ಚಾಮುಂಡಿ ಬೆಟ್ಟ ಎಲ್ಲ ಧರ್ಮ–ಸಮುದಾಯದವರಿಗೂ ಮುಕ್ತವಾಗಿ ತೆರೆದಿದೆ. ತಾಯಿಯನ್ನು ಆರಾಧಿಸುವವರು, ನಂಬುವವರು, ಗೌರವಿಸುವವರು ಎಲ್ಲ ಜಾತಿ-ಧರ್ಮಗಳಲ್ಲಿದ್ದಾರೆ.
ಆದರೆ, ಚಾಮುಂಡಿ ಬೆಟ್ಟ ಒಂದು ಶಕ್ತಿಪೀಠ. ತಾಯಿ ಚಾಮುಂಡೇಶ್ವರಿ ಹಿಂದೂ ದೇವಿ - ಆಕೆಯ ಉಲ್ಲೇಖ ಹಿಂದೂ ಗ್ರಂಥವಾದ ಮಾರ್ಕಂಡೇಯ ಪುರಾಣದ ದೇವಿ ಮಹಾತ್ಮ್ಯದಲ್ಲಿದೆ; ಬೇರೆ ಧರ್ಮಗಳ ಗ್ರಂಥಗಳಲ್ಲಿ ಇಲ್ಲ. ಪ್ರತಿದಿನವೂ ಹಿಂದೂ ಶಾಸ್ತ್ರಾನುಸಾರವೇ ಪೂಜೆ–ಪರಂಪರೆ ನಡೆಯುತ್ತಿವೆ. ಇಲ್ಲಿಗೆ ಬರುವ ಎಲ್ಲರೂ ಆಕೆಯನ್ನು ಹಿಂದೂ ದೇವಿಯಾಗಿಯೇ ಆರಾಧಿಸುತ್ತಾರೆ.
ದಸರಾ ನಮ್ಮ ನಾಡಿನ ಅತಿದೊಡ್ಡ ಸಾಂಸ್ಕೃತಿಕ ಸಂಭ್ರಮ. ಎಲ್ಲ ಧರ್ಮದವರು ಪಾಲ್ಗೊಳ್ಳಬಹುದು, ಆದರೆ ಮೂಲತಃ ಅದು ಹಿಂದೂ ಹಬ್ಬ. ಅದರ ದಿನಾಂಕವನ್ನು ನಿಗದಿಪಡಿಸುವುದು ಹಿಂದೂ ಪಂಚಾಂಗ. ಯಾರದೋ ಇಚ್ಛೆ-ಮನೋಭಾವಕ್ಕೆ ಅನುಗುಣವಾಗಿ ಬದಲಾಯಿಸುವ ಹಬ್ಬವಲ್ಲ.
ನೀವು ಒಂದು ಕುಟುಂಬವನ್ನೇ ನಿಮ್ಮ ದೇವರನ್ನಾಗಿ ಮಾಡಿಕೊಂಡಿದ್ದೀರಿ. ಹೀಗಿರುವಾಗ, ದೇವಿಯ ಹಿಂದೂ ಸ್ವರೂಪವನ್ನೂ, ದಸರೆಯ ಧಾರ್ಮಿಕ ಪರಂಪರೆಯನ್ನೂ ನಿರಾಕರಿಸುವ ದುಸ್ಸಾಹಸ ಮಾಡಬೇಡಿ.
ನಾವು ರಾಜಕೀಯ ಮಾಡುತ್ತಿಲ್ಲ. ನೀವು ಓಲೈಕೆ ರಾಜಕೀಯಕ್ಕಾಗಿ ನಮ್ಮ ಧರ್ಮದ ಮೇಲೆ ದಾಳಿ ಮಾಡಿದಾಗ, ಅದನ್ನು ರಕ್ಷಿಸಲು ನಾವು ಎದ್ದು ನಿಂತಿದ್ದೇವೆ.
ಯಾವನ್ ಯಾವನ್ ಧರ್ಮಸ್ಥಳನ ಮುಜರಾಯಿ ಇಲಾಖೆ ಗೆ ಸೇರಿಸಿ ಅಂತ ಇದ್ದೀರಾ ನೋಡ್ಕೊಳ್ರಿ
ಅದರ ಕಾರ್ಯ. ..!
ನಮ್ಮ ಆಗ್ರಹ ಎಲ್ಲಾ ಹಿಂದು ದೇವಾಲಯಗಳನ್ನ ಸರಕಾರದ ಕಪಿ ಮುಷ್ಠಿ ಇಂದ ಬಿಡುಗಡೆಗೊಳಸಿ.
ಸಂವಿಧಾನ ಎಲ್ಲರಿಗೂ ಒಂದೇ ಇರಲಿ 😊
ಮಸೀದಿ
ಚರ್ಚ್ ಗೆ ಇರದ ಮುಜರಾಯಿ ಇಲಾಖೆ ನಮಗೇಕೆ?
ಧರ್ಮ ಕಾರ್ಯ - 1
ಕನ್ನಡವನ್ನು ಭುವನೇಶ್ವರಿಯಾಗಿ ಒಪ್ಪದ ಈಕೆ, ತಾಯಿ ಚಾಮುಂಡೇಶ್ವರಿಯನ್ನು ನಾಡದೇವತೆಯಾಗಿ ಒಪ್ಪಿಕೊಂಡು ಪುಷ್ಪಾರ್ಚನೆ ಮಾಡಿಯಾರೆ ಬೂಕರ್ ಭಾನು?
------‐--------------------------
ಜನ ಸಾಹಿತ್ಯ ಸಮ್ಮೇಳನ - ೨೦೨೩ ರಲ್ಲಿ ಬಾನು ಮುಸ್ತಾಕ್ ರವರು ಮಾಡಿದ ಭಾಷಣ.
ಚಿಂತಕ ಚಕ್ರವರ್ತಿ ಸೂಲಿಬೆಲೆಯವರ ಅಖಂಡ ಭಾರತದ ಕುರಿತಾದ ಉಪನ್ಯಾಸ ಕುಂದಾಪುರದಲ್ಲಿ ನಿರ್ವಿಘ್ನವಾಗಿ ಆರಂಭವಾಗಿದೆ. ಎಲ್ಲರೂ ಬಂದಿದ್ರು, ನಾನೂ ಭಾಗಿಯಾದೆ. ಇನ್ನೆರಡು ದಿನವೂ ಈ ಕುರಿತಾದ ಉಪನ್ಯಾಸ ನಡೆಯಲಿದೆ. ಕೇವಲ ಕುಂದಾಪುರಕ್ಕೆ ಸೀಮಿತವಾಗಿದ್ದ ಈ ಕಾರ್ಯಕ್ರಮಕ್ಕೆ ರಾಜ್ಯಮಟ್ಟದ ಪ್ರಚಾರ ನೀಡಿದ ಕಾಂಗ್ರೆಸ್ಸಿಗರಿಗೆ ಧನ್ಯವಾದಗಳು.
@astitvam
Yoga unites the world!
Glad to see immense enthusiasm all across the planet for International Day of Yoga.
I took part in a Yoga Day programme in Visakhapatnam, Andhra Pradesh. People from all walks of life also joined. Here are some glimpses…
ನಿನ್ನೆ ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತದ ಘಟನೆಯ ಕುರಿತು ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯವರಿಗೆ ಕೆಲ ಪ್ರಶ್ನೆಗಳು.
1.ಸಾವಿರಾರು ಜನ ಸೇರುವ ನಿರೀಕ್ಷೆ ಇದ್ದರೂ, ಸೂಕ್ತ ಜನಸಂದಣಿ ನಿರ್ವಹಣಾ ಯೋಜನೆ (Crowd Management Plan) ಏಕೆ ರೂಪಿಸಲಾಗಲಿಲ್ಲ? ಸಾವಿರಾರು ಜನ ಸೇರಿದ್ದರೂ, ತುರ್ತು ಸೇವೆಗಳಾದ (ಅಗ್ನಿಶಾಮಕ ದಳ, ಆಂಬ್ಯುಲೆನ್ಸ್, ವೈದ್ಯಕೀಯ ತಂಡ) ಸಂಖ್ಯೆ ಅತ್ಯಂತ ಕಡಿಮೆಯಿತ್ತು ಏಕೆ?
2.ಗುಪ್ತಚರ ಇಲಾಖೆಯು ಸಾವಿರಾರುಜನರು ಸೇರುವ ಸಾಧ್ಯತೆಯ ಬಗ್ಗೆ ಮುಂಚಿತವಾಗಿ ಎಚ್ಚರಿಕೆ ನೀಡಲಿಲ್ಲವೇ? ನೀಡಿದ್ದರೂ, ಆ ಎಚ್ಚರಿಕೆಗಳನ್ನು ನಿರ್ಲಕ್ಷಿಸಿದ್ದು ಏಕೆ?
3.ಕ್ರೀಡಾಂಗಣದ ಸಾಮರ್ಥ್ಯಕ್ಕೆ ಅಧಿಕ ಜನರು ಸೇರುವ ಸಾಧ್ಯತೆಯನ್ನು ಏಕೆ ಅಂದಾಜಿಸಲಾಗಲಿಲ್ಲ? ಇದು ಗಂಭೀರ ನಿರ್ಲಕ್ಷ್ಯವಲ್ಲವೇ?
4.ಅಪಾರವಾದ ಕ್ರೀಡಾ ಪ್ರೇಮಿಗಳು ಸೇರುವ ನಿರೀಕ್ಷೆ ನಗರದ ಪ್ರತಿಯೊಬ್ಬರಿಗೂ ತಿಳಿದಿತ್ತು, ಆದರೆ ಸರ್ಕಾರ ನಡೆಸುವವರಿಗೆ ಮಾತ್ರ ಎಷ್ಟು ಜನ ಸೇರಬಹುದು ಎಂಬ ಅಂದಾಜು ಇರಲಿಲ್ಲ" ಎಂಬ ನಿಮ್ಮ ಮಾತು ಸರ್ಕಾರದ ವೈಫಲ್ಯವನ್ನು ಒಪ್ಪಿಕೊಂಡಂತಲ್ಲವೇ?
5.ಕಾರ್ಯಕ್ರಮಕ್ಕೆ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು (Entry and Exit Points) ಸರಿಯಾಗಿ ನಿರ್ವಹಿಸದಿರಲು ಕಾರಣವೇನು?
6.ಬೆಂಗಳೂರಿನಂತಹ ನಗರದಲ್ಲಿ ಒಂದೇ ರೀತಿಯ ಎರಡು ದೊಡ್ಡ ಕಾರ್ಯಕ್ರಮಗಳ ಅಗತ್ಯವಿತ್ತೇ? ಇದು ಜನಸಂದಣಿಗೆ ಮತ್ತಷ್ಟು ಕಾರಣವಾಗಲಿಲ್ಲವೇ? ಪೊಲೀಸರು ಬೇಡ ಅಂದರೂ ಪೋಲೀಸರ ಮೇಲೆ ಒತ್ತಡ ಹಾಕಿ ಕಾರ್ಯಕ್ರಮ ನಡೆಸಿದ ಉದ್ದೇಶವಾದರೂ ಏನು?
7.ಈ ಕಾರ್ಯಕ್ರಮವನ್ನು ಯಾರು ಆಯೋಜಿಸಿದ್ದರು – ಸರ್ಕಾರವೇ, ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ (KSCA) ಅಥವಾ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಆಡಳಿತ ಮಂಡಳಿಯೇ? ಜವಾಬ್ದಾರಿಯ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ಏಕೆ?
8.ಕೇವಲ ಒಂದು ಫ್ರಾಂಚೈಸಿ ಗೆಲುವುವನ್ನು ರಾಜ್ಯ ಸರ್ಕಾರವೇ ಸಂಭ್ರಮಿಸುವ ಅಗತ್ಯ ಏನಿತ್ತು? ಇದು ಸರ್ಕಾರದ ಆದ್ಯತೆಯಾಗಬೇಕಿತ್ತೇ?
9.ಆರ್ಸಿಬಿ ಪ್ರಶಸ್ತಿ ಗೆದ್ದ ಹನ್ನೆರಡು ಗಂಟೆಯೊಳಗೆ ವಿಧಾನಸೌಧದ ಮುಂದೆ ಸಮಾರಂಭ ಏರ್ಪಡಿಸುವ ಆತುರವೇನಿತ್ತು? ಡಿ.ಕೆ. ಶಿವಕುಮಾರ್ ಎಲ್ಲಾ ಶ್ರೇಯಸ್ಸು ತನಗೆ ಸಿಗಲಿ ಎಂದು ಸನ್ಮಾನ ಕಾರ್ಯಕ್ರಮ ಆಯೋಜಿಸಿದ್ದಾರಾ?
10.ಈ ಗೆಲುವಿನ "ಕ್ರೆಡಿಟ್" ತೆಗೆದುಕೊಳ್ಳುವ ಹಪಾಹಪಿ ಸರ್ಕಾರಕ್ಕೆ ಏಕೆ ಬಂತು? ಇದು ರಾಜಕೀಯ ಲಾಭಕ್ಕಾಗಿ ಮಾಡಿದ ಪ್ರಯತ್ನವೇ?
11.ಕ್ರೀಡಾಭಿಮಾನಿಗಳ ಸಾವಿಗೆ ಸರ್ಕಾರದ ಈ "ಕ್ರಿಮಿನಲ್ ನಿರ್ಲಕ್ಷ್ಯ (Criminal Negligence)" ಮತ್ತು "ಪ್ರಚಾರದ ಹಸಿವು" ಕಾರಣವಲ್ಲವೇ?
12.ಸರ್ಕಾರ ಕೇವಲ ಭದ್ರತೆ ಒದಗಿಸಿದೆ ಎಂದು ಹೇಳಿಕೊಳ್ಳುತ್ತಿದೆ. ಆದರೆ, ಇಂತಹ ಬೃಹತ್ ಕಾರ್ಯಕ್ರಮಕ್ಕೆ ಸೂಕ್ತ ಪರವಾನಗಿ ನೀಡುವುದು ಮತ್ತು ನಿಯಮಾವಳಿಗಳನ್ನು ವಿಧಿಸುವುದು ಸರ್ಕಾರದ ಕರ್ತವ್ಯವಲ್ಲವೇ?
13.ಕಾಲ್ತುಳಿತ ಸಂಭವಿಸಿದಾಗಲೂ, ಸಂಭ್ರಮಾಚರಣೆಯನ್ನು ಏಕೆ ಮುಂದುವರಿಸಲು ಅವಕಾಶ ನೀಡಲಾಯಿತು? ಅದನ್ನು ತಕ್ಷಣ ನಿಲ್ಲಿಸಬಹುದಿತ್ತಲ್ಲವೇ?
14.ರಾಜ್ಯದ ಉಪಮುಖ್ಯಮಂತ್ರಿಗಳು, ಉಸ್ತುವಾರಿ ಸಚಿವರುಸೇರಿದಂತೆ ಇನ್ನು ಹಲವು ಸಚಿವರು ಮತ್ತು ಅಧಿಕಾರಿಗಳು ಕಾರ್ಯಕ್ರಮದ ಸ್ಥಳದಲ್ಲಿದ್ದರೂ, ಪರಿಸ್ಥಿತಿಯನ್ನು ನಿಯಂತ್ರಿಸಲು ಏಕೆ ವಿಫಲರಾದರು? ಅವರ ಹಾಜರಿ ಕೇವಲ ಪ್ರಚಾರಕ್ಕಾಗಿತ್ತೇ?
15.ಅವಘಡ ಸಂಭವಿಸಿದ ತರುವಾಯವೂ ಕ್ರೀಡಾಂಗಣದೊಳಗೆ ಸಂಭ್ರಮಾಚರಣೆಯನ್ನು ಕೂಡಲೇ ಸ್ಥಗಿತಗೊಳಿಸಬೇಕಿತ್ತು. ಆದರೆ ಸ್ವತಃ ಉಪಮುಖ್ಯಮಂತ್ರಿಗಳೇ ಸೂತಕದ ಮನೆಯಾಗಿದ್ದ ಸಮಯದಲ್ಲಿ ಮೈದಾನದೊಳಗಿನ ಸಂಭ್ರಮದಲ್ಲಿ ಭಾಗಿಯಾಗಿ ಮೃತಪಟ್ಟವರ ಬಗ್ಗೆ ಸರ್ಕಾರಕ್ಕೆ ಕಿಂಚಿತ್ತೂ ದುಃಖವಾಗಲಿ ಅಥವಾ ನೋವಾಗಲಿ ಇಲ್ಲದಿರುವುದನ್ನುಸತ್ಯವಲ್ಲವೇ?.ಇದು ಸರ್ಕಾರದ, ಸರ್ಕಾರ ನಡೆಸುವವರ ಸಂವೇದನಾ ಶೂನ್ಯತೆಗೆ ಸಾಕ್ಷಿಯಲ್ಲವೇ?
16.ನೀವು "ಅದು ಕ್ರಿಕೆಟ್ ಅಸೋಸಿಯೇಷನ್ ಕಾರ್ಯಕ್ರಮ" ಎಂದು ಸರ್ಕಾರದ ತಪ್ಪನ್ನು ಮುಚ್ಚಿ, ತಮ್ಮ ಹೊಣೆಗಾರಿಕೆಯಿಂದ ನುಣಿಚಿಕೊಳ್ಳುವ ಕೀಳು ಮಟ್ಟದ ವರ್ತನೆ ತೋರಿದ್ದೀರಿ,. ಜನ ಸೇರುತ್ತಾರೆ ಎಂದು ಅರಿವಿದ್ದಾಗ ಅಲ್ಲಿ ಬರುವವರಿಗೆ ರಕ್ಷಣೆ ನೀಡಬೇಕಾದ್ದು ಸರ್ಕಾರದ ಕರ್ತವ್ಯ ಎಂಬುದನ್ನು ನೀವು ಮರೆತಿದ್ದಾರೆಯೇ ?
17.ಈ ದುರ್ಘಟನೆ ಆಕಸ್ಮಿಕವಲ್ಲ, ಇದೊಂದು ಸರ್ಕಾರಿ ಪ್ರಾಯೋಜಿತ ಹತ್ಯಾಕಾಂಡವಲ್ಲವೇ ?
18.ಬೇಜವಾಬ್ದಾರಿ ಸರ್ಕಾರದ ವಿರುದ್ಧ ನಮ್ಮ ಆಕ್ರೋಶ ಪ್ರಕಟಿಸುವುದು ನಮ್ಮ ಕರ್ತವ್ಯ. ಸರ್ಕಾರ ತಪ್ಪೆಸಗಿ ಅದನ್ನು ಮುಚ್ಚಿಕೊಳ್ಳಲು ಸರ್ವಾಧಿಕಾರಿಯಂತೆ ವರ್ತಿಸುತ್ತಿರುವುದು ಖಂಡನೀಯ. ಇವರನ್ನು ಪ್ರಶ್ನಿಸುವುದೂ ತಪ್ಪೇ ?
ಈಗ ತಾನೇ ಡಿ.ಕೆ.ಶಿವಕುಮಾರ್ ರವರ ಹೇಳಿಕೆ ಕೇಳಿದೆ, "ಚಕ್ರವರ್ತಿ ಸೂಲಿಬೆಲೆ ಯಾರು? ಅವರೇನು BJP ಪ್ರೆಸಿಡೆಂಟಾ, ಸಿಎಮ್ಮಾ? ಯಾರೋ ಭಾಷಣ ಮಾಡೋರಿಗೆಲ್ಲ ನಾನ್ಯಾಕೆ ಉತ್ತರ ಕೊಡ್ಲಿ" ಅಂತ ಹೇಳಿದರು.
ಮಾನ್ಯ ಉಪಮುಖ್ಯಮಂತ್ರಿಗಳೇ,
ಚಕ್ರವರ್ತಿ ಸೂಲಿಬೆಲೆ ಯಾರು ಅಂತ ನೆನ್ನೆಯಿಂದ ಊಟ ತಿಂಡಿಗೂ ಸಮಯ ನೀಡದೇ ಅವರ ನಿರಂತರ ಪ್ರತಿಕ್ರಿಯೆ ತೆಗೆದುಕೊಳ್ಳುತ್ತಿರುವ ಇಡೀ ರಾಜ್ಯದ ನ್ಯೂಸ್ ಚಾನೆಲ್ ಗಳನ್ನ ಕೇಳಿ!
ಚಕ್ರವರ್ತಿ ಸೂಲಿಬೆಲೆ ಯಾರು ಅಂತ ನಿಮ್ಮ ಸಿಎಮ್ ಗೆ ತುಂಬಾ ಹಿಂದೆಯೇ ವಿಧಾನಸೌಧದ ಕಾರ್ಯಕ್ರಮದಲ್ಲಿ ಪರಿಚಯ ಆಗಿದ್ದರು ಅವರನ್ನ ಕೇಳಿ!
ಚಕ್ರವರ್ತಿ ಸೂಲಿಬೆಲೆ ಯಾರು ಅಂತ ನಿಮ್ಮ ಕಾರ್ಯಕರ್ತರನ್ನ ಕೇಳಿ, ಲೋಕಸಭೆಲಿ ಸೀಟು ಯಾಕೆ ಕಡಿಮೆ ಬಂತು ಅಂತ ಹೇಳ್ತಾರೆ! ಇದೇ ಭಾಷಣಕಾರನ ಭಾಷಣ, ಅವರ ದೇಶಭಕ್ತ ಸೈನ್ಯ ಹೇಗೆ ಕೆಲಸ ಮಾಡಿತ್ತು ಅಂತ ಹೇಳ್ತಾರೆ!
ಯಾವ ಪ್ರಸಿಡೆಂಟೂ, ಸಿಎಮ್ಮೂ, ಗ್ರಾಮ ಪಂಚಾಯತಿ ಮೆಂಬರ್ರೂ ಅಲ್ಲದ ಈ ವ್ಯಕ್ತಿಯನ್ನು, ಪ್ಲಾನ್ ಮಾಡಿ, ದುಡ್ಡು ಕೊಟ್ಟು ತೇಜೋವಧೆ ಮಾಡಲು ಪ್ರಯತ್ನಿಸಿದ್ದು ಯಾಕೆ ಅಂತ ನಿಮ್ಮ ನಾಯಕರನ್ನ ಕೇಳಿ!
ರಾಷ್ಟ್ರದ ಕುರಿತು ಯಾವುದೇ ವಿಷಯ ಇದ್ದರೂ ಇಡೀ ರಾಜ್ಯದಲ್ಲಿ ಮೊದಲು ಇವರ ಪ್ರತಿಕ್ರಿಯೆಗೆ ದೇಶಭಕ್ತರೆಲ್ಲರೂ ಯಾಕೆ ಕಾಯುತ್ತಿರುತ್ತಾರೋ ಕೇಳಿ!
ನೀವೂ ಚಕ್ರವರ್ತಿ ಸೂಲಿಬೆಲೆಯವರನ್ನು Quote ಮಾಡಿ ಮಾತಾಡುವ ಸಮಯ ಬರುತ್ತೆ ಸರ್, ಇಷ್ಟಕ್ಕೂ ಸಾಮಾನ್ಯರು ನಿಮ್ಮನ್ನು ಪ್ರಶ್ನಿಸಬಾರದೇ?!
ಚಕ್ರವರ್ತಿ ಸೂಲಿಬೆಲೆ ನಿಮಗೆ ಕೇವಲ ಹೆಸರೋ, ವ್ಯಕ್ತಿಯೋ ಆಗಿರಬಹುದು,
ದೇಶಭಕ್ತರಿಗೆ ಆ ಹೆಸರೇ ಒಂದು ಶಕ್ತಿ, ಆ ಹೆಸರೇ ಒಂದು ಸ್ವಸ್ಥ ಸಮಾಜದ ಚಿಂತನೆ!
ಚಕ್ರವರ್ತಿ ಭಾರತಾಂಬೆಯ ಅರ್ಚಕ,
ಸುಂದರ ಸಮಾಜಕ್ಕಾಗಿ, ಸದೃಢ ರಾಷ್ಟ್ರಕ್ಕಾಗಿ ಹೋರಾಡುತ್ತಿರುವ ಸೈನಿಕ!!
~ ಡಾ. ಅಭಿಲಾಷ್ ಸೋಮೇನಹಳ್ಳಿ