ಪಿಎಸ್ಐ ಉರಿಗಾಂ ಪೊಲೀಸ್ ಠಾಣೆ ರವರು ಠಾಣಾ ಸರಹದ್ದಿನ ಬ್ಯಾಂಡ್ ಲೈನ್ ನಲ್ಲಿ ಬೀಟ್ ಸಭೆ ಕೈಗೊಂಡು ಗ್ರಾಮದ ಜನರಿಗೆ ಬಾಲ್ಯ ವಿವಾಹ, ಪೋಕ್ಸೋ ಕಾಯ್ದೆ ,ಅಕ್ಕಪಡೆ , ಸೈಬರ್ ಅಪರಾಧ , ಸಂಚಾರ ನಿಯಮಗಳ ಬಗ್ಗೆ ಹಾಗೂ ಸರಗಳ್ಳತನ ತಡೆ ಬಗ್ಗೆ ಸೂಕ್ತ ಅರಿವು ನೀಡಿರುತ್ತಾರೆ.
ಕೊಡಗು ಜಿಲ್ಲಾ ಮಕ್ಕಳ ವಿಶೇಷ ಪೊಲೀಸ್ ಘಟಕ ಹಾಗೂ ಅಕ್ಕಪಡೆ ಸಿಬ್ಬಂದಿಗಳು ಹಾಕತ್ತೂರು ಪ್ರೌಢಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ರಸ್ತೆ ಸುರಕ್ಷತೆ, ಮಾದಕ ವಸ್ತುಗಳ ದುಷ್ಪರಿಣಾಮ ಮುಂತಾದ ವಿಷಯಗಳ ಬಗ್ಗೆ ಕಾನೂನು ಅರಿವು ಕಾರ್ಯಕ್ರಮ ನಡೆಸಿದರು.
ಭಾರತ ಕಂಡ ಅಗ್ರಮಾನ್ಯ ನಾಯಕ, ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಪ್ರಧಾನಮಂತ್ರಿ ಭಾರತರತ್ನ ಪುರಸ್ಕೃತ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯಂದು ಗೌರವ ನಮನಗಳು.
#LalBahadurShastri
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜಯಂತಿಯ ಹಾರ್ದಿಕ ಶುಭಾಶಯಗಳು. ಸತ್ಯ, ಅಹಿಂಸೆ ಮತ್ತು ಸರಳತೆಯ ಮೂಲಕ ವಿಶ್ವಕ್ಕೆ ಮಾನವೀಯತೆಯ ಸಂದೇಶ ಸಾರಿದ ಮಹಾತ್ಮ ಗಾಂಧೀಜಿಯವರ ಆದರ್ಶಗಳು ನಮ್ಮೆಲ್ಲರಿಗೂ ಸದಾ ಪ್ರೇರಣೆಯಾಗಲಿ.
#MahatmaGandhi
ಟಿ. ನರಸೀಪುರ ಬಸ್ ನಿಲ್ದಾಣದಲ್ಲಿ “ಅಕ್ಕ ಪಡೆ”ಯ ಕಾರ್ಯನಿರ್ವಹಣೆ ಕುರಿತು ಅರಿವು ಮೂಡಿಸಲಾಯಿತು. ಈ ಸಂದರ್ಭದಲ್ಲಿ ಮಹಿಳಾ ಸಹಾಯವಾಣಿ 181, ಮಕ್ಕಳ ಸಹಾಯವಾಣಿ 1098 ಹಾಗೂ ತುರ್ತು ಸಹಾಯವಾಣಿ 112 ಕುರಿತು ಮಾಹಿತಿ ನೀಡಲಾಯಿತು.
#ಅಕ್ಕಪಡೆ#181Helpline
ದೊಡ್ಡ ಹಳ್ಳಿ ವೃತ್ತ ನಾಗಲಾಪುರ ಅಂಗನವಾಡಿ ಕೇಂದ್ರದಲ್ಲಿ ವೃತ್ತ ಮಟ್ಟದ ಪೋಷನ್ ಮಾಸಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ಇದೇ ಸಂದರ್ಭದಲ್ಲಿ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ಹಾಗೂ ಮಕ್ಕಳಿಗೆ ಅನ್ನಪ್ರಶನ ಕಾರ್ಯಕ್ರಮ ಭಾಗ್ಯಲಕ್ಷ್ಮಿ ಬಾಂಡ್ ವಿತರಣೆ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಯಿತು
ಚಿಕ್ಕಮಗಳೂರು ನಗರದಲ್ಲಿರುವ ಎಸ್.ಟಿ.ಜೆ. ಮಹಿಳಾ ಪಿ.ಯು. ಕಾಲೇಜ್ಗೆ ಅಕ್ಕಪಡೆ ತಂಡ ಇಂದು ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿ, ಅಕ್ಕಪಡೆಯ ಕಾರ್ಯಗಳು, ವಿವಿಧ ಸಹಾಯವಾಣಿಗಳ ಕುರಿತು ಅರಿವು ಮೂಡಿಸಿದರು.
ಯಾದಗಿರಿ ಜಿಲ್ಲೆಯ ಅಕ್ಕಪಡೆ ಸಿಬ್ಬಂದಿಯವರು ಸರಕಾರಿ ಪ್ರೌಢಶಾಲೆ, ಬಳಿಚಕ್ರ ಗ್ರಾಮಕ್ಕೆ ಭೇಟಿ ನೀಡಿ, ಅಕ್ಕಪಡೆ ರಚನೆ ಮತ್ತು ಉದ್ದೇಶದ ಕುರಿತು ಮಕ್ಕಳಿಗೆ ಮಾಹಿತಿ ನೀಡಿದರು.
ಮಕ್ಕಳ ಸುರಕ್ಷತೆ ನಮ್ಮೆಲ್ಲರ ಹೊಣೆಗಾರಿಕೆ.
#DWCDGOK#AkkaPade
ಗಾನ ಗಂಧರ್ವ, ಪದ್ಮವಿಭೂಷಣ ಡಾ. ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು. ತಮ್ಮ ಮಧುರ ಧ್ವನಿಯ ಮೂಲಕ ಕೋಟ್ಯಂತರ ಸಂಗೀತ ಪ್ರೇಮಿಗಳ ಹೃದಯ ಗೆದ್ದ ಅವರ ನೆನಪುಗಳು ನಮ್ಮೊಂದಿಗೆ ಎಂದಿಗೂ ಅಮರ.
ರಾಯಚೂರಿನಲ್ಲಿ ಶಿಶು ಅಭಿವೃದ್ಧಿ ಯೋಜನೆ ರಾಯಚೂರು ಹಾಗೂ ಶ್ರೀಮತಿ ಖಾಜಾಬೀ ಡಿಸಿಪಿಯು ಯೂನಿಟ್ ಇಂದ ಆಗಮಿಸಿ ಮಕ್ಕಳ ಸಹಾಯವಾಣಿ, ಅಕ್ಕಪಡೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಪೋಕ್ಸೋ, ನ್ಯೂಟ್ರಿಷನ್ ಮತ್ತು ವೈಯಕ್ತಿಕ ಸ್ವಚ್ಛತೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
#DWCD | #GOK | #Akkapade
ಮಕ್ಕಳ ಸುರಕ್ಷತೆ ಮತ್ತು ಸರ್ವತೋಮುಖ ರಕ್ಷಣೆ ನಮ್ಮ ಸರ್ಕಾರದ ಆದ್ಯತೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಹೆಣ್ಣುಮಕ್ಕಳು ಹಾಗೂ ಮಕ್ಕಳ ಭದ್ರತೆಗಾಗಿ “ಅಕ್ಕಪಡೆ” ಸನ್ನದ್ಧವಾಗಿದೆ.
ಭಯಬೇಡ, ನಿಮ್ಮ ಮಕ್ಕಳ ರಕ್ಷಣೆಗೆ ಕಾವಲಾಗಿ ‘ಅಕ್ಕ ಪಡೆ’ ಸದಾ ಜೊತೆಗಿದೆ!
#ಅಕ್ಕಪಡೆ#AkkaPade#ಮಹಿಳಾಮತ್ತುಮಕ್ಕಳಅಭಿವೃದ್ಧಿಇಲಾಖೆ
ದಿನಾಂಕ: 22-09-2026 ರಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಸಬಲೀಕರಣ ಘಟಕ, ತುಮಕೂರು ಹಾಗೂ ಬಾಪುಜಿ ಸಂಯುಕ್ತ ಪದವಿ ಪೂರ್ವ ಕಾಲೇಜು ಹೊರಪೇಟೆ ತುಮಕೂರು ಇವರ ಸಂಯುಕ್ತಾಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ದಿನಾಂಕ: 23-09-2026 ರಂದು ಸಮಾಜ ಕಾರ್ಯದ ಪದವಿ, ತುಮಕೂರು ವಿಶ್ವವಿದ್ಯಾನಿಯ ಕಲಾ ವಿಭಾಗ-ತುಮಕೂರು ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳ ಪುನಶ್ಚೇತನ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯೋಜನೆ, ಕಾರ್ಯಕ್ರಮ, ಕಾಯ್ದೆ, ಸಹಾಯವಾಣಿಗಳ ಬಗ್ಗೆ ಮಾಹಿತಿ ನೀಡಲಾಯಿತು.