ಕರ್ನಾಟಕ ಸಾಂಸ್ಕೃತಿಕ ತಂಡವು ನಾಸಿಕ್ನಲ್ಲಿ 2024 ರ ರಾಷ್ಟ್ರೀಯ ಯುವಜನೋತ್ಸವದಲ್ಲಿ ಕ್ರೀಡೆ, ಯುವ ವ್ಯವಹಾರಗಳು ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವರಾದ ಶ್ರೀ ಅನುರಾಗ್ ಠಾಕೂರ್ ಅವರೊಂದಿಗೆ
#DYES#Karnataka
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಐಎಎಸ್ ಮತ್ತು ಆಯುಕ್ತರಾದ ಶ್ರೀ ಶಶಿಕುಮಾರ್ ಎನ್ ಐಪಿಎಸ್ ಭಾಗವಹಿಸಿದ್ದರು. #Dyes#karnataka#kanteeravastadium
ಏಕಲವ್ಯ ಪ್ರಶಸ್ತಿಯು ಕರ್ನಾಟಕ ಸರ್ಕಾರವು ರಾಷ್ಟ್ರದ ಕ್ರೀಡಾಪಟುಗಳಿಗೆ ನೀಡುವ ಗೌರವ ಕ್ರೀಡಾ ಪ್ರಶಸ್ತಿಯಾಗಿದೆ. ಇದನ್ನು 1993 ರಲ್ಲಿ ಪ್ರಾರಂಭಿಸಲಾಯಿತು, ಈ ಗೌರವವನ್ನು IMFA ಗ್ರೂಪ್ನ (IMPaCT) ನಿಂದ ನೀಡಲಾಗುತ್ತದೆ. ಪ್ರಶಸ್ತಿಯು ಏಕಲವ್ಯನ ಕಂಚಿನ ಪ್ರತಿಮೆ ಮತ್ತು 2 ಲಕ್ಷ ನಗದು ಬಹುಮಾನವನ್ನು ಹೊಂದಿದೆ
#Sports#Karnataka#Dyes
ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಕಳೆದ ಐದು ವರ್ಷಗಳಿಂದ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆಗೆ ಗಣನೀಯ ಕೊಡುಗೆ ನೀಡಿದ ಕ್ರೀಡಾ ಪೋಷಕರಿಗೆ ನೀಡಲಾಗುತ್ತದೆ.
#Dyes
ಮಹಿಳೆ ಎಂದರೆ ಭವಿಷ್ಯ, ಮಹಿಳೆ ಬದುಕಿಗೆ ಬಲ. ನಮ್ಮ ಬದುಕನ್ನು ರೂಪಿಸಿದ, ಜೀವನಕ್ಕೆ ಶಕ್ತಿ ತುಂಬಿದ ಎಲ್ಲಾ ಮಹಿಳೆಯರನ್ನು ಗೌರವಿಸೋಣ. ಅವರ ಮಮತೆ, ತ್ಯಾಗ, ಶ್ರಮಕ್ಕೆ ಧನ್ಯವಾದ ಹೇಳೋಣ.
ಮಹಿಳಾ ದಿನಾಚರಣೆಯ ಶುಭಾಶಯಗಳು
#WomensDay#WomenEmpowerment@BNagendraINC
ಶಿವನ ಶಾಶ್ವತ ಪ್ರೀತಿ ಮತ್ತು ಶಕ್ತಿ ನಿಮಗೆ ಕರುಣಿಸಲಿ, ಸಂತೋಷ ಮತ್ತು ಶಾಂತಿ ಸಹಿತ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಶಿವನ ಸಕಲ ಆಶೀರ್ವಾದ ಸಿಗಲಿ.
ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು!
#mahashivarathri2024#DYES
ಬಳ್ಳಾರಿ ನಗರದ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಯುವಜನೋತ್ಸವ 2024ರ ಆಚರಣೆಯ ಅಂಗವಾಗಿ ಜಾನಪದ ನೃತ್ಯ (ವೈಯಕ್ತಿಕ) ಸ್ಪರ್ಧೆಯನ್ನು ನಡೆಸಲಾಯಿತು
ಈ ಸ್ಪರ್ಧೆಯಲ್ಲಿ ಶಿವಮೊಗ್ಗ ಜಿಲ್ಲೆಯ ಮಹೇಂದ್ರ ಪ್ರಥಮ, ಬೆಳಗಾವಿ ಜಿಲ್ಲೆಯ ರಾಧಿಕಾ ಪತ್ತಾರ ದ್ವಿತೀಯ ಹಾಗೂ ದಕ್ಷಿಣ ಕನ್ನಡದ ರಂಜಿತ್ ತೃತೀಯ ಬಹುಮಾನ ಪಡೆದರು
ವಿಜೇತರಿಗೆ ಹೃತ್ಪೂರ್ವಕ ಅಭಿನಂದನೆಗಳ
ಬಳ್ಳಾರಿಯ ಎಂ ಆರ್ ಕೆ ಫಂಕ್ಷನ್ ಹಾಲ್ನಲ್ಲಿ ರಾಜ್ಯ ಮಟ್ಟದ ಯುವಜನೋತ್ಸವ 2024ರ ಆಚರಣೆಯ ಅಂಗವಾಗಿ ಜನಪದ ಗೀತೆ (ವೈಯಕ್ತಿಕ) ಸ್ಪರ್ಧೆಯನ್ನು ಆಯೋಜಿಸಲಾಗಿತ್ತು
ಸ್ಪರ್ಧೆಯಲ್ಲಿ ಹಾಸನ ಜಿಲ್ಲೆಯ ಮನೋಜ್ ಮತ್ತು ತಂಡ ಪ್ರಥಮ ಬಹುಮಾನ ಪಡೆದರು..
#youthfestival2024#DYES
ಬಳ್ಳಾರಿಯ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ರಾಜ್ಯ ಮಟ್ಟದ ಯುವಜನೋತ್ಸವ 2024ರ ಆಚರಣೆಯ ಅಂಗವಾಗಿ ಜನಪದ ನೃತ್ಯ (ಗುಂಪು) ಸ್ಪರ್ಧೆಯನ್ನು ಆಯೋಜಿಸಲಾಗಿತ್ತು
ಸ್ಪರ್ಧೆಯಲ್ಲಿ ಹಾಸನ ಜಿಲ್ಲೆಯ ಮನೋಜ್ ಮತ್ತು ತಂಡ ಪ್ರಥಮ ಬಹುಮಾನ ಪಡೆದರು..
ಬಳ್ಳಾರಿಯ ಕಮ್ಮ ಭವನದಲ್ಲಿ ರಾಜ್ಯ ಮಟ್ಟದ ಯುವಜನೋತ್ಸವ 2024 ಆಚರಣೆಯ ಅಂಗವಾಗಿ ಜಾನಪದ ಗೀತೆ (ಗುಂಪು) ಸ್ಪರ್ಧೆಯನ್ನು ಆಯೋಜಿಸಲಾಗಿತ್ತು
ಸ್ಪರ್ಧೆಯಲ್ಲಿ ಬೆಂಗಳೂರು (ನ) ನಿಸರ್ಗ ಮತ್ತು ತಂಡ ಪ್ರಥಮ, ಮಂಡ್ಯ ಜಿಲ್ಲೆಯ ಚೈತ್ರಾ ಮತ್ತು ತಂಡ ದ್ವಿತೀಯ ಹಾಗೂ ಚಿಕ್ಕಮಗಳೂರಿನ ಕೆ ಪಿ ಪೂರ್ಣಚಂದ್ರ ತೇಜಸ್ವಿ ಜನಪದ ಕಲಾತಂಡ ತೃತೀಯ ಬಹುಮಾನ ಪಡೆದರು
ನಾಸಿಕ್ನಲ್ಲಿ ನಡೆದ ರಾಷ್ಟ್ರೀಯ ಯುವ ಉತ್ಸವ 2024 ರಲ್ಲಿ ಕರ್ನಾಟಕ ತಂಡದ ಪ್ರದರ್ಶನ.
ಕರ್ನಾಟಕದ ಸಂಸ್ಕೃತಿಯನ್ನು ಎತ್ತಿ ಹಿಡಿದಿದ್ದಕ್ಕೆ ತಂಡಕ್ಕೆ ಅಭಿನಂದನೆಗಳು
#youthfestival2024#karnatakateam
ಹುಬ್ಬಳ್ಳಿ-ಧಾರವಾಡ ಜಿಲ್ಲೆಯ ನಂದಿತಾ ನಾಗನ್ ಗೌಡರ್ ಎಂಬ ಗ್ರಾಮೀಣ ಕ್ರೀಡಾಪಟು ಜಗತ್ತಿನ ಅತೀ ಎತ್ತರದ ಶಿಖರಗಳಲ್ಲಿ 4 ಶಿಖರಗಳನ್ನು ಹತ್ತಿ ಸಾಧನೆಗೈದು ಇದೀಗ 5ನೇ ಶಿಖರ ಹತ್ತಲು ಪ್ರಯತ್ನಕ್ಕೆ ಕೈಹಾಕಿರುವ ಕ್ರೀಡಾ ಸಾಧಕಿಗೆ ಇಂದು ವಿಧಾನಸೌಧದಲ್ಲಿ ಅಭಿನಂದಿಸಿ ಪ್ರೋತ್ಸಾಹಿಸಲಾಯಿತು.
ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಆರ್ಥಿಕ ಸಹಾಯ ಮತ್ತು ಕ್ರೀಡಾ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದೆ.
ಸ್ಕೌಟ್ ಆಗಿರುವುದು ಸುಲಭವಲ್ಲ, ಉತ್ತಮ ಸ್ಕೌಟ್ ಆಗಿರುವುದು ನಿರಂತರ ಸಮರ್ಪಣೆ ಮತ್ತು ಪ್ರಯತ್ನಗಳನ್ನು ಬಯಸುತ್ತದೆ.
ವಿಶ್ವ ಸ್ಕೌಟ್ಸ್ ದಿನದ ಶುಭಾಶಯಗಳು
#WorldScoutsDay@BNagendraINC