ಮಂಡಲ ಪಂಚಾಯತಿಯಿಂದ ಅನುಮೋದನೆಯಾಗಿರುವ ಆಸ್ತಿಗಳಿಗೆ ನಮೂನೆ 11ಎ ಪಡೆಯಲು ಅರ್ಜಿ ಸಲ್ಲಿಸಿ. ಇ-ಖಾತಾ ಪಡೆಯಲು ನಾಗರಿಕರು ಮನೆಯಲ್ಲಿ ಕುಳಿತು ಆನ್ಲೈನ್ ಮುಖಾಂತರ ಇ-ಸ್ವತ್ತು 2.0 ತಂತ್ರಾಂಶದ https://t.co/nsvbDpYj2y ಲಿಂಕ್ ಮೂಲಕ ಅರ್ಜಿ ಸಲ್ಲಿಸಿ.
#RDPR#GramPanchayat#eswathu2_0#form11a@eshwar_khandre
ಆಗಸ್ಟ್ ಮಾಹೆಯ ಅಭಿಯಾನ -2026
ಗ್ರಾಮ ಪಂಚಾಯತಿ ಅರಿವು ಕೇಂದ್ರಗಳಲ್ಲಿ ಮಕ್ಕಳಿಗಾಗಿ ಸ್ವಾತಂತ್ರ್ಯ ದ��ನಾಚರಣೆಯ ಸಂಭ್ರಮೋತ್ಸವ ಹಾಗೂ ‘ಹೂವಲ್ಲದ ಹೂವು – ಕಲ್ಲುಹೂವು’ ಸೃಜನಾತ್ಮಕ ಚಟುವಟಿಕೆಗಳ ಅಭಿಯಾನ.
1/2
ಈ ಸಂದರ್ಭದಲ್ಲಿ ಸರ್ಕಾರದ ಕಾರ್ಯದರ್ಶಿ (ಪಂ.ರಾಜ್.) ಶ್ರೀ ರಂದೀಪ್ ಡಿ., ಪಂಚಾಯತ್ ರಾಜ್ ಆಯುಕ್ತರಾದ ಡಾ|| ಅರುಧಂತಿ ಚಂದ್ರಶೇಖರ್, ನಿರ್ದೇಶಕರು-1 ಶ್ರೀ ಅಮರೇಶ್ ಆರ್., ಉಪಕಾರ್ಯದರ್ಶಿ (ಆಡಳಿತ) ಶ್ರೀಮತಿ ವಾಣಿ ಬಿ. ಹಾಗೂ ಆಯುಕ್ತಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
2/2
#RDPR#kalyanakarnataka
ಕಲ್ಯಾಣ ಕರ್ನಾಟಕ ಪ್ರದೇಶ�� ಜಿಲ್ಲೆಗಳ ನೇರ ನೇಮಕಾತಿ ಕೋಟಾದಡಿ ಆಯ್ಕೆಯಾದ 76 ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದಲ್ಲಿ ಮಾನ್ಯ ಇಲಾಖಾ ಸಚಿವರು ನೇಮಕಾತಿ ಆದೇಶ ಪತ್ರಗಳನ್ನು ವಿತರಿಸಿ, ಪ್ರಮಾಣ ವಚನ ಬೋಧಿಸಿ ಶುಭ ಹಾರೈಸಿದರು.
1/2
@eshwar_khandre
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ವರ್ಗಾವಣೆಯನ್ನು ಆನ್ಲೈನ್ ಕೌನ್ಸಿಲಿಂಗ್ ಪ್ರಕ್ರಿಯೆಯ ಮೂಲಕ ಯಶಸ್ವಿಯಾಗಿ ನಡೆಸಿ, ಸ್ಥಳ ನಿರೀಕ್ಷೆಯಲ್ಲಿದ್ದ 33 ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಮಾನ್ಯ ಪಂಚಾಯತ್ ರಾಜ್ ಆಯುಕ್ತರಾದ ಡಾ|| ಅರುಧಂತಿ ಚಂದ್ರಶೇಖರ್ ರವರು ಆದೇಶ ಪತ್ರ ನೀಡಿದರು.
ಆಡಳಿತದಲ್ಲಿ ಪಾರದರ್ಶಕತೆ, ದಕ್ಷತೆ & ಉತ್ತರದಾಯಿತ್ವವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಇಲಾಖೆಯು ಪಿಡಿಒಗಳ ವರ್ಗಾವಣೆ ಪ್ರಕ್ರಿಯೆಗೆ ಆನ್ಲೈನ್ ಕೌನ್ಸಿಲಿಂಗ್ ವ್ಯವಸ್ಥೆ ಜಾರಿಗೆ ತಂದಿದ್ದು, ವರ್ಗಾವಣೆ ಪ್ರಕ್ರಿಯೆಯು ಸಂಪೂರ್ಣ ಪಾರದರ್ಶಕ, ತಂತ್ರಜ್ಞಾನದೊಂದಿಗೆ ಅ���ುಷ್ಠಾನಗೊಳಿಸಿ ಆಡಳಿತಾತ್ಮಕ ಕಾರ್ಯಕ್ಷಮತೆ ಹೆಚ್ಚಿಸಲು ಸಹಕಾರಿಯಾಗಿದೆ
ಗ್ರಾಮ ಪಂಚಾಯತಿ ಅರಿವು ಕೇಂದ್ರಗಳ ಮೂಲಕ ಗ್ರಾಮೀಣ ಯುವಜನತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ಅಗತ್ಯ ಮಾರ್ಗದರ್ಶನ, ಅಧ್ಯಯನ ಸಂಪನ್ಮೂಲಗಳು ಹಾಗೂ ಮಾದರಿ ಪರೀಕ್ಷೆಗಳ ಸೌಲಭ್ಯಗಳನ್ನು ಒದಗಿಸುವ ಮೂಲಕ ಅವರ ಜ್ಞಾನ, ಕೌಶಲ್ಯ ಮತ್ತು ಆತ್ಮವಿಶ್ವಾಸವನ್ನು ವೃದ್ಧಿಸಲು ನಿರಂತರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
2/2
ವಿಜಯನಗರ ಜಿಲ್ಲೆ, ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ತಂಬ್ರಹಳ್ಳಿ ಗ್ರಾಮ ಪಂಚಾಯತಿ ಅರಿವು ಕೇಂದ್ರದಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಿರುವ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಭ್ಯರ್ಥಿಗಳಿಗಾಗಿ 100 ಅಂಕಗಳ ಮಾದರಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಯಿತು.
1/2
@eshwar_khandre
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಾಗೂ ಯುವಜನತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಸಿ���್ಧತೆಗೆ ಅಗತ್ಯವಾದ ಪುಸ್ತಕಗಳು, ಅಧ್ಯಯನ ಸಂಪನ್ಮೂಲಗಳು ಮತ್ತು ಮಾರ್ಗದರ್ಶನವನ್ನು ಒದಗಿಸುವ ಮೂಲಕ ಗ್ರಾ.ಪಂ ಅರಿವು ಕೇಂದ್ರಗಳು ಜ್ಞಾನವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಆತ್ಮವಿಶ್ವಾಸದಿಂದ ಹೆಜ್ಜೆಯಿಡಲು ದಾರಿದೀಪವಾಗಿವೆ.
@eshwar_khandre
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನೀರು, ಪರಿಸರ, ಮಣ್ಣು ಹಾಗೂ ಜೀವ ವೈವಿಧ್ಯತೆಯ ಸಂರಕ್ಷಣೆಗೆ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಕೈಗೊಳ್ಳುವ ಪರಿಸರ ಸ್ನೇಹಿ ಚಟುವಟಿಕೆಗಳಿಗ��� ಎಲ್ಲರೂ ಕೈಜೋಡಿಸಿ. ಸ್ವಚ್ಛ, ಹಸಿರು ಹಾಗೂ ಸುಸ್ಥಿರ ಗ್ರಾಮ ನಿರ್ಮಾಣಕ್ಕೆ ಜೊತೆಯಾಗಿ.
#RDPR #WorldNatureConservationDay
@eshwar_khandre
ಕೆಲಸದ ಒತ್ತಡ, ಕುಟುಂಬದ ಜವಾಬ್ದಾರಿಗಳು ಅಥವಾ ವೈಯಕ್ತಿಕ ಸಮಸ್ಯೆಗಳಿಂದ ಮಾನ���ಿಕ ಒತ್ತಡ ಉಂಟಾಗುವುದು ಸಹಜ. ಆತಂಕ ಅಥವಾ ಖಿನ್ನತೆಯಿಂದ ಬಳಲುತ್ತಿದ್ದರೆ, ಸಮಸ್ಯೆಯನ್ನು ಮನಸ್ಸಿನಲ್ಲೇ ಇಟ್ಟುಕೊಳ್ಳದೆ ನೆರವು ಪಡೆಯಿರಿ. ಉಚಿತ ಹಾಗೂ ಗೌಪ್ಯ ಸಮಾಲೋಚನೆಗಾಗಿ ‘ಟೆಲಿ ಮನಸ್’ ಸಹಾಯವಾಣಿ 14416ಕ್ಕೆ ಕರೆ ಮಾಡಿ.
#TeleMANAS
@eshwar_khandre
ನಿಮ್ಮ ಗ್ರಾಮದಲ್ಲಿ ಕಸ ಸಂಗ್ರಹಣೆಗೆ ಸ್ವಚ್ಛವಾಹಿನಿ ಬರುತ್ತಿಲ್ಲವೇ? ಅಥವಾ ಇತರೆ ಸೇವೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಎದುರಾಗಿದೆಯೇ? ಚಿಂತಿಸಬೇಡಿ. ನಿಮ್ಮ ಒಂದು ಕರೆ ಸಾಕು. ಸಮಸ್ಯೆಯನ್ನು ತ್ವರಿತವಾಗಿ ದಾಖಲಿಸಿ, ಅಗತ್ಯ ಕ್ರಮ ಕೈಗೊಳ್ಳಲು ಪಂಚಮಿತ್ರ ಸಹಾಯವಾಣಿ 8277506000 ಸಂಖ್ಯೆಗೆ ಸಂಪರ್ಕಿಸಿ.
#swacchavahini@eshwar_khandre
ಆರೋಗ್ಯ ಶಿಬಿರದಲ್ಲಿ ಹಿರಿಯ ನಾಗರಿಕರ ರ��್ತದೊತ್ತಡ (ಬಿ.ಪಿ.) ಹಾಗೂ ಮಧುಮೇಹ ತಪಾಸಣೆ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಹಿರಿಯ ನಾಗರಿಕರಿಗೆ ಯೋಗಾಭ್ಯಾಸ ಮತ್ತು ಆರೋಗ್ಯಕರ ಜೀವನಶೈಲಿಯ ಮಹತ್ವ ತಿಳಿಸಲಾಯಿತು.
#RDPR #Grampanchayat #ArivuKendra
ಕೊಪ್ಪಳ ಜಿಲ್ಲೆ, ಗಂಗಾವತಿ ತಾಲ್ಲೂಕಿನ ವಡ್ಡರಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅರಿವು ಕೇಂದ್ರದಲ್ಲಿ ಹಿರಿಯ ನಾಗರಿಕರಿಗಾಗಿ ಆರೋಗ್ಯ ಶಿಬಿರವನ್ನು ಆಯೋಜಿಸಲಾ��ಿತು.
@eshwar_khandre
ಬೀದರ್ ಜಿಲ್ಲೆ, ಚಿಟಗುಪ್ಪಾ ತಾಲ್ಲೂಕಿನ ಕೊಡಂಬಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಶ್ರೀ ರೇವಣಸಿದ್ಧ ಮಾರುತಿ ಅರ್ಕಿ ಅವರು ಗ್ರಾಮ ಪಂಚಾಯತಿಯ ಅರಿವು ಕೇಂದ್ರದ ಸೌಲಭ್ಯಗಳನ್ನು ಬಳಿಸಿಕೊಂಡ��� ಭಾರತೀಯ ಸೇನೆಯ ಅಗ್ನಿವೀರ (ಜನರಲ್ ಡ್ಯೂಟಿ - GD) ಹುದ್ದೆಗೆ ಆಯ್ಕೆಯಾಗಿದ್ದಾರೆ.
3/3
ರೇವಣಸಿದ್ಧ ಮಾರುತಿ ಅರ್ಕಿ ಅವರ ಅಭಿಪ್ರಾಯ.
ಗ್ರಾಮ ಪಂಚಾಯತಿಯ ಅರಿವು ಕೇಂದ್ರದಲ್ಲಿ ಲಭ್ಯವಿದ್ದ ಪುಸ್ತಕಗಳು, ಅಧ್ಯಯನಕ್ಕೆ ಪೂರಕವಾದ ವಾತಾವರಣ ಹಾಗೂ ನನ್ನ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಗೆ ಬಹಳ ಸಹಕಾರಿಯಾಯಿತು.
1/3
@eshwar_khandre
ಅರಿವು ಕೇಂದ್ರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡ ಪರಿಣಾಮ ಇಂದು ಭಾರತೀಯ ಸೇನೆಯ ಅಗ್ನಿವೀರ (GD) ಹುದ್ದೆಗೆ ಆಯ್ಕೆಯಾಗಿದ್ದೇನೆ. ಗ್ರಾಮ���ಣ ಯುವಜನರಿಗೆ ಇಂತಹ ಉಪಯುಕ್ತ ಸೌಲಭ್ಯವನ್ನು ಕಲ್ಪಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
2/3
ಸಭೆಯಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀ ಎ. ಕೆಂಪೇಗೌಡ, ಉಪಾಧ್ಯಕ್ಷರಾದ ಶ್ರೀಮತಿ ರಫಿಯಾ ಸುಲ್ತಾನ್ ದಸ್ತಗೀರ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಗ್ರಾಮಸಭೆಯ ಸದಸ್ಯರು, ಸಾರ್ವಜನಿಕರು ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
3/3
#RDPR#RuralDevelopment#Gramasabha@eshwar_khandre
ಬೆಂಗಳೂರು ನಗರ ಜಿಲ್ಲೆ, ಯಲಹಂಕ ��ಾಲ್ಲೂಕಿನ ಬಾಗಲೂರು ಗ್ರಾ.ಪಂ 2026–27ನೇ ಸಾಲಿನ ಮೊದಲ ಹಂತದ ಗ್ರಾಮಸಭೆಯನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಸಭೆಯಲ್ಲಿ ಆಯ-ವ್ಯಯ ಮಂಡನೆ, ವಾರ್ಷಿಕ ಕ್ರಿಯಾ ಯೋಜನೆಗೆ ಅನುಮೋದನೆ, VB-GRAM G ಯೋಜನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಚರ್ಚಿಸಿ ಅಗತ್ಯ ನಿರ್ಣಯಗಳನ್ನು ಕೈಗೊಳ್ಳಲಾಯಿತು.
1/3
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಸ್ವಂತ ಸಂಪನ್ಮೂಲದಿಂದ ಪದವಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ಗಳನ್ನು ವಿತರಿಸಿ, ಅವರ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲಾಯಿತು.
2/3