮಾನ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಮುಖ್ಯ ಅತಿಥಿಗಳಾಗಿ ವಂದನೆ ಸ್ವೀಕರಿಸಿದರು. ಅವರೊಂದಿಗೆ ಡಿಜಿ & ಐಜಿಪಿ ಡಾ. ಅಲೋಕ್ ಮೋಹನ್ ಐಪಿಎಸ್, ಆಯುಕ್ತ ಬಿ. ದಯಾನಂದ ಐಪಿಎಸ್, ಮತ್ತು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ ಎಲ್ಲಾ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು. ಬಹುಮಾನ ವಿತರಣೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು ಮತ್ತು ಪಡೆಯ ವಿವಿಧ ವಿಭಾಗಗಳ 19 ತಂಡಗಳ ಮಾರ್ಚ್ ಪಾಸ್ಟ್ ��ಡೆಯಿತು. ಸಮಾರೋಪ ಸಮಾರಂಭದಲ್ಲಿ ಪುರುಷರು ಮತ್ತು ಮಹಿಳೆಯರಿಗೆ 100 ಮೀಟರ್ ಓಟ ಮತ್ತು ರಿಲೇ, ಹಗ್ಗ ಜಗ್ಗಾಟ ಮತ್ತು ಇತರ ಚಟುವಟಿಕೆಗಳು ನಡೆದು, ನಮ್ಮ ಪಡೆಯ ಶಕ್ತಿ ಮತ್ತು ಕ್ರೀಡಾಸ್ಫೂರ್ತಿಯನ್ನು ಆಚರಿಸಲಾಯಿತು!
On 29th Jan 2025, Dr. G. Parameshwara, Hon'ble Home Minister, inaugurated the Bengaluru Traffic Police Museum & Traffic & Road Safety Experience Centre. It showcases Bengaluru’s traffic evolution, AI signaling, and safety awareness.
A moment of chaos can cost lives. Stay alert in crowded spaces! Watch Commissioner of Police, Bengaluru, share essential safety tips to prevent stampedes.
#WeServeWeProtect
ಒಂದು ಕ್ಷಣದ ಅಜಾಗರೂಕತೆಯಿಂದ ಅಮೂಲ್ಯ ಜೀವವನ್ನು ಬೆಲೆ ತೆರಬೇಕಾಗಹುದು. ಹೀಗಾಗಿ ಜನನಿಬಿಡ ಸ್ಥಳಗಳಲ್ಲಿ ಎಚ್ಚರಿಕೆಯಿಂದಿರಿ! ಜನಜಂಗುಳಿ ಪ್ರದೇಶಗಳಲ್ಲಿ ಅಜಾಗರೂಕತೆಯಿಂದ ಉಂಟಾಗುವ ಅಪಾಯಗಳನ್ನು ತಪ್ಪಿಸಿಕೊಳ್ಳುವುದು ಹೇಗೆ ಎಂದು ನಗರ ಪೊಲೀಸ್ ಆಯುಕ್ತರು ಹೇಳುವ ಅತೀಮುಖ್ಯ ಸುರಕ್ಷತಾ ಸಲಹೆಗಳನ್ನು ವೀಕ್ಷಿಸಿ
Meet #ASTram – your ultimate app for smarter, safer commuting in Bengaluru! Get real-time updates, report accidents, flag violations, & pay fines online. Let’s build a safer city together! Watch to know more
#WeServeWeProtect
Bengaluru City Police, under the Safe City Project, supported the release & screening of the animated film 'Nanna Surakshathe, Nanna Hakku' at NIMHANS on Jan 22, 2025. Organized by the Dept. of Child & Adolescent Psychiatry, the event saw the presence of dignitaries incl. Commissioner for School Education, Government of Karnataka, Dr. K V Thrilok Chandra IAS; Joint Commissioner Admin, Kuldeep Kumar Jain; Dr. Pratima Murthy Director, NIMHANS, & others, along with students & teachers from Bengaluru schools, reinforcing the message—My Safety is My Right!
#WeServeWeProtect
ಬೆಂಗಳೂರು ನಗರ ಪೊಲೀಸರು, ಸೇಫ್ ಸಿಟಿ ಯೋಜನೆಯ ಅಡಿಯಲ್ಲಿ, ಜನವರಿ 22, 2025 ರಂದು ನಿಮ್ಹಾನ್ಸ್ನಲ್ಲಿ 'ನನ್ನ ಸುರಕ್ಷತೆ, ನನ್ನ ಹಕ್ಕು' ಎಂಬ ಅನಿಮೇಟೆಡ್ ಚಲನಚಿತ್ರದ ಬಿಡುಗಡೆ ಮತ್ತು ಪ್ರದರ್ಶನವನ್ನು ಬೆಂಬಲಿಸಿದರು. ಮಕ್ಕಳ ಮತ್ತು ಹದಿಹರೆಯದ ಮನೋವೈದ್ಯ ವಿಭಾಗದಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಆಯುಕ್ತರಾದ ಡಾ. ಕೆ.ವಿ. ತ್ರಿಲೋಕ ಚಂದ್ರ ಐಎ��ಸ್; ಜಂಟಿ ಆಯುಕ್ತ (ಆಡಳಿತ), ಕುಲದೀಪ್ ಕುಮಾರ್ ಜೈನ್; ನಿಮ್ಹಾನ್ಸ್ ನಿರ್ದೇಶಕರಾದ ಡಾ. ಪ್ರತಿಮಾ ಮೂರ್ತಿ ಮತ್ತು ಇತರ ಗಣ್ಯರು, ಜೊತೆಗೆ ಬೆಂಗಳೂರಿನ ಶಾಲೆಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿ "ನನ್ನ ಸುರಕ್ಷತೆ ನನ್ನ ಹಕ್ಕು!" ಎಂಬ ಸಂದೇಶವನ್ನು ಬಲಪಡಿಸಿದರು.
ಸುತ್ತೂರಿನ ಜಾತ್ರಾ ಮಹೋತ್ಸವದಲ್ಲಿ ಮೈಸೂರು ಸೆನ್ ಪೊಲೀಸ್ ಠಾಣೆ ವತಿಯಿಂದ ಸಾರ್ವಜನಿಕರು,ವಿದ್ಯಾರ್ಥಿಗಳಿಗೆ ವಿವಿಧ ಸೈಬರ್ ಅಪರಾಧಗಳ ಕುರಿತು ಅರಿವು ಮೂಡಿಸಲಾಯಿತು.
@DgpKarnataka@Rangepol_SR@KarnatakaCops
ಕಲಬುರಗಿ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸ್ಥಾಪಿಸಲಾದ ಸಿಸಿ ಕ್ಯಾಮೆರಾಗಳ ಮಾಸ್ಟರ್ ಡ್ಯಾಷ್ಬೋರ್ಡ್ ಉದ್ಘಾಟಿಸಿದೆ.
ಕಲಬುರಗಿ ನಗರದಲ್ಲಿ ಅಳವಡಿಸಿರುವ 113 ಸಿಸಿ ಕ್ಯಾಮೆರಾಗಳು, ಪೊಲೀಸ್ ಠಾಣೆ ವ್ಯಾಪ್ತಿಯ ಸಿಸಿ ಕ್ಯಾಮೆರಾಗಳು ಹಾಗೂ ಇಆರ್ಎಸ್ಎಸ್ ವ್ಯವಸ್ಥೆಯಂಥ ಸಕಲ ವಿಚಕ್ಷಣಾ ವ್ಯವಸ್ಥೆಯನ್ನು ಒಂದೇ ಪರದೆಯಲ್ಲಿ ನೋಡಬಹುದದಾಗಿದೆ.
A leader, a patriot, and a true son of Karnataka – Field Marshal K.M. Cariappa taught us the meaning of discipline and service to the nation. Saluting the legend on his birth anniversary.
#WeServeWeProtect
ನಾಯಕ, ದೇಶಭಕ್ತ ಹಾಗೂ ಕರ್ನಾಟಕದ ಹೆಮ್ಮೆಯ ಪುತ್ರ - ಫೀಲ್ಡ್ ಮಾರ್ಷಲ್ ಕೆ.ಎಂ. ಕರಿಯಪ್ಪ ಅವರು ನಮಗೆ ಶಿಸ್ತು ಮತ್ತು ದೇಶ ಸೇವೆಯ ನಿಜವಾದ ಅರ್ಥವನ್ನು ಕಲಿಸಿಕೊಟ್ಟಿದ್ದಾರೆ. ಅವರ ಜನ್ಮ ದಿನದಂದು ಸಮಸ್ತ ದಿಗ್ಗಜರಿಗೆ ನಮನಗಳು.
During today's weekly press briefing, @CPBlr spoke about various cases solved by the city police. In a separate operation, the City Police have arrested 6 individuals connected to a series of vehicle thefts across the city. The arrest has resulted in the recovery of 56 two-wheelers, 4 auto-rickshaws, and 4 batteries worth approximately ₹62.1 lakh. Always ensure your vehicle is securely parked and report any unusual activity to #Namma112 (1/5)
Watch the complete video here: https://t.co/nGdrDjThgJ
#HereToHelp
ಇಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ ಅವರು, ಪ್ರತ್ಯೇಕ ಕಾರ್ಯಾಚರಣೆಯಲ್ಲಿ, ನಗರದ ಪೊಲೀಸರು ನಗರದಾದ್ಯಂತ ಸರಣಿ ವಾಹನ ಕಳ್ಳತನಗಳಿಗೆ ಸಂಬಂಧಿಸಿದ 6 ವ್ಯಕ್ತಿಗಳನ್ನು ಬಂಧಿಸಿದ್ದ ಬಗ್ಗೆ ಮಾಹಿತಿ ನೀಡಿದರು. ಈ ಬಂಧನದ ಫಲವಾಗಿ ಅಂದಾಜು ₹62.1 ಲಕ್ಷ ಮೌಲ್ಯದ 56 ದ್ವಿಚಕ್ರ ವಾಹನಗಳು, 4 ಆಟೋ-ರಿಕ್ಷಾಗಳು ಮತ್ತು 4 ಬ್ಯಾಟರಿಗಳ���್ನು ವಶಪಡಿಸಿಕೊಳ್ಳಲಾಗಿದೆ. ನಿಮ್ಮ ವಾಹನವನ್ನು ಯಾವಾಗಲೂ ಸುರಕ್ಷಿತವಾಗಿ ನಿಲ್ಲಿಸಿ ಮತ್ತು ಯಾವುದೇ ಅಸಹಜ ಚಟುವಟಿಕೆಯನ್ನು #Namma112 ಕ್ಕೆ ವರದಿ ಮಾಡಿ.
Think before you click! One careless tap can lead to identity theft. This #DataPrivacyDay, Bengaluru City Police urges you to pause and verify links before sharing your details. Stay alert, stay secure.
#BeCyberSafe#WeServeWeProtect
ಕ್ಲಿಕ್ ಮಾಡುವ ಮುನ್ನ ಯೋಚಿಸಿ! ಒಂದು ಅಜಾಗರೂಕ ಕ್ಲಿಕ್ ನಿಮ್ಮ ಗುರುತು ಕಳ್ಳತನಕ್ಕೆ ಕಾರಣವಾಗಬಹುದು. ಈ ಡೇಟಾ ಪ್ರೈವಸಿ ಡೇ ದಂದು, ಬೆಂಗಳೂರು ಸಿಟಿ ಪೊಲೀಸರು ನಿಮ್ಮ ವಿವರಗಳನ್ನು ಹಂಚಿಕೊಳ್ಳುವ ಮೊದಲು ಲಿಂಕ್ಗಳನ್ನು ಪರಿಶೀಲಿಸಲು ಮತ್ತು ನಿಧಾನವಾಗಿ ಯೋಚಿಸಲು ಕೋರುತ್ತಾರೆ. ಎಚ್ಚರದಿಂದಿರಿ, ಸುರಕ್ಷಿತವಾಗಿರಿ.
Your data is YOUR story. Don’t let cybercriminals rewrite it! On #DataPrivacyDay, remember: Protect your personal info, stay vigilant, and report scams to 1930.
#BeCyberSafe#WeServeWeProtect
ನಿಮ್ಮ ದತ್ತಾಂಶ ನಿಮ್ಮ ಕಥೆಯಾಗಿದೆ. ಸೈಬರ್ ಅಪರಾಧಿಗಳು ಅದನ್ನು ಮರುಬರೆಯಲು ಬಿಡಬೇಡಿ! ದತ್ತಾಂಶ ಗೌಪ್ಯತಾ ದಿನದಂದು ನೆನಪಿಡಿ: ನಿಮ್ಮ ವೈಯಕ್ತಿಕ ಮಾಹಿತಿಯನ್ನು ರಕ್ಷಿಸಿ, ಎಚ್ಚರವಾಗಿರಿ, ಮತ್ತು ವಂಚನೆಗಳನ್ನು 1930ಕ್ಕೆ ವರದಿ ಮಾಡಿ.