ಆತ್ಮೀಯ @imVkohli,
ನಿಮ್ಮೊಂದಿಗೆ ಮಾತನಾಡಿ ಖುಷಿಯಾಗಿದೆ. ಫೈನಲ್ನಲ್ಲಿನ ಇನ್ನಿಂಗ್ಸ್ನಂತೆ, ಈ ಹಿಂದೆಯೂ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಭಾರತೀಯ ಬ್ಯಾಟಿಂಗ್ನಲ್ಲಿ ನಿಮ್ಮ ಖ್ಯಾತಿಯನ್ನು ಸ್ಥಾಪಿಸಿದ್ದೀರಿ. ಎಲ್ಲಾ ರೀತಿಯ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದೀರಿ. ನೀವು ಎಲ್ಲಾ ರೀತಿಯ ಆಟದಲ್ಲೂ ಮಿಂಚಿದ್ದೀರಿ. T20 ಕ್ರಿಕೆಟ್ ನಿಮ್ಮನ್ನು ಮಿಸ್ ಮಾಡಲಿದೆ, ಆದರೆ ನೀವು ಹೊಸ ಆಟಗಾರರಿಗೆ ಸ್ಫೂರ್ತಿ ನೀ���ುವುದನ್ನು ಮುಂದುವರಿಸುತ್ತೀರಿ ಎಂದು ನನಗೆ ವಿಶ್ವಾಸವಿದೆ.
ಕರ್ನಾಟಕ ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಆಯ್ಕೆ ಆಗುತ್ತಿರುವ ಮಾಜಿ ಉಪ ಮುಖ್ಯಮಂತ್ರಿಗಳು ಮಲ್ಲೇಶ್ವರಂ ಜನಪ್ರಿಯ ಶಾಸಕರು ಸೋಲಿಲ್ಲದ ಸರದಾರರಾದ ಶ್ರೀಯುತ ಡಾ.ಅಶ್ವತ್ಥ್ ಅಣ್ಣಾ ರವರಿಗೆ ಹೃತ್ಪೂರ್ವಕವಾದ ಅಭಿನಂದನೆಗಳು.... 🙏
@drashwathcn@BJP4Karnataka
ಇಂದು ನವರಾತ್ರಿಯ ಮೂರನೇ ದಿನ. ಈ ದಿನ ಚಂದ್ರಘಂಟ ದೇವಿಯನ್ನು ಪೂಜಿಸಲಾಗುತ್ತದೆ. ಜಗನ್ಮಾತೆಯ ಮೂರನೇ ಸ್ವರೂಪವಾದ ಚಂದ್ರಘಂಟಾ ದೇವಿಯು ಸಮಸ್ತ ಮನುಕುಲಕ್ಕೆ ಸನ್ಮಂಗಲವನ್ನು ದಯಪಾಲ��ಸಲಿ.
ಸರ್ಜಿಕಲ್ ಸ್ಟ್ರೈಕ್ ದಿನ
ಶತ್ರು ರಾಷ್ಟ್ರದ ಕ್ರಿಮಿಗಳನ್ನು ಬಗ್ಗುಬಡಿದು ನಮ್ಮ ಹೆಮ್ಮೆಯ ಭಾರತೀಯ ಸೈನಿಕ��ು ತಮ್ಮ ಪರಾಕ್ರಮವನ್ನು ಜಗತ್ತಿಗೆ ತೋರಿಸಿದ ದಿನವಿಂದು. ಪಾಕ್ʼನ ಉಗ್ರರಿಗೆ ಯಮಪುರಿಯ ದಾರಿ ತೋರಿಸಿದ ಈ ದಿನಕ್ಕೆ ಇಂದಿಗೆ 7 ವರ್ಷ.
#SurgicalStrike
“ಸೂರ್ಯ ಪ್ರಪಂಚದ ಎಲ್ಲಾ ದೇಶಗಳನ್ನು ನೋಡುತ್ತಾನೆ. ಆದರೆ, ಭಾರತದಂಥಹ ಸ್ವತಂತ್ರ, ಸುಶೀಲ, ಸುಂದರ, ಸಂತೋಷಕರ ದೇಶವನ್ನು ನೋಡಿರಲು ಸಾಧ್ಯವೇ ಇಲ್ಲ.”
ಭಾರತಾಂಬೆಯ ಹೆಮ್ಮೆಯ ಅಮರ ಪುತ್ರ, ಅಪ್ರತಿಮ ದೇಶಭಕ್ತ, ದೇಶಕ್ಕಾಗಿ ಸರ್ವಸ್ವವನ್ನೂ ಅರ್ಪಿಸಿದ ಧೀರ ಭಗತ್ ಸಿಂಗ್ ಅವರ ಜನ್ಮದಿನದಂದು ಶತ ಶತ ಪ್ರಣಾಮಗಳು.
#BhagatSingh
ಜಗತ್ತೇ ಮೆಚ್ಚಿದ ನಾಯಕ, ವಿಶ್ವಗುರು ಭಾರತಕ್ಕೆ ದಣಿವರಿಯದೆ ಶ್ರಮಿಸುತ್ತಿರುವ ಕಾಯಕಯೋಗಿ, ನಮ್ಮ ಹೆಮ್ಮೆಯ ಪ್ರಧಾನ ಸೇವಕ ಶ್ರೀ ನರೇಂದ್ರ ಮೋದಿಜೀಯವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಭಗವಂತ ನಿಮಗೆ ಆರೋಗ್ಯ, ದೀರ್ಘಾಯುಷ್ಯ ಕೊಟ್ಟು ರಾಷ್ಟ್ರಸೇವೆ ಮಾಡಲು ಇನ್ನಷ್ಟು ಚೈತನ್ಯ ನೀಡಲಿ.
#NarendraModiji
ಕನ್ನಂಬಾಡಿ ಕಟ್ಟೆಯ ಶಿಲ್ಪಿ, ಶ್ರೇಷ್ಠ ಅಭಿಯಂತರ ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನದಂದು ಅವರಿಗೆ ಗೌರವ ನಮನಗಳು. ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಅಭಿಯಂತರರಿಗೆ ರಾಷ್ಟ್ರೀಯ ಅಭಿಯಂತರ ದಿನಾಚರಣೆಯ ಶುಭಾಶಯಗಳು.
#EngineersDay
I.N.D.I.A ಒಕ್ಕೂಟವು ಕೆಳಕಂಡ 14 ರಾಷ್ಟ���ರೀಯವಾದಿ ಪತ್ರಕರ್ತರ ಜೊತೆ ವ್ಯವಹರಿಸಲು, ಮಾಹಿತಿ ಹಂಚಲು ಹಾಗೂ ಅವರ ನ್ಯೂಸ್ ಡೆಸ್ಕ್ ನ ಚರ್ಚೆಯಲ್ಲಿ ಭಾಗವಹಿಸದಿರಲು ನಿರ್ಧಾರ ಕೈಗೊಂಡದ್ದಾರೆ, ಒಕ್ಕೂಟ ಅವರನ್ನು ಸಂಪೂರ್ಣವಾಗಿ ನಿಷೇಧಿಸಿದೆ
#banindiaalliance
ಅರ್ನಬ್ ಗೋಸ್ವಾಮಿ ಸೇರಿದಂತೆ 14 ಟಿವಿ ನಿರೂಪಕರನ್ನು ಬ್ಯಾನ್ ಮಾಡಿದ I.N.D.I.A ಮೈತ್ರಿಕೂಟ !!!
ರಾಷ್ಟ್ರೀಯವಾದಿ ಪತ್ರಕರ್ತರು ಲೇಖಕರು ಎದುರಿಸುವ ಸಾಮರ್ಥ್ಯ ಇಲ್ಲದವರು ಕೈಗೆ ದೇಶ ಕೊಟ್ಟರೆ ಯಾವ ರೀತಿ ದೇಶ ಇರುತ್ತೆ ಎಂಬ ಊಹಿಸಲು ಸಾಧ್ಯವಿಲ್ಲ..🙅
#banindiaalliance
ಕಾವೇರಿ ನೀರು ನಿಲ್ಲಿಸಿ - ರೈತರ ಉಳಿಸಿ
ಕೆ,ಆರ್.ಎಸ್ ಅಣೆಕಟ್ಟಿನ ನೀರಿನ ವಾಸ್ತವಾಂಶದ ವೀಕ್ಷಣೆ ಮಾಡಲು ಆಗಮಿಸುತ್ತಿರುವ ರಾಜ್ಯದ ಮಾಜಿ ಉಪ ಮುಖ್ಯಮಂತ್ರಿಗಳಾದ ಶ್ರೀ ಡಾ.ಸಿ.ಎನ್. ಅಶ್ವಥ್ ಅಣ್ಣಾ ರವರಿಗೆ ಹಾಗೂ ರಾಜ್ಯ ನಾಯಕರುಗಳಿಗೆ, ಕಾರ್ಯಕರ್ತರಿಗೆ ಆತ್ಮೀಯ ಸುಸ್ವಾಗತ
ದಿನಾಂಕ - 08-09-2023
ಸ್ಥಳ- ಕೆ.ಆರ್.ಎಸ್ ಮುಖ್ಯ ದ್ವಾರ
ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಸುಧಾರಣೆಗಳನ್ನು ತಂದ ನಾಯಕ, ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಸ್ಮರಣೆಯೊಂದಿಗೆ, ಸಮಸ್ತ ಶಿಕ್ಷಕ ವೃಂದಕ್ಕೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
#teachersday#sarvapalliradhakrishnan
ಸೂರ್ಯನತ್ತ ಭಾರತದ ಯಶಸ್ಸಿನ ಪಯಣ!
ಸೂರ್ಯನ ಅಧ್ಯಯನ ನಡೆಸಲು ಆದಿತ್ಯ ಎಲ್ 1 ಮಿಷನ್ ಇಂದು ಯಶಸ್ವಿಯಾಗಿ ಉಡಾವಣೆಯಾಗಿದೆ.
ಭಾರತದ ಕೀರ್ತಿಯನ್ನು ಜಗದೆತ್ತರಕ್ಕೆ ಹೆಚ್ಚಿಸುತ್ತಿರುವ ಇಸ್ರೋ ಸಂಸ್ಥೆಯ ವಿಜ್ಞಾನಿಗಳಿಗೆ ಅಭಿನಂದನೆಗಳು. ದೇಶಕ್ಕಾಗಿ ನಿಮ್ಮ ಸೇವೆ ಹೀಗೆಯೇ ಮುಂದುವರೆಯಲಿ.