IPL - 2026 ರ ಫೈನಲ್ ಪಂದ್ಯದ ಕಾರಣ ಸಾರ್ವಜನಿಕರ ಹಿತದೃಷ್ಠಿಯಿಂದ ದಿನಾಂಕ 31.05.2026 ರ ರಾತ್ರಿ 10 : 30 ಗಂಟೆಯಿಂದ ದಿನಾಂಕ 01.06.2026 ರ ಬೆಳಗಿನ ಜಾವ 06 : 00 ಗಂಟೆಯವರೆಗೆ ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಪ್ಲೈಓವರ್ ನಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದ್ದು ಸಾರ್ವಜನಿಕರು ಸಹಕರಿಸಬೇಕಾಗಿ ಕೋರಿಕೆ.
ಠಾಣೆಯಲ್ಲಿ ಮಾನ್ಯ ಎಸಿಪಿ ಸರ್ ರವರ ನೇತೃತ್ವದಲ್ಲಿ ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಠಾಣಾ ಸರಹದ್ದಿನಲ್ಲಿನ ಶಾಲೆಗಳ ಮುಖ್ಯಾಪಾಧ್ಯಾಯರು, ಹಾಗೂ ಶಾಲಾ ವಾಹನಗಳ ಮೇಲ್ವಿಚಾರಕರು ಮತ್ತು ಚಾಲಕರಿಗೆ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಹಾಗೂ ಶಾಲಾ ವಾಹನಗಳ ಚಾಲನೆಯ ಮುಂಜಾಗ್ರತ ಕ್ರಮದ ಬಗ್ಗೆ ಸೂಚನೆಗಳನ್ನು ನೀಡಲಾಗಿದೆ.
ಈ ದಿನ ಠಾಣೆಯಲ್ಲಿ ಶಾಲಾ ವಾಹನಗಳ ಮೇಲ್ವಿಚಾರಕರಿಗೆ ಹಾಗೂ ಚಾಲಕರಿಗೆ ಶಾಲಾ ವಾಹನ ಚಾಲನೆಯ ಮುಂಜಾಗ್ರತ ಕ್ರಮದ ಬಗ್ಗೆ ಹಾಗೂ ವಿದ್ಯಾರ್ಥಿಗಳ ರಕ್ಷಣೆಯ ಜವಾಬ್ದಾರಿಯ ಬಗ್ಗೆ ಸೂಚನೆಗಳನ್ನು ನೀಡಲಾಗಿದೆ.
@FeeshanMohammed@DCP_ECITY@DCPECityBCP@DCPSouthTrBCP ನೀಲಾದ್ರಿ ರಸ್ತೆಯಲ್ಲಿನ ಪಾದಚಾರಿ ಮಾರ್ಗದಲ್ಲಿರುವ ತಳ್ಳುಗಾಡಿಯ ಮಾರಾಟಗಾರರನ್ನು ತೆರವುಗೊಳಿಸಿ, ಪಾದಚಾರಿ ಮಾರ್ಗವನ್ನು ಅಭಿವೃದ್ಧಿಪಡಿಸಿ ಗ್ರಿಲ್ ಹಾಕಿಸಿ ಪಾದಚರಿಗಳಿಗೆ ಅನುಕೂಲ ಮಾಡಿಕೊಡುವಂತೆ ದೊಡ್ಡತೋಗೂರು ಪಟ್ಟಣ ಪಂಚಾಯಿತಿಯ ಅಧಿಕಾರಿಗಳಿಗೆ ಪತ್ರ ಬರೆದು ಕೋರಲಾಗಿದೆ.
ಈ ದಿನ ಠಾಣಾ ಸರಹದ್ದಿನಲ್ಲಿ ಪಾದಚಾರಿಗಳಿಗೆ ರಸ್ತೆ ದಾಟುವಾಗ ವಹಿಸಬೇಕಾದ ಮುಂಜಾಗ್ರತ ಕ್ರಮದ ಬಗ್ಗೆ ಹಾಗೂ ಸಂಚಾರ ನಿಯಮಗಳ ಬಗ್ಗೆ ನಮ್ಮ ಠಾಣೆಯ ಅಧಿಕಾರಿಗಳು ಅರಿವು ಮೂಡಿಸುತ್ತಿರುವುದು.
ವೇಗ ಮಿತಿ ಪಾಲಿಸಿ, ಸುರಕ್ಷಿತವಾಗಿ ಚಾಲನೆ ಮಾಡಿ.
ನಿಮ್ಮ ಕುಟುಂಬ ನಿಮ್ಮನ್ನು ಸುರಕ್ಷಿತವಾಗಿ ಮನೆಗೆ ಬರಲು ಕಾಯುತ್ತಿದೆ.
ವೇಗಕ್ಕಿಂತ ಜೀವ ಅಮೂಲ್ಯ — ರಸ್ತೆ ಸುರಕ್ಷತೆ ಎಲ್ಲರ ಜವಾಬ್ದಾರಿ." 🚦🛣️
ಈ ದಿನ @ecitytrfps ಠಾಣಾ ವ್ಯಾಪ್ತಿಯ ಹೊಸೂರು ಮುಖ್ಯ ರಸ್ತೆಯ ಹೆಬ್ಬಗೋಡಿ ಕಡೆಯಿಂದ ವೀರಸಂದ್ರ ಜಂಕ್ಷನ್ ಕಡೆಗೆ ಹೋಗುವ ಬಯೋಕಾನ್ ಕಂಪನಿ ಮುಂಭಾಗದ ರಸ್ತೆಯಲ್ಲಿ ಹಾಗೂ ಹೆಬ್ಬಗೋಡಿ ಹೆಬ್ಬಾಗಿಲು ಮುಂಭಾಗದಲ್ಲಿ ಮಾರಣಾಂತಿಕ ರಸ್ತೆ ಅಪಘಾತ ಸಂಭವಿಸಿದ್ದು, ಸದರಿ ಸ್ಥಳಕ್ಕೆ ಭೇಟಿ ನೀಡಿ ಅಪಘಾತ ನಡೆದ ಸ್ಥಳದ ಪರಿಶೀಲನೆ ನಡೆಸಲಾಯಿತು.
ದಿನಾಂಕ 09.05.2026 ರಂದು ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸರಸ್ತೆ, ಚೆನ್ನಕೇಶವ ನಗರದಲ್ಲಿ ಊರಹಬ್ಬದ ಪ್ರಯುಕ್ತ ಹೆಚ್ಚಿನ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದ್ದು, ಸಾರ್ವಜನಿಕರ ಸುಗಮ ಸಂಚಾರಕ್ಕೆ ಹಾಗೂ ಸಾರ್ವಜನಿಕರ ಹಿತ ದೃಷ್ಠಿಯಿಂದ ಈ ಕೆಳಕಂಡಂತೆ ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಸೂಚನೆ.
ಪಾದಚಾರಿಗಳ ಸುರಕ್ಷತೆ ನಮ್ಮ ಸಹನೆಯಲ್ಲಿದೆ. ಜೀಬ್ರಾ ಕ್ರಾಸಿಂಗ್ ಬಳಿ ವಾಹನದ ವೇಗವನ್ನು ನಿಯಂತ್ರಿಸಿ, ಪಾದಚಾರಿಗಳಿಗೆ ಮೊದಲ ಆದ್ಯತೆ ನೀಡಿ. ಒಂದು ಕ್ಷಣದ ಜಾಗ್ರತೆ ಅನೇಕ ಜೀವಗಳನ್ನು ಕಾಪಾಡಬಹುದು.
ಈ ದಿನ ಠಾಣಾ ಸರಹದ್ದಿನಲ್ಲಿ ನಮ್ಮ ಅಧಿಕಾರಿಗಳು ಆಟೋ ಚಾಲಕರಿಗೆ, ಕಂಪನಿ ಉದ್ಯೋಗಿಗಳಿಗೆ, ಕಾರ್ಮಿಕರಿಗೆ, ಸಾರ್ವಜನಿಕರಿಗೆ, ವಾಹನ ಚಾಲಕರಿಗೆ ಸಂಚಾರ ನಿಯಮಗಳ ಬಗ್ಗೆ, ನಿಯಮಗಳ ಉಲ್ಲಂಘನೆಯ ಪರಿಣಾಮಗಳ ಬಗ್ಗೆ ಅರಿವು ಮೂಡಿಸುತ್ತಿರುವುದು.