ಟ್ವಿಸ್ಟ್ ಮೇಲೆ ಟ್ವಿಸ್ಟ್!
ಮೈಸೂರಿನ 'Flirt' ಪ್ರೀಮಿಯರ್ನಲ್ಲಿ ಪ್ರೇಕ್ಷಕರ ಅದ್ಭುತ ಪ್ರತಿಕ್ರಿಯೆ ನೋಡಿದಾಗ, ಈ ಚಿತ್ರದ ಭಾಗವಾಗಿರೋದಕ್ಕೆ ನಂಗೆ ಹೆಮ್ಮೆ.
ಇಂದು ಬಿಡುಗಡೆಯಾದ Flirt ತಂಡಕ್ಕೆ ಮತ್ತು ನಿರ್ದೇಶಕ-ನಟ ಚಂದನ್ ಅವರಿಗೆ ಶುಭಾಶಯಗಳು!
ಮಿಸ್ ಮಾಡ್ಬೇಡಿ! 🔥
@actorchandan#Flirt#Chandankumar
ಬಾಲಿವುಡ್ನ ‘ಹೀ ಮ್ಯಾನ್’, ಭಾರತೀಯ ಚಿತ್ರರಂಗದ ದಂತಕಥೆಯಾದ ಧರ್ಮೇಂದ್ರ ಅವರ ನಿಧನ ದುಃಖಕರವಾಗಿದೆ. ಅನೇಕ ಪೀಳಿಗೆಗಳಿಗೆ ಪ್ರೇರಣೆಯಾಗಿದ್ದ ಈ ಮಹಾನ್ ಕಲಾವಿದರ ಕೊಡುಗೆ ಎಂದಿಗೂ ಮರೆಯಲಾಗದು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥನೆ. ಭಾವಪೂರ್ಣ ಶ್ರದ್ಧಾಂಜಲಿ.
#Dharmendra
ಇತ್ತೀಚೆಗೆ ನಡೆದ ಚಿತ್ತಾರ ಮ್ಯೂಸಿಕ್ ಅವಾರ್ಡ್-2025 ಸಮಾರಂಭವೊಂದರಲ್ಲಿ ಖ್ಯಾತ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಅವರೊಂದಿಗಿನ ಕ್ಷಣಗಳು.
ಚಿತ್ತಾರ ಮೀಡಿಯಾ ಕುಟುಂಬಕ್ಕೆ ಧನ್ಯವಾದಗಳು.
#ChittaraMusicAwards2025#Chittara#CMA2025
ಎಲ್ಲಾ ಪ್ರೀತಿಪಾತ್ರ ಮಕ್ಕಳಿಗೆ 'ಮಕ್ಕಳ ದಿನಾಚರಣೆಯ ಶುಭಾಶಯಗಳು!
ನಿಮ್ಮ ಮುಗ್ದತೆ ಹಾಗೂ ಕುತೂಹಲದ ಮನಸ್ಸು ಎಂದಿಗೂ ಹೀಗೆಯೇ ಇರಲಿ.
ಪ್ರತಿದಿನವೂ ಹೊಸ ವಿಷಯಗಳನ್ನು ಕಲಿಯುತ್ತಾ, ನಲಿಯುತ್ತಾ, ನಮ್ಮೊಳಗಿನ ಮಗುವಿನಂತಹ ಮನಸ್ಸನ್ನು ಖುಷಿಯಾಗಿಡೋಣ.
#HappyChildrensDay#ChildrensDay2025
ಚೆನ್ನೈನಲ್ಲಿ ವರ್ಕೌಟ್ ಮಧ್ಯೆ ತಮಿಳು ನಟ ಆರ್ಯ ಅವರನ್ನು ಭೇಟಿಯಾದ ಕ್ಷಣ, ಅವರ Fitness ನೋಡಿ ನಂಗೆ ನನ್ನ ಕಲಾಸಿಪಾಳ್ಯ ದಿನಗಳೆಲ್ಲಾ ನೆನಪಾಯ್ತು!💪
ಅವರ ಫಿಟ್ನೆಸ್ ಮತ್ತು ಡೆಡಿಕೇಶನ್ ನೋಡಿದ್ರೆ ಖುಷಿ ಆಗತ್ತೆ.
#Chennai#FitnessMode#Arya
ಎಲ್ಲರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು! 🪔
ಈ ಬೆಳಕಿನ ಹಬ್ಬ ನಮ್ಮೆಲ್ಲರ ಬದುಕಲ್ಲಿ ಅಜ್ಞಾನವೆಂಬ ಕತ್ತಲನ್ನು ಕಳೆದು ಸುಜ್ಞಾನವೆಂಬ ಜ್ಯೋತಿಯನ್ನು ಬೆಳಗಿಸಲಿ.
#HappyDeepavali#Deepavali2025🪔✨️
ನನ್ನ ಆತ್ಮೀಯ ಗೆಳೆಯ ಸಹನಟ ರಾಜು ತಾಳಿಕೋಟೆ ರವರ ಅಗಲಿಕೆಯಿಂದ ಮನಸ್ಸಿಗೆ ತುಂಬ ದುಃಖ ತಂದಿದೆ.
ಉತ್ತರ ಕರ್ನಾಟಕದ ರಂಗಭೂಮಿ ಮತ್ತು ಸಿನಿಮಾ ಲೋಕದ ಅತ್ಯುತ್ತಮ ಕಲಾವಿದನಾಗಿ ಅವರ ಕಲಾ ಸೇವೆಯ ಕೊಡುಗೆ ಅಪಾರ.
ನಮ್ಮ '90' ಸಿನಿಮಾದಲ್ಲಿ ಜೊತೆಯಾಗಿ ಕೆಲಸ ಎಂದಿಗೂ ಮರೆಯಲಾಗದು.
ನಿಮ್ಮ ಕಲಾ ಸೇವೆಗೆ 🙏
ಭಾವಪೂರ್ಣ ಶ್ರದ್ಧಾಂಜಲಿ.
ಹಿರಿಯ ರಂಗಭೂಮಿ ಕಲಾವಿದ, ಹಾಸ್ಯನಟ ಹಾಗೂ ಆತ್ಮೀಯರಾದ ರಾಜು ತಾಳಿಕೋಟೆ ಅವರ ಅಗಲಿಕೆ ವೈಯುಕ್ತಿಕವಾಗಿ ಅತೀವ ದುಃಖ ತರಿಸಿದೆ. ಅವರು ಅಭಿನಯಿಸಿದ ‘90’ ಸಿನಿಮಾದಲ್ಲಿ ನಮ್ಮ ನಿರ್ಮಾಣ ಸಂಸ್ಥೆಯಲ್ಲೂ ಕೆಲಸ ಮಾಡಿದ ಕ್ಷಣಗಳು ಎಂದಿಗೂ ಶಾಶ್ವತ.
ಅವರ ಆತ್ಮಕ್ಕೆ ಶಾಂತಿ ಸಿಗಲಿ
ಕನ್ನಡ ಸಾರಸ್ವತ ಲೋಕದ ಮೇರು ಸಾಹಿತಿ, ಮಹಾನ್ ಕಾದಂಬರಿಕಾರ, ಪದ್ಮಭೂಷಣ ಮತ್ತು ಮೊದಲ ಸರಸ್ವತಿ ಸಮ್ಮಾನ್ ಪ್ರಶಸ್ತಿಯ ಗೌರವ ತಂದುಕೊಟ್ಟ ಡಾ. ಎಸ್.ಎಲ್. ಭೈರಪ್ಪರವರಿಗೆ ನಮ್ಮ ಗೌರವಪೂರ್ವಕ ಶ್ರದ್ಧಾಂಜಲಿ.🙏
#SLByrappa