ಈ ದಿನವನ್ನು ವಿಶೇಷಗೊಳಿಸಿದ ನಿಮ್ಮೆಲ್ಲರಿಗೂ ನನ್ನ ಅಭಿನಂದನೆಗಳು. ೪೫ ವರ್ಷದ ಈ ಪಯಣದಲ್ಲಿ ನನ್ನನ್ನು ಪ್ರೋತ್ಸಾಹಿಸಿ, ಪ್ರೀತಿಸಿದ ಅಭಿಮಾನಿಗಳಿಗೆ, ಸಹಉದ್ಯೋಗಿಗಳಿಗೆ, ಬಂಧುಮಿತ್ರರಿಗೆ ನನ್ನ ಹೃದಯಪೂರ್ವಕ ನಮನಗಳು.
ನಮ್ಮ #Roberrt ಚಿತ್ರದ ಟ್ರೈಲರ್ ಹಾಗೂ ಎಲ್ಲಾ ಹಾಡುಗಳನ್ನು ದೊಡ್ಡ ಮಟ್ಟದಲ್ಲಿ ಸ್ವೀಕರಿಸಿರುವ ಪ್ರೀತಿಯ ಜನತೆಗೆ ನನ್ನ ನಮನಗಳು. ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ನಡೆದ ಪ್ರೀ-ರಿಲೀಸ್ ಸಂಭ್ರಮಾಚರಣೆಗೆ ಅತಿ ದೊಡ್ಡ ಸಂಖ್ಯೆಯಲ್ಲಿ ಬಂದು ನಮ್ಮ ಚಿತ್ರ ತಂಡಕ್ಕೆ ಆಶೀರ್ವದಿಸಿದ ಸೆಲೆಬ್ರಿಟಿಗಳ ಪ್ರೀತಿ-ಅಭಿಮಾನಕ್ಕೆ ನಾನು ಸದಾ ಚಿರಋಣಿ