विकसित भारत – जी राम जी ग्रामीण भारत का भविष्य है। इसका लक्ष्य सशक्त गाँव, सम्मानित मजदूर है। हमार�� संकल्प ग्राम स्वराज और आत्मनिर्भरता है, हमारा विजन ग्राम आधारित विकास है। हमारा उद्देश्य श्रम का सम्मान है। हमारा ध्येय जनभागीदारी और सामाजिक जवाबदेही है।
-माननीय केन्द्रीय ग्रामीण विकास और कृषि एवं किसान कल्याण मंत्री, श्री शिवराज सिंह चौहान
#VBGRAMG1July #VBGRAMG_1July #VBGRAMG #ViksitBharat_GRAMG #GRAMG #125days_RozgarKiNayiGuarantee #125daysGuarantee_G_RAM_G #ViksitBharat_G_RAM_G #MoRD #RuralEmployment #SchemesofRD
ವಿಕಸಿತ ಭಾರತ – ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಆಜೀವಿತ ಮಿಷನ್ ಗ್ರಾಮೀಣ (#VBGRAMG) ಯೋಜನೆ ಕುರಿತು @anssirdpr ತರಬೇತಿ ಕೇಂದ್ರದಲ್ಲಿ ಆಯೋಜಿಸಲಾದ ಮುಖ್ಯ ತರಬೇತುದಾರರ (Master Trainers) 2 ದಿನಗಳ ತರಬೇತಿ ಕಾರ್ಯಕ್ರಮವನ್ನು ಗ್ರಾಮೀಣಾಭಿವೃದ್ಧಿ ಆಯುಕ್ತರಾದ ಡಾ. ಅರುಂಧತಿ ಚಂದ್ರಶೇಖರ್ ಅವರು ಉದ್ಘಾಟಿಸಿದರು.
#ViksitBharat
ನರೇಗಾದಡಿ ಕೂಲಿಕಾರರ ಫೇಸ್ ಅಥೆಂಟಿಕೇಶನ್ ಹಾಜರಾತಿ ಜಾರಿ.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆಲಸ ಮಾಡುವ ಕೂಲಿಕಾರರಿಗೆ ಮುಖ ಗುರುತಿಸುವಿಕೆ ಆಧಾರಿತ ಹಾಜರಾತಿ ಪದ್ಧತಿಯನ್ನು ಜಾರಿಗೆ ತರಲಾಗಿದೆ. ಈ ಹೊಸ #NMMS Face Recognition ಆ್ಯಪ್ ಬಳಸುವ ವಿಧಾನ ಮತ್ತು ಸಂಪೂರ್ಣ ಮಾಹಿತಿಗಾಗಿ ಇದನ್ನು ಓದಿ.
#MGNREGA#DigitalIndia#ನರೇಗಾ
ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದಲ್ಲಿ ಇಂದು 77ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
ಗ್ರಾಮೀಣಾಭಿವೃದ್ಧಿ ಆಯುಕ್ತರಾದ ಡಾ. ಅರುಂಧತಿ ಚಂದ್ರಶೇಖರ್ ರವರು ಧ್ವಜಾರೋಹಣ ನಡೆಸಿದರು. ಆಯುಕ್ತಾಲಯದ ಹಿರಿಯ ಅಧಿಕಾರಿ - ಸಿಬ್ಬಂದಿಗಳು ಉಪಸ್ಥಿತರಿದ್ದರು.
#MGNREGA#RepublicDay2026
ದಾವಣಗೆರೆ ಜಿಲ್ಲೆಯ ಹೊನ್ನೂರು ಗ್ರಾಮ ಪಂಚಾ��ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಕೂಲಿಕಾರರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. 🩺🩺
ಶಿಬಿರದಲ್ಲಿ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಕ್ಷಯರೋಗ ಸೇರಿದಂತೆ ಅಸಾಂಕ್ರಾಮಿಕ ರೋಗಗಳ ತಪಾಸಣೆ ನಡೆಸಿ, ಮಾನಸಿಕ ಆರೋಗ್ಯದ ಕುರಿತು ಅರ���ವು ಮೂಡಿಸಲಾಯಿತು.
Constitution Day celebrated across Amrit Sarovars in Karnataka 🇮🇳💧
Children, youth, community members and #MGNREGA workers gathered around the #AmritSarovar to read the Preamble, take the Fundamental Duties pledge, display placards, and join discussions on water conservation.
"ಏಕ್ ದಿನ್, ಏಕ್ ಘಂಟಾ, ಏಕ್ ಸಾಥ್'' ಅಭಿಯಾನದ ಅಂಗವಾಗಿ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಭಾರತೀನಗರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆ.ಪಿ.ದೊಡ್ಡಿ ಗ್ರಾಮದಲ್ಲಿರುವ ಅಮೃತ ಸರೋವರವನ್ನು ಸ್ವಚ್ಛೋತ್ಸವದ ಪ್ರಯುಕ್ತ ಸ್ವಚ್ಚತೆ ಮಾಡಿರುವುದು.
#MGNREGA#SwachhBharat#cleaning#Shramdaan#AmritSarovar@MoRD_GoI
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಮೇಲಿನ��ೂಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತುರುವನಹಳ್ಳಿ ಗ್ರಾಮದ ಅಂಬರೀಶ್ ನರೇಗಾ ಯೋಜನೆಯಡಿ ರೂ. 70,000/- ಆರ್ಥಿಕ ನೆರವು ಪಡೆದು ಸುಸಜ್ಜಿತ ಕುರಿ ಶೆಡ್ ನಿರ್ಮಿಸಿಕೊಂಡು ಉತ್ತಮ ಆದಾಯ ಪಡೆಯುತ್ತಿದ್ದಾರೆ.
#MGNREGA #ruraldevelopment #farmers #sheepfarming
ತುಮಕೂರು ಜಿಲ್ಲೆಯ ಕುಣಿ��ಲ್ ತಾಲ್ಲೂಕಿನ ಕೊಡಿಗೆಹಳ್ಳಿ ಗ್ರಾಮದ ಬಸವಣ್ಣ ದೇವಸ್ಥಾನದ ಆವರಣದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಗಂಗರ ಕಾಲದ ಕಲ್ಯಾಣಿಯನ್ನು ಅಭಿವೃದ್ಧಿ ಪಡಿಸಲಾಗಿದೆ. ಯೋಜನೆಯಡಿ ಜಲಸಂಗ್ರಹಣಾ ರಚನೆಗಳನ್ನು ಅಭಿವೃದ್ಧಿ ಪಡಿಸುತ್ತಿದ್ದು, ಪಾರಂಪರಿಕ ಜಲಸಂಗ್ರಹಣಾ ರಚನೆಗಳು ಮೊದಲಿನ ಮೆರುಗು ಪಡೆ��ುತ್ತಿವೆ.
#MGNREGA
ಜನರ ಅನುಕೂಲಕ್ಕಾಗಿ “ಪ್ರಗತಿಪಥ“
ನಿಸರ್ಗ ಸಮತೋಲನಕ್ಕಾಗಿ “ಹಸಿರು ಪಥ“
ಅಭಿವೃದ್ಧಿಯು ನಿಸರ್ಗವನ್ನು ಒಳಗೊಂಡಾಗ ಮಾತ್ರ ಸ���ಸ್ಥಿರ ಬದುಕಿನ ಭರವಸೆಯನ್ನು ನೀಡಬಹುದು.
ಜನಪರತೆಯನ್ನು ತೋರುವ ದಾವಂತದಲ್ಲಿ ನಿಸರ್ಗದ ಹಿತಾಸಕ್ತಿಯನ್ನು ಮರೆಯಬಾರದು, ಜನಪರತೆಯೊಂದಿಗೆ ನಿಸರ್ಗಪರತೆಯನ್ನೂ ಸರಿದೂಗಿಸಿಕೊಂಡು ಹೋದಾಗ ಮಾತ್ರ ಮುಂದಿನ ಪೀಳಿಗೆಗೆ ಉತ್ತಮ ವಾತಾವರಣವನ್ನು ಉಳಿಸಬಹುದು.
ನಮ್ಮ ಮಹತ್ವಾಕಾಂಕ್ಷೆಯ ಹಸಿರು ಪಥ ಯೋಜನೆಯಡಿಯಲ್ಲಿ ನನ್ನ ಚಿತ್ತಾಪುರದ ಕ್ಷೇತ್ರದ ಗ್ರಾಮೀಣ ರಸ್ತೆಗಳ ಇಕ್ಕೆಲಗಳಲ್ಲಿ ಉತ್ತಮ ತಳಿಯ ಗಿಡಗಳನ್ನು ನೆಡಲಾಗಿದೆ.
ನೆಟ್ಟ ಗಿಡಗಳು ಹಸಿರೊಡೆದು ಕಂಗೊಳಿಸುತ್ತಿವೆ.
ಗಿಡಗಳನ್ನು ನೆಡ���ವುದಷ್ಟೇ ಅಲ್ಲ, ಅವುಗಳ ಪಾಲನೆ, ಪೋಷಣೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ನೆಟ್ಟಿರುವ ಗಿಡಗಳಿಗೆ ನಿಗಾ ವಹಿಸಲು ಜಿಯೋ ಟ್ಯಾಗಿಂಗ್ ವ್ಯವಸ್ಥೆ ಮಾಡಲಾಗಿದೆ.
ರಾಜ್ಯಾದ್ಯಂತ ಮೂರು ಕೋಟಿ ಗಿಡಗಳನ್ನು ನಡಲು ಕ್ರಮ ವಹಿಸಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ 28 ಲಕ್ಷ ಗಿಡಗಳನ್ನು ರಸ್ತೆ ಬದಿ ಹಾಗೂ ಸರ್ಕಾರಿ ಭೂಮಿಯಲ್ಲಿ ನೆಟ್ಟು ಪೋಷಿಸುವುದು ಹಸಿರು ಪಥ ಯೋಜನೆಯ ಉದ್ದೇಶ.
@eshwar_khandre
ರೈತ ದಂಪತಿಗಳಿಗೆ ಖುಷಿ ನೀಡಿದ ಡ್ರ್ಯಾಗನ್ ಕೃಷಿ
ಬಾಗಲಕೋಟೆ ಜಿಲ್ಲೆ ಇಳಕಲ್ಲ ತಾಲ್ಲೂಕಿನ ಹಿರೇಸಿಂಗನಗುತ್ತಿ ಗ್ರಾ. ಪಂ ಕೃಷ್ಣಾಪುರ ಗ್ರಾಮದ ಹಂಪಮ್ಮ ಪಂಪಣ್ಣ ಶಂಕರಗೋಳಿ ಅವರು ನರೇಗಾ ಯೋಜನೆಯಡಿ 1 ಏಕರೆ 30 ಗುಂಟೆಯಲ್ಲಿ ಡ್ರ್ಯಾಗನ್ ಕೃಷಿಯಿಂದ ಉತ್ತಮ ಆದಾಯ ಗಳಿಸುತ್ತಿದ್ದಾರೆ.
#MGNREGA#RuralDevelopment#horticulture#income
ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಹೇರೂರು ಗ್ರಾ. ಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯ 'ನಮ್ಮ ಹೊಲ ನಮ್ಮ ದಾರಿʼ ಕಾರ್ಯಕ್ರಮದಡಿ ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸಲು ರಸ್ತೆ ಅಭಿವೃದ್ಧಿ ಪಡಿಸಲಾಗಿದೆ. ಇದರಿಂದಾಗಿ ಗ್ರಾಮೀಣ ರೈತರಿಗೆ ತಾವು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ಬಂಡಿ & ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗಿದೆ.
ಮಹಾತ್ಮ ಗಾಂಧಿ ನರೇಗಾ ಯೋಜನೆಯ ಅನುಷ್ಠಾನದ ಸಂಬಂಧದಲ್ಲಿ ಸ್ವೀಕೃತವಾಗುವ ದೂರುಗಳ ವಿಲೇವಾರಿ & ಕುಂದು ಕೊರತೆಗಳ ನಿವಾರಣೆಗಾಗಿ ವಿವಿಧ ಜಿಲ್ಲೆಗಳಲ್ಲಿ ಓಂಬುಡ್ಸ್ ಪರ್ಸನ್ಸ್ ಹುದ��ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ��ಸಕ್ತರು https://t.co/xzqfV4oZWz ನಲ್ಲಿ ಅಧಿಸೂಚನೆ & ಅರ್ಜಿ ನಮೂನೆ ಪಡೆಯಬಹುದು.
#MGNREGA #jobs @KarnatakaVarthe
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲ್ಲೂಕಿನ ನಾಗನೂರು ಗ್ರಾ. ಪಂ. ವ್ಯಾಪ್ತಿಯ ಕಲಕೇರಿ ಅರಣ್ಯ ಪ್ರದೇಶದಲ್ಲಿ ನರೇಗಾ ಯೋಜನೆಯಡಿ ನೈಸರ್ಗಿಕ ಸಂಪನ್ಮೂಲ ನಿರ್ವಹಣಾ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ. ಕಂದಕಗಳನ್ನು ನಿರ್ಮಿಸುವುದರಿಂದ ಮಳೆನೀರು ಇಂಗಿ, ಮಣ್ಣಿನ ತೇವಾಂಶ ಸಂರಕ್ಷಣೆಯಾಗುವುದಲ್ಲದೆ, ಅಂತರ್ಜಲ ಮಟ್ಟದಲ್ಲಿಯೂ ಹೆಚ್ಚಳವಾಗುತ್ತದೆ.