ಒಬ್ಬ ಗುಲ್ಬರ್ಗ ವಿಶ್ವವಿದ್ಯಾಲಯದ ಕಲರ್ಕ ಹೊರಸಂಪನ್ಮೂಲ ವ್ಯಕ್ತಿ ನನಗೆ ಇವತ್ತು ಹೆಚ್ಚಿಗೆ ಮಾತಾಡಿದರೆ ವಿಶ್ವ ವಿದ್ಯಾಲಯದಿಂದು ಹೇಗೆ ಹೊರಗಡೆ ಹೋಗ್ತಿ ಅಂತ ನೇರವಾಗಿ ಧಮ್ಕಿ ಹಾಕ್ತಾನೆ ಅಂದ್ರೆ ಏನರ್ಥ ಸ್ವಲ್ಪ ಈ ಕಡೆ ಗಮನಕೊಡಿ ಸರ್ @PriyankKharge#policekalbugi#cmkarnataka
17 ಸೆಪ್ಟೆಂಬರ 2025ರ ಕಲ್ಯಾಣ ಕರ್ನಾಟಕ ದಿವಸದಂದು ಅಟ್ಟರ್ಗಾ ಗ್ರಾಮ ಪಂಚಾಯತನಲ್ಲಿ, ಬೀದರ ಜಿಲ್ಲಾಧಿಕಾರಿಯವರ ಆದೇಶ ಇದ್ದರು ಬಾಬಾಸಾಹೇಬ ಅಂಬೇಡ್ಕರರವರ ಭಾವಚಿತ್ರ ಇಡದೆ ಅಪಮಾನ ಮಾಡಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ತಕ್ಷಣವೆ ಅಮಾನತ್ತು ಮಾಡಬೇಕು @CMofKarnataka@CommrPR@PriyankKharge@SagarKhandre12@SWDGoK#ambedkar
@BJP4Karnataka@PriyankKharge ಕಲ್ಬುರ್ಗಿ ಪ್ರವಾಹದ ಬಗ್ಗೆ ಟ್ವೀಟ್ ಮಾಡಿ @PriyankKharge ಅವರಿಗೆ ಜ್ಞಾನ ಬೋಧಿಸ್ತೀರಾ? ನಿಮ್ಮ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಪ್ರವಾಹ ನೆರವಿನ ಕಾಸಿನ ಕಡಲೆಯೂ ಕೊಟ್ಟಿಲ್ಲ!ಕರ್ನಾಟಕದ ಜನರಿಗೆ ನಿಮ್ಮ ಬಿಜೆಪಿಯಿಂದ ಸಿಕ್ಕಿದ್ದು ಏನು? ಖಾಲಿ ಭಾಷಣ ಮತ್ತು ಫೇಕ್ ಟ್ವೀಟ್ಗಳೇನಾ? #BJPFailsKarnataka
ಸನ್ಮಾನ್ಯ ವಿರೋಧ ಪಕ್ಷದ ನಾಯಕರು ಬಹುಷಃ ಪತ್ರಿಕೆಯ ಹೆಡ್ ಲೈನ್ ಮಾತ್ರ ನೋಡಿದ್ದಾರೆ ಅನ್ನಿಸುತ್ತದೆ, ಆರೋಪಿಗಳ ಹೆಸರು ಮತ್ತು ಅವರ ಮೂಲ ನೋಡಿದ್ದಿದ್ದರೆ ನಾಚಿಕೆಯಿಂದ ನೆಲದೊಳಗೆ ತಲೆ ಹುದುಗಿಸಿ ಅಡಗಿಕೊಳ್ಳುತ್ತಿದ್ದರು, ಇಲ್ಲವೇ ಆರೋಪಿಗಳ ಪರವಹಿಸಿ ಯಾದಗಿರಿ ಚಲೋ ಮಾಡುತ್ತಿದ್ದರು!
ಶ್ರೀ @RashokaBJP ಅವರೇ,
ನಿಮ್ಮ ಪಕ್ಷದವರ ಕಳ್ಳತನವನ್ನು ನಮ್ಮ ಸರ್ಕಾರ ಮಟ್ಟ ಹಾಕುತ್ತಿದೆ. ಈ ಬೃಹತ್ ಪ್ರಮಾಣದ ಪಡಿತರ ಅಕ್ಕಿ ಕಳ್ಳತನದ ಆರೋಪಿಗಳು ಯಾರ ಸಂಬಂಧಿಗಳು ತಿಳಿದಿದೆಯೇ?
@BJP4Karnataka ಪಕ್ಷದ ಚಿತ್ತಾಪುರ ಕ್ಷೇತ್ರದ ಅಭ್ಯರ್ಥಿಯ ಕುಟುಂಭದವರೇ ಸೇರಿ ಪಡಿತರ ಅಕ್ಕಿಯ ವಿದೇಶಕ್ಕೆ ಕಳ್ಳಸಾಗಣೆ ಮಾಡುವ ದಂಧೆಯಲ್ಲಿ ತೊಡಗಿದ್ದಾರೆ ಎನ್ನುವ ಸತ್ಯದ ಅರಿವು ಅಶೋಕ್ ಅವರಿಗಿಲ್ಲ ಎನಿಸುತ್ತದೆ.
ಬಿಜೆಪಿಯವರ ಅಕ್ರಮವನ್ನು ನಮ್ಮ ಸರ್ಕಾರ ತಡೆಗಟ್ಟುತ್ತಿದೆ, ಇದನ್ನು ಅಶೋಕ್ ಅವರು ತಿಳಿದುಕೊಳ್ಳಲಿ.
ಅಕ್ಕಿ ಕಳ್ಳತನ ಪ್ರಕರಣಗಳಲ್ಲಿ ಆರೋಪಿಯಾಗಿದ್ದರೂ ಟಿಕೆಟ್ ನೀಡಿ ಪ್ರೋತ್ಸಾಹ ನೀಡಿದ್ದು ಬಿಜೆಪಿಯೇ ಅಲ್ಲವೇ?
ಅದೇ ಅಕ್ಕಿ ಕಳ್ಳತನದ ಆರೋಪಿಯ ಪರವಹಿಸಿ ಕಲಬುರಗಿಗೆ ಬಂದಿದ್ದು ನೀವೇ ಅಲ್ಲವೇ?
ಅಶೋಕ್ ಅವರೇ ಈಗ ಆ ಕುಟುಂಬದ ಅಕ್ರಮದ ಬಗ್ಗೆಯೂ ನೀವು ಉತ್ತರದಾಯಿಯಾಗಬೇಕು.
ಒಮ್ಮೆ ಈ FIR ಮೇಲೆ ಕಣ್ಣಾಡಿಸಿ, ನಂತರ ನಿಮ್ಮ ಪಕ್ಷದವರು ನಾಡಿನ ಬಡವರ ಅಕ್ಕಿ ಕಸಿಯುತ್ತಿರುವುದರ ಬಗ್ಗೆ ಉತ್ತರ ಹೇಳಿ.
ಸಮಾನತೆಯಿಂದ ಮಾತ್ರ “ನ್ಯಾಯ“ ನೈಜ ಅರ್ಥ ಬರುತ್ತದೆ ಎಂದಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಶ್ರೇಷ್ಠ ವಿಚಾರಧಾರೆಗಳು ಭಾರತೀಯರಿಗೆ ಮಾತ್ರವಲ್ಲ, ಇಡೀ ಜಗತ್ತಿಗೆ ವೈಚಾರಿಕ ಪ್ರೇರಣೆ ನೀಡಿದೆ.
ಆಧುನಿಕ ಜಗತ್ತಿನ ಶ್ರೇಷ್ಠ ದಾರ್ಶನಿಕ, ಮಹಾನ್ ಮಾನವತವಾದಿ ಅಂಬೇಡ್ಕರ್ ಅವರು ಶೋಷಿತರಿಗೆ ಶಿಕ್ಷಣ ಮತ್ತು ಆಲೋಚನೆಗಳನ್ನು ವೃದ್ಧಿಸುವ ಮುಕ್ತ ಅವಕಾಶಗಳನ್ನು ಒದಗಿಸುವ ಮೂಲಕ ಸಮಾನತೆಗೆ ಅಡಿಪಾಯ ಹಾಕಬಹುದು ಎಂದು ಪ್ರತಿಪಾಧಿಸಿದ್ದರು.
ಜಗತ್ತಿನ್ನಲ್ಲಿ ಜಾತಿ, ಬಣ್ಣ, ಭಾಷೆ, ಪ್ರದೇಶಗಳ ಹೆಸರಿನಲ್ಲಿ ಶೋಷಣೆ ಮತ್ತು ದಮನಕಾರ್ಯಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಈ ಅಂಬೇಡ್ಕರ್ ಸಮಾನತೆಯ ಹರಿಕಾರರಾಗಿ ಹೊರಹೊಮ್ಮಿದರು.
ಭಾರತದ ಜಾತಿ ಭೇದ ನೀತಿಗಳ ವಿರುದ್ಧ ಅವರು ಕಟ್ಟಿದ ಚಳವಳಿಯು ಪಾಶ್ಚಾತ್ಯ ದೇಶಗಳಲ್ಲಿನ ವರ್ಣಭೇದ ನೀತಿಗಳ ವಿರುದ್ಧವೂ ಪ್ರಭಾವ ಬೀರಿದೆ.
ವಿದೇಶಿ ಶಾಲೆಗಳಲ್ಲಿ ಮಕ್ಕಳಿಗೆ ಅಂಬೇಡ್ಕರ್ ಅವರ ಬಗ್ಗೆ, ಅವರ ಪ್ರೇರಣಾದಾಯಕ ಬದುಕಿನ ಬಗ್ಗೆ ಪಾಠ ಮಾಡುತ್ತಿರುವುದು, ಮಕ್ಕಳಲ್ಲಿ ಅಂಬೇಡ್ಕರ್ ಸ್ಫೂರ್ತಿಯನ್ನು ತುಂಬುತ್ತಿರುವುದು ಭಾರತೀಯರಿಗೆ ಹೆಮ್ಮೆಯ ಸಂಗತಿ.
“ಅಂಬೇಡ್ಕರ್ ಕತ್ತಲಲ್ಲಿದ್ದವರಿಗೆ ಬೆಳಕು ನೀಡಿದ ಸಮಾನತೆಯ ಸೂರ್ಯ“
video: @CheKrishnaCk_
ಪ್ರಬುದ್ಧ ಮತ್ತು ಸಮೃದ್ಧ ಭಾರತ ನಿರ್ಮಾಣವಾಗಬೇಕೆಂದರೆ ಭಾರತದ ಪ್ರತಿ ಪ್ರಜೆಯೂ “RSSಗೆ ತಾಕಿದ ಗಾಳಿಯೂ ನಮಗೆ ಸೋಕಬಾರದು“ ಎಂಬ ಪ್ರತಿಜ್ಞೆ ಕೈಗೊಳ್ಳಬೇಕು.
ಜನಾಂಗೀಯ ದ್ವೇಷ, ವರ್ಣಾಶ್ರಮದ ಕ್ರೌರ್ಯಗಳನ್ನು ಒಳಗೊಂಡ ನಾಜಿವಾದ, ಮನುವಾದಗಳನ್ನೇ ನರ ನಾಡಿ, ರಕ್ತಗಳಲ್ಲಿ ಪ್ರವಾಹಿಸಿಕೊಂಡಿರುವ RSS ಎಂಬ ವಿಷಕಾರಿ ಸಂಘಟನೆಯನ್ನು ಕಾಂಗ್ರೆಸ್ ಪಕ್ಷವು ಎಂದಿಗೂ ಶತ್ರುವಾಗಿಯೇ ನೋಡುತ್ತದೆ.
ಏಕೆಂದರೆ,
ಆರ್ಎಸ್ಎಸ್ ಸಂವಿಧಾನಕ್ಕೆ ಶತ್ರು,
ಆರ್ಎಸ್ಎಸ್ ಐಕ್ಯತೆಗೆ ಶತ್ರು,
ಆರ್ಎಸ್ಎಸ್ ರಾಷ್ಟ್ರಧ್ವಜಕ್ಕೆ ಶತ್ರು,
ಆರ್ಎಸ್ಎಸ್ ರಾಷ್ಟ್ರಗೀತೆಗೆ ಶತ್ರು,
ಆರ್ಎಸ್ಎಸ್ ಏಕತೆಗೆ, ಸಾರ್ವಭೌಮತೆಗೆ ಶತ್ರು.
ಬಾಬಾ ಸಾಹೇಬರು, ಸರ್ದಾರ್ ಪಟೇಲರು ದಶಕಗಳ ಹಿಂದೆಯೇ ಆರ್ಎಸ್ಎಸ್ ಕುರಿತು ನಿಷ್ಠುರವಾಗಿ ಎಚ್ಚರಿಕೆಯ ಸಂದೇಶ ನೀಡಿ ಹೋಗಿದ್ದಾರೆ, ಆ ಮಹನೀಯರ ಸಂದೇಶವನ್ನು ಗಂಭೀರವಾಗಿ ಪರಿಗಣಿಸಿ ಮನುವಾದಿಗಳನ್ನು ದೂರ ಇಡಬೇಕಿದೆ.
ಬ್ರಿಟಿಷರೊಂದಿಗೆ ಕೈಜೋಡಿಸಿ ಭಾರತ ವಿರೋಧಿಯಾಗಿ ನಡೆದುಕೊಂಡಿದ್ದ ಆರ್ಎಸ್ಎಸ್ ಸ್ವತಂತ್ರಾನಂತರ ಐಕ್ಯತೆಯ ವಿರೋಧಿ ಚಟುವಟಿಕೆಗಳನ್ನು ಇನ್ನಷ್ಟು ಹೆಚ್ಚಿಸಿತು.
ಸಂಘ ಪರಿವಾರದ ಅಪಾಯವನ್ನು ಅಂದೇ ಊಹಿಸಿದ ಸರ್ದಾರ್ ಪಟೇಲರು ನಿಷೇಧ ಹೇರಿದ್ದರು.
“ನಮ್ಮ ದೇಶದಲ್ಲಿ ದ್ವೇಷ ಮತ್ತು ಹಿಂಸಾಚಾರದ ಶಕ್ತಿಗಳನ್ನು ಬೇರುಸಹಿತ ನಿರ್ಮೂಲನೆ ಮಾಡಬೇಕಿದೆ, ಮತ್ತು ರಾಷ್ಟ್ರದ ಸ್ವಾತಂತ್ರ್ಯವನ್ನು ಅಪಾಯಕ್ಕೆ ಸಿಲುಕಿಸಲು ಮತ್ತು ದೇಶದ ಹೆಸರನ್ನು ಕಳೆಗುಂದಿಸಲು ಕೆಲಸ ಮಾಡುತ್ತಿರುವ ಆರ್ಎಸ್ಎಸ್ ಅನ್ನು ನಿಷೇಧಿಸುತ್ತಿದ್ದೇವೆ“
ಇದು ಸರ್ದಾರ್ ಪಟೇಲರು ಫೆಬ್ರವರಿ 4, 1948 ರಂದು ಬಿಡುಗಡೆ ಮಾಡಿದ ಪ್ರಕಟಣೆ.
ಪಟೇಲರ ಈ ಮಾತುಗಳನ್ನು ನಾವು ಸದಾ ಗಮನದಲ್ಲಿ ಇರಿಸಿಕೊಳ್ಳಬೇಕಿದೆ.
ಸಂವಿಧಾನಕ್ಕೆ, ರಾಷ್ಟ್ರಧ್ವಜಕ್ಕೆ ನಿಷ್ಠರಾಗಿರುತ್ತೇವೆ ಎಂದು ಹೇಳಿ, ನಾಟಕವಾಡಿ ನಿಷೇಧವನ್ನು ತೆರವು ಮಾಡಿಸಿಕೊಂಡ ಆರ್ಎಸ್ಎಸ್ ನಂತರ ಮುಂದುವರೆಸಿದ್ದು ಅದೇ ಸಂವಿಧಾನ ವಿರೋಧಿ ಕೃತ್ಯಗಳನ್ನೇ.
ಈ ನೂರು ವರ್ಷಗಳಲ್ಲಿ ಆರ್ಎಸ್ಎಸ್ ಈ ದೇಶಕ್ಕೆ ನೀಡಿದ ಕೇವಲ 10 ಕೊಡುಗೆಗಳನ್ನು ಹೇಳಲು ಬಿಜೆಪಿಗರಿಂದ ಮತ್ತು ಸಂಘಪರಿವಾರದವರಿಂದ ಸಾಧ್ಯವಾಗುವುದಿಲ್ಲ, ಇಂತಹ ಆರ್ಎಸ್ಎಸ್ ನಿಂದ ಅಪಾಯವಿದೆಯೇ ಹೊರತು ಸಹಾಯವಿಲ್ಲ.
ಸಂವಿಧಾನವನ್ನು ಒಪ್ಪದೆ ಕರಡು ಪ್ರತಿಯನ್ನು ಸುಟ್ಟು ಹಾಕಿದ್ದ, ರಾಷ್ಟ್ರಧ್ವಜವನ್ನು ಗೌರವಿಸದ, ಮಹಿಳೆಯರು, ಶೋಷಿತರನ್ನು ಮೂರನೇ ದರ್ಜೆಯ ನಾಗರಿಕರಂತೆ ನಡೆಸಿಕೊಳ್ಳುವ ಅಜೆಂಡಾ ಹೊಂದಿರುವ ಆರ್ಎಸ್ಎಸ್ ಕಾಂಗ್ರೆಸ್ಸಿಗೆ ಮಾತ್ರವಲ್ಲ ಈ ದೇಶದ ಐಕ್ಯತೆಗೆ ಪರಮ ಶತ್ರು ಎನ್ನುವುದನ್ನು ಪ್ರತಿ ದೇಶಭಕ್ತನೂ ಗಮನದಲ್ಲಿರಿಸಿಕೊಳ್ಳಬೇಕು.
ಬೀದರ್ನ ಮೊರಾರ್ಜಿ ಶಾಲೆಗಳಲ್ಲಿ ತಂದೆ/ತಾಯಿ ಇಲ್ಲದ 7-8ನೇ ತರಗತಿಯ ಮಕ್ಕಳಿಗೆ ಉಚಿತ ದಾಖಲಾತಿ ಇನ್ನೂ ಆರಂಭವಾಗಿಲ್ಲ. ದಯವಿಟ್ಟು ಈ ವಿಳಂಬವನ್ನು ಪರಿಹರಿಸಿ ಮತ್ತು ಮಕ್ಕಳ ಶಿಕ್ಷಣದ ಹಕ್ಕನ್ನು ಎತ್ತಿ ಹಿಡಿಯಿರಿ! @Karnataka_SWD@CMofKarnataka@kscpcr@osd_cmkarnataka