ಈ ಕೆಳಕಂಡ ದಾವೆಯ ಬಗ್ಗೆ 4 ವರ್ಷಗಳ ನಂತರವಾದರೂ ಸರ್ಕಾರ ಗಮನ ಹರಿಸುವ ಔದಾರ್ಯ ತೋರಲೆಂದು ಆಶಿಸುವೆ.
SLP No.956 Year-2017, diary No. 1106/2017 filed on 09-01-2017 by NBF• C.A No.000767-000768 2017 SLP(C) No.000956-000957/2017 Regd 10.01.2017. SLP(C) No. 000956 -000957 /2017
@blsanthosh ಮಾನ್ಯರೇ ದಯವಿಟ್ಟು ನಮ್ಮ ಸಂಕಷ್ಟದ ಮೊರೆಯನ್ನು ಆಲಿಸಿ. ನಿಮ್ಮ ಸಹಾಯ ನಮಗೆ ಬೇಕು. ಉಡುಪಿ ನಗರಾಭಿವೃದ್ಧಿಯ ಪ್ರಾಧಿಕಾರದಲ್ಲಿ ಬರುವ ಅಕ್ರಮವೆಂದು ಕರೆಯಲ್ಪಡುವ ನಿವೇಶನಗಳ ಮಾರಾಟ-ಖರೀದಿಯ ನೋಂದಣಿ ಪ್ರಕ್ರಿಯೆ, ವಸತಿ ನಿರ್ಮಾಣಕಾರ್ಯ ಸ್ಥಗಿತಗೊಂಡು ದಶಕವೇ ಕಳೆದಿದೆ.
ಆದರೆ ಬೆಂಗಳೂರಿನ BBMP ವ್ಯಾಪ್ತಿಯಲ್ಲಿ, ಹಾಗೂ ಮಂಗಳೂರಿನ MUDA ವ್ಯಾಪ್ತಿಯಲ್ಲಿ ಇಂತಹದೇ ನೂರಾರು ನಿವೇಶನಗಳು ದಿನನಿತ್ಯ ನೋಂದಣಿ ಆಗುತ್ತಲೇ ಇವೆ. ಈ ನಿವೇಶನಗಳಲ್ಲಿ ಕಟ್ಟಡಗಳ ನಿರ್ಮಾಣ ಅವಿರತವಾಗಿ ಸಾಗಿದೆ. ಈ ನಗರಗಳಲ್ಲಿ ಉದಾರೀಕರಣಗೊಂಡ ಕಾನೂನು ಉ��ುಪಿಯಲ್ಲಿ ಮಾತ್ರ ಏಕೆ ಕಠಿಣವಾಗಿಯೇ ಉಳಿದಿದೆ? ಉಡುಪಿಯ ಜನತೆ ಮಾಡಿದ ಅಪರಾಧವಾದರೂ ಏನು?
4 ವರ್ಷಗಳಿಂದ ತಟಸ್ಥವಾಗಿರುವ ‘Karnataka Town & country planning (Regularization of unauthorised developments) Rules 2013’ ಮೇಲೆ ಇರುವ SLP ಯನ್ನು ಶೀಘ್ರ ವಿಚಾರಣೆಗೆ ಕ್ರಮವನ್ನು ಸರ್ಕಾರ ಈಗಲೂ ತೆಗೆದುಕೊಳ್ಳದಿದ್ದರೆ ಸಂತ್ರಸ್ತರ ಜೀವಿತಾವಧಿಯಲ್ಲಿ ನ್ಯಾಯ ��ಿಗುವುದಿಲ್ಲ.ಇದು ತಮಗೂ ನೋವುಂಟುಮಾಡುವ ವಿಚಾರವೆಂದು ಭಾವಿಸುವೆ
ಅಕ್ರಮ-ಸಕ್ರಮದಡಿಯಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ 2017ರಿಂದಲೂ ಬಗೆಹರಿಯದ ದಾವೆಯು ನೆನೆಗುದಿಗೆ ಬಿದ್ದಿದೆ. ಸಂತ್ರಸ್ತರ ಹಿತದೃಷ್ಟಿಯಿಂದ ಸರ್ಕಾರ ಖುದ್ದಾಗಿ ಈ ಪ್ರಕರಣದ ತುರ್ತು ವಿಚಾರಣೆಯ ಬಗ್ಗೆ ಪ್ರಯತ್ನಪಡಬೇಕು.