ತುಳಸಜ್ಜಿ ಹಿರಿಮೆಗೆ ಮತ್ತೊಂದು ಗರಿ!!❤
ಇತ್ತೀಚಿಗಷ್ಟೇ ಧಾರವಾಡ ಯುನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಪಡೆದ ತುಳಸಜ್ಜಿ ಎರಡನೇ ಬಾರಿಗೆ ಶ್ರೀ ಸತ್ಯಸಾಯಿ ಯುನಿವರ್ಸಿಟಿ ಕಲಬುರ್ಗಿ ಇವರಿಂದ ಗೌರವ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ತಮ್ಮ ಪರಿಸರ ಪ್ರೇಮದಿಂದ ಪ್ರಸಿದ್ಧಿ ಪಡೆದಿರುವ ತುಳಸಿ ಗೌಡರಿಗೆ ತುಂಬು ಹೃದಯದ ಅಭಿನಂದನೆಗಳು
ನಮ್ಮ ನೆಚ್ಚಿನ ಹೆಮ್ಮೆಯ ಹಾಲಕ್ಕಿ ಗೌಡ್ತಿ ಯರು, ನಮ್ಮ ಸಂಸ್ಕೃತಿ, ಪರಂಪರೆ, ಸಂಪ್ರದಾಯ ಇಂದಿಗೂ ಎಂದೆಂದಿಗೂ ವಿಶಿಷ್ಟ, ವಿಭಿನ್ನ, ಶ್ರೇಷ್ಠ, ಪ್ರತ್ಯೇಕ. ಇಂದಿಗೂ ಧಾರ್ಮಿಕ ಕರೆಯೋಲೆಗೆ ವೀಳ್ಯ ಕೊಟ್ಟು ಆಮಂತ್ರಿಸುವ, ಊಟಕ್ಕೆ ಕೈ ಕಾಲು ತೊಳೆಯಲು ನೀರು ಕೊಟ್ಟು ಆಮಂತ್ರಿಸುವ ಪದ್ಧತಿ ಸನಾತನ ಕಾಲದಲ್ಲಿ ಇತ್ತು, ನಮ್ಮಲ್ಲೂ ಇದೆ. #halakki
ಇತ್ತೀಚಿಗೆ ಮಾರಾಠಿ ಪುಂಡರು ಕನ್ನಡ ವಿದ್ಯಾರ್ಥಿಯ ಮೇಲೆ ಹಲ್ಲೆ ಮಾಡಿದಾಗ ಕನ್ನಡ ವಿದ್ಯಾರ್ಥಿಯ ಪರ ನಿಂತ ಕನ್ನಡ ಹೋರಾಟಗಾರ ಸಂಪತ್ ಅವರ ಮೇಲೆ ಈಗ ಇಲ್ಲದ ಸಲ್ಲದ ಆರೋಪಗಳು ಕೇಳಿ ಬರ್ತಿದೆ. ಕಳೆದ ವರ್ಷದ ಹಾಗೆ ಈ ವರ್ಷವೂ ಸಂಪತ್ ಅವರ ಜೊತೆ ನಾವೆಲ್ಲಾ ನಿಂತುಕೊಳ್ಲಲೇ ಬೇಕು, ನಿಮ್ಮೊಂದಿಗೆ ಸದಾ ನಾವಿದ್ದೇವೆ ಸಂಪತ್
#istandwithsampath
ಇದೆಲ್ಲಾ ಒಂದು ಬದುಕ.?😡
@BSBommai. @BJP4India
ಒಂದು ಕಡೆ ಕನ್ನಡ ಕಡ್ಡಾಯ ಅಂತ ಬೊಗಳೆ ಬಿಡೋದು ಇನ್ನೊಂದು ಕಡೆ ಯಾವುದೋ ರಾಜ್ಯದ ಪ್ರಾದೇಶಿಕ ಭಾಷೆಯಾದ ಹಿಂದಿಯನ್ನು ಕನ್ನಡಿಗರ ಮೇಲೆ ಬಲವಂತವಾಗಿ ಹೇರಿಕೆ ಮಾಡೋದು. 😡
ಹಿಂದಿ ಮುಖ್ಯವಾದರೆ ಅಲ್ಲಿಯೇ ಹೋಗ್ಬಿಡಿ ಅಲ್ಲೇ ಚುನಾವಣೆಗೆ ನಿಲ್ಲಿ ಕನ್ನಡ ನಾಡಿನಲ್ಲೇಕೆ ಇದ್ದೀರಾ ನಾಡದ್ರೋಹಿಗಳೇ.?😡
ಆಶ್ವಾಸನೆ ನೀಡಿ 3 ವರ್ಷ ಕಳೆದರೂ ಇನ್ನೂ ಯಾವ ಆಸ್ಪತ್ರೆ ಕೂಡ ಇಲ್ಲ ಮಣಿಪಾಲ್ ಹೋಗುವುದು ತಪ್ಪಲ್ಲ, ಮಣಿಪಾಲ್ - ಉತ್ತರಕನ್ನಡ ಎಲ್ಲಿಂದ ಎಲ್ಲಿಗೆ. ಅನಾವಶ್ಯಕ ಅಭಿವೃದ್ಧಿ ಗೆ ಮಾತ್ರ ಉತ್ತರಕನ್ನಡ ಬೇಕು ನಿಮಗೆ ಅಷ್ಟೇ. ಈ JCB ಪಕ್ಷಗಳ ಹಣೆಬರಹನೇ ಇಷ್ಟು. #WeNeedEmergencyHospitalInUttaraKannada
@TheWesternGhat ಹೌದು ನೌಕನಲೆ ಮತ್ತು ಕೈಗಾ ಅಣುಸ್ಥಾವರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೊರ ರಾಜ್ಯದವರೆ ಕೆಲಸ ಮಾಡುತ್ತಾ ಇದಾರೆ. ಕೇಂದ್ರ ಸರ್ಕಾರದ ಕಾನೂನು ಪ್ರಕಾರ ೮೦% ನಮ್ಮ ರಾಜ್ಯದವರಿಗೆ ಉದ್ಯೋಗ ಸಿಗಬೇಕು ಇನ್ನೂಂಳಿದ ೨೦% ಹೊರ ರಾಜ್ಯದವರಿಗೆ ಸಿಗಬೇಕು ಅಂತ ಕಾನೂನು ಇದೆ. ಇದನ್ನೆಲ್ಲಾ ನೋಡಕೊಂಡು ನಮ್ಮ ಜಿಲ್ಲೆಯ ಸಂಸದ ಮತ್ತು ಶಾಸಕರು ಸುಮ್ಮನೆ ಇದಾರೆ.
ನೌಕಾನೆಲೆ, ಕೈಗಾ ಅಣು ಸ್ಥಾವರ ಯೋಜನೆಗೆ ಜಿಲ್ಲೆಯ ಸದಾ ಹಸರಿನಿಂದ ಕೂಡಿದ ಪರಿಸರ ವಶಪಡಿಸಿಕೊಂಡು ಹೊರ ರಾಜ್ಯದ ಜನರಿಗೆ ಉದ್ಯೋಗ ನೀಡಿ ಅವರಿಗೇ ಮಾತ್ರ ಒಳ್ಳೆಯ ಆಸ್ಪತ್ರೆ ಮತ್ತು ಉನ್ನತ ಸೌಲಭ್ಯಗಳು. ಆದರೆ ಸ್ಥಳೀಯ ಜನರ ಬದುಕಿನ ಬಗ್ಗೆ ಯೋಚನೆ ಬರೋಲ್ಲ ಈ ಸರ್ಕಾರಗಳಿಗೆ.
#WeNeedEmergencyHospitalInUttaraKannada