Official twitter account of Devanahalli Police Station (080-27680333). Dial Namma-112 in case of emergency. Call 1930 in case cyber fraud @BlrCityPolice
ಜೇಬುಕಳ್ಳರ ಬಗ್ಗೆ ಎಚ್ಚರಿಕೆ
ಸಲಹೆ:
ಜನಸಂದಣಿ ಇರುವ ಬಸ್ಸುಗಳಲ್ಲಿ ಜೇಬುಕಳ್ಳರು ಕಾರ್ಯನಿರ್ವಹಿಸುವ ಸಾಧ್ಯತೆ ಇದೆ, ಎಚ್ಚರಿಕೆಯಿಂದಿರಿ.
ಎಚ್ಚರಿಕೆಯಿಂದಿದ್ದು, ನಿಮ್ಮ ಹಣ, ಮೊಬೈಲ್ ಹಾಗೂ ಮೌಲ್ಯವಾದ ವಸ್ತುಗಳನ್ನು ಮುಂಭಾಗದ ಜೇಬುಗಳಲ್ಲಿ ಅಥವಾ ಸುರಕ್ಷಿತವಾಗಿ ಮುಚ್ಚಿದ ಬ್ಯಾಗ್ನಲ್ಲಿ ಇಡಿ.
ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದಲ್ಲಿ ತಕ್ಷಣ ಬಸ್ ಸಿಬ್ಬಂದಿ ಅಥವಾ ಸ್ಥಳೀಯ ಪೊಲೀಸರಿಗೆ ತಿಳಿಸಿ.
#DcpNorthEast
#JointCpEast
#BangaloreCityPolice
@BlrCityPolice@CPBlr@DgpKarnataka@jt_cpeastbcp
ಮಾನ್ಯ ಪೊಲೀಸ್ ಆಯುಕ್ತರು, ಬೆಂಗಳೂರು ನಗರ ರವರ ಆದೇಶದ ಮೇರೆಗೆ ಈಶಾನ್ಯ ವಿಭಾಗದ ಸಂಪಿಗೆಹಳ್ಳಿ, ಕೊತ್ತನೂರು, ಯಲಹಂಕ ಉಪನಗರ, ವಿದ್ಯಾರಣ್ಯಪುರ, ಕೊಡಿಗೇಹಳ್ಳಿ, ಚಿಕ್ಕಜಾಲ, ಬಾಗಲೂರು, ಅಮೃತಹಳ್ಳಿ ಹಾಗೂ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ರೌಡಿ ಶೀಟರ್ಗಳ ಮನೆಗಳಿಗೆ ದಿಢೀರ್ ಭೇಟಿ ನೀಡಿ ತಪಾಸಣೆ ಕಾರ್ಯಾಚರಣೆ ನಡೆಸಲಾಯಿತು.
ಈ ವಿಶೇಷ ಕಾರ್ಯಾಚರಣೆಗೆ 110 ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಒಟ್ಟು 109 ರೌಡಿ ಶೀಟರ್ಗಳ ಮನೆಗಳು ಹಾಗೂ ಅವರು ಕಾರ್ಯನಿರ್ವಹಿಸುತ್ತಿರುವ ಸ್ಥಳಗಳನ್ನು ಸಮಗ್ರವಾಗಿ ಪರಿಶೀಲಿಸಲಾಯಿತು.
ತಪಾಸಣೆ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಎಚ್ಚರಿಕೆ ಸೂಚನೆಗಳನ್ನು ನೀಡಲಾಗಿದ್ದು, ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಾರದು ಎಂಬುದಾಗಿ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ.
ಸಾರ್ವಜನಿಕರ ಭದ್ರತೆ ಹಾಗೂ ಶಾಂತಿ ಕಾಪಾಡುವ ಉದ್ದೇಶದಿಂದ ಇಂತಹ ತಪಾಸಣೆ ಮತ್ತು ಮೇಲ್ವಿಚಾರಣೆ ಕ್ರಮಗಳು ಮುಂದುವರೆಯಲಿವೆ.
#DcpNorthEast
#JointCpEast
#BangaloreCityPolice
@BlrCityPolice@CPBlr@DgpKarnataka@KarnatakaCops@jt_cpeastbcp
🛡️ ಒಂದೇ ಟ್ಯಾಪ್ನಲ್ಲಿ ನಿಮ್ಮ ಸುರಕ್ಷತೆ
KSP APP ಬಳಸಿ – ಸುರಕ್ಷಿತವಾಗಿರಿ
🔐 KSP App ಪ್ರಮುಖ ವೈಶಿಷ್ಟ್ಯಗಳು
📍 ಲೈವ್ ಲೊಕೇಶನ್ (Live Location)
ತುರ್ತು ಪರಿಸ್ಥಿತಿಯಲ್ಲಿ ನಿಮ್ಮ ನೈಜ ಸ್ಥಳವನ್ನು ಪೊಲೀಸರಿಗೆ ತಕ್ಷಣ ಹಂಚಿಕೊಳ್ಳಬಹುದು.
📞 ಸೇಫ್ ಕನೆಕ್ಟ್ (Safe Connect – SOS)
ಒಂದೇ ಟ್ಯಾಪ್ನಲ್ಲಿ ಪೊಲೀಸರೊಂದಿಗೆ ವೀಡಿಯೊ/ಆಡಿಯೊ ಸಂಪರ್ಕ ಸಾಧಿಸಬಹುದು.
🧾 ಘಟನೆ ವರದಿ (Report Incident)
ಅಪರಾಧ ಅಥವಾ ಯಾವುದೇ ಅಹಿತಕರ ಘಟನೆಗಳನ್ನು ಆಪ್ ಮೂಲಕ ವರದಿ ಮಾಡಬಹುದು.
🚗 ಸಂದೇಹಾಸ್ಪದ ವಾಹನ ವರದಿ
ಅಪರಿಚಿತ ಅಥವಾ ಸಂಶಯಾಸ್ಪದ ವಾಹನಗಳ ಮಾಹಿತಿ ಪೊಲೀಸರಿಗೆ ನೀಡಬಹುದು.
👥 ನಂಬಿಕೆಯ ಸಂಪರ್ಕಗಳು (Trusted Contacts)
ನಿಮ್ಮ ನಂಬಿಕೆಯ ವ್ಯಕ್ತಿಗಳನ್ನು ಸೇರಿಸಿ, ತುರ್ತು ಸಂದರ್ಭಗಳಲ್ಲಿ ತಕ್ಷಣ ಮಾಹಿತಿ ಕಳುಹಿಸಬಹುದು.
🏢 ಪೊಲೀಸ್ ಠಾಣೆಗಳ ಮಾಹಿತಿ
ನಿಮ್ಮ ಹತ್ತಿರದ ಪೊಲೀಸ್ ಠಾಣೆಯನ್ನು ಸುಲಭವಾಗಿ ಹುಡುಕಬಹುದು.
📄 FIR ಹುಡುಕಾಟ (F.I.R Search)
ನಿಮ್ಮ FIR ಸ್ಥಿತಿಯನ್ನು ಆನ್ಲೈನ್ನಲ್ಲಿ ಪರಿಶೀಲಿಸಬಹುದು.
🚦 ಟ್ರಾಫಿಕ್ ದಂಡ ಮಾಹಿತಿ (Traffic Fines)
ಟ್ರಾಫಿಕ್ ದಂಡ ವಿವರಗಳನ್ನು ನೋಡಬಹುದು.
#KSP_App
#DcpNorthEast
#JointCpEast
#BangloreCityPolice
@BlrCityPolice@DgpKarnataka@KarnatakaCops@CPBlr@jt_cpeastbcp
ಆನ್ಲೈನ್ ಗೇಮ್ಗಳ ದುಷ್ಪರಿಣಾಮಗಳು
ಆನ್ಲೈನ್ ಗೇಮ್ಗಳು ಮಕ್ಕಳ ಆರೋಗ್ಯ ಮತ್ತು ವರ್ತನೆಗೆ ಹಾನಿಕಾರಕವಾಗಬಹುದು:
▲ ಅಪರಿಚಿತರ ಸಂಪರ್ಕ ಹಾಗೂ ಆನ್ಲೈನ್ ದೌರ್ಜನ್ಯಕಾರರು
▲ ಹಿಂಸಾತ್ಮಕ ಮತ್ತು ಅಸಭ್ಯ ವಿಷಯಗಳು
▲ ಆನ್ಲೈನ್ ಬೆಟ್ಟಿಂಗ್ ಹಾಗೂ ಹಣಕಾಸು ಗೇಮ್ಗಳು
▲ ಸೈಬರ್ ಬುಲ್ಲಿಯಿಂಗ್ ಮತ್ತು ಬೆದರಿಕೆ / ಬ್ಲ್ಯಾಕ್ಮೇಲ್
▲ ನಿದ್ರೆ ಕೊರತೆ, ಕೋಪ, ಒಂಟಿತನ
🛡️ ಪೋಷಕರಿಗಾಗಿ ಮಾರ್ಗಸೂಚಿಗಳು
✔️ ಗೇಮ್ ಆಡುವ ಸಮಯಕ್ಕೆ ಮಿತಿ ನಿಗದಿಪಡಿಸಿ
✔️ ಮೊಬೈಲ್ / ಕಂಪ್ಯೂಟರ್ಗಳನ್ನು ಮನೆಯ ಸಾಮಾನ್ಯ ಸ್ಥಳದಲ್ಲೇ ಬಳಕೆ ಮಾಡಿಸಿ
✔️ ಮಕ್ಕಳು ಆಡುತ್ತಿರುವ ಗೇಮ್ಗಳ ಬಗ್ಗೆ ಪರಿಶೀಲಿಸಿ ಹಾಗೂ ಸಂವಾದ ನಡೆಸಿ
✔️ ಹೊರಾಂಗಣ ಆಟಗಳು ಮತ್ತು ಕುಟುಂಬದೊಂದಿಗೆ ಸಮಯ ಕಳೆಯಲು ಪ್ರೋತ್ಸಾಹಿಸಿ
@BlrCityPolice@CPBlr@DgpKarnataka@KarnatakaCops@jt_cpeastbcp
Pursuant to the orders of Hon’ble Commissioner of Police, Bengaluru City, Night Round and Special Checking Operation was conducted within the jurisdictions of Devanahalli, Yelahanka, Sampigehalli and Bagalur of the Northeast Division, Bengaluru City Police.
During the operation:
•Suspicious persons were verified through fingerprint scanning via MCCTNS App.
•Suspicious vehicles were intercepted, and their documents were thoroughly checked.
•Close surveillance was maintained at public places, bus stands, and key road junctions.
•Officers and staff deployed on night patrol duty were directed to intensify patrolling in sensitive areas and maintain heightened vigilance over suspicious activities.
The operation was carried out with the objective of crime prevention, maintenance of law and order, and enhancement of public safety and public confidence.
#DivisionNightRounds
#DcpNorthEast
#JointCpEast
#BangaloreCityPolice
ಮಾನ್ಯ ಪೊಲೀಸ್ ಆಯುಕ್ತರು, ಬೆಂಗಳೂರು ನಗರ ರವರ ಆದೇಶದ ಮೇರೆಗೆ
ಬೆಂಗಳೂರು ನಗರ ಪೊಲೀಸ್ನ ಈಶಾನ್ಯ ವಿಭಾಗದ ವ್ಯಾಪ್ತಿಯ ದೇವನಹಳ್ಳಿ, ಯಲಹಂಕ ,ಸಂಪಿಗೆಹಳ್ಳಿ ಮತ್ತು ಬಾಗಲೂರು ಪ್ರದೇಶಗಳಲ್ಲಿ ನೈಟ್ ರೌಂಡ್ ಹಾಗೂ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಲಾಯಿತು.
ಈ ಕಾರ್ಯಾಚರಣೆಯ ಸಂದರ್ಭದಲ್ಲಿ:
•ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ವ್ಯಕ್ತಿಗಳನ್ನು MCCTNS App ಮುಖಾಂತರ ಫಿಂಗರ್ಪ್ರಿಂಟ್ ಸ್ಕ್ಯಾನ್ ಮಾಡಿ ಪರಿಶೀಲಿಸಲಾಯಿತು.
•ಅನುಮಾನಾಸ್ಪದ ವಾಹನಗಳ ತಪಾಸಣೆ ನಡೆಸಿ, ಸಂಬಂಧಿತ ದಾಖಲೆಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಲಾಯಿತು.
•ಸಾರ್ವಜನಿಕ ಸ್ಥಳಗಳು, ಬಸ್ ನಿಲ್ದಾಣಗಳು ಹಾಗೂ ಪ್ರಮುಖ ರಸ್ತೆ ಜಂಕ್ಷನ್ಗಳಲ್ಲಿ ಕಟ್ಟುನಿಟ್ಟಿನ ನಿಗಾವಹಿಸಲಾಯಿತು.
•ರಾತ್ರಿ ಗಸ್ತು ಕರ್ತವ್ಯಕ್ಕೆ ನೇಮಕವಾಗಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಸಂವೇದನಾಶೀಲ ಪ್ರದೇಶಗಳಲ್ಲಿ ತೀವ್ರ ಗಸ್ತು ಕೈಗೊಳ್ಳುವಂತೆ ಹಾಗೂ ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ನಿರ್ದೇಶನ ನೀಡಲಾಯಿತು.
ಅಪರಾಧ ತಡೆಗಟ್ಟುವಿಕೆ, ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಸಾರ್ವಜನಿಕರಲ್ಲಿ ಭದ್ರತೆ ಮತ್ತು ವಿಶ್ವಾಸವನ್ನು ಹೆಚ್ಚಿಸುವ ಉದ್ದೇಶದಿಂದ ಈ ಕಾರ್ಯಾಚರಣೆ ಕೈಗೊಳ್ಳಲಾಯಿತು.
@BlrCityPolice@CPBlr@DgpKarnataka@KarnatakaCops@jt_cpeastbcp
ದೇವನಹಳ್ಳಿ ಪೋಲಿಸ್ ಪ್ರಕಟನೆ, ನಿಮ್ಮ ಬೈಕ್ ಕಳ್ಳತನ ತಡೆಗಟ್ಟಲು ಈ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಬೈಕ್ ಕಳ್ಳತನವನ್ನು ತಡೆಗಟ್ಟಲು ಸಹಕರಿಸಿ. ಜಾಣರಾಗಿ, ಜಾಗೃತವಾಗಿರಿ. ಯಾವುದೆ ತುರ್ತ ಸಂದರ್ಭದಲ್ಲಿ 112 ಗೆ ಕರೆ ಮಾಡಿ @DCPNEBCP@acpdevanahalli@BlrCityPolice
Bengaluru City Police, Northeast Division, conducted comprehensive inspection of chemical factories functioning within the jurisdictions of Vidyaranyapura, Yelahanka Newtown and Kothanur Police Stations.
During the inspection, the products being manufactured and the by-products generated, their storage, management, and disposal practices, along with compliance with prescribed safety standards,relevant legal provisions, were carefully assessed, and necessary instructions were issued to the concerned managements.
The inspection was undertaken as a preventive measure to ensure public safety, safeguard the environment, and maintain law and order.
ಬೆಂಗಳೂರು ನಗರ ಪೊಲೀಸ್ ವತಿಯಿಂದ ಈಶಾನ್ಯ ವಿಭಾಗದ ವಿದ್ಯಾರಣ್ಯಪುರ, ಯಲಹಂಕ ಹಾಗೂ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಸಾಯನಿಕ ಕಾರ್ಖಾನೆಗಳ ಸಮಗ್ರ ಪರಿಶೀಲನೆ ನಡೆಸಲಾಗಿದೆ.
ಈ ಪರಿಶೀಲನೆಯ ಸಂದರ್ಭದಲ್ಲಿ ಕಾರ್ಖಾನೆಗಳಲ್ಲಿ ತಯಾರಿಸಲಾಗುತ್ತಿರುವ ಉತ್ಪನ್ನಗಳು (Products) ಹಾಗೂ ಅವುಗಳಿಂದ ಉಂಟಾಗುವ ಉಪ ಉತ್ಪನ್ನಗಳು (By-products), ಅವುಗಳ ಸಂಗ್ರಹಣೆ, ನಿರ್ವಹಣೆ ಮತ್ತು ವಿಲೇವಾರಿ ವಿಧಾನಗಳು, ಜೊತೆಗೆ ಭದ್ರತಾ ಮಾನದಂಡಗಳು ಹಾಗೂ ಕಾನೂನು ನಿಯಮಗಳ ಪಾಲನೆ ಕುರಿತು ಸೂಕ್ಷ್ಮವಾಗಿ ಪರಿಶೀಲಿಸಿ ಅಗತ್ಯ ನಿರ್ದೇಶನಗಳನ್ನು ನೀಡಲಾಗಿದೆ.
ಸಾರ್ವಜನಿಕರ ಸುರಕ್ಷತೆ, ಪರಿಸರ ಸಂರಕ್ಷಣೆ ಹಾಗೂ ಕಾನೂನು ಸುವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಕಾಪಾಡುವ ಉದ್ದೇಶದಿಂದ ಈ ಪರಿಶೀಲನಾ ಕ್ರಮ ಕೈಗೊಳ್ಳಲಾಗಿದೆ.
@BlrCityPolice@CPBlr@DgpKarnataka@KarnatakaCops@jt_cpeastbcp
With the objective of recognizing outstanding performance by Hoysala teams, based on feedback and ratings received from the public through the Namma-112 helpline, Shri Rupesh C., ASI, and Shri Irannagouda B. Hadimani, PC, of Amruthahalli Police Station, North-East Division, secured the highest rating for January 2026.
They were felicitated with certificates of appreciation during the January monthly parade by Shri Seemant Kumar Singh, IPS, Commissioner of Police, Bengaluru City.
The Joint Commissioner of Police (East) and the Deputy Commissioner of Police, North-East Division, also expressed their appreciation for this commendable work.
Based on public feedback and the service performance of personnel, the process of identifying the best-performing Hoysala team will continue on a monthly basis.
#GoodWork
#Namma112
#JointCpEastBcp
#DcpNorthEast
#Bangalore_City_Police
ಉತ್ತಮ ಕಾರ್ಯನಿರ್ವಹಣೆಯ ಹೊಯ್ಸಳ ತಂಡವನ್ನು ಗುರುತಿಸುವ ಉದ್ದೇಶದಿಂದ, ನಮ್ಮ–112 ಸಹಾಯವಾಣಿಗೆ ಕರೆ ಮಾಡಿದ ಸಾರ್ವಜನಿಕರಿಂದ ಪಡೆದ ಫೀಡ್ಬ್ಯಾಕ್ ಮತ್ತು ರೇಟಿಂಗ್ಗಳ ಆಧಾರದ ಮೇಲೆ, ಈಶಾನ್ಯ ವಿಭಾಗದ ಅಮೃತಹಳ್ಳಿ ಪೊಲೀಸ್ ಠಾಣೆಯ ಶ್ರೀ ರೂಪೇಶ್ ಸಿ., ಎಎಸ್ಐ, ಹಾಗೂ ಸಿಬ್ಬಂದಿ ಶ್ರೀ ಈರಣ್ಣಗೌಡ ಬಿ. ಹಾದಿಮನಿ, ಪಿಸಿ, ಅವರು ಜನವರಿ 2026ರಲ್ಲಿ ಅತ್ಯಧಿಕ ರೇಟಿಂಗ್ನ್ನು ಪಡೆದಿರುತ್ತಾರೆ.
ಇವರನ್ನು ಜನವರಿ ತಿಂಗಳ ಮಾಸಿಕ ಪರೇಡ್ನಲ್ಲಿ, ಶ್ರೀ ಸೀಮಾಂತ್ ಕುಮಾರ್ ಸಿಂಗ್, ಐಪಿಎಸ್, ಬೆಂಗಳೂರು ನಗರ ಪೊಲೀಸ್ ಆಯುಕ್ತರು, ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿರುತ್ತಾರೆ.
ಈ ಉತ್ತಮ ಕಾರ್ಯಕ್ಕೆ ಜಂಟಿ ಪೊಲೀಸ್ ಆಯುಕ್ತರು (ಪೂರ್ವ) ಹಾಗೂ ಉಪ ಪೊಲೀಸ್ ಆಯುಕ್ತರು, ಈಶಾನ್ಯ ವಿಭಾಗ ಅವರು ಕೂಡ ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.
ಸಾರ್ವಜನಿಕರ ಪ್ರತಿಕ್ರಿಯೆ ಹಾಗೂ ಸಿಬ್ಬಂದಿಗಳ ಸೇವಾ ಕಾರ್ಯಕ್ಷಮತೆ ಆಧಾರವಾಗಿ, ಉತ್ತಮ ಹೊಯ್ಸಳ ತಂಡವನ್ನು ಗುರುತಿಸುವ ಈ ಪ್ರಕ್ರಿಯೆಯನ್ನು ಪ್ರತಿ ತಿಂಗಳು ನಿರಂತರವಾಗಿ ಮುಂದುವರಿಸಲಾಗುತ್ತದೆ. @BlrCityPolice@CPBlr@DgpKarnataka@KarnatakaCops@jt_cpeastbcp@ACPYelahankablr@amruthahallips
To enhance police presence and ensure public safety, foot patrolling and area domination operation was conducted within the jurisdictions of Vidyaranyapura and Yelahanka New Town Police Stations of the Northeast Division.
The operation was carried out by the Bengaluru City Police under the guidance of the Bangalore City Police Commissioner, as per the directions of the Joint Police Commissioner (East), and under the Supervision of Deputy Commissioner of Police, NorthEast Division.
*As part of the operation:*
•42 police personnel were deployed.
•176 vehicles were checked.
•29 individuals were verified.
Foot patrolling was conducted in sensitive and crowded areas.
Suspicious vehicles and activities were checked.
Public interaction was carried out to collect grievances and feedback.
The objective of the operation was to deter criminal activities, maintain law and order, and instill confidence among the public through increased police presence. Such proactive policing operations will be continued in the interest of public safety and the trust of the public.
#BangaloreCityPolice
#Jt_cpeastbcp
#DcpNorthEast
ಪೊಲೀಸ್ ಇರುವಿಕೆಯನ್ನು ಹೆಚ್ಚಿಸಿ ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸುವ ಉದ್ಧೇಶದಿಂದ, ಈಶಾನ್ಯ ವಿಭಾಗದ ವಿದ್ಯಾರಣ್ಯಪುರ ಮತ್ತು ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಾಲ್ನಡಿಗೆ ಗಸ್ತು ಹಾಗೂ ಪ್ರದೇಶ ಪ್ರಾಬಲ್ಯ ಕಾರ್ಯಾಚರಣೆ ನಡೆಸಲಾಯಿತು.
ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರ ಪೊಲೀಸ್ ವತಿಯಿಂದ, ಬೆಂಗಳೂರು ನಗರ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ, ಜಂಟಿ ಪೊಲೀಸ್ ಆಯುಕ್ತರು (ಪೂರ್ವ) ರವರ ನಿರ್ದೇಶನದಂತೆ ಉಪ ಪೊಲೀಸ್ ಆಯುಕ್ತರು, ಈಶಾನ್ಯ ವಿಭಾಗ ರವರ ಸಾರಥ್ಯದಲ್ಲಿ ಕೈಗೊಳ್ಳಲಾಯಿತು.
ಈ ಕಾರ್ಯಾಚರಣೆಯಲ್ಲಿ
42 ಪೊಲೀಸ್ ಸಿಬ್ಬಂದಿಯ ನಿಯೋಜನೆ.
176 ವಾಹನಗಳ ತಪಾಸಣೆ.
29 ವ್ಯಕ್ತಿಗಳ ಪರಿಶೀಲನೆ.
ಸಂವೇದನಶೀಲ ಹಾಗೂ ಜನಸಂದಣಿ ಪ್ರದೇಶಗಳಲ್ಲಿ ಕಾಲ್ನಡಿಗೆ ಗಸ್ತು.
ಅನುಮಾನಾಸ್ಪದ ವಾಹನಗಳು ಮತ್ತು ಚಟುವಟಿಕೆಗಳ ತಪಾಸಣೆ ನಡೆಸಿ,ಸಾರ್ವಜನಿಕರೊಂದಿಗೆ ಸಂವಾದ ನಡೆಸಿ ಅವರ ಅಹವಾಲು ಹಾಗೂ ಪ್ರತಿಕ್ರಿಯೆ ಸಂಗ್ರಹಸಲಾಯಿತು.
ಈ ಕಾರ್ಯಾಚರಣೆಯ ಉದ್ದೇಶವು ಅಪರಾಧ ಚಟುವಟಿಕೆಗಳನ್ನು ತಡೆಗಟ್ಟುವುದು, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಹಾಗೂ ಹೆಚ್ಚಿನ ಪೊಲೀಸ್ ಇರುವಿಕೆಯ ಮೂಲಕ ಸಾರ್ವಜನಿಕರಲ್ಲಿ ಭರವಸೆ ಮೂಡಿಸುವುದಾಗಿದೆ. ಸಾರ್ವಜನಿಕ ಸುರಕ್ಷತೆ ಮತ್ತು ನಾಗರೀಕ ಸಮುದಾಯದ ವಿಶ್ವಾಸದ ಹಿತದೃಷ್ಟಿಯಿಂದ ಇಂತಹ ಸಕ್ರೀಯ ಪೊಲೀಸ್ ಕಾರ್ಯಾಚರಣೆಗಳನ್ನು ಮುಂದುವರೆಸಲಾಗುವುದು.
#ಬೆಂಗಳೂರು_ನಗರ_ಪೊಲೀಸ್
#ಜಂಟಿ_ಪೊಲೀಸ್_ಆಯುಕ್ತರು_(ಪೂರ್ವ)
#ಡಿಸಿಪಿ_ಈಶಾನ್ಯ_ವಿಭಾಗ.
@BlrCityPolice@CPBlr@DgpKarnataka@KarnatakaCops@ACPYelahankablr@vidyaranyapurps@yelahankantwnps
🔒 ಬಾಗಿಲು ಮತ್ತು ಕಿಟಕಿಗಳಿಗೆ ಗ್ರಿಲ್ ಹಾಗೂ ಭದ್ರವಾದ ಲಾಕ್ಗಳನ್ನು ಅಳವಡಿಸಿ.
📹 CCTV ಕ್ಯಾಮೆರಾಗಳನ್ನು ಸ್ಥಾಪಿಸಿ.
💰 ಮೌಲ್ಯಯುತ ವಸ್ತುಗಳನ್ನು ಭದ್ರವಾದ ಸೇಫ್ (Safe) ನಲ್ಲಿ ಸಂರಕ್ಷಿಸಿ.
🚪 ಮನೆಯಿಂದ ಹೊರಡುವಾಗ ಅಥವಾ ನಿದ್ರೆಗೆ ಹೋಗುವ ಮೊದಲು ಬಾಗಿಲುಗಳು ಮತ್ತು ಕಿಟಕಿಗಳು ಸರಿಯಾಗಿ ಬಂದ್ ಆಗಿರುವುದನ್ನು ಖಚಿತಪಡಿಸಿಕೊಳ್ಳಿ
🤝 ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ
📞 ತುರ್ತು ಸಹಾಯಕ್ಕಾಗಿ: 112 ಗೆ ಕರೆ ಮಾಡಿ. @BlrCityPolice@DgpKarnataka@CPBlr@KarnatakaCops@jt_cpeastbcp
ಒಟಿಪಿ ವಂಚನೆ ಎಚ್ಚರಿಕೆ! 🚨
❗ ಯಾರಾದರೂ ಕರೆ ಅಥವಾ ಸಂದೇಶದಲ್ಲಿ
“ನಿಮ್ಮ ಖಾತೆ ಪರಿಶೀಲನೆಗಾಗಿ ಒಟಿಪಿ ಹೇಳಿ” ಎಂದರೆ
👉 ಅದು ವಂಚನೆ!
🔐 ನಿಮ್ಮ ಒಟಿಪಿ = ನಿಮ್ಮ ರಹಸ್ಯ ಕೀ
❌ ಒಟಿಪಿಯನ್ನು ಯಾರಿಗೂ ಹೇಳಬೇಡಿ
❌ ಕರೆ, ಮೆಸೇಜ್ ಅಥವಾ ಲಿಂಕ್ ಮೂಲಕ ಹಂಚಿಕೊಳ್ಳಬೇಡಿ
@BlrCityPolice@DCPNEBCP@acpdevanahalli
ಈ ದಿನ ದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಬ್ರಹ್ಮರಥೋತ್ಸವದ ಹಿನ್ನೆಲೆಯಲ್ಲಿ, ಮಾನ್ಯ ಎಸಿಪಿ ದೇವನಹಳ್ಳಿ ರವರ ಸಮ್ಮುಖದಲ್ಲಿ ಠಾಣಾ ಇನ್ಸ್ಪೆಕ್ಟರ್ ರವರು ಸಿಬ್ಬಂದಿಗೆ ಅಗತ್ಯ ಸುರಕ್ಷತಾ ಹಾಗೂ ಬಂದೋಬಸ್ತ್ ಕುರಿತು ಸೂಕ್ತ ನಿರ್ದೇಶನಗಳನ್ನು ನೀಡಿ ಸಿಬ್ಬಂದಿಯನ್ನು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಯಿತು
ಈ ದಿನ ಮಾನ್ಯ ಎಸಿಪಿ ದೇವನಹಳ್ಳಿ ರವರ ಸಮಕ್ಷಮದಲ್ಲಿ ದೇವನಹಳ್ಳಿಯ ಜ್ಯುವೆಲ್ಲರ್ಸ್ ಅಸೋಸಿಯೇಷನ್ ರವರೊಂದಿಗೆ ಮೀಟಿಂಗ್ ನಡಿಸಿ ಪಬ್ಲಿಕ್ ಸೇಫ್ಟಿ ಕುರಿತು ಹಲವು ಸೂಚನೆಗಳನ್ನು ನೀಡಲಾಯಿತು. #PublicSafetyಈ ದಿನ ಮಾನ್ಯ ಎಸಿಪಿ ದೇವನಹಳ್ಳಿ ರವರ ಸಮಕ್ಷಮದಲ್ಲಿ ದೇವನಹಳ್ಳಿಯ ಜ್ಯುವೆಲ್ಲರ್ಸ್ ಅಸೋಸಿಯೇಷನ್ ರವರೊಂದಿಗೆ ಮೀಟಿಂಗ್ ನಡೆಸಲಾಯಿತು
ದೇವನಹಳ್ಳಿ ಪೋಲಿಸ್ ಠಾಣೆಯ ಸಿಬ್ಬಂದಿಯವರಾದ ಶ್ರೀ ಅನಿಲ್ ಕುಮಾರ್ ಎ.ಎಸ್.ಐ, ಶ್ರೀ ಚಾಂದ್ ಪಾಷಾ ಪೋಲಿಸ್ ಕಾನ್ಸ್ ಟೇಬಲ್ ರವರಿಗೆ ಈಶಾನ್ಯ ವಿಭಾಗದ ಡಿ.ಸಿ.ಪಿ ಮಾನ್ಯ ಶ್ರೀ ಮಿಥುನ್ ಕುಮಾರ್ ಐ.ಪಿ.ಎಸ್ ರವರು 112ಗೆ ಶೀಘ್ರವಾಗಿ ಸ್ಪಂದಿಸಿ ಕರ್ತವ್ಯದಾಚೆ ಮಾನವೀಯತೆಯನ್ನು ಮೆರೆದಿದ್ದನ್ನು ಶ್ಲಾಘಿಸಿದ ಕ್ಷಣ.
On 04.01.2026, #NORTHEASTDIVISION ASI Anil Kumar & Sri Chand Pasha of #DevanahalliPS went above & beyond to rescue an unidentified 70yr old woman. After ensuring her medical treatment, they secured her future at an Old Age Home. A truly exemplary act of humanity! 👮♂️🙏#HereToHelp