Our Food - Our Health
The Chilume Ravikumar Foundation is empowering communities with awareness and action.
From Sanjivini Laddu distribution to guidance on balanced diet, exercise, rest, and stress management—health is holistic.
Read more: https://t.co/xtXeOoyy4h
#ourfoodourhealth #communityhealth #wellness #healthyliving
ಬಸವ ಜಯಂತಿ ಪ್ರಯುಕ್ತ ಆಯೋಜಿಸಿದ “ಬಸವನ ಪರವು” ಕಾರ್ಯಕ್ರಮವು ಭಕ್ತಿಭಾವದಿಂದ ಅತ್ಯಂತ ಯಶಸ್ವಿಯಾಗಿ ನೆರವೇರಿದೆ. “ಭವತಿ ಭಿಕ್ಷಾಂದೇಹಿ” ಎಂದು ಭಕ್ತರ ಮನೆ ಮನೆಗೆ ತೆರಳಿ ದವಸ-ಧಾನ್ಯಗಳನ್ನು ಸಂಗ್ರಹಿಸಲಾಯಿತು. ಸಂಗ್ರಹಿಸಿದ ಭಿಕ್ಷೆಯಿಂದ 6000ಕ್ಕೂ ಹೆಚ್ಚು ಭಕ್ತರಿಗೆ ಅನ್ನಸಂತರ್ಪಣೆ ಯಶಸ್ವಿಯಾಗಿ ನೆರವೇರಿಸಲಾಗಿದೆ.
ಈ ಮಹತ್ವದ ಕಾರ್ಯದಲ್ಲಿ ಭಾಗವಹಿಸಿ ತಮ್ಮ ಅಮೂಲ್ಯ ಸಮಯ, ಸಹಕಾರ ಮತ್ತು ಆಶೀರ್ವಾದ ನೀಡಿದ ಪ್ರತಿಯೊಬ್ಬರಿಗೂ ನಮ್ಮ ಅನಂತ ಕೃತಜ್ಞತೆಗಳು. ನಿಮ್ಮ ಬೆಂಬಲವೇ ನಮಗೆ ಇನ್ನಷ್ಟು ಉತ್ಸಾಹ ಮತ್ತು ಶಕ್ತಿಯನ್ನು ನೀಡಿದೆ. ಗ್ರಾಮೀಣ ಸಂಸ್ಕೃತಿಯನ್ನು ಬೆಂಗಳೂರಿನಲ್ಲಿ ಪುನಃ ಸೃಷ್ಟಿಸುವ ನಮ್ಮ ಪ್ರಯತ್ನಕ್ಕೆ ನೀವು ನೀಡಿದ ಬೆಂಬಲ ನಮಗೆ ಅಪಾರ ಸಂತೋಷ ತಂದಿದೆ.
ಈ ಕಾರ್ಯಕ್ರಮದ ಮೂಲಕ ಸಂಗ್ರಹಿಸಿದ ಮೊತ್ತವನ್ನು ನಮ್ಮ ದೇಶದ ಸೈನಿಕರ ಕಲ್ಯಾಣ ನಿಧಿಗೆ ಸಮರ್ಪಿಸಲಾಗುತ್ತಿದೆ ಎಂಬುದನ್ನು ಹೆಮ್ಮೆಯಿಂದ ತಿಳಿಸುತ್ತೇವೆ.
ಈ ಕಾರ್ಯಕ್ರಮಕ್ಕೆ ಭಿಕ್ಷೆ ನೀಡಿ, ಸಹಕಾರ ನೀಡಿ, ಎಲ್ಲ ರೀತಿಯಲ್ಲೂ ಬೆಂಬಲಿಸಿದ ಪ್ರತಿಯೊಬ್ಬರಿಗೂ ಚಿಲುಮೆ ರವಿಕುಮಾರ್ ಫೌಂಡೇಶನ್ ವತಿಯಿಂದ ಹೃದಯಪೂರ್ವಕ ಧನ್ಯವಾದಗಳು. ನಿಮ್ಮ ಸಹಕಾರದಿಂದ ಇಂತಹ ಇನ್ನಷ್ಟು ಸೇವಾ ಕಾರ್ಯಗಳನ್ನು ಮುಂದುವರಿಸಲು ನಮಗೆ ಪ್ರೇರಣೆ ಸಿಕ್ಕಿದೆ.
#chilumeravikumar
#chilumeravikumarfoundation
#basavajayanti
#BasavanaParva
#bhavathibhikshamdehi
#annasantarpane
#ravikmarkrishnappa
ವಿಶ್ವ ಗ್ರಾಹಕರ ಹಕ್ಕುಗಳ ದಿನವನ್ನು ಪ್ರತಿ ವರ್ಷ ಮಾರ್ಚ್ 15 ರಂದು ಆಚರಿಸಲಾಗುತ್ತದೆ, ಇದು ಗ್ರಾಹಕರ ಹಕ್ಕುಗಳು, ಸುರಕ್ಷತೆ ಮತ್ತು ಜಾಗೃತಿಯ ಬಗ್ಗೆ ಜಾಗತಿಕ ಅರಿವು ಮೂಡಿಸುವ ದಿನವಾಗಿದೆ. ಇದು ಕಲಬೆರಕೆ, ಅತಿಯಾದ ಬೆಲೆ ಮತ್ತು ಮೋಸದ ವಿರುದ್ಧ ಧ್ವನಿ ಎತ್ತಲು ಹಾಗೂ ಸುರಕ್ಷತೆ, ಮಾಹಿತಿ, ಆಯ್ಕೆ ಮತ್ತು ಪರಿಹಾರದ ಹಕ್ಕುಗಳನ್ನು ಒತ್ತಿಹೇಳುತ್ತದೆ. 'ಕೊಳ್ಳುವವನೇ ಒಡೆಯ' ಎಂಬ ತತ್ವದ ಅಡಿಯಲ್ಲಿ ಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿರುತ್ತದೆ.
ಗ್ರಾಹಕರು ಯಾವುದೇ ವಸ್ತು ಖರೀದಿಸುವಾಗ ಐಎಸ್ಐ (ISI), ಆಗ್ಮಾರ್ಕ್ (AGMARK) ಅಥವಾ ಹಾಲ್ಮಾರ್ಕ್ (Hallmark) ಚಿಹ್ನೆಗಳನ್ನು ಪರೀಕ್ಷಿಸಿ, ಕಡ್ಡಾಯವಾಗಿ ಬಿಲ್ (Bill) ಪಡೆಯುವುದು ಅತ್ಯಗತ್ಯ.
#chilumeravikumarfoundation
#chilumeravikumar
#ConsumerRights
#ConsumerAwareness
#KnowYourRights
#ConsumerProtection
ಭಾರತಮಾತೆಯ ಹೆಮ್ಮೆಯ ಪುತ್ರ ಮೇಜರ್ ಸಂದೀಪ್ ಉನ್ನಿಕೃಷ್ಣನ್ 26/11 ಮುಂಬೈನ 100 ವರ್ಷಗಳ ಇತಿಹಾಸ ಇರುವ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್ನಲ್ಲಿ ಉಗ್ರರ ವಿರುದ್ಧ ಹೋರಾಡಿ, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಭಾರತೀಯ ಸೇನೆಯ ಕೆಚ್ಚೆದೆಯ ಕಮಾಂಡೋ. ಎನ್ಎಸ್ಜಿ (The National Security Guard) ಕಮಾಂಡೋ ಆಗಿದ್ದ ಇವರಿಗೆ ದಿಟ್ಟತನ, ಧೈರ್ಯದಿಂದ ದೇಶಸೇವೆ ಮಾಡಿದ ಸಂದೀಪ್ ಉನ್ನಿಕೃಷ್ಣನ್ಗೆ ಸೈನ್ಯ ಸೇವಾ ಮೆಡಲ್, ಸ್ಪೆಶಲ್ ಸರ್ವೀಸ್ ಮೆಡಲ್, ಆಪರೇಶನ್ ಪರಾಕ್ರಮ್ ಮೆಡಲ್ ಗೌರವ ಸಿಕ್ಕಿದೆ. ಅದಕ್ಕೂ ಮಿಗಿಲಾಗಿ ಇವರ ಸಾಹಸಕ್ಕಾಗಿ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿ ಅಶೋಕ ಚಕ್ರವನ್ನು (ಮರಣೋತ್ತರ) ನೀಡಲಾಗಿದೆ.
ಅವರು ಬದುಕಿದ್ದಾಗ ಅನುಭವಿಸಿದ ಸಾಹಸಗಳು ಮತ್ತು ಶೌರ್ಯ ಇಂದಿಗೂ ಯುವಕರಿಗೆ ಸ್ಫೂರ್ತಿಯಾಗಿದೆ.
#chilumeravikumar
#chilumeravikumarfoundatiin
#MajorSandeepUnnikrishnan
#2611Heroes
#MumbaiAttack
#NSGCommando
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ವಿಶೇಷ ಆಹ್ವಾನ
ಸ್ತ್ರೀ ಶಕ್ತಿ ಸಮಾಜದ ಶಕ್ತಿ. ಮಹಿಳೆಯರ ಸಾಮರ್ಥ್ಯ, ಸಾಧನೆ ಮತ್ತು ಸೇವೆಯನ್ನು ಗೌರವಿಸುವ ಉದ್ದೇಶದಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ವಿಶೇಷ ಸಂದರ್ಭದಲ್ಲಿ ಮಹಿಳೆಯರಿಗಾಗಿ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳು ಮತ್ತು ಗೌರವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ನಮ್ಮ ರಾಜಾಜಿನಗರದ ತಾಯಂದಿರು ಅಕ್ಕ-ತಂಗಿಯರು ಮಾರ್ಗದರ್ಶಕರು, ಹಿತೈಷಿಗಳು, ಪೋಷಕರು ಹಾಗೂ ಸಾರ್ವಜನಿಕರು ಈ ವಿಶೇಷ ಸಮಾರಂಭದಲ್ಲಿ ನಿಮ್ಮ ಅಮೂಲ್ಯ ಉಪಸ್ಥಿತಿಯಿಂದ ಕಾರ್ಯಕ್ರಮವನ್ನು
ಯಶಸ್ವಿಗೊಳಿಸಬೇಕಾಗಿ ವಿನಂತಿ.
#chilumeravikumar
#chilumeravikumarfoundation
#InternationalWomensDay
#WomensDayCelebration
#WomenEmpowerment
ಪ್ರತಿಯೊಬ್ಬರಿಗೂ ಅನ್ನ ಅಕ್ಷರ ದಾಸೋಹದ ಮಹತ್ವವನ್ನು ತಿಳಿಸಿದ, ಸಮಾಜದ ಎಲ್ಲಾ ವರ್ಗದವರಿಗೂ ಯಾವುದೇ ಜಾತಿ ಬೇಧವಿಲ್ಲದೆ ಉಚಿತ ಅನ್ನ ಅಕ್ಷರ ದಾಸೋಹ ಸೇವೆಯನ್ನು ನಿರಂತರಗೊಳಿಸಿದ
ಧಾರ್ಮಿಕ-ಸಾಮಾಜಿಕ ಕಾರ್ಯಗಳಲ್ಲಿ ಸದಾ ಸಕ್ರಿಯವಾಗಿರುವ, ಶತಮಾನಗಳ ಇತಿಹಾಸವಿರುವ ತುಮಕೂರಿನ ತಪೋಭೂಮಿ ಶ್ರೀ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದೆವು,
ಇದೇ ವೇಳೆ ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾಭ್ಯಾಸ, ಅನ್ನ, ವಸತಿ ನೀಡಿದ ನಡೆದಾಡುವ ದೇವರು, ತ್ರಿವಿಧ ದಾಸೋಹಿ, ನಾಡಿನ ಕೀರ್ತಿಯನ್ನು ದೇಶದಾದ್ಯಂತ ಪ್ರಸಿದ್ಧಿಗೊಳಿಸಿದ, ಪದ್ಮವಿಭೂಷಣ ಡಾ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಗದ್ದುಗೆಗೆ ನಮಸ್ಕರಿಸಿ ಆಶೀರ್ವಾದ ಪಡೆದೆವು
ನಾನು ವಿದ್ಯಾಭ್ಯಾಸ ಮಾಡಿ ಶಿಕ್ಷಕ ವೃತ್ತಿಯ ತರಬೇತಿ ಪಡೆದು ಸಂಸ್ಕಾರ ಮತ್ತು ಜೀವನದ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ ಜ್ಞಾನೋದಯವಾದ
ವಿಶ್ವ ವಿಖ್ಯಾತ ಜ್ಞಾನಕೇಂದ್ರ ಜ್ಞಾನದ ಚಿಲುಮೆಯಲ್ಲಿ ಸಮಯ ಕಳೆದನು ಈ ಸಂದರ್ಭದಲ್ಲಿ ನನ್ನ ಬಾಲ್ಯ, ಆಟ, ಶಿಸ್ತು, ಊಟ, ಗುರುಗಳ ಆಶೀರ್ವಚನ, ಪಾಠ ಪ್ರಾರ್ಥನೆ, ಗೆಳೆಯರು ಎಲ್ಲರ ನೆನಪು ಮೆಲುಕುಹಾಕಿಕೊಂಡೆವು.
ಪರಮಪೂಜ್ಯ ಶ್ರೀ ಶ್ರೀ ಶ್ರೀ
ಸಿದ್ದಗಂಗಾ ಮಹಾಸ್ವಾಮಿಜಿಯವರ ಪಾದಗಳಿಗೆ ಭಕ್ತಿಪೂರ್ವಕವಾಗಿ ನಮಸ್ಕರಿಸಿ ಮುಂಬರುವ ಬಸವ ಜಯಂತಿ ಆಚರಣೆಯನ್ನು ರಾಜಾಜಿನಗರದಲ್ಲಿ ಆಚರಿಸಲು ಪೂರ್ವಭಾವಿಯಾಗಿ ಶ್ರೀಗಳಿಂದ ಮಾರ್ಗದರ್ಶನ ಪಡೆದ ಕ್ಷಣಗಳು.
#chilumeravikumar
#chilumeravikumarfoundation
#SiddagangaMutt
#DrShivakumaraSwamiji
#WalkingGod
#TrividhaDasoha
ನಮ್ಮ ಆಹಾರ ನಮ್ಮ ಆರೋಗ್ಯ
ನನ್ನ ಎಲ್ಲ ಪ್ರೀತಿಯ ಗುರು ಹಿರಿಯರೇ ತಾಯಂದಿರೆ ಅಕ್ಕ-ತಂಗಿಯರೇ ಅಣ್ಣ-ತಮ್ಮಂದಿರೆ ಬಂಧು ಬಾಂಧವರೇ ತಮ್ಮೆಲ್ಲರಿಗೂ ನಿಮ್ಮ ಚಿಲುಮೆ ರವಿಕುಮಾರ್ ಮಾಡುವ ನಮಸ್ಕಾರಗಳು
ಪ್ರತಿ ಗುರುವಾರದಂತೆ ಈ ಗುರುವಾರವು ಸಹ ನಿಮ್ಮ ಚಿಲುಮೆ ರವಿಕುಮಾರ್ ಫೌಂಡೇಶನ್ ವತಿಯಿಂದ ನಮ್ಮ ಆಹಾರ ನಮ್ಮ ಆರೋಗ್ಯ ಎಂಬ ಜಾಗೃತಿ ಕಾರ್ಯಕ್ರಮದಡಿಯಲ್ಲಿ 52 ನೇ ವಾರದ ಆರೋಗ್ಯವರ್ಧಕ ಹೃದಯರಕ್ಷಕ ಸಂಜೀವಿನಿ ಲಡ್ಡು ವಿತರಣೆ ಕಾರ್ಯಕ್ರಮವು ದಿನಾಂಕ 05.03.2026, ಗುರುವಾರ ಬೆಳಗ್ಗೆ 7.00 ಗಂಟೆಗೆ ಶ್ರೀ ದೊಡ್ಡಮ್ಮದೇವಿ ದೇವಸ್ಥಾನ ಆವರಣ 12ನೇ ಮುಖ್ಯರಸ್ತೆ, ಶಿವನಗರ, ರಾಜಾಜಿನಗರದಲ್ಲಿ ಆಯೋಜಿಸಲಾಗಿದೆ
ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕೋರುತ್ತೇವೆ.
#chilumeravikumar
#chilumeravikumarfoundation
#OurFoodOurHealth
#HealthAwareness
#HealthyLiving
ಪ್ರತಿ ವರ್ಷ 3 ನೇ ಮಾರ್ಚ್ನ್ನು ವಿಶ್ವ ವನ್ಯಜೀವಿ ದಿನವನ್ನಾಗಿ ಆಚರಿಸಲಾಗುತ್ತದೆ.
ಈ ದಿನವು ನಮ್ಮ ಪ್ರಕೃತಿಯ ಅಮೂಲ್ಯ ಸಂಪತ್ತಿನಲ್ಲಿ ಒಂದಾದ ವನ್ಯಜೀವಿಗಳನ್ನು ಸಂರಕ್ಷಿಣೆಯ ಪ್ರಾಮುಖ್ಯತೆಯನ್ನು ನೆನಪಿಸುತ್ತದೆ. ವನ್ಯಜೀವಿಗಳು ಪ್ರಕೃತಿಯ ಸಮತೋಲನವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಅರಣ್ಯ ನಾಶ, ಅಕ್ರಮ ಬೇಟೆ ಮತ್ತು ಪರಿಸರ ಮಾಲಿನ್ಯದಿಂದ ಅನೇಕ ಪ್ರಾಣಿಗಳು ಮತ್ತು ಸಸ್ಯಗಳು ಅಪಾಯದ ಸ್ಥಿತಿಗೆ ತಲುಪಿವೆ.
ನಾವು ಪ್ರಕೃತಿಯನ್ನು ಮತ್ತು ವನ್ಯ ಜೀವಿಗಳನ್ನು ರಕ್ಷಿಸಿದರೆ ಮಾತ್ರ ಮುಂದಿನ ಪೀಳಿಗೆಯು ಸುಂದರವಾದ ಭೂಮಿಯನ್ನು ನೋಡಲು ಸಾಧ್ಯ.
ಆದ್ದರಿಂದ, ವನ್ಯಜೀವಿ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ.
“ಪ್ರಕೃತಿಯನ್ನು ಕಾಪಾಡೋಣ – ವನ್ಯಜೀವಿಗಳನ್ನು ಸಂರಕ್ಷಿಸೋಣ”
ವಿಶ್ವ ವನ್ಯಜೀವಿ ದಿನದ ಹಾರ್ದಿಕ ಶುಭಾಶಯಗಳು
#chilumeravikumar
#chilumeravikumarfoundation
#WorldWildlifeDay
#WildlifeConservation
#ProtectWildlife
ಭಾರತದ ಪ್ರಸಿದ್ಧ ಹಿಂಧೂಸ್ತಾನಿ ಶಾಸ್ತ್ರೀಯ ಸಂಗೀತಗಾರರು, ದಾಸ ಸಾಹಿತ್ಯ ಪರಂಪರೆಯ ಮಹಾನ್ ಪ್ರಚಾರಕರು ಮತ್ತು ಸಮಾಜಸೇವಕರಾದ ಪಂಡಿತ್ ಪುಟ್ಟರಾಜ ಗವಾಯಿಯವರ ಅವರ ಜನ್ಮದಿನೋತ್ಸವದ ಈ ಪವಿತ್ರ ಸಂದರ್ಭದಲ್ಲಿ ಗೌರವಪೂರ್ವಕ ನಮನಗಳು.
ಸಂಗೀತದ ಮೂಲಕ ಭಕ್ತಿ ಮತ್ತು ಮಾನವೀಯ ಮೌಲ್ಯಗಳನ್ನು ಜನರಲ್ಲಿ ಭಿತ್ತಿದ ಮಹಾನ್ ಚೈತನ್ಯ, ಅವರ ಸರಳತೆ, ಶಿಸ್ತು ಮತ್ತು ಸೇವಾಭಾವನೆ ನಮ್ಮೆಲ್ಲರಿಗೂ ನಿರಂತರ ಪ್ರೇರಣೆಯಾಗಿದೆ.
“ಸಂಗೀತವೇ ಸಾಧನೆ – ಸೇವೆಯೇ ಜೀವನ” ಎಂಬ ಅವರ ಸಂದೇಶ ಸದಾ ನಮ್ಮ ಹೃದಯಗಳಲ್ಲಿ ಪ್ರತಿಧ್ವನಿಸಲಿ. ಅವರ ಆದರ್ಶಗಳನ್ನು ಅನುಸರಿಸಿ ಸಮಾಜ ಸೇವೆಯ ದಾರಿಯಲ್ಲಿ ನಾವು ಮುಂದುವರಿಯೋಣ.
ಪಂಡಿತ್ ಪುಟ್ಟರಾಜ ಗವಾಯಿಯವರ ಜನ್ಮದಿನೋತ್ಸವದ ಹಾರ್ದಿಕ ಶುಭಾಶಯಗಳು
#chilumeravikumar
#chilumeravikumarfoundation
#PanditPuttarajGawai
#PuttarajGawaiJayanti
#HindustaniClassical
ಕಲ್ಯಾಣಾದ್ಬುತ್ ಗಾತ್ರಯ ಕಾಮಿತಾರ್ಥ ಪ್ರಧಾಯಿನಿ ಶ್ರೀಮದ್ ವೆಂಕಟನಾಥಯ ಶ್ರೀನಿವಾಸಯ ಥೆ ನಮಃ
ಇಂದು ನಾನು ನನ್ನ ಕುಟುಂಬ ಸದಸ್ಯರು ತಿರುಪತಿವಾಸ ವೆಂಕಟೇಶ್ವರ, ತಿರುಮಲ ಗೋವಿಂದ, ಶ್ರೀನಿವಾಸ ಶ್ರೀವಾರಿಯವ ದರ್ಶನ ಪಡೆದೆವು.
ಈ ಸಂದರ್ಭದಲ್ಲಿ
ನಮ್ಮ ಚಿಲುಮೆ ರವಿಕುಮಾರ್ ಫೌಂಡೇಶನ್ನ ಎಲ್ಲಾ ಪದಾಧಿಕಾರಿಗಳಿಗೆ ಆ ಭಗವಂತ ಆಯುಷ್ ಆರೋಗ್ಯ ನೀಡಲೆಂದು ಬೇಡಿಕೊಳ್ಳಲಾಯಿತು ಹಾಗೂ ಇನ್ನು ಮುಂದೆ
ನಮ್ಮ ಸಂಸ್ಥೆಯಿಂದ ಆಯೋಜಿಸುವ ಎಲ್ಲ ಕಾರ್ಯಕ್ರಮಗಳಿಗೆ ಯಾರ ಕೆಟ್ಟ ದೃಷ್ಟಿಯು ತಾಕದೆ, ಯಾವುದೇ ಅಡೆತಡೆಗಳಿಲ್ಲದೆ ಸುಸೂತ್ರವಾಗಿ ಕಾರ್ಯಕ್ರಮಗಳು ಯಶಸ್ವಿಯಾಗಲೆಂದು ಪ್ರಾರ್ಥಿಸಲಾಯಿತು ಮತ್ತು ರಾಜಾಜಿನಗರ ವಿಧಾನಸಭಾ ಕ್ಷೇತ್ರದ ನಾಗರೀಕರಿಗೂ ಹಾಗೂ ನಾಡಿನ ಸಮಸ್ತರ ಲೋಕಕಲ್ಯಾಣಕ್ಕಾ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯವರಲ್ಲಿ ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸಿದ ಕ್ಷಣಗಳು
#chilumeravikumar
#chilumeravikumarfoundation
#TirupatiDarshan
#Tirumala
#LordVenkateshwara
ಜಗದ್ಗುರು ರೇಣುಕಾಚಾರ್ಯ ಜಯಂತಿಯು ಪ್ರಮುಖ ಹಬ್ಬವಾಗಿದ್ದು ಪ್ರತಿವರ್ಷ ಪಾಲ್ಗುಣ ಶುದ್ಧ ತ್ರಯೋದಶಿಯಂದು ಆಚರಿಸಲಾಗುತ್ತದೆ. ಧರ್ಮದ ಸ್ಥಾಪಕರಲ್ಲಿ ಒಬ್ಬರಾದ ರೇಣುಕಾಚಾರ್ಯರು ಶಿವನ ಅವತಾರವೆಂದು ನಂಬಲಾಗಿದ್ದು ಸಮಾಜದಲ್ಲಿ ಸಮಾನತೆ, ಭಕ್ತಿ, ನೈತಿಕತೆ ಮತ್ತು 'ಸಿದ್ಧಾಂತ ಶಿಖಾಮಣಿ' ಎಂಬ ಗ್ರಂಥದ ಮೂಲಕ ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತವನ್ನು ಬೋಧಿಸಿದರು. ಇವರ ಜಯಂತಿಯನ್ನು ನಾಡಿನಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ.
"ಜಗದ್ಗುರು ರೇಣುಕಾಚಾರ್ಯರ ಜಯಂತಿಯ ಈ ಪವಿತ್ರ ದಿನದಂದು ಅವರ ತತ್ವ ಮತ್ತು ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಸಾಮರಸ್ಯ ಮತ್ತು ಶಾಂತಿಯನ್ನು ಮೂಡಿಸೋಣ.
#chilumeravikumar
#chilumeravikumarfoundation
#JagadguruRenukacharya
#RenukacharyaJayanti
#Renukacharya
ವಿಶ್ವ ನಾಗರಿಕ ರಕ್ಷಣಾ ದಿನವನ್ನು ಪ್ರತಿವರ್ಷ ಮಾರ್ಚ್ 1 ರಂದು ಆಚರಿಸಲಾಗುತ್ತದೆ. ನೈಸರ್ಗಿಕ ವಿಕೋಪಗಳು, ಅಪಘಾತಗಳು ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಪ್ರಾಣ ಹಾಗೂ ಆಸ್ತಿ ರಕ್ಷಣೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು 1990ರಿಂದ ಅಂತರರಾಷ್ಟ್ರೀಯ ನಾಗರಿಕ ರಕ್ಷಣಾ ಸಂಸ್ಥೆ (ICDO) ಈ ದಿನವನ್ನು ಆಚರಿಸುತ್ತಿದೆ. ಇದು ನಾಗರಿಕ ರಕ್ಷಣಾ ಸಿಬ್ಬಂದಿಗಳ ಸೇವೆಗೆ ಗೌರವ ಸಲ್ಲಿಸುವ ದಿನವಾಗಿದೆ.
ನಾಗರಿಕ ರಕ್ಷಣೆ ಎಂದರೆ ಕೇವಲ ಯುದ್ಧ ಪರಿಸ್ಥಿತಿಗಳಲ್ಲ, ಪ್ರಕೃತಿಯ ಅನಿರೀಕ್ಷಿತ ಅವಘಡಗಳಿಂದ ನಮ್ಮನ್ನು ಮತ್ತು ಇತರರನ್ನು ರಕ್ಷಿಸಿಕೊಳ್ಳುವ ಜವಾಬ್ದಾರಿಯಾಗಿದೆ. ಸಮಾಜದಲ್ಲಿ ಶಿಸ್ತು, ಸೇವಾ ಮನೋಭಾವ ಮತ್ತು ತುರ್ತು ಸಿದ್ಧತೆಯನ್ನು ಬೆಳೆಸುವಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ(RSS) ಸೇರಿದಂತೆ ಅನೇಕ ಸೇವಾ ಸಂಘಟನೆಗಳ ಪಾತ್ರ ಮಹತ್ವದ್ದಾಗಿದೆ.
ಸುರಕ್ಷಿತ ಸಮಾಜ ನಿರ್ಮಾಣ ನಮ್ಮೆಲ್ಲರ ಹೊಣೆಗಾರಿಕೆ.
#chilumeravikumar
#chilumeravikumarfoundation
#WorldCivilDefenceDay
#CivilDefence
#DisasterManagement
ನನ್ನ ಸಹೋದರಿಯಾದ ಶ್ರೀಮತಿ ಪುಷ್ಪಲತಾ ಮತ್ತು ಶ್ರೀ ಉಮೇಶ್ ರವರು ನೂತನವಾಗಿ ನಿರ್ಮಿಸಿರುವ ಜೇನು ಗೂಡಿನ ಗೃಹಪ್ರವೇಶ ಸಮಾರಂಭದಲ್ಲಿ ಭಾಗವಹಿಸಿ ಶುಭ ಕೋರಿದ ಕ್ಷಣ.
ಈ ಹೊಸ ಗೃಹವು ಸದಾ ಸಂತೋಷ, ಸಮೃದ್ಧಿ, ಆರೋಗ್ಯ ಮತ್ತು ಐಶ್ವರ್ಯದಿಂದ ಕಂಗೊಳಿಸಲಿ ಎಂದು ಹಾರೈಸುತ್ತೇನೆ.
ದೇವರ ಕೃಪೆಯಿಂದ ಅವರ ಕುಟುಂಬಕ್ಕೆ ಶಾಂತಿ, ಪ್ರೀತಿ ಮತ್ತು ಶುಭಭವಿಷ್ಯ ದೊರಕಲಿ.
ಇಂತಹ ಸಂತಸದ ಕ್ಷಣವನ್ನು ಕುಟುಂಬದವರೊಂದಿಗೆ ಹಂಚಿಕೊಂಡುದು ನನಗೆ ವಿಶೇಷ ಸಂತೋಷವನ್ನುಂಟುಮಾಡಿತು.
#chilumeravikumar
#ChilumeRavikumarFoundation
#Gruhapravesha
#HouseWarming
#NewHome
ಇಂದಿನ ಡಿಜಿಟಲ್ ಯುಗದಲ್ಲಿ ಸೈಬರ್ ವಂಚನೆಗಳು ಹೆಚ್ಚುತ್ತಿವೆ. ಅಪರಿಚಿತ ಲಿಂಕ್ಗಳನ್ನು ಕ್ಲಿಕ್ ಮಾಡಬೇಡಿ, OTP ಅಥವಾ ಬ್ಯಾಂಕ್ ಮಾಹಿತಿಯನ್ನು ಯಾರಿಗೂ ಹಂಚಿಕೊಳ್ಳಬೇಡಿ.
ನಿಮ್ಮ ವೈಯಕ್ತಿಕ ಮಾಹಿತಿಯೇ ನಿಮ್ಮ ಸುರಕ್ಷತೆ. ಜಾಗರೂಕರಾಗಿ, ಸುರಕ್ಷಿತವಾಗಿರಿ.
ಸೈಬರ್ ವಂಚನೆಗೆ ಒಳಗಾದಲ್ಲಿ, ಸೈಬರ್ ಸಹಾಯವಾಣಿ ಸಂಖ್ಯೆ 112 ಕ್ಕೆ ಕರೆಮಾಡಿ.
#chilumeravikumar
#chilumeravikumarfoundation
#CyberSafety
#StaySafeOnline
#CyberAwareness
ಮೈಸೂರು ಮಹಾಸಂಸ್ಥಾನದ 10ನೇ ಮಹಾರಾಜರಾಗಿದ್ದ ಚಾಮರಾಜೇಂದ್ರ ಒಡೆಯರ್ ರವರ ಜನ್ಮದಿನದಂದು ಭಕ್ತಿಪೂರ್ವಕವಾಗಿ ಸ್ಮರಿಸೋಣ. 1881ರಲ್ಲಿ ಮೈಸೂರು ಪ್ರತಿನಿಧಿ ಸಭೆ ಸ್ಥಾಪಿಸಿ ಪ್ರಜಾಪ್ರಭುತ್ವಕ್ಕೆ ನಾಂದಿ ಹಾಡಿದವರು. ಮಹಿಳಾ ಶಿಕ್ಷಣಕ್ಕೆ ಉತ್ತೇಜನ ನೀಡಿ, ಸ್ವಾಮಿ ವಿವೇಕಾನಂದರನ್ನು World's Parliament of Religionsಗೆ ಕಳುಹಿಸಿದ ಮಹಾನುಭಾವರು. ಕೃಷಿ, ಕೈಗಾರಿಕೆ ಹಾಗೂ ಜನಪರ ಆಡಳಿತದಲ್ಲಿ ಅವರ ಕೊಡುಗೆ ಅಮೂಲ್ಯ. ಅವರಿಗೆ ನನ್ನ ವಿನಮ್ರ ನಮನಗಳು.
#chilumeravikumar
#chilumeravikumarfoundation
#ChamarajendraWadiyar
#MysoreMaharaja
#MysoreHistory
ಆಧುನಿಕ ಕನ್ನಡ ಸಾಹಿತ್ಯದ ಪ್ರಮುಖ ಪ್ರವರ್ತಕರು, ಕವಿ, ಸಣ್ಣಕಥೆಗಾರ ಮತ್ತು ಮಕ್ಕಳ ಸಾಹಿತ್ಯದ ಜನಕ. ಇವರು, 'ಕವಿಶಿಷ್ಯ' ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿದ್ದರು. ಮಕ್ಕಳ ಸಾಹಿತ್ಯಕ್ಕೆ ಹೆಚ್ಚಿನ ಒತ್ತು ನೀಡಿದ ಇವರು, 'ಹುತ್ತರಿಯ ಹಾಡು' ಮತ್ತು 'ನಾಗರ ಹಾವೆ'ಯಂತಹ ಪ್ರಸಿದ್ಧ ಕವಿತೆಗಳನ್ನು ರಚಿಸಿದ್ದ ಅವರ ಕೊಡುಗೆ ಅವಿಸ್ಮರಣೀಯ.
ಇವರ ಜನ್ಮ ದಿನದಂದು ಅವರು ನೀಡಿರುವ ಕೊಡುಗೆಗಳನ್ನು ಎಲ್ಲರೂ ಉಳಿಸಿ ಬೆಳೆಸೋಣ.
#chilumeravikumar
#chilumeravikumarfoundation
#Kavishishya
#KannadaLiterature
#ModernKannada
#ChildrensLiterature
ಭಾರತವು ಬಹುಭಾಷೆಗಳ ತೊಟ್ಟಿಲು. ವಿವಿಧತೆಯಲ್ಲಿ ಏಕತೆಯೇ ಭಾರತ ಶಕ್ತಿ. ಈ ವಿವಿಧತೆಯಲ್ಲಿ ಕನ್ನಡದ ಸ್ಥಾನ, ಶಕ್ತಿ, ಕಂಪು ಎಲ್ಲವೂ ಅನನ್ಯ.
ಕನ್ನಡಮ್ಮನ ಮಕ್ಕಳಾಗಿ ನಮಗೆ ಕನ್ನಡವೇ ಜೀವಸೆಲೆ. ಮಕ್ಕಳಿಗೆ ಕನ್ನಡ ಕಲಿಸೋಣ. ನಮ್ಮ ನುಡಿಯನ್ನು ಉಳಿಸಿ ಬೆಳೆಸುವ ಹೊಣೆಯನ್ನು ಎಲ್ಲರೂ ಜವಾಬ್ದಾರಿಯಿಂದ ನಿರ್ವಹಿಸೋಣ.
ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ರಾಷ್ಟ್ರಕವಿ ಕುವೆಂಪು ಅವರ ಹೃದಯದ ನುಡಿಯೇ ನಮಗೆ ಆದರ್ಶ.
ಎಲ್ಲಾದರೂ ಇರು, ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು.
#chilumeravikumar
#chilumeravikumarfoundation
#unityindiversity
#proudkannadiga
#kannadaculture
ಬೆಂಗಳೂರಿನ ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಆವರಣದಲ್ಲಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿಶ್ಚಲಾನಂದನಾಥ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಜರುಗಿದ " ಪರಮಪೂಜ್ಯ ಜಗದ್ಗುರು ಭೈರವೈಕ್ಯ ಶ್ರೀ ಶ್ರೀ ಶ್ರೀ ಕುಮಾರ ಚಂದ್ರಶೇಖರನಾಥ ಮಹಾಸ್ವಾಮಿಗಳ ಅಭಿನಂದನಾ ಗ್ರಂಥ ಲೋಕಾರ್ಪಣೆ , ಸಾವಯವ ಸಂತೆ , ವಿಜ್ಞಾನ ಮತ್ತು ತಂತ್ರಜ್ಞಾನ ವಸ್ತುಪ್ರದರ್ಶನ , ಉಚಿತ ಆರೋಗ್ಯ ಶಿಬಿರ, ಸರ್ವಜನಾಂಗದ ವಧು- ವರರ ಮುಖಾ- ಮುಖಿ ಹಾಗೂ ಮಲೆನಾಡು ಗಿಡ್ಡಹಸುಗಳ ಉಚಿತ ವಿತರಣಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ, ವಿವಿಧ ಶ್ರೀಗಳ ದರ್ಶನ ಹಾಗೂ ಆಶೀರ್ವಾದ ಪಡೆಯಲಾಯಿತು.
ಸಾಮಾಜಿಕ, ಧಾರ್ಮಿಕ ಸೇವಾ ಕಾರ್ಯಗಳ ಮೂಲಕ ಹೆಸರಾಗಿರುವ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಕಾರ್ಯಗಳಿಗೆ ನಾವೆಲ್ಲರೂ ಬೆಂಬಲವಾಗಿ ನಿಲ್ಲುವ ಮೂಲಕ ಶ್ರೀಮಠದ ಎಲ್ಲಾ ಸೇವಾ ಕಾರ್ಯಗಳಲ್ಲಿ ಭಾಗಿಯಾಗಲು ಸಂಕಲ್ಪ ಮಾಡಲಾಯಿತು.
ಈ ಸಂದರ್ಭದಲ್ಲಿ ವಿವಿಧ ಮಠಗಳ ಪರಮಪೂಜ್ಯ ಶ್ರೀಗಳು, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದರಾದ ಡಾ. ಮಂಜುನಾಥ ಅವರು, ನಿವೃತ್ತ ಲೋಕಾಯುಕ್ತರಾದ ಶ್ರೀ ಎನ್. ಸಂತೋಷ ಹೆಗಡೆ ಅವರು , ಚಿಲುಮೆ ರವಿಕುಮಾರ್ ಫೌಂಡೇಶನ್ ಪದಾಧಿಕಾರಿಗಳು ಹಾಗೂ ಸ್ವಯಂ ಸೇವಕರು ಉಪಸ್ಥಿತರಿದ್ದರು.
#chilumeravikumar
#chilumeravikumarfoundation
#VishwaOkkaligaMahasamsthanaMutt
#OkkaligaCommunity
#Kengeri
#Bengaluru
#Jagadguru
#DrNischalanandanathaSwamiji