Top Tweets for #MeghasVisione
ಯತ್ರ ವಿದ್ಯಾಗಮೋ ನಾಸ್ತಿ
ಯತ್ರ ನಾಸ್ತಿ ಧನಾಗಮಃ |
ಯತ್ರ ಚಾತ್ಮಸುಖಂ ನಾಸ್ತಿ
ನ ತತ್ರ ನಿಮಿಷಂ ವಸೇತ್ ||
ಎಲ್ಲಿ ವಿದ್ಯಾಲಾಭವಿಲ್ಲವೋ, ಎಲ್ಲಿ ಧನಲಾಭವಿಲ್ಲವೋ, ಎಲ್ಲಿ ಆತ್ಮಸುಖವಿಲ್ಲವೋ, ಅಲ್ಲಿ ಮಾನವರು ಒಂದು ನಿಮಿಷವೂ ವಾಸಮಾಡಬಾರದು.
#MeghasVisione
#morningthoughts
ಕಿಂ ತೇನ ಜಾತು ಜಾತೇನ
ಮಾತುರ್ಯೌವನಹಾರಿಣಾ|
ಆರೋಹತಿ ನ ಯಃ ಸ್ವಸ್ಯ
ವಂಶಸ್ಯಾಗ್ರೇ ಧ್ವಜೋ ಯಥಾ||
-ಪಂಚತಂತ್ರ
ಧ್ವಜಸ್ತಂಭದ ಮೇಲಕ್ಕೆ ಪತಾಕೆ ಏರುವಂತೆ, ಯಾವಾತನು ತನ್ನ ವಂಶದ ಮೇಲೇರಿ ಉನ್ನತಿಗೆ ಬರುವುದಿಲ್ಲವೋ ಅವನು ಹುಟ್ಟಿದ್ದರಿಂದ ಏನು ಫಲ? ತಾಯಿಯ ಯೌವನವನ್ನು ಅಪಹರಿಸಿದವನು ಆತ.
#MeghasVisione
#morningthoughts
ಸ್ವಲ್ಪಾಪಿ ದೀಪಕಣಿಕಾ
ಬಹುಳಂ ನಾಶಯೇತ್ತಮಃ|
ಸ್ವಲ್ಪೋಽಪಿ ಬೋಧೋ ನಿಬಿಡೇ
ಬಹುಳಂ ನಾಶಯೇತ್ತಮಃ||
ದೀಪವು ಎಷ್ಟೇ ಚಿಕ್ಕದಾದರೂ ಕತ್ತಲೆಯನ್ನು ಹೋಗಲಾಡಿಸುವಂತೆ, ಉತ್ತಮ ಗುರುಗಳ ಬೋಧನೆಗಳು ಎಷ್ಟು ಕಡಮೆಯೇ ಇದ್ದರೂ ಅದಕ್ಕಿಂತ ಹಿರಿದಾದ ಅಜ್ಞಾನವೆನ್ನುವ ಕತ್ತಲೆಗಳನ್ನು ನಾಶಮಾಡುತ್ತದೆ.
#MeghasVisione
#MorningThoughts
ವೈರಾಗ್ಯಭಾವನಯಾ ಚ ಏತತ್
ಮನಃ ಆತ್ಮನ್ಯೇವ ವಶಂ ನಯೇತ್ |
-ಶಾಂಕರ ಗೀತಾಭಾಷ್ಯ
ವೈರಾಗ್ಯಭಾವನೆ ತಳೆದಂತೆಲ್ಲ ಮನಸ್ಸು ಹಿಡಿತಕ್ಕೆ ಒಳಪಡುತ್ತದೆ.
#MeghasVisione
#morningthoughts
ಮನಃಶುದ್ಧೇನ ಶುದ್ಧಸ್ಸ್ಯಾತ್
ದೇಹಿನಾಂ ನಾತ್ರ ಸಂಶಯಃ |
ವೃಥಾ ತದ್ವ್ಯತಿರೇಕೇಣ
ಕಾಯಸ್ಯೈವ ಕದರ್ಥನಮ್ ||
-ಜ್ಞಾನಾರ್ಣವ
ಮನುಷ್ಯರು ಶುದ್ಧಿಯಾಗುವುದು ಮನಃಶುದ್ಧಿ ಇದ್ದರೆ ಮಾತ್ರ. ಮನಸ್ಸು ಅಶುದ್ಧವಾಗಿ ಮಾಡಿದ ಯಾವುದೇ ಆಚಾರಗಳು ಬರಿಯ ದೇಹದಂಡನೆಗೆ ಮಾತ್ರ.
#MeghasVisione
#morningthoughts
ಆರು ಬಾರಿ ಭೂಪ್ರದಕ್ಷಿಣೆ ಮಾಡುವುದರಿಂದ ಯಾವ ಫಲವುಂಟಾಗುವುದೋ, ಹತ್ತು ಸಾವಿರ ಸಲ ಕಾಶೀಯಾತ್ರೆ ಮಾಡುವುದರಿಂದ ಯಾವ ಫಲವುಂಟಾಗುವುದೋ, ನೂರು ಬಾರಿ ಸೇತುಸ್ನಾನ (ರಾಮೇಶ್ವರಂ) ಮಾಡುವುದರಿಂದ ಯಾವ ಫಲವುಂಟಾಗುವುದೋ ಅವೆಲ್ಲವೂ ಒಂದು ಸಾರಿ ತಾಯಿಗೆ ನಮಸ್ಕಾರ ಮಾಡುವುದರಿಂದ ಉಂಟಾಗುತ್ತದೆ.
#MeghasVisione
ಭೂಪ್ರದಕ್ಷಿಣಷಟ್ಕೇನ
ಕಾಶೀಯಾತ್ರಾಯುತೇನ ಚ|
ಸೇತುಸ್ನಾನಶತೈರಶ್ಚ
ತತ್ಫಲಂ ಮಾತೃವಂದನೇ||
#MeghasVisione
#morningthoughts
ಭಾವೇಷು ವಿದ್ಯತೇ ದೇವೋ
ನ ಪಾಷಾಣೇ ನ ಮೃಣ್ಮಯೇ|
ನ ಫಲಂ ಭಾವಹೀನಾನಾಂ
ತಸ್ಮಾತ್ ಭಾವೋ ಹಿ ಕಾರಣಮ್||
ಮನುಷ್ಯನು ಭಾವಿಸುವ ಭಾವನೆಯಲ್ಲೇ ದೇವರಿದ್ದಾನೆ. ಕಲ್ಲಿನಲ್ಲಾಗಲೀ, ಮಣ್ಣಿನಲ್ಲಾಗಲೀ ದೇವರು ಇಲ್ಲ. ಆದ್ದರಿಂದ ಭಾವಿಸಲಾರದವನಿಗೆ ಫಲ ಸಿಗುವುದಿಲ್ಲ. ಹಾಗೆಂದೇ ಭಾವನೆಗಳೇ,ಭಾವಿಸುವುದೇ ಎಲ್ಲೆಡೆ ಪರಮಾತ್ಮನನ್ನು ನೋಡಲು ಕಾರಣ.
#MeghasVisione
ಬುದ್ಧಿವೃದ್ಧಿಕರಾಣ್ಯಾಶು
ಧನ್ಯಾನಿ ಚ ಹಿತಾನಿ ಚ |
ನಿತ್ಯಂ ಶಾಸ್ತ್ರಾಣ್ಯವೇಕ್ಷೇತ
ನಿಗಮಾಂಶ್ಚೈವ ವೈದಿಕಾನ್ ||
ಬುದ್ಧಿಯನ್ನು ಶೀಘ್ರವಾಗಿ ಹೆಚ್ಚಿಸುವ,
ಧನ್ಯತೆಯನ್ನು ಗಳಿಸಲು ಸಹಾಯವಾಗಬಲ್ಲ,
ಹಿತಕಾರಿಯಾದ ಶಾಸ್ತ್ರಗಳನ್ನು ಮತ್ತು ವೇದಗಳನ್ನು ದಿನವೂ ಅವಲೋಕಿಸುತ್ತಿರಬೇಕು.
#MeghasVisione
#morningthoughts
ಪ್ರಾಯೋ ಧನವತಾಮೇವ
ಧನೇ ತೃಷ್ಣಾ ಗರೀಯಸೀ |
ಪಶ್ಯ ಕೋಟಿದ್ವಯಾಸಕ್ತಂ
ಲಕ್ಷಾಯ ಪ್ರವಣಂ ಧನುಃ ||
ಹಣವುಳ್ಳವರಿಗೇನೆ ಹಣದಲ್ಲಿ ಮಿಗಿಲಾದ ಆಸೆ ನೋಡಿ! ಎರಡು ಕೋಟಿಗಳಿಂದ ಕೂಡಿರುವ ಬಿಲ್ಲು ಒಂದು ಲಕ್ಷಕ್ಕೆ ಬಗ್ಗುತ್ತದೆ!
#MeghasVisione
#morningthoughts
ಪ್ರಾಣಂ ವಾಪಿ ಪರಿತ್ಯಜ್ಯ
ಮಾನೋ ರಕ್ಷ್ಯಸ್ಸದಾ ನೃಭಿಃ|
ಅನಿತ್ಯೋ ಭವತಿ ಪ್ರಾಣೋ
ಮಾನಸ್ತ್ವಾಚಂದ್ರತಾರಕಮ್||
-ಮಹಾಭಾರತ
ಪ್ರಾಣವನ್ನಾದರೂ ಬಿಟ್ಟು ಮನುಷ್ಯನು ಯಾವಾಗಲೂ ಮಾನವನ್ನು ರಕ್ಷಿಸಿಕೊಳ್ಳಬೇಕು. ಪ್ರಾಣವು ಶಾಶ್ವತವಲ್ಲ. ಮಾನವಾದರೋ ಚಂದ್ರ ನಕ್ಷತ್ರಗಳಿರುವ ತನಕ ಇರತಕ್ಕದ್ದು.
#MeghasVisione
#morningthoughts
ಗಾಯತ್ರ್ಯಾಸ್ತು ಸಮೋ ನಾಸ್ತಿ
ಮಂತ್ರೋ ವೇದಚತುಷ್ಟಯೇ|
ಸರ್ವವೇದಾಶ್ಚ ಯಜ್ಞಾಶ್ಚ
ದಾನಾನಿ ಚ ತಪಾಂಸಿ ಚ||
ನಾಲ್ಕು ವೇದಗಳನ್ನು ಹುಡುಕಿದರೂ ಗಾಯತ್ರೀಮಂತ್ರಕ್ಕೆ ಸರಿಹೊಂದುವ ಮಂತ್ರ ಬೇರೆ ಇಲ್ಲ. ಸಮಸ್ತ ವೇದಗಳೂ, ಯಜ್ಞಗಳೂ, ದಾನಗಳೂ, ವಿವಿಧ ತಪಸ್ಸುಗಳೂ ಸೇರಿದರೂ ಗಾಯತ್ರೀಮಂತ್ರದ ಮಹಾತ್ಮೆಗೆ ಸಮವಾಗಲಾರದು.
#MeghasVisione
#morningthought
ಬಾಲ್ಯೇ ವಯಸಿ ತತ್ಕುರ್ಯಾತ್
ಯೇನ ವೃದ್ಧಃ ಸುಖಂ ವಸೇತ್|
ಯಾವಜ್ಜೀವಂ ಚ ತತ್ಕುರ್ಯಾತ್
ಯೇನಾಮುತ್ರ ಸುಖಂ ವಸೇತ್॥
ನಾವು ಮುದಿತನದಲ್ಲಿಯೂ ಸುಖವನ್ನು ಬಯಸಿದರೆ, ಚಿಕ್ಕ ವಯಸ್ಸಿನಿಂದಲೇ ಸರಿಯಾದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಮತ್ತು ಪರಲೋಕದಲ್ಲಿ ನಮ್ಮ ಯೋಗಕ್ಷೇಮವನ್ನು ಬಯಸಿದರೆ ಜೀವನದುದ್ದಕ್ಕೂ ಇದನ್ನು ಮುಂದುವರೆಸಬೇಕು.
#MeghasVisione
ಪ್ರಬೋಧಾಯ ವಿವೇಕಾಯ
ಹಿತಾಯ ಪ್ರಶಮಾಯ ಚ |
ಸಮ್ಯಕ್ ತತ್ತ್ವೋಪದೇಶಾಯ
ಸತಾಂ ಸೂಕ್ತಿಃ ಪ್ರವರ್ತತೇ ।।
-ಜ್ಞಾನಾರ್ಣವ
ಸಜ್ಜನರ ಸೂಕ್ತಿಯು ನಮಗೆ ಎಚ್ಚರಿಕೆಗೆ, ವಿವೇಕಕ್ಕೆ, ಹಿತಕ್ಕೆ, ಶಾಂತಿಗೆ ಮತ್ತು ಒಳ್ಳೆಯ ತತ್ತ್ವೋಪದೇಶಕ್ಕೆ ಕಾರಣವಾಗುತ್ತದೆ.
#MeghasVisione
#morningthoughts
ಆರಭೇತ ನರಃ ಕರ್ಮ
ಸ್ವಪೌರುಷಮಹಾಪಯನ್|
ನಿಷ್ಪತ್ತಿಃ ಕರ್ಮಣಾಂ ದೈವೇ
ಪೌರುಷೇ ಚ ವ್ಯವಸ್ಥಿತಾ||
-ಮಾರ್ಕಂಡೇಯಪುರಾಣ
ಮಾನವನು ತನ್ನ ಪೌರುಷಪ್ರದರ್ಶನದ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಕಾರ್ಯವನ್ನು ಪಾರಂಭಿಸಬೇಕು. ಏಕೆಂದರೆ, ಕಾರ್ಯದ ಫಲಸಿದ್ಧಿಯು ದೈವ ಮತ್ತು ಪೌರುಷ ಇವೆರಡನ್ನೂ ಅವಲಂಬಿಸಿರುವುದು.
#MeghasVisione
#morningthoughts
ಪ್ರಸಿದ್ಧಿಹೇತುರ್ಭಾವಾನಾಂ
ಪ್ರಾಯಃ ಶ್ರೇಷ್ಠಪರಿಗ್ರಹಃ |
ಸಹಸ್ರ ಜಲಧೌ ಶಂಖಾಃ
ಪಾಂಚನಜ್ಯಸ್ತು ವಿಶ್ರುತಃ ||
ಒಂದು ವಸ್ತು ಪ್ರಸಿದ್ಧಿ ಹೊಂದುವುದು ಅದನ್ನು ಉತ್ತಮರಾದವರು ಸ್ವೀಕರಿಸುವುದರಿಂದ. ಸಮುದ್ರದಲ್ಲಿ ಸಾವಿರಾರು ಶಂಖಗಳಿದ್ದರೂ ಪಾಂಚಜನ್ಯವು ಪ್ರಖ್ಯಾತವಾಗಿದೆ.
#MeghasVisione
#morningthoughts
ದುರ್ಜನಸ್ಯ ಚ ಸರ್ಪಸ್ಯ
ವರಂ ಸರ್ಪೋ ನ ದುರ್ಜನಃ|
ಸರ್ಪೋ ದಶತಿ ಕಾಲೇನ
ದುರ್ಜನಸ್ತು ಪದೇ ಪದೇ||
-ಚಾಣಕ್ಯನೀತಿ
ದುರ್ಜನರು ಮತ್ತು ಸರ್ಪಗಳ ನಡುವೆ ದುರ್ಜನರಿಗಿಂತ ಸರ್ಪವೇ ಉತ್ತಮ.ಸರ್ಪವು ತನಗೆ ತೊಂದರೆ ಮಾಡಿದಾಗ ಮಾತ್ರ ಆ ಸಮಯದಲ್ಲಿ ಕಚ್ಚುತ್ತದೆ. ದುಷ್ಟನಾದರೋ ಪದೇ ಪದೇ ತೊಂದರೆ ಕೊಡುತ್ತಲೇ ಇರುತ್ತಾನೆ.
#MeghasVisione
#morningthoughts
ಅನವಾಪ್ಯಂ ಚ ಶೋಕೇನ
ಶರೀರಂ ಚೋಪತಪ್ಯತೇ|
ಅಮಿತ್ರಾಶ್ಚ ಪ್ರಹೃಷ್ಯನ್ತಿ
ಮಾ ಸ್ಮ ಶೋಕೇ ಮನಃ ಕೃಥಾಃ||
-ವಿದುರನೀತಿ
ಶೋಕಿಸುವುದರಿಂದ ಬಯಸಿದ ವಸ್ತುವು ಲಭಿಸುವುದಿಲ್ಲ. ಬದಲಾಗಿ ಶರೀರವು ಪರಿತಪ್ತವಾಗುತ್ತದೆ ಹಾಗೂ ಶತ್ರುಗಳು ಹರುಷಗೊಳ್ಳುತ್ತಾರೆ. ಆದುದುರಿಂದ ಮನಸ್ಸನ್ನು ಶೋಕದ ಕಡೆಗೆ ತಿರುಗಿಸಬೇಡ.
#MeghasVisione
#morningthoughts
ಪ್ರಸ್ತಾಪಸದೃಶಂ ವಾಕ್ಯಂ
ಸದ್ಭಾವಸದೃಶಂ ಪ್ರಿಯಮ್ |
ಆತ್ಮಶಕ್ತಿಸಮಂ ಕೋಪಂ
ಕುರ್ವಾಣೋ ನ ವಿನಶ್ಯತಿ ||
ಸಂದರ್ಭಕ್ಕೆ ಉಚಿತವಾದ ಮಾತು, ಸದ್ಭಾವಕ್ಕೆ ತಕ್ಕುದಾದ ಪ್ರಿಯಕಾರ್ಯ, ತನ್ನ ಶಕ್ತಿಗೆ ಅನುಗುಣವಾದ ಕೋಪ - ಇವನ್ನು ಮಾಡುವವನು ನಾಶವಾಗುವುದಿಲ್ಲ.
#MeghasVisione
#morningthoughts
ಅಘಟಿತಘಟಿತಂ ಘಟಯತಿ
ಸುಘಟಿತಘಟಿತಾನಿ ದುರ್ಘಟೀಕುರುತೇ |
ವಿಧಿರೇವ ತಾನಿ ಘಟಯತಿ
ಯಾನಿ ಪುಮಾನ್ ನೈವ ಚಿನ್ತಯತಿ ||
ಅಸಾಧ್ಯವೆನಿಸಿದ್ದನ್ನು ಸಂಭವಿಸುವಂತೆ ಮಾಡುತ್ತದೆ. ಒಳ್ಳೆಯ ಘಟನೆಯನ್ನೇ ಕೆಟ್ಟದಾಗಿ ಬದಲಾಯಿಸಿಬಿಡುತ್ತದೆ. ಇದು ವಿಧಿಯ ಕೈವಾಡ. ಮನುಷ್ಯನ ಊಹೆಗೆ ಕೂಡ ನಿಲುಕದ ಘಟನೆಗಳು ಇವು.
#MeghasVisione
#morningthoghts
Last Seen Hashtags on Sotwe
Trends for you
Most Popular Users

Elon Musk 
@elonmusk
241.2M followers

Barack Obama 
@barackobama
119.1M followers

Cristiano Ronaldo 
@cristiano
112.8M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.3M followers

NASA 
@nasa
92.3M followers

Justin Bieber 
@justinbieber
91.4M followers

KATY PERRY 
@katyperry
89M followers

Taylor Swift 
@taylorswift13
82.9M followers

Lady Gaga 
@ladygaga
74.3M followers

Virat Kohli 
@imvkohli
71.8M followers

Kim Kardashian 
@kimkardashian
70.4M followers

YouTube 
@youtube
68.8M followers

Neymar Jr 
@neymarjr
64.8M followers

Bill Gates 
@billgates
64.6M followers

The Ellen Show
@theellenshow
62.4M followers

Selena Gomez 
@selenagomez
62M followers

CNN 
@cnn
61.8M followers

X 
@x
60.8M followers
