ಕರಾವಳಿಯಲ್ಲಿ ಅಭಿವೃದ್ಧಿಯ ಅಲೆ!
ಮಂಗಳೂರಿನ ಪ್ರಜಾಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಭಾಗದ ಪ್ರವಾಸೋದ್ಯಮ, ಬಂಡವಾಳ ಹೂಡಿಕೆ, ಆರೋಗ್ಯ, ಭಾಷೆ ಸೇರಿದಂತೆ ಸರ್ವತೋಮುಖ ಅಭಿವೃದ್ಧಿಗಾಗಿ ತೆಗೆದುಕೊಂಡಿರುವ ಪ್ರಮುಖ ತೀರ್ಮಾನಗಳು ಮತ್ತು ಅನುಮೋದನೆಗೊಂಡಿರುವ ಯೋಜನೆಗಳು ಇಂತಿವೆ:
#CabinetInMangaluru | #ದೃಢಕರ್ನಾಟಕದಸಂಕಲ್ಪ
ತುಳು ಭಾಷೆ ಇನ್ನು ರಾಜ್ಯದ ಹೆಚ್ಚುವರಿ ಆಡಳಿತ ಭಾಷೆ
ಮಾತೆರೆಗ್ಲಾ ಸೊಲ್ಮೆಲು 🙏
ತುಳು ನಾಡ ಜನರ ಭಾವನೆಗಳಿಗೆ ಸ್ಪಂದಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ಅಭಿನಂದನೆಗಳು ತುಳು ನಾಡು !
ತುಳು ಭಾಷಿಕರು ಕೇವಲ ಕರಾವಳಿ ಅಥವಾ ಕರ್ನಾಟಕಕ್ಕೆ ಸೀಮಿತವಾಗಿಲ್ಲ. ಬದಲಿಗೆ ತುಳುವರು ವಿಶ್ವವ್ಯಾಪಿ ಇದ್ದಾರೆ. ಉದ್ಯೋಗ, ಉದ್ಯಮ, ಶಿಕ್ಷಣ, ಸಂಶೋಧನೆ ಹೀಗೆ ವಿವಿಧ ಕಾರಣಗಳಿಗೆ ಪ್ರಪಂಚದ ಮೂಲೆ ಮೂಲೆಯಲ್ಲೂ ನೆಲೆಸಿದ್ದಾರೆ. ಎಲ್ಲೇ ಇದ್ದರೂ ಅವರ ಭಾಷಾಭಿಮಾನ ಅನನ್ಯ. ಅಪ್ಪಟ ಕನ್ನಡ ತಾಯಿಯ ಮಕ್ಕಳಾಗಿರುವ ತುಳುವರು, ಕನ್ನಡದ ಸೊಗಡನ್ನು ವಿಶ್ವದೆಲ್ಲೆಡೆ ಪಸರಿಸಿದ ಕೀರ್ತಿಗೆ ಭಾಜನರು.
ತುಳುವರ ಭಾವನೆಗಳಿಗೆ ನಮ್ಮ ಸರ್ಕಾರ ಸ್ಪಂದಿಸಿದೆ. ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆಗೆ ಕರ್ನಾಟಕ ರಾಜ್ಯದ ಹೆಚ್ಚುವರಿ ಆಡಳಿತ ಭಾಷೆಯ ಸ್ಥಾನಮಾನ ನೀಡುವ ಮಹತ್ವದ ಪ್ರಸ್ತಾವನೆಗೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ.
ಪ್ರಾಚೀನತೆ, ಶಾಸ್ತ್ರೀಯ, ಸಾಹಿತ್ಯ ಪರಂಪರೆ ಹಾಗೂ ವಿಶಿಷ್ಟ ಸಾಂಸ್ಕೃತಿಕ ವೈಭವ ಹೊಂದಿರುವ ತುಳು ಭಾಷೆ, ದ್ರಾವಿಡ ಭಾಷಾ ಇತಿಹಾಸದಲ್ಲಿ ಮಹತ್ವದ ಸ್ಥಾನವನ್ನು ಪಡೆದಿದೆ.
ತುಳು ಭಾಷೆಯ ಸಂರಕ್ಷಣೆ, ಅಭಿವೃದ್ಧಿ ಮತ್ತು ಸರ್ವತೋಮುಖ ಬೆಳವಣಿಗೆಗಾಗಿ ನಮ್ಮ ಸರ್ಕಾರ ಬದ್ಧವಾಗಿದೆ. ಹೀಗಾಗಿ ಆ ಭಾಗದ ಜನರು, ಗಣ್ಯರು, ಸಂಘ ಸಂಸ್ಥೆಗಳ ಬೇಡಿಕೆಯಂತೆ ಸರ್ಕಾರಿ ಉದ್ದೇಶಗಳಿಗಾಗಿ ತುಳು ಭಾಷೆಯನ್ನು ರಾಜ್ಯದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೊಷಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಅನ್ವಯವಾಗುವಂತೆ ಈ ತೀರ್ಮಾನ ಮಾಡಲಾಗಿದೆ. ಜಿಲ್ಲಾಡಳಿತವನ್ನು ಅನುಷ್ಠಾನ ಕೇಂದ್ರವಾಗಿ ಮಾಡಲು ನಿರ್ಧರಿಸಲಾಗಿದೆ.
ತುಳು ಭಾಷೆಯ ಆಡಳಿತಾತ್ಮಕ ಬಳಕೆಗೆ ಅಗತ್ಯವಾದ ಅನುವಾದ, ತರಬೇತಿ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ಪ್ರತಿವರ್ಷ ₹82 ಲಕ್ಷ ಅನುದಾನವನ್ನು ಸರ್ಕಾರ ಒದಗಿಸಲಿದೆ.
ಇದು ಕೇವಲ ಒಂದು ಭಾಷೆಗೆ ಆಡಳಿತಾತ್ಮಕ ಮಾನ್ಯತೆ ನೀಡುವ ನಿರ್ಧಾರವಲ್ಲ.
ಕರ್ನಾಟಕದ ಬಹುಭಾಷಾ, ಬಹುಸಾಂಸ್ಕೃತಿಕ ಪರಂಪರೆಗೆ ನೀಡುತ್ತಿರುವ ಗೌರವದ ಪ್ರತೀಕ. ತುಳು ಭಾಷೆಯ ಅಸ್ಮಿತೆ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗಳಿಗೆ ಕೊಂಡೊಯ್ಯುವ ಮಹತ್ವದ ಹೆಜ್ಜೆ.
@CMofKarnataka@DKShivakumar@DrParameshwara
#TULUOFFICIALINKA_KL
ಕರಾವಳಿಯಲ್ಲಿ ಅಭಿವೃದ್ಧಿಯ ಅಲೆ
ಮಂಗಳೂರಿನ ಪ್ರಜಾಸೌಧದಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ @DKShivakumar ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಭಾಗದ ಪ್ರವಾಸೋದ್ಯಮ, ಬಂಡವಾಳ ಹೂಡಿಕೆ, ಆರೋಗ್ಯ, ಭಾಷೆ ಸೇರಿದಂತೆ ಸರ್ವತೋಮುಖ ಅಭಿವೃದ್ಧಿಗಾಗಿ ತೆಗೆದುಕೊಂಡಿರುವ ಪ್ರಮುಖ ತೀರ್ಮಾನಗಳು ಮತ್ತು ಅನುಮೋದನೆಗೊಂಡ ಯೋಜನೆಗಳು ಇಂತಿವೆ:
#CabinetInMangaluru | #ದೃಢಕರ್ನಾಟಕದಸಂಕಲ್ಪ
ನಮಸ್ಕಾರ ಕುಡ್ಲ!
ಕರಾವಳಿಯ ಸರ್ವತೋಮುಖ ಬೆಳವಣಿಗೆ ಹಾಗೂ ಸ್ಥಳೀಯ ಜನರ ಆಶೋತ್ತರಗಳನ್ನು ಈಡೇರಿಸಲು ಸರ್ಕಾರವೇ ನೇರವಾಗಿ ಮಂಗಳೂರಿಗೆ ಬರುತ್ತಿದೆ. ಇಂದು ನಡೆಯಲಿರುವ ಐತಿಹಾಸಿಕ ರಾಜ್ಯ ಸಚಿವ ಸಂಪುಟ ಸಭೆಯು ಕರಾವಳಿಯ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿ ಹೊಸ ಮುನ್ನುಡಿ ಬರೆಯಲಿದೆ.
#CabinetInMangaluru | #ದೃಢಕರ್ನಾಟಕದಸಂಕಲ್ಪ
ತುಳು ಭಾಷೆಗೆ ಐತಿಹಾಸಿಕ ಗೌರವ – ಕರ್ನಾಟಕದ 2ನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಣೆ
ತುಳು ಕೇವಲ ಒಂದು ಭಾಷೆಯಲ್ಲ, ಕರಾವಳಿಯ ಶ್ರೀಮಂತ ಸಂಸ್ಕೃತಿ, ಪರಂಪರೆ ಹಾಗೂ ಅಸ್ಮಿತೆಯ ಜೀವನಾಡಿ. ತುಳು ಭಾಷೆಯ ಐತಿಹಾಸಿಕ ಮಹತ್ವವನ್ನು ಗೌರವಿಸಿ, ಕರ್ನಾಟಕ ಸರ್ಕಾರ ರಾಜ್ಯದ 2ನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ತುಳುವನ್ನು ಘೋಷಿಸಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಅನ್ವಯವಾಗುವಂತೆ ತೀರ್ಮಾನಿಸಲಾಗಿದೆ. ಈ ಮೂಲಕ ಕರಾವಳಿ ಜನರ ಬಹುದಿನಗಳ ಕನಸು ನನಸಾಗಿದೆ.
#CabinetInMangaluru | #ದೃಢಕರ್ನಾಟಕದಸಂಕಲ್ಪ
ದೇಸೊದೆಡ್ಡೆಗ್, ಬಾಸೆದೆಡ್ಡೆಗ್
ಬೆನೊಡ್ ನಮ ಸಮೊ ಮಣ್ಣ್ಗ್ - ಕಯ್ಯಾರ ಕಿಞ್ಞಣ್ಣ ರೈ
ನನ ದುಂಬುಗು ತುಳು ಕರ್ನಾಟಕ ರಾಜ್ಯೊದ ರಡ್ಡನೇ ಹೆಚ್ಚುವರಿ ಆಡಳಿತ ಬಾಸೆ
ತುಳು ಪಾತೆರುನ ಜನಕುಲೆನ ದಶಕೊಡ್ದು ಇಂಚಿ ಇತ್ತಿನ ಬೇಡಿಕೆನ್ ಈಡೇರಿಸಾಯಿನ ತೃಪ್ತಿ ಸರಕಾರಗ್ ಉಂಡು. ಈ ಪೊರ್ತುಡು ಈ ಮಾನ್ಯತೆಗಾದ್ ಹೋರಾಟ ಮಲ್ತಿನ ಮಾತೆರೆನ್ಲಾ ನೆಂಪು ಮಲ್ತೊನುವ. ಉಂದು ತುಳು ಬಾಸೆದ ಪೆರ್ಮೆಗ್ ತಿಕ್ಕಿನ ಐತಿಹಾಸಿಕ ಮಾನಾದಿಗೆ.
ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸವಿರುವ ಪಂಚ ದ್ರಾವಿಡ ಭಾಷೆಗಳಲ್ಲೊಂದಾದ ತುಳು ಭಾಷೆಯನ್ನು, ಮಂಗಳೂರಿನಲ್ಲಿ ನಡೆದ ಕರ್ನಾಟಕ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯೆಂದು(ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಅನ್ವಯವಾಗುವಂತೆ) ಘೋಷಿಸಲಾಗಿದೆ. ತುಳು ಭಾಷಿಕರ ದಶಕಗಳ ಬೇಡಿಕೆಯನ್ನು ಈಡೇರಿಸಿದ ಸಂತೃಪ್ತಿ ನಮ್ಮ ಕಾಂಗ್ರೆಸ್ ಸರ್ಕಾರಕ್ಕಿದೆ. ಈ ಸಂದರ್ಭದಲ್ಲಿ ಈ ಮಾನ್ಯತೆಗಾಗಿ ಹೋರಾಡಿದ ಎಲ್ಲರನ್ನೂ ಸ್ಮರಿಸಿಕೊಳ್ಳುತ್ತೇವೆ. ಇದು ತುಳು ಭಾಷೆಯ ಮಹತ್ತತೆಗೆ ಸಂದ ಐತಿಹಾಸಿಕ ಮಾನ್ಯತೆಯಾಗಿದೆ.
ಮಾತಾ ತುಳುವಪ್ಪೆ ಜೋಕ್ಲೆಗ್ಲಾ ಸೊಲ್ಮೆಲು.
ಮುಖ್ಯಮಂತ್ರಿಗಳೇ, ಮಂಗಳೂರಿನಲ್ಲಿ ನಡೆಯಲಿರುವ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ತುಳುವನ್ನು ಕರ್ನಾಟಕದ ಅಧಿಕೃತ ಭಾಷೆಯಾಗಿ ಘೋಷಿಸಿ.
ತುಳುವಿಗೆ ಅಧಿಕೃತ ಮಾನ್ಯತೆ ನೀಡಲು ಇದು ಸಕಾಲ! ❤️
#TuluOfficialinKA_KL
Every time, we celebrate too early, thinking that Tulu has been made an official language, but the government has not officially declared it yet.
This time, let’s not celebrate until it is officially declared.
#TuluOfficialinKA_KL
ಮುಖ್ಯಮಂತ್ರಿಗಳೇ, ಮಂಗಳೂರಿನಲ್ಲಿ ನಡೆಯಲಿರುವ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ತುಳುವನ್ನು ಕರ್ನಾಟಕದ ಅಧಿಕೃತ ಭಾಷೆಯಾಗಿ ಘೋಷಿಸಿ.
ತುಳುವಿಗೆ ಅಧಿಕೃತ ಮಾನ್ಯತೆ ನೀಡಲು ಇದು ಸಕಾಲ! ❤️
#TuluOfficialinKA_KL
ಕರಾವಳಿ ಭಾಗದ ಜನರ ಬಹುಕಾಲದ ಆಶೋತ್ತರಗಳನ್ನು ಈಡೇರಿಸಲು, ಇದೇ ಸೆಪ್ಟೆಂಬರ್ 18ರಂದು ಕಡಲನಗರಿ ಮಂಗಳೂರಿನಲ್ಲಿ ನಮ್ಮ ಸರ್ಕಾರದ ವಿಶೇಷ ಸಚಿವ ಸಂಪುಟ ಸಭೆ ಆಯೋಜಿಸಿದ್ದೇವೆ.
ಕರಾವಳಿಯ ಜನರ ಕಷ್ಟ-ಸುಖಗಳನ್ನು ಹತ್ತಿರದಿಂದ ಕಂಡು, ಸ್ಥಳೀಯ ಅಗತ್ಯಗಳಿಗೆ ತಕ್ಕಂತೆ ಸ್ಥಳದಲ್ಲೇ ನಿರ್ಧಾರ ಕೈಗೊಳ್ಳುವುದು ನಮ್ಮ ಉದ್ದೇಶ. ಬಂದರು, ಮೂಲಸೌಕರ್ಯ, ಮೀನುಗಾರಿಕೆ ಮತ್ತು ಕೈಗಾರಿಕಾ ರಂಗಗಳಿಗೆ ನವಚೈತನ್ಯ ತುಂಬುವ ಮೂಲಕ ಕರಾವಳಿಯ ಸಮೃದ್ಧಿಗೆ ಹೊಸ ಮುನ್ನುಡಿ ಬರೆಯಲು ‘ಟೀಮ್ ಕರ್ನಾಟಕ’ ಸಜ್ಜಾಗಿದೆ.
#CabinetInMangaluru | #ದೃಢಕರ್ನಾಟಕದಸಂಕಲ್ಪ
ತುಳುನಾಡಿನಲ್ಲಿ, ತುಳು ಪ್ರತಿಯೊಬ್ಬ ಜನಸಾಮಾನ್ಯನ ಭಾಷೆ. ಜನರು ಭಾಷೆ ಹಾಗೂ ಧರ್ಮದ ಹಂಗಿಲ್ಲದೆ ತುಳುವನ್ನು ಮಾತನಾಡುತ್ತಾರೆ ಹಾಗೂ ಸಂಭ್ರಮಿಸುತ್ತಾರೆ. ಜನರು ಈಗಾಗಲೆ ಗುರುತಿಸಿರುವ ಈ ಭಾಷೆಗೆ ಆಡಳಿತ ಭಾಷೆಯ ಸ್ಥಾನವನ್ನು ಕೊಡಿ.
#TuluOfficialinKA_KL@cmkarnataka
ಭಾಷೆ ನಾಶವಾದರೆ ಕೇವಲ ಒಂದು ಭಾಷೆ ನಾಶವಾಗುವುದಿಲ್ಲ; ಅದರೊಂದಿಗೆ ಒಂದು ಸಮುದಾಯದ ಸಾಂಸ್ಕೃತಿಕ ನೆನಪು, ಜನಪದ ಜ್ಞಾನ, ಆಚರಣೆ, ಸಾಹಿತ್ಯ ಮತ್ತು ಬದುಕಿನ ದೃಷ್ಟಿಕೋನವೂ ದುರ್ಬಲವಾಗುತ್ತದೆ .
#TuluOfficialinKA_KL
Respect for Tulu must be reflected in government action. If the government truly stands with Tulu, let it introduce the necessary Bill in the Assembly without further delay.
#TuluOfficialinKA_KL#TuluOfficialinKA_KL
Tulu deserves a place in Karnataka’s administrative system. We demand official recognition, practical implementation and legal protection—not just political statements.
#TuluOfficialinKA_KL
ತುಳುವನ್ನು ಮೌನಗೊಳಿಸಲು ಸಾಧ್ಯವಿಲ್ಲ.
ಯಾಕೆಂದರೆ ಅದು ಕೇವಲ ಪುಸ್ತಕದಲ್ಲಿರುವ ಭಾಷೆಯಲ್ಲ.
ಅದು ಮನೆಯ ಮಾತು.
ಮನಸ್ಸಿನ ಮಾತು
ಮಣ್ಣಿನ ಮಾತು.
ಜನರ ಮಾತು.
ಪರಂಪರೆಯ ಮಾತು.
ತುಳು ಮಾತನಾಡುವ ಪ್ರತಿಯೊಂದು ಹೃದಯವೂ ಈ ಅಭಿಯಾನದ ಒಂದು ಧ್ವನಿ.
ತುಳುವಿನ ಧ್ವನಿ ನಿಲ್ಲುವುದಿಲ್ಲ!
#TuluOfficialinKA_KL@DKShivakumar@CMofKarnataka
ನಮ್ಮ ಮಾತೃಭಾಷೆಗೆ ಸೂಕ್ತ ಮಾನ್ಯತೆ ದೊರೆಯಬೇಕಾದ ಸಮಯ ಇದು. ಕರ್ನಾಟಕ ಮತ್ತು ಕೇರಳದಲ್ಲಿ ತುಳುವಿಗೆ ಅಧಿಕೃತ ಭಾಷೆಯ ಸ್ಥಾನಮಾನ ನೀಡುವ ನಮ್ಮ ನ್ಯಾಯಯುತ ಬೇಡಿಕೆಗೆ ಎಲ್ಲರೂ ಒಗ್ಗಟ್ಟಾಗಿ ಧ್ವನಿ ಎತ್ತೋಣ.
ನಮ್ಮ ಭಾಷೆ. ನಮ್ಮ ಪರಂಪರೆ. ನಮ್ಮ ಹಕ್ಕು. ✊
#TuluOfficialinKA_KL#Tulu#Tulunadu
No more “we will consider.” No more “we will discuss.” No more verbal commitments. We want a law that gives Tulu official status in Karnataka.
#TuluOfficialinKA_KL
Tulu is more than a language, it is the voice, heritage, and identity of Tulunadu.
Campaign seeking official language status for Tulu in Karnataka & Kerala, let’s unite and make our voice heard.
🔖 #TuluOfficialinKA_KL
Every voice counts. Let’s stand together for Tulu! ✊
Tulu-speaking communities deserve constitutional recognition, not empty promises. Pass the legislation to make Tulu an official language now!
#TuluOfficialinKA_KL