Official Twitter account of DCP, West Division (ಉಪ ಪೊಲೀಸ್ ಆಯುಕ್ತರು, ಪಶ್ಚಿಮ ವಿಭಾಗ)Dial Namma-112 in case of emergency, Help us to serve you better @BlrCityPolice
#RowdyChecking#AreaDomination#SpecialDrive
ಪಶ್ಚಿಮ ವಿಭಾಗದ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಿನ್ನೆ ತಡರಾತ್ರಿ 84 ರೌಡಿಗಳ ತಪಾಸಣೆ, ಸಂಶಯಸ್ಪದ 23 ದ್ವಿಚಕ್ರ ವಾಹನಗಳ ವಶಪಡಿಸಿಕೊಂಡು ವ್ಯಾಪಕ ಗಸ್ತು ನಡೆಸಲಾಗಿರುತ್ತದೆ.
ಅಪರಾಧ ಗಳಿಗೆ ಕಡಿವಾಣ ಹಾಕಿ ಸಾರ್ವಜನಿಕರ ಸುರಕ್ಷತೆಗಾಗಿ ವಿಶೇಷ ಕಾರ್ಯಚರಣೆಯನ್ನು ನಡೆಸಲಾಯಿತು.
#StopChildLabour
ಮಕ್ಕಳ ಬಾಲ್ಯವು ಕೆಲಸಕ್ಕಾಗಿ ಅಲ್ಲ, ಕಲಿಕೆಗಾಗಿ.
ಮಕ್ಕಳನ್ನು ಬಾಲಕಾರ್ಮಿಕರಾಗಿ ಬಳಸದೆ, ಅವರ ಶಿಕ್ಷಣ, ಸುರಕ್ಷತೆ ಮತ್ತು ಹಕ್ಕುಗಳನ್ನು ರಕ್ಷಿಸೋಣ.
ಮಕ್ಕಳನ್ನು ರಕ್ಷಿಸಿ-ಶಿಕ್ಷಣ ನೀಡಿ- ಭವಿಷ್ಯ ರೂಪಿಸಿ. ಬಾಲಕಾರ್ಮಿಕರನ್ನು ಗಮನಿಸಿದಲ್ಲಿ, ತಕ್ಷಣ Namma 112 ಗೆ ವರದಿ ಮಾಡಿ @BlrCityPolice.
#Annualinspection@VijayanagaraPS#ವಿಜಯನಗರ ಪೊಲೀಸ್ ಠಾಣೆಯ ವಾರ್ಷಿಕ ಪರಿವೀಕ್ಷಣೆ ನಡೆಸಿ, ಠಾಣಾ ದಾಖಲಾತಿಗಳ ನಿರ್ವಹಣೆ, ಪ್ರಕರಣಗಳ ತನಿಖೆ ಪ್ರಗತಿ, ಅಪರಾಧ ತಡೆ & ಪತ್ತೆ ಹಾಗೂ ಕಾನೂನು &ಸುವ್ಯವಸ್ಥೆ ಪರಿಶೀಲಿಸಲಾಯಿತು.
ಜನಸ್ನೇಹಿ ಪೊಲೀಸ್ ಸೇವೆ ಒದಗಿಸಲು ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಲಾಯಿತು @BlrCityPolice.
#FraudAlertAwareness, ಡೇಟಿಂಗ್ ಆಪ್ ಗಳ ಬಗ್ಗೆ ಎಚ್ಚರವಿರಲಿ
ಆನ್ ಲೈನ್ ನಲ್ಲಿ ಪರಿಚಯವಾದ ವ್ಯಕ್ತಿಯನ್ನು ತಕ್ಷಣ ನಂಬಬೇಡಿ. ನಕಲಿ ಪ್ರೊಫೈಲ್ ಗಳು, ಪ್ರೀತಿಯ ಹೆಸರಿನಲ್ಲಿ ಹಣದ ಬೇಡಿಕೆ, ಕ್ರಿಪ್ಟೋ/ಹೂಡಿಕೆ ವಂಚನೆ, ನಕಲಿ ಗಿಫ್ಟ್/ಪಾರ್ಸೆಲ್ ಶುಲ್ಕ ಹಾಗೂ ಖಾಸಗಿ ಫೋಟೋಗಳ ಮೂಲಕ ವಂಚನೆಗೆ ಒಳಗಾಗುವ ಸಾಧ್ಯತೆ ಇದೆ @BlrCityPolice.
ಬಾಲಕಾರ್ಮಿಕ ಪದ್ಧತಿ ವಿರುದ್ಧ ವಿಶೇಷ ಕಾರ್ಯಾಚರಣೆ.
ಪಶ್ಚಿಮ ವಿಭಾಗದ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯ ಒಟ್ಟು 778 ಸ್ಥಳಗಳ ತಪಾಸಣೆ ನಡೆಸಿ 83 ಬಾಲಕಾರ್ಮಿಕರನ್ನು ಪತ್ತೆಹಚ್ಚಿ ರಕ್ಷಿಸಲಾಗಿದೆ @BlrCityPolice
ಮಕ್ಕಳನ್ನು ಕಾರ್ಮಿಕರಾಗಿ ಬಳಸುವುದು ಕಾನೂನುಬಾಹಿರ. ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ.
#TeachersDay
ಜ್ಞಾನ, ಶಿಸ್ತು ಮತ್ತು ಮೌಲ್ಯಗಳ ಮೂಲಕ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಶಿಕ್ಷಕರು, ಜವಾಬ್ದಾರಿಯುತ ನಾಗರಿಕರ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ.
ಜವಾಬ್ದಾರಿಯುತ ನಾಗರಿಕರೇ ಸುರಕ್ಷಿತ ಸಮಾಜದ ಬುನಾದಿ. ಸಮಸ್ತ ಶಿಕ್ಷಕರಿಗೆ #ಶಿಕ್ಷಕರದಿನಾಚರಣೆ ಯ ಹಾರ್ದಿಕ ಶುಭಾಶಯಗಳು @BlrCityPolice.
#CrimeAwareness#CounterfeitCurrencyNote
ನೋಟು ಸ್ವೀಕರಿಸುವ ಮೊದಲು ಪರಿಶೀಲಿಸಿ. ನೋಟಿನ ಕಾಗದದ ಗುಣಮಟ್ಟ, ವಾಟರ್ಮಾರ್ಕ್, ಸೆಕ್ಯುರಿಟಿ ಥ್ರೆಡ್, ಬಣ್ಣ ಬದಲಾವಣೆಯ ಭದ್ರತಾ ವೈಶಿಷ್ಟ್ಯಗಳು & ಸೀರಿಯಲ್ ನಂಬರ್ ಪರಿಶೀಲಿಸಿ.
ಶಂಕಿತ ನೋಟನ್ನು ಮತ್ತೊಬ್ಬರಿಗೆ ನೀಡದೆ, ಬ್ಯಾಂಕ್ನಲ್ಲಿ ಪರಿಶೀಲನೆ ಮಾಡಿಸಿ, ಪೊಲೀಸರಿಗೆ ಮಾಹಿತಿ ನೀಡಿ.
ಸಮಯಪ್ರಜ್ಞೆ, ಕರ್ತವ್ಯನಿಷ್ಠೆ & ಮಾನವೀಯತೆ ಮೆರೆದ ಹೊಯ್ಸಳ ಸಿಬ್ಬಂದಿಯವರ ಕಾರ್ಯ ಶ್ಲಾಘನೀಯ @MagadiRoadPS
ಎದೆ ನೋವಿನಿಂದ ಪರಿತಪಿಸುತ್ತಿದ್ದ ವ್ಯಕ್ತಿಯನ್ನು ಗಸ್ತಿನಲ್ಲಿದ್ದ ಹೊಯ್ಸಳ ಸಿಬ್ಬಂದಿಗಳಾದ ಶ್ರೀ.ಸಚ್ಚಿದಾನಂದಮೂರ್ತಿASI & ಶ್ರೀ.ಬಸವರಾಜ್ HC ರವರು ಸಮಯೋಚಿತವಾಗಿ ಪ್ರಥಮ ಚಿಕಿತ್ಸೆ ಒದಗಿಸಿ ಪ್ರಾಣ ಉಳಿಸುವಲ್ಲಿ ಯಶಸ್ವಿಯಾದರು
ಠಾಣಾ ವ್ಯಾಪ್ತಿಯ ಅಗ್ನಿಶಾಮಕ ಠಾಣೆ ಬಳಿ 34 ವರ್ಷದ ರವಿ ಎಂಬ ವ್ಯಕ್ತಿಯು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಏಕಾಏಕಿ ಎದೆನೋವು ಕಾಣಿಸಿಕೊಂಡು ರಸ್ತೆಯ ಬದಿಯಲ್ಲಿ ನಿಂತಿದ್ದರು. ಈ ವೇಳೆ ಗಸ್ತಿನಲ್ಲಿದ್ದ ಹೊಯ್ಸಳ-88 ಸಿಬ್ಬಂದಿಯವರು ವ್ಯಕ್ತಿಯ ಪರಿಸ್ಥಿತಿಯನ್ನು ಗಮನಿಸಿ, ತಕ್ಷಣ CPR ಮಾಡಿ, ಅವರ ಪ್ರಾಣವನ್ನು ಉಳಿಸಿದರು.
ಠಾಣಾ ವ್ಯಾಪ್ತಿಯ ಅಗ್ನಿಶಾಮಕ ಠಾಣೆ ಬಳಿ 34 ವರ್ಷದ ರವಿ ಎಂಬ ವ್ಯಕ್ತಿಯು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಏಕಾಏಕಿ ಎದೆನೋವು ಕಾಣಿಸಿಕೊಂಡು ರಸ್ತೆಯ ಬದಿಯಲ್ಲಿ ನಿಂತಿದ್ದರು. ಈ ವೇಳೆ ಗಸ್ತಿನಲ್ಲಿದ್ದ ಹೊಯ್ಸಳ-88 ಸಿಬ್ಬಂದಿಯವರು ವ್ಯಕ್ತಿಯ ಪರಿಸ್ಥಿತಿಯನ್ನು ಗಮನಿಸಿ, ತಕ್ಷಣ CPR ಮಾಡಿ, ಅವರ ಪ್ರಾಣವನ್ನು ಉಳಿಸಿದರು.
Mr. Seemant Kumar Singh, Commissioner, Bengaluru City Police, in conversation with Manav Subodh, Founder, 1M1B, on the why behind RISE.
RISE is a movement by the Government of Karnataka and Bengaluru City Police to help curb drug use among young people through awareness, education and positive choices.
And soon, the Bengaluru city police & 1M1B Changemakers are coming to your school to ask you one simple question!
WHAT'S YOUR HIGH?
Is it singing? Dancing? Sports? Music? Art? AI? Gaming? Whatever gives you purpose — we want to know.
Tell us in the comments: What's your high?
And when it comes to drugs...
Beda Bro !!
@CPBlr@seemantsingh96@CMofKarnataka@PriyankKharge@DgpKarnataka@KarnatakaCops@Activate1M1B
#CrimeAwareness, ATM ಬಳಕೆ ವೇಳೆ ಎಚ್ಚರ
ATM ನಲ್ಲಿ ಅಪರಿಚಿತರು ಮಾತನಾಡಿಸಿ ಅಥವಾ ಬೇರೆ ರೀತಿಯಲ್ಲಿ ನಿಮ್ಮ ಗಮನವನ್ನು ಬೇರೆಡೆ ಸೆಳೆಯುವ ಮೂಲಕ PIN, ATM ಕಾರ್ಡ್ ಅಥವಾ ಹಣವನ್ನು ಕದಿಯುವ ವಂಚನೆಗಳಿಗೆ ಬಲಿಯಾಗಬೇಡಿ.
PIN ಯಾರಿಗೂ ತಿಳಿಸಬೇಡಿ & ನಮೂದಿಸುವಾಗ keypad ಮುಚ್ಚಿ
ಅಪರಿಚಿತರ ಸಹಾಯ ಪಡೆಯಬೇಡಿ, SMS alerts ಸಕ್ರಿಯವಾಗಿರಲಿ.
#MeetTheBCP#ಮಾಗಡಿರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಯೋಜಿಸಿದ್ದ #ಮಾಸಿಕಜನಸಂಪರ್ಕಸಭೆಯಲ್ಲಿ ಪಾಲ್ಗೊಂಡು ಸಭೆಯಲ್ಲಿದ್ದ ಸಾರ್ವಜನಿಕರ ಕುಂದುಕೊರತೆ ಆಲಿಸಿ, ಸಲಹೆಗಳನ್ನು ಸ್ವೀಕರಿಸಲಾಯಿತು.
ಸಮಸ್ಯೆಗಳ ಪರಿಹಾರಕ್ಕಾಗಿ ಸ್ಥಳೀಯ ಸಂಸ್ಥೆಗಳ ಸಹಯೋಗದೊಂದಿಗೆ ಪ್ರಮಾಣಿಕ ಪ್ರಯತ್ನ ಮಾಡಲಾಗುವುದು @BlrCityPolice
#CyberCrimeAwareness#FakeApps#APKScam#CyberSafety
ಸೈಬರ್ ವಂಚಕರು ನಕಲಿ Apps/Apk ಗಳನ್ನು ಬಳಸಿ ನಿಮ್ಮ ವೈಯಕ್ತಿಕ ಮಾಹಿತಿ, ಬ್ಯಾಂಕ್ ವಿವರಗಳು, ಪಾಸ್ವರ್ಡ್ಗಳು, ಫೋಟೋಗಳು, Contacts ಹಾಗೂ OTP ಗಳನ್ನು ಕದಿಯಬಹುದು.
ಜಾಗೃತರಾಗಿರಿ, ಸುರಕ್ಷತಾ ಕ್ರಮಗಳನ್ನು ತಪ್ಪದೇ ಅನುಸರಿಸಿ @BlrCityPolice.
ಚಿನ್ನದ ಸರವಿದ್ದ ಪರ್ಸ್ ಕಳೆದುಕೊಂಡು ಗಾಬರಿಗೊಂಡಿದ್ದ ಮಹಿಳೆಗೆ ತಕ್ಷಣ ಸ್ಪಂದಿಸಿ, ಜವಾಬ್ದಾರಿಯುತ ಕಾರ್ಯದಿಂದ ಚಿನ್ನದ ಸರ & ಇತರೆ ಬೆಲೆಬಾಳುವ ವಸ್ತುಗಳನ್ನು ತ್ವರಿತಗತಿಯಲ್ಲಿ ಪತ್ತೆ ಮಾಡಿ ಹಿಂದಿರುಗಿಸಿದ #ಕೆಪಿಅಗ್ರಹಾರ ಪೊಲೀಸರು.
ಸಂಕಷ್ಟದಲ್ಲಿ ಪೊಲೀಸರ ಸಮಯೋಚಿತ ಕ್ರಮವನ್ನು ಶ್ಲಾಘೀಸಿ ಕೃತಜ್ಞತೆ ಅರ್ಪಿಸಿದ ಮಹಿಳೆ @KPAgraharaPS.
#AnnualInspection@KPAgraharaPS
ದಿ: 12.08.2026 ರಂದು #ಕೆಪಿಅಗ್ರಹಾರ ಪೊಲೀಸ್ ಠಾಣೆಯ ವಾರ್ಷಿಕ ಪರಿವೀಕ್ಷಣೆ ನಡೆಸಿ, ಠಾಣಾ ದಾಖಲಾತಿಗಳ ನಿರ್ವಹಣೆ, ಪ್ರಕರಣಗಳ ತನಿಖೆ ಪ್ರಗತಿ, ಅಪರಾಧ ತಡೆ & ಪತ್ತೆ ಹಾಗೂ ಕಾನೂನು &ಸುವ್ಯವಸ್ಥೆ ಪರಿಶೀಲಿಸಲಾಯಿತು
ಜನಸ್ನೇಹಿ ಪೊಲೀಸ್ ಸೇವೆ ಒದಗಿಸಲು ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಲಾಯಿತು
#RiseAgainstDrugs
ಮಾದಕವಸ್ತುಗಳಿಗೆ "ಬೇಡ" ಹೇಳಿ – ನಿಮ್ಮ ಭವಿಷ್ಯಕ್ಕೆ "ಹೌದು" ಹೇಳಿ.
ಆರೋಗ್ಯವೇ ನಮ್ಮ ನಿಜವಾದ ಸಂಪತ್ತು. ವ್ಯಸನದಿಂದ ದೂರವಿದ್ದು, ನಿಮ್ಮ ಕುಟುಂಬ, ಸಮಾಜ ಮತ್ತು ಭವಿಷ್ಯವನ್ನು ಸುರಕ್ಷಿತವಾಗಿರಿಸಿ @BlrCityPolice.
#BedaBro#ChooseLife.
@KiranAradhyaadv A case has been registered at Kalasipalya police station in this regard and three persons have been arrested. Further investigation is in progress.
@CPBlr@JointCPWest
#CrimeAwareness#PublicSafety
ಶಸ್ತ್ರಾಸ್ತ್ರ ಪ್ರದರ್ಶನ, ಸಾರ್ವಜನಿಕರಿಗೆ ಬೆದರಿಕೆ, ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದು ಗಂಭೀರ ಅಪರಾಧ.
ಗಮನ ಸೆಳೆಯಲು / ವೈರಲ್ ಆಗಲು ಇಂತಹ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಅನ್ವಯಿಸುವ ಕಾನೂನುಗಳಡಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ @BlrCityPolice
#ಗೋವಿಂದರಾಜನಗರ ಪೊಲೀಸ್ ಠಾಣೆಯ ವಾರ್ಷಿಕ ಪರಿವೀಕ್ಷಣೆ ನಡೆಸಿ, ಠಾಣೆಯ ಆಡಳಿತ, ದಾಖಲೆಗಳ ನಿರ್ವಹಣೆ, ಅಪರಾಧ ತನಿಖೆಗಳ ಪ್ರಗತಿ, ಕಾನೂನು & ಸುವ್ಯವಸ್ಥೆ ನಿರ್ವಹಣೆ, ಸಾರ್ವಜನಿಕ ಸೇವೆಗಳ ಗುಣಮಟ್ಟವನ್ನು ಸಮಗ್ರವಾಗಿ ಪರಿಶೀಲಿಸಲಾಯಿತು @BlrCityPolice.
ಪರಿಣಾಮಕಾರಿ ಪೊಲೀಸ್ ಸೇವೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಯಿತು.