ಇವತ್ತು ಮನೆಗೆ ಒಂದಷ್ಟು ಹಾರ್ಡ್ವೇರ್ ಮತ್ತೆ ಎಲೆಕ್ಟ್ರಿಕಲ್ ವಸ್ತುಗಳು ತರೋಣ ಅಂತ ಹೊರಟೆ , ಇವತ್ತು ಕನ್ನಡವರ ಅಂಗಡೀಲೇ ತರ್ಬೇಕು ಅಂತ ಸುಮಾರ್ ೩-೪ ಕಿಲೋಮೀಟರು ಹುಡುಕಾಡಿದಮೇಲೆ ಒಂದ್ ಅಂಗಡಿ ಸಿಕ್ತು , ಮನೆ ಹತ್ರ ಇದ್ದವೆಲ್ಲವೂ ಉತ್ತರ ಭಾರತದವರ ಅಂಗಡಿ .
ಇನ್ನು ಕನ್ನಡವರ ಅಂಗಡಿಯವರ ಜೊತೆ ಮಾತಿಗೆ ನಿಂತೇ , ನನಗೆ ಬೇಕಿದ್ದ ವಸ್ತುಗಳ ಬೆಲೆ ಸ್ವಲ್ಪ ದುಬಾರಿಯಾಗೆ ಇತ್ತು , ಯಾಕೆ ಹೀಗೆ ಅಂತ ಕೇಳಿದಾಗ ಅವ್ರು ಹೇಳಿದ್ದು ಪೂರ್ತಿ ಏಕೋ ಸಿಸ್ಟಮ್ , ಶಾಪ್ , ಡಿಸ್ಟ್ರಿಬ್ಯೂಟರ್ , ಫೈನಾನ್ಸ್ ಎಲ್ಲವನ್ನ ಅವರೇ ಕಬ್ಜ ಮಾಡಿದ್ದಾರೆ , ಹೊಸ ಅಂಗಡಿಗಳಿಗೆ ಬೆಳಿಯೋಕೆ ಬಿಡಲ್ಲ , ಮತ್ತೆ ಅವರಿಗೆ ಬೇರೆಯವರಿಗಿಂತ ಕಡಿಮೆ ಬೆಲೆ ಗೆ ವಸ್ತು ಸಿಗತ್ತೆ , ನಾವು ಆ ಬೆಲೆ ಮಾರಿದ್ರೆ ಅಸಲು ಸಹ ಗಿಟ್ಟಲ್ಲಾ ಅಂತೆಲ್ಲ ಹೇಳಿದ್ರು
ಅವರ ಮಾತಲ್ಲಿ ನನಗೇ ತಪ್ಪು ಕಾಣಲಿಲ್ಲ , ಸ್ಟಾಕ್ ಮಾರ್ಕೆಟ್ ನಲ್ಲಿ ಕೆಲಸ ಮಾಡೋ ನಾನು ಹೆಚ್ಚಾಗಿ ಓದೋದು ಬಿಸ್ನೆಸ್ ಬಗ್ಗೆ , ನಿಮ್ಮ ಮಾರ್ಜಿನ್ ಚೆನ್ನಾಗಿರಬೇಕು ಅಂದ್ರೆ ನಿಮಗೆ ಒಳ್ಳೆ ಡಿಸ್ಟ್ರಿಬ್ಯೂಟರ್ ಸಿಗಬೇಕು ಮತ್ತೆ ಅವರ ಪ್ರಾಡಕ್ಟ್ ಸರಿಯಾದ ರೇಟ್ ಗೆ ನಿಮಗೆ ಸಿಗ್ಬೇಕು
ಅದಕ್ಕೆ ಒಂದು ಆಲೋಚನೆ ಬಂತು ಯಾಕೆ ನಂಗಿರೋ ರೀಚ್ ಬಳಸಿಕೊಂಡು ಕನ್ನಡವರ ಬಿಸಿನೆಸ್ ಗಳಿಗೆ ಪ್ರಚಾರ ಕೊಡಬಾರ್ದು ಅಂತ
ಮಾಡಬೇಕಿದ್ದು ಸಿಂಪಲ್, ನಿಮ್ಮದು ಯಾವುದೇ ತರಹದ ಬಿಸಿನೆಸ್ ಇದ್ರೆ (ಹಾರ್ಡ್ವೇರ್ , ಟೈಲ್ಸ್ , ಗ್ರಾನೈಟ್, ಎಲೆಕ್ಟ್ರಿಕಲ್, ಇತ್ಯಾದಿ ಯಾವುದೇ ಬಿಸ್ನೆಸ್ ) ಅಥವಾ ನೀವು ಇವುಗಳ ಡಿಸ್ಟ್ರಿಬ್ಯುಟರ್ ಆಗಿದ್ರೆ
ನಿಮ್ಮ ಬಿಸಿನೆಸ್ ಹೆಸರು, ಹಳ್ಳಿ/ನಗರ /ತಾಲೂಕು /ಜಿಲ್ಲೆ ಇಷ್ಟು ಕಾಮೆಂಟ್ ಮಾಡಿ
ಉದಾಹರಣೆಗೆ , ವೆಂಕಟೇಶ್ವರ ಹಾರ್ಡ್ವೇರ್ , ರಾಜಾಜಿನಗರ , ಬೆಂಗಳೂರು
ಹೀಗೆ ಮಾಡೋದ್ರಿಂದ , ಕನ್ನಡವರ ಅಂಗಡಿಗಳು ಗ್ರಾಹಕರಿಗೆ ಪರಿಚಯ ಆಗತ್ತೆ ಮತ್ತು ಈ ಬಿಸ್ನೆಸ್ಗಳ ಡಿಸ್ಟ್ರಿಬ್ಯುಟರ್ಸ್ ಕಾಮೆಂಟ್ ಮಾಡಿದ್ರೆ ಅವ್ರು ಅಂಗಡಿಯವರನ್ನ ಸಂಪರ್ಕಿಸಬಹುದು . ಒಂದು ಏಕೋ ಸಿಸ್ಟಮ್ ಆಗತ್ತೆ . ಇನ್ನು ಹೊಸದಾಗಿ ಉದ್ಯಮ ಶುರು ಮಾಡಬೇಕು ಅಂತಿರೋರು ನಿಮನ್ನ ಸಲಹೆಗೆ ಸಂಪರ್ಕಿಸಬಹುದು
ಇನ್ನು ನೀವು ಯಾವ ತರಹ ಬಿಸಿನೆಸ್ ಮಾಡದೇ ಇದ್ರೂ ಈ ಪೋಸ್ಟ್ ನ REPOST 🔁🔁🔁ಮಾಡಿ , 500 ಜನ ರಿಪೋಸ್ಟ್ ಮಾಡಿದ್ರು ೧ ಲಕ್ಷ ಜನಕ್ಕೆ ತಲುಪತ್ತೆ , ನಿಮಗೂ ನಿಮ್ಮ area ದಲ್ಲಿರೋ ಕನ್ನಡಿಗರ ಅಂಗಡಿ ಪರಿಚಯವಾಗತ್ತೆ.
ಚೋಳರಿಗಿಂತ 500 ವರ್ಷಗಳ ಮುಂಚೆ, ಕನ್ನಡಿಗ ಇಮ್ಮಡಿ ಪುಲಿಕೇಶಿ ನೂರು ಹಡಗುಗಳೊಂದಿಗೆ ಈಗಿನ ಮಹಾರಾಷ್ಟ್ರದಲ್ಲಿ ನೌಕಾ ಯುದ್ಧ ಮಾಡಿದ ಸಾಕ್ಷಿ ಪತ್ತೆಯಾಗಿದೆ. ಭಾರತೀಯ ನೌಕಾದಳದ ಪಿತಾಮಹ ಚಾಲುಕ್ಯ ಚಕ್ರೇಶ್ವರ, ಕನ್ನಡ ಕುಲತಿಲಕ ಇಮ್ಮಡಿ ಪುಲಿಕೇಶಿ 💛❤️
ಹಿಂದಿ-ಇಂಗ್ಲೀಷ್ನಲ್ಲಿ ಮಾತ್ರ ಪರೀಕ್ಷೆಗಳನ್ನು ನಡೆಸುವ ಮೂಲಕ ಒಕ್ಕೂಟ ಸರ್ಕಾರದ ಉದ್ಯೋಗಗಳಿಂದ ಕನ್ನಡಿಗರನ್ನು ವ್ಯವಸ್ಥಿತವಾಗಿ ದೂರ ಇಡಲಾಗಿದೆ.
ಈಗ ರಾಜ್ಯ ಸರ್ಕಾರ ಭರ್ತಿ ಮಾಡಲು ಹೊರಟಿರುವ 70,000ಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳಲ್ಲೂ ಕನ್ನಡಿಗರು ಕಡೆಗಣನೆಗೆ ಒಳಗಾಗದಂತೆ ಕಟ್ಟುನಿಟ್ಟಿನ ಎಚ್ಚರ ವಹಿಸಬೇಕು.
2022ರ KPTCL ಎಂಜಿನಿಯರ್ ನೇಮಕಾತಿ ಸೇರಿದಂತೆ ಹಲವು ಪ್ರಕರಣಗಳಲ್ಲಿ ಹೊರರಾಜ್ಯದ ಅಭ್ಯರ್ಥಿಗಳಿಗೆ ಕರ್ನಾಟಕದ ಸರ್ಕಾರಿ ಉದ್ಯೋಗಗಳನ್ನು ದೊರಕಿಸುವ ವ್ಯವಸ್ಥಿತ ಪಿತೂರಿ ಬಯಲಾಗಿದೆ. ಇಂತಹ ಅನ್ಯಾಯ ಮತ್ತೆ ಮರುಕಳಿಸದಂತೆ ರಾಜ್ಯ ಸರ್ಕಾರ ದೃಢ ಕ್ರಮ ಕೈಗೊಳ್ಳಬೇಕು.
#ನಮ್ಮನಾಡು_ನಮ್ಮಆಳ್ವಿಕೆ
@ANI Kannadigas disappeared from those places! What use of any township or industrial area if migrants from Andhra, Kerala, UP, Bihar, WB and Odisha become the majority there? ಕರ್ನಾಟಕ ಉದ್ದಾರ ಆಗೋದು ಅಂದ್ರೆ ಕನ್ನಡಿಗರು ಉದ್ದಾರ ಆಗೋದು, ವಲಸಿಗರಿಗೆ ನೆಲೆ ಮಾಡಿಕೊಡೋದಲ್ಲ.
@krs_party ನಿಮ್ಮ ಸ್ಥಿತಿ ಕಂಡು ಮನಸ್ಸಿಗೆ ಬಹಳ ಸಂಕಟವಾಯಿತು. ಈ ನಾಡಿನ ಒಳಿತಿಗಾಗಿ ಈ ನಿಮ್ಮ ಹೋರಾಟ, ತ್ಯಾಗವನ್ನು ಈ ನಾಡು ಗುರುತಿಸುತ್ತದೆ ಮತ್ತು ಶ್ಲಾಘಿಸುತ್ತದೆ. ಬೇಗನೆ ಗುಣಮುಖರಾಗಿ ಬನ್ನಿ ಎಂದು ಆಶಿಸುತ್ತೇನೆ.
ಇಂಗ್ಲಿಷ್ಗಿಂತ ಹಿಂದಿ ಹೆಚ್ಚು ಅಪಾಯಕಾರಿ.ನಾವು ಎಂದು 'ತ್ರಿಭಾಷಾ ಸೂತ್ರವನ್ನು' ಒಪ್ಪಿಕೊಂಡೆವೋ ಅಂದೇ ಹಿಂದಿಯ ಉರುಳಿಗೆ ಸಿಕ್ಕಿದೆವು. ತ್ರಿಭಾಷಾ ಸೂತ್ರವನ್ನು ತಮಿಳುನಾಡು ಒಪ್ಪಿಕೊಂಡಿಲ್ಲ.ಆ ವಿಷಯದಲ್ಲಿ ನಾವು ತಮಿಳರನ್ನು ಅನುಸರಿಸಬೇಕು. "ಬಹುಭಾಷೆಗಳಲ್ಲಿ ದ್ವಿಭಾಷೆ" ಎಂಬುದು ನಮ್ಮ ಸೂತ್ರವಾಗಬೇಕು.
– ರಾಷ್ಟ್ರಕವಿ ಕುವೆಂಪು Kuvempu
#ದ್ವೀಭಾಷಾನೀತಿ
#twolanguagepolicy
ಬೂದಿ ಬಸಪ್ಪ 1881 ರಲ್ಲಿ ಹಚ್ಚಿದ ರೈತರ ಕ್ರಾಂತಿಯ ಕಿಡಿಗೆ ಬೆಚ್ಚಿಬಿದ್ದ ಬ್ರಿಟೀಷರು, ಎಲ್ಲಿ ಆ ಕಿಡಿ ಭಾರತದ ಇತರೆಡೆ ಹರಡುತ್ತೊ ಅನ್ನೋ ಭಯದಲ್ಲಿ ಕೇವಲ 32 ವರ್ಷಗಳ ಹಿಂದೆ ಟೀಪು ಹಿಡಿತಲಿದ್ದ ಮೈಸೂರನ್ನು ಒಡೆಯರ್ ವಂಶಕ್ಕೆ ಹಿಂದಿರುಗಿಸಿದ್ದರೋ ಹಾಗೇ ಕಿತ್ತುಕೊಂಡರು.
ಇಂದಿಗೆ (June 11) 192 ವರ್ಷಗಳ ಹಿಂದೆ (1834ರಲ್ಲಿ) ಮಾರ್ಕ್ ಕಬ್ಬನ್ (ಕಬ್ಬನ್ ಪಾರ್ಕ್ ಗೊತ್ತಲ್ಲ?) ನನ್ನು ಮೈಸೂರು ರಾಜ್ಯದ ಕಮಿಷನರ್ ಮಾಡಿತು. ಮೈಸೂರು ರಾಜ ವಂಶ ಮತ್ತೆ ಹೈದರ್-ಟೀಪು ಕಾಲದ ರೀತಿ ಮನೆ ಸೇರಿತು. ಮುಂದೆ ಐವತ್ತು ವರ್ಷಗಳ ನಂತರ 1881 ರಲ್ಲಿ ವಡೆಯರ್ ರಾಜರಿಗೆ ಮತ್ತೆ ಮೈಸೂರನ್ನು ಹಿಂದಿರುಗಿಸಿದ್ದು.
ಸರಿ 1831ರಲ್ಲಿ ಜನರ ಕ್ರಾಂತಿ ರೂಪಿಸಿದ ಈ ಬೂದಿ ಬಸಪ್ಪ ಯಾರು? ಯಾಕೆ ನಮ್ಮ ಇತಿಹಾಸ ಪುಸ್ತಕಗಳಲ್ಲಿ ಇವನಿಲ್ಲ? ಅವನಿಂದ ಪ್ರೇರಿತರಾಗಿ 1831 ರಲ್ಲೇ ನಗರದಿಂದ (ಈಗ ಶಿವಮೊಗ್ಗದ ಒಂದು ಸಣ್ಣ ಹಳ್ಳಿ. 1638 ನಂತರ ಶಿವಪ್ಪ ನಾಯಕ ಕಟ್ಟಿದ ಕೆಳದಿಯ ಕೊನೆ ರಾಜಧಾನಿ) ಬೆಂಗಳೂರಿನವರೆಗೂ ದಂಗೆ ಎದ್ದ ಕನ್ನಡದ ರೈತರು ಕೇಳಿದ್ದು ಏನು ಗೊತ್ತಾ? "ಶಿವಪ್ಪ ನಾಯಕನ ಸಿಸ್ತು ಮತ್ತೆ ಜಾರಿಯಾಗಲಿ," ಅಂತ.
ಬೂದಿ ಬಸಪ್ಪನಿಗೂ ಸುಮಾರು 200 ವರ್ಷಗಳ ಹಿಂದೆ 1650ರಲ್ಲಿ ಶಿವಪ್ಪ ನಾಯಕ ಜಾರಿ ಮಾಡಿದ ಅವನ ಸಿಸ್ತು (ಕಂದಾಯ) 1831 ರಲ್ಲಿ ಅವನ ಆಗಿನ ಸೀಮೆಗೂ ಮೀರಿದ ಕನ್ನಡ ಪ್ರದೇಶಗಳಲ್ಲಿ ಕನ್ನಡ ಮಕ್ಕಳನ್ನು ಬಡಿದೆಬ್ಬಿಸಿತ್ತು! ಆಗಿನ ಮೈಸೂರು ರಾಜ್ಯದ ಹಳ್ಳಿ ಹಳ್ಳಿಯಲ್ಲೂ ಕೂಟಗಳನ್ನು ಕಟ್ಟಿದ ಬೂದಿ ಬಸಪ್ಪನನ್ನು ಇತಿಹಾಸದಿಂದ ಕಣ್ಮರೆ ಮಾಡಲಾಗಿದೆ. ನಮಗೆ ಇನ್ನು ಇಂಗ್ಲಿಷರ ರಾಬಿನ್ ಹೂಡ್ ಸಾಕು!
ಬ್ರಿಟೀಷರು ಏಳು ಜನ "ಬೂದಿ ಬಸಪ್ಪರನ್ನು" ಮುಂದಿನ 10 ವರ್ಷ ನೇಣಿಗೆ ಹಾಕಿದರು. 1837ರಲ್ಲಿ ಮಂಗಳೂರನ್ನು ಒಂದು ವಾರದ ಕಾಲ ಸ್ವಾತಂತ್ರ್ಯ ಮಾಡಿದ ನಮ್ಮ ರೈತರ ಅಮರ-ಸುಳ್ಯ ಸ್ವಾತಂತ್ರ್ಯ ದಂಗೆಯಲ್ಲೂ ಇದೇ ಬೂದಿ ಬಸಪ್ಪನ ಹೆಸರಿದೆ. ಅವ ಸಾಯಲೇ ಇಲ್ಲ! ಇಂದೂ ಸತ್ತಿಲ್ಲ!!
ಅವನಿಗೂ ಇನ್ನೂರು ವರ್ಷಗಳ ಹಿಂದೆ ಅವನಿಗೆ ಮತ್ತು ಲಕ್ಷಾಂತರ ಕನ್ನಡಿಗರಿಗೆ ಪ್ರೇರಣೆ ಕೊಟ್ಟ ಶಿವಪ್ಪ ನಾಯಕ ಈಗಿನ 99.9% ಕನ್ನಡಿಗರಿಗೇ ಗೊತ್ತಿಲ್ಲ!! ನಮ್ಮ ವೀರರಿಗೆ ಸಾವಿಲ್ಲ. ಮತ್ತೆ ಮತ್ತೆ ಹುಟ್ಟಿ ಬರುತ್ತಾರೆ 💛❤️
#ನಮ್ಮನಾಡು_ನಮ್ಮವೀರರು
#ನಮ್ಮನಾಡು_ನಮ್ಮಆಳ್ವಿಕೆ
THIS IS HOW MANGALORE WILL DIE. EXPLAINED IN UNDER 95 SECONDS.
Share this to every family in Tulunad before it is too late.
If you think this is fake, watch the full 7 mins scientific proof on my IG page: https://t.co/LgulGRwitx
#StopYettinaholeProject#Mangalore#Tulunad
ಸಾಮಾನ್ಯವಾಗಿ ಸ್ವಂತ ಉದ್ದಿಮೆ ಕಟ್ಟಬೇಕೆನ್ನುವವರ ಯೋಚನೆ - ಕೌಶಲ್ಯ ಮತ್ತು ಬಂಡವಾಳ ಸಿದ್ಧವಾದ ಮೇಲೆ ಧುಮುಕುವುದು. ಅದರಲ್ಲಿ ತಪ್ಪಿಲ್ಲ... ಹಿರಿಯರು, ಸಾಧಿಸಿದವರು ಕೂಡ ಇದನ್ನೇ ಹೇಳುತ್ತಾರೆ.
ಆದರೆ ಇನ್ನೊಂದು ವರ್ಗದ ಜನರಿದ್ದಾರೆ - ಸ್ಕಿಲ್ ಮತ್ತು ಉದ್ದಿಮೆ ಎರಡನ್ನೂ ಒಟ್ಟಿಗೇ ಕಲಿಯುತ್ತ, ದುಪ್ಪಟ್ಟು ಶ್ರಮದಲ್ಲಿ ನೇರ ಹೊಳೆಗೆ ಹಾರುವವರು. ಇಂಥವರು ನಮ್ಮ ನಡುವೆ ಗೆದ್ದ ನಿದರ್ಶನಗಳು ಕಡಿಮೆಯಿಲ್ಲ.
ಎರಡರಲ್ಲಿ ಯಾರಿಗೆ ಹೆಚ್ಚು ಯಶಸ್ಸು, ಯಾರಿಗೆ ಕಡಿಮೆ ಸೋಲು ಎಂದು ನಿರ್ದಿಷ್ಟವಾಗಿ ಹೇಳಲಾಗದು. ಆದರೆ ಹೊಳೆಗೆ ಹಾರಿದವರ ಏಳು ಬೀಳುಗಳು, ಮಾಡಿದ ತಪ್ಪು ಒಪ್ಪುಗಳು - ಕಾದು ಕುಳಿತವರ ಕಥೆಗಿಂತ ಸ್ವಾರಸ್ಯಕರ, ನಮಗೆ ಕಲಿಸುವುದೂ ಹೆಚ್ಚು ಎನ್ನುವುದು ನಿರ್ವಿವಾದಿತ.
ಈ ವಾರದ @mundhebanni ಎಪಿಸೋಡ್ ಅಂಥದ್ದೇ ಒಂದು ಕಥೆ.
ವಿಠ್ಠಲ್ ವೆಬ್ಸೈಟ್ ಉದ್ದಿಮೆ ಶುರು ಮಾಡಿದಾಗ, ಬೆಂಗಳೂರಿನ ವೈಟ್ಫೀಲ್ಡ್-ಎಲೆಕ್ಟ್ರಾನಿಕ್ ಸಿಟಿಯಲ್ಲಿ ಅವರಿಗಿಂತ ಚೆನ್ನಾಗಿ ಕೋಡ್ ಮಾಡುತ್ತಿದ್ದ ಸಾವಿರಾರು ಇಂಜಿನಿಯರ್ಗಳಿದ್ದರು ಎಂದರೆ ಅದು ಸುಳ್ಳಲ್ಲ. ಹಾಗೆಯೇ ಅವರ ಪೈಕಿ ಉದ್ದಿಮೆ ಮಾಡಬೇಕೆಂದಿದ್ದವರು ಇನ್ನೂ "ಸರಿಯಾದ ಸಮಯ"ಕ್ಕೆ ಕಾಯುತ್ತಿರಬಹುದು ಕೂಡ.
ಜೀವನದ ಎಲ್ಲ ಹಂತದಲ್ಲೂ ಮುನ್ನುಗ್ಗುವ, born entrepreneur ವ್ಯಕ್ತಿಗಳ ಯೋಚನಾ ಲಹರಿ ಹೇಗಿರುತ್ತದೆ ಎಂದು ಅರಿಯಲು ವಿಠ್ಠಲ್ ಅವರ ಮಾತುಗಳನ್ನು ಅವರ ದನಿಯಲ್ಲೇ ಕೇಳಿ.
ಅವರ ಮಾತುಗಳಲ್ಲಿ ಉದ್ಯಮದ ಸುತ್ತ ಸಾಕಷ್ಟು ಕಲಿಕೆ ಅಡಕವಾಗಿರುವುದು ಮಾತ್ರ ಸತ್ಯ.
https://t.co/C0EJt7kpk6
#ಕನ್ನಡಿಗರಿಗಾಗಿ_ಉದ್ಯೋಗ
ಶಿಕ್ಷಣ ಕ್ಷೇತ್ರದಲ್ಲೂ ನಮ್ಮ ಕನ್ನಡಿಗರು ದೊಡ್ಡಮಟ್ಟದಲ್ಲಿ ಬೆಳೆದು ಹೊರದೇಶದಲ್ಲಿ ಪ್ರೊಫೆಸರ್ ಗಳಾಗಿ ಕೆಲಸ ಮಾಡಬಹುದು, ಆದರೆ ನಮ್ಮ ಯುವ ಕನ್ನಡಿಗರು ಹಲವಾರು ದಿಕ್ಕಿನಲ್ಲಿ ಯೋಚಿಸುತ್ತಿಲ್ಲ...
ತಮಿಳುನಾಡಲ್ಲಿ
ಇರೋದೊಂದೆ
ಜಾತಿ
'ತಮಿಳು'
ಮಾತನಾಡುವವರ ಜಾತಿ.
ಕರ್ನಾಟಕದಲ್ಲಿ?
ಲಿಂಗಾಯತ
ಒಕ್ಕಲಿಗ
ಹಿಂದುಳಿದ
ಇತ್ಯಾದಿ
ಇತ್ಯಾದಿ.
'ತಮಿಳು ಭಾಷೆ ನಮ್ಮ ಅಸ್ಮಿತೆ,
ಅದುವೇ, ನಮ್ಮನ್ನು ಒಗ್ಗಟ್ಟಾಗಿಟ್ಟಿರುವ
ಏಕೈಕ ಶಕ್ತಿ ' ಎಂದು ಹಿಂದೊಮ್ಮೆ
Stalin ಹೇಳಿದ್ರು.
ಕರ್ನಾಟಕದಲ್ಲಿ,
'ಕನ್ನಡ ಒಂದೇ ನಮ್ಮ ಕುಲ'
ಎಂದಾದಾಗ ಮಾತ್ರ ಇಲ್ಲಿ
ಪ್ರಾದೇಶಿಕ ಪಕ್ಷ ಗೆಲ್ಲಲು ಸಾಧ್ಯ.
ಒಂದು ಪಕ್ಷದ ಹಿಂದಿ ಜೈಕಾರ
ಮತ್ತೊಂದು ಪಕ್ಷದ ಉರ್ದು ಓಲೈಕೆಗಳು
ನಮ್ಮ ಒಗ್ಗಟ್ಟನ್ನು ಮುರಿಯುತ್ತವೆ.
ನೆನಪಿಡಿ ತಮಿಳುನಾಡಲ್ಲಿ,
ಮುಸ್ಲಿಂರಿಗೂ
ಉರ್ದುವಾಗಲಿ
ಹಿಂದಿಯಾಗಲಿ ಬರಲ್ಲ!
Only ತಮಿಳು.
One and only ತಮಿಳು.
ಕನ್ನಡಿಗರೇ,
ನಿಮ್ಮ
ವಿಶಾಲ ಹೃದಯ
ಪರಭಾಷಿಕರಿಗೆ
ಕೆಂಪು ಕಂಬಳಿ ಹಾಸುವ
ಪಡೆಸಾಲೆಯಾಗಬಾರದು.
Think on it.
ಕೆಲವರು ಹೃದಯ ಡಾಕ್ಟ್ರು ಹೇಳಿದರಲ್ಲಿ ಏನು ತಪ್ಪಿದೆ. 42 ಸೀಟ್ ಕೊಟ್ರೆ ಹೆಚ್ಚು, ಮುಂದಿನ ಸೆನ್ಸಸ್ ಪ್ರಕಾರ ಸೀಟ್ ಹಂಚಿಕೆ ಆದರೆ 39 ಆಗುತ್ತೆ ಅಂತ ಹೇಳಿದ್ರು ಅವರಿಗಾಗಿ ಇದು.
ಭಾರತದ ಲೋಕಸಭಾ ಸೀಟುಗಳ ಸಂಖ್ಯೆ ಕಳೆದ 5 ದಶಕಗಳಿಂದ 543 ರಲ್ಲೇ ಯಾಕಿದೆ? ಒಂದು ಸಣ್ಣ ಮಾಹಿತಿ ಥ್ರೆಡ್ 🧵
1970 ರ ವರೆಗೆ ಸೀಟ್ ಹಂಚಿಕೆ ಮಾಡಿದಾಗ ದಕ್ಷಿಣದ ರಾಜ್ಯಗಳಿಗೆ ಕಡಿಮೆ ಪ್ರಾತಿನಿದ್ಯ ಸಿಗುತ್ತಾ ಇರೋದು ಕಂಡು ಬಂದು ಅಂದಿನ ದಕ್ಷಿಣದ ನಾಯಕರು ಪ್ರತಿಭಟಿಸಿದರು. ಆಗ ಅಂದಿನ ಇಂದಿರಾ ಗಾಂಧಿ ಸರ್ಕಾರ ಇದರಿಂದ ತಾತ್ಕಾಲಿಕವಾಗಿ ತಡೆಯಲು 1970 census ಅನ್ನೇ freeze ಮಾಡಿ ಮುಂದೆ ಜನಸಂಖ್ಯೆ ನಿಯಂತ್ರಣ ಮಾಡಿ ನಂತರದ ದಿನದಲ್ಲಿ ಹಂಚಿಕೆ ಮಾಡೋಣ ಅಂತ ತೀರ್ಮಾನಿಸಿತು.
◾1970ರ ದಶಕದಲ್ಲಿ ಕೇಂದ್ರ ಸರ್ಕಾರ ಕುಟುಂಬ ಯೋಜನೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುತ್ತಿತ್ತು. ಆದರೆ ಇಲ್ಲಿ ಒಂದು ಸಮಸ್ಯೆಯಿತ್ತು. ಒಂದು ವೇಳೆ ಯಾವುದಾದರೂ ರಾಜ್ಯ ಜನಸಂಖ್ಯೆಯನ್ನು ಯಶಸ್ವಿಯಾಗಿ ನಿಯಂತ್ರಿಸಿದರೆ, ಸಂವಿಧಾನದ 81ನೇ ವಿಧಿಯ ಪ್ರಕಾರ ಆ ರಾಜ್ಯದ ಲೋಕಸಭಾ ಸೀಟುಗಳ ಸಂಖ್ಯೆ ಕಡಿಮೆಯಾಗುತ್ತಿತ್ತು!
◾ಅಂದರೆ, ಅಭಿವೃದ್ಧಿ ಹೊಂದಿದ ಮತ್ತು ಸರ್ಕಾರದ ಮಾತನ್ನು ಕೇಳಿದ ರಾಜ್ಯಗಳಿಗೆ "ರಾಜಕೀಯ ಶಿಕ್ಷೆ" ನೀಡಿದಂತಾಗುತ್ತಿತ್ತು. ಇದನ್ನು ತಡೆಯಲು 1976ರಲ್ಲಿ 42ನೇ ತಿದ್ದುಪಡಿ ತಂದು 1971ರ ಜನಗಣತಿಯ ಆಧಾರದ ಮೇಲೆ ಸೀಟುಗಳನ್ನು 2000 ಇಸವಿಯವರೆಗೆ ಫ್ರೀಜ್ ಮಾಡಲಾಯಿತು.
◾ನಂತರ 2001ರಲ್ಲಿ ಪರಿಶೀಲಿಸಿದಾಗ ಯಾವುದೇ ಬದಲಾವಣೆ ಕಂಡುಬರದೇ ಉತ್ತರದ ಜನಸಂಖ್ಯೆ ಇನ್ನೂ ಹೆಚ್ಚು ಆಗಿದ್ದರಿಂದ ಇದನ್ನು ಮತ್ತೆ 2026ರವರೆಗೆ ವಿಸ್ತರಿಸಲಾಯಿತು.
◾ ಈಗ ನಾವು 2026ರಲ್ಲಿದ್ದೇವೆ! ಈಗ ಬಿಜೆಪಿ ಸರ್ಕಾರ ತಮ್ಮ ಧಿಮಾಕಿ ನಡೆಯಿಂದ ಜನಸಂಖ್ಯೆ ಆಧಾರದ ಮೇಲೆಯೇ ಕ್ಷೇತ್ರ ವಿಂಗಡಣೆ ಮಾಡಲು ಹೊರಟಿದೆ. ಅದನ್ನು ಕೆಲವು ದಕ್ಷಿಣದ ರಾಜಕೀಯ ಪಕ್ಷಗಳು ಬೆಸ್ಟ್ ಡೀಲ್ ಎಂದು ಅವರ ಬೂಟು ನೆಕ್ಕಲು ತಯಾರಾಗಿವೆ.
ಎಚ್ಚರ ಕನ್ನಡಿಗ. ನಮ್ಮ ಪ್ರಾತಿನಿದ್ಯ ಮುಖ್ಯ. ನಮ್ಮ ಧ್ವನಿ ಮುಖ್ಯ.
ಇಂದಿನ @prajavani ವರದಿ
ಹೆಜ್ಜೆ ಹೆಜ್ಜೆಗೂ ನರೇಂದ್ರ ಮೋದಿಯವರ ಭಜನೆ ಮಾಡುವ ಕುಮಾರ ಸ್ವಾಮಿ, ತೇಜಸ್ವಿ ಸೂರ್ಯ ಗೆ ಕನ್ನಡದಲ್ಲಿ ರೈಲ್ವೆ ಪರೀಕ್ಷೆ ಕೊಡಿಸೊಕ್ಕೆ ಆಗಿಲ್ಲಾ..
@hd_kumaraswamy@Tejasvi_Surya ನಿಮಗೆಲ್ಲಾ ಸ್ವಾಭಿಮಾನವೇ ಇಲ್ವಾ?
ಕನ್ನಡ ಶಾಲೆಗಳನ್ನು ಉಳಿಸಲು ಕರ್ನಾಟಕ ಸರ್ಕಾರದ ಪಾತ್ರ ದೊಡ್ಡದಿದೆ. ಅವರು ಮನಸ್ಸು ಮಾಡಿದರಷ್ಟೇ ಕನ್ನಡ ಶಾಲೆಗಳು ಉಳಿಯಬಲ್ಲವು. ಸದ್ಯಕ್ಕೆ ಅದು ಅಷ್ಟೊಂದು ಸಕಾರಾತ್ಮಕವಾಗಿ ಕಾಣುತ್ತಿಲ್ಲ.
ಅದು ಹೊರತು ಪಡಿಸಿ ಕನ್ನಡವನ್ನ ಕನ್ನಡಿಗರನ್ನ ಉಳಿಸಲು, ಬೆಳೆಸಲು ಇರುವುದು ಎರಡೇ ವಿಧಾನ.
1. ಕನ್ನಡದಲ್ಲಿ ಗ್ರಾಹಕಸೇವೆ. ಕನ್ನಡಿಗರ purchasing power ಮೇಲೆ ಇದು ನಿಂತಿದೆ. ಕನ್ನಡಿಗರು ಹಣ ಗಳಿಸುತ್ತಾ ಕೊಳ್ಳುಗ ಶಕ್ತಿ ಹೆಚ್ಚಿಸಿಕೊಳ್ಳಬೇಕು. ಆಗ ಭಾಷೆ ಪ್ರಸ್ತುತವಾಗಿಯೇ ಇರುತ್ತದೆ.
2. ಕನ್ನಡಿಗರಿಗೆ ಹೆಚ್ಚೆಚ್ಚು ಕೆಲಸಗಳು ಸಿಗಬೇಕು. ವಿದ್ಯಾಭ್ಯಾಸ ಕಡಿಮೆ ಇರುವವರಿಂದ ಹಿಡಿದು ಉನ್ನತ ವಿದ್ಯಾಭ್ಯಾಸ ಮಾಡಿರುವವರ ವರೆಗೂ ಉದ್ಯೋಗಗಳು ಸಿಗಬೇಕು. ಇದಕ್ಕೆ ಕನ್ನಡಿಗರು ಒಬ್ಬರಿಗೊಬ್ಬರು ಸಹಕಾರಿಯಾಗಬೇಕು. ಉದ್ಯೋಗ ಮಾರ್ಗದರ್ಶನ, ಉದ್ಯೋಗ ಕಂಡಾಗ ಇತರರಿಗೆ ತಿಳಿಸಿವುದು ಹೀಗೆ.
ಇವೆರಡು ಆದರೆ ಕನ್ನಡ ಸಮುದಾಯದ ಏಳಿಗೆ ಆಗುತ್ತದೆ..