ಭರತ ಭೂಮಿಯ ವಿಶ್ವ ವಿಜೇತ, ತತ್ವ ಚಿಂತಕ, ಯುವ ಜನಾಂಗದ ಸ್ಫೂರ್ತಿ ಚಿಲುಮೆಯಾದ ಸ್ವಾಮಿ ವಿವೇಕಾನಂದರ ಪುಣ್ಯಸ್ಮರಣೆಯಂದು ಶತ ಕೋಟಿ ನಮನಗಳು.
#gayithrisiddeshwara#SwamiVivekananda
ಹಣಕಾಸಿನ ಸಮಗ್ರತೆ ಮತ್ತು ಪಾರದರ್ಶಕತೆಯನ್ನು ಎತ್ತಿಹಿಡಿಯುವಲ್ಲಿ ಚಾರ್ಟಡ್ ಅಕೌಂಟೆಂಟ್ಗಳ ಪಾತ್ರ ಪ್ರಮುಖ, ದೇಶದ ಅರ್ಥವ್ಯವಸ್ಥೆಯಲ್ಲಿ ಅಮೂಲ್ಯ ಪಾತ್ರವಹಿಸುವ ಲೆಕ್ಕ ಪರಿಶೋಧಕರಿಗೆ ಸಿಎ ದಿನದ ಹಾರ್ದಿಕ ಶುಭಾಶಯಗಳು.
#gayithrisiddeshwara#CharteredAccountantsDay#CADay
ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿಹಿಡಿಯುತ್ತಿರುವ ಸಮಸ್ತ ಮಾಧ್ಯಮ ಮಿತ್ರರಿಗೆ ಪತ್ರಿಕಾ ದಿನದ ಶುಭಾಶಯಗಳು.
ಕನ್ನಡದ ಮೊದಲ ಪತ್ರಿಕೆ 'ಮಂಗಳೂರ ಸಮಾಚಾರ' ಪ್ರಾರಂಭವಾದ ಜುಲೈ 1 ನ್ನು ಕರ್ನಾಟಕದಲ್ಲಿ ಪತ್ರಿಕಾ ದಿನವನ್ನಾಗಿ ಆಚರಿಸಲಾಗುತ್ತದೆ.
#ಪತ್ರಿಕಾದಿನ#PressDay#gayithrisiddeshwara
ಮಹಾಪರಿಸರವಾದಿ ಯಾವುದೇ ಪ್ರತಿಫಲ ಬಯಸದೇ ಮರಗಳೇ ನನ್ನ ಮಕ್ಕಳು ಎಂದು ಪೋಷಿಸಿದ ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತರಾದ ಡಾ. ಸಾಲುಮರದ ತಿಮ್ಮಕ್ಕ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
#SalumaradaThimmakka#gayithrisiddeshwara
ದಾವಣಗೆರೆಯ ಜಿ.ಎಂ.ಐ.ಟಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಂಸ್ಥಾಪಕರ ದಿನಾಚರಣೆಯ ಸಂಸ್ಮರಣೆಯ ಉಪನ್ಯಾಸ ಸಾಕ್ಷರತೆ-ಶಿಕ್ಷಣ ಹಾಗೂ ಸಂಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಲಾಯಿತು.
#gayithrisiddeshwara
ಕನ್ನಡದ ಸಮನ್ವಯ ಕವಿ, ಸುನೀತಗಳ ಸಾಮ್ರಾಟ ಎಂದು ಪ್ರಸಿದ್ಧರಾಗಿದ್ದ ಕನ್ನಡದ ಖ್ಯಾತ ವಿದ್ವಾಂಸ ಮತ್ತು ಹೊಸಗನ್ನಡ ಕಾವ್ಯದ ಪ್ರಮುಖ ಕವಿಗಳಲ್ಲಿ ಒಬ್ಬರಾದ ಶ್ರೀ ಚನ್ನವೀರ ಕಣವಿ ಅವರ ಜನ್ಮದಿನದಂದು ಅನಂತ ಅನಂತ ನಮನಗಳು.
#gayithrisiddeshwara#channaveerakanave
ಭವ್ಯ ಬೆಂಗಳೂರಿನ ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರ ಜಯಂತಿಯಂದು ಗೌರವ ಪೂರ್ವಕ ನಮನಗಳು.
ಬೆಂಗಳೂರಿಗೆ ಇವರು ನೀಡಿದ ಕೊಡುಗೆ ಅಪಾರ, ಜಗತ್ತೇ ತಿರುಗಿ ನೋಡುವಂತೆ ಬೃಹತ್ ಬೆಂಗಳೂರು ನಗರವನ್ನು ಕಟ್ಟಿದ ಅವರ ಸೇವೆ ಜನಮಾನಸದಲ್ಲಿ ಅಜರಾಮರ.
#NadaprabhuKempegowda#gayithrisiddeshwara
ರಾಜ್ಯಸಭೆಯ ಸಭಾನಾಯಕರಾಗಿ ಆಯ್ಕೆಯಾದ ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ರಾಸಯನಿಕ ರಸಗೊಬ್ಬರ ಖಾತೆ ಸಚಿವರು ಹಾಗೂ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಜಗತ್ ಪ್ರಕಾಶ್ ನಡ್ಡಾಜೀ ಅವರಿಗೆ ಹಾರ್ದಿಕ ಅಭಿನಂದನೆಗಳು.
#gayithrisiddeshwara
ಸಾಮಾಜಿಕ ಪ್ರಜಾಪ್ರಭುತ್ವದ ರೂವಾರಿ, ಮಹಾನ್ ದಾರ್ಶನಿಕ, ಭಾರತದಲ್ಲಿ ಫುಲೆಯವರ ಸಶಕ್ತ ಉತ್ತರಾಧಿಕಾರಿ.
ಅಸ್ಪೃಶ್ಯರು ಮತ್ತು ಹಿಂದುಳಿದ ವರ್ಗದವರಿಗೆ ಶಿಕ್ಷಣದೊಂದಿಗೆ, ಅಧಿಕಾರದಲ್ಲಿ ಸಮಪಾಲು ಮತ್ತು ಸಾಮಾಜಿಕ ಸ್ಥಾನಮಾನ ದೊರಕಿಸಿ ಕೊಟ್ಟ ಛತ್ರಪತಿ ಶಾಹು ಮಹಾರಾಜ್ ಅವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ನಮನಗಳು.
#gayithrisiddeshwara
ಭಾರತ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಹೋರಾಟಗಾರ 'ವಂದೇ ಮಾತರಂ' ಗೀತೆಯನ್ನು ರಚಿಸಿ ಭಾರತೀಯರಲ್ಲಿ ಸ್ವಾತಂತ್ರ್ಯ ಕಿಚ್ಚು ಹೊತ್ತಿಸಿದ ಬಂಕಿಮ ಚಂದ್ರ ಚಟರ್ಜಿ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.
#BankimChandraChatterjee#gayithrisiddeshwara
ರಾಜ್ಯಸಭೆಯ ಸಭಾನಾಯಕರಾಗಿ ಆಯ್ಕೆಯಾದ ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ರಾಸಯನಿಕ ರಸಗೊಬ್ಬರ ಖಾತೆ ಸಚಿವರು ಹಾಗೂ ಭಾರತೀಯ ಜನತಾ ಪಾರ್ಟಿಯ ನಿಕಟಪೂರ್ವ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಜಗತ್ ಪ್ರಕಾಶ್ ನಡ್ಡಾ ರವರಿಗೆ ಹಾರ್ದಿಕ ಅಭಿನಂದನೆಗಳು.
#gayithrisiddeshwara
ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿ ಅವರ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಕೇಂದ್ರ ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಾಸಾಯನಿಕ ರಸಗೊಬ್ಬರ ಖಾತೆ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಮಾಜಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಮಾನ್ಯ ಜೆ ಪಿ ನಡ್ಡಾ ಅವರನ್ನು ಕುಟುಂಬ ಸದಸ್ಯರೊಂದಿಗೆ ಭೇಟಿಯಾಗಿ, ಅಭಿನಂದನೆ ಸಲ್ಲಿಸಿದೆವು
ದೇಶ ಹಾಗೂ ಸಂಘಟನೆಗಾಗಿ ಜೀವ ಮುಡಿಪಾಗಿಟ್ಟಿದ್ದ ಹೋರಾಟಗಾರ, “ಕರ್ನಾಟಕದ ಕೇಸರಿ” ಎಂದೇ ಖ್ಯಾತರಾಗಿದ್ದ ಜಗನ್ನಾಥ್ ರಾವ್ ಜೋಶಿ ಅವರ ಜಯಂತಿಯಂದು ಗೌರವಪೂರ್ವಕ ಸ್ಮರಣೆಗಳು.
#gayithrisiddeshwara
ನಮ್ಮೆಲ್ಲರ ನೆಚ್ಚಿನ ಹಿರಿಯ ನಾಯಕರು, ಚುನಾವಣಾ ಚಾಣಕ್ಯ, ನರೆಂದ್ರ ಮೋದಿ ಜಿ ನೇತೃತ್ವದ ಸರ್ಕಾರದಲ್ಲಿ ಎರಡನೇ ಬಾರಿಗೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಆದರಣೀಯ ಶ್ರೀ ಅಮಿತ್ ಶಾ ಜಿ ರವರನ್ನು ಕುಟುಂಬ ಸಮೇತರಾಗಿ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದೆವು.
#gayithrisiddeshwara
ರಾಷ್ಟ್ರ ಮತ್ತು ಸಮಾಜದ ಸೇವೆಗಾಗಿ ತಮ್ಮನ್ನು ಸಮರ್ಪಣೆ ಮಾಡಿಕೊಂಡ, ಜಗತ್ತಿನ ಅತಿ ದೊಡ್ಡ ಸಂಘಟನೆಯಾದ ರಾಷ್ಟೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕರಾದ ಮಹಾನ ರಾಷ್ಟ್ರೀಯ ವಿಚಾರವಾದಿ ಚಿಂತಕರಾದ ಪರಮಪೂಜ್ಯನಿಯ ಡಾ. ಕೇಶವ್ ಬಲಿರಾಮ ಹೆಗಡೆವಾರ್ ರವರ ಸ್ಮೃತಿ ದಿವಸದಂದು ಗೌರವಪೂರ್ವಕ ನಮನಗಳು
#KeshavBaliramHedgewar#gayithrisiddeshwara
ಯೋಗ ಕೇವಲ ವ್ಯಾಯಾಮ ಮಾತ್ರವಾಗಿರದೆ, ನಮ್ಮ ದೈನಂದಿನ ಬದುಕಿಗೆ ಹೆಚ್ಚಿನ ಚೈತನ್ಯ ನೀಡುತ್ತದೆ. ದೈಹಿಕ ಹಾಗೂ ಮಾನಸಿಕ ಆರೋಗ್ಯದ ಸ್ಥಿರತೆಗೆ ಯೋಗಾಭ್ಯಾಸ ರೂಢಿಸಿಕೊಂಡು ಸ್ವಾಸ್ಥ ಜೀವನ ಸಾಗಿಸೋಣ.
ಸಮಸ್ತ ಜನತೆಗೆ 10ನೇ ಅಂತರಾಷ್ಟ್ರೀಯ ಯೋಗ ದಿನದ ಶುಭಾಶಯಗಳು
#gayithrisiddeshwara#Internationalyogaday