#ಅನುವಾದ / ಒಡೆದ ಮಡಕೆ
- ಎಚ್ ವೈ ಶಾರದಾಪ್ರಸಾದ್
ಮೂಲ: ಆರ್ ಕೆ ನಾರಾಯಣ್
ಗೋಡೆಯಲ್ಲಿದ್ದ ಬಿರುಕಿನ ಮೂಲಕ ಸೂರ್ಯನ ಕಿರಣವೊಂದು ಬಂದು ಮುರುಗನ ಕಣ್ಣನ್ನು ಚುಚ್ಚಿತು. ಅವನು ಕಣ್ಣು ತೆರೆದು ಬಹಳಕಾಲ ಹಾಗೆಯೇ ಬಿಟ್ಟು ಕೊಂಡಿದ್ದ. ಮೈಯೆಲ್ಲ ಹಗುರವಾಗಿ ತೋರುತ್ತಿತ್ತು....
https://t.co/Mm0N302EUq
#ಬರಹ / ದಿ ಡೈರಿ ಆಫ್ ಎ ಎಂಗ್ ಗರ್ಲ್ – ಆನ್ ಫ್ರಾಂಕ್ – ಶುಕ್ರವಾರ, ಅಕ್ಟೋಬರ್ ೧೬, ೧೯೪೨
- ನಾಗರೇಖಾ ಗಾಂವಕರ
ಪ್ರೀತಿಯ ಕಿಟಿ,
ನಾನು ಬಹಳ ಬ್ಯೂಸಿ. ಈಗಷ್ಟೇ “La Belle Nivernaise”ದಿಂದ ಒಂದು ಅಧ್ಯಾಯವನ್ನು ಭಾಷಾಂತರಿಸಿದೆ. ಕೆಲವು ಹೊಸ ಪದಗಳ ಅರ್ಥ ಟಿಪ್ಪಣಿ ಮಾಡಿದೆ......
https://t.co/D7PE2x54Ia
#ಕಿರುಕಥೆ / ಹಾಲು : ನೀರು
- ಭಟ್ಟ ವಿ ಜಿ
ನಾಲ್ಕು ಮನೆಗಳ ಸಮೀಪದಲ್ಲಿ ಒಬ್ಬ ಗವಳಿಯ ಗುಡಿಸಲು. ಅಂಗಳದಲ್ಲಿ ಅವನು ಹಾಲು ಹಿಂಡುತ್ತಿದ್ದ. ಒಳಗೆ ಅವನ ಹೆಂಡತಿ ಬೆಂಕಿ ಮಾಡುತಿದ್ದಳು. ಹೇಗೋ ಆಗಿ ಆಳೆತ್ತರದ ಆ ಗುಡಿಸಲಿಗೆ ಬೆಂಕಿ ಬಿತ್ತು, ಗಂಡ ಹೆಂಡರಿಬ್ಬರೂ ಬೊಬ್ಬಿಟ್ಟರು....
https://t.co/UBvL0PA5CW
#ಪದ್ಯ / ಗಂಟೆ ಹತ್ತಾಯಿತು
- ಸಿದ್ದಣ್ಣ ಮಸಳಿ
೧
ಗಡಿಯಾರದಲಿ ಗಂಟೆ ಹತ್ತಾಯಿತು!
ತಲೆ ತುಂಬಿ ನಿಂತಿರುವ ಚಿಂತೆ ಬೆಂತರನೊಡನೆ
ಕೈಯ ಕುಲುಕಿಸಿ ಕಾಲ ಗೆಲುವಾಯಿತು;
ಕುಳಿತಿರುವ ಕೋಣೆಯಲಿ ಕಂದೀಲ ದೀಪವದು
ಕುರುಡು ಕುರುಡಾಗೆನಿತೊ ಉರಿಯುತ್ತಿದೆ.
ಎಣ್ಣೆ ತೀರಿರಬಹುದೊ ಬತ್ತಿ ಕಿರಿದಾಗಿಹುದೊ...
https://t.co/NQWnzYzSCT
#ಪದ್ಯ / ಜೋ-ಅರಿವು
- ಅಂಬಿಕಾತನಯದತ್ತ (ದ ರಾ ಬೇಂದ್ರೆ)
ಮಾಟ ಮಾಟ, ಇದು ಯಾವ ಆಟ
ಈ ಬಟಾ ಬಯಲಿನಲ್ಲಿ.
ಅಚ್ಚ ಅರಿವು ಬರಿ ಬಚ್ಚ ಅರಿವು
ಹೊಸ ಹೊಚ್ಚ ಅರಿವಿನಲ್ಲಿ.
ಅರೆ ಅರಿವಿನಲ್ಲಿ ಮರೆ ಅರಿವಿನಲ್ಲಿ
ಹೊರ ಅರಿವಿನಲ್ಲಿ ನೀನು
ತೆರೆ ಅರಿವಿನಲ್ಲಿ ಬರೆ ಅರಿವಿನಲ್ಲಿ
ಕೊರೆ ಅರಿವಿನಲ್ಲಿ ನೀನು....
https://t.co/sHd0h4ftaI
#ಕಿರುಕಥೆ / ಧ್ವನಿಯಲ್ಲಿ ಗುರು
- ಪರಿಮಳ ರಾವ್ ಜಿ ಆರ್
ಊರು ಕೇರಿ, ಮನೆ ಮಠ ತೊರೆದು ಹೋದ ಮಗನಿಗಾಗಿ ನೊಂದ ತಾಯಿ ಬಹಳಷ್ಟು ಕಾಯುತ್ತಿದ್ದಳು. ಬಿಟ್ಟು ಹೋದ ಒಬ್ಬನೇ ಮಗನ ಹಂಬಲ ಅವಳನ್ನು ಬಹಳಷ್ಟು ಕಾಡುತಿತ್ತು....
https://t.co/ZZIOXe1hZD
#ಅನುವಾದ / ಕಳೆದ ಹಿಂದಿನ ದಿನಗಳು
- ಬಿ ಎಂ ಶ್ರೀಕಂಠಯ್ಯ
ಹಳೆಯ ಕೆಳೆಯರ ಮರೆಯಬಹುದೇ
ಹಳೆಯ ಕಾಲದ ಜನಗಳ?
ಹಳೆಯ ಕೆಳೆಯರ ಮರೆಯಬಹುದೇ
ಕಳೆದ ಹಿಂದಿನ ದಿನಗಳ?
ಕಳೆದ ಹಿಂದಿನ ದಿನಗಳನ್ನು ನೆನೆ
ದಿಂದು ಕಳೆಯುವ ದಿನಗಳ;
ಕಲೆವ, ಹರಟುವ, ನಗುವ, ನೆನೆಯುವ
ಕಳೆದ ಹಿಂದಿನ ದಿನಗಳ....
BURNS : Auld Lang Syne
https://t.co/6ONR64FlGn
#ಪಂಚತಂತ್ರ / ವೈರವು ಬಂದ ಕಥೆ
- ದೇವುಡು ನರಸಿಂಹಶಾಸ್ತ್ರಿ
ಹಿಂದೆ, ಹಂಸ, ಗಿಣಿ, ಕೊಕ್ಕರೆ, ಕೋಗಿಲೆ, ಗೂಗೆ, ನವಿಲು, ಪಾರಿವಾಳ, ಮೊದಲಾದ ಹಕ್ಕಿಗಳೆಲ್ಲವೂ ಒಂದು ಕಡೆ ಸಭೆ ಸೇರಿ ಯೋಚಿಸಿದುವು:- “ನಮಗೆ ಗರುಡನು ಅರಸನಾಗಿರುವನು. ಆತನೋ ವಿಷ್ಣುವಿಗೆ ಪರಮ ಭಕ್ತನು...
https://t.co/ApeFqTel5E
#ಪದ್ಯ / ಏಕೆ ಹೆದರಿಕೆ?
- ನರೇಗಲ್ಲ ಪ್ರಹ್ಲಾದರಾಯ
೧
ಇಂದು ಬಾಗಿಲವರೆಗು ಇದಿಗೋ
ಬಂದ ಆ ದೊರೆ ಒಳಗೆ ಬರಲಿ-
ಲ್ಲೆಂದು ಹೃದಯವೆ ನಿನ್ನ ಮನದೊಳು
ಹೆದರಿ ಬೆದರುವೆಯಾ?
೨
ಒಳಗೆ ಬಂದರೆ ಈಗ ತುಂಬುತ
ತುಳುಕುತಿಹ ಕಣ್ಣೀರಿನಿಂದಲಿ
ತೊಳೆಯುವನು ಇವ ತನ್ನ ಪಾದವ-
ನೆಂದು ತೆರಳಿದನೋ!...
https://t.co/RzWlh4AaYN
#ಬರಹ / ತಂಗಾಳಿ
- ತೆಂಗಾಳಿ
ಹಳೆಯ ನಾಣ್ಣುಡಿಗಳೆಷ್ಟೋ ಈಗಿನ ಕಾಲದಲ್ಲಿ ಅನಾವಶ್ಯಕವಾಗಿವೆ. ಈಗಿನ ಕಾಲಕ್ಕನುಸಾರವಾಗಿ ಅವುಗಳ ತಿದ್ದುಪಡೆಯ ಅವಶ್ಯವಿದೆ. ಉದಾ ಹರಣಾರ್ಥ, ಹಳ್ಳಿಗಳಲ್ಲಿಯ ವಯೋವೃದ್ದರು ಈಗಲೂ...
https://t.co/YKUF6LGvu9