ಜನಗಳ ವಿಚಾರಗಳು ಬದಲಾಗದೆ,
ಜಾತಿ, ಧರ್ಮ, ಪ್ರತಿಷ್ಠೆಗಳ ನಿಮಿತ್ತ ಹೀಗೆ ಎಷ್ಟೇ ಜಯಂತಿಗಳನ್ನ ಆಚರಿಸಿದರೂ ಸಮಾಜದ ದುಃಸ್ಥಿತಿ ಬದಲಾಗದು
ಕೇವಲ ಶುಭಾಶಯ ಕೋರುವ ಬದಲು ಬಸವಣ್ಣನವರ ಸಮಾಜಕ್ಕೆ ಶುಭ ತರುವ ವಿಚಾರಗಳ ಅನುಷ್ಠಾನಗೊಳಿಸುವಲ್ಲಿ ಮುನ್ನಡೆಯೋಣ
#ಬಸವಜಯಂತಿ#BasavaJayanti
ಪ್ರತಿ ಬಾರಿ ಬಸವ ಜಯಂತಿ ಬಂತೆಂದರೆ ಅದೊಂದು ಚಿಂತಾಜನಕ ವಿಚಾರ ಠಕ್ಕನೆ ಬಡಿದೇಳುತ್ತದೆ.
ಸಮಾಜದ ಪ್ರಸ್ತುತ ಸ್ಥಿತಿಯ ಆಯಾಮಗಳನ್ನ ಎತ್ತಲಿಂದ ನೋಡಿದರೂ ಒಂದು ನಿರಾಶ ಮನೋಭಾವ.
ಎಲ್ಲಿದೆ ಮಾನವೀಯತೆ, ಎಲ್ಲಿದೆ ಜಾತ್ಯಾತೀಯತೆ, ಎಲ್ಲಿದೆ ಸಮಾನತೆ, ಎಲ್ಲಿದೆ ಪ್ರಗತಿ
ಆದರೆ ಇದೊಂದು ದಿನ ಇದೆಲ್ಲವನ್ನ ಪ್ರತಿಬಿಂಬಿಸುವಂತಹ ಪೊಳ್ಳು ಪ್ರದರ್ಶನ ಎಲ್ಲರದು
ಆ ಮಹಾಪುರುಷ ಬಸವಣ್ಣರನ್ನೇ ಒಂದು ಧರ್ಮ, ಜಾತಿಗೆ ಸೀಮಿತಗೊಳಿಸಿದಂತಹ ಪರಿಸ್ಥಿತಿ ನಮ್ಮದು
ಬಸವಣ್ಣ ಇಂದಿಗೆ ಇರಬೇಕಿತ್ತು ಎಂಬುದೇನೋ ಬಯಕೆ
ಆದರೆ ಇಂದಿನ ಬೆಳವಣಿಗೆಗಳನ್ನೊಮ್ಮೆ ನೋಡಿದರೆ ಅವರನ್ನೇ ಎಡಚರ, ಓಲಾಟ, ದೇಶದ್ರೋಹಿ, etc ಎಂದು ಬಿಂಬಿಸುತ್ತಿದ್ದರೇನೋ ಎಂಬುದೊಂದು ಅಷ್ಟೇ ಕಳವಳ
A small request to everyone.🙏
If you are watching our film "Theertharoopa Thandeyavarige" Please watch it only on Amazon Prime.
Kind request please don’t watch or share pirated links. When you watch on Prime, we earn about ₹4 per hour of streaming. That is our main revenue source.
FIY: Many assume the platform bought the film, but it’s actually pay-per-view.
Your support keeps us going ❤️
#trtonprime #theertharoopathanfeyavarive #ತೀರ್ಥರೂಪತಂದೆಯವರಿಗೆ
ಕನ್ನಡದ ಭಾಷೆಗೆ ತನ್ನದೇ ಆದ ಅಸ್ಮಿತೆಯಿದೆ. ಅದು ಬಹುತ್ವವನ್ನು ಗೌರವಿಸುವ ಮತ್ತು ಒಕ್ಕೂಟದ ಹಿತವನ್ನು ಕಾಯುವ ಬಾಳನೋಟದ ಅಸ್ಮಿತೆ. ಇದು ಪಂಪನಿಂದ ಕುವೆಂಪು ವರೆಗೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಬೆಳೆದುಬಂದಿರುವ ಜೀವನದರ್ಶನ. ಇದನ್ನೇ ಪಂಪ "ಮಾನವ ಕುಲ ತಾನೊಂದೇ ವಲಂ" ಎಂದು ಹೇಳಿದ್ದು. ಕನ್ನಡ ಭಾಷೆ ಎನ್ನುವುದು ಕೇವಲ ವರ್ಣಮಾಲೆ ಅಲ್ಲ. ಅದು ಕೇವಲ ಶಬ್ದ-ವಾಕ್ಯಗಳಲ್ಲ. ಭಾಷೆಯಲ್ಲಿ ಅದನ್ನಾಡುವ ಮನುಷ್ಯನ ಆಳವಾದ ಭಾವನೆಗಳಿರುತ್ತವೆ, ಪರಸ್ಪರ ಸಂಬಂಧಗಳಿರುತ್ತವೆ, ತನ್ನತನದ ಪ್ರಜ್ಞೆ ಇರುತ್ತದೆ. ಅದು ನಮ್ಮ ಸಂಸ್ಕೃತಿ, ಇತಿಹಾಸ, ನೆಲ-ಜಲದ ಸಂಪತ್ತು ಸೇರಿದಂತೆ ಎಲ್ಲವನ್ನೂ ಒಳಗೊಂಡ ಅಸ್ಮಿತೆ. ಕನ್ನಡ ಭಾಷೆ ಈ ಅಸ್ಮಿತೆಯ ಜೀವಧಾತು.
ಕೇವಲ ಅಭಿಮಾನದಿಂದ ಭಾಷೆಯ ರಕ್ಷಣೆ ಸಾಧ್ಯ ಇಲ್ಲ. ಪ್ರತಿಯೊಬ್ಬ ಕನ್ನಡಿಗನೂ ರಾಜ್ಯದಲ್ಲಿ ಕನ್ನಡದಲ್ಲೇ ಮಾತನಾಡುವ, ವ್ಯವಹರಿಸುವ ಪ್ರತಿಜ್ಞೆಗೈಯ್ಯೋಣ.
ಕನ್ನಡವನ್ನು ಬಳಸೋಣ, ಬೆಳೆಸೋಣ.
#KannadaRajyothsava
#ಕನ್ನಡವೇಸಾರ್ವಭೌಮ
ಕಪ್ಪು ಮಣ್ಣಿನ ನಾಡು, ವಿವಿಧ ಸಂಸ್ಕೃತಿ ಕಲೆಗಳ ಬೀಡು
ಕುಂದಾದ್ರಿ ಕೊಡಚಾದ್ರಿ ಸಹ್ಯಾದ್ರಿ ಮಲೆನಾಡು
ಹಚ್ಚ ಹಸಿರ ನಿತ್ಯ ನಿರಂತರ ಸುಳಿಜಾಡು - ಕಾಡು
ಜಲಧಾರೆ ಹಾಲ್ತೊರೆ ಕಡಲ ಕಿನಾರೆ ಸಿಹಿಹಕ್ಕಿ ಹಾಡು
ಆಲ ತೇಗ ಗಂಧ ಮಧುರ ಮಕರಂದದ ಗೂಡು
ಕರುನಾಡು...ಕರುನಾಡು...
ಕರ್ನಾಟಕ ರಾಜ್ಯೋತ್ಸವದ ನಲ್ವಾರೈಕೆಗಳು💛❤️
#Karnatakarajyotsava#ಕನ್ನಡ
ಧರ್ಮಕ್ಕೊಬ್ಬ, ನಾಡಿಗೊಬ್ಬ ಬಸವಣ್ಣನ ಅಗತ್ಯತೆಯಿರುವಂತ ಕಾಲಕ್ಕೆ ಒಂದು ಜಾತಿಗೆ, ರಾಜ್ಯಕ್ಕೆ ಅವರನ್ನ ಸೀಮಿತಗೊಳಿಸಿರುವುದು ದುರ್ದೈವ.
ಕೇವಲ ಮಾತಿಗೆ ವಿಶ್ವಗುರು, ಜಗಜ್ಯೋತಿ ಅಂದರೆ ಸಾಲದು. ಮುಕ್ತ ಮನಸ್ಸಿನಿಂದ ಬರಿ ಅವರ ಮೂಲತತ್ವವನ್ನ ಅರಿತು ಆಲಂಗಿಸಿದರೆ ಸಾಕು, ಈಗಿನ ಇದ್ಯಾವ ಕೆಟ್ಟ ಬೆಳವಣಿಗೆಗಳೂ ಇರೋದಿಲ್ಲ.
#ಬಸವಜಯಂತಿ#BasavaJayanti
ವಚನ ಚಳುವಳಿ ಮುನ್ನಲೆಗೆ ಬಂದು ಗೊಡ್ಡು ಸಂಪ್ರದಾಯಗಳು ಎಲ್ಲಿ ಅಳಿಸಿ ಹೋಗುತ್ತವೋ ಎನ್ನುವ ಭಯಕ್ಕೆ ಶರಣರನ್ನು ಮರೆಮಾಚುವ ಪ್ರಯತ್ನ ನಡೆಯಿತು,ಬಸವಣ್ಣನನ್ನು "ಎತ್ತು" ಮಾಡಿ ಬಸವೇಶ್ವರರನ್ನು ಮರೆಸಿದರು ಅಷ್ಟೇ...
ಬಸವಣ್ಣ ಜಯಂತಿ ಎಂದರೆ ಈಗಲೂ ಹಳ್ಳಿ ಕಡೆಯಲ್ಲಿ ಎತ್ತಿನ(ದನ -ಕರು) ಜಯಂತಿ ಅಂತ ಆಚರಣೆ ಮಾಡುತ್ತಾರೆ.🤔
ಬೆಳಗಾವಿ ನಮ್ಮದು, ಇಲ್ಲಿ ಕನ್ನಡ ಧ್ವಜ ಹಾರಿಸುವುದು, ಈ ಮಣ್ಣಿನ ನೆಲದ ಮೌಲ್ಯಗಳಿಗೆ ಬೆಲೆಕೊಡುವ ಪರರನ್ನು ನಮ್ಮಂತೆ ಕಾಣುವುದು ಕನ್ನಡಿಗರ ಪ್ರೀತಿ ಸೌಹಾರ್ದತೆಗೆ ಹಿಡಿದ ಕನ್ನಡಿ. ಇದನ್ನು ಬಲಹೀನತೆ ಎಂದು ಭಾವಿಸಿದರೆ ಕನ್ನಡಿಗರು ತಿರುಗಿ ಬಿದ್ದು ಸರಿಯಾದ ಉತ್ತರ ನೀಡಬೇಕಾಗುತ್ತದೆ