🚫💊 ಮಾದಕ ವ್ಯಸನಕ್ಕೆ ಇಲ್ಲ ಎನ್ನಿ – ಉತ್ತಮ ಭವಿಷ್ಯಕ್ಕೆ ಹೌದು ಎನ್ನಿ!
ನಟ ಶ್ರೀ ಮುರಳಿ ಅವರ ಮಾದಕ ವ್ಯಸನ ವಿರೋಧಿ ಜಾಗೃತಿ ಸಂದೇಶವನ್ನು ವೀಕ್ಷಿಸಿ, ಹಂಚಿಕೊಳ್ಳಿ.
ಪ್ರತಿಯೊಬ್ಬರ ಜಾಗೃತಿಯೇ ಮಾದಕ ವ್ಯಸನ ಮುಕ್ತ ಸಮಾಜದತ್ತ ಒಂದು ಹೆಜ್ಜೆ.
#DrugFreeKarnataka#BedaBro#RISE#SayNoToDrugs
🚫💊 ಅಂತರರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ ಅಂಗವಾಗಿ ನಮ್ಮ ಠಾಣೆಯ ವತಿಯಿಂದ ವಿವಿದ ಶಾಲೆಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.
150ಕ್ಕೂ ಹೆಚ್ಚು ವಿದ್ಯಾರ್ಥಿಗಳೊಂದಿಗೆ ಜಾಗೃತಿ ಜಾಥಾ ನಡೆಸಿ, ಸಾರ್ವಜನಿಕರಿಗೆ ಕರಪತ್ರ ವಿತರಿಸಲಾಯಿತು.
🚫💊 ಮಾದಕ ವಸ್ತುಗಳಿಗೆ ಇಲ್ಲ ಎನ್ನೋಣ, ಉತ್ತಮ ಭವಿಷ್ಯಕ್ಕೆ ಹೌದು ಎನ್ನೋಣ.
ನಮ್ಮ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಯವರ ಆರೋಗ್ಯದ ಕಾಳಜಿಯ ದೃಷ್ಟಿಯಿಂದ ಡಾ. ಅಗರವಾಲ್ಸ್ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಆಯೋಜಿಸಿ ಕಣ್ಣಿನ ಪರೀಕ್ಷೆ ನಡೆಸಲಾಯಿತು.
ಈ ಉಪಯುಕ್ತ ಆರೋಗ್ಯ ತಪಾಸಣಾ ಕಾರ್ಯಕ್ರಮಕ್ಕೆ ಸಹಕರಿಸಿದ ಡಾ. ಅಗರವಾಲ್ಸ್ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗೆ ಹೃತ್ಪೂರ್ವಕ ಧನ್ಯವಾದಗಳು.
ನಿನ್ನೆ ನಡೆದ IPL ಫೈನಲ್ ಪಂದ್ಯಾವಳಿಯ ಸಂದರ್ಭದಲ್ಲಿ ನಮ್ಮ ಠಾಣಾ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಸಾರ್ವಜನಿಕರು ಶಾಂತಿ, ಸುವ್ಯವಸ್ಥೆ ಮತ್ತು ಕಾನೂನು ಪಾಲನೆಗೆ ನೀಡಿದ ಸಹಕಾರಕ್ಕೆ ಧನ್ಯವಾದಗಳು.
#PoliceBandobast#PublicSafety#IPLFinal#LawAndOrder
ಕರ್ತವ್ಯ ಮಾತ್ರವಲ್ಲ, ಮಾನವೀಯತೆಯೂ ನಮ್ಮ ಹೊಣೆಗಾರಿಕೆ.
ಇಂದು ನಮ್ಮ ಪೊಲೀಸ್ ಸಿಬ್ಬಂದಿಯವರು ದಾಹದಿಂದ ಠಾಣೆ ಬಳಿ ಬಂದ ಕರುವಿಗೆ ನೀರು ಕುಡಿಸಿ ಮಾನವೀಯತೆ ಮೆರೆದರು. 🐄💧
#Humanity#PoliceCare
'ಮನೆ ಮನೆ ಪೊಲೀಸ್' ಕಾರ್ಯಕ್ರಮದ ಭಾಗವಾಗಿ ,ದಿನಾಂಕ 28/05/2026 ರಂದು ಗಂಗಮ್ಮಗುಡಿ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂಧಿಯವರು,
ಮನೆ ಮನೆಗೆ ಭೇಟಿ ನೀಡಿ ಕಾನೂನು ಮತ್ತು ಸುವ್ಯವಸ್ತೆ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿ ವಿಚಾರಿಸಲಾಯಿತು.
ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಇಂದು ನಮ್ಮ ಠಾಣಾ ವತಿಯಿಂದ ವಿವಿಧ ಸ್ಥಳಗಳಲ್ಲಿ ಚೆಕ್ ಪಾಯಿಂಟ್ಗಳನ್ನು ನೇಮಿಸಿ ವಾಹನ ತಪಾಸಣೆ ನಡೆಸಲಾಯಿತು. ವಾಹನಗಳ ದಾಖಲಾತಿ, ಚಾಲನಾ ಪರವಾನಗಿ ಪರಿಶೀಲಿಸಲಾಯಿತು. ಸಂದೇಹಾಸ್ಪದ ವಾಹನಗಳು ಮತ್ತು ವ್ಯಕ್ತಿಗಳ ಮೇಲೂ ವಿಶೇಷ ನಿಗಾವಹಿಸಿ ಸಾರ್ವಜನಿಕರಲ್ಲಿ ಕಾನೂನು ಪಾಲನೆ ಕುರಿತು ಜಾಗೃತಿ ಮೂಡಿಸಲಾಯಿತು.
'ಮನೆ ಮನೆಗೆ ಪೊಲೀಸ್' ಕಾರ್ಯಕ್ರಮದ ಭಾಗವಾಗಿ ಇಂದು ನಮ್ಮ ಠಾಣಾ ವತಿಯಿಂದ ಸಾರ್ವಜನಿಕರ ಮನೆಗಳಿಗೆ ಭೇಟಿ ನೀಡಿ,ಸಾರ್ವಜನಿಕರಿಗೆ :-
-ಸೈಬರ್ ಕ್ರೈಮ್
-ಸರಗಳ್ಳತನ
-ಮಹಿಳಾ ದೌರ್ಜನ್ಯ ತಡೆಗಟ್ಟುವಿಕೆ
-ಮಾದಕ ವಸ್ತುಗಳ ನಿಯಂತ್ರಣ
-ಮಕ್ಕಳ ಸಹಾಯವಾಣಿ 1098
-ಸೈಬರ್ ಸಹಾಯವಾಣಿ 1930
-ತುರ್ತು ಸೇವೆಗೆ 112
ಇತರೆ ಮಾಹಿತಿಯನ್ನು ಒದಗಿಸಲಾಯಿತು.
ನಮ್ಮ ಠಾಣಾ ವ್ಯಾಪ್ತಿಯಲ್ಲಿ ಒಬ್ಬ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿರುತ್ತದೆ.ವ್ಯಕ್ತಿಯ ವಯಸ್ಸು ಅಂದಾಜು 30-40 ವರ್ಷ.ನೀಲಿ ಬಣ್ಣದ ಬಿಳಿ ಚುಕ್ಕೆ ಗುರುತಿನ ಅಂಗಿ & ಕಡು ನೀಲಿ ಬಣ್ಣದ ಪ್ಯ್ಂಟ್ ಧರಿಸಿರುತ್ತಾನೆ.ಈ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದರೆ ದಯವಿಟ್ಟು ನಮ್ಮ ಠಾಣೆಯನ್ನು ಸಂಪರ್ಕಿಸಿ.
08022942530,
9480801326
ನಮ್ಮ ಠಾಣೆಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಜಯಂತಿಯನ್ನು ಗೌರವಪೂರ್ವಕವಾಗಿ ಆಚರಿಸಿ, ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.
ಅವರ ಸಮಾನತೆ, ನ್ಯಾಯ ಮತ್ತು ಶಿಕ್ಷಣದ ಸಂದೇಶಗಳನ್ನು ಸ್ಮರಿಸಿ, ಅವರ ಆದರ್ಶಗಳನ್ನು ಅನುಸರಿಸುವ ಸಂಕಲ್ಪ ಕೈಗೊಳ್ಳಲಾಯಿತು.
ಇಂದು ನಮ್ಮ ಠಾಣೆಯಲ್ಲಿ ದಲಿತ ಸಮುದಾಯದ ಸದಸ್ಯರೊಂದಿಗೆ ಸಭೆ ಹಮ್ಮಿಕೊಳ್ಳಲಾಗಿದ್ದು, ಅವರ ಸಮಸ್ಯೆಗಳು, ಅಹವಾಲುಗಳು ಮತ್ತು ಭದ್ರತೆ ಕುರಿತಂತೆ ಚರ್ಚೆ ನಡೆಸಲಾಯಿತು. ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು ಹಾಗೂ ಪೊಲೀಸ್ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಲಾಯಿತು.
ಕರ್ನಾಟಕ ಸರ್ಕಾರದ ಮಾನ್ಯ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ಅವರು ಚಿಕ್ಕಬಾಣಾವರದಲ್ಲಿನ ವಿವಿಧ ಪೊಲೀಸ್ ಕಟ್ಟಡಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮರಳುವಾಗ ನಮ್ಮ ಠಾಣಾ ಸರಹದ್ದಿನ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಲಾಯಿತು.
ಪೊಲೀಸ್ ಕೇವಲ ಕಾನೂನು ಜಾರಿಗೊಳಿಸುವ ಸಂಸ್ಥೆಯಷ್ಟೇ ಅಲ್ಲ, ಸಮಾಜದ ದುರ್ಬಲ ವರ್ಗಗಳಿಗೆ ಬೆಂಬಲವಾಗಿ ನಿಂತು ಮಾನವೀಯತೆ ತೋರಿಸುವ ಸಂಸ್ಥೆಯೂ ಆಗಿದೆ ಎಂಬ ಸಂದೇಶವನ್ನು ಈ ಕಾರ್ಯದ ಮೂಲಕ ನೀಡಲಾಗಿದೆ.
#aasare#karnataka#police#karnatakapolice
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ 'ಸಂಮಿತ್ರ' ಎಂಬ ಕಾರ್ಯಕ್ರಮದಡಿ,
ನಮ್ಮ ಠಾಣೆಯ ವತಿಯಿಂದ ಮಾಧಕ ವಸ್ತು ವ್ಯಸನಿ ಯುವಕನಿಗೆ ಕೌನ್ಸೆಲಿಂಗ್, ಮಾರ್ಗದರ್ಶನ ಮತ್ತು ಮಾನಸಿಕ ಬೆಂಬಲ ನೀಡಲಾಯಿತು.ಈ ನಿರಂತರ ಪ್ರಯತ್ನದ ಫಲವಾಗಿ, ಆ ಯುವಕನು ಸಂಪೂರ್ಣವಾಗಿ ವ್ಯಸನದಿಂದ ದೂರವಾಗಿ, ಹೊಸ ಬದುಕಿನತ್ತ ಹೆಜ್ಜೆ ಇಟ್ಟಿದ್ದಾನೆ.
ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಕ್ಕಾಗಿ ಧನ್ಯವಾದಗಳು. ಮುಂದಿನ ದಿನಗಳಲ್ಲಿ ತಾವು ಸಲ್ಲಿಸಿದ ಹಾವಾಲುಗಳನ್ನು ಸರಿಪಡಿಸಲಾಗುವುದು. ಸಾರ್ವಜನಿಕರ ಸಹಕಾರ ಹೀಗೆ ಮುಂದುವರಿಯಲಿ. ನಿಮ್ಮ ಸುರಕ್ಷತೆಯೇ ನಮ್ಮ ಹೊಣೆ.
ಬೆಂಗಳೂರು ನಗರ ಪೊಲೀಸ್.
@BlrCityPolice@DrParameshwara@DgpKarnataka#Bangalore
ನಮ್ಮ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ ಸರಗಳ್ಳತನ ಪ್ರಕರಣದಲ್ಲಿ ಆರೋಪಿಗಳನ್ನು ಯಶಸ್ವಿಯಾಗಿ ಬಂಧಿಸಿ.ಕಾನೂನು ಪ್ರಕ್ರಿಯೆಯಂತೆ ಸರವನ್ನು ಅದರ ವಾರಸುದಾರರಿಗೆ ಸುರಕ್ಷಿತವಾಗಿ ಹಸ್ತಾಂತರಿಸುವ ಮೂಲಕ,
ಸಾರ್ವಜನಿಕರ ಅಮೂಲ್ಯ ಸಹಕಾರ ಮತ್ತು ಪೊಲೀಸರ ನಿಷ್ಠಾವಂತ ಪರಿಶ್ರಮದಿಂದ ಮತ್ತೊಂದು ಕುಟುಂಬಕ್ಕೆ ಸಂತೋಷ ಮತ್ತು ಭರವಸೆ ದೊರಕಿದೆ.