ತ್ಯಾಗ ಮತ್ತು ಮಾನವೀಯತೆಯ ಪ್ರತೀಕವಾದ ಬಕ್ರೀದ್ ಹಬ್ಬದ ಸಂದರ್ಭದಲ್ಲಿ, ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಕರ್ನಾಟಕ ಸರ್ಕಾರದ ಕೈಮಗ್ಗ ಮತ್ತು ಜವಳಿ ಇಲಾಖೆಯ ಪರವಾಗಿ ಹಾರ್ದಿಕ ಶುಭಾಶಯಗಳು. ಈ ಪವಿತ್ರ ಹಬ್ಬವು ಎಲ್ಲರ ಬಾಳಿನಲ್ಲಿ ಶಾಂತಿ, ಕರುಣೆ ಮತ್ತು ಸಮೃದ್ಧಿಯನ್ನು ತರಲಿ.
#Bakrid#EidAlAdha#BakridWishes
"ಕರ್ನಾಟಕದ ಜವಳಿ ಉದ್ಯಮಕ್ಕೆ ಹೊಸ ಚೈತನ್ಯ!"
ರಾಜ್ಯದ ಜವಳಿ ಉದ್ಯಮವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಮತ್ತು ಗ್ರೀನ್ ಫೀಲ್ಡ್ ಟೆಕ್ಸ್ ಟೈಲ್ ಪಾರ್ಕ್ ಗಳ ಸ್ಥ��ಪನೆಗೆ ಉತ್ತೇಜನ ನೀಡಲು ಕರ್ನಾಟಕ ಸರ್ಕಾರವು ವಿಶೇಷ ರಿಯಾಯಿತಿ ಮತ್ತು ಸಹಾಯಧನವನ್ನು ಘೋಷಿಸಿದೆ.
ಹೆಚ್ಚಿನ ಮಾಹಿತಿಗಾಗಿ ಕೈಗಾರಿಕಾ ಇಲಾಖೆಯನ್ನು ಸಂಪರ್ಕಿಸಿ:
ತ್ಯಾಜ್ಯ ವಿಲೇವಾರಿ ಮತ್ತು ಸಂಸ್ಕರಣಾ ��ಟಕಗಳಿಗೆ ವಿಶೇಷ ಸಬ್ಸಿಡಿ - ಪರಿಸರ ಸಂರಕ್ಷಣೆಯೊಂದಿಗೆ ನಿಮ್ಮ ಉದ್ದಿಮೆಯನ್ನು ಬೆಳೆಸಿ!
ಕರ್ನಾಟಕ ಸರ್ಕಾರವು ಸುಸ್ಥಿರ ಕೈಗಾರಿಕಾ ಬೆಳವಣಿಗೆಗೆ ಪೂರಕವಾಗಿ, ರಾಜ್ಯದ ಎಲ್ಲಾ ಉದ್ದಿಮೆಗಳಿಗೆ ತ್ಯಾಜ್ಯ ವಿಲೇವಾರಿ ಮತ್ತು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಭಾರಿ ಧನಸಹಾಯವನ್ನು ಘೋಷಿಸಿದೆ.
"ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ನೆರಳಾಗಿ, ಪ್ರೀತಿ ಮತ್ತು ಮಮತೆಯ ಸಾಕಾರ ಮೂರ್ತಿಯಾಗಿರುವ ಜಗತ್ತಿನ ಎಲ್ಲಾ ತಾಯಂದಿರಿಗೂ 'ವಿಶ್ವ ತಾಯಂದಿರ ದಿನ'ದ ಹಾರ್ದಿಕ ಶುಭಾಶಯಗಳು. ನಮ್ಮ ಬದುಕಿಗೆ ಅರ್ಥ ನೀಡುವ ಶಕ್ತಿ 'ತಾಯಿ'."
#mothersday
ನಾಡಿನ ಸಮಸ್ತ ಜನತೆಗೆ ಬುದ್ಧ ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು.
ವಿಶ್ವಕ್ಕೆ ಅಹಿಂಸೆ ಮತ್ತು ಪ್ರೀತಿಯ ಸಂದೇಶ ಸಾರಿದ ಭಗವಾನ್ ಗೌತಮ ಬುದ್ಧರ ತತ್ವಗಳು ನಮ್ಮ ಬದುಕಿಗೆ ದಾರಿದೀಪವಾಗಲಿ. ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲಿ ಎಂದು ಈ ಪವಿತ್ರ ದಿನದಂದು ಆಶಿಸೋಣ.
ನೂಲಿನ ನಂಟು, ಶ್ರಮದ ಕಟ್ಟು - ಎಲ್ಲರಿಗೂ ವಿಶ್ವ ಕಾರ್ಮಿಕ ದಿನಾಚರಣೆಯ ಶುಭಾಶಯಗಳು!
ಹಗಲಿರುಳು ಮಗ್ಗದ ಮುಂದೆ ಕುಳಿತು ಶ್ರಮಿಸುವ ನೇಕಾರರ ಬೆವರಿನ ಹನಿಗಳು ದೇಶದ ಆರ್ಥಿಕತೆಗೆ ದೊಡ್ಡ ಶಕ್ತಿ. ಬಲಿಷ್ಠ ರಾಷ್ಟ್ರದ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಸಮಸ್ತ ಕೈಮಗ್ಗ ಮತ್ತು ಜವಳಿ ಕಾರ್ಮಿಕ ��ಂಧುಗಳಿಗೆ ಗೌರವಪೂರ್ವಕ ವಂದನೆಗಳು
#worldlabourday
ಸಿದ್ದ ಉಡುಪು ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಧ್ಯಮ ಮತ್ತು ಬೃಹತ್ ಉದ್ಯಮಗಳಿಗೆ ಇದು ಒಂದು ಅತ್ಯುತ್ತಮ ಸುವರ್ಣಾವಕಾಶವಾಗಿದೆ.
ನಮ್ಮ ಸರ್ಕಾರದ ನೂತನ ಯೋಜನೆಯಡಿ ಸಿದ್ಧ ಉಡುಪು ಘಟಕಗಳಲ್ಲಿ ಶ್ರಮಿಸುತ್ತಿರುವ ಕಾರ್ಮಿಕರ ಆರ್ಥಿಕ ಸಬಲೀಕರಣಕ್ಕಾಗಿ ಮಾಸಿಕ ವೇತನ ಸಹಾಯಧನವನ್ನು ನೀಡಲಾಗುತ್ತಿದೆ.
ನೇಯ್ಗೆಯ ಪ್ರತಿ ���ಳೆಯಲ್ಲೂ ಸಮೃದ್ಧಿ ಅಡಗಿದೆ! 📷📷
ಸಮಸ್ತ ನಾಡಿನ ಜನತೆಗೆ ಅಕ್ಷಯ ತೃತೀಯದ ಹಾರ್ದಿಕ ಶುಭಾಶಯಗಳು. ಈ ಪವಿತ್ರ ದಿನದಂದು ನಮ್ಮ ನಾಡಿನ ಹೆಮ್ಮೆಯ ಕೈಮಗ್ಗದ ಉಡುಪುಗಳನ್ನು ಖರೀದಿಸುವ ಮೂಲಕ ನೇಕಾರರ ಬದುಕಿನಲ್ಲಿ ಹೊಸ ಚೈತನ್ಯ ತ��ಂಬೋಣ. ನಿಮ್ಮ ಸಂಭ್ರಮದ ಖರೀದಿ ನೇಕಾರರ ಬಾಳಿಗೆ ಅಕ್ಷಯ ಸಂಪತ್ತು ತರಲಿ.
#AkshayaTritiya
ಕರ್ನಾಟಕ ರಾಜ್ಯದ ಜವಳಿ ಮತ್ತು ಸಿದ್ಧ ಉಡುಪು ನೀತಿಯಡಿ, ಕೈಗಾರಿಕಾ ಅಭಿವೃದ್ಧಿಯನ್ನು ಉತ್ತೇಜಿಸುವ ಉದ್ದೇಶದಿಂದ ಎಂ.ಎಸ್.ಎಂ.ಇ (MSME) ಹಾಗೂ ಬೃಹತ್ ಉದ್ಯಮಗಳಿಗೆ ವಿಶೇಷ ಆರ್ಥಿಕ ಪ್ರೋತ್ಸಾಹಧನ ಮತ್ತು ರಿಯಾಯಿತಿಗಳನ್ನು ಘೋಷಿಸಲಾಗಿದೆ.
ಕರ್ನಾಟಕ ಸರ್ಕಾರದ ಜವಳಿ ಮತ್ತು ಕೈಮಗ್ಗ ಇಲಾಖೆಯು ರಾಜ್ಯದ ಜವಳಿ ಉದ್ಯಮವನ್ನು ಉತ್ತೇಜಿಸಲು ಮತ್ತು ಉತ್ಪಾದನಾ ವೆಚ್ಚವನ್ನು ತಗ್ಗಿಸಲು ಭರ್ಜರಿ ವಿದ್ಯುತ್ ಸಹಾಯಧನ (Electricity Subsidy) ಯೋಜನೆಯನ್ನು ಜಾರಿಗೆ ತಂದಿದೆ.
ಸಹಾಯಧನದ ಸಮಗ್ರ ವಿವರ
"ಜವಳಿ ಮತ್ತು ಸಿದ್ಧ ಉಡುಪು ಉದ್ಯಮಗಳಿಗೆ ವಿದ್ಯುತ್ ಸಹಾಯಧನ"
ಕರ್ನಾಟಕ ಸರ್ಕಾರದ ಜವಳಿ ಮತ್ತು ಕೈಮಗ್ಗ ಇಲಾಖೆಯು ರಾಜ್ಯದ ಜವಳಿ ಉದ್ಯಮವನ್ನು ಉತ್ತೇಜಿಸಲು ಮತ್ತು ಉತ್ಪಾದನಾ ವೆಚ್ಚವನ್ನು ತಗ್ಗಿಸಲು ಭರ್ಜರಿ ವಿದ್ಯುತ್ ಸಹಾಯಧನ (Electricity Subsidy) ಯೋಜನೆಯನ್ನು ಜಾರಿಗೆ ತಂದಿದೆ.
#handloomsandtextiles#textilepolicy
"ಪವಿತ್ರ ಶುಕ್ರವಾರ – ಪ್ರೀತಿ, ತ್ಯಾಗ ಮತ್ತು ನಂಬಿಕೆಯ ಸಂಕೇತ"
ಏಸುಕ್ರಿಸ್ತರು ಮಾನವಕುಲದ ಮೇಲಿನ ಅಪಾರ ಪ್ರೀತಿಗಾಗಿ ಶಿಲುಬೆಯಲ್ಲಿ ತ್ಯಾಗ ಮಾಡಿದ ಈ ದಿನ, ಅವರ ದಯೆ ಮತ್ತು ಕರುಣೆಯನ್ನು ಸ್ಮರಿಸೋಣ.
ಭಾರತವನ್ನು ದಾಸ್ಯದಿಂದ ಮುಕ್ತಗೊಳಿಸಲು ನಿರಂತರ ಹೋರಾಟ ನಡೆಸಿದ ಕ್ರಾಂತಿಕಾರಿ ವೀರರಾದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರ ಬಲಿದಾನ ದಿನದಂದು ಅನಂತ ನಮನಗಳು
ನಿಸ್ವಾರ್ಥ ಚಿಂತನೆ ಮತ್ತು ಅದಮ್ಯ ದೇಶಪ್ರೇಮದ ಮೂಲಕ ಭಾರತೀಯರ ಮನದಲ್ಲಿ ಮನೆ ಮಾಡಿರುವ ಈ ವೀರ ಸೇನಾನಿಗಳ ಶೌರ್ಯ ಮತ್ತು ಬಲಿದಾನವು ತಲೆಮಾರುಗಳ ಕಾಲ ನಮಗೆ ಸ್ಫೂರ್ತಿ ನೀಡಲಿ