ಸರ್ವೊಚ್ಛ ನ್ಯಾಯಾಲಯ ಈಗಾಗಲೇ, ಸ್ಪಷ್ಟವಾಗಿ ಒಳ ಮೀಸಲಾತಿ ಯಾವ ರೀತಿಯಲ್ಲಿ ವರ್ಗೀಕರಿಸಿ ನೀಡಬೇಕೆಂದು ಸ್ಪಷ್ಠ ಪಡಿಸಿ ನೀರ್ದೇಶನ ನೀಡಿದೆ. ಹೀಗೆನಿದ್ಷರೂ ನ್ಯಾಯಾಲಯದ ಮಾರ್ಗ ಸೂಚಿಗಳನ್ನು ಅನುಸರಿಸಿ, ಒಳ ಮೀಸಲಾತಿ ವರ್ಗಿಕರಣವನ್ನು ಎಲ್ಲಾ ರಾಜಕೀಯ ಪಕ್ಷಗಳು ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಿ ಜಾರಿಗೆ ತರಲು ಮುಂದಾಗಬೇಕು.
ನಮ್ಮ ರಾಜ್ಯದ ಬಹುಪಾಲು ಜನ ಸ್ವಂತ ವಾಸಿಸಲು ಸ್ವಂತ ಸೂರಿಲ್ಲದೆ ಪರಿತಪಿಸುತ್ತಿದ್ದಾರೆ. ಬಡ ಕುಟುಂಬದ ಸದಸ್ಯರೆಲ್ಲರೂ ದುಡಿದರು ದುಬಾರಿಯಾದ ಶಿಕ್ಷಣ ವೆಚ್ಛ, ಆರೋಗ್ಯ ವೆಚ್ಛ ಬೆಲೆ ಏರಿಕೆಯ ಬಿಸಿಯಲ್ಲಿ ಬಳಲುತ್ತಿದ್ದಾರೆ. ಆದರೆ ರಾಜಕಾರಣಿಗಳಿಗೆ ಉದ್ಯಾನವನ, ಕರೆ, ದೇವಸ್ಥಾನಗಳ ಬಗ್ಗೆ ಮಾತ್ರ ಕಾಳಜಿ ತೋರುತ್ತಾರೆ.
ಸನ್ಮಾನ್ಯ ಮುಖ್ಯಮಂತ್ರಿ ಅವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ಗಂಭೀರವಾಗಿ ತಲೆದೂರಿರುವ ಮೀಸಲಾತಿ ಹೆಚ್ಚಳ, ಒಳಮೀಸಲಾತಿ, ಮುಂಬಡ್ತಿ ಮೀಸಲಾತಿ, ಕೆನೆ ಪದರ ಹಾಗೂ ಖಾಸಗಿ ರಂಗದಲ್ಲಿ ಮೀಸಲಾತಿ ಕುರಿತಂತೆ ರಾಜಕೀಯ ಇಚ್ಛಾಸಕ್ತಿ ಪ್ರದರ್ಶಿಸಿ ಸಾಮಾಜಿಕ ನ್ಯಾಯ ಎತ್ತಿಹಿಡಿಯದಿರುವುದು ಎದ್ದು ಕಾಣುತ್ತಿದೆ.
ರಾಜ್ಯದಲ್ಲಿ ದಲಿತ ಸಂಘಟನೆಗಳಿಗೆ ಅಪ್ತ ಸ್ನೇಹಿತರಾಗಬೇಕಿರುವುದು ಕಮ್ಯೂನಿಸ್ಟರು. ಅದೇ ರೀತಿ ಕಮ್ಯೂನಿಷ್ಟರಾದ ನಾವೂ ದಲಿತರನ್ನು ಆತ್ಮ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾದ ಅರ್ಹತೆಯನ್ಜು ಹೆಚ್ಚಿಸಿಕೊಳ್ಳಬೇಕು. ಆಗಮಾತ್ರ ಎಡ ಚಳವಳಿಯನ್ನು ನಮ್ಮ ರಾಜ್ಯದಲ್ಲಾಗಲಿ ಅಥವಾ ದೇಶದಲ್ಲಾಗಲೀ ಬಲಪಡಿಸಲು ಸಾಧ್ಯವಾಗುವುದು.
ಆರ್. ಎಸ್.ಎಸ್.ಗೆ ನೈಜವಾದ ದೇಶಭಕ್ತಿ ಇದ್ದರೆ, ತಾಕತ್ತು ಇದ್ದರೆ, ನಮ್ಮ ದೇಶದ ಅಭಿವೃದ್ಧಿಗೆ ಅಡ್ಡಗಾಲಾಗಿರುವ ಅನಾಗರಿಕ ಅಸ್ಪೃಶ್ಯತೆ ಆಚರಣೆ ಮತ್ತು ಜಾತಿ ತಾರಮ್ಯದ ವಿರುದ್ಸ ದೇಶಾದಾದ್ಯಂತ ಪಥ ಸಂಚಲನ ನಡೆಸಲಿ.
Scsp/tsp ಕಾಯ್ದೆಯನ್ನು 2013 ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ರಚಿಸಿದ್ದು ಸ್ವಾಗತಾರ್ಹ. ಆದರೆ ಕಾಯ್ದಾನುಸಾರ scsp/tsp ಯೋಜನೆಯನ್ನ 2013ರರಿಂದಲ್ಲೂ ಜಾರಿಗೆ ತರದೆ ದಲಿತರಿಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಅನ್ಯಾಯ ಮಾಡಿಕೊಂಡು ಬರುತ್ತಿವೆ.
ದಲಿತರನ್ನು ದಲಿತೇತರರ ಸಮನಾಂತರಕ್ಕೆ ತರುವ ಉದ್ದೇಶ ಹೊಂದಿರುವ Scsp/tsp ಕಾಯ್ದೆ ಯೋಜನೆಯಡಿ ಮೀಸಲಿಡುವ ಹಣವನ್ನು , ಕಾಯ್ದೆ ಜಾರಿಗೆ ಬಂದ 2023 ರಿಂದಲ್ಲೂ ಕಾಯ್ದೆಯ ಉದ್ದೇಶವನ್ನೇ ಬುಡಮೇಲು ಮಾಡಲಾಗಿದೆ. ಇನ್ನಾದರೂ ಕಾಯ್ದೆಯನುಸಾರವಾಗಿ ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಬೇಕು.
ರಾಜ್ಯದ ಮುಖ್ಯಮಂತ್ರಿಯಾಗಿ ಯಾರೇ ಕರೆದರೂ ಸಮಯ, ಆದ್ಯತೆ ಆನುಸಾರ ಭಾಗವಹಿಸಬೇಕು. ಸಂವಿಧಾನತ್ಮಕವಾಗಿ ಅಭಿಪ್ರಾಯವನ್ನಾ ವ್ಯಕ್ತಪಡಿಸಬೇಕು ಅಷ್ಟೆ ಬಿಡ್ರಪ್ಪಾ.., ಜನ ಸಾಮಾನ್ಯರ ಇತರೆ ಗಂಭೀರವಾದ ಸಮಸ್ಯೆ- ಸವಾಲುಗಳ ಬಗ್ಗೆ ಚರ್ಚೆ ಮಾಡ್ರಪ್ಪಾ ಅಣ್ಣತಮ್ಮಂದಿರಾ...
ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರೇ, ಸಮರ್ಪಕವಾಗಿ ಗ್ಯಾರಂಟಿಗಳ ಜಾರಿಯೊಂದಿಗೆ, ಮೂರು ಕೋಟಿಗಿಂತ ಹೆಚ್ಚು ಜನರು ರಾಜ್ಯದಲ್ಲಿ ನಿವೇಶನ ಮತ್ತು ಸಮರ್ಪಕ ವಸತಿಗಳಿಲ್ಲದೆ ಪರಿತಪಿಸುತ್ತಿದ್ದಾರೆ. ದಯವಿಟ್ಟು ಈ ಬಗ್ಗೆ ಗಮನ ಹರಿಸಿ, ನಿವೇಶನ ಮತ್ತು ಮನೆ ಇಲ್ಲದವರ ಸರ್ವೆ ನಡೆಸಿ ಅರ್ಹರಾದವರಿಗೆ ನಿವೇಶ ಮತ್ತು ವಸತಿ ಸೌಲಭ್ಯ ಕಲ್ಪಿಸಿಕೊಡಿ.
ಅನುದಾನಿತ ಮತ್ತು ಅನುದಾನ ರಹಿತ ಶಾಲಾ ಕಾಲೇಜ್ ಬೋಧಕ ಮತ್ತು ಬೋಧಕೇತರನ್ನು ಅಮಾನವೀಯವಾಗಿ ಆಡಳಿತ ಸಂಸ್ಥೆಗಳು ನಡೆಸಿಕೊಳ್ಳುತ್ತಿವೆ. ಉಸಿರುಗಟ್ಟುವ ವಾತಾವರಣದಲ್ಲಿ ಸಿಬ್ಬಂದಿ ವರ್ಗ ಕೆಲಸ ಮಾಡುವಂತಹ ಪರಿಸ್ಥಿತಿ ಇದೆ.