Seen drug peddling near schools or streets? Don’t stay silent.
REPORT IT.
One packet, One addiction, One ruined future, Don’t look away.
Your courage today can
STOP DRUGS and save a future.
📞 Dial 112
#SayNoToDrugs
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಪಾಟೀಲ ಭುವನೇಶ ದೇವಿದಾಸ್, ಭಾ.ಆ.ಸೇ. ಅವರು ಕ್ರೀಡಾಜ್ಯೋತಿಯನ್ನು ಬೆಳಗಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಪೊಲೀಸ್ ಆಯುಕ್ತರಾದ ಶ್ರೀ ಬೊರಸೆ ಭೂಷಣ ಗುಲಾಬರಾವ್, ಐಪಿಎಸ್, ಡಿಸಿಪಿ ಶೃತಿ ಎನ್. ಎಸ್., ಐಪಿಎಸ್, ಸೇರಿದಂತೆ ಪೊಲೀಸ್ ಅಧಿಕಾರಿಗಳು & ಸಿಬ್ಬಂದಿ ಉಪಸ್ಥಿತರಿದ್ದರು.
ಹುಬ್ಬಳ್ಳಿ–ಧಾರವಾಡ ನಗರ ಪೊಲೀಸ್ ಘಟಕದ ವಾರ್ಷಿಕ ಕ್ರೀಡಾಕೂಟ–2026ಕ್ಕೆ ಚಾಲನೆ
ಹುಬ್ಬಳ್ಳಿ–ಧಾರವಾಡ ನಗರ ಪೊಲೀಸ್ ಆಯುಕ್ತಾಲಯದ ವತಿಯಿಂದ ಹುಬ್ಬಳ್ಳಿಯ ಹೊಸ ಸಿಎಆರ್ ಕವಾಯತು ಮೈದಾನದಲ್ಲಿ ಆಯೋಜಿಸಿರುವ ವಾರ್ಷಿಕ ಕ್ರೀಡಾಕೂಟ–2026ರ ಉದ್ಘಾಟನಾ ಸಮಾರಂಭವು ಇಂದು ಜರುಗಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಧಾರವಾಡ ಜಿಲ್ಲಾ ಪಂಚಾಯತ್
ಚಿನ್ನಾಭರಣ ಕಳ್ಳತನ ಪ್ರಕರಣ: ಆರೋಪಿ ಬಂಧನ!
ಹುಬ್ಬಳ್ಳಿಯ ವಾಳ್ವೇಕರ ಪ್ಲಾಟ್ನಲ್ಲಿ ಕಳ್ಳತನ ಮಾಡಿದ್ದ ಆರೋಪಿ ಅಜಯ್ ತೋಟಪ್ಪ ಬಂಡಿವಾಡ (20) ಎಂಬಾತನನ್ನು ಗೋಕುಲ್ ರೋಡ್ ಠಾಣೆ & ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಆರೋಪಿಯಿಂದ 33 ಗ್ರಾಂ ಚಿನ್ನ & 2 ಕೆಜಿ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ: ನಾಲ್ವರ ವಿರುದ್ಧ ಪ್ರಕರಣ ದಾಖಲು!
ಹುಬ್ಬಳ್ಳಿಯ ಅಕ್ಷಯ ಪಾರ್ಕ್ ಸಮೀಪ ಜೆಪ್ಟೋ ಆರ್ಡರ್ ವಿಚಾರವಾಗಿ ಎರಡು ಗುಂಪುಗಳ ನಡುವೆ ನಡೆದ ಜಗಳವನ್ನು ಗೋಕುಲ್ ರೋಡ್ ಪೊಲೀಸರು ನಿಯಂತ್ರಿಸಿ, ರಬ್ಬಾನಿ ಬಾಲಿಗಾರ, ಶಬ್ಬೀರಹ್ಮದ, ಶಂಕರ & ಮಣಿಕಂಠ ಶಿರಹಟ್ಟಿ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಅಪಹರಣಕ್ಕೊಳಗಾದ ವ್ಯಕ್ತಿಯ 2 ಗಂಟೆಯೊಳಗೆ ರಕ್ಷಣೆ!
ಗೋಕುಲ್ ರೋಡ್ ಠಾಣೆಯ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ, ಅಪಹರಣಕ್ಕೊಳಗಾಗಿದ್ದ ಸುರೇಶ ಪೂಜಾರಿ ಅವರನ್ನು ರಕ್ಷಿಸಿ, ಆರೋಪಿಗಳಾದ ಶಿವಕುಮಾರ ಚಂದ್ರಶೇಖರ ಹಿರೇಮಠ ಹಾಗೂ ಮಂಜುನಾಥ ಅಡಿವೆಪ್ಪ ಕರಡಿ ಅವರನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.
ಅಪ್ರಾಪ್ತ ಬಾಲಕನಿಂದ ಬೈಕ್ ಚಾಲನೆ: ಪೋಷಕರಿಗೆ ₹25,000 ದಂಡ!
ವಿದ್ಯಾನಗರದಲ್ಲಿ ಅಪ್ರಾಪ್ತ ಬಾಲಕ ಅಜಾಗರೂಕತೆಯಿಂದ ಬೈಕ್ ಚಾಲನೆ ಮಾಡಿದ ಪ್ರಕರಣದಲ್ಲಿ ಉತ್ತರ ಸಂಚಾರ ಪೊಲೀಸ್ ಠಾಣೆಯಿಂದ ಬೈಕ್ ಜಪ್ತಿ ಮಾಡಿ, ಪೋಷಕರ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಮಾನ್ಯ ನ್ಯಾಯಾಲಯವು ಪೋಷಕರಿಗೆ ₹25,000 ದಂಡ ವಿಧಿಸಿದೆ.
ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತಾಲಯದ ವತಿಯಿಂದ ದಿನಾಂಕ 12-11-2026 ರಿಂದ 14-11-2026 ರವರೆಗೆ ಮೂರು ದಿನಗಳ ಕಾಲ ವಾರ್ಷಿಕ ಕ್ರೀಡಾಕೂಟವನ್ನು ಹುಬ್ಬಳ್ಳಿಯ ಹೊಸ ಸಿಎಆರ್ ಕವಾಯತು ಮೈದಾನದಲ್ಲಿ ಆಯೋಜಿಸಲಾಗಿದೆ.
ಸರ್ವರಿಗೂ ಆದರದ ಸ್ವಾಗತ
ಗೋಪನಕೊಪ್ಪದ ರಾಜೇಶ್ವರಿ ಎಂಬುವವರು ಕಳೆದುಕೊಂಡಿದ್ದ 5 ಗ್ರಾಂ ಬಂಗಾರದ ಸರ ಹಾಗೂ ₹6,000 ನಗದು ಹೊಂದಿದ್ದ ಪರ್ಸ್ನ್ನು ಕೇಶ್ವಾಪುರ ಪೊಲೀಸ್ ಠಾಣೆಯ PSI ಮಾರುತಿ ಮತ್ತವರ ತಂಡವು ಪತ್ತೆಹಚ್ಚಿ, ಮರಳಿ ವಾರಸುದಾರರಿಗೆ ಹಿಂತಿರುಗಿಸಿದ್ದಾರೆ
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ನಗರಗಳ ಪ್ರಮುಖ ಮಾರುಕಟ್ಟೆ & ಜನದಟ್ಟಣೆ ಪ್ರದೇಶಗಳಲ್ಲಿ ಸಾರ್ವಜನಿಕರ ಸುರಕ್ಷತೆ, ಸುಗಮ ಸಂಚಾರ & ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿ & ಸಿಬ್ಬಂದಿಗಳು ನಿರಂತರ ಕಾಲ್ನಡಿಗೆ ಗಸ್ತು, ಸಂಚಾರ ನಿಯಂತ್ರಣ & ವಿಶೇಷ ಬಂದೋಬಸ್ತ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ