ನಾಡಹಬ್ಬ ದಸರಾ ಮಹೋತ್ಸವದ ಶುಭ ಸಂದರ್ಭದಲ್ಲಿ ಇಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಪಕ್ಷದ ರಾಜ್ಯ ಕಾರ್ಯಾಲಯ 'ಜಗನ್ನಾಥ ಭವನ'ದಲ್ಲಿ ಇಂದು 'ಆಯುಧ ಪೂಜೆ'ಯನ್ನು ಶ್ರದ್ಧಾ-ಭಕ್ತಿ ಹಾಗೂ ಸಂಭ್ರಮ ಸಂತೋಷದಿಂದ ಎಲ್ಲರೊಂದಿಗೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ವಿಶೇಷವಾಗಿ ಪದ್ಮಶ್ರೀ ಪುರಸ್ಕೃತ ಶ್ರೇಷ್ಠ ವೈದ್ಯರಾದ ಡಾ. ವಿಜಯಲಕ್ಷ್ಮಿ ದೇಶಮಾನೆ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಶ್ರೀ @NswamyChalavadi , ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷರಾದ ಶ್ರೀ ಸಪ್ತಗಿರಿ ಗೌಡ ಮತ್ತಿತರ ಪ್ರಮುಖರು ಮತ್ತು ನಮ್ಮ ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.
ಶ್ರಮ, ವೃತ್ತಿ ಮತ್ತು ಜ್ಞಾನಕ್ಕೆ ಗೌರವ ಸಲ್ಲಿಸುವ ಪವಿತ್ರ 'ಆಯುಧ ಪೂಜೆ'ಯ ಪವಿತ್ರ ಸಂದರ್ಭದಲ್ಲಿ ನಾಡಿನ ಸಮಸ್ತ ಜನತೆಗೆ ಹಾರ್ದಿಕ ಶುಭಾಶಯಗಳು.
ನಮ್ಮ ದಿನನಿತ್ಯದ ಬದುಕಿಗೆ, ಜೀವನೋಪಾಯಕ್ಕೆ ಹಾಗೂ ಪ್ರಗತಿಗೆ ಆಸರೆಯಾಗಿರುವ ಉಪಕರಣಗಳನ್ನು, ಕಾರ್ಯಸಾಧನಗಳನ್ನು ದೈವಿ ಸ್ವರೂಪದಲ್ಲಿ ಪೂಜಿಸುವ ಶ್ರೇಷ್ಠ ಪರಂಪರೆ ನಮ್ಮದು.
ಕಾಯಕವೇ ಕೈಲಾಸ ಎಂಬ ತತ್ತ್ವದಂತೆ ಶ್ರಮಿಕ ವರ್ಗದ ಕಾಯಕಕ್ಕೆ ಹಾಗೂ ಸಕಲ ವೃತ್ತಿಪರರ ನಿಷ್ಠೆಗೆ ಈ ದಿನ ಗೌರವ ಸಲ್ಲಿಸೋಣ. ನಾಡಿನ ಸಮಸ್ತ ಜನತೆಗೆ ಧನ-ಧಾನ್ಯ, ಐಶ್ವರ್ಯ ಹಾಗೂ ಕಾಯಕದಲ್ಲಿ ನಿರಂತರ ವಿಜಯ ಪ್ರಾಪ್ತಿಯಾಗಲಿ ಎಂದು ಪ್ರಾರ್ಥಿಸುತ್ತೇನೆ.
ಪರಮಪೂಜ್ಯ ಶ್ರೀ ಡಾ. ಕೇಶವ ಬಲಿರಾಮ್ ಹೆಡಗೆವಾರ್ ಜೀ ಅವರಿಂದ 1925ರ ವಿಜಯದಶಮಿಯ ಪವಿತ್ರ ದಿನದಂದು ಪ್ರಾರಂಭಗೊಂಡ @RSSorg , ಇಂದು ವಿಶ್ವವ್ಯಾಪಕವಾಗಿ ಬೆಳೆದು ರಾಷ್ಟ್ರಸೇವೆ ಹಾಗೂ ಭಾರತೀಯ ಸಂಸ್ಕೃತಿ ರಕ್ಷಣೆಯ ನಿಟ್ಟಿನಲ್ಲಿ ಏಕನಿಷ್ಟೆಯಿಂದ ಸೇವೆ ಸಲ್ಲಿಸುತ್ತಿದೆ.
ಶಿಸ್ತು, ದೇಶಭಕ್ತಿ, ತ್ಯಾಗ ಮತ್ತು ನಿಸ್ವಾರ್ಥ ಸಮಾಜಸೇವೆಯ ಸಂಸ್ಕಾರವನ್ನು ಕೋಟ್ಯಂತರ ಮನಸ್ಸುಗಳಲ್ಲಿ ಬಿತ್ತಿ, ರಾಷ್ಟ್ರೀಯ ಪ್ರಜ್ಞೆಯನ್ನು ಜಾಗೃತಗೊಳಿಸುತ್ತಿರುವ ರಾಷ್ಟ್ರಸೇವಕರ ಸಮಸ್ತ ಪರಿವಾರಕ್ಕೆ, ಎಲ್ಲಾ ಸಹ ಸ್ವಯಂಸೇವಕರಿಗೆ ಹಾಗೂ ಸಂಘದ ಹಿತೈಷಿಗಳಿಗೆ, ಅಭಿಮಾನಿಗಳಿಗೆ ಮತ್ತು ರಾಷ್ಟ್ರನಿಷ್ಠ ನಾಗರಿಕ ಬಂಧುಗಳಿಗೆ 'ರಾಷ್ಟ್ರೀಯ ಸ್ವಯಂಸೇವಕ ಸಂಘ'ದ ಸ್ಥಾಪನಾ ದಿನದ ಅಭಿಮಾನಪೂರ್ವಕ ಶುಭಾಶಯಗಳು.
ನಾಡಹಬ್ಬ ದಸರಾ ಹಾಗೂ ನವರಾತ್ರಿಯ ಪಾವನ ಪರ್ವಕಾಲದಲ್ಲಿ ಇಂದು ಬೆಂಗಳೂರಿನ ಶ್ರೀ ರಾಮಚಂದ್ರಾಪುರ ಮಠಕ್ಕೆ ಭೇಟಿ ನೀಡಿ, ಪರಮಪೂಜ್ಯ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳನ್ನು ಭೇಟಿ ಮಾಡಿ, ಅವರಿಗೆ ಭಕ್ತಿಪೂರ್ವಕ ಗೌರವಾದರಗಳನ್ನು ಸಲ್ಲಿಸಿ, ಆಶೀರ್ವಾದ ಪಡೆಯಲಾಯಿತು.
ನಾಡಿನ ಪ್ರಗತಿ ಹಾಗೂ ಜನತೆಯ ಕಲ್ಯಾಣಕ್ಕಾಗಿ ಪೂಜ್ಯ ಶ್ರೀಗಳ ಅನುಗ್ರಹ ಸದಾ ಇರಲಿ ಎಂದು ವಿಶೇಷವಾಗಿ ಪ್ರಾರ್ಥಿಸಲಾಯಿತು. ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ರವಿ ಸುಬ್ರಹ್ಮಣ್ಯ ಹಾಗೂ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.
Deeply saddened by the tragic accident near the Sheetla Mata Temple in Gwalior, where a truck rammed into devotees gathered for prayers.
My heartfelt condolences to the families who have lost their loved ones. Praying for the recovery of those injured and for strength to everyone affected by this heartbreaking tragedy.
My thoughts and prayers are with the bereaved families during this difficult time.
ಕ್ಯಾನ್ಸರ್ ಚಿಕಿತ್ಸೆಯ ಆರ್ಥಿಕ ಹೊರೆ ತಗ್ಗಿಸಲು ಮೋದಿ ಸರ್ಕಾರದ ಮತ್ತೊಂದು ಮಹತ್ವದ ಜನಪರ ನಿರ್ಧಾರ!
ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚ ರೋಗಿಯನ್ನಷ್ಟೇ ಅಲ್ಲ, ಅವರ ಇಡೀ ಕುಟುಂಬವನ್ನೂ ಆರ್ಥಿಕ ಸಂಕಷ್ಟಕ್ಕೆ ದೂಡುತ್ತದೆ. ಈ ಆರ್ಥಿಕ ಹೊರೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಅವರ ನೇತೃತ್ವದ ಕೇಂದ್ರ ಸರ್ಕಾರವು ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ 137 ಔಷಧಗಳ ವ್ಯಾಪಾರ ಲಾಭಾಂಶವನ್ನು ಶೇ.30ಕ್ಕೆ ಮಿತಿಗೊಳಿಸಿದೆ. ಇದರ ಪರಿಣಾಮವಾಗಿ ನವೆಂಬರ್ 9ರಿಂದ ಈ ಔಷಧಗಳ ಬೆಲೆ ಶೇ.70ರವರೆಗೆ ಇಳಿಕೆಯಾಗಲಿದೆ.
ಈ ನಿರ್ಧಾರದಿಂದ ಇಮ್ಯುನೋಥೆರಪಿಯಂತಹ ಜೀವ ರಕ್ಷಕ ಚಿಕಿತ್ಸೆಯಲ್ಲಿ ಬಳಸುವ ಔಷಧಗಳು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೂ ಹೆಚ್ಚು ಕೈಗೆಟುಕುವಂತಾಗಲಿವೆ. ಇದು ಕೇವಲ ಔಷಧಗಳ ಬೆಲೆ ಇಳಿಕೆಯಲ್ಲ, ಜನರ ಜೀವ ಮತ್ತು ಜೀವನದ ಬಗ್ಗೆ ಮೋದಿ ಸರ್ಕಾರಕ್ಕಿರುವ ಕಾಳಜಿಗೆ ಮತ್ತೊಂದು ನಿದರ್ಶನವಾಗಿದೆ.
ಈ ಮಹತ್ವದ ಜನಪರ ನಿರ್ಧಾರಕ್ಕಾಗಿ ನಮ್ಮ ಹೆಮ್ಮೆಯ ಪ್ರಧಾನಮಂತ್ರಿ ಶ್ರೀ @narendramodi ಜೀ ಅವರಿಗೂ ಹಾಗೂ ಕೇಂದ್ರ ಆರೋಗ್ಯ ಸಚಿವ ಶ್ರೀ ಜೆ.ಪಿ. ನಡ್ಡಾ ಜೀ ಅವರಿಗೂ ರಾಜ್ಯದ ಜನತೆಯ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳು!
ತಮ್ಮ ಇಡೀ ವೃತ್ತಿಜೀವನವನ್ನು ಮಕ್ಕಳ ಭವಿಷ್ಯ ರೂಪಿಸಲು ಮುಡಿಪಾಗಿಟ್ಟ ಶಿಕ್ಷಕರು, ತಮ್ಮ ಜೀವನದ ಸಂಧ್ಯಾಕಾಲದಲ್ಲಿ ಪಿಂಚಣಿಗಾಗಿ ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆಯುವ ಸ್ಥಿತಿಗೆ ತಲುಪಿರುವುದು ಸಮಾಜವೇ ತಲೆತಗ್ಗಿಸುವಂತಹ ಸಂಗತಿ.
ಹೈಕೋರ್ಟ್ ಆದೇಶ ಹೊರಬಿದ್ದು ಎರಡು ತಿಂಗಳು ಕಳೆದರೂ ಪಿಂಚಣಿ ಮಂಜೂರು ಮಾಡದೆ ರಾಜ್ಯ ಸರ್ಕಾರ ಮೀನಮೇಷ ಎಣಿಸುತ್ತಿರುವುದು ನ್ಯಾಯಾಲಯದ ಆದೇಶಕ್ಕೆ ತೋರಿದ ಅಗೌರವವಷ್ಟೇ ಅಲ್ಲ, ನಮ್ಮ ಶಿಕ್ಷಕ ಸಮುದಾಯಕ್ಕೆ ಎಸಗುತ್ತಿರುವ ಘೋರ ಅನ್ಯಾಯವೂ ಹೌದು.
ಶಿಕ್ಷಕರೇ ಹೇಳಿರುವಂತೆ, 2023ರ ಚುನಾವಣೆಗೆ ಮುನ್ನ ಪಿಂಚಣಿ ಭದ್ರತೆಯ ಭರವಸೆ ನೀಡಿದ್ದ ಕಾಂಗ್ರೆಸ್, ಅಧಿಕಾರಕ್ಕೆ ಬಂದ ಬಳಿಕ ತಾನು ನೀಡಿದ ಭರವಸೆಯನ್ನು ಮರೆತಿರುವುದೇಕೆ?
ನ್ಯಾಯಾಲಯದ ಆದೇಶವನ್ನು ಪಾಲಿಸುವ ಹೊಣೆ ರಾಜ್ಯ ಸರ್ಕಾರದ್ದಲ್ಲವೇ?
ನಮ್ಮ ಶಿಕ್ಷಕರಿಗೆ ನನ್ನ ಕಳಕಳಿಯ ವಿನಂತಿ - ನಿಮ್ಮ ನೋವು ನಮಗೆ ಅರ್ಥವಾಗುತ್ತದೆ. ಯಾವುದೇ ಕಾರಣಕ್ಕೂ ಕಠೋರ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ನಿಮ್ಮ ನ್ಯಾಯಯುತ ಹೋರಾಟದಲ್ಲಿ ನಮ್ಮ ಪಕ್ಷ ಸದಾ ನಿಮ್ಮೊಂದಿಗೆ ನಿಂತಿದೆ.
ರಾಜ್ಯ ಸರ್ಕಾರವು ಕೂಡಲೇ ಹೈಕೋರ್ಟ್ ಆದೇಶವನ್ನು ಜಾರಿಗೊಳಿಸಿ, ನಿವೃತ್ತ ಶಿಕ್ಷಕರು ಹಾಗೂ ಮೃತ ನೌಕರರ ಕುಟುಂಬಗಳಿಗೆ ಪಿಂಚಣಿ ಮತ್ತು ಇತರ ಸೌಲಭ್ಯಗಳನ್ನು ಒದಗಿಸುವ ಮೂಲಕ ಅವರ ಬದುಕಿಗೆ ಭದ್ರತೆ ಕಲ್ಪಿಸಬೇಕೆಂದು ಒತ್ತಾಯಪೂರ್ವಕವಾಗಿ ಆಗ್ರಹಿಸುತ್ತೇನೆ.
#CongressFailsKarnataka
ಕಾಂಗ್ರೆಸ್ ಪಕ್ಷದ ದ್ವಿಮುಖ ಪ್ರಹಸನಗಳನ್ನು ನೋಡಿ ಜನ ರೋಸಿಹೋಗಿದ್ದಾರೆ. ಅತ್ತ ದೆಹಲಿಯಲ್ಲಿ ಕಾಂಗ್ರೆಸ್ ನಾಯಕ ಶ್ರೀ @RahulGandhi , ದೇಶವಿರೋಧಿ ಶಕ್ತಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಾ, ದೇಶದಲ್ಲಿ “ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿದೆ, ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತಿದೆ, ಜನರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ” ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಇತ್ತ ಕರ್ನಾಟಕದಲ್ಲಿ ಅವರದೇ ಪಕ್ಷದ ರಾಜ್ಯ ಸರ್ಕಾರ, ಅಮಾಯಕ ದಿವ್ಯಾಂಗರ ಹಕ್ಕುಗಳನ್ನು ಹತ್ತಿಕ್ಕುತ್ತಿದೆ, ಅವರ ನ್ಯಾಯಯುತ ಬೇಡಿಕೆಗಳನ್ನು ಕಡೆಗಣಿಸುತ್ತಿದೆ. ಹಕ್ಕುಗಳ ಬಗ್ಗೆ ಉಪದೇಶ ನೀಡುವವರು ಮೊದಲು ತಮ್ಮದೇ ಸರ್ಕಾರದ ನಡೆಯ ಬಗ್ಗೆ ಉತ್ತರ ನೀಡಲಿ. ಈ ಅಮಾಯಕ ದಿವ್ಯಾಂಗರು ಬೀದಿಗಿಳಿದಿರುವುದು ರಾಜಕೀಯ ಲಾಭಕ್ಕಾಗಿ ಅಲ್ಲ; ತಮ್ಮ ಬದುಕಿನ ಅಗತ್ಯಗಳಿಗಾಗಿ, ನ್ಯಾಯಯುತವಾಗಿ ಸಿಗಬೇಕಾದ ಪಿಂಚಣಿಗಾಗಿ!
ಅವರ ಬಾಕಿ ಪಿಂಚಣಿ ಹಣವನ್ನು ತಕ್ಷಣ ಬಿಡುಗಡೆ ಮಾಡಿ, ಮಾನವೀಯತೆ ತೋರಬೇಕಾದ ಈ ಭ್ರಷ್ಟ @INCKarnataka ಸರ್ಕಾರ, ಎಂದಿನಂತೆ ತನ್ನ ಅಧಿಕಾರ ದರ್ಪವನ್ನು ತೋರುತ್ತಾ ಹೋರಾಟವನ್ನು ತಡೆಯುವ ಪ್ರಯತ್ನ ಮಾಡುತ್ತಿರುವುದು ಖಂಡನೀಯ.ದಿವ್ಯಾಂಗರ ವಿಷಯದಲ್ಲಿ ರಾಜ್ಯ ಸರ್ಕಾರ ಹೆಚ್ಚು ಸಂವೇದನಾಶೀಲತೆಯಿಂದ ನಡೆದುಕೊಳ್ಳಬೇಕು. ಮೊದಲು ಅವರೊಂದಿಗೆ ಮಾತನಾಡಿ, ಅವರ ಬೇಡಿಕೆಗಳನ್ನು ಪರಿಶೀಲಿಸಿ, ಅವರ ಸಮಸ್ಯೆಗಳಿಗೆ ಕಾಲಮಿತಿಯಲ್ಲಿ ಪರಿಹಾರ ಒದಗಿಸುವ ಕೆಲಸ ಮಾಡಲಿ. ದಿವ್ಯಾಂಗರ ಹಕ್ಕು, ಗೌರವ ಮತ್ತು ಅವರ ಈ ನ್ಯಾಯಯುತ ಹೋರಾಟದಲ್ಲಿ ನಮ್ಮ ಪಕ್ಷ ಅವರೊಂದಿಗೆ ಗಟ್ಟಿಯಾಗಿ ನಿಲ್ಲಲಿದೆ. ರಾಜ್ಯ ಸರ್ಕಾರ ಕೂಡಲೇ ಪ್ರತಿಭಟನಾಕಾರರ ಜತೆ ಮಾತುಕತೆ ನಡೆಸಿ ಅವರ ಸಮಸ್ಯೆಯನ್ನು ಆದ್ಯತೆಯ ಮೇರೆಗೆ ಬಗೆಹರಿಸಬೇಕು ಎಂದು ಆಗ್ರಹಿಸುತ್ತೇನೆ!
#CongressFailsKarnataka
ನಾಡಿನ ಸಮಸ್ತ ಭಕ್ತಜನತೆಗೆ ನವರಾತ್ರಿಯ ಒಂಬತ್ತನೇ ದಿನದ ಹಾಗೂ ಮಹಾನವಮಿ ಹಬ್ಬದ ಭಕ್ತಿಪೂರ್ವಕ ಶುಭಹಾರೈಕೆಗಳು. ಸಕಲ ಸಿದ್ಧಿ ಮತ್ತು ಶುಭಫಲಗಳನ್ನು ಕರುಣಿಸುವ ತಾಯಿ ಸಿದ್ಧಿದಾತ್ರಿಯ ಆಶೀರ್ವಾದದಿಂದ ಎಲ್ಲರ ಸತ್ಕಾರ್ಯಗಳು ಪೂರ್ಣ ಯಶಸ್ವಿಯಾಗಲಿ, ಜ್ಞಾನ, ಸೇವೆ ಮತ್ತು ಸತ್ಕರ್ಮಗಳ ಮೂಲಕ ಸಮಾಜದ ಏಳಿಗೆ ಮತ್ತು ಒಳಿತಿಗೆ ಕೊಡುಗೆ ನೀಡುವ ಸಂಕಲ್ಪ ನಮ್ಮೆಲ್ಲರಲ್ಲಿ ಬಲಗೊಳ್ಳುವಂತೆ ತಾಯಿ ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇನೆ.
'ಮಿಚ್ಛಾಮಿ ದುಕ್ಕಡಂ' - ದಿವ್ಯ ಸನ್ನಿಧಾನದಲ್ಲಿ ಕ್ಷಮಾವಳಿ ಪರ್ವ
ಪರಮಪೂಜ್ಯ ಆಚಾರ್ಯರತ್ನ ಬಾಹುಬಲಿ ಮುನಿ ಮಹಾರಾಜರ ಪರಮಶಿಷ್ಯರಾದ ಪರಮಪೂಜ್ಯ ಬಾಲಾಚಾರ್ಯ ಡಾ. ಶ್ರೀ ಸಿದ್ಧಸೇನ ಮುನಿಮಹಾರಾಜರ ಪವಿತ್ರ ಸನ್ನಿಧಾನದಲ್ಲಿ, ಇಂದು ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಛಬ್ಬಿಯಲ್ಲಿ ನಡೆದ 'ಪಾವನ ವರ್ಷಯೋಗ-2026'ರ ಕ್ಷಮಾವಳಿ ಪರ್ವ ಕಾರ್ಯಕ್ರಮ, ಸತ್ಕಾರ ಸಮಾರಂಭ ಹಾಗೂ ಸಮುದಾಯ ಭವನದ ಭೂಮಿಪೂಜೆ ಸಮಾರಂಭದಲ್ಲಿ ಪಾಲ್ಗೊಂಡು, ಪರಮಪೂಜ್ಯ ಗುರುಗಳ ಆಶೀರ್ವಾದ ಪಡೆಯಲಾಯಿತು.
ಜೈನ ಧರ್ಮದ ಅಹಿಂಸೆ, ಶಾಂತಿ ಮತ್ತು ಕ್ಷಮಾಗುಣದ ಮಹೋನ್ನತ ತತ್ವಗಳು ಮನುಕುಲಕ್ಕೆ ಸದಾ ಬೆಳಕಾಗಿವೆ. ಕಾರ್ಯಕ್ರಮದಲ್ಲಿ ಪಕ್ಷದ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಮಲ್ಲಿಕಾರ್ಜುನ ಬಾಳಿಕಾಯಿ, ಧಾರವಾಡ ಗ್ರಾಮಾಂತರ ಜಿಲ್ಲಾಧ್ಯಕ್ಷ ಶ್ರೀ ನಿಂಗಪ್ಪ ಸುತಗಟ್ಟಿ, ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಶ್ರೀ ಸುಭಾಷ್ ಪಾಟೀಲ, ರಾಜ್ಯ ಕಾರ್ಯದರ್ಶಿ ಶ್ರೀ ಶರಣು ತಳ್ಳಿಕೇರಿ, ಪ್ರಮುಖರಾದ ಶ್ರೀ ರವಿ ದಂಡಿನ, ಶ್ರೀ ಈರಣ್ಣ ಜಡಿ ಮತ್ತು ಜೈನ ಸಮಾಜದ ಮುಖಂಡರು ಹಾಗೂ ಅಪಾರ ಸಂಖ್ಯೆಯ ಭಕ್ತಜನರು ಉಪಸ್ಥಿತರಿದ್ದರು.
ಕೆ.ಆರ್.ನಗರದ ಪ್ರಸಿದ್ಧ ಅರ್ಕೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಹಿಂದೂ ಸಂಪ್ರದಾಯಗಳಿಗೆ ವಿರುದ್ಧವಾಗಿ ಇತರ ಧಾರ್ಮಿಕ ಚಿಹ್ನೆಗಳನ್ನು ರಚಿಸಿ, ಸನಾತನ ಧರ್ಮದ ಶ್ರದ್ಧಾಕೇಂದ್ರದ ಪವಿತ್ರತೆಗೆ ಧಕ್ಕೆ ತರಲು ಯತ್ನಿಸಿರುವುದು ಅತ್ಯಂತ ಖಂಡನೀಯ. ಇದು ಸೂಕ್ಷ್ಮತೆಯ ಅರಿವಿಲ್ಲದ, ಸಂವೇದನಾರಹಿತ ಉದ್ಧಟತನ. ಧಾರ್ಮಿಕ ಸಾಮರಸ್ಯದ ಹೆಸರಿನಲ್ಲಿ ಹಿಂದೂ ದೇವಸ್ಥಾನಗಳ ಆಚಾರ-ವಿಚಾರಗಳು ಹಾಗೂ ಪದ್ಧತಿಗಳ ಮೇಲೆ ಸವಾರಿ ಮಾಡಲು ಹೊರಟಿರುವ ಅಧಿಕಾರಿಗಳ ನಡೆ ಮತ್ತು ಈ ಕುರಿತಂತೆ ಈ ತುಘಲಕ್ ಸರ್ಕಾರದ ಮೌನ ಭಕ್ತಾದಿಗಳ ಭಾವನೆಗಳಿಗೆ ಎಸಗಿದ ದ್ರೋಹವಾಗಿದೆ. ಇವರ ಢೋಂಗಿ ಮುಖವಾಡವನ್ನು ಕಳಚಿ ಅಸಲೀ ಮುಖವನ್ನು ಬಯಲು ಮಾಡಿದೆ.
ಇತರ ಪ್ರಾರ್ಥನಾ ಮಂದಿರಗಳಲ್ಲಿ ಕಾಣಿಸದ ಇಂತಹ ಕುಚೋದ್ಯಗಳು ಕೇವಲ ಹಿಂದೂ ನಂಬಿಕೆಗಳ ಮೇಲೆಯೇ ಹೇರುವುದು ಯಾಕೆ? ಮಾನ್ಯ ಮುಖ್ಯಮಂತ್ರಿಗಳೇ, ಹಿಂದೂಗಳ ಶಾಂತಿ ಪ್ರಿಯತೆಯನ್ನು ದೌರ್ಬಲ್ಯ ಎಂದುಕೊಂಡ ವಿಕೃತ ಮನಸ್ಸಿನ ಕುಚೇದ್ಯಗಳಿಗೆ, ಪ್ರಚೋದನೆಗಳಿಗೆ ನಿಮ್ಮ ಸರ್ಕಾರ ತಕ್ಕ ಶಾಸ್ತಿ ಮಾಡದೆ ಹೋದರೆ ಜನರೇ ಆ ಕೆಲಸ ಮಾಡಬೇಕಾದೀತು. ಸಾಮರಸ್ಯ ಎಂಬುದು ಎಲ್ಲಾ ಧರ್ಮಗಳಿಗೂ ಸಮಾನವಾಗಿ ಅನ್ವಯವಾಗಬೇಕಾದ ತತ್ವ. ಈ @INCKarnataka ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಸನಾತನ ಪರಂಪರೆ ಹಾಗೂ ಭಕ್ತರ ಧಾರ್ಮಿಕ ಹಕ್ಕುಗಳನ್ನು ಕಡೆಗಣಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಪ್ರಕೃತ ಪ್ರಕರಣದಲ್ಲಿ ತಹಸೀಲ್ದಾರ್ ಅವರು ನಂತರ ಆ ಚಿಹ್ನೆಗಳನ್ನು ತೆರವುಗೊಳಿಸುವುದಷ್ಟೇ ಸಾಲದು. ಇಂತಹ ಪ್ರಚೋದನಾಕಾರಿ ಕೆಲಸ ಮಾಡಿರುವವರ ವಿರುದ್ಧ ತಕ್ಷಣವೇ ತನಿಖೆ ನಡೆಸಿ ಬಂಧಿಸಬೇಕು, ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇನೆ. ಜನರ ಧಾರ್ಮಿಕ ನಂಬಿಕೆಗಳೊಂದಿಗೆ ಆಟವಾಡುತ್ತಿರುವ ಇಂತಹ ಉದ್ಧಟತನ ಅಕ್ಷಮ್ಯ!
At Arkeshwara Temple in KR Nagar, mosque and cross symbols were painted and later erased on the Tahsildar’s orders. According to Aarati, the temple in-charge, a senior official had reportedly instructed them to keep the symbols in the name of communal harmony.
But why promote such symbolism in a Hindu temple? Why isn’t the same gesture of communal harmony shown in mosques or churches?
The anti-Hindu Congress government is hurting Hindu religious sentiments and betraying Hindu interests. The people of Karnataka deserve accountability and equal respect for their religious beliefs.
REGIME CHANGE MUST HAPPEN IN KARNATAKA!
#RegimeChangeInKarnataka #HinduRights #JusticeForHindus
@republic@yaduveerwadiyar@mepratap@PMOIndia@HMOIndia
ಪದವೀಧರರ ಹಿತರಕ್ಷಣೆಯ ಬದ್ಧತೆ, ಎನ್.ಡಿ.ಎ ಅಭ್ಯರ್ಥಿ ಗೆಲುವಿನ ಸಂಕಲ್ಪ
ಪಶ್ಚಿಮ ಪದವೀಧರ ಕ್ಷೇತ್ರದ ನಮ್ಮ ಎನ್.ಡಿ.ಎ ಮೈತ್ರಿ ಕೂಟದ ಅಭ್ಯರ್ಥಿ ಶ್ರೀ ಎಸ್.ವಿ.ಸಂಕನೂರ ಅವರ ಪರವಾಗಿ ಇಂದು ಹುಬ್ಬಳ್ಳಿಯಲ್ಲಿ ಮತದಾರರು ಹಾಗೂ ಕಾರ್ಯಕರ್ತರ ಪ್ರಚಾರ ಸಭೆ ನಡೆಸಿ ಮತಯಾಚನೆ ಮಾಡಲಾಯಿತು. ಶಿಕ್ಷಣ, ಉದ್ಯೋಗ ಹಾಗೂ ನಾಡಿನ ಅಭಿವೃದ್ಧಿಯ ನಿಟ್ಟಿನಲ್ಲಿ ಸ್ಪಷ್ಟತೆ, ಮತ್ತು ಬದ್ಧತೆ ಹೊಂದಿರುವ ಎನ್.ಡಿ.ಎ ಮೈತ್ರಿಕೂಟದ ಅಭ್ಯರ್ಥಿಗೆ ಪದವೀಧರ ಸಮುದಾಯ ಮತ್ತೊಮ್ಮೆ ಆಶೀರ್ವದಿಸಲಿದೆ ಎಂಬ ಪೂರ್ಣ ವಿಶ್ವಾಸ ನಮಗಿದೆ.
ಈ ಸಂದರ್ಭದಲ್ಲಿ ಸಂಸದರು, ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾದ ಶ್ರೀ ಪ್ರೊ ಎಂ ನಾಗರಾಜ್, ಶಾಸಕ ಶ್ರೀ ಮಹೇಶ್ ಟೆಂಗಿನಕಾಯಿ, ಜಿಲ್ಲಾಧ್ಯಕ್ಷ ಶ್ರೀ ತಿಪ್ಪಣ್ಣ ಮಜ್ಜಿಗೆ, ರಾಜ್ಯ ಕಾರ್ಯದರ್ಶಿ ಶ್ರೀ ಶರಣು ತಳ್ಳಿಕೇರಿ, ಎಸ್.ಸಿ.ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀ ಮಹೇಂದ್ರ ಕೌತಾಳ್, ವಿಭಾಗ ಪ್ರಭಾರಿ ಶ್ರೀ ಜಯತೀರ್ಥ ಕಟ್ಟಿ ಸೇರಿದಂತೆ ಹಲವಾರು ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ನಾಡಿನ ಸಮಸ್ತ ಜನತೆಗೆ ನವರಾತ್ರಿಯ ಎಂಟನೇ ದಿನದ ಹಬ್ಬದ ಶುಭಾಶಯಗಳು. ಪಾವಿತ್ರ್ಯತೆ, ಶಾಂತಿ ಮತ್ತು ಕರುಣೆಯ ಪ್ರತೀಕ ತಾಯಿ ಮಹಾಗೌರಿಯ ವಿಶೇಷ ಪೂಜೆಯಿಂದ ಎಲ್ಲರ ಮನದಲ್ಲಿ ಪ್ರೀತಿ, ಪರಸ್ಪರ ಗೌರವ ಮತ್ತು ಮಾನವೀಯತೆ ಬೆಳೆಯಲಿ, ತಾಯಿ ಮಹಾಗೌರಿಯು ಪ್ರತಿಯೊಬ್ಬರ ಬದುಕಿನಲ್ಲೂ ನೆಮ್ಮದಿ ಮತ್ತು ಹೊಸ ಭರವಸೆಯನ್ನು ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇನೆ.
ಶರನ್ನವರಾತ್ರಿ ಸಂಭ್ರಮ - ಧರ್ಮ, ಸಂಸ್ಕೃತಿ, ಸತ್ಕಾರ್ಯಗಳ ಬೆಳಕು, ಬೆರಗು!
ಶ್ರೀಮದ್ ರಂಭಾಪುರಿ ಜಗದ್ಗುರು ಪರಮಪೂಜ್ಯ ಶ್ರೀ ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ದಿವ್ಯ ಸಾನ್ನಿಧ್ಯದಲ್ಲಿ, ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ನಡೆಯುತ್ತಿರುವ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ಇಂದು ಭಕ್ತಿಯಿಂದ ಪಾಲ್ಗೊಳ್ಳಲಾಯಿತು, ಇದೇ ಸಂದರ್ಭದಲ್ಲಿ 2027ರ ದಿನದರ್ಶಿಕೆಯನ್ನು ಗುರುಗಳ ಸಮಕ್ಷದಲ್ಲಿ ಲೋಕಾರ್ಪಣೆಗೊಳಿಸಲಾಯಿತು. ನಾಡಿನ ಧರ್ಮ ಶ್ರದ್ಧೆ, ಆಧ್ಯಾತ್ಮಿಕ ವೈಭವ ಹಾಗೂ ಸತ್ಕಾರ್ಯಗಳ ಮೂಲಕ ವೀರಶೈವ ಧರ್ಮದ ಭವ್ಯ ಪರಂಪರೆಯನ್ನು ಜನಮಾನಸಕ್ಕೆ ತಲುಪಿಸುವ ಶರನ್ನವರಾತ್ರಿ ಮಹೋತ್ಸವದಂತಹ ಆಯೋಜನೆ - ಮಾನವೀಯ ಮೌಲ್ಯಗಳು, ಸಂಸ್ಕಾರ ಮತ್ತು ಧಾರ್ಮಿಕ ಜಾಗೃತಿಯ ಮೂಲಕ ಸುಸಂಸ್ಕೃತ ಸಮಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ ಶ್ರೀಮಠ ತನ್ನದೇ ಆದ ಕೊಡುಗೆ ನೀಡುತ್ತಿದೆ.
ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷರಾದ ಪೂಜ್ಯ ಡಾ. ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮಿಗಳು, ಮುತ್ತೂರು ಶ್ರೀ ರಾಚೋಟೇಶ್ವರ ವಿರಕ್ತಮಠದ ಶ್ರೀ ಗುರುಸಿದ್ದೇಶ್ವರ ಸ್ವಾಮಿಗಳು, ಸಂಸದರಾದ ಶ್ರೀ ಪಿ.ಸಿ.ಗದ್ದಿಗೌಡರ, ಶಾಸಕರುಗಳಾದ ಶ್ರೀ ಜಗದೀಶ ಗುಡಗಂಟಿ, ಶ್ರೀ ಶರಣು ಸಲಗರ, ವಿಧಾನ ಪರಿಷತ್ ಸದಸ್ಯ ಶ್ರೀ ಹನುಮಂತ ನಿರಾಣಿ, ಮಾಜಿ ಶಾಸಕರುಗಳಾದ ಶ್ರೀ ಎಂ.ಕೆ.ಪಟ್ಟಣಶೆಟ್ಟಿ, ಪಕ್ಷದ ಜಿಲ್ಲಾಧ್ಯಕ್ಷರಾದ ಶ್ರೀ ಶಾಂತನಗೌಡ, ರಾಜ್ಯ ಕಾರ್ಯದರ್ಶಿ ಶ್ರೀ ಶರಣು ತಳ್ಳಿಕೇರಿ, ಪ್ರಮುಖರಾದ ಶ್ರೀ ಲಿಂಗಮೂರ್ತಿ ಸೇರಿದಂತೆ ಹಲವಾರು ಗಣ್ಯರು, ಸಮಾಜದ ಧುರೀಣರು ಉಪಸ್ಥಿತರಿದ್ದರು.
ಹೆಮ್ಮೆಯ ಪ್ರಧಾನಮಂತ್ರಿ ಆದರಣೀಯ ಶ್ರೀ @narendramodi ಜೀ ರವರ 25 ವರ್ಷಗಳ ಸುದೀರ್ಘ ಸಾರ್ವಜನಿಕ ಸೇವೆಯ ಪಯಣವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ, ಅವರ ಜನ್ಮದಿನದಿಂದ 1 ತಿಂಗಳ ಕಾಲ ಪಕ್ಷ ಹಮ್ಮಿಕೊಂಡಿದ್ದ ಸೇವಾ ಸಂಕಲ್ಪ ಅಭಿಯಾನ ಯಶಸ್ವಿಯಾಗಿ ಸಮಾಪನಗೊಂಡಿದೆ.
ಸಮಾಜದ ವಿವಿಧ ವರ್ಗಗಳೊಂದಿಗೆ ಸಂಪರ್ಕ ಸಾಧಿಸಿ, ಸೇವಾ ಚಟುವಟಿಕೆಗಳ ಮೂಲಕ ಜನರೊಂದಿಗೆ ನಮ್ಮ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಅವಕಾಶವನ್ನು ಈ ಅಭಿಯಾನ ನಮಗೆ ನೀಡಿದೆ.
ಸೇವಾ ಕಾರ್ಯಗಳೇ ಸಂಘಟನೆಯ ಶಕ್ತಿ, ಜನರೊಂದಿಗಿನ ಸಂಪರ್ಕವೇ ನಮ್ಮ ಬಲ ಎಂಬುದನ್ನು ಈ ಅಭಿಯಾನ ಮತ್ತೊಮ್ಮೆ ಸಾಬೀತುಪಡಿಸಿದೆ.
ಅಭಿಯಾನದಲ್ಲಿ ನಮ್ಮ ಎಲ್ಲ ಕಾರ್ಯಕರ್ತರು, ಪದಾಧಿಕಾರಿಗಳು, ಮುಖಂಡರು, ಹಿರಿಯ ನಾಯಕರು ಅತ್ಯಂತ ಉತ್ಸಾಹ, ಹುಮ್ಮಸ್ಸಿನಿಂದ ಪಾಲ್ಗೊಂಡಿದ್ದರ ಜೊತೆಗೆ ಜನರ ಸಹಕಾರ ಈ ಅಭಿಯಾನಕ್ಕೆ ವಿಶೇಷ ಅರ್ಥ ನೀಡಿದೆ.
ಸೇವಾ ಸಂಕಲ್ಪ ಅಭಿಯಾನ ನಮಗೆ ಜನರ ನಡುವೆಯೇ ಇದ್ದು, ಜನರ ಸೇವೆ ಮಾಡುವ ಹೊಸ ಆಯಾಮವನ್ನು ನೀಡಿದೆ. ಸೇವೆಯೇ ನಮ್ಮ ಸಂಕಲ್ಪ, ಜನಸೇವೆಯೇ ನಮ್ಮ ಬದ್ಧತೆ. ಈ ಸಂಕಲ್ಪದೊಂದಿಗೆ ಜನರ ನಡುವೆ, ಜನರಿಗಾಗಿ ನಮ್ಮ ಸೇವಾ ಕಾರ್ಯಗಳು ನಿರಂತರವಾಗಿ ಮುಂದುವರಿಯಲಿವೆ.
#SevaSankalpAbhiyan #ViksitBharat
ಶರಣರ ಬರವೆಮಗೆ ಪ್ರಾಣ ಜೀವಾಳವಯ್ಯ
ಬೃಹನ್ಮಠದ ಪರಮಪೂಜ್ಯ ಡಾ ಬಸವಕುಮಾರ ಮಹಾಸ್ವಾಮಿಗಳ ದಿವ್ಯ ನೇತೃತ್ವದಲ್ಲಿ ಇಂದು ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ನಡೆದ ಶರಣಸಂಸ್ಕೃತಿ ಉತ್ಸವ-2026, 'ವಚನ ಝೇಂಕಾರ' ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. 12ನೇ ಶತಮಾನದಲ್ಲಿಯೇ ನಮ್ಮ ಬಸವಾದಿ ಶರಣರು ಉಪದೇಶಿಸಿದ ಸಾಮಾಜಿಕ ಸಮಾನತೆ, ಕಾಯಕ ಮತ್ತು ದಾಸೋಹ ತತ್ವಗಳು ಸಮಸ್ತ ಮಾನವಕುಲಕ್ಕೆ ನಿರಂತರವಾಗಿ ದಾರಿತೋರುವ ಮಹೋನ್ನತ ತತ್ವಗಳು. ಇಂತಹ ವೈಚಾರಿಕ ಪರಂಪರೆಯನ್ನು, ನಮ್ಮ ವಚನ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ನಿಟ್ಟಿನಲ್ಲಿ ನಮ್ಮ ದಾಯಿತ್ವಗಳನ್ನು ನಾವೆಲ್ಲರೂ ಸಮರ್ಪಕವಾಗಿ ನಿರ್ವಹಿಸಬೇಕಾಗಿದೆ.
ಕಾರ್ಯಕ್ರಮದಲ್ಲಿ ಶ್ರೀ ತರಳಬಾಳು ಶಾಖಾಮಠದ ಪರಮಪೂಜ್ಯ ಶ್ರೀ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಪಂಚಮಸಾಲಿ ಗುರುಪೀಠದ ಪರಮಪೂಜ್ಯ ಶ್ರೀ ವಚನಾನಂದ ಮಹಾಸ್ವಾಮಿಗಳು, ಮಾದಾರ ಚನ್ನಯ್ಯ ಗುರುಪೀಠದ ಪರಮಪೂಜ್ಯ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮಿಗಳು, ಸೇವಾಲಾಲ್ ಬಂಜಾರ ಗುರುಪೀಠದ ಬಸವ ಸರದಾರ ಸೇವಾಲಾಲ್ ಮಹಾಸ್ವಾಮಿಗಳು, ಪರಮಪೂಜ್ಯ ಶ್ರೀ ಡಾ ಬಸವಕುಮಾರ ಸ್ವಾಮಿಗಳು, ಪರಮಪೂಜ್ಯ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿಗಳು ಸೇರಿದಂತೆ ನಾಡಿನ ಅನೇಕ ಶ್ರೀಚರಣರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಶಿವಯೋಗಿ ಕಳಸದ, ಮಾಜಿ ನ್ಯಾಯಮೂರ್ತಿಗಳಾದ ಶ್ರೀ ಶಿವರಾಜ್ ಪಾಟೀಲ್, ಮಾಜಿ ಶಾಸಕರಾದ ಶ್ರೀ ತಿಪ್ಪಾರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಕೆ.ಎಸ್. ನವೀನ್, ಮುಖಂಡರಾದ ಶ್ರೀ ಲಿಂಗಮೂರ್ತಿ ಸೇರಿದಂತೆ ಹಲವಾರು ಗಣ್ಯರು, ಪ್ರಮುಖರು ಉಪಸ್ಥಿತರಿದ್ದರು.
ಪದವೀಧರರ ವಿಶ್ವಾಸ, ಪ್ರಗತಿಯ ಸಂಕಲ್ಪ
ಮುಂಬರುವ ವಿಧಾನ ಪರಿಷತ್ತಿನ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ನಿಮಿತ್ತ ಇಂದು ಚಿತ್ರದುರ್ಗದ ವಾಲ್ಮೀಕಿ ಭವನದಲ್ಲಿ ಮತದಾರರ ಸಭೆ ನಡೆಸಲಾಯಿತು. ನಾಡಿನ ಪ್ರಗತಿಶೀಲ ಭವಿಷ್ಯವನ್ನು ರೂಪಿಸುವಲ್ಲಿ ಶೈಕ್ಷಣಿಕ ಕ್ಷೇತ್ರಗಳ ಮತ್ತು ಪದವೀಧರರ ಪಾತ್ರ ಅತ್ಯಂತ ನಿರ್ಣಾಯಕವಾಗಿದ್ದು, ಅವರ ಧ್ವನಿಯಾಗಿ ಸದನದಲ್ಲಿ ಕೆಲಸ ಮಾಡುವ ನಿಟ್ಟಿನಲ್ಲಿ ಇಲ್ಲಿನ ನಮ್ಮ ಎನ್.ಡಿ.ಎ ಅಭ್ಯರ್ಥಿ ಶ್ರೀ ಕೆ.ಎಂ.ಸುರೇಶ್ ರವರನ್ನು ಬಹುಮತದಿಂದ ಗೆಲ್ಲಿಸುವುದು ಅತ್ಯಗತ್ಯ. ಪರಿವರ್ತನೆಯ ಸಂಕಲ್ಪದೊಂದಿಗೆ, ಪದವೀಧರರ ಸಬಲೀಕರಣ ಹಾಗೂ ಯುವಜನರ ಉದ್ಯೋಗದ ಹಕ್ಕುಗಳಿಗಾಗಿ ನಮ್ಮ ಹೋರಾಟ ಮತ್ತು ಬೆಂಬಲ ನಿರಂತರವಾಗಿದ್ದು, ಸಂಘಟನೆಯ ಪೂರ್ಣ ಸಾಮರ್ಥ್ಯದೊಂದಿಗೆ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಯ ಗೆಲುವಿಗಾಗಿ ದೃಢ ಸಂಕಲ್ಪ ತಾಳಲಾಯಿತು. ಜನವಿರೋಧಿ, ರೈತವಿರೋಧಿ, ಅಭಿವೃದ್ಧಿ ವಿಮುಖ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಮಾನಸದಲ್ಲಿರುವ ಆಕ್ರೋಶ ಈ ಚುನಾವಣೆಯಲ್ಲಿ ವ್ಯಕ್ತವಾಗಲಿದೆ.
ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಹಾಗು ಸಂಸದರಾದ ಶ್ರೀ ಗೋವಿಂದ ಕಾರಜೋಳ, ಜಿಲ್ಲಾಧ್ಯಕ್ಷರಾದ ಶ್ರೀ ಕೆ ಟಿ ಕುಮಾರಸ್ವಾಮಿ, ಮಾಜಿ ಶಾಸಕರಾದ ಶ್ರೀ ಜಿ ಹೆಚ್ ತಿಪ್ಪಾರೆಡ್ಡಿ, ಶಾಸಕರಾದ ಶ್ರೀ ಎಂ ಚಂದ್ರಪ್ಪ, ಶ್ರೀ ಕೆ ಎಸ್ ನವೀನ್, ಮಾಜಿ ಶಾಸಕರುಗಳಾದ ಶ್ರೀ ತಿಪ್ಪೇಸ್ವಾಮಿ, ಶ್ರೀ ಎಸ್ ಕೆ ಬಸವರಾಜು ಶ್ರೀ ವೈ ಎ ನಾರಾಯಣಸ್ವಾಮಿ, ಸೇರಿದಂತೆ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದರು.
Deeply concerned to learn about the hospitalisation of our revered senior leader, Bharat Ratna Shri L.K. Advani Ji.
My heartfelt prayers are with Advani Ji and his family during this time. I sincerely pray for his speedy recovery and hope to see him regain his strength and return home in good health soon.
ಪವಿತ್ರ ಕ್ಷೇತ್ರ ತಲಕಾವೇರಿಯಲ್ಲಿ ಇಂದು ಸಂಜೆ 7.50ಕ್ಕೆ ಮೇಷ ಲಗ್ನದಲ್ಲಿ ಕಾವೇರಿ ತುಲಾ ಸಂಕ್ರಮಣದ ಪವಿತ್ರ ತೀರ್ಥೋದ್ಭವ ನಡೆಯಲಿದ್ದು, ಈ ಶುಭ ಸಂದರ್ಭ ನಮ್ಮ ನಾಡಿನ ಜೀವನದಿಯ ಮೇಲಿನ ನಮ್ಮ ಭಕ್ತಿ, ಆಧ್ಯಾತ್ಮಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈಭವದ ಸಂಕೇತವಾಗಿದೆ. ಜೀವನದಿ ಕಾವೇರಿಯ ತೀರ್ಥೋದ್ಭವ ರಾಜ್ಯದ ಜನತೆಗೆ ಸುಖ, ಶಾಂತಿ, ಸಮೃದ್ಧಿ ಹಾಗೂ ಉತ್ತಮ ಮಳೆ-ಬೆಳೆಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.