ಇದು ಕನ್ನಡದ್ದೇ ವ್ಯಾಕರಣ
#ಕನ್ನಡದ್ದೇ ಆದ ಒಂದು ವ್ಯಾಕರಣವನ್ನು ಕನ್ನಡ ಬರಹದ #ಸೊಲ್ಲರಿಮೆ ಎಂಬ ಹೆಸರಿನ ಒಟ್ಟು ಏಳು ಹೊತ್ತಗೆಗಳಲ್ಲಿ ಬರೆದು ಪ್ರಕಟಿಸಿದ್ದೆ. ಇದೀಗ ಆ ಏಳು ಹೊತ್ತಗೆಗಳನ್ನು ಒಟ್ಟು ಸೇರಿಸಿ ಒಂದೇ ಹೊತ್ತಗೆಯಲ್ಲಿ ಕೊಡುತ್ತಿದ್ದೇನೆ.
https://t.co/vMu48QPC6e
#ನುಡಿಯರಿಮೆ#ಕನ್ನಡ#ನುಡಿಹಮ್ಮುಗೆ#Linguistics
ಕನ್ನಡದ ’ತುಳಿಲು’ ಎಂಬುದಕ್ಕೆ ತುಳುವಲ್ಲಿ ಸಾಟಿ ಪದವಿದೆ - ಸೊಲ್ಮೆ. ಇಂದಿಗೂ ತುಳುವರು ’ನಮಸ್ಕಾರ’ ಅನ್ನುವುದಿಲ್ಲ ; ತುಳುವಿನದ್ದೇ ಆದ 'ಸೊಲ್ಮೆ' ಎಂದೇ ಬಳಸುತ್ತಾರೆ.
ಆದ್ದರಿಂದ ಕನ್ನಡದವರು #ಕನ್ನಡದ್ದೇ ಆದ ’ತುಳಿಲು’ ಬಳಸಬಹುದು.
ಆದರೆ, ತಮಿಳಿನಲ್ಲಿ ’ವಣಕ್ಕಂ’ ಎಂಬುದು ಬಳಕೆಯಲ್ಲಿದೆ. ಇದು ಕನ್ನಡದ ’ಬಳುಕು’ ಎಂಬುದರ ಸಾಟಿ ಪದ.
ರಂಗವಲ್ಲಿ/ರಂಗೋಲಿಗೆ #ಕನ್ನಡದ್ದೇ ಪದ 'ಕಡೆಯ'
ಪ್ರೊ. ಜಿ. ವೆಂಕಟಸುಬ್ಬಯ್ಯ ಕನ್ನಡ-ಕನ್ನಡ ನಿಘಂಟು
ಕಡೆಯ ಹೆಸರುಪದ
(ದೇ) (ಅಂಗಳದಲ್ಲಿ) ೧ ರಂಗವಲ್ಲಿ, ಹೂವು ಮೊ.ವುಗಳಿಂದ ಮಾಡಿದ ರಚನೆ, ರಂಗವಲ್ಲಿ, ಪೂವಲಿ
ಕನ್ನಡದಲ್ಲಿ ಬಳಕೆಯಲ್ಲಿರುವ 'ಜಿಲ್ಲಾಧಿಕಾರಿ' ಎಂಬುದು ಅರೇಬಿಕ್ ನ ' ẓila'(a district) ಮತ್ತು 'ಅಧಿಕಾರಿ' ಎಂಬ ಸಂಸ್ಕ್ರುತದ ಪದಗಳನ್ನು ಸೇರಿಸಿ ಮಾಡಲಾಗಿದೆ.
ಇದಕ್ಕೆ #ಕನ್ನಡದ್ದೇ ಆದ ಪದಗಳನ್ನು ಬಳಸಿ
'ಕಂಪಣದ ಮಣೆಗಾರ' ಎಂದು ಹೇಳಬಹುದು.
ಮಲೆಯಾಳದಲ್ಲಿ Departure ಗೆ ಮಲೆಯಾಳದ್ದೇ ಆದ 'ಪುರಪ್ಪೆಟಲ್' ಎಂದು ಬಳಸಿದ್ದಾರೆ. ಕನ್ನಡದಲ್ಲಿ ಸಂಸ್ಕ್ರುತದ 'ನಿರ್ಗಮನ' ಬಳಸಿದ್ದಾರೆ.
ಹೊರಡಿಕೆ/ಹೊರಡುಹ ಎಂದು #ಕನ್ನಡದ್ದೇ ಪದಗಳನ್ನು ಬಳಸುವುದಕ್ಕೆ ಏನು ತೊಂದರೆ? https://t.co/o32G07PIjB