ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿರುವ ಎಐಸಿಸಿ ಕಾರ್ಯದರ್ಶಿಗಳಾದ ಶ್ರೀ @MansoorKhanINC ರವರನ್ನು ಇಂದು ಕೆಪಿಸಿಸಿ ಕಚೇರಿಯಲ್ಲಿ ಭೇಟಿ ಮಾಡಿ, ಅವರಿಗೆ ಹೃದಯಪೂರ್ವಕ ಶುಭಾಶಯಗಳನ್ನು ಕೋರಿದೆನು.
#MansoorAliKhan | #Rajyasabha
ಬೆಂಗಳೂರಿನ ನನ್ನ ಸ್ವಗೃಹಕ್ಕೆ ಕರ್ನಾಟಕ ರಾಜ್ಯ ಆದಿ ಜಾಂಬವ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾಗಿ ನೇಮಕರಾಗಿರುವ ಶ್ರೀ ಜಿ.ಎಸ್.ಮಂಜುನಾಥ್ ರವರು ಆಗಮಿಸಿದ ಸುಸಂದರ್ಭದಲ್ಲಿ, ಅವರನ್ನು ಶುಭಶಯ ಕೋರಿದ ಶುಭ ಸಂದರ್ಭ.
#GSManjunath
ಇತ್ತೀಚೆಗೆ ಕೊಲೆಯಾದ ಚಿತ್ರದುರ್ಗ ನಗರದ ನಿವಾಸಿ ರೇಣುಕಾಸ್ವಾಮಿ ಅವರ ನಿವಾಸಕ್ಕೆ ಇಂದು ಮಾನ್ಯ ಗೃಹ ಸಚಿವರಾದ ಶ್ರೀ @DrGParameshwara ಅವರೊಂದಿಗೆ ತೆರಳಿ ಕುಟುಂಬದವರಿಗೆ ಸಾಂತ್ವನದೊಂದಿಗೆ, ಧೈರ್ಯ ಹೇಳಲಾಯಿತು.
ರೇಣುಕಾಸ್ವಾಮಿ ಅವರ ಹತ್ಯೆಯಾಗಿರುವುದು ನಿಜಕ್ಕೂ ನೋವಿನ ಸಂಗತಿ. ನೊಂದ ಕುಟುಂಬಕ್ಕೆ ನ್ಯಾಯ ಸಿಗಬೇಕು.
My heartfelt thank you to Indian National Congress & especially Shri @RahulGandhi for the immense love & support given to me over the years.
Huge congratulations on this massive win for #INDIA!
#BNChandrappa | #RahulGandhi
ಬೆಂಗಳೂರಿನ ಶಾಂತಿನಗರ ಪ್ರದೇಶಿಕ ಆಯುಕ್ತರ ಕಚೇರಿಯಲ್ಲಿ ಬೆಂಗಳೂರು ವಿಧಾನ ಪರಿಷತ್ ಚುನಾವಣೆಯ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀ ಡಿ.ಟಿ ಶ್ರೀನಿವಾಸ್ ರವರು ನಾಮಪತ್ರ ಸಲ್ಲಿಸಿದರು.
ಈ ವೇಳೆ ಅವರನ್ನು ಶುಭಾಶಯಗಳನ್ನು ಕೋರಿ, ಶುಭ ಹಾರೈಸಿದೆನು.
ಈ ಸಂದರ್ಭದಲ್ಲಿ ಸಚಿವರಾದ ಶ್ರೀ @dsudhakar2727 , ಜನಪ್ರಿಯ ಶಾಸಕರಾದ ಶ್ರೀ @Raghumurthy_INC , ಮಾಜಿ ಶಾಸಕರಾದ ಶ್ರೀಮತಿ ಪೂರ್ಣಿಮ ಶ್ರೀನಿವಾಸ್ , ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಶ್ರೀ ತಾಜ್ ಪೀರ್, ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಾರ್ಯಧ್ಯಕ್ಷರಾದ ಶ್ರೀ ಹಾಲೇಶ್, ಹಿರಿಯೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಖಾದಿ ರಮೇಶ್, ಕಾಂಗ್ರೆಸ್ ಪಕ್ಷದ ಮುಖಂಡರಾದ ಶ್ರೀ ಬಿ.ಟಿ.ಜಗದೀಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
#DTSrinivas | #PoornimaKrishnappa
ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯದ ಸಂಯುಕ್ತ ಪಾಟೀಲ್ ರವರ ಪರವಾಗಿ ಇಂದು ಬಾಗಲಕೋಟೆಯಲ್ಲಿ ಹಿರಿಯ ಸಚಿವರಾದ ಶ್ರೀ ಕೆ.ಹೆಚ್.ಮುನಿಯಪ್ಪ ರವರು ಹಾಗೂ ವಿಧಾನ ಪರಿಷತ್ ಮಾಜಿ ವಿರೋಧ ಪಕ್ಷದ ನಾಯಕರಾದ ಶ್ರೀ ಎಸ್.ಆರ್.ಪಾಟೀಲ್ ರವರೊಂದಿಗೆ ಪತ್ರಿಕಾಗೋಷ್ಠಿಯನ್ನು ನೆಡಸಲಾಯಿತು.
#BNChandrappa | #LokSabhaElection2024
ಬೆಳಗಾವಿ ಕಾಂಗ್ರೆಸ ಭವನದಲ್ಲಿ, ಬೆಳಗಾವಿ ನಗರ/ಗ್ರಾಮೀಣ ಜಿಲ್ಲಾ ಮತ್ತು ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಸಮಿತಿ 2024 ರ ಲೋಕಸಭಾ ಚುನಾವಣೆ 01 – ಚಿಕ್ಕೋಡಿ ಮತ್ತು 02 – ಬೆಳಗಾವಿ ಲೋಕಸಭಾ ಕ್ಷೇತ್ರಗಳ ಪೂರ್ವಭಾವಿ ಸಭೆ ನಡೆಸಿದ ಸಂದರ್ಭ.
#Belagavi | #LokSabhaElection2024 | @INCKHMuniyappa
ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಮಚ್ಚೆಯಲ್ಲಿ ಲೋಕಸಭೆ ಚುನಾವಣೆಯ ಪ್ರಚಾರದ ಸಭೆಯಲ್ಲಿ ಪಾಲ್ಗೊಂಡು, ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ್ ರವರ ಪರ ಮತಯಾಚಿಸಿದೆ.
ಬೆಳಗಾವಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಹಿತದೃಷ್ಟಿಯಿಂದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿರಿ ಮನವಿ ಮಾಡಿದೆ.
ಪ್ರಚಾರದಲ್ಲಿ ಸಚಿವರಾದ ಕೆ.ಎಚ್.ಮುನಿಯಪ್ಪ, ಶ್ರೀಮತಿ ಲಕ್ಷ್ಮಿ ಹೆಬ್ಬಾಳಕರ್, ಪ್ರದೀಪ್ ಎಂ.ಜೆ, ಅನಂತಕುಮಾರ ಬ್ಯಾಕೊಡ್, ಪದ್ಮರಾಜ ಪಾಟೀಲ, ಗೋವಾ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ವರದ ಮಂಡೊಳ್ಕರ್, ಗೋವಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಜೇಶ್ ವರೆಕೆರೆ, ಮಲ್ಲೇಶ್ ಚೌಗಲೆ, ಕುಶಪ್ಪ, ಜಯಶ್ರೀ ಮೊಳಗಿ, ಆರ್.ಟಿ.ರಾಥೋಡ್, ಸುನೀತಾ ಐಹೊಳೆ, ಕಸ್ತೂರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
#Belagavi • #Loksabha • #Election • #INCIndia • #MrinalHebbalkar • #Congress
ಹಿರಿಯ ನಾಯಕರು, ಶೋಷಿತ ಸಮುದಾಯಗಳ ಧ್ವನಿ, ಭಾರತದ ಸಂವಿಧಾನ ಬಗ್ಗೆ ಅಪಾರ ಕಾಳಜಿ ಹಾಗೂ ಬದ್ಧತೆ ಇಟ್ಟುಕೊಂಡಂತಹ ಹಿರಿಯ ಚೇತನ, ಕೇಂದ್ರದ ಮಾಜಿ ಸಚಿವರಾದ ಶ್ರೀನಿವಾಸ ಪ್ರಸಾದ್ ಅವರು ಹೃದಯಾಘಾತದಿಂದ ನಿಧನರಾಗಿರುವ ಸುದ್ಧಿ ತಿಳಿದು ಬಹಳ ದುಃಖವಾಯಿತು.
ಅವರ ಆತ್ಮಕ್ಕೆ ಶಾಂತಿ ಸಿಗಲಿ.
ಅವರ ಕುಟುಂಬ-ಹಿತೈಷಿ ವರ್ಗಕ್ಕೆ ಈ ನೋವನ್ನು ಭರಿಸುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸುವೆ. 🙏🏻
#SrinivasPrasad
“ಪ್ರತಿ ಮತವೂ ಅಮೂಲ್ಯ”
“ತಪ್ಪದೇ ಮತ ಚಲಾಯಿಸಿ, ನಿಮ್ಮ ಹಕ್ಕನ್ನು”
ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಇಂದು ಮೊದಲ ಹಂತದ ಮತದಾನ ನಡೆಯುತ್ತಿದ್ದು, ಕೋಟೆ ನಾಡು ಚಿತ್ರದುರ್ಗದ ನಗರ ಬಿ.ವಿ.ಕೆ.ಎಸ್ ಬಡಾವಣೆ ಭೀಮಸಮುದ್ರ ರಸ್ತೆ ಬರಗೇರಮ್ಮ ಶಾಲೆ ಭಾಗ 143 ರಲ್ಲಿ ಕುಟುಂಬ ಸಮೇತವಾಗಿ ಮತ ಚಲಾಯಿಸಿದೆ.
ನಾನು ನನ್ನ ಹಕ್ಕನ್ನು ಚಲಾಯಿಸಿದ್ದೇನೆ. ತಪ್ಪದೇ ನೀವು ನಿಮ್ಮ ಹಕ್ಕನ್ನು ಚಲಾಯಿಸಿ.
#ChitradurgaLokSabha2024
ಇಂದು ಬೆಳಿಗ್ಗೆ ಮತದಾನಕ್ಕೂ ಮುನ್ನ ವಿವಿಧ ದೇವಸ್ಥಾನಗಳಿಗೆ ಕುಟುಂಬ ಸಮೇತ ಭೇಟಿ ನೀಡಿ, ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದ ಕ್ಷಣ.
ಈ ವೇಳೆ ಭಗವಂತನಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಒಳಿತಿಗಾಗಿ ಪ್ರಾರ್ಥಿಸಿದೆ.
#BNChandrappa | #LokSabhaElections2024
“ಜನಪರ ಪ್ರಚಾರಕ್ಕೆ ಸಿಕ್ಕಿದೆ ಅಭೂತ ಪೂರ್ವ ಬೆಂಬಲ”
ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಟಿ.ರಘುಮೂರ್ತಿ ಅವರ ನೇತೃತ್ವದಲ್ಲಿ ತುರುವನೂರು ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ, ಮತಯಾಚನೆ ಮಾಡಿದೆ.
ಈ ವೇಳೆ ಮಾತನಾಡಿ ಬಿಜೆಪಿ ಆಡಳಿತ ಅವಧಿಯಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ, ರೈತರ ಹಕ್ಕುಗಳನ್ನು ಹತ್ತಿಕ್ಕಲಾಗಿದೆ, ಇಂತಹ ಜನವಿರೋಧಿ ಪಕ್ಷವನ್ನು ತಿರಸ್ಕರಿಸಿ, ದೇಶದ ಸರ್ವತೋಮುಖ ಅಭಿವೃದ್ಧಿಗೆ ಕಾಂಗ್ರೆಸ್ ಬೆಂಬಲಿಸಿ, ನನಗೆ ಹೆಚ್ಚಿನ ಮತ ನೀಡಿ, ಗೆಲ್ಲಿಸಬೇಕೆಂದು ಮನವಿ ಮಾಡಿದೆ.
ಈ ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿಗಳಾದ ಶ್ರೀ ಮಯೂರ್ ಜಯಕುಮಾರ್ , ಮಾಜಿ ಸಚಿವ ಶ್ರೀ ಆಂಜನೇಯ, ಶಾಸಕರಾದ ಶ್ರೀ ಬಿಜಿ.ಗೋವಿಂದಪ್ಪ ,ಮಾಜಿ ಶಾಸಕಿ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್, ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಡಿ.ಟಿ.ಶ್ರೀನಿವಾಸ್ ರವರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ತಾಜ್ ಪೀರ್, ಮುಖಂಡರಾದ ಶ್ರೀ ಓ.ಶಂಕರ್ ರವರು ಸೇರಿದಂತೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಚಳ್ಳಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು, ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರುಗಳು, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ನಗರಸಭಾ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು, ಸದಸ್ಯರು ಸೇರಿದಂತೆ ವಿವಿಧ ನಾಮನಿರ್ದೇಶನ ಸದಸ್ಯರು, ಸಾರ್ವಜನಿಕರು, ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
#BNChandrappa | #ChitradurgaLokasabha2024 | #Challakere
ಕೋಟೆ ನಾಡು ಚಿತ್ರದುರ್ಗದಲ್ಲಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಜನ ಮತ ಜಾಗೃತಿ ಸಭೆ ಚಿತ್ರದುರ್ಗದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಸಹಮತ ವ್ಯಕ್ತಪಡಿಸಿದರು.
ಈ ವೇಳೆ ಒಕ್ಕೂಟದ ಅದ್ಯಕ್ಷರಾದ ಶ್ರೀ ರಾಮಚಂದ್ರಪ್ಪ, ಹಿರಿಯ ವಕೀಲರಾದ ಶ್ರೀ ಪ್ರೊ. ರವಿಕುಮಾರ್, ಶ್ರೀ ಅನಂತನಾಯ್ಕ್ ಬಕ್ತರಾಮೇಗೌಡ ರವರು ಸೇರಿದಂತೆ ಅನೇಕರು ಶ್ರೀ ಬಿ.ಎನ್.ಚಂದ್ರಪ್ಪ ರವರ ಪರವಾಗಿ ಮತಯಾಚಿಸುವುದರ ಮೂಲಕ ದೇಶದ ಸ್ಥಿತಿಗತಿ ಬಗ್ಗೆ ಮಾತನಾಡಿದರು.
#BNChandrappa | #ChitradurgaLokasabha2024
ಲೋಕಸಭಾ ಚುನಾವಣೆ ಪ್ರಯುಕ್ತ ಇಂದು ಹಮ್ಮಿಕೊಂಡಿದ್ದ ಇಂಡಿಯಾ ಬ್ಲಾಕ್ ಮಹಾ ಮೈತ್ರಿಕೂಟ ಸಮನ್ವಯ ಸಭೆಯಲ್ಲಿ ಪಾಲ್ಗೊಂಡು ನಂತರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದೆ.
ಪ್ರಜಾಪ್ರಭುತ್ವದ ಹಬ್ಬವಾಗಿರುವ ಲೋಕಸಭಾ ಚುನಾವಣೆಯಿಂದ ಈ ದೇಶದ ಜನರು ಹೊಸ ಬದಲಾವಣೆಯನ್ನು ಬಯಸಿದ್ದಾರೆ. ಅವರ ನಿರೀಕ್ಷೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇಂಡಿಯಾ ಬ್ಲಾಕ್ ಮಹಾ ಮೈತ್ರಿಕೂಟವು ಕಾರ್ಯನಿರ್ವಹಿಸಲಿದೆ.
ರಾಜ್ಯದಲ್ಲಿ ಹಲವು ಬೇರೆ ಬೇರೆ ಪಕ್ಷಗಳಿರಬಹುದು. ಆದರೆ ನಿಲುವುಗಳು ಮಾತ್ರ ಜನಪರವಾಗಿರಬೇಕು. ಕೇಂದ್ರದ ಕೋಮುವಾದಿ ಸರ್ವಾಧಿಕಾರಿ ಧೋರಣೆಗಳನ್ನು ಖಂಡಿಸಿ ರಾಜಕೀಯ ಮೌಲ್ಯಗಳನ್ನು ಸಂರಕ್ಷಣೆ ಮಾಡುವ ಕಾರಣಕ್ಕಾಗಿ ಹಾಗೂ ಸಂವಿಧಾನದ ಆಶಯಗಳನ್ನು ರಕ್ಷಣೆ ಮಾಡುವ ಕಾರಣಕ್ಕಾಗಿ ಸಮಾನ ಮನಸ್ಕ ಪಕ್ಷಗಳು ಒಂದಾಗಿ ಈ ಲೋಕಸಭಾ ಚುನಾವಣೆಯನ್ನು ಎದುರಿಸುತ್ತಿದ್ದೇವೆ.
#BNChandrappa | #ChitradurgaLokasabha2024
“ಪಾವಗಡದ ವೈ.ಎನ್.ಹೊಸಕೋಟೆಯಲ್ಲಿ ಅಬ್ಬರಿಸುತ್ತಿದೆ ಕಾಂಗ್ರೆಸ್ ಅಲೆ“
ಪಾವಗಡ ವಿಧಾನಸಭಾ ಕ್ಷೇತ್ರದ ವೈ.ಎನ್.ಹೊಸಕೋಟೆಯಲ್ಲಿ ಜನಪ್ರಿಯ ಶಾಸಕ ಶ್ರೀ ಹೆಚ್.ವಿ. ವೆಂಕಟೇಶ್ ಹಾಗೂ ಮಾಜಿ ಸಚಿವ ಶ್ರೀ ವೆಂಕಟರಮಣಪ್ಪ ಅವರೊಂದಿಗೆ ಮತಯಾಚನೆ ಮಾಡಿದ ಸಂದರ್ಭ.
ಮಹಿಳೆಯರ, ರೈತರ, ಯುವಕರ ಹಿತಾಸಕ್ತಿ ಕಾಪಾಡುವ ಕಾಂಗ್ರೆಸ್ ಪಕ್ಷ ಬೆಂಬಲಿಸಿ, ಜನವಿರೋಧಿ ಬಿಜೆಪಿ ಪಕ್ಷವನ್ನು ತಿರಸ್ಕರಿಸಿ, ನನಗೆ ಹೆಚ್ಚಿನ ಮತ ನೀಡಿ ಆಶೀರ್ವಾದ ಮಾಡಬೇಕೆಂದು ಮನವಿ ಮಾಡಿದೆನು.
#Pavagada | #ChitradurgLokSabha2024
ದಲಿತರ ಆಶಾಕಿರಣ, ಹುಟ್ಟು ಹೋರಾಟಗಾರರು, ಸಮಾಜದ ಏಳಿಗೆಗಾಗಿ ಪ್ರತಿನಿಧಿಸುತ್ತಿರುವ ಯಶಸ್ಸು ಕಂಡಿರುವ ನಮ್ಮೆಲ್ಲರ ಅಪ್ರತಿಮ ನಾಯಕರಾಗಿ ರಾಜ್ಯದ ಮಾಜಿ ಸಮಾಜ ಕಲ್ಯಾಣ ಇಲಾಖೆಯ ಮಂತ್ರಿಗಳು ಹಾಗೂ ಕೆಪಿಸಿಸಿ ಉಪಾಧ್ಯಕ್ಷರಾದ ಶ್ರೀಯುತ ಹೆಚ್.ಆಂಜನೇಯ ಅವರಿಗೆ ಜನ್ಮದಿನದ ಶುಭಾಶಯಗಳು.
ದೇವರು ತಮಗೆ ಆಯುಷ್ಯ, ಆರೋಗ್ಯ ಹಾಗೂ ನೆಮ್ಮದಿಯನ್ನು ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.
#HAnjaneya | #BirthdayWishes
ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಚಳ್ಳಕೆರೆ ನಗರದಲ್ಲಿ ಸಚಿವರಾದ ಶ್ರೀ ಸತೀಶ್ ಜಾರಕಿಹೊಳಿ ರವರು, ಶ್ರೀ ಡಿ.ಸುಧಾಕರ್ ರವರು, ಚಳ್ಳಕೆರೆ ಜನಪ್ರಿಯ ಶಾಸಕರಾದ ಶ್ರೀ ಟಿ.ರಘುಮೂರ್ತಿ ರವರು, ಮೊಲಕಾಲ್ಮುರು ಹಿರಿಯ ಶಾಸಕರಾದ ಶ್ರೀ ಗೋಪಾಲಕೃಷ್ಣ ರವರು, ಚಿತ್ರದುರ್ಗ ಶಾಸಕರಾದ ಶ್ರೀ ವೀರೇಂದ್ರ ಪಪ್ಪಿ ರವರು ಮತ್ತು ಮಾಜಿ ಸಚಿವ ಹೆಚ್.ಆಂಜನೇಯ ಹಾಗೂ ಹಿರಿಯ ನಾಯಕರ ಜೊತೆಗೂಡಿ ದೀಪ ಬೆಳಗಿಸುವ ಮೂಲಕ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗಿಯಾಗಿ, ಮಾತನಾಡಿದೆ.
ಈ ವೇಳೆ ಮಾತನಾಡಿ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ, ಈ ಬಾರಿ ನನಗೆ ಹೆಚ್ಚಿನ ಮತ ನೀಡಿ ಆಶೀರ್ವಾದ ಮಾಡಬೇಕಾಗಿ ಮನವಿ ಮಾಡಿದರು.
ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ತಾಜ್ ಪೀರ್ ರವರು, ಮುಖಂಡರಾದ ಶ್ರೀ ಜಿ.ಎಸ್.ಮಂಜುನಾಥ್ ರವರು, ಓ.ಶಂಕರ್ ರವರು ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು, ಜನಪ್ರತಿನಿದಿಗಳು, ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.
#Challakere | #ChitradurgaLokasabha2024