"ನಮ್ಮ ಸಮಾಜವನ್ನು ಮಾದಕ ವಸ್ತುಗಳಿಂದ ಮುಕ್ತಗೊಳಿಸಲು ನಿಮ್ಮ ಸಹಕಾರ ಅತ್ಯಂತ ಮುಖ್ಯ!"
ಕರ್ನಾಟಕ ಪೊಲೀಸ್ ಇಲಾಖೆಯಿಂದ KSP Mobile App ನಲ್ಲಿ “Drug-Free Karnataka” ಎಂಬ ಹೊಸ ಸೌಲಭ್ಯವನ್ನು ಪ್ರಾರಂಭಿಸಲಾಗಿದೆ.
ಡ್ರಗ್ಸ್ಗೆ ಸಂಬಂಧಿಸಿದ ಮಾಹಿತಿಗಳನ್ನು ಸಾರ್ವಜನಿಕರು ಸಂಪೂರ್ಣ ಗೌಪ್ಯವಾಗಿ ಸಲ್ಲಿಸಬಹುದು. ಮಾಹಿತಿದಾರರ ವಿವರಗಳನ್ನು ಕಡ್ಡಾಯವಾಗಿ ರಹಸ್ಯವಾಗಿರಿಸಲಾಗುತ್ತದೆ. ಬಾಧಿತರಿಗೆ ನೆರವು ಬೇಕಾದಲ್ಲಿ, ನಿಮ್ಹಾನ್ಸ್ ಸಹಾಯವಾಣಿ #14416 ಗೆ ಕರೆ ಮಾಡಿ.
ಡ್ರಗ್ಸ್ ಸಂಬಂಧಿತ ಅಪರಾಧಗಳ ಬಗ್ಗೆ ತಕ್ಷಣವೇ #1933 ಗೆ ಕರೆ ಮಾಡಿ ಅಥವಾ #112 ತುರ್ತುಸೇವೆಯನ್ನು ಸಂಪರ್ಕಿಸಿ. 👉 Say No to Drugs
@DgpKarnataka@BlrCityPolice@jt_cpeastbcp
#DrugFreeKarnataka #SayNoToDrugs #KarnatakaPolice #SafeSociety #SouthEastDivision
⚠️ ವಾಟ್ಸ್ಆ್ಯಪ್ ಬಳಕೆದಾರರಿಗೆ ಎಚ್ಚರಿಕೆ!
ವಾಟ್ಸ್ಆ್ಯಪ್ ವೆಬ್ ಬಳಸಿದ ನಂತರ ಕಡ್ಡಾಯವಾಗಿ ಲಾಗ್ಔಟ್ ಮಾಡಿ. ಇಲ್ಲವಾದರೆ ವಂಚಕರು ನಿಮ್ಮ ಖಾತೆಗೆ ಅನಧಿಕೃತವಾಗಿ ಪ್ರವೇಶಿಸಿ, ನಿಮ್ಮ ಹೆಸರಿನಲ್ಲಿ ಸಂದೇಶಗಳನ್ನು ಕಳುಹಿಸುವ ಅಪಾಯವಿದೆ.
ಎಚ್ಚರಿಕೆಯಿಂದಿರಿ – ಸುರಕ್ಷಿತವಾಗಿರಿ!
#WhatsAppSafety#CyberAwareness#StayAlert
@sgpalyaps ಮೆಟ್ರೋ ನಿಲ್ದಾಣದ ಬಳಿ ಒಂಟಿಯಾಗಿ ಅಲೆದಾಡುತ್ತಿದ್ದ 7 ವರ್ಷದ ಬಾಲಕನನ್ನು ಎಎಸ್ಐ ಲೋಕೇಶ್ ಮತ್ತು ಸಿಬ್ಬಂ��ಿ ಚೈತ್ರಾ ಅವರು ಗಮನಿಸಿ ಆತನ ವಿಳಾಸ ಹಾಗೂ ಮನೆಯ ಮಾಹಿತಿಯನ್ನು ತಿಳಿದು ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಅನುಸರಿಸಿ ಸುರಕ್ಷಿತವಾಗಿ ಪೋಷಕರಿಗೆ ಒಪ್ಪಿಸಿ ಮಾನವೀಯತೆ ಮೆರೆದರು.
ಪೊಲೀಸರ ಕರ್ತವ್ಯನಿಷ್ಠೆಗೆ ಇದೇ ಸಾಕ್ಷಿ
ಮಹಿಳೆಯರ ಸುರಕ್ಷತೆ ನಮ್ಮೆಲ್ಲರ ಹೊಣೆ! 👮♀️
ಮಹಿಳೆಯರ ಸುರಕ್ಷತೆ ಕೇವಲ ಜವಾಬ್ದಾರಿಯಲ್ಲ, ಅದು ಅವರ ಮೂಲಭೂತ ಹಕ್ಕು. ಯಾವುದೇ ರೀತಿಯ ಕಿರುಕುಳವನ್ನು ಸಹಿಸಿಕೊಳ್ಳಬೇಡಿ. ಧೈರ್ಯವಾಗಿ ದೂರು ನೀಡಿ.
🚨 ಅಪಾಯದ ಸಂದರ್ಭದಲ್ಲಿ ತಕ್ಷಣ 112 ಸಹಾಯವಾಣಿಗೆ ಕರೆ ಮಾಡಿ.
ನಿಮ್ಮ ಸುರಕ್ಷತೆ, ನಮ್ಮ ಆದ್ಯತೆ.
#WomenSafety#BengaluruCityPolice
ಸಾರ್ವಜನಿಕರ ಗಮನಕ್ಕೆ!
ಬೆಂಗಳೂರು ನಗರದಲ್ಲಿ ನೂತನವಾಗಿ ಐದು ಪೊಲೀಸ್ ಆಯುಕ್ತಾಲಯಗಳನ್ನು ರಚಿಸಲಾಗಿದ್ದು, ಸಾರ್ವಜನಿಕರು ತಮ್ಮ ಕುಂದುಕೊರತೆಗಳು, ಸಮಸ್ಯೆಗಳು ಹಾಗೂ ಅಹವಾಲುಗಳನ್ನು ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತರಲು ಬಯಸಿದ್ದಲ್ಲಿ, ಇನ್ನು ಮುಂದೆ ಮುಖ್ಯ ಪೊಲೀಸ್ ಆಯುಕ್ತರ ಕಚೇರಿ, ಇನ್ಫೆಂಟ್ರಿ ರಸ್ತೆಗೆ ಭೇಟಿ ನೀಡುವ ಬದಲಾಗಿ, ದಕ್ಷಿಣ ಪೊಲೀಸ್ ಆಯುಕ್ತರ ಕಚೇರಿ, ಕೋರಮಂಗಲಕ್ಕೆ ಭೇಟಿ ನೀಡಿ ತಮ್ಮ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ.
ಸಾರ್ವಜನಿಕರ ಸೇವೆ, ಸುರಕ್ಷತೆ ಮತ್ತು ಸಮಸ್ಯೆಗಳಿಗೆ ಸ್ಪಂದಿಸುವುದು ಬೆಂಗಳೂರು ನಗರ ಪೊಲೀಸ್ ಇಲಾಖೆಯ ಆದ್ಯತೆಯಾಗಿದೆ.
ಬೆಂಗಳೂರು ದಕ್ಷಿಣ ಪೊಲೀಸ್ ಆಯುಕ್ತಾಲಯಕ್ಕೆ ಹೊಸದಾಗಿ ಸೇರ್ಪಡೆಗೊಳ್ಳುತ್ತಿರುವ ಅತ್ತಿಬೆಲೆ ಮತ್ತು ಆನೇಕಲ್ ಪ್ರದೇಶಗಳಿಗೆ ಭೇಟಿ ನೀಡಿ, ಭೌಗೋಳಿಕ ಸ್ಥಿತಿಗತಿ ಹಾಗೂ ಪೊಲೀಸ್ ವ್ಯವಸ್ಥೆಯನ್ನು ಪರಿಶೀಲಿಸಿದೆ.
ವಿಶೇಷವಾಗಿ ಸಂಚಾರ ದಟ್ಟಣೆಯ ಸಮಯದಲ್ಲಿ ಹೊಸೂರು ರಸ್ತೆಯ ಚಂದಾಪುರ ಜಂಕ್ಷನ್ ಹಾಗೂ ಇತರೆ ಪ್ರಮುಖ ಸ್ಥಳಗಳಲ್ಲಿನ ಸಂಚಾರ ಪರಿಸ್ಥ���ತಿಯನ್ನು ಖುದ್ದಾಗಿ ಪರಿಶೀಲಿಸಿದೆ.
ಸಂಚಾರ ದಟ್ಟಣೆ ನಿವಾರಣೆ, ಸುಗಮ ವಾಹನ ಸಂಚಾರ, ಅಪರಾಧ ನಿಯಂತ್ರಣ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು
#BengaluruSouthPolice #TrafficManagement
Visited Attibele and Anekal, which are newly being brought under the jurisdiction of the Bengaluru South Police Commissionerate, to assess the geographical conditions and existing policing arrangements.
Personally inspected traffic conditions during peak hours, particularly at Chandapura Junction on Hosur Road and other key locations.
Discussed with officers on taking necessary measures to ease traffic congestion, ensure smooth vehicular movement, strengthen crime prevention, and maintain law and order.
#BengaluruSouthPolice #TrafficManagement
@CCP_Blr @Vamsikrishnaips @BlrCityPolice @KarnatakaCops
ಬೆಂಗಳೂರು ನಗರದ ದಕ್ಷಿಣ ಪೊಲೀಸ್ ಆಯುಕ್ತರಾದ ಸಿ. ವಂಶಿಕೃಷ್ಣ, ಐಪಿಎಸ್ ರವರು ಇಂದು ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಉಪ ಪೊಲೀಸ್ ಆಯುಕ್ತರ ಕ��ೇರಿ, ಹೆಬ್ಬಗೋಡಿಗೆ ಭೇಟಿ ನೀಡಿ ಕಚೇರಿಯ ಕಾರ್ಯನಿರ್ವಹಣೆ, ವಿಭಾಗದ ಆಡಳಿತಾತ್ಮಕ ವ್ಯವಸ್ಥೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯ ಸ್ಥಿತಿಗತಿಗಳ ಕುರಿತು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ವಿಭಾಗದ ಪೊಲೀಸ್ ಠಾಣೆಗಳ ಕಾರ್ಯವೈಖರಿ, ಸಿಬ್ಬಂದಿಗಳ ನಿಯೋಜನೆ, ಸಾರ್ವಜನಿಕರ ಸುರಕ್ಷತೆ, ಅಪರಾಧ ನಿಯಂತ್ರಣ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಕಾಪಾಡುವ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಅಲ್ಲದೆ, ವಿಭಾಗದಲ್ಲಿ ಪೊಲ��ಸ್ ಸಿಬ್ಬಂದಿಗಳ ಕೊರತೆಯನ್ನು ನೀಗಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿ, ಪೊಲೀಸ್ ಕಾರ್ಯನಿರ್ವಹಣೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಸುಧಾರಿಸುವ ನಿಟ್ಟಿನಲ್ಲಿ ಸೂಕ್ತ ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ ಎಂ. ನಾರಾಯಣ, ಐಪಿಎಸ್, ಸಂಚಾರ ವಿಭಾಗದ ಡಿಸಿಪಿ ಗೋಪಾಲ್ ಎಂ. ಬ್ಯಾಕೋಡ್, ಐಪಿಎಸ್ ಹಾಗೂ ಇತರೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಬೆಂಗಳೂರು ನಗರದ ��ಡಳಿತಾತ್ಮಕ ಕಾರ್ಯಕ್ಷಮತೆ ಹೆಚ್ಚಿಸುವ ನಿಟ್ಟಿನಲ್ಲಿ ನೂತನವಾಗಿ “ಪೊಲೀಸ್ ಆಯುಕ್ತರು, ದಕ್ಷಿಣ ಬೆಂಗಳೂರು ನಗರ” ಆಯುಕ್ತಾಲಯ ಸ್ಥಾಪಿಸಿ ರಾಜ್ಯ ಸರ್ಕಾರವು ಅಧಿಕೃತ ರಾಜ್ಯಪತ್ರ ಹೊರಡಿಸಿದೆ.
ಈ ನೂತನ ಆಯುಕ್ತಾಲಯದ ವ್ಯಾಪ್ತಿಗೆ ಆಗ್ನೇಯ ವಿಭಾಗದ ಕೋರಮಂಗಲ ಪೊಲೀಸ್ ಠಾಣೆಯನ್ನು ಸೇರ್ಪಡೆಗೊಳಿಸಲಾಗಿದೆ.
ಆಗ್ನೇಯ ವಿಭಾಗದ ವ್ಯಾಪ್ತಿಗೆ ಒಳಪಡುವ ಸಹಾಯಕ ಪೊಲೀಸ್ ಆಯುಕ್ತರ ಕಚೇರಿಗಳು ಹಾಗೂ ಪೊಲೀಸ್ ಠಾಣೆಗಳ ವಿವರಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಇಲ್ಲಿ ಪ್ರಕಟಿಸಲಾಗಿದೆ.
ಸುರಕ್ಷಿತ ಸಮಾಜ, ಜನಸ್ನೇಹಿ ಪೊಲೀಸ್ ಸೇವೆ – ನಮ್ಮ ಸಂಕಲ್ಪ.
ಬೆಂಗಳೂರು ನಗರದ ಆಡಳಿತಾತ್ಮಕ ಅನುಕೂಲತೆ ಹಾಗೂ ಪೊಲೀಸ್ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ನೂತನವಾಗಿ “ಪೊಲೀಸ್ ಆಯುಕ್ತರು, ದಕ್ಷಿಣ ಬೆಂಗಳೂರು ನಗರ” ಸ್ಥಾಪಿಸಿ ಅಧಿಕೃತ ರಾಜ್ಯಪತ್ರ ಹೊರಡಿಸಿದೆ. ಈ ನೂತನ ಪೊಲೀಸ್ ಆಯುಕ್ತರ ವ್ಯಾಪ್ತಿಗೆ ಆಗ್ನೇಯ ವಿಭಾಗವನ್ನು ಸೇರ್ಪಡೆಗೊಳಿಸಲಾಗಿದೆ.
ಈ ದಿನ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ಮಾನ್ಯ ಪೊಲೀಸ್ ಆಯುಕ್ತರು, ದಕ್ಷಿಣ, ಬೆಂಗಳೂರು ನಗರ ರವರ ಆದೇಶದ ಮೇರೆಗೆ ಠಾಣೆಯಲ್ಲಿ ಕರ್ತವ್ಯಕ್ಕೆ ಸಂಬಂಧಿಸಿದ ನಿರ್ದೇಶನ ಸಭೆಯನ್ನು ನಡೆಸಲಾಯಿತು. @CityAcp@DCPSEBCP@DCP_ECITY@BlrCityPolice
ಎಚ್ಚರಿಕೆಯಿಂದಿರಿ, ಸುರಕ್ಷಿತವಾಗಿರಿ! ನಿಮ್ಮ ಬ್ಯಾಂಕ್ ಖಾತೆಯ ವಹಿವಾಟು ವಿವರಗಳನ್ನು ನಿಯಮಿತವಾಗಿ ಪರಿಶೀಲಿಸಿ, ಪ್ರತಿಯೊಂದು ವಹಿವಾಟಿನ ಮೇಲೂ ನಿಗಾ ಇರಿಸಿ ಅನಧಿಕೃತ ವಹಿವಾಟುಗಳು ಕಂಡುಬಂದಲ್ಲಿ ತಕ್ಷಣವೇ ನಿಮ್ಮ ಬ್ಯಾಂಕ್ಗೆ ವರದಿ ಮಾಡಿ.
ಸ್ವಲ್ಪ ಎಚ್ಚರಿಕೆ ಕ್ರಮವು ನಿಮ್ಮ ಕಷ್ಟ��ಟ್ಟು ಗಳಿಸಿದ ಹಣವನ್ನು ವಂಚನೆಯಿಂದ ರಕ್ಷಿಸುತ್ತದೆ.
ಇಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @DKShivakumar ಅವರು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ, ಬೆಂಗಳೂರು ನಗರ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ, ನಗರದ ಕಾನೂನು ಸುವ್ಯವಸ್ಥೆ ಹಾಗೂ ಸುರಕ್ಷತಾ ಕ್ರಮಗಳ ಕುರಿತು ಮಹತ್ವದ ಚರ್ಚೆ ನಡೆಸಿದರು.
ಈ ವೇಳೆ ಉಪಮುಖ್ಯಮಂತ್ರಿಗಳಾದ ಡಾ.ಜಿ. ಪರಮೇಶ್ವರ, ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ, ಶ್ರೀ ಕೃಷ್ಣ ಬೈರೇಗೌಡ, ಶ್ರೀ ಭೈರತಿ ಸುರೇಶ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ನೂತನ ಮುಖ್ಯ ಪೊಲೀಸ್ ಆಯುಕ್ತರಾದ ಆರ್. ಹಿತೇಂದ್ರ, ಸಂಚಾರ ಹಾಗೂ ರೌಡಿ ನಿಗ್ರಹ ದಳದ ಆಯುಕ್ತರಾದ ಹೇಮಂತ್ ಎಂ. ನಿಂಬಾಳ್ಕರ್, ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕರಾದ ಡಾ. ಎಂ.ಎ. ಸಲೀಂ ಸೇರಿದಂತೆ ಹಲವು ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ, ಬೆಂಗಳೂರು ನಗರ ಹಿರಿಯ ಪೊ���ೀಸ್ ಅಧಿಕಾರಿಗಳ ಸಭೆ ನಡೆಸಿ, ನಗರದ ಕಾನೂನು ಸುವ್ಯವಸ್ಥೆ ಹಾಗೂ ಸುರಕ್ಷತಾ ಕ್ರಮಗಳ ಕುರಿತು ಮಹತ್ವದ ಚರ್ಚೆ ನಡೆಸಿದೆನು.
ಈ ವೇಳೆ ಉಪಮುಖ್ಯಮಂತ್ರಿಗಳಾದ ಡಾ.ಜಿ. ಪರಮೇಶ್ವರ, ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ, ಶ್ರೀ ಕೃಷ್ಣ ಬೈರೇಗೌಡ, ಶ್ರೀ ಭೈರತಿ ಸುರೇಶ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ನೂತನ ಮುಖ್ಯ ಪೊಲೀಸ್ ಆಯುಕ್ತರಾದ ಆರ್. ಹಿತೇಂದ್ರ, ಸಂಚಾರ ಹಾಗೂ ರೌಡಿ ನಿಗ್ರಹ ದಳದ ಆಯುಕ್ತರಾದ ಹೇಮಂತ್ ಎಂ. ನಿಂಬಾಳ್ಕರ್, ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕರಾದ ಡಾ. ಎಂ.ಎ. ಸಲೀಂ ಸೇರಿದಂತೆ ಹಲವು ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಬೆಂಗಳೂರು ನಗರ ಮುಖ್ಯ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಲು ನನಗೆ ಅತೀವ ಗೌರವ ಮತ್ತು ಹೆಮ್ಮೆ ಎನಿಸುತ್ತಿದೆ.
ಆಳವಾದ ಜವಾಬ್ದಾರಿಯ ಅರಿವಿನೊಂದಿಗೆ, ಬೆಂಗ���ೂರಿನ ಜನತೆಯ ಸೇವೆ ಮಾಡಲು, ಸಾರ್ವಜನಿಕರ ವಿಶ್ವಾಸವನ್ನು ಮತ್ತಷ್ಟು ಗಟ್ಟಿಗೊಳಿಸಲು, ಪ್ರತಿಯೊಬ್ಬ ನಾಗರಿಕನ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಲು ಹಾಗೂ ಸುರಕ್ಷಿತ, ಭದ್ರ ಮತ್ತು ನಾಗರಿಕ ಸ್ನೇಹಿ ನಗರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಶ್ರಮಿಸಲು ನಾನು ಎದುರು ನೋಡುತ್ತಿದ್ದೇನೆ.
ನಾವೆಲ್ಲರೂ ಒಟ್ಟಾಗಿ, ಸುರಕ್ಷತೆ, ವಿಶ್ವಾಸ ಮತ್ತು ಸೇವೆಗೆ ಮೊದಲ ಆದ್ಯತೆ ನೀಡುವ ಬೆಂಗಳೂರನ್ನು ನಿರ್ಮಿಸುವುದನ್ನು ಮುಂದುವರಿಸೋಣ.
I am honoured and privileged to assume charge as the Chief Commissioner of Police, Bengaluru City.
With a deep sense of responsibility, I look forward to serving the people of Bengaluru, strengthening public trust, ensuring the safety and security of every citizen, and working towards a safer, more secure and citizen-friendly city.
Together, let us continue building a Bengaluru where safety, trust and service remain our foremost priorities.
#HonouredToServe #ServingBengaluru #BengaluruCityPolice #PublicSafety #PeopleFirst
ಸಮನ್ವಯದ ಮೂಲಕ ಪೊಲೀಸ್ ವ್ಯವಸ್ಥೆಯ ಬಲವರ್ಧನೆ!
ಬೆಂಗಳೂರ�� ನಗರ ಮುಖ್ಯ ಪೊಲೀಸ್ ಆಯುಕ್ತರಾದ ಶ್ರೀ ಆರ್. ಹಿತೇಂದ್ರ, ಐ.ಪಿ.ಎಸ್., ಅವರು ಐವರು ಪೊಲೀಸ್ ಆಯುಕ್ತರೊಂದಿಗೆ ಕರ್ನಾಟಕದ ಮಾನ್ಯ ಗೃಹ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿದರು.
ಬೆಂಗಳೂರು ನಗರ ಪೊಲೀಸ್ ಇಲಾಖೆಯನ್ನು ಐದು ಕಮಿಷನರೇಟ್ಗಳಾಗಿ ಪುನರ್ರಚಿಸಿದ ಹಿನ್ನೆಲೆಯಲ್ಲಿ ನಡೆದ ಈ ಔಪಚಾರಿಕ ಭೇಟಿಯು, ಪರಿಣಾಮಕಾರಿ ಸಮನ್ವಯ, ಬಲಿಷ್ಠ ಕಾನೂನು ಪಾಲನೆ, ಸಾರ್ವಜನಿಕ ಸುರಕ್ಷತೆ ಮತ್ತು ನಾಗರಿಕ ಕೇಂದ್ರಿತ ಪೊಲೀಸ್ ಸೇವೆಯ ಬದ್ಧತೆಯನ್ನು ಮತ್ತೊಮ್ಮೆ ದೃ��ಪಡಿಸಿತು.
Strengthening Policing Through Coordination!
Sri R. Hithendra, IPS, Chief Commissioner of Police, Bengaluru City, along with the five Commissioners of Police, met Shri Priyank Kharge, Hon’ble Home Minister of Karnataka.
The meeting marked a formal interaction following the restructuring of Bengaluru City Police into five commissionerates, reaffirming the commitment to effective coordination, strengthened law enforcement, public safety and citizen-centric policing.
#BengaluruCityPolice #KarnatakaPolice #PublicSafety #PoliceCoordination
ಬೆಂಗಳೂರು ಪೊಲೀಸ್ ಇಲಾಖೆಯ ನೂತನ ಪೊಲೀಸ್ ಆಯುಕ್ತರೊಂದಿಗೆ ಸಭೆ ನಡೆಸಿ, ನಗರದ ಕಾನೂನು ಮತ್ತು ಸುವ್ಯವಸ್ಥೆ, ಮಹಿಳಾ ಸುರಕ್ಷತೆ, ಅಪರಾಧ ನಿಯಂತ್ರಣ ಹಾಗೂ ಪೊಲೀಸ್ ಇಲಾಖೆಯ ಕಾರ್ಯಕ್ಷಮತೆ ಹೆಚ್ಚಿಸುವ ಕುರಿತು ಹಲವು ಮಹತ್ವದ ನಿರ್ದೇಶನಗಳನ್ನು ನೀಡಲಾಯಿತು.
ಸಭೆಯಲ್ಲಿ ನೀಡಿದ ಪ್ರಮುಖ ನಿರ್ದೇಶನಗಳು:
- ಹೊಸ ಪೊಲೀಸ್ ಆಯುಕ್ತರೇಟ್ಗಳ ವ್ಯಾಪ್ತಿಯನ್ನು ಸ್ಪಷ್ಟವಾಗಿ ಗುರುತಿಸಿ, ಆಡಳಿತ ಮತ್ತು ಕಾರ್ಯಾಚರಣೆಯಲ್ಲಿ ಸಮನ್ವಯ ಸಾಧಿಸಬೇಕು.
- ಬೆಂಗಳೂರು ಐಟಿ-ಬಿಟಿ ಹಬ್ ಆಗಿರುವುದರಿಂದ ಮಹಿಳಾ ಉದ್ಯೋಗಿಗಳು, ಟೆಕ್ಕಿಗಳು ಹಾಗೂ ಹೂಡಿಕೆದಾರರ ಸುರಕ್ಷತೆಗೆ ವಿಶೇಷ ಒತ್ತು ನೀಡಬೇಕು.
- ದ್ವೇಷ ಭಾಷಣಗಳಿಗೆ ಕಡಿವಾಣ ಹಾಕಬೇಕು. ನೈತಿಕ ಪೊಲೀಸ್ಗಿರಿಯನ್ನು ಯಾವುದೇ ಕಾರಣಕ್ಕೂ ಸಹಿಸಬಾರದು.
- ಪ್ರತಿ ಪೊಲೀಸ್ ಠಾಣೆಯ ವ್ಯಾಪ್ತಿಯ ಪ್ರಮುಖ ರೌಡಿಶೀಟರ್ಗಳನ್ನು ಗುರುತಿಸಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಂಡು ವರದಿ ���ಲ್ಲಿಸಬೇಕು.
- ಸೈಬರ್ ಅಪರಾಧಗಳ ನಿಯಂತ್ರಣಕ್ಕೆ ಹೆಚ್ಚಿನ ಗಮನ ನೀಡಬೇಕು.
- ಡ್ಯಾನ್ಸ್ ಬಾರ್ಗಳು, ಕ್ಲಬ್ಗಳು ಮತ್ತು ಪಬ್ಗಳ ಚಟುವಟಿಕೆಗಳ ಮೇಲೆ ನಿರಂತರ ನಿಗಾ ಇರಿಸಬೇಕು.
- ಅಪಾರ್ಟ್ಮೆಂಟ್ಗಳು, ಖಾಸಗಿ ಬಡಾವಣೆಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳ ಮೇಲೆ ನಿಗಾ ವಹಿಸಬೇಕು.
- ರಾತ್ರಿ ವೇಳೆ ಮಹಿಳೆಯರು ಮತ್ತು ಸಾರ್ವಜನಿಕರ ಸುರಕ್ಷಿತ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು.
- ಸಂಚಾರ ನಿರ್ವಹಣೆ, ಪೊಲೀಸ್ ಗಸ್ತು ಮತ್ತು ಸಾರ್ವಜನ���ಕ ಸ್ಥಳಗಳಲ್ಲಿ ��ೊಲೀಸರ ಗೋಚರತೆಯನ್ನು ಹೆಚ್ಚಿಸಬೇಕು.
- ನಗರದ ಎಲ್ಲ ಪೊಲೀಸ್ ಠಾಣೆಗಳ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಲು ರೇಟಿಂಗ್ ವ್ಯವಸ್ಥೆ ರೂಪಿಸಬೇಕು. ಪ್ರತಿ ತಿಂಗಳು ಪರಿಶೀಲನಾ ಸಭೆ ನಡೆಸಲಾಗುವುದು.
- ಬೆಂಗಳೂರಿನಲ್ಲಿ ಪೊಲೀಸ್ ಸಿಬ್ಬಂದಿ ಕೊರತೆಯನ್ನು ನೀಗಿಸಲು ಪ್ರತಿ ವರ್ಷ ನೇಮಕಾತಿ ನಡೆಸುವ ಕುರಿತು ವ್ಯವಸ್ಥಿತ ನೀತಿ ರೂಪಿಸಲಾಗಿದ್ದು, ಈಗಾಗಲೇ ಸುಮಾರು 8,000 ಪೊಲೀಸ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಕೈಗೊಂಡಿದ್ದು, ಐದು ಪೊಲೀಸ್ ಆಯುಕ್ತರೇಟ್ಗಳ ರಚನೆಯ ನಂತರ ಹೆ��್ಚಿರುವ ನಿರೀಕ್ಷೆಗಳಿಗೆ ತಕ್ಕಂತೆ ಇಲಾಖೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸಬೇಕು.
- ಪೊಲೀಸ್ ಸಿಬ್ಬಂದಿಯ ವಸತಿ ಸೇರಿದಂತೆ ಕಲ್ಯಾಣ ಸೌಲಭ್ಯಗಳಿಗೂ ಗಮನ ನೀಡಬೇಕು. ಗೃಹ ಇಲಾಖೆಯ ಅಧೀನದಲ್ಲಿರುವ ಐದು ಆಯೋಗಗಳು ತಮ್ಮ ಉದ್ದೇಶಿತ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು.
ಪೊಲೀಸ್ ಇಲಾಖೆ ಕೇವಲ ಕಾನೂನು ಜಾರಿಗೊಳಿಸುವ ವ್ಯವಸ್ಥೆಯಲ್ಲ; ಅದು ಜನರ ಸುರಕ್ಷತೆ ಮತ್ತು ಪ್ರಜಾಸೇವೆಯ ಪ್ರಮುಖ ಹೊಣೆಗಾರಿಕೆಯನ್ನು ಹೊಂದಿದೆ. ಬೆಂಗಳೂರು ನಗರದ ಭ��್ರತೆ, ಮಹಿಳೆಯರ ಸುರಕ್ಷತೆ, ಹೂಡಿಕೆದಾರರ ವಿಶ್ವಾಸ ಮತ್ತು ಸಾರ್ವಜನಿಕರ ನೆಮ್ಮದಿಯನ್ನು ಕಾಪಾಡಲು ಪೊಲೀಸ್ ಇಲಾಖೆ ಇನ್ನಷ್ಟು ಸಮರ್ಥವಾಗಿ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದೆ.
ದಕ್ಷಿಣ ಬೆಂಗಳೂರು ನಗರದ ಮೊದಲ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸುತ್ತಿರುವುದು ನನಗೆ ಅತ್ಯಂತ ಗೌರವ ಮತ್ತು ಹೆಮ್ಮೆಯ ವಿಷಯ.
ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ಜವಾಬ್ದಾರಿಯುತ ಆಡಳಿತಕ್ಕೆ ನಾನು ಬದ್ಧನಾಗಿದ್ದೇನೆ. ಸಾರ್ವಜನಿಕರ ಸುರಕ್ಷತೆ, ಸುರಕ್ಷಿತ ಮತ್ತು ಸುಗಮ ಸಂಚಾರ, ಮಹಿಳೆಯರ ರಕ್ಷಣೆ, ದೂರುಗಳಿಗೆ ತ್ವರಿತ ಸ್ಪಂದನೆ, ಸಂತ್ರಸ್ತರ ನೋವಿಗೆ ಸ್ಪಂದಿಸುವ ಮಾನವೀಯ ಪೊಲೀಸ್ ಸೇವೆ ಹಾಗೂ ಮಾದಕವಸ್ತು ಮುಕ್ತ ಕರ್ನಾಟಕ ನಿರ್ಮಾಣ ನನ್ನ ಪ್ರಮುಖ ಆದ್ಯತೆಗಳಾಗಿವೆ.
ಜನರ ವಿಶ್ವಾಸವೇ ನಮ್ಮ ಶಕ್ತಿ, ಜನಸೇವೆಯೇ ನಮ್ಮ ಕರ್ತವ್ಯ, ಸುರಕ್ಷತೆಯೇ ನಮ್ಮೆಲ್ಲರ ಜವಾಬ್ದಾರಿ.
ಪ್ರತಿಯೊಬ್ಬ ನಾಗರಿಕರೂ ಮುಂದೆ ಬಂದು ನಮ್ಮೊಂದಿಗೆ ಕೈಜೋಡಿಸಬೇಕು. ನಾವೆಲ್ಲರೂ ಒಟ್ಟಾಗಿ ಸುರಕ್ಷಿತ, ಶಾಂತಿಯುತ ಮತ್ತು ಉತ್ತಮ ಬೆಂಗಳೂರನ್ನು ನಿರ್ಮಿಸೋಣ.
Honoured and privileged to assume charge as the first Commissioner of Police, South Bengaluru City.
Guided by fairness, transparency and accountability, I am committed to ensuring public safety, safe and smooth mobility, prioritising women’s safety, delivering swift responses, promoting sensitive and victim-centric policing, and working towards a Drug-Free Karnataka.
Public trust is our strength, service is our duty, and safety is our shared responsibility.
I invite every citizen to come forward, join hands with us and be an active partner in building a safer, stronger and more secure Bengaluru.
ಮಾನ್ಯ ಪೊಲೀಸ್ ಆಯುಕ್ತರು, ದಕ್ಷಿಣ ಬೆಂಗಳೂರು ನಗರ ರವರ ನಿರ್ದೇಶನದಂತೆ, ಪಬ್, ಬಾರ್, ಜನಸಂದಣಿ ಪ್ರದೇಶಗಳಲ್ಲಿ ಕಾಲ್ನಡಿಗೆ ಗಸ್ತು ನಡೆಸಿ, ಅನುಮಾನಾಸ್ಪದ ವ್ಯಕ್ತಿಗಳು ಮತ್ತು ವಾಹನ ತಪಾಸಣೆ ಮಾಡಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ COTPA ಕಾಯ್ದೆಯಡಿ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಯಿತು. @DCPSEBCP@DCP_ECITY
ಕಾನೂನು ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ಅಪರಾಧಿಕ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ದಿನ ಮೈಕೋಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ #Footpatrolling ಮಾಡಲಾಯಿತು. @DCPSEBCP@BlrCityPolice
A warm welcome and best wishes to Sri. C. Vamsi Krishna, IPS, on assuming charge as the Commissioner of Police, South Bengaluru City. He officially took charge at the Koramangala Office
ದಕ್ಷಿಣ ಬೆಂಗಳೂರು ನಗರದ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಶ್ರೀ. ಸಿ. ವಂಶಿ ಕೃಷ್ಣ, ಐಪಿಎಸ್ ಅವರಿಗೆ ಆತ್ಮೀಯ ಸ್ವಾಗತ ಮತ್ತು ಶುಭಾಶಯಗಳು. ��ೋರಮಂಗಲ ಕಚೇರಿಯಲ್ಲಿ ಅವರು ಅಧಿಕೃತವಾಗಿ ಅಧಿಕಾರ ವಹಿಸಿಕೊಂಡಿರುತ್ತಾರೆ.