ದಿನಾಂಕ - 18.06.2026 ರಂದು ಬೀದರ ನಗರದ ರೋಹಿಲಿ ಓಣಿಯ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಮಕ್ಕಳಿಗೆ ಆಹಾರವಾಗಿ ಕೊಡುತ್ತಿರುವ ದಿನಸಿ ಧಾನ್ಯಗಳ ಗುಣಮಟ್ಟ ಮತ್ತು ಇತರೆ ಮೂಲಭೂತ ಸೌಕರ್ಯಗಳ ಕುರಿತು ಪರಿಶೀಲನೆ ಮಾಡಲಾಯಿತು.
@eshwar_khandre@SagarKhandre12
ದಿನಾಂಕ - 15.06.2026 ರಂದು ಜಿಲ್ಲಾ ಪಂಚಾಯತ ಬೀದರ ಕಚೇರಿ ಸಭಾಂಗಣದಲ್ಲಿ, ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರ ಅಧ್ಯಕ್ಷತೆಯಲ್ಲಿ ಜರುಗಿದ, ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಲಾಯಿತು.@SagarKhandre12@eshwar_khandre
ದಿನಾಂಕ - 15.06.2026 ರಂದು ಬೀದರ ಜಿಲ್ಲಾ ಪಂಚಾಯತ ಕಚೇರಿ ಸಭಾಂಗಣದಲ್ಲಿ, ಮಾನ್ಯ ಸರ್ಕಾರದ ಕಾರ್ಯದರ್ಶಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ಜರುಗಿದ, ಪ್ರಗತಿ ಪರಿಶೀಲನಾ ಸಭೆಯ ವಿಡಿಯೋ ಸಂವಾದದಲ್ಲಿ ಭಾಗವಹಿಸಲಾಯಿತು.
@SagarKhandre12@eshwar_khandre
ದಿ - 08.06.26 ರಂದು ಜನವಾಡ ಗ್ರಾಮದ ರೈತ ಸಂಪರ್ಕ ಕೇಂದ್ರ ಮತ್ತು ಕೌಠಾ ( ಬಿ ) ಗ್ರಾಮದ ಬೀಜ ವಿತರಣಾ ಕೇಂದ್ರಕ್ಕೆ ಭೇಟಿ ನೀಡಿ, ಕೃಷಿ ಪರಿಕರಗಳಾದ ರಸಗೊಬ್ಬರಗಳ ಸಂಗ್ರಹಣೆ ಹಾಗೂ ವಿತರಣೆಯ ವಹಿ ಪರಿಶೀಲನೆ ಮಾಡಲಾಯಿತು. & ರೈತರಿಗೆ ತೊಂದರೆಯಾಗದಂತೆ ಕ್ರಮವಹಿಸಲು ಸಂಬಂಧಪಟ್ಟವರಿಗೆ ಸೂಚನೆ ನೀಡಲಾಯಿತು.
@SagarKhandre12@eshwar_khandre
ದಿನಾಂಕ 08.06.2026 ರಂದು ಬೀದರ ನಗರದ ಗಾಂಧಿ ಗಂಜ ನಲ್ಲಿರುವ ರಸಗೊಬ್ಬರ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ, ರಸ ಗೊಬ್ಬರಗಳ ಲಭ್ಯತೆ ಪರಿಶೀಲಿಸಿ, ಮಾರಾಟಗಾರರು ವಿನಃ ಕಾರಣ ಗರಿಷ್ಠ ಬೆಲೆಗೆ ರಸಗೊಬ್ಬರ ಮಾರಾಟ ಮಾಡಬಾರದು ಮತ್ತು ರಸೀದಿ ಕಡ್ಡಾಯವಾಗಿ ನೀಡಬೇಕೆಂದು ಸೂಚನೆ ನೀಡಲಾಯಿತು.@eshwar_khandre@SagarKhandre12
ದಿನಾಂಕ - 08.06.2026 ರಂದು ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರ ಅಧ್ಯಕ್ಷತೆಯಲ್ಲಿ ವಿಡಿಯೋ ಸಂವಾದದ ಮೂಲಕ ಜರುಗಿದ, ಪ್ರಗತಿ ಪರಿಶೀಲನಾ ಸಭೆಗೆ ಭಾಗವಹಿಸಲಾಯಿತು.@eshwar_khandre@SagarKhandre12
ದಿನಾಂಕ - 27.05.2026 ರಂದು ಔರಾದ ( ಬಾ ) ತಾಲೂಕಿನ ಹೆಡಗಾಪೂರ ಗ್ರಾಮದ ಜಾನುವಾರು ತಳಿ ಸಂವರ್ಧನ ಮತ್ತು ರೈತರಿಗೆ ತರಬೇತಿ ನೀಡುವ ಕೇಂದ್ರ ಹಾಗೂ ಮಾಂಜ್ರಾ ನದಿಗೆ ಭೇಟಿ ನೀಡಿ ವೀಕ್ಷಣೆ ಮಾಡಿ, ವಿವಿಧ ಮೂಲಭೂತ ಸೌಕರ್ಯಗಳ ಕುರಿತು ಪರಿಶೀಲನೆ ಮಾಡಲಾಯಿತು.@SagarKhandre12@eshwar_khandre
ದಿ - 27.05.26 ರಂದು ಔರಾದ ( ಬಾ ) ತಾಲೂಕು ಪಂಚಾಯತ ಕಚೇರಿ ಸಭಾಂಗಣದಲ್ಲಿ, ಗ್ರಾಮಿಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮವಹಿಸಲು ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸಭೆ ಕೈಗೊಳ್ಳಲಾಯಿತು. ಹಾಗೂ ಜಲ ಸಂರಕ್ಷಣೆ ಕಾಮಗಾರಿಗಳು ಅನುಷ್ಠಾನ ಮಾಡಲು ನಿರ್ದೇಶನ ನೀಡಲಾಯಿತು.@SagarKhandre12
ದಿನಾಂಕ - 18.05.2026 ರಂದು ಚಿಟ್ಟ ಗುಪ್ಪಾ ತಾಲೂಕಿನ ಗುಡಿ ತಾಂಡಾ ಮತ್ತು ಬಸಿಲಾಪುರ ಗ್ರಾಮಗಳಿಗೆ ಭೇಟಿ ನೀಡಿ, ಗ್ರಾಮಸ್ಥರೊಂದಿಗೆ ಕುಡಿಯುವ ನೀರಿನ ಪೂರೈಕೆಯ ಕುರಿತು ಚರ್ಚಿಸಿ, ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.@SagarKhandre12@eshwar_khandre
ದಿನಾಂಕ - 18.05.2026 ರಂದು ಚಿಟ್ಟಗುಪ್ಪಾ ತಾಲೂಕು ಪಂಚಾಯತ ಕಚೇರಿ ಸಭಾಂಗಣದಲ್ಲಿ, ಬಿಸಿಲಿನ ತಾಪಕ್ಕೆ ಉದ್ದವಾಗುತ್ತಿರುವ ಕುಡಿಯುವ ನೀರಿನ ಸಮಸ್ಯೆ ಹಾಗೂ ಇತರೆ ವಿವಿಧ ಯೋಜನೆಗಳ ಕುರಿತು ಎಲ್ಲಾ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಪ್ರಗತಿ ಪರಿಶೀಲನಾ ಸಭೆ ಕೈಗೊಳ್ಳಲಾಯಿತು.
@SagarKhandre12@eshwar_khandre
ದಿನಾಂಕ - 16.05.2026 ರಂದು ಭಾಲ್ಕಿ ತಾಲೂಕಿನ ಅಹಮದಬಾದ, ಬೀರಿಕೆ , ಕೆರೂರು, ಅಳಂದಿ, ದೋಣಗಾಪುರ ಗ್ರಾಮಗಳಿಗೆ ಭೇಟಿ ನೀಡಿ, ಗ್ರಾಮಸ್ಥರೊಂದಿಗೆ ಕುಡಿಯುವ ನೀರಿನ ಪೂರೈಕೆಯ ಕುರಿತು ಚರ್ಚಿಸಿ, ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.@eshwar_khandre@SagarKhandre12
ದಿನಾಂಕ - 16.05.2026 ರಂದು ಭಾಲ್ಕಿ ತಾಲೂಕು ಪಂಚಾಯತ ಕಚೇರಿ ಸಭಾಂಗಣದಲ್ಲಿ, ಕುಡಿಯುವ ನೀರು ನಿರ್ವಹಣೆ, ಪಂಚಾಯತ ರಾಜ ವಿಷಯಗಳು ಹಾಗೂ ಮನರೇಗಾ ಯೋಜನೆಯ ಕುರಿತು ಎಲ್ಲಾ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಪ್ರಗತಿ ಪರಿಶೀಲನಾ ಸಭೆ ಕೈಗೊಳ್ಳಲಾಯಿತು.
@eshwar_khandre@SagarKhandre12
ದಿನಾಂಕ - 15.05.2026 ರಂದು ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜರುಗಿದ, ಬೀದರ ನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ಅಲ್ಪಸಂಖ್ಯಾತರ ಮಹಿಳಾ ಪದವಿ ಪೂರ್ವ ಕಾಲೇಜಿನ ಸುಂಕು ಸ್ಥಾಪನೆಯ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.@SagarKhandre12@eshwar_khandre
ದಿನಾಂಕ - 14.05.2026 ರಂದು ಬೀದರ ಜಿಲ್ಲಾ ಪಂಚಾಯತ ಕಚೇರಿ ಸಭಾಂಗಣದಲ್ಲಿ, ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜರುಗಿದ, ಕುಡಿಯುವ ನೀರಿನ ಸಮಸ್ಯೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿ, ಕೆಕೆ ಆರ್ ಡಿಬಿ ಅನುದಾನ ಬಳಕೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಲಾಯಿತು.
@SagarKhandre12@eshwar_khandre
ದಿನಾಂಕ - 11.05.2026 ರಂದು ಬೀದರ ಜಿಲ್ಲಾ ಪಂಚಾಯತ ಕಚೇರಿ ಸಭಾಂಗಣದಲ್ಲಿ, 2015 - 16 ನೇ ಸಾಲಿನ ಗ್ರಾಮ ವಿಕಾಸ ಹಾಗೂ 2017 - 18 ನೇ ಸಾಲಿನ ಮುಖ್ಯ ಮಂತ್ರಿ ಗ್ರಾಮ ವಿಕಾಸ ಅಭಿವೃದ್ಧಿ ಯೋಜನೆಗಳ ಕುರಿತು ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಪ್ರಗತಿ ಪರಿಶೀಲನಾ ಸಭೆ ಕೈಗೊಳ್ಳಲಾಯಿತು.@SagarKhandre12@eshwar_khandre
ದಿನಾಂಕ - 30.04.2026 ರಂದು ಜಿಲ್ಲಾ ಪಂಚಾಯತ ಕಚೇರಿ ಸಭಾಂಗಣದಲ್ಲಿ, ಕೆ ಕೆ ಆರ್ ಡಿ ಬಿ ಮಂಡಳಿ ಯೋಜನೆಯ ಕುರಿತು, ವಿವಿಧ ಅನುಷ್ಠಾನ ಅಧಿಕಾರಿಗಳಿಗೆ ಪ್ರಗತಿ ಪರಿಶೀಲನಾ ಸಭೆ ಕೈಗೊಳ್ಳಲಾಯಿತು. @eshwar_khandre@SagarKhandre12
ದಿನಾಂಕ - 29.04.2026 ರಂದು ಬೀದರ ಜಿಲ್ಲಾ ಪಂಚಾಯತ ಕಚೇರಿ ಸಭಾಂಗಣದಲ್ಲಿ, KSWAN ವಿಡಿಯೋ ಸಂವಾದದ ಮೂಲಕ ಎಲ್ಲಾ ತಾಲೂಕಿನ EO, AD, PDO, TC, TMIS, TA, ರವರಿಗೆ ನರೇಗಾ ಯೋಜನೆಯ ಮಾನವ ದಿನಗಳ ಸೃಜನೆಯ ಕುರಿತು ಪ್ರಗತಿ ಪರಿಶೀಲನಾ ಸಭೆ ಕೈಗೊಳ್ಳಲಾಯಿತು.
@eshwar_khandre@PriyankKharge@SagarKhandre12
ದಿ - 28.04.26 ರಂದು ಬೀದರ ತಾಲೂಕಿನ ಮಾಳೆಗಾಂವ ಗ್ರಾಮದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಸಹಯೋಗದಲ್ಲಿ ಮಾನ್ಯ ಶಾಸಕರು & ಸಚಿವರ ಅಧ್ಯಕ್ಷತೆಯಲ್ಲಿ ಜರುಗಿದ ಜನಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ವಿಲೇವಾರಿ ಮಾಡುವಂತೆ ನಿರ್ದೇಶನ ನೀಡಲಾಯಿತು.@eshwar_khandre
ದಿನಾಂಕ -27.04.2026 ರಂದು ಬಸವಕಲ್ಯಾಣ ತಾಲೂಕಿನ ಅಲಗೂಡ ಗ್ರಾಮ ಮತ್ತು ಚಿಟ್ಟಾ ತಾಂಡಕ್ಕೆ ಭೇಟಿ ನೀಡಿ, ಕುಡಿಯುವ ನೀರಿನ ಕುರಿತು ಚರ್ಚಿಸಿ ಪರಿಶೀಲನೆ ಮಾಡಲಾಯಿತು. ಹಾಗೂ ನೀರಿನ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಭಂದಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
@eshwar_khandre@SagarKhandre12
ದಿನಾಂಕ - 22.04.2026 ರಂದು ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ, ಭಾರತದ ಘನತೆವೆತ್ತ ಮಾನ್ಯ ಉಪ ರಾಷ್ಟ್ರಪತಿಗಳನ್ನು ಸ್ವಾಗತಿಸಿ, ಪೂಜ್ಯ ಡಾ. ಚನ್ನ ಬಸವ ಪಟ್ಟದೇವರ ಪುಣ್ಯಸ್ಮರಣೆ ಮತ್ತು ಡಾ. ಬಸವಲಿಂಗ ಪಟ್ಟದೇವರ 75ನೇ ಜನ್ಮದಿನದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. @eshwar_khandre@SagarKhandre12